National

ಮಕ್ಕಳ ಮೇಲೂ ಕಲ್ಲೆಸೆದ ಶಾಂತಿಪ್ರಿಯರು; ಎಲ್ಲಿದ್ದಾರೆ ಗಂಜಿ ಗಿರಾಕಿಗಳು?!

ಇಂಡೋರಿನ ಗ್ರಾಮೀಣ ಪ್ರದೇಶವೊಂದರಲ್ಲಿ ಶಾಲಾಮಕ್ಕಳನ್ನು ಹೊತ್ತೊಯ್ಯುತ್ತಿದ್ದ ವಾಹನವೊಂದರ ಬ್ರೇಕು ಕಟ್ಟಾಗಿದೆ. ಅಚಾನಕ್ಕಾಗಿ ಆಡಿನ ಮರಿಯೊಂದು ಅಡ್ಡ ಬಂದ ಕಾರಣ ಆ ಮರಿ ಸ್ಥಳದಲ್ಲೇ ಮೃತಪಟ್ಟಿದೆ. ರೊಚ್ಚಿಗೆದ್ದ ಜನ ಬಸ್ಸಿನ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಮಕ್ಕಳು ಒಳಗೆ ರೋಧಿಸುತ್ತಾ ಕುಳಿತಿದ್ದರು. ಜನ ಆಕ್ರೋಶದಿಂದ ಬಸ್ಸಿನ ಗಾಜನ್ನು ಒಡೆದು ಹಾಕಿದ್ದಾರೆ. ಕಲ್ಲೆಸೆತದಿಂದ 9 ಮಕ್ಕಳಿಗೆ ಗಾಯವಾಗಿದೆ. ಘಟನೆಯ ನಂತರ ಪೊಲೀಸರು 8‌ ಜನರನ್ನು ಈ ಸಂಬಂಧ ಬಂಧಿಸಿದ್ದಾರೆ.

ಸೋನಿ ಇಂಟರ್‌ನ್ಯಾಷನಲ್ ಎಂಬ ಶಾಲಾವಾಹನ‌ ಶಾಲೆಯ ನಂತರ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಿತ್ತು. ಮುಸಲ್ಮಾನರೇ ಹೆಚ್ಚಿರುವ ನಯೀ ಆಬಾದಿ ಎಂಬ ಸ್ಥಳಕ್ಕೆ ಹೋಗುತ್ತಿದ್ದಂತೆ ಬ್ರೇಕ್ ಕಟ್ಟಾಗಿದೆ. ಚಾಲಕ ಮುಖೇಶ್ ಕುಶ್ವಾಹ್ ಹ್ಯಾಂಡ್ ಬ್ರೇಕ್ ಮೂಲಕ ವಾಹನವನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗದೇ ಬಸ್ಸು ಪಕ್ಕದಲ್ಲಿದ್ದ ಜಮೀನಿನೊಳಗೆ ನುಗ್ಗಿದೆ. ಅಲ್ಲಿದ್ದ ಆಡಿನ ಮರಿಯೊಂದು ಬಸ್ಸಿಗೆ ಸಿಕ್ಕು ಮೃತಪಟ್ಟಿದೆ.

ಆಡು ಸಾಯುತ್ತಿದ್ದಂತೆ ರಿಜ್ವಾನಾ ಎಂಬಾತ ಬಸ್ಸಲ್ಲಿ ಹತ್ತಿ ಚಾಲಕನಿಗೆ ಹೊಡೆದಿದ್ದಾನೆ. ನಂತರ ಆತನ ಮಗ ಅಲ್ಪೇಶ್ ಅಕ್ಕ-ಪಕ್ಕದವರನ್ನು ಕೂಗಿ ಕರೆದಿದ್ದಾನೆ. ಜನ ಬರುತ್ತಿದ್ದಂತೆ ಬಸ್ಸಿನ ಮೇಲೆ ಕಲ್ಲೆಸೆತ ನಡೆಸಿದ್ದಾರೆ‌. ಸದಾ ಶಾಂತಿದೂತರೆಂದು ಪೋಸುಕೊಡುವ, ಶಾಂತಿಯ ಮಾತುಗಳನ್ನಾಡುವ ಜನ ಬಸ್ಸಿನಲ್ಲಿ ಮಕ್ಕಳಿದ್ದಾರೆಂದೂ ನೋಡದೇ ಮಕ್ಕಳ ಮೇಲೆ ಕಲ್ಲೆಸೆತ ನಡೆಸಿದ್ದಾರೆ. ಮಕ್ಕಳು ಸೀಟಿನ ಸಂದಿಯಲ್ಲಿ ಬಚ್ಚಿಟ್ಟುಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಬಸ್ಸಿನಲ್ಲಿ ಸುಮಾರು 50 ಜನ ಮಕ್ಕಳಿದ್ದರು‌. ಗಾಜು ಒಡೆದಾಕ್ಷಣ ಹಲವಾರು ಮಕ್ಕಳಿಗೆ ಗಾಯಗಳಾಗಿವೆ. ಮಕ್ಕಳು ಕೂಗಾಡಲು, ಅಳಲು ಶುರುಮಾಡಿದ್ದಾರೆ‌. ಶಿಕ್ಷಕಿ ಪಲ್ಲವಿ ಪಾಂಡೆ ಜನರನ್ನು ತಡೆಯಲು ಯತ್ನಿಸಿದ್ದಾರೆ‌. ಘಟನೆ ನಡೆದ ಹತ್ತಿರದಲ್ಲೇ ಸರ್ಕಾರಿ ಶಾಲೆಯೊಂದರಲ್ಲಿ ದ್ವಿತೀಯ ಪಿಯುಸಿಯ ಪರೀಕ್ಷೆ ನಡೆಯುತ್ತಿತ್ತು.

ಘಟನೆ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸರು ಆಗಮಿಸಿ ಗಾಯಗೊಂಡ ಮಕ್ಕಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದಾರೆ. ಗೋಕಳ್ಳರು ಗೋವನ್ನು ಕದ್ದೊಯ್ಯುತ್ತಿದ್ದಾಗ ಬಡಿಯುವ ಹಳ್ಳಿಗರ ವಿರುದ್ಧ ಬೀದಿಗಿಳಿದು ಅರಚಾಡುವ ಜನ ಮನಮೋಹನ ಸಿಂಗರಂತೆ ಮೌನವಹಿಸಿರುವುದು ಆಶ್ಚರ್ಯ! ಆಗೆಲ್ಲಾ ಲಿಂಚಿಂಗ್ ಹೆಸರಲ್ಲಿ ನಾಟ್ ಇನ್ ಮೈ ನೇಮ್ ಎಂಬ ಅಭಿಯಾನವನ್ನು ಮಾಡಿದ ಸೋ ಕಾಲ್ಡ್ ಬುದ್ಧಿಜೀವಿಗಳು ಇಂದು ಈ ಘಟನೆಯೇ ನಡೆದಿಲ್ಲವೆನ್ನುವಂತೆ ಕುಳಿತಿದ್ದಾರೆ. ಇವರದ್ದೆಲ್ಲಾ ಸದಾ ಸೆಲೆಕ್ಟೀವ್ ಹೋರಾಟವೇ.

Click to comment

Leave a Reply

Your email address will not be published. Required fields are marked *

Most Popular

To Top