National

ಭ್ರಷ್ಟರೆಲ್ಲಾ ಒಟ್ಟಾಗಿದ್ದೇ ಮೋದಿಗೆ ಲಾಭ!!

ಕೆಲವೊಮ್ಮೆ ಅದು ಹಾಗೆಯೇ. ಬಾಯಿಬಿಟ್ರೆ ಬಣ್ಣಗೇಡು ಅಂತಾರಲ್ಲಾ ಹಾಗೆ. ಇತ್ತೀಚೆಗೆ ಮಹಾಘಟಬಂಧನದ ಮಹಾರ್ಯಾಲಿಯನ್ನು ಕಲ್ಕತ್ತಾದಲ್ಲಿ ಕಂಡಮೇಲೆ ‘ಇಷ್ಟೇನಾ’ ಎನ್ನುವಂತಹ ಸ್ಥಿತಿಗೆ ಎದುರಾಳಿ ತಂಡ ಬೆತ್ತಲಾಗಿ ನಿಂತಿದೆ. ಒಟ್ಟಾರೆ ಬ್ರಿಗೇಡ್ ಚಲೋ ಎಂದೇ ಬಂಗಾಳದಲ್ಲಿ ಖ್ಯಾತಗೊಂಡಿದ್ದ ಈ ಕಾರ್ಯಕ್ರಮಕ್ಕೆ ಒಂದೆರಡು ತಿಂಗಳಿಂದಲೇ ಭರ್ಜರಿ ಪ್ರಚಾರ ಕೊಡಲಾಗಿತ್ತು. ಕಲ್ಕತ್ತಾದ ಬೀದಿ-ಬೀದಿಗಳಲ್ಲೂ ದೀದಿಯ ಭಾವಚಿತ್ರವಿರುವ ದೊಡ್ಡ ಕಟೌಟ್ಗಳು ರಾರಾಜಿಸುತಿದ್ದವು. ಅಲ್ಲಲ್ಲಿ ಸಣ್ಣ-ಸಣ್ಣ ವೇದಿಕೆಗಳನ್ನು ನಿಮರ್ಿಸಿಕೊಂಡು ಎದುರಿಗೆ ಜನರಿಲ್ಲದೇ ಹೋದರೂ ದೀದಿಯ ಪ್ರಚಾರ ಮಾಡುವ ಪ್ರಚಂಡ ಪುಢಾರಿಗಳಿದ್ದರು. ರಾಷ್ಟ್ರಮಟ್ಟದಲ್ಲಿ ಇದಕ್ಕೆ ಯುನೈಟೆಡ್ ಇಂಡಿಯಾ ರ್ಯಾಲಿ ಎಂಬ ಹೆಸರು ಕೊಡಲಾಗಿತ್ತು. ಮೋದಿಯನ್ನು ಸೋಲಿಸಲು ಒಟ್ಟುಗೂಡಬೇಕೆಂದು ನಿರ್ಧರಿಸುವ ಎಲ್ಲರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಅಂದಾಜಿನ ಪ್ರಕಾರ 50 ಲಕ್ಷ ಜನ ಈ ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆಯಿತ್ತು. ಹಾಗಂತ ದೀದಿಯ ಅಬ್ಬರದ ಪ್ರಚಾರವಂತೂ ನಡೆದಿತ್ತು. ಕಾರ್ಯಕ್ರಮ ಮುಗಿಯುವ ವೇಳೆಗೆ ಇವೆಲ್ಲವೂ ನೀರ ಮೇಲಿನ ಗುಳ್ಳೆಯೆಂದು ಸಾಬೀತಾಗಿ ಹೋಯ್ತು. ಸಂಖ್ಯೆಯ ಕುರಿತಂತೆ ಪೊಲೀಸ್ ವರದಿಗಳು ಈಗ ಬರುತ್ತಿವೆ. ಇಡಿಯ ಮೈದಾನದ ಸಾಮಥ್ರ್ಯ ಮೂರೂವರೆ ಲಕ್ಷಕ್ಕಿಂತ ಹೆಚ್ಚಲ್ಲ. ಮೈದಾನ ಕಿಕ್ಕಿರಿದು ತುಂಬಿದೆ ಎಂದು ಭಾವಿಸಿದರೂ 5 ಲಕ್ಷಕ್ಕಿಂತ ಹೆಚ್ಚು ಸಂಖ್ಯೆ ಅಲ್ಲ. ಇನ್ನು ಒಳಗೆ ಬರಲಾಗದೇ ಹೊರಗಡೆಯೇ ಉಳಿದವರನ್ನು 5 ಲಕ್ಷ ಜನರೆಂದು ಅಂದಾಜಿಸಿದರೂ ಸಂಖ್ಯೆ 10 ಲಕ್ಷ ದಾಟುವುದಿಲ್ಲ. ಇದು ಪೊಲೀಸರ ಲೆಕ್ಕಾಚಾರ! ಇದೇ ಪೊಲೀಸರು ಮುಂದುವರಿದು ಬಂದ ಜನರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಜನ ಸ್ವತಃ ಮಮತಾ ಬ್ಯಾನಜರ್ಿಯ ಭಾಷಣ ಕೇಳದೇ ಎದ್ದು ಹೋದರೆಂದು ವರದಿ ಕೊಟ್ಟಿದ್ದಾರೆ. ಅದರರ್ಥ ಬಲು ಸ್ಪಷ್ಟ. ಮಹಾಘಟಬಂಧನ ಸಶಕ್ತವಾಗಿರುವ ಪಶ್ಚಿಮಬಂಗಾಳದಲ್ಲೇ ತಿರಸ್ಕರಿಸಲ್ಪಟ್ಟಿದೆ. ಸಶಕ್ತ ಎಂದಿದ್ದೇಕೆಂದರೆ ಬಂಗಾಳದಲ್ಲಿ ಸದ್ಯದ ಮಟ್ಟಿಗೆ ದೀದಿಯ ಮಾತೇ ಅಂತಿಮ. ಸುಮಾರು ಮೂರು ದಶಕಗಳ ಕಾಲ ಎಡಪಂಥೀಯರು ಆಳ್ವಿಕೆ ನಡೆಸಿದ ನಂತರ ಅಧಿಕಾರಕ್ಕೆ ಬಂದಿರುವ ಮಮತಾ, ಆಕೆಯೂ ಮೂರು ದಶಕಗಳ ಕಾಲ ಅಧಿಕಾರ ನಡೆಸಿಯೇ ನಡೆಸುತ್ತಾಳೆ ಎಂದು ಜನ ಅಲ್ಲಿ ನಂಬಿಬಿಟ್ಟಿದ್ದಾರೆ. ಜೊತೆಗೆ ಯಾವ ಕಾರ್ಯಕರ್ತ ಪಡೆ ಕಮ್ಯುನಿಸ್ಟರೊಂದಿಗಿದ್ದು ಗೂಂಡಾಗಳ ರೀತಿಯಲ್ಲಿ ವತರ್ಿಸುತ್ತಾ ಜನರನ್ನು ಬೆದರಿಸಿ ಅಂಕೆಯಲ್ಲಿಟ್ಟುಕೊಂಡಿತ್ತೋ ಅದೇ ಪಡೆ ಈಗ ಮಮತಾಳ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಹಳ್ಳಿಗಳಲ್ಲಿ ಯಾರಾದರೂ ಬಿಜೆಪಿಯ ಪರವಾಗಿ ಮಾತನಾಡಿದರೆ ಅವರನ್ನು ಕೊಲೆಗೈಯ್ಯಲಾಗುತ್ತದೆ. ಈ ರ್ಯಾಲಿಗೂ ಅನೇಕರನ್ನು ಕರೆತರಲು ಪಿಸ್ತೂಲುಗಳನ್ನು ಬಳಸಲಾಗಿದೆ ಎಂಬ ವಿಡಿಯೊ ಒಂದು ಈಗ ವೈರಲ್ ಆಗಿ ತಿರುಗಾಡುತ್ತಿದೆ. ಅಂದರೆ ಪೂರ್ಣ ಪ್ರಮಾಣದ ಶಕ್ತಿಯನ್ನು ಹೊಂದಿದ್ದಾಗಲೇ ಮಹಾಘಟಬಂಧನದ ಪರಿಸ್ಥಿತಿ ಹೀಗಿರಬಹುದಾದರೆ ಇನ್ನು ಇತರೆ ರಾಜ್ಯಗಳಲ್ಲಿ ಅವರ ಕಥೆ ಏನಿರಬಹುದು?!

ಜನರ ಪರಿಸ್ಥಿತಿ ಇಂಥದ್ದಾದರೆ ಇನ್ನು ವೇದಿಕೆ ಮೇಲಿದ್ದ ಭಾಷಣಕಾರರು ಭಿನ್ನ-ಭಿನ್ನ ರಾಗಗಳನ್ನೆಳೆದು ಅಪಹಾಸ್ಯಕ್ಕೀಡಾದರು. 2014ರ ಚುನಾವಣೆಯ ವೇಳೆಗೆ ಯಾರ್ಯಾರನ್ನು ಭ್ರಷ್ಟಾಚಾರಿಗಳೆಂದು ಜರಿದು ಅರವಿಂದ್ ಕೇಜ್ರಿವಾಲ್ ಜೈಲಿಗೆ ಕಳಿಸುವ ವೀರಾವೇಶದ ಮಾತುಗಳನ್ನಾಡುತ್ತಿದ್ದರೋ ಅಂಥವರ ಪಕ್ಕದಲ್ಲೇ ಕುಳಿತು ಪೋಸು ಕೊಡುತ್ತಿದ್ದುದು 5 ವರ್ಷಗಳಲ್ಲಿ ಕಂಡ ಮಹಾ ಬದಲಾವಣೆ ಇರಬೇಕೆನೋ. ಜೆಡಿಯುನ ಅಧ್ಯಕ್ಷ ಶರದ್ ಯಾದವ್ ಮೋದಿಯವರನ್ನು ಆಡಿಕೊಳ್ಳುವ ಭರದಲ್ಲಿ ಬೋಫೋಸರ್್ ಹಗರಣದ ಕುರಿತಂತೆ ತುಂಬಿದ ಸಭೆಯಲ್ಲಿ ಮಾತನಾಡಿ ಕಾಂಗ್ರೆಸ್ಸಿನ ಮಾನ ಹರಾಜಿಗಿಟ್ಟರು. ಡೆರಿಕ್ ಬ್ರಯಾನ್ ಅವರ ಬಳಿ ಹೋಗಿ ಕಿವಿಯಲ್ಲಿ ರಫೇಲ್ ಎಂದು ಪಿಸುಗುಡಬೇಕಾಗಿ ಬಂತು. ಚಂದ್ರಬಾಬು ನಾಯ್ಡು ರಫೇಲ್ ಫೈಟರ್ ಜೆಟ್ಗಳನ್ನು ಜೆಟ್ ಏರ್ವೇಸ್ ಎಂದದ್ದಂತು ನಗು ತರಿಸುವಂತಿತ್ತು. ಬಂಗಾಳದ ಜನತೆಗೆ ಇವೆಲ್ಲವೂ ಅರ್ಥವಾಗುವುದಿಲ್ಲವೇನೋ. ಆದರೆ ದೇಶ ಅರ್ಥ ಮಾಡಿಕೊಳ್ಳುತ್ತದೆ. ಒಬ್ಬರಿಗೊಬ್ಬರು ವಿರೋಧದ ಭಾವನೆಯಿದ್ದವರು ಮೋದಿಯವರನ್ನು ಸೋಲಿಸಬೇಕೆಂಬ ಒಂದೇ ಕಾರಣಕ್ಕೆ ಒಟ್ಟಾಗಿ ನಿಂತದ್ದು ಅಚ್ಚರಿಯೆನಿಸುವಂತಿತ್ತು. ಆದರೆ ವೇದಿಕೆಯ ಮೇಲೆ ಕುಳಿತವರಲ್ಲಿ ಮಾಜಿ ಪ್ರಧಾನಿಗಳಿದ್ದರು, ಮಾಜಿ ಮುಖ್ಯಮಂತ್ರಿಗಳಿದ್ದರು, ಹಾಲಿ ಮುಖ್ಯಮಂತ್ರಿಗಳಿದ್ದರು ಮತ್ತು ಭಾವಿ ಮುಖ್ಯಮಂತ್ರಿಗಳೂ ಇದ್ದರು. ಇವರೆಲ್ಲರಲ್ಲೂ ತಾನೇ ಪ್ರಧಾನಿಯೆಂಬ ಆಸೆ ಇದ್ದದ್ದಂತೂ ಸತ್ಯ. ಆದರೆ ಅದನ್ನು ಯಾರೂ ಮತ್ತೊಬ್ಬರೊಂದಿಗೆ ಹೇಳಿಕೊಳ್ಳುವಂತಿರಲಿಲ್ಲ. ಅಂತಹ ವಿಕಟ ಪರಿಸ್ಥಿತಿ ವೇದಿಕೆಯ ಮೇಲೆ ಕಣ್ಣಿಗೆ ರಾಚುವಂತಿತ್ತು. ಹೇಗೆ ಕಥೆ, ಚಿತ್ರಕಥೆ, ಸಾಹಿತ್ಯ, ಸಂಗೀತ, ನಟನೆ, ನಿದರ್ೇಶನ ಎಲ್ಲವನ್ನೂ ರವಿಚಂದ್ರನ್ ಒಬ್ಬರೇ ಮಾಡುತ್ತಾರೋ ಹಾಗೆಯೇ ನಿರೂಪಣೆ, ಭಾಷಣ, ಪ್ರೇರಣೆ, ಉಸ್ತುವಾರಿ, ಸ್ವಾಗತ, ವಂದನೆ ಎಲ್ಲವನ್ನೂ ದೀದೀನೇ ಮಾಡಿದ್ದು ಆಕೆಯ ವ್ಯಕ್ತಿತ್ವವನ್ನು ತೋರಿಸುವಂತಿತ್ತು. ಅನೇಕರು ಮೋದಿಯವರು ಯಾರಿಗೂ ಅವಕಾಶ ಕೊಡುವುದಿಲ್ಲವೆಂದು ಜರಿಯುತ್ತಾರೆ. ಆದರೆ ಮಹಾಘಟಬಂಧನದ ಈ ನಾಯಕರು ವೇದಿಕೆಯ ಮೇಲಿನ ನಿರೂಪಣೆಯನ್ನೂ ಮತ್ತೊಬ್ಬರಿಗೆ ಬಿಟ್ಟುಕೊಡಲಾರರೆಂದರೆ ಅವರೊಳಗೆ ಅಡಗಿ ಕುಳಿತಿರುವ ಆತಂಕದ ಪ್ರಜ್ಞೆ ಹೇಗಿದ್ದಿರಬಹುದೆಂದು ಊಹಿಸಿ. ಅದಕ್ಕೆ ಆರಂಭದಲ್ಲೇ ಹೇಳಿದ್ದು ಇವರೆಲ್ಲ ಒಟ್ಟುಗೂಡದೇ ಸುಮ್ಮನಿದ್ದಿದ್ದರೆ ಹೆದರಿಕೆಯಾದರೂ ಇರುತ್ತಿತ್ತೇನೋ. ಬಂಗಾಳದ ಕಾರ್ಯಕ್ರಮ ಅದನ್ನು ಕೊಚ್ಚಿ ಹಾಕಿದೆ. ಜನರಲ್ಲಿ ಮೋದಿಯನ್ನು ಸೋಲಿಸಲು ಎಲ್ಲ ಕಳ್ಳರು ಒಟ್ಟಾಗಿದ್ದಾರೆ ಎಂಬ ಭಾವನೆಯನ್ನು ದೃಢಪಡಿಸಿದೆ. ಭಾಜಪದ ಕಾರ್ಯಕರ್ತರು ತಮ್ಮ ಒಬ್ಬ ಭ್ರಷ್ಟ ನಾಯಕನನ್ನು ಸಮಥರ್ಿಸಿಕೊಳ್ಳಲಾಗದೇ ಜನರ ನಡುವೆ ಹೆಣಗಾಡುವುದನ್ನು ಕಂಡಿದ್ದೀರಲ್ಲ. ಇಲ್ಲಿ ನೋಡಿ ವೇದಿಕೆಯ ಮೇಲೆ ಕುಳಿತವರೆಲ್ಲಾ ಒಂದಲ್ಲಾ ಒಂದು ರೀತಿ ಭ್ರಷ್ಟರೇ. ಇವರುಗಳು ನಿಮರ್ಿಸಿರುವ ಈ ಘಟಬಂಧನವನ್ನು ತಳಮಟ್ಟದ ಕಾರ್ಯಕರ್ತ ಹೇಗೆ ಸಮಥರ್ಿಸಿಕೊಂಡಾನು?!

ಇತ್ತ ಇವರೆಲ್ಲರೂ ಮೋದಿಯ ಭಯಕ್ಕೆ ಒಂದಾಗಿ ಮೋದಿ ನಮಗೆ ಹೆದರಿದ್ದಾರೆ ಎಂಬ ಸಂದೇಶವನ್ನು ಕೊಡುತ್ತಿದ್ದರೆ ಅವರು ಮಾತ್ರ ಸಿಲ್ವಾಸಾದಲ್ಲಿ ಸಾವಿರಾರು ಜನರ ನಡುವೆ ಕೇಂದ್ರಸಕರ್ಾರದ ಯೋಜನೆಗಳನ್ನೆಲ್ಲಾ ಹಂಚಿಕೊಳ್ಳುತ್ತಾ ವಿಕಾಸದ ಪಥದ ಕುರಿತಂತೆ ಜನರ ಕಣ್ಣೊಳಗೆ ಕನಸು ತುಂಬುತ್ತಿದ್ದರು. ಎಲ್ ಆಂಡ್ ಟಿ ನಿಮರ್ಿತ ಟ್ಯಾಂಕಿನಲ್ಲಿ ಕುಳಿತು ಸೇನೆಗೆ ಸಮರ್ಥ ಶಸ್ತ್ರವೊಂದನ್ನು ಸಮಪರ್ಿಸಲು ಸಜ್ಜಾಗಿದ್ದರು. ಎರಡನ್ನೂ ಗಮನಿಸಿದ ಮತದಾರ ಸ್ಪಷ್ಟವಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದ. ಈ ಬಾರಿಯ ಕದನ ಜನ ಮತ್ತು ಹಣದ ನಡುವೆ, ಪ್ರಮಾಣಿಕತೆ ಮತ್ತು ಭ್ರಷ್ಟತೆಯ ನಡುವೆ, ಸಿಂಹ ಮತ್ತು ತೋಳಗಳ ನಡುವೆ ಜೊತೆಗೆ ರಾಷ್ಟ್ರದ ಗೌರವ ರಕ್ಷಣೆಗಾಗಿ ಜೀವ ಕೊಡುವ ಜನ ಮತ್ತು ರಾಷ್ಟ್ರವನ್ನೇ ತುಂಡರಿಸಹೊರಟಿರುವ ತುಕ್ಡೇ ತುಕ್ಡೇ ಗ್ಯಾಂಗಿನ ನಡುವೆ. ಕದನ ಖಂಡಿತ ಕುತೂಹಲಕರವಾಗಲಿದೆ!!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top