National

ಮತದಾನಕ್ಕೆ ಮುನ್ನ ಒಮ್ಮೆ ಹಳೆಯದನ್ನು ಮೆಲುಕು ಹಾಕಿ!!

ಮಾಡಿದ ತಪ್ಪುಗಳು ನೆನಪಾಗೋದು ಒಬ್ಬರೇ ಕುಳಿತಾಗ. ಅಧಿಕಾರ, ಐಶ್ವರ್ಯ ಬಳಿ ಇರುವಾಗ ಪ್ರಾಯಶ್ಚಿತ್ತಕ್ಕೆ ಅವಕಾಶವೂ ಇರುವುದಿಲ್ಲ. ಯಾವಾಗ ಅವುಗಳಿಂದ ದೂರವಾಗಿ ನಿಲ್ಲುತ್ತೇವೆಯೋ ಆಗಲೇ ಹಳೆಯದ್ದೆಲ್ಲಾ ನೆನಪಾಗಿ ಕಣ್ಣೀರಿಗೆ ಕಾರಣವಾಗೋದು. ಈಗ ರಾಹುಲ್ ಮತ್ತು ಸೋನಿಯಾ ಪರಿಸ್ಥಿತಿ ಅಥವಾ ಒಟ್ಟಾರೆಯಾಗಿ ಕಾಂಗ್ರೆಸ್ಸಿನ ಪರಿಸ್ಥಿತಿ ಹೀಗೆಯೇ ಇದೆ. ಅವರ ತಪ್ಪುಗಳನ್ನು ಅವರು ನೆನಪಿಸಿಕೊಳ್ಳುವುದು ಎಷ್ಟು ಮುಖ್ಯವೋ ಮತದಾನಕ್ಕೆ ಮುನ್ನ ನಾವು ನೆನಪಿಸಿಕೊಳ್ಳುವುದೂ ಅಷ್ಟೇ ಮುಖ್ಯ. ಮತದಾನ ಮಾಡಿದ ತಪ್ಪಿಗೆ ನಮಗೂ ಒಂದು ಪ್ರಾಯಶ್ಚಿತ್ತ ಆಗುವುದು ಬೇಡವೇ!


ಹಿಂದೂಗಳ ವಿಚಾರಕ್ಕೆ ಬಂದಾಗ ಆರಂಭದಿಂದಲೂ ಕಾಂಗ್ರೆಸ್ಸಿನದ್ದು ಮಲತಾಯಿ ಧೋರಣೆಯೇ. ಸ್ವಾತಂತ್ರ್ಯದ ಹೊಸ್ತಿಲಲ್ಲಿ ತಮ್ಮನ್ನು ತಾವು ಸರ್ವಪಂಥ ಪ್ರತಿನಿಧಿ ಎಂದು ತೋರಿಸಿಕೊಳ್ಳಲು ನೆಹರೂ ಮಾಡಿದ ಪ್ರಯಾಸ ಅಂತಿಂಥದ್ದಲ್ಲ. ಸರದಾರ್ ಪಟೇಲರನ್ನು ಬೇಕಂತಲೇ ಹಿಂದೂ ಮೂಲಭೂತವಾದಿ ಎಂದು ಪ್ರತಿಬಿಂಬಿಸಿ ತಮ್ಮನ್ನು ತಾವು ಜನನಾಯಕರಾಗಿಸಿಕೊಂಡಿದ್ದು ನೆಹರೂರವರೇ. ಕಾಂಗ್ರೆಸ್ಸಿನಲ್ಲಿ ಬೇಕಾದವರನ್ನು ನಾಯಕರಾಗಿಸುವ ಬೇಡದವರನ್ನು ತುಳಿಯುವ ವಾತಾವರಣ ಸೃಷ್ಟಿಮಾಡುವ ತಾಕತ್ತು ಮೊದಲಿನಿಂದಲೂ ಇದೆ! ಗಾಂಧೀಜಿಯ ಕಾಲದಿಂದಲೂ ಮುಸಲ್ಮಾನರ ಓಲೈಕೆಗೆ ಪ್ರಯಾಸಪಟ್ಟ ನಾಯಕರುಗಳಿಂದಾಗಿ ಹಿಂದೂಗಳು ಸದಾ ಹಿಂದೆಯೇ ಉಳಿದುಬಿಟ್ಟರು. ತಮ್ಮ ಶಕ್ತಿ ಸಾಮಥ್ರ್ಯಗಳ ಅರಿವು ಅವರಿಗಾಗಲಿಲ್ಲ. ಪದೇ ಪದೇ ಮುಸಲ್ಮಾನರನ್ನು ತಲೆಯ ಮೇಲೆ ಕೂರಿಸಿಕೊಳ್ಳುವ ಕಾಂಗ್ರೆಸ್ಸಿನ ನೀತಿಯಿಂದಾಗಿ ಬೂಟಾಟಿಕೆಯ ಹಿಂದೂಗಳು ಹೆಚ್ಚಾಗಲಾರಂಭಿಸಿದರು. ಮುಸಲ್ಮಾನರು ಭಯೋತ್ಪಾದನೆಯ ಹೆಸರಲ್ಲಿ ಹಿಂದೂಗಳನ್ನು ಕೊಂದಾಗಲೂ ಅದರ ಬಗ್ಗೆ ಮಾತನಾಡಬಾರದು, ಬದಲಿಗೆ ಹಿಂದೂಗಳು ಮುಸಲ್ಮಾನರ ಕೃತ್ಯವನ್ನು ಖಂಡಿಸಿದರೂ ಅಂಥವರನ್ನು ಸಮಾಜಕಂಟಕರೆಂದು ಬಿಂಬಿಸಬೇಕು ಎಂಬ ಕಲ್ಪನೆ ಕಾಂಗ್ರೆಸ್ಸಿನ ಆಫೀಸುಗಳಿಂದಲೇ ಹುಟ್ಟಿದ್ದು. ಇದನ್ನು ಸಮಾಜದ ಮೂಲೆ-ಮೂಲೆಗೆ ತಲುಪಿಸುವ ಪತ್ರಕರ್ತರು, ಅಧಿಕಾರಿಗಳು, ವಿಶ್ವವಿದ್ಯಾಲಯದ ಉಪನ್ಯಾಸಕರು ಇವರುಗಳನ್ನು ಕಾಂಗ್ರೆಸ್ಸು ಚೆನ್ನಾಗಿಯೇ ಸೃಷ್ಟಿಮಾಡಿಕೊಂಡಿತು. ಕಳೆದ ಏಳು ದಶಕಗಳಲ್ಲಿ ಭಾರತವೆಂಬ ಗಂಗಾ ಪ್ರವಾಹದಲ್ಲಿ ಈ ಬಗೆಯ ಜಾತ್ಯತೀತವಾದದ ವಿಷಪ್ರಾಶನ ಚೆನ್ನಾಗಿಯೇ ಆಯ್ತು. ಕಾಶ್ಮೀರದಿಂದ ಪಂಡಿತರನ್ನು ಓಡಿಸಿದ್ದು ನೆನಪಿದೆಯಲ್ಲವೇ? ಏಕಾಏಕಿ ಮುಸಲ್ಮಾನರು ಪಾಕಿಸ್ತಾನದ ಸಹಕಾರ ಪಡೆದು ಪಂಡಿತರ ಹತ್ಯೆ ಮಾಡಲಾರಂಭಿಸಿದಾಗ ರಾಜ್ಯ ಬಿಟ್ಟು ಓಡದೇ ಅವರಿಗೆ ಮತ್ತೇನು ದಾರಿ ಇತ್ತು ಹೇಳಿ? ಆದರೆ ಇಂದಿಗೂ ಕಾಂಗ್ರೆಸ್ಸು ಭಯೋತ್ಪಾದನೆಯ ಹೆಸರಲ್ಲಿ ಬಂಧನಕ್ಕೊಳಗಾದ ತರುಣರ ಕುರಿತಂತೆ ಅನುಕಂಪ ವ್ಯಕ್ತಪಡಿಸುತ್ತದೆಯೇ ಹೊರತು ಕಾಶ್ಮೀರದ ಪಂಡಿತರ ಕುರಿತಂತೆ ಒಂದು ಹನಿ ಕಣ್ಣೀರು ಸುರಿಸಿಲ್ಲ. ಸಿಖ್ಖರ ನರಮೇಧವಾದಾಗಲೂ ಹೀಗೆಯೇ. ಇಂದಿರಾರೊಬ್ಬರ ಹತ್ಯೆಯನ್ನು ಕೆಲವೇ ಸಿಖ್ಖರು ಮಾಡಿದ್ದರೆಂಬ ಒಂದೇ ಕಾರಣಕ್ಕೆ ಸಿಖ್ಖರ ನರಮೇಧವನ್ನೇ ಕಾಂಗ್ರೆಸ್ಸಿಗರು ಮಾಡಿದ್ದರಲ್ಲ, ಇಂದಾದರೂ ಆ ನೋವು ಅವರಿಗಿದೆಯೇ? ಸ್ವತಃ ರಾಜೀವ್ ದೊಡ್ಡದೊಂದು ಮರ ಬಿದ್ದಾಗ ಈ ರೀತಿಯ ಸಮಸ್ಯೆಗಳಾಗುವುದು ಸಹಜ ಎಂದು ನರಮೇಧವನ್ನೇ ಸಮಥರ್ಿಸಿಬಿಟ್ಟಿದ್ದರಲ್ಲ. ಇವರನ್ನೆಲ್ಲಾ ನರಹಂತಕರು ಎಂದು ಕರೆದರೆ ತಪ್ಪಾಗುವುದೇ? ಮುಸಲ್ಮಾನರನ್ನು ಭಯೋತ್ಪಾದನೆಯ ಕಳಂಕದಿಂದ ರಕ್ಷಿಸಲು ಅವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡುವುದನ್ನು ಬಿಟ್ಟು ಹಿಂದೂ ಭಯೋತ್ಪಾದನೆ ಎಂಬ ಪದಪ್ರಯೋಗ ಮಾಡುತ್ತಾ ಹಿಂದೂಗಳನ್ನು ಕಟಕಟೆಯಲ್ಲಿ ನಿಲ್ಲಿಸುವ ಯತ್ನ ಮಾಡಿತಲ್ಲ ಕಾಂಗ್ರೆಸ್ಸು, ಇಂದು ಮತಗಳಿಕೆಗಾಗಿ ಹಿಂದುತ್ವದ ಸೋಗು ಹಾಕಿಕೊಂಡು ತಿರುಗಾಡುತ್ತಿದೆಯಲ್ಲ! ಹಿಂದಿನದ್ದೆಲ್ಲಾ ಮರೆತು ವೋಟು ಹಾಕುವಂತೆ ಕೇಳಲು ಅವರಿಗೆ ಮನಸ್ಸಾದರೂ ಹೇಗೆ ಬರುತ್ತದೆ? ಮಧ್ಯಪ್ರದೇಶದ ಭೋಪಾಲ್ನಲ್ಲಿ ಹಿಂದೂ ಭಯೋತ್ಪಾದನೆ ಪದಪ್ರಯೋಗಕ್ಕೆ ಕಾರಣನಾದ ದಿಗ್ವಿಜಯ್ಸಿಂಗರೆದುರಿಗೆ ಸಾಧ್ವಿ ಪ್ರಜ್ಞಾಸಿಂಗರನ್ನು ಕಣಕ್ಕಿಳಿಸಿ ಬಿಜೆಪಿ ಇವೆಲ್ಲವನ್ನೂ ಜನತೆಗೆ ಮತ್ತೆ ನೆನಪಿಸಿಕೊಡುವ ಪ್ರಯತ್ನ ಮಾಡಿದೆ. ಅಲ್ಲವೇ ಮತ್ತೇ? ಸುಮಾರು 9 ವರ್ಷಗಳ ಕಾಲ ಅನವಶ್ಯಕವಾಗಿ ಜೈಲಿನಲ್ಲಿಟ್ಟುಕೊಂಡು ಬಗೆ-ಬಗೆಯ ಯಾತನೆಗಳಿಗೆ ಆಕೆಯನ್ನು ಗುರಿಪಡಿಸಿ, ಮೂರು ಬಾರಿ ಮಂಪರು ಪರೀಕ್ಷೆ, ನಾಲ್ಕು ಬಾರಿ ಸುಳ್ಳು ಪತ್ತೆ ಯಂತ್ರದ ಮೂಲಕ ಪರೀಕ್ಷೆ ಮಾಡಿ ಕೊನೆಗೂ ಒಂದು ಚಾಜರ್್ಶೀಟನ್ನು ಸಲ್ಲಿಸದೇ ಆಕೆಯ ವಿರುದ್ಧ ಒಂದು ಸಾಕ್ಷಿಯನ್ನೂ ಹುಡುಕಲಾಗದೇ ಕೊನೆಗೆ ಕೈ ಚೆಲ್ಲಿದ ತನಿಖಾ ದಳದ ಸಾಹಸದ ಕುರಿತಂತೆ ಮಾತನಾಡಬೇಕೋ ಅಥವಾ ಸೂರತ್ನಲ್ಲಿ ಮೋದಿಯ ಕುರಿತು ಪ್ರಚಾರ ಮಾಡಿದ ಈಕೆಯನ್ನು ಸುಳ್ಳು ಆರೋಪದ ಮೇಲಾದರೂ ಬಂಧಿಸಬೇಕು ಎಂದು ಆಜ್ಞೆ ಹೊರಡಿಸಿದ ದಿಗ್ವಿಜಯ್ಸಿಂಗ್ರಂಥವರನ್ನು ಪ್ರಶ್ನಿಸಬೇಕೋ ನೀವೇ ಯೋಚಿಸಿ! ಮತ ಚಲಾಯಿಸುವ ಮುನ್ನ ಒಮ್ಮೆ ಸಾಧ್ವಿ ಪ್ರಜ್ಞಾಸಿಂಗರಿಗೆ ಕಾಂಗ್ರೆಸ್ಸಿನ ಸಕರ್ಾರ ಕೊಟ್ಟ ಕಿರುಕುಳವನ್ನು ನೆನಪಿಸಿಕೊಂಡುಬಿಡಿ.


ಹಾಗಂತ ಕಾಂಗ್ರೆಸ್ಸಿನ ಹಿಂದೂವಿರೋಧ ಇಲ್ಲಿಗೇ ಮುಗಿಯಲಿಲ್ಲ. ರಾಮಸೇತುವನ್ನು ಒಡೆಯಬೇಕೆಂದು ಕಾಂಗ್ರೆಸ್ಸಿನ ಅವಧಿಯಲ್ಲಿ ನಿಶ್ಚಯಿಸಲಾಗಿತ್ತು. ರಾಮಮಂದಿರದ ಕುರಿತಂತೆ ಕಾಂಗ್ರೆಸ್ಸು ಎಂದಿಗೂ ಹಿಂದೂಗಳ ಪರವಾಗಿ ನಿಲ್ಲಲೇ ಇಲ್ಲ. ಆದರೆ ಈಗ ಪಶ್ಚಾತ್ತಾಪದ ಹೊತ್ತಿನಲ್ಲಿ ಅವರು ನಾಟಕಕ್ಕಾಗಿಯಾದರೂ ಜನಿವಾರ ಧರಿಸುವ, ರಾಮಭಕ್ತರೆನ್ನುವ, ಶಿವಭಕ್ತರೆನ್ನುವ, ನಡೆಯಲು ಬಾರದಿದ್ದರೂ ಕಚ್ಚೆಪಂಚೆ ಉಡುವ ಪ್ರಯತ್ನ ಮಾಡುತ್ತಿರುವುದನ್ನು ನೋಡಿದರೆ ಇಂತಹ ಅವಕಾಶವಾದಿಗಳ ಮೇಲೆ ಅಸಹ್ಯ ಹುಟ್ಟುವಂತಿದೆ.


ಭ್ರಷ್ಟಾಚಾರದ ವಿಷಯದಲ್ಲೂ ಕಾಂಗ್ರೆಸ್ಸಿನದು ಮಹಾ ಸಾಧನೆಯೇ. ಸ್ವಾತಂತ್ರ್ಯದ ಹೊಸ್ತಿಲಲ್ಲಿ ಸೈನ್ಯಕ್ಕೆ ಬೇಕಾದ ಜೀಪುಗಳನ್ನು ಕೊಳ್ಳುವ ವಿಚಾರದಲ್ಲಿ ಶುರುವಾದ ಹಗರಣಗಳಿಂದ ಹಿಡಿದು ವಿಐಪಿಗಳನ್ನು ಹೊತ್ತೊಯ್ಯುವ ಅಗಸ್ಟಾವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ನವರೆಗೂ ಬೊಕ್ಕಸಕ್ಕೆ ಸಲ್ಲಬೇಕಾದ ಕೋಟ್ಯಂತರ ರೂಪಾಯಿ ಲೂಟಿಯಾಗಿ ಹೋಯ್ತು. ಸೈನ್ಯದ ಆಧುನೀಕರಣಕ್ಕೆ ಬೇಕಾಗಿದ್ದ ಬೋಫೋಸರ್್ ಹಗರಣಗಳ ಕಾರಣದಿಂದ ಮೈಲಿಗೆಯಾಯ್ತು. ಇನ್ನು 2ಜಿ, 3ಜಿ ಹಗರಣಗಳು, ಸೋನಿಯಾ ಅಳಿಯ ರಾಬಟರ್್ ವಾದ್ರಾನ ಲೆಕ್ಕವಿಲ್ಲದಷ್ಟು ಭೂ ಹಗರಣಗಳು, ಕಲ್ಲಿದ್ದಲಿನ ಹರಾಜಿನಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳ ಲೂಟಿ, ಇವೆಲ್ಲವೂ ಭಾರತಕ್ಕೆ ಕಾಂಗ್ರೆಸ್ಸಿನ ಬಲುದೊಡ್ಡ ಕೊಡುಗೆ. ಭೋಪಾಲ್ನ ಅನಿಲ ದುರಂತಕ್ಕೆ ಕಾರಣನಾದ ಆ್ಯಂಡರ್ಸನ್ನ ವಿಚಾರಣೆಯೂ ನಡೆಸದೇ ಬಿಟ್ಟುಕಳಿಸಿದ್ದು, ಬೋಫೋಸರ್್ನ ಕ್ವಟ್ರೋಚಿಯನ್ನು ಗೌರವಯುತವಾಗಿ ಬಿಳ್ಕೊಟ್ಟಿದ್ದು ಇವರೇ ಅಲ್ಲವೇನು? ಅಗಸ್ಟಾವೆಸ್ಟ್ಲ್ಯಾಂಡಿನಲ್ಲಿ ಕಾಂಗ್ರೆಸ್ಸಿಗೆ ಲಂಚವನ್ನು ಕೊಟ್ಟ ಕ್ರಿಶ್ಚಿಯನ್ ಮಿಶೆಲ್ ವ್ಯಾಪ್ತಿಗೇ ಸಿಗದೇ ದುಬೈನಲ್ಲಿ ಹಾಯಾಗಿ ತಿರುಗಾಡಿಕೊಂಡಿರುವಂತಾಗಿದ್ದು ಕಾಂಗ್ರೆಸ್ಸಿನ ಅವಧಿಯಲ್ಲೇ. ಮತ ಹಾಕುವಾಗ ನಾವು ಕಟ್ಟಿದ ತೆರಿಗೆ ಹಣಕ್ಕೆ ಕನ್ನ ಹಾಕುತ್ತಿದ್ದ ಇವರನ್ನೆಲ್ಲಾ ನೆನಪಿಸಿಕೊಳ್ಳಿ. ಇದಕ್ಕೆ ಪ್ರತಿಯಾಗಿ ಕ್ರಿಶ್ಚಿಯನ್ ಮಿಶೆಲ್ನನ್ನು ಅಟ್ಟಿಸಿಕೊಂಡು ಹೋಗಿ ಎಳೆದುಕೊಂಡು ಬಂದ, ರಾಜೀವ್ ಸಕ್ಸೇನಾ, ರಾಜೇಶ್ ತಲವಾರ್ನಂತಹ ಶಸ್ತ್ರಾಸ್ತ್ರ ದಲ್ಲಾಳಿಗಳನ್ನು ಹೆಡೆಮುರಿಕಟ್ಟಿ ಎಳೆದುಕೊಂಡು ಬಂದ, ಛೋಟಾ ರಾಜನ್ರಂತಹ ಮಾಫಿಯಾ ಮಹಿಮರನ್ನು ಸದ್ದಿಲ್ಲದಂತೆ ಶರಣಾಗಿಸಿದ ಈ ಐದು ವರ್ಷಗಳ ಸಕರ್ಾರವನ್ನೂ ಮರೆಯಬೇಡಿ!

ಕಾಂಗ್ರೆಸ್ಸಿನ ಅವಧಿಯಲ್ಲಿ ಭಾರತದ ಆಥರ್ಿಕ ಸ್ಥಿತಿ ಹೇಗಿತ್ತು ಗೊತ್ತಿದೆ ತಾನೇ? ಸಿರಿವಂತರಿಗೆ ಏಕಾಕಿ ಸಾಲವನ್ನು ಕೊಟ್ಟು ಅದು ಬ್ಯಾಂಕಿಗೆ ಮರಳದೇ ಎನ್ಪಿಎ ಆಗಿ ಬಳಲುತ್ತಿದ್ದುದು ಅವರದ್ದೇ ಅವಧಿಯಲ್ಲಿ. ರೂಪಾಯಿ ತಳಮಟ್ಟಕ್ಕೆ ತಲುಪಿ ಭಾರತದ ಆಥರ್ಿಕ ಪರಿಸ್ಥಿತಿ ದಿನೇ ದಿನೇ ಕುಸಿಯುತ್ತಿದ್ದುದು ಆಥರ್ಿಕ ತಜ್ಞ ಮನಮೋಹನ್ ಸಿಂಗರು ಪ್ರಧಾನಿಯಾಗಿದ್ದಾಗಲೇ. ರೂಪಾಯಿಯನ್ನು ಫ್ರಜೈಲ್-5ನಲ್ಲಿ ಗುರುತಿಸುತ್ತಿದ್ದುದು ಮರೆತಿಲ್ಲ ತಾನೇ? ಹಣದುಬ್ಬರ ಮುಗಿಲೆತ್ತರಕ್ಕೆ ಬೆಳೆದು ಶೇಕಡಾ ಹತ್ತನ್ನು ದಾಟಿದ್ದು ಪ್ರತಿಯೊಬ್ಬ ತಾಯಂದಿರಿಗೂ ನೆನಪಿರಲೇಬೇಕಾದ ಸಂಗತಿ. ಧಾನ್ಯಗಳ ಬೆಲೆಗಳು ಯಾವಾಗ ದುಪ್ಪಟ್ಟಾಗುತ್ತಿತ್ತೋ ಎನ್ನುವುದನ್ನು ಯಾರೂ ಊಹಿಸಲು ಸಾಧ್ಯವಾಗುತ್ತಿರಲಿಲ್ಲ. ಯಾವಾಗ ಈರುಳ್ಳಿಯಂತಹ ದಿನಬಳಕೆಯ ಪದಾರ್ಥ ಬಡವರಿಗೆ ಕೊಳ್ಳಲು ಅಸಾಧ್ಯವೆನಿಸುವಷ್ಟು ಏರಿ ಕುಳಿತಿರುತ್ತಿತ್ತೋ ದೇವರೇ ಬಲ್ಲ. ಕಳೆದ ಐದು ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿ ಹೋಯ್ತು. ಕಾಂಗ್ರೆಸ್ಸಿನಿಂದ ಸಾಲ ಪಡೆದವರು ಮೋದಿಯ ಕಠಿಣ ಆಡಳಿತ ತಾಳಲಾಗದೇ ದೇಶಬಿಟ್ಟು ಓಡಿಹೋದರು. ಫ್ರಜೈಲ್5ನಲ್ಲಿದ್ದ ಭಾರತದ ಆಥರ್ಿಕ ಸ್ಥಿತಿ ಜಗತ್ತಿನ ಆರನೇ ದೊಡ್ಡ ಆಥರ್ಿಕ ಶಕ್ತಿಯಾಗಿ ಬೆಳೆದು ನಿಂತಿದ್ದು ಈ ಐದು ವರ್ಷಗಳಲ್ಲೇ. ಹಣದುಬ್ಬರ ಈಗ ಅದೆಷ್ಟು ನಿಯಂತ್ರಣದಲ್ಲಿದೆ ಎಂದರೆ ಕಳೆದ ಐದು ವರ್ಷಗಳಲ್ಲಿ ಬೆಲೆ ಏಕಾಕಿ ಏರಿದ್ದನ್ನು ಯಾರು ನೋಡಿಯೇ ಇಲ್ಲ. 23ಕ್ಕೆ ಮತಚಲಾಯಿಸುವಾಗ ನೆಮ್ಮದಿಯಿಂದಿರುವ ಅಡುಗೆಮನೆಯನ್ನು, ಸದೃಢವಾಗಿರುವ ಬೊಕ್ಕಸವನ್ನು ಒಮ್ಮೆ ನೆನಪಿಸಿಕೊಳ್ಳಿ!


ಸೇನೆಯ ಕಥೆ ಇವೆಲ್ಲಕ್ಕಿಂತಲೂ ಕಠಿಣವಾದ್ದು. ಸೈನಿಕನಾಗುವುದು ಎರಡು ತುತ್ತಿನ ಊಟಕ್ಕಾಗಿ ಎಂಬ ಮಾತು ಕನರ್ಾಟಕದ ಮುಖ್ಯಮಂತ್ರಿಗಳ ಬಾಯಿಂದ ಕೇಳಿದ್ದಷ್ಟೇ ಅಲ್ಲ, ಅನೇಕ ಕಾಂಗ್ರೆಸ್ ನಾಯಕರ ಮನೋಗತವೂ ಆಗಿತ್ತು. ಸೇನೆಯ ಅಗತ್ಯವೇ ಇಲ್ಲ ಎಂದು ಪ್ರತಿಪಾದಿಸುತ್ತಿದ್ದವರು ನೆಹರೂ. ಅದಕ್ಕೆ ಪ್ರತಿಫಲವನ್ನು 62ರ ಚೀನೀ ಯುದ್ಧದಲ್ಲಿ ಚೆನ್ನಾಗಿಯೇ ಅನುಭವಿಸಿದ್ದೇವೆ. ಆನಂತರವೂ ನಾವೇನು ಸುಧಾರಿಸಲಿಲ್ಲ. ಸೈನ್ಯಕ್ಕೆ ಸ್ವಲ್ಪಮಟ್ಟಿಗೆ ಗೌರವ ಸಂದಿದ್ದು ಅಟಲ್ಜಿಯವರು ಪ್ರಧಾನಿಯಾಗಿದ್ದಾಗಲೇ. ಅಲ್ಲಿಯವರೆಗೆ ತೀರಿಕೊಂಡ ಸೈನಿಕರ ಶವಗಳು ಮನೆಗೂ ಬರುತ್ತಿರಲಿಲ್ಲ. ಸೈನ್ಯದ ಆಧುನೀಕರಣಕ್ಕೆ ಕಾಂಗ್ರೆಸ್ಸು ಎಂದಿಗೂ ಪ್ರಯತ್ನ ಮಾಡಲೇ ಇಲ್ಲ. ಬೋಫೋಸರ್್ ಬಂದನಂತರ ಭಾರತಕ್ಕೆ ಹೊಸ ಟ್ಯಾಂಕುಗಳ ಸೇರ್ಪಡೆಯಾಗಲಿಲ್ಲ. ವೇಗವಾಗಿ ಬೆಳೆಯುತ್ತಿದ್ದ ಚೀನೀ ನೌಕಾಶಕ್ತಿಯ ಮುಂದೆ ಭಾರತದ ನೌಕಾಪಡೆ ಪೇಲವವಾಗಿತ್ತು. ವಾಯುಸೇನೆಯಲ್ಲಿ ವಿಮಾನಗಳ ಸಂಖ್ಯೆ ಕಡಿಮೆಯಾಗಿದ್ದಲ್ಲದೇ ಹೊಸ ವಿಮಾನಗಳ ಸೇರ್ಪಡೆಯೂ ನಿಂತುಹೋಗಿದ್ದರಿಂದ ಚೀನಾ ಬಿಡಿ ನಾವು ಪಾಕಿಸ್ತಾನವನ್ನೆದುರಿಸುವುದೂ ಕಷ್ಟವಾಗಿತ್ತು. ಸೈನಿಕರಂತೂ ಇತರೆ ಸಕರ್ಾರಿ ನೌಕರರಂತೆ ಒಂದಿಷ್ಟು ಕೆಲಸ ಮಾಡಿ ನಿವೃತ್ತಿ ತೆಗೆದುಕೊಂಡು ಹೊರಡುವುದನ್ನೇ ಬದುಕೆಂದು ಭಾವಿಸಿಬಿಟ್ಟಿದ್ದರು. ಈ ಐದು ವರ್ಷಗಳಲ್ಲಿ ಸೈನಿಕನ ಆತ್ಮವಿಶ್ವಾಸದಲ್ಲಿ ಬಂದಿರುವ ಬದಲಾವಣೆಯನ್ನು ಎಂದಾದರೂ ಊಹಿಸಿಕೊಂಡು ನೋಡಿ. ಒನ್ ರ್ಯಾಂಕ್ ಒನ್ ಪೆನ್ಷನ್ ಘೋಷಣೆ ಮಾಡಿ ನಿವೃತ್ತಿಯ ನಂತರವೂ ಆತನಿಗೆ ಸಿಗುವ ಗೌರವದ ಕುರಿತಂತೆ ಮೋದಿ ಖಾತ್ರಿ ಪಡಿಸಿದರಲ್ಲದೇ ಭೂಸೇನೆಗೆ ನಾಲ್ಕಾರು ಬಗೆಯ ಹೊಸ ಟ್ಯಾಂಕುಗಳನ್ನು ಸೇರ್ಪಡೆಗೊಳಿಸುವ ಮೂಲಕ ವಿಶೇಷ ಶಕ್ತಿ ತುಂಬಿದರು. ಅಪಾಚಿ ಚಿನೂಕ್ ಹೆಲಿಕಾಪ್ಟರುಗಳು ಈ ಸಂದರ್ಭದಲ್ಲೇ ಬಂದವು. ಬುಲೆಟ್ಪ್ರೂಫ್ ಜಾಕೆಟುಗಳು, ಹೆಲ್ಮೆಟ್ಟುಗಳು ಜೊತೆಗೆ ಶತ್ರುಗಳನ್ನು ಚೀರಿ ಬಿಸಾಡುವ ಅಮೇರಿಕಾದ ಸ್ನೈಪರ್ ರೈಫಲ್ಲುಗಳೂ ಕೂಡ ಈ ಹೊತ್ತಲ್ಲೇ ಬಂದದ್ದು. ಭಾರತದಲ್ಲೇ ಈಗ ರಷ್ಯಾದ ಸಹಯೋಗದೊಂದಿಗೆ ಸಬ್ಮರಿನ್ಗಳು ನಿಮರ್ಾಣಗೊಳ್ಳುತ್ತಿವೆ. ಮಧ್ಯವತರ್ಿಗಳೇ ಇಲ್ಲದಂತೆ ಫ್ರಾನ್ಸಿನಿಂದ ರಫೇಲನ್ನು ಕೊಂಡುಕೊಳ್ಳುವ ಒಪ್ಪಂದ ನಿಜಕ್ಕೂ ಕ್ರಾಂತಿಕಾರಿಯೇ ಸರಿ. ವೃದ್ಧಿಸಿದ ಆತ್ಮವಿಶ್ವಾಸದ ಕಾರಣದಿಂದಾಗಿಯೇ ಸೈನಿಕ ಪಾಕಿಸ್ತಾನದ ಮೇಲೆ ಸಜರ್ಿಕಲ್ ಸ್ಟ್ರೈಕ್ ಮಾಡಿ ಉಗ್ರರನ್ನು ಕೊಲ್ಲಲು ಸಾಧ್ಯವಾಗಿದ್ದು. ಪಾಕಿಸ್ತಾನದೊಳಕ್ಕೆ ನುಗ್ಗಿ ವಾಯುಸೇನೆ ಏರ್ಸ್ಟ್ರೈಕ್ ಮಾಡಿ ಬರಲೂ ಕೂಡ ಈ ಆತ್ಮವಿಶ್ವಾಸವೇ ಕಾರಣವಾಯ್ತು. ಮುಂಬೈ ದಾಳಿಯಲ್ಲಿ 180 ಭಾರತೀಯರನ್ನು ಕಳೆದುಕೊಂಡಾಗಲೂ ಪ್ರತಿಕ್ರಿಯೆ ನೀಡದ ಕಾಂಗ್ರೆಸ್ಸು ಮತ್ತು ಒಬ್ಬ ವಿಂಗ್ ಕಮ್ಯಾಂಡರ್ ಅಭಿನಂದನ್ಗಾಗಿ ಪಾಕಿಸ್ತಾನದೊಂದಿಗೆ ಯುದ್ಧಕ್ಕೇ ಸಜ್ಜಾದ ಮೋದಿ ಇವೆರಡರಲ್ಲೂ ಅಂತರ ಕಾಣುವುದಿಲ್ಲವೇ. ಮತ ಹಾಕುವ ಮುನ್ನ ನೀವೊಬ್ಬರೇ ಕುಳಿತು ಆಲೋಚಿಸಿ!

ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಮತ್ತೆ ಮರುಕಳಿಸುವುದರಲ್ಲಿ ಯಾವ ಅರ್ಥವೂ ಇಲ್ಲ. ಮತದಾನವೆನ್ನುವುದು ಅತ್ಯಂತ ಪ್ರಜ್ಞಾವಂತ ಮತ್ತು ಪ್ರಬುದ್ಧ ಕಾರ್ಯ. ಯಾರಿಗೆ ಮತ ಚಲಾಯಿಸುತ್ತಿದ್ದೇವೆ ಎಂಬುದನ್ನು ಆಲೋಚಿಸಿ, ಅವಲೋಕಿಸಿಯೇ ಮತದಾನ ಮಾಡಿ. ಮೊದಲ ಹಂತದ ಮತದಾನಕ್ಕಿಂತಲೂ ಈ ಹಂತದಲ್ಲಿ ಹೆಚ್ಚಿನ ಮತದಾನವಾಗುವಂತೆ ನಾವೆಲ್ಲರೂ ಪ್ರಯತ್ನಿಸೋಣ. ಪ್ರಜಾಪ್ರಭುತ್ವದ ಈ ವೈಭವ ಜಗತ್ತಿಗೆ ಮುಟ್ಟುವಲ್ಲಿ ನಾವೂ ಪಾತ್ರಧಾರಿಗಳಾಗೋಣ!

-ಚಕ್ರವರ್ತಿ ಸೂಲಿಬೆಲೆ

1 Comment

1 Comment

  1. ಶಶಿಕಲಾ. ಎಸ್.

    April 22, 2019 at 5:15 am

    ಮೋದಿ ಇಲ್ಲದ ಭಾರತ ಊಹಿದರೆ ಬ್ರಿಟಿಷ್ ಆಳ್ವಿಕೆ ನೆನಪಾಗುತ್ತೆ. ಜನಗಳೇನೋ ವಿಷಯ ತಿಳಿದ ನಂತರ ಓಟ್ ಮಾಡಬಹುದು. ಆದರೆ ಮಾಧ್ಯಮ ಸಮಾಜದ ಅಂಗವಲ್ಲವೇ. ಅವೇಕೆ ತಮ್ಮ ಜವಾಬ್ದಾರಿ ನಿರ್ವಹಿಸಲ್ಲ.ಕಳೆದೈದು ವರ್ಷದ ರಿಪೋರ್ಟ್ ಯಾವ ಎಲೆಕ್ಟ್ರಾನಿಕ್ ಅಥವಾ ಪ್ರೆಸ್ ಹೇಳಿಲ್ಲ. ಮಂಡ್ಯ ದಲ್ಲಿ ಮಾತ್ರವೇ ಎಲೆಕ್ಷನ್ ನಡೆಯುವಂತೆ ಬಿಂಬಿಸಿ ತಮ್ಮ ಅಜ್ಞಾನ ತೋರಿದರು. ಇವರಿಗೆ ಕ್ಷಮೆ ಇಲ್ಲ.
    ನಿಮ್ಮ ಕಲ್ಬುರ್ಗಿ ಪ್ರೆಸ್ ಮೀಟ್ ನೋಡಿದೆ. ಬುದ್ದಿವಂತ ಪತ್ರಕರ್ತರು ನಿಮ್ಮನ್ನು ಪ್ರಶ್ನೆ ಕೇಳುತ್ತದ್ದು.ನೋಡಿದರೆ ಏನಾದರೂ ಸಿಗುತ್ತಾ ನಾಲ್ಕು ದಿನದ ಬ್ರೇಕಿಂಗ್ ನ್ಯೂಸ್ ಮಾಡಲು ಎಂದು ಪ್ರಯತ್ನಿಸಿದಂತಿತ್ತು.ಅದೇ ಬುದ್ದಿಂತಿಕೆಯಿಂದ ದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ದೇಶದ ರಕ್ಷಣೆ ಕುರಿತಾದ ಮಾಹಿತಿಗೆ ಬಳಸಿದ್ದರೆ ಜನ ಸಾಮಾನ್ಯರ ಮೆಚ್ಚುಗೆ ಗಳಿಸಿ ತಮ್ಮ ವೃತ್ತಿಗೂ ಗೌರವ ತರಬಹುದಿತ್ತು.ಆದರೆ ತಾವೇ ಬೃಹಸ್ಪತಿಗಳು ತಮಗೆಲ್ಲಾ ತಿಳಿದಿದೆ ಎಂದು ಅದನ್ನು ಜನತೆಯ ಮೇಲೆ ಹೇರಿ ರಾಜಕೀಯ ನಾಯಕರನ್ನೂ ಮೀರಿಸಿದ ವರ್ತನೆ ಅಸಹ್ಯ ಹುಟ್ಟಿಸಿತು. ಈಗ ಅವರಿಗೂ ಒಂದು ಪಾಠ ಕಲಿಸಬೇಕಿದೆ. ದೇಶ ಸಮಾಜವನ್ನು ತಮ್ಮ ಹಿಡಿತಕ್ಕೆ ತೆಗೆದು ಕೊಳ್ಳುವ ಅವರ ಪ್ರಯತ್ನದಿಂದ ಪಾರುಮಾಡಿದ ಸಾಮಾಜಿಕ ಜಾಲತಾಣ ನಿಜಕ್ಕೂ ನಮ್ಮಲ್ಲರ ಆತ್ಮೀಯ ಗೆಳೆಯ, ರಕ್ಷಕ, ಸತ್ಯವಂತ ದೇಶಪ್ರೇಮಿ.

Leave a Reply

Your email address will not be published. Required fields are marked *

Most Popular

To Top