National

ಭಾರತ ಅಭಿವೃದ್ಧಿಯಾದರೆ ಇವರಿಗೇಕೆ ಉರಿ?!

ನರೇಂದ್ರಮೋದಿಯನ್ನು ವಿರೋಧಿಸೋದು ಎಂದರೆ ಈ ದೇಶವನ್ನೇ ವಿರೋಧಿಸೋದು ಎಂದು ಹಲವರು ತಿಳಿದುಕೊಂಡುಬಿಟ್ಟಿದ್ದಾರೆ. ಅಥವಾ ವಿಚಾರವಾದಿ ಬುದ್ಧಿಜೀವಿಗಳ ರೂಪದಲ್ಲಿದ್ದ ಇವರೊಳಗಿನ ದೇಶದ್ರೋಹದ ಭಾವನೆಯನ್ನು ನರೇಂದ್ರಮೋದಿಯವರು ಕುಲುಕಾಡಿಸಿ ಹೊರತೆಗೆಯುತ್ತಿದ್ದಾರೆ. ಕೆಲವಾರು ಘಟನೆಗಳು ಈ ವಿಚಾರಕ್ಕೆ ಪುಷ್ಟಿ ಕೊಡುವಂತೆ ನಡೆಯುತ್ತಿರುವುದು ನಿಜಕ್ಕೂ ಹುಬ್ಬೇರಿಸುವಂತೆ ಮಾಡುತ್ತಿದೆ. ತೀರಾ ಇತ್ತೀಚೆಗೆ ಕತರ್ಾರ್ಪುರ ಘಟನೆಗೆ ಸಂಬಂಧಿಸಿದಂತೆ ಒಮ್ಮೆ ಅವಲೋಕನ ಮಾಡಿನೋಡಿ. ನವಜೋತ್ ಸಿಂಗ್ ಸಿದ್ದು ಪಾಕಿಸ್ತಾನಕ್ಕೆ ಹೋಗಿದ್ದಲ್ಲದೇ ಅಲ್ಲಿ ನಡೆದ ಘಟನಾವಳಿಗಳನ್ನು ಅದೆಷ್ಟು ಕೆಟ್ಟದಾಗಿ ಸಮಥರ್ಿಸಿಕೊಳ್ಳುತ್ತಿದ್ದಾರೆಂದರೆ ಪಂಜಾಬು ಮತ್ತೊಂದು ತುಂಡಾಗಿ ಪಾಕಿಸ್ತಾನಕ್ಕೆ ಸೇರ್ಪಡೆಯಾಗಿಬಿಟ್ಟರೂ ಸಿದ್ಧು ಠೋಕೊ ತಾಲಿ ಎಂದು ಜನರ ಮುಂದೆ ಸಂತೋಷದಿಂದ ಹೇಳಿದರೆ ಅಚ್ಚರಿ ಪಡಬೇಕಿಲ್ಲ. ಆತ ಇತ್ತೀಚೆಗೆ ಮಾಡುತ್ತಿರುವ ಭಾಷಣಗಳಲ್ಲಿ ನರೇಂದ್ರಮೋದಿಯನ್ನು ಟೀಕಿಸುವ ಧಾವಂತದಲ್ಲಿ ಪಾಕಿಸ್ತಾನವನ್ನು ಹೊಗಳುವ, ಹಿಂದೂಸ್ತಾನವನ್ನು ತೆಗಳುವ ಮಾತುಗಳು ವ್ಯಕ್ತವಾಗುತ್ತಿವೆ. ಅಷ್ಟೇ ಅಲ್ಲ, ಆತನ ಭಾಷಣಕ್ಕೆ ಸೇರಿರುವ ಜನ ನಡುನಡುವೆ ಪಾಕಿಸ್ತಾನಕ್ಕೆ ಜಯವಾಗಲಿ ಎಂದು ಹೇಳುವುದೂ ಕೂಡ ವೈರಲ್ ಆಗುತ್ತಿದೆ. ಸಿದ್ದುವಿನ ಪಾಲಿಗೆ ಇದು ದುರಂತವೇ ಸರಿ. ಕನರ್ಾಟಕಕ್ಕೆ ಪ್ರಕಾಶ್ರಾಜ್ ಹೇಗೋ ಪಂಜಾಬಿನ ಪಾಲಿಗೆ ಸಿದ್ದು ಹಾಗೆಯೇ ಪರಿವರ್ತನೆಗೊಂಡಿದ್ದಾರೆ!

ಇನ್ನೂ ಸದ್ಯದಲ್ಲೇ ಬಿಡುಗಡೆಯಾಗುತ್ತಿರುವ ‘ಉರಿ’ ಎಂಬ ಚಲನಚಿತ್ರದ ಕುರಿತಂತೆ ಭಾರಿ ಜೋರಾದ ಚಚರ್ೆ ನಡೆಯುತ್ತಿದೆ. ಸಜರ್ಿಕಲ್ ಸ್ಟ್ರೈಕ್ ನಡೆದಾಗ ನಿಜಕ್ಕೂ ಗಾಬರಿಯಾದದ್ದು ಪಾಕಿಸ್ತಾನವಲ್ಲ; ಬದಲಿಗೆ ಭಾರತದಲ್ಲಿರುವ ಮೋದಿ ವಿರೋಧಿಗಳು! ಆ ಘಟನೆಗೂ ಹತ್ತಾರು ದಿನಗಳ ಮುಂಚಿನಿಂದಲೇ ಮೋದಿ ಕೈಲಾಗದವರೆಂದು ಬಿಂಬಿಸಲು ಪ್ರಯತ್ನಿಸುತ್ತಿದ್ದ ಎಡಪಂಥೀಯ ಪತ್ರಕರ್ತರು ಮೋದಿ ಸೇನೆಯನ್ನು ಒಳನುಗ್ಗಿಸಲಿ ನೋಡೋಣ ಎಂದು ಸವಾಲು ಹಾಕುತ್ತಿದ್ದರು. ಏಕಾಕಿ ಭಾರತೀಯ ಸೇನೆ ವ್ಯವಸ್ಥಿತವಾದ ಯೋಜನೆಯನ್ನು ರೂಪಿಸಿಕೊಂಡು ಪಾಕಿಸ್ತಾನಿಯರನ್ನು ಬಗ್ಗು ಬಡಿದು ಮರಳಿ ಬಂದರೆ ದೇಶಭಕ್ತರಿಗೆಲ್ಲಾ ಹಬ್ಬದ ವಾತಾವರಣವಾಗಿತ್ತು. ಈ ನಗರ ನಕ್ಸಲರಿಗೆ ಹೊಟ್ಟೆಯೊಳಗೆ ಅಜೀರ್ಣದ ಅನುಭವವಾಗಿತ್ತು. ಈ ಸಜರ್ಿಕಲ್ ಸ್ಟ್ರೈಕ್ ಮೋದಿಯ ಕಠಿಣ ನಿಧರ್ಾರ ಕೈಗೊಳ್ಳುವ ತಾಕತ್ತನ್ನು ಪ್ರದಶರ್ಿಸುವ ಸಂಕೇತವಾಗಿ ರೂಪುಗೊಂಡೊಡನೆ ವಿರೋಧಿಗಳ ಸದ್ದು ಅಡಗಿತ್ತು. ಈ ಸಂಕಟವನ್ನು ತಾಳಿಕೊಳ್ಳಲಾಗದೇ ಕಾಂಗ್ರೆಸ್ಸು ಮತ್ತು ಸದಾ ಅವರ ನೆರಳಿನಂತೆ ಇರುವ ಅರವಿಂದ್ ಕೇಜ್ರಿವಾಲ್ ಸಜರ್ಿಕಲ್ ಸ್ಟ್ರೈಕ್ಗೆ ಸಾಕ್ಷಿಯನ್ನು ಕೇಳಿ ಜನರ ಮುಂದೆ ಬೆತ್ತಲಾಗಿಬಿಟ್ಟರು. ಈ ದಾಳಿ ನಡೆದುದ್ದಕ್ಕೆ ಪುರಾವೆ ಪಾಕಿಸ್ತಾನಕ್ಕೆ ಬೇಕಿರಲಿಲ್ಲ, ಜಗತ್ತಿನ ಯಾವ ರಾಷ್ಟ್ರಗಳಿಗೂ ಬೇಕಾಗಲಿಲ್ಲ. ದುರದೃಷ್ಟಕರ ಇಲ್ಲಿನ ಗಾಳಿಯುಸಿರಾಡುವ, ನೀರು ಕುಡಿಯುವ ಅಯೋಗ್ಯರಿಗೆ ಬೇಕಾಯ್ತು. ಮುಂದಿನ ಬಾರಿ ದಾಳಿಯ ವೇಳೆ ನಿಮ್ಮನ್ನೇ ಕರೆದೊಯ್ಯುತ್ತೇವೆಂಬ ಸೈನ್ಯಾಧಿಕಾರಿಯೊಬ್ಬರ ಹೇಳಿಕೆ ಕಪಾಳಮೋಕ್ಷವೇ ಆಗಿತ್ತು. ಅದೆಲ್ಲಾ ಹಳೆಯ ಸಂಗತಿ. ಆದರೆ ಈಗ ಇದೆಲ್ಲಾ ನೆನಪಾಗುತ್ತಿರುವುದೇಕೆಂದರೆ ಉರಿ ಚಿತ್ರದ ಟ್ರೇಲರ್ ಬಿಡುಗಡೆಯಾದೊಡನೆ ರಾಷ್ಟ್ರೀಯತೆಯ ಹಿನ್ನೆಲೆಯಲ್ಲಿ ಮತ್ತೊಂದು ಹೇರಿಕೆ ಆರಂಭವಾಗಿದೆ ಎಂಬ ಟ್ವೀಟನ್ನು ಅರ್ಬನ್ ನಕ್ಸಲರ ಮುಖವಾಣಿ ದ ವೈರ್ ಎಂಬ ಪತ್ರಿಕೆ ಮಾಡಿತು. ಇವರೆಲ್ಲರ ಪಾಲಿಗೆ ಭಾರತ ಪ್ರೇಮ ಎನ್ನುವುದು ಹೇರಿಕೆಯ ವಸ್ತು ಎಂಬುದು ಅವರಿಗೇ ಅರಿವಿಲ್ಲದಂತೆ ಹೊರಬರುತ್ತಿದೆ. ಹಾಗಂತ ಇದು ಮೊದಲೇನಲ್ಲ. ಟೇಬಲ್ ಟೆನಿಸ್ ಕ್ರೀಡಾಪಟು ಮನಿಕಾ ಬಾತ್ರಾ ತನ್ನ ಉಗುರುಗಳಿಗೆ ತ್ರಿವರ್ಣ ಧ್ವಜದ ಬಣ್ಣ ಹಾಕಿಕೊಂಡು ಆಡುವುದನ್ನು ಉಗ್ರ ರಾಷ್ಟ್ರೀಯತೆಯ ಪ್ರತಿರೂಪ ಎಂದು ಇದೇ ನಕ್ಸಲ್ ಪತ್ರಕರ್ತರು ಈ ಹಿಂದೆ ಮಾತನಾಡಿದ್ದರು. ರಾಷ್ಟ್ರಗೀತೆ ಹಾಡುವಾಗ ನಿಂತುಕೊಳ್ಳುವ ಅಗತ್ಯವಿಲ್ಲ ಎಂದು ಜೋರಾದ ದನಿಯಲ್ಲಿ ಮಾತನಾಡಿದ್ದೂ ಇದೇ ಅಯೋಗ್ಯರು. ಈಗ ಈ ಸಜರ್ಿಕಲ್ ಸ್ಟ್ರೈಕ್ನ ಕುರಿತಂತ ಚಿತ್ರದ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ.

ಕಾಕತಾಳೀಯವೋ ಏನೋ ಗೊತ್ತಿಲ್ಲ. ಮೋದಿ ಬಂದ ನಂತರ ಒಂದಾದ ಮೇಲೊಂದು ದೇಶಭಕ್ತಿಯ ಸಿನಿಮಾಗಳು ತೆರೆಯಂತೆ ದಡಕ್ಕೆ ಅಪ್ಪಳಿಸಲಾರಂಭಿಸಿದವು. ವಿದೇಶದಲ್ಲಿದ್ದ ವ್ಯಕ್ತಿಯನ್ನು ಆ ರಾಷ್ಟ್ರಕ್ಕೆ ಗೊತ್ತಾಗದಂತೆ ಹೊಂಚುಹಾಕಿ ಕರೆತರುವ ಬೇಬಿಯಿಂದ ಹಿಡಿದು ತೀರಾ ಇತ್ತೀಚಿನ ಗೋಲ್ಡ್ವರೆಗೆ ಒಂದಾದ ಮೇಲೊಂದು ಸಿನಿಮಾಗಳು ಅನೇಕ ಸತ್ಯ ಘಟನೆಗಳನ್ನು ಆಧರಿಸಿ ರೂಪುಗೊಂಡವು. ಅದೇ ವೇಳೆಗೆ ಮಾಫಿಯಾದ ಹಣದಲ್ಲಿ ಕೊಬ್ಬಿ ಮೆರೆಯುತ್ತಿದ್ದ ಅಮೀರ್, ಶಾರುಖ್ರ ಸಿನಿಮಾಗಳು ಕಪ್ಪುಹಣದ ಪೂರೈಕೆಯಿಲ್ಲದೇ ಸೊರಗಿ ನಿದ್ರಿಸಿದವು. ಇವೆಲ್ಲವೂ ದೇಶ ವಿಭಜಿಸುವ ಹುನ್ನಾರವಿರುವ ಮಿತ್ರ ಮಂಡಳಿಯ ಪಾಲಿಗೆ ಕಳವಳಕಾರಿ ವಿಷಯವೇ ಆಗಿತ್ತು. ಈ ಕಾರಣದಿಂದಲೇ ಈ ರೀತಿಯ ದೇಶಭಕ್ತಿ ಸಿನಿಮಾಗಳಿಗೆ ಪ್ರಚಾರವೇ ಸಿಗದಂತೆ ಮಾಡುವ ಪ್ರಯತ್ನವನ್ನು ಅವರು ಮಾಡುತ್ತಲೇ ಬಂದಿದ್ದಾರೆ. ಆದರೆ ಇವರೆಲ್ಲ ಸೇರಿ ಅಗತ್ಯಕ್ಕಿಂತ ಹೆಚ್ಚು ಪ್ರಚಾರಕೊಟ್ಟು ಅಮೀರ್ಖಾನ್ನನ್ನು ಮತ್ತೆ ಮುಂಚೂಣಿಗೆ ತರಲೆತ್ನಿಸಿದ ಥಗ್ಸ್ ಆಫ್ ಹಿಂದೂಸ್ತಾನ್ ಜನರಿಂದ ಛೀ ಥೂಗೆ ಒಳಗಾಯ್ತು. ಅದರರ್ಥ ಮೋದಿ ಬಂದನಂತರ ರಾಷ್ಟ್ರದ ಜನತೆ ದೇಶಭಕ್ತಿ ಉದ್ದೀಪಿಸುವ ಸಿನಿಮಾಗಳತ್ತ ಹೊರಳುತ್ತಿದ್ದಾರೆಂಬುದು ಖಾತ್ರಿಯಾಯಿತು. ಹೀಗಾಗಿಯೇ ‘ಉರಿ’ ಸಾಕಷ್ಟು ಉರಿ ಹಚ್ಚಿದೆ. ಅದರಲ್ಲೂ ಲೋಕಸಭಾ ಚುನಾವಣೆಗಳು ಹೊಸ್ತಿಲಲ್ಲಿರುವುದರಿಂದ ಈ ಚಿತ್ರವೇನಾದರೂ ಯಶಸ್ಸು ಗಳಿಸಿದರೇ ಅದು ಮೋದಿಯ ಪ್ರಭಾವವನ್ನು ವಿಸ್ತಾರಗೊಳಿಸುವಲ್ಲಿ ಯಾವ ಅನುಮಾನವೂ ಇಲ್ಲ.

ಇವರಿಗೆ ಉರಿ ಹೆಚ್ಚಿಸಲೇನೋ ಎಂಬಂತೆ ಡಿಸೆಂಬರ್ 1 ಕ್ಕೆ ಮತ್ತೊಂದು ಘಟನೆ ನಡೆದಿದೆ. ಕಶ್ಮೀರದ ಪೆಹಲ್ಗಾಂವ್ನಲ್ಲಿ ರಿಸವರ್್ ಪೊಲೀಸ್ ಪಡೆ 63 ಅಡಿ ಎತ್ತರದಲ್ಲಿ ರಾಷ್ಟ್ರ ಧ್ವಜವನ್ನು ಹಾರಾಡಿಸಿದ್ದಾರೆ. 12 ಅಡಿ ಎತ್ತರ, 18 ಅಡಿ ಅಗಲವಿರುವ ಈ ಧ್ವಜ ಮುಗಿಲನ್ನು ಚುಂಬಿಸುವಂತೆ ಹಾರಾಡುತ್ತಾ ಕಂಗೊಳಿಸುತ್ತಿದೆ. ಧ್ವಜಾರೋಹಣ ನಡೆಸಿ ಮಾತನಾಡಿದ್ದ ಐಜಿ ಜುಲ್ಫಿಕರ್ ಹಸನ್ ‘ಕಶ್ಮೀರದ ಮೂಲ ಉದ್ಯಮವೇ ಪ್ರವಾಸಕ್ಕೆ ಜನರನ್ನು ಆಕಷರ್ಿಸುವುದು. ಆದರೆ, ಇಲ್ಲಿ ಎಲ್ಲವೂ ಸರಿಯಿಲ್ಲವೆಂದು ಹೆದರಿಕೊಂಡೇ ಜನ ಬರಲಾರರು. ಎತ್ತರದಲ್ಲಿ ಹಾರಾಡುವ ಧ್ವಜವನ್ನು ಕಂಡಾಗ ಇಲ್ಲಿಗೆ ಬರುವ ಪ್ರವಾಸಿಗರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಮತ್ತು ಎಲ್ಲೆಡೆ ಧೈರ್ಯವಾಗಿ ತಿರುಗಾಡಲು ಅವರಿಗೊಂದು ಶಕ್ತಿಸಿಕ್ಕಂತಾಗುತ್ತದೆ’ ಎಂದಿದ್ದಾರೆ. ಅದರರ್ಥ ಬಲು ಸ್ಪಷ್ಟ. ರಾಷ್ಟ್ರಧ್ವಜ ನಮಗೊಂದು ಭದ್ರತೆಯನ್ನು ಕಲ್ಪಿಸಿಕೊಡುತ್ತದೆ. ಅದು ಬಟ್ಟೆಯ ಚೂರಿರಬಹುದು, ಆದರೆ ಅದರೊಂದಿಗೆ ಭಾರತದ ಸಾರ್ವಭೌಮತೆಯೂ ಅಡಗಿದೆ. ಅದನ್ನು ಕಂಡಾಗಲೆಲ್ಲಾ ತನ್ನ ದೇಶದ ಸಾಮಥ್ರ್ಯದ ಕುರಿತಂತೆ ಪ್ರತಿಯೊಬ್ಬನ ಮನಸ್ಸಿನಲ್ಲಿ ಹೆಮ್ಮೆ ಮೂಡುವುದು ಸಹಜ. ಹಾಗೆಂದೇ ಪೆಹಲ್ಗಾವ್ನಲ್ಲಿ ಹಾರಾಡುತ್ತಿರುವ ಈ ಧ್ವಜ ಭಾರತೀಯರಿಗೆ ಭದ್ರತೆ ಹುಟ್ಟಿಸುವಂತೆ ಈ ದೇಶವನ್ನು ವಿಭಜಿಸಬೇಕೆಂದು ಕನಸು ಕಟ್ಟುತ್ತಿರುವ ಪ್ರತ್ಯೇಕತಾವಾದಿಗಳಲ್ಲಿ ಹೆದರಿಕೆಯನ್ನೂ ಹುಟ್ಟಿಹಾಕಿದೆ.

ಮೋದಿ ದೇಶಕ್ಕೇನು ಮಾಡಿದರು ಎಂದು ಈಗಲೂ ಅನೇಕರು ಪ್ರಶ್ನೆ ಕೇಳುತ್ತಾರೆ. ಯಾವ ಕಶ್ಮೀರದಲ್ಲಿ ತಿರಂಗಾ ಹಾರಿಸುವ ಸವಾಲನ್ನು ಭಯೋತ್ಪಾದಕರು ಕೊಡುತ್ತಿದ್ದರೋ ಅದೇ ಕಶ್ಮೀರದಲ್ಲಿ ಇಂದು ಮುಗಿಲೆತ್ತರಕ್ಕೆ ಹಾರಾಡುತ್ತಿರುವ ರಾಷ್ಟ್ರಧ್ವಜ ಕಂಡುಬಂದಿದೆ ಎಂದರೆ ಸಾಧನೆಯಲ್ಲವೇನು?! ಯಾವಾಗಲೂ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕವಾಗಿಯೇ ತೋರಿಸುತ್ತಿದ್ದ ಚೀನಾದ ಪತ್ರಿಕೆ ಇತ್ತೀಚೆಗೆ ಅದನ್ನು ಭಾರತದ ಅಂಗವಾಗಿ ಚಿತ್ರಿಸಿರುವುದು ಮೇಲ್ನೋಟಕ್ಕೆ ಸಹಜವಾದ ವಿಷಯವೆನ್ನಿಸಬಹುದು ಆದರೆ ಖಂಡಿತವಾಗಿಯೂ ಸಾಮಾನ್ಯವಾದ ಸಂಗತಿಯಲ್ಲ. ತನ್ನ ರಾಷ್ಟ್ರೀಯತೆ ಜಾಗೃತವಾದಾಗಲೆಲ್ಲಾ ಭಾರತ ಅಗಾಧವಾಗಿ ಬೆಳೆದು ನಿಂತಿದೆ ಮತ್ತು ಈ ರಾಷ್ಟ್ರ ಬೆಳೆದು ನಿಲ್ಲುವುದೆಂದರೆ ಜಗತ್ತು ನೆಮ್ಮದಿ ಮತ್ತು ಆನಂದಗಳಿಂದ ಬದುಕುವುದೆಂದೇ ಅರ್ಥ.

ಆದರೆ ಒಂದು ಸಮಸ್ಯೆಯಿದೆ. ನಮ್ಮ ರಾಷ್ಟ್ರೀಯತೆ ಜಾಗೃತವಾದಾಗಲೆಲ್ಲಾ ದೇಶವನ್ನು ತುಂಡರಿಸಬೇಕೆಂದು ಕನಸು ಕಾಣುತ್ತಿರುವವರೆಲ್ಲಾ ಕಣ್ಣೀರಿಡುತ್ತಾರೆ, ಅವರ ಧಂಧೆ ನಿಲ್ಲುತ್ತದೆ, ಅವರು ಹೇರಲು ಪ್ರಯತ್ನಿಸುತ್ತಿರುವ ಮೌಲ್ಯಗಳು ಸತ್ತುಹೋಗುತ್ತದೆ, ಅವರು ನಂಬಿಕೊಂಡು ಬಂದ ಸಿದ್ಧಾಂತಗಳಿಗೆ ಕೊಳ್ಳಿ ಇಟ್ಟಂತಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಅವರ ಆದಾಯದ ಮೂಲಕ್ಕೆ ಬೆಂಕಿ ಬೀಳುತ್ತದೆ. ಪ್ರಕಾಶ್ರಾಜ್ನಿಂದ ಹಿಡಿದು ಬಖರ್ಾದತ್ವರೆಗೆ ಪ್ರತಿಯೊಬ್ಬರ ಆಕ್ರೋಶಕ್ಕೂ ಇದೇ ಕಾರಣ. ಹೀಗಾಗಿ ಪ್ರಕಾಶ್ರಾಜ್ ಅಸಂಬದ್ಧವಾಗಿ ಮಾತನಾಡಿದಾಗಲೆಲ್ಲಾ ಅವನೊಳಗಿನ ಈ ಬೇಗುದಿ ಎದ್ದೆದ್ದು ಕುಣಿದಾಡುತ್ತಿರುತ್ತದ್ದಲ್ಲ, ಅದನ್ನು ನೋಡುವುದು ಕಣ್ಣಿಗೆ ಹಬ್ಬ. ಇವರುಗಳೆಲ್ಲಾ ಇನ್ನಷ್ಟು ‘ಉರಿ’ದುಕೊಳ್ಳಲಿ, ಭಾರತ ವಿಶ್ವಗುರುವಾಗಲಿ!

-ಚಕ್ರವರ್ತಿ ಸೂಲಿಬೆಲೆ

1 Comment

1 Comment

  1. ಶಶಿಕಲಾ. ಎಸ್.

    December 8, 2018 at 4:56 pm

    ಸದ್ಯ ಸಂತಸದ ಸಂಗತಿಯೇ. ಎಲೆಕ್ಷನ್ ವರೆಗೆ ಇನ್ನೂ ಯಾವ ಯಾವ ರೀತಿಯಲ್ಲಿ ಮೋದಿ ಯವರ ಮೇಲೆ ಮುಗಿಬೀಳ್ತಾರೋ ನೋಡ್ಬೇಕು.ಎಲ್ಲರಲ್ಲೂ ಸುಪ್ತವಾಗಿದ್ದ ದೇಶಪ್ರೇಮ, ಭಾಷಾ ಪ್ರೇಮ ಹೊರ ಬೀಳ್ತಿದೆ.ಸಾಮಾಜಿಕ ಜಾಲ ತಾಣಗಳು ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಾಗಿ ಪ್ರಚಾರವಾಗ ಬೇಕು. ಹೆಚ್ಚು ಆರ್ಟಿಐ ನಿಂದ ಪಡೆದ ದಾಖಲೆಗಳನ್ನು ಹೆಚ್ಚು ಜನರ ಗಮನ ಸೆಳೆಯುವಂತಿರ ಬೇಕು.

Leave a Reply

Your email address will not be published. Required fields are marked *

Most Popular

To Top