Politics

ಭೀಮ ಕೋರೆಗಾಂವ್ ಪ್ರಕರಣದಲ್ಲಿ ಜೆ.ಎನ್.ಯು ಕೈವಾಡ!

ಜನವರಿ ಒಂದರಂದು ಮಹಾರಾಷ್ಟ್ರದಲ್ಲಿ ನಡೆದಿದ್ದ ಭೀಮ ಕೋರೆಗಾಂವ್ ಹಿಂಸಾಚಾರದಲ್ಲಿ ಜೆಎನ್‌ಯು ಕೈವಾಡವಿರುವುದು ಹೊರಬಂದಿದೆ. ಈ ವಿಷಯ ಹೊರಬರುತ್ತಿದ್ದಂತೆ ಸರ್ಕಾರಿ ವಕೀಲರು ದಲಿತ ನಾಯಕರ ಸೆರೆವಾಸವನ್ನು ಹೆಚ್ಚಿಸುವಂತೆ ಕೇಳಿಕೊಂಡಿದ್ದಾರೆ.

ಅಷ್ಟೂ ದಲಿತ ನಾಯಕರು ಬಹಿಷ್ಕೃತಗೊಂಡಿರುವ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧವಿರಿಸಿಕೊಂಡಿದ್ದರು. ಈ ವಿಷಯಕ್ಕೆ ಸಂಬಂಧಿಸಿ ಬಂಧಿತರ ಲ್ಯಾಪ್‌ಟಾಪ್ ನಿಂದ 25 ಟಿಬಿ ಯಷ್ಟು ಮಾಹಿತಿಯನ್ನು ಕಲೆಹಾಕಲಾಗಿದೆ‌ ಎಂದು ಸರ್ಕಾರಿ ವಕೀಲರು ತಿಳಿಸಿದ್ದಾರೆ‌.

ನವೀನ್ ಎಂಬ ಮಾವೋವಾದಿಯ ಕೊಲೆಯಾದ ನಂತರ ಜೆ ಎನ್ ಯು ವಿನಲ್ಲಿ ಹಲವು ಲೆಕ್ಚರ್ ಗಳನ್ನು ಏರ್ಪಡಿಸಲಾಗಿತ್ತು. ಜೆಎನ್ಯುವಿನಲ್ಲಿ ವಿದ್ಯಾರ್ಥಿಗಳನ್ನು ತಮ್ಮತ್ತ ಸೆಳೆಯಲು ಹಲವು ವಿಡಿಯೊಗಳನ್ನು ತೋರಿಸುವ ಕೆಲಸವನ್ನೂ ಇವರು ಮಾಡುತ್ತಿದ್ದರು‌ ಎಂದು ಮೂಲಗಳು ತಿಳಿಸಿವೆ.

Click to comment

Leave a Reply

Your email address will not be published. Required fields are marked *

Most Popular

To Top