Politics

ಭಾರತದ ಮಾನವನ್ನು ನಿಜಕ್ಕೂ ಕಳೆಯುತ್ತಿರೋದು ಯಾರು!!

ಮೋದಿಯ ಮೇಲೆ ಸಿದ್ದರಾಮಯ್ಯ ಮಾನನಷ್ಟ ಮೊಕದ್ದಮೆ ಹಾಕಿ ಕೂತಿದ್ದಾರೆ. ನಮ್ಮಲ್ಲನೇಕರು ಮೋದಿ ಕಾಂಗ್ರೆಸ್ಸಿನ ಮೇಲೆ ವಾಗ್ದಾಳಿ ಮಾಡಿದ್ದು ತಪ್ಪು ಎನ್ನುತ್ತಿದ್ದಾರೆ. ಕೆಲವರಂತೂ ಪ್ರಧಾನಂತ್ರಿಯ ಹುದ್ದೆಯ ಘನತೆ ಎಂದೆಲ್ಲಾ ಬಡಬಡಾಯಿಸುತ್ತಿದ್ದಾರೆ. ಸಿದ್ದರಾಮಯ್ಯ ತಾವು ಹೋದ ಕಾರ್ಯಕ್ರಮದಲ್ಲೆಲ್ಲಾ ಕುರ್ಚಿಯ ಮೇಲೆ ಗಡದ್ದು ನಿದ್ದೆ ಹೊಡೆಯುತ್ತಿದ್ದರಲ್ಲ, ಅತ್ಯಂತ ಉಡಾಫೆಯ ಮಾತುಗಳನ್ನಾಡುತ್ತಿದ್ದರಲ್ಲ, ಹಿರಿಯರು-ಕಿರಿಯರೆನ್ನದೇ ಮನಸ್ಸಿಗೆ ಬಂದಂತೆ ಬಾಯಿಗೆ ಬಂದದ್ದನ್ನು ಹೇಳಿ ಬಿಡುತ್ತಿದ್ದರಲ್ಲ, ಆಗೆಲ್ಲಾ ಹುದ್ದೆಯ ಘನತೆ ಚರ್ಚೆಗೆ ಬರಲೇ ಇಲ್ಲವಲ್ಲ! ಕರ್ನಾಟಕದ ೬ ಕೋಟಿ ಕನ್ನಡಿಗರ ಪ್ರತಿನಿಧಿಯಾಗಿದ್ದವ ಜಾಗತಿಕವಾಗಿ ಕರ್ನಾಟಕದ ಮಾನ ಕಳೆಯುತ್ತಿದ್ದಾನೆ ಎಂದು ಯಾರೂ ಮಾತನಾಡಲೇ ಇಲ್ಲವಲ್ಲಾ! ಬಿಪಿಓಗಳ ಮೂಲಕ ದಿನದ ೨೪ ತಾಸೂ ಎದ್ದಿರುವ ಬೆಂಗಳೂರಿಗೆ ಸದಾ ನಿದ್ದೆ ಮಾಡುವ ಮುಖ್ಯಮಂತ್ರಿ ಘನತೆ ಮತ್ತು ಆದರ್ಶವಾಗಿದ್ದು ವಿಪರ್ಯಾಸ. ಹಾಗೆ ನೋಡಿದರೆ ನಮ್ಮ ಪ್ರತಿನಿಧಿಯಾಗಿ ರಾಜ್ಯದ ಮಾನ ಹರಾಜು ಹಾಕಿದ್ದಕ್ಕೆ ನಾವೆಲ್ಲರೂ ಅದೆಷ್ಟು ಕೋಟಿ ಮಾನ ಹಾನಿ ಪ್ರಕರಣ ದಾಖಲೆ ಮಾಡಬೇಕೋ ದೇವರೇ ಬಲ್ಲ.
ಬಿಡಿ. ಚುನಾವಣೆ ಮುಗಿದೊಡನೆ ಸಿದ್ದರಾಮಯ್ಯನವರಿಗೆ ತಮ್ಮದ್ದೆÃ ಆದ ರಾಜಕೀಯ ಲೆಕ್ಕಾಚಾರಗಳು ಬೇರೆ ಇರಬಹುದೇನೋ. ಆದರೆ ನರೇಂದ್ರಮೋದಿಯವರಿಗೆ ಬೆಟ್ಟದಷ್ಟು ಕೆಲಸ ಇದೆ. ಹೀಗಾಗಿಯೇ ಅವರು ಕರ್ನಾಟಕದ ಪ್ರಚಾರ ಭಾಷಣ ಮುಗಿಸಿ ಮರುದಿನವೇ ನೇಪಾಳಕ್ಕೆ ತೆರಳಿದ್ದು. ನೇಪಾಳದ ಪ್ರಧಾನಿ ಓಲಿಯನ್ನು ಭಾರತದೆಡೆಗೆ ಒಲಿಸಿಕೊಳ್ಳಲು ಸಾಧ್ಯವಾದರೆ ಅದು ನರೇಂದ್ರಮೋದಿಯವರ ದೊಡ್ಡ ಸಾಧನೆಯೇ. ಏಕೆಂದರೆ ಪಾಕಿಸ್ತಾನದ ಮೂಲಕ ದೇಶಕ್ಕೆ ನುಸುಳುತ್ತಿರುವ ಖೋಟಾ ನೋಟು, ಮಾದಕ ದ್ರವ್ಯ ಮೊದಲಾದವುಗಳಿಗೆ ನೇಪಾಳವೇ ಹೆಬ್ಬಾಗಿಲು. ಚೀನಾ ಬೆಂಬಲಿತ ಮಾವೋವಾದಿ ನಕ್ಸಲರಿಗೆ ನೇಪಾಳವೇ ಸೇತುವೆ. ಮುಂದಿನ ಮರ‍್ನಾಲ್ಕು ತಿಂಗಳೊಳಗೆ ಇಲ್ಲಿರುವಂಥ ನಕ್ಸಲರನ್ನು ಪೂರ್ಣ ಮುಗಿಸಬೇಕೆಂದರೆ ನೇಪಾಳ ಮಯನ್ಮಾರ್‌ಗಳ ಸಹಕಾರ ಬೇಕೇ ಬೇಕು. ಅದಾಗಲೇ ಮಯನ್ಮಾರನ್ನು ತಮ್ಮತ್ತ ಒಲಿಸಿಕೊಂಡಿರುವ ಭಾರತಕ್ಕೆ ನೇಪಾಳವೇ ದೊಡ್ಡ ಸವಾಲು. ಚೀನಾಕ್ಕೆ ಹೋಗಿ ಚೀನಿಯನ್ನರೊಂದಿಗೆ ಮಾತನಾಡಿ ಬಂದ ನರೇಂದ್ರ ಮೋದಿ ಈಗ ನೇಪಾಳಕ್ಕೆ ಕಾಲಿಟ್ಟಿದ್ದಾರೆಂದರೆ ಅದರ ಹಿಂದೆ ಬಲುದೊಡ್ಡ ಕಾರ್ಯಯೋಜನೆ ಇದೆ.
ನಮಗಾಗಿ ಬಿಡುವಿಲ್ಲದೇ ೧೮ ಗಂಟೆ ಕೆಲಸ ಮಾಡುವ ಪುಣ್ಯಾತ್ಮನಿಗಾಗಿ ನಾವು ಈ ಒಂದು ದಿನ ಕೈ ಜೋಡಿಸಬೇಕಿದೆ. ಇಂದು ಆದಷ್ಟು ಬೇಗ ಮತ ಹಾಕೋಣ. ಮತ್ತು ಇತರರಿಂದಲೂ ಮತ ಹಾಕಿಸೋಣ.
ಈ ಬಾರಿ ಮತ ಹಾಕಿ, ಭಾರತವನ್ನು ಗೆಲ್ಲಿಸೋಣ.

Click to comment

Leave a Reply

Your email address will not be published. Required fields are marked *

Most Popular

To Top