National

ಮಕ್ಕಳ ಮಾನಸಿಕ ಸ್ವಾಸ್ಥ್ಯ ಹಾಳುಗೆಡವುತ್ತಿರುವ ಪ್ರತಿಭಟನಾಕಾರರು!!

ಸುಮಾರು ಒಂದೂವರೆ ತಿಂಗಳಿನಿಂದ ದೆಹಲಿಯ ನಟ್ಟನಡುವೆ ಶಾಹೀನ್ ಬಾಗ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಯ ನೆಪದಲ್ಲಿ ಹೀರೊ ಆದ ಶರ್ಜೀಲ್ ಇಮಾಮ್ ನ ನಿಜ ಬಣ್ಣ ಬಯಲಾಯ್ತು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ ಈ ಪ್ರತಿಭಟನೆಗೆಂದೇ ಹಣ ಹರಿದು ಬಂದಿರುವ ವಿಚಾರಗಳೂ ಹೊರಬಂದವು. ಸರ್ಕಾರ ತಮ್ಮ ಪ್ರತಿಭಟನೆಯನ್ನು ಕಂಡು ತಾವು ಹೇಳಿದಂತೆ ಕೇಳುತ್ತದೆ ಎಂದು ನಂಬಿದ್ದವರ ಲೆಕ್ಕಾಚಾರವೀಗ ತಲೆಕೆಳಗಾಗಿದೆ. ಈ ಪ್ರತಿಭಟನೆಯಿಂದ ಶಾಹೀನ್ ಬಾಗ್ನ ಸುತ್ತಮುತ್ತ ವಾಸವಿರುವ ಜನರಿಗೆ, ಶಾಲೆ-ಕಾರ್ಖಾನೆ-ಕಛೇರಿಗೆ ತೆರಳುತ್ತಿರುವ ದೆಹಲಿಯ ಜನರಿಗೆ ಇರುಸು-ಮುರುಸುಂಟಾಗುತ್ತಿದೆ. ಜನ ಇದರಿಂದ ರೋಸಿ ಹೋಗಿದ್ದಾರೆ. ಇಷ್ಟಾದರೂ ಅಲ್ಲಿನ ಹೆಂಗಸರು ಕದಲುತ್ತಿಲ್ಲ, ತಮ್ಮ ಮಕ್ಕಳನ್ನೂ ಅಲ್ಲಿಂದ ವಾಪಸ್ಸು ಕಳಿಸುತ್ತಿಲ್ಲ.

ಸಿಎಎ ವಿರುದ್ಧ ಪ್ರತಿಭಟನೆಗೆಂದು ಚಿಕ್ಕ ಕಂದಮ್ಮನನ್ನು ಮುಸ್ಲೀಂ ಹೆಣ್ಣುಮಗಳೊಬ್ಬಳು ಕರೆದುಕೊಂಡು ಹೋಗಿದ್ದಳು. ಮಗುವಿಗೆ ಆರೋಗ್ಯ ಸರಿ ಇಲ್ಲದ್ದನ್ನೂ ಲೆಕ್ಕಿಸದೇ ಆಕೆ ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾರಣ ಆ ಪುಟ್ಟ ಕಂದಮ್ಮ ಎರಡು ದಿನಗಳ ಹಿಂದಷ್ಟೇ ಕೊನೆಯುಸಿರೆಳೆದಿದೆ! ತಮ್ಮದ್ದೇ ತಪ್ಪಿನಿಂದ ಮಗುವನ್ನು ಕಳೆದುಕೊಂಡ ಪೋಷಕರು ಈಗ ಸರ್ಕಾರವನ್ನು ದೂಷಿಸುತ್ತಿದ್ದಾರೆ. ಈ ಘಟನೆಯ ಕುರಿತು ಬುದ್ಧಿಜೀವಿಗಳ್ಯಾರೂ ಚಕಾರವೆತ್ತುತ್ತಿಲ್ಲ. ಇಷ್ಟೇ ಅಲ್ಲ, ಈ ಪ್ರತಿಭಟನೆಯಲ್ಲಿರುವ ಮುಕ್ಕಾಲು ಪಾಲು ಹೆಂಗಸರು ಮತ್ತು ಮಕ್ಕಳಿಗೆ ಸಿಎಎ ಎಂದರೇನೆಂದು ತಿಳಿದೇ ಇಲ್ಲ ಅಥವಾ ತಿಳಿದಿದ್ದರೂ ಅದು ಸತ್ಯವಂತೂ ಅಲ್ಲ!

ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ ದೆಹಲಿಯ ಪ್ರತಿಭಟನೆ ನಡೆಯುತ್ತಿರುವ ಭಾಗದ ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ಪ್ರತಿಭಟನೆಯಲ್ಲಿ ನಿರತರಾಗಿರುವ ಮಕ್ಕಳಿಗೆ ಕೌನ್ಸಿಲಿಂಗ್ ನೀಡಬೇಕೆಂದು ಪತ್ರವೊಂದನ್ನು ಬರೆದಿದೆ. ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಕೆಲ ಮಕ್ಕಳ ವಿಡಿಯೊಗಳನ್ನು ನೋಡಿ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಈ ಪತ್ರ ಬರೆಯಲಾಗಿದೆ ಎಂದು ಆಯೋಗ ತಿಳಿಸಿದೆ. ಪತ್ರದಲ್ಲಿ, ‘ಪ್ರಧಾನಮಂತ್ರಿ ಮತ್ತು ಗೃಹಸಚಿವರು ತಮ್ಮ ಪೌರತ್ವವನ್ನು ಸಾಬೀತುಪಡಿಸುವ ದಾಖಲೆಗಳನ್ನು ಕೇಳುತ್ತಾರೆ ಮತ್ತದನ್ನು ಒಪ್ಪಿಸದಿದ್ದರೆ ತಮ್ಮನ್ನು ಊಟ-ಬಟ್ಟೆಯಿಲ್ಲದೇ ಬಂಧನದಲ್ಲಿರಿಸುತ್ತಾರೆ ಎಂದು ತಮ್ಮ ಹಿರಿಯರು ಹೇಳಿದ್ದಾರೆ ಎಂದು ಮಕ್ಕಳು ಮಾತನಾಡುತ್ತಿದ್ದಾರೆ’ ಎಂದು ನಮೂದಿಸಲಾಗಿದೆ. ಮಕ್ಕಳಿಗೆ ಸುಳ್ಳು ಮಾಹಿತಿಯನ್ನು ನೀಡಿ ಅದನ್ನೇ ನಿಜವೆಂದು ನಂಬಿಸಲಾಗಿದೆ. ಇದು ಅವರ ಮಾನಸಿಕ ಸ್ವಾಸ್ಥ್ಯವನ್ನು ಖಂಡಿತ ಹಾಳು ಮಾಡುತ್ತದೆ ಎಂದು ಆಯೋಗ ತಿಳಿಸಿದೆ!

ಹತ್ತು ದಿನದೊಳಗೆ ಈ ಕುರಿತು ವಿಚಾರಣೆ ನಡೆಸಿ ಕ್ರಮ ತೆಗೆದುಕೊಳ್ಳಬೇಕೆಂದು ಆಯೋಗ ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ಪತ್ರ ಬರೆದಿದೆ. ಈ ರೀತಿಯ ವಿಡಿಯೊವನ್ನು ಸ್ವತಃ ಆಯೋಗವು ಫೇಸ್ ಬುಕ್, ಯೂಟ್ಯೂಬ್ ನಂತಹ ಸೋಷಿಯಲ್ ಮಿಡಿಯಾದಲ್ಲಿ ನೋಡಿರುವ ವಿಚಾರವನ್ನೂ ತಿಳಿಸಿದೆ. ‘ಮೋದಿಯವರಿಂದ ನಾವು ಆಜಾದಿಯನ್ನು ಪಡೆದುಕೊಳ್ಳುತ್ತೇವೆ’ ‘ಮೋದಿ ಮತ್ತು ಶಾರನ್ನು ಪ್ರತಿಭಟನಾಕಾರರೇ ಕೊಲ್ಲುತ್ತಾರೆ’ ಎಂಬ ಕೆಲವು ವಿಡಿಯೊಗಳು ವೈರಲ್ ಆಗಿದ್ದವು. ಇದನ್ನು ಗಮನಿಸಿದ ಆಯೋಗ ಮಕ್ಕಳಿಗೆ ಬ್ರೈನ್ ವಾಶ್ ಮಾಡಿ ಸುಳ್ಳನ್ನು ತುಂಬಲಾಗಿದೆ. ಅವರ ಮನಸ್ಸಿನಲ್ಲಿ ಇಲ್ಲದ ಭಯವನ್ನು ತುಂಬಿ ಮಾನಸಿಕ ಹಿಂಸೆ ಅನುಭವಿಸುವಂತೆ ಮಾಡುವುದು ಅಪರಾಧವೆಂದು ಆಯೋಗ ಸ್ಪಷ್ಟವಾಗಿ ತಿಳಿಸಿದೆ.

ಶಾಹೀನ್ ಬಾಗ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ದೆಹಲಿ ಜನರಿಗೆ ಕಿರಿಕಿರಿ ಉಂಟು ಮಾಡುತ್ತಿದೆಯಷ್ಟೇ ಅಲ್ಲದೇ ಅಲ್ಲಿ ಭಾಗವಹಿಸಿರುವ ಮಕ್ಕಳ ಮೇಲೂ ಗಂಭೀರ ಪರಿಣಾಮ ಉಂಟು ಮಾಡುತ್ತಿದೆ!

-ಪ್ರಿಯಾ ಶಿವಮೊಗ್ಗ

Click to comment

Leave a Reply

Your email address will not be published. Required fields are marked *

Most Popular

To Top