National

ಭಾರತದ ನಿರ್ಮಾಣ ಕೈ ಬೆರಳ ತುದಿಯಲ್ಲಿದೆ!

ಮೋದಿ ಯುಗದಲ್ಲಿ ಬಹುವಾದ ಆತಂಕಕ್ಕೊಳಗಾಗಿರೋದು ಇಬ್ಬರೇ. ಒಂದು ಪಾಕಿಸ್ತಾನ ಮತ್ತೊಂದು ಕಾಂಗ್ರೆಸ್ಸು. ಮೊದಲು ಪಾಕಿಸ್ತಾನದ ಕಥೆಯನ್ನೇ ಹೇಳುವುದೊಳಿತೇನೊ. ಚೀನಾದೊಂದಿಗೆ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಸಹಿ ಹಾಕಿದಾಗಿನಿಂದ ಪಾಕಿಸ್ತಾನದ ದೆಸೆಯೇ ಹಾಳಾಗಿ ಹೋಗಿದೆ. ಚೀನಾ ಜಗತ್ತಿನ ಅನೇಕ ರಾಷ್ಟ್ರಗಳಿಗೆ ಸಾಲಕೊಟ್ಟು ಅದನ್ನು ತೀರಿಸಲಾಗದ ಸ್ಥಿತಿಗೆ ತಳ್ಳಿ ಆ ರಾಷ್ಟ್ರವನ್ನೇ ಆಪೋಶನ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಲೇ ಬಂದಿರುವುದು ಈಗ ಹೊಸತಾಗಿ ಉಳಿದಿಲ್ಲ. ಶ್ರೀಲಂಕಾ ಹಂಬನ್ತೋಟ ಬಂದರು ಅಭಿವೃದ್ಧಿಗೆ ಚೀನಾದಿಂದ ಸಾಲಪಡೆದು ತೀರಿಸಲಾಗದೇ ಆ ಬಂದರನ್ನೇ ಚೀನಾಕ್ಕೆ ಬಿಟ್ಟುಕೊಡುವ ಹಂತಕ್ಕೆ ತಲುಪಿದ್ದು ನಮಗೆಲ್ಲರಿಗೂ ಗೊತ್ತೇ ಇದೆ. ಚೀನಾದ ಈ ನಡೆಯನ್ನು ಅರಿತೇ ಬಾಂಗ್ಲಾದೇಶ ಬಲು ಹಿಂದೆಯೇ ಚಿತ್ತಗಾಂಗ್ ಬಂದರನ್ನು ಭಾರತಕ್ಕೆ ಬಿಟ್ಟುಕೊಟ್ಟಿದ್ದು. ಮಾಲ್ಡೀವ್ಸ್ನ ಹೊಸ ಅಧ್ಯಕ್ಷರು ಭಾರತಕ್ಕೆ ಬಂದು ಚೀನಾದ ಸಾಲ ತೀರಿಸಲು ಭಾರತದ ಸಹಕಾರ ಬೇಕು ಎಂದು ಕೇಳಿದ್ದೂ ಈ ಕಾರಣಕ್ಕೆ! ಪಾಕಿಸ್ತಾನದ ಪರಿಸ್ಥಿತಿ ಹೀಗಿಲ್ಲ. ಹುಟ್ಟಿದಾರಭ್ಯ ಭಾರತ ವಿರೋಧಿ ಚಿಂತನೆಗಳ ಆಧಾರದ ಮೇಲೆಯೇ ಅಧಿಕಾರ ನಡೆಸುತ್ತಿರುವ ಪಾಕಿಸ್ತಾನಕ್ಕೆ ಇಲ್ಲಿನ ಸಹಕಾರ ಪಡೆದು ಬದುಕುವ ಛಾತಿಯಿಲ್ಲ ಮತ್ತು ಅದೇ ಬೆಳೆಸಿಕೊಂಡು ಬಂದಿರುವ ಐಎಸ್ಐ ಹೀಗಾಗಲು ಬಿಡುವುದೂ ಇಲ್ಲ. ಅದಕ್ಕೆ ಭಾರತ ವಿರೋಧಿಯಾಗಿರುವ ಚೀನಾ ಪಾಕಿಸ್ತಾನದ ಸರ್ವಋತು ಮಿತ್ರ ಎನಿಸಿರೋದು. ಅಂತರರಾಷ್ಟ್ರೀಯ ಮಟ್ಟದಲ್ಲಿ ಚೀನಾ ಪಾಕಿಸ್ತಾನವನ್ನು ಬೆಂಬಲಿಸುವಂತೆ ಕಂಡರೂ ಅದು ತನ್ನ ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ಪೂರಕವಾಗಿಯೇ ಇದನ್ನು ಮಾಡುತ್ತಿದೆ ಎಂದು ಪಾಕಿಸ್ತಾನಕ್ಕೆ ಈಗೀಗ ಅರಿವಾಗುತ್ತಿದೆ. ಜೈಶ್-ಎ-ಮೊಹಮ್ಮದ್ ಮತ್ತು ಮೌಲಾನಾ ಮಸೂದ್ ಅಜರ್ನ ಬೆಂಬಲಕ್ಕೆ ಚೀನಾ ನಿಂತಿರುವುದು ಪಾಕಿಸ್ತಾನದ ಮೇಲಿನ ಪ್ರೇಮದಿಂದಾಗಿ ಅಲ್ಲ, ಬದಲಿಗೆ ತಾನು ಕೈಗೆತ್ತಿಕೊಂಡಿರುವ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಈ ಭಯೋತ್ಪಾದಕರಿಂದ ತೊಂದರೆಯಾಗಬಾರದೆಂಬ ದೂರದೃಷ್ಟಿ ಅದರದ್ದು. ಚೀನಾ ಈ ಯೋಜನೆಯ ನೆಪದಲ್ಲಿ ಸಾವಿರಾರು ಕೋಟಿ ರೂಪಾಯಿ ಹಣವನ್ನು ಪಾಕಿಸ್ತಾನದಲ್ಲಿ ಸಾಲದ ರೂಪದಲ್ಲಿ ಹೂಡಿಕೆ ಮಾಡಿದ್ದು ಅದನ್ನು ತೀರಿಸಲಾಗದೇ ಈಗ ಪಾಕಿಸ್ತಾನ ವಿಲವಿಲನೇ ಒದ್ದಾಡುತ್ತಿದೆ.


ನರೇಂದ್ರಮೋದಿ ಅಧಿಕಾರಕ್ಕೆ ಬರುವ ಮುನ್ನ ಚೀನಾದ ವಿರುದ್ಧ ಗುಟುರು ಹಾಕುವ ಸಾಮಥ್ರ್ಯವಿರದಿದ್ದ ಭಾರತವನ್ನು ಜಗತ್ತು ಮೂಸಿಯೂ ನೋಡುತ್ತಿರಲಿಲ್ಲ. ಆಗೆಲ್ಲಾ ಭಾರತದ ಪರವಾಗಿ ದನಿ ಎತ್ತುತ್ತಿದ್ದುದು ರಷ್ಯಾ ಮಾತ್ರ. ಜಗತ್ತೆಲ್ಲ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಪಾಕಿಸ್ತಾನದ ಪರವಾಗಿ ನಿಂತು ಏಷ್ಯಾ ಖಂಡದಲ್ಲಿ ತಮ್ಮದೊಂದು ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದವು. ಕೆಲವೊಂದು ಬಾರಿ ರಷ್ಯಾ ಕೂಡ ಭಾರತವನ್ನು ಹೇಗಿದ್ದರೂ ಸಂಭಾಳಿಸಬಹುದು ಎಂಬ ದೃಷ್ಟಿಯಿಂದ ಪಾಕಿಸ್ತಾನದ ಜೊತೆಗೇ ನಿಂತಿದ್ದನ್ನು ನಾವು ನೋಡಿದ್ದೇವೆ. ಇಲ್ಲವಾದಲ್ಲಿ 1965ರ ಯುದ್ಧದ ನಂತರ ತಾಷ್ಕೆಂಟ್ ಒಪ್ಪಂದವಾಗಿ ಭಾರತಕ್ಕೆ ಹಿನ್ನಡೆಯಾದುದ್ದಲ್ಲದೇ ರತ್ನದಂತಹ ಪ್ರಧಾನಿಯನ್ನೂ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲ. ನರೇಂದ್ರಮೋದಿ ಪ್ರಧಾನಿಯಾದ ಮೇಲೆ ಚಿತ್ರಣವೇ ಬದಲಾಯ್ತು. ಆರಂಭದಲ್ಲಿಯೇ ಪಾಕಿಸ್ತಾನದೊಂದಿಗೆ ಸುಮಧುರ ಬಾಂಧವ್ಯ ಹೊಂದುವ ತಮ್ಮ ದೃಷ್ಟಿಯನ್ನು ತೆರೆದಿಟ್ಟ ಮೋದಿ ಕಾಂಗ್ರೆಸ್ಸಿನ ವಿರೋಧದ ನಡುವೆಯೂ ನವಾಜ್ ಶರೀಫ್ರೊಂದಿಗಿನ ತಮ್ಮ ಗೆಳೆತನವನ್ನು ಬಲಗೊಳಿಸಿಕೊಂಡರು, ಪಾಕಿಸ್ತಾನಕ್ಕೂ ಹೋಗಿ ಬಂದರು. ಆದರೆ ಭಾರತದ್ವೇಷದ ಆಧಾರದ ಮೇಲೆಯೇ ಹುಟ್ಟಿರುವ ಪಾಕಿಸ್ತಾನಕ್ಕೆ ವಿಕಾಸದ ಕಲ್ಪನೆ ಎಳ್ಳಷ್ಟೂ ಇಲ್ಲ. ಹೀಗಾಗಿಯೇ ಅದು ಮತ್ತೆ ಚೀನಾದ ಸೆರಗಿನಡಿ ಮುಚ್ಚಿಟ್ಟುಕೊಂಡೇ ಆಟವಾಡಲು ಆರಂಭಿಸಿತು. ಹೊಸ ಭಾರತದ ದೃಷ್ಟಿಕೋನಕ್ಕೆ ಪೂರಕವಾಗಿ ಸ್ಪಂದಿಸಿದ ಬಾಂಗ್ಲಾ, ಮಯನ್ಮಾರ್, ಶ್ರೀಲಂಕಾಗಳು ಬದಲಾವಣೆಯ ಹೊಸದಿಕ್ಕಿನತ್ತ ದಾಪುಗಾಲಿಟ್ಟುಬಿಟ್ಟವು. ಶ್ರೀಲಂಕಾದ ಹೊಸ ಪ್ರಧಾನಿಯಂತೂ ಹಂಬನ್ತೊಟವನ್ನು ಚೀನಾದ ತೆಕ್ಕೆಯಿಂದ ಭಾರತದ ಕೈಲಿಟ್ಟು ನಿರಾಳವಾಗಿಬಿಟ್ಟರು. ಇವೆಲ್ಲವನ್ನೂ ಸೂಕ್ಷ್ಮ ದೃಷ್ಟಿಯಿಂದ ಗಮನಿಸುತ್ತಿದ್ದ ಜಗತ್ತು ಭಾರತದ ಬೆಳವಣಿಗೆಗೆ ತಾನೂ ಜೋಡಿಸಿಕೊಳ್ಳಲಾರಂಭಿಸಿತು. ಆನಂತರವೇ ಚೀನಾವನ್ನೆದುರಿಸಲು ಭಾರತ ಸಕ್ಷಮವಾಗಿದೆ ಮತ್ತು ಭಾರತದೊಂದಿಗೆ ನಿಂತರೆ ಜಾಗತಿಕವಾಗಿ ಹಬ್ಬುತ್ತಿರುವ ಚೀನಾದ ಪ್ರಭೆಯನ್ನು ಮೆಟ್ಟಿ ನಿಲ್ಲಬಹುದು ಎಂಬ ನಿರ್ಣಯಕ್ಕೆ ಅನೇಕ ರಾಷ್ಟ್ರಗಳು ಬಂದಿದ್ದು. ಅಮೇರಿಕಾ ಅಂತೂ ಭಾರತವನ್ನು ಮುಕ್ತ ಮನಸ್ಸಿನಿಂದ ತಬ್ಬಿಕೊಳ್ಳಲು ಇದೇ ಬಲುದೊಡ್ಡ ಕಾರಣವಾಯ್ತು. ಭಾರತ ಹಂತ-ಹಂತವಾಗಿ ಚೀನಾವನ್ನು ಪಕ್ಕಕ್ಕೆ ತಳ್ಳಿ ಏಷ್ಯಾದ ಗೂಳಿಯಾಗಿ ಬೆಳೆದುನಿಲ್ಲುವ ಎಲ್ಲಾ ಸಂಭಾವ್ಯತೆಯನ್ನು ತೋರಿಸಿತು. ಡೋಕ್ಲಾಂನಲ್ಲಿ ಚೀನಾವನ್ನು ಹಿಮ್ಮೆಟ್ಟಿಸಿದ ನಂತರ, ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಸ್ವಾಮ್ಯವನ್ನು ಪ್ರದಶರ್ಿಸುವ ಪ್ರಯತ್ನವನ್ನು ಭಾರತ ಬಲವಾಗಿಯೇ ಮಾಡಿದ ನಂತರ, ದೂರದ ಆಫ್ರಿಕಾದ ರಾಷ್ಟ್ರಗಳಲ್ಲೂ ತನ್ನ ಪ್ರಭಾವವನ್ನು ವಿಸ್ತರಿಸಿಕೊಂಡು ಇಂಡಿಯನ್ ಓಶನ್ ವ್ಯಾಪ್ತಿಯಲ್ಲಿ ತಾನೇ ಸಾರ್ವಭೌಮ ಎಂದು ಭಾರತ ಸಾಬೀತುಪಡಿಸಿದ ನಂತರವಂತೂ ಜಗತ್ತಿಗೆ ನಮ್ಮನ್ನು ಬೆಂಬಲಿಸದೇ ಬೇರೆ ದಾರಿಯೇ ಇರಲಿಲ್ಲ. ಪರಿಣಾವೇನು ಗೊತ್ತೇ? ಈಗ ಪಾಕಿಸ್ತಾನದ ಜೊತೆಗೆ ಚೀನಾ ಮಾತ್ರ ಬಲವಾಗಿ ನಿಂತಿದೆ, ಭಾರತದೊಂದಿಗೆ ಇಡೀ ಜಗತ್ತು ಆತುಕೊಳ್ಳಲು ಹಾತೊರೆಯುತ್ತಿದೆ.

ಪುಲ್ವಾಮಾ ದಾಳಿಯವರೆಗೂ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದಷ್ಟೇ ಬಿಂಬಿಸಲು ಪ್ರಯತ್ನಿಸುತ್ತಿದ್ದ ಭಾರತ ಆನಂತರ ತನ್ನ ದಿಕ್ಕನ್ನು ಪರಿಪೂರ್ಣವಾಗಿ ಬದಲಾಯಿಸಿದೆ. ಈಗ ಪಾಕಿಸ್ತಾನವನ್ನು ಪೂತರ್ಿ ನಷ್ಟಗೊಳಿಸುವುದೇ ಭಾರತದ ಉದ್ದೇಶವಾಗಿಬಿಟ್ಟಿದೆ. ಭಾರತದ ಪ್ರೇಮವನ್ನು ಇಷ್ಟೂ ದಿನಗಳ ಕಾಲ ಉಂಡ ಪಾಕಿಸ್ತಾನ ಈಗ ಭಾರತದ ದ್ವೇಷದ ಬೇಗೆಯನ್ನು ಅನುಭವಿಸಲಾರಂಭಿಸಿದೆ. ಪುಲ್ವಾಮಾ ದಾಳಿಯ ಹೊತ್ತಿನಲ್ಲಿ ನಿಂತುಹೋಗಿದ್ದ ವ್ಯಾಪಾರ ಸಂಬಂಧವೇನೋ ಮತ್ತೆ ಕುದುರಿಕೊಂಡಿದೆ ನಿಜ, ಆದರೆ ಜಗತ್ತು ಪಾಕಿಸ್ತಾನಕ್ಕೆ ಒಂದಿನಿತೂ ಸಹಾಯ ಮಾಡದಂತೆ ಮಾಡುವಲ್ಲಿ ಭಾರತ ವಿಕ್ರಮವನ್ನೇ ಸಾಧಿಸಿಬಿಟ್ಟಿದೆ. ಆಥರ್ಿಕವಾಗಿ ಪೂರ್ಣ ಬಸವಳಿದು ಬೆಂಡಾಗಿರುವ ಪಾಕಿಸ್ತಾನ ಐಎಮ್ಎಫ್ನ ಬಳಿ ಪುನಶ್ಚೇತನಕ್ಕಾಗಿ ಸಾಲ ಪಡೆಯಲು ಕೈಚಾಚಿತ್ತು. ಆರಂಭದಲ್ಲಿ ಭಾರತದೊಂದಿಗೆ ಮಾತುಕತೆ ಪುನರಾರಂಭಗೊಂಡರೆ ಮಾತ್ರ ಸಾಲದ ವಿಚಾರ ಮಾತನಾಡಬಹುದು ಎಂದು ಷರತ್ತು ವಿಧಿಸಿದ್ದ ಐಎಮ್ಎಫ್ ಆನಂತರ ತಜ್ಞ ಸಮಿತಿಯೊಂದನ್ನು ಪಾಕಿಸ್ತಾನಕ್ಕೆ ಕಳಿಸಿ ಒಂದಷ್ಟು ನಿಯಮಾವಳಿಗಳೊಂದಿಗೆ ಸಾಲವನ್ನು ಕೊಡಲು ಬಯಕೆ ವ್ಯಕ್ತಪಡಿಸಿದೆ. ಪಾಕಿಸ್ತಾನದ ಆಥರ್ಿಕ ಅಭಿವೃದ್ಧಿ ಕುಸಿಯುತ್ತಲೇ ಸಾಗಿದ್ದು ಅದರ ಜಿಡಿಪಿ ಐದಕ್ಕಿಂತಲೂ ಕೆಳಗಿಳಿದಿದೆ. ಐಎಮ್ಎಫ್ನ ತಜ್ಞರ ಮಾತುಗಳನ್ನು ಒಪ್ಪುವುದಾದರೆ ಜಿಡಿಪಿ ದರ ಇನ್ನೈದು ವರ್ಷಗಳಲ್ಲಿ ಈಗಿನ ಅರ್ಧಕ್ಕೆ ಕುಸಿಯುತ್ತದೆ. ಅದರ ಜೊತೆ-ಜೊತೆಗೆ ಹಣದುಬ್ಬರ ಪ್ರಮಾಣ ಹಿಮಾಲಯದೆತ್ತರಕ್ಕೆ ಏರುತ್ತಿದೆ. ಆಥರ್ಿಕ ವೃದ್ಧಿ ಕಡಿಮೆಯಾಗುತ್ತಾ ಹಣದುಬ್ಬರ ಏರುತ್ತಾ ಸಾಗುವ ಇಂತಹ ಸ್ಥಿತಿ ಎಂತಹ ರಾಷ್ಟ್ರವನ್ನೂ ದಾರಿದ್ರ್ಯದ ಪಟ್ಟಿಗೆ ತಳ್ಳಬಲ್ಲದು. ಈ ಹೊತ್ತಲ್ಲಿ ಪಾಕಿಸ್ತಾನ ಭಾರತದೊಂದಿಗೆ ತಗಾದೆ ತೆಗೆಯದೇ ಸೂಕ್ತ ಸಂಬಂಧಕ್ಕಾಗಿ ಕೈಚಾಚಿದ್ದರೆ ಒಂದಷ್ಟು ಲಾಭವಾದರೂ ಆಗಿರುತ್ತಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಲಾಭ ಮಾಡಿಕೊಡುವ ದೃಷ್ಟಿಯಿಂದ ಅವರು ಮಾಡಿಕೊಂಡ ಎಡವಟ್ಟುಗಳಿಂದಾಗಿ ಈಗ ಸಂಕಟದ ಸರಮಾಲೆಯನ್ನೇ ಅನುಭವಿಸುತ್ತಿದ್ದಾರೆ. ಭಾರತದಿಂದ ವಾಯುದಾಳಿಗೊಳಗಾದ ನಂತರ ಪಾಕಿಸ್ತಾನದ ಅಂತರರಾಷ್ಟ್ರೀಯ ಮಟ್ಟದ ಗೌರವ ಸೊನ್ನೆಗಿಂತಲೂ ಬಲು ಕೆಳಕ್ಕೆ ಹೋಗಿದೆ. ಈ ಅವಕಾಶವನ್ನು ಬಳಸಿಕೊಂಡು ಭಾರತ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಿ ಜಗತ್ತಿನಲ್ಯಾರೂ ಸಾಲವೇ ಕೊಡದಂತೆ ಮಾಡಿಬಿಡುವ ಧಾವಂತದಲ್ಲಿ ಬಿಟ್ಟೂಬಿಡದೇ ಪ್ರಯತ್ನ ಮಾಡುತ್ತಿದೆ. ಐಎಮ್ಎಫ್ ಮೇಲೆ ಒತ್ತಡ ತರಬಲ್ಲಂತಹ ರಾಷ್ಟ್ರಗಳಿಗೆ ಭಾರತ ತಾನು ಒತ್ತಡ ತಂದು ಅಲ್ಲಿಂದ ಸಾಲವೇ ಸಿಗದಂತೆ ಮಾಡುವ ಪ್ರಯತ್ನವನ್ನು ನಿಲ್ಲಿಸಿಲ್ಲ. ಅದರ ಪ್ರತಿಫಲವಾಗಿಯೇ ಅಮೇರಿಕಾದ ಸಂಸತ್ತಿನಲ್ಲಿ ಮೂರು ಎಮ್ಪಿಗಳು ಪಾಕಿಸ್ತಾನಕ್ಕೆ ಐಎಮ್ಎಫ್ ಸಾಲಕೊಡುವುದನ್ನು ವಿರೋಧಿಸಿ ತಮ್ಮ ಸಕರ್ಾರಕ್ಕೆ ಪತ್ರ ಬರೆದಿದ್ದಾರೆ. ಇದರ ಆಧಾರದ ಮೇಲೆ ಐಎಮ್ಎಫ್ನ ಸಾಲವನ್ನು ತಡೆಯಬಲ್ಲ ವಿಟೊ ಅಧಿಕಾರ ಅಮೇರಿಕಾಕ್ಕಿಲ್ಲವಾದರೂ ತನ್ನ ಮಿತ್ರ ರಾಷ್ಟ್ರಗಳ ಮೂಲಕ ಶೇಕಡಾ 20ರಷ್ಟು ವೋಟುಗಳನ್ನು ಹೊಂದಿರುವ ಅಮೇರಿಕಾ ಐಎಮ್ಎಫ್ ಅನ್ನು ತಡೆಹಿಡಿಯಬಲ್ಲ ಶಕ್ತಿಯನ್ನಂತೂ ಹೊಂದಿದೆ. ಮತ್ತು ಉಳಿದ ರಾಷ್ಟ್ರಗಳೂ ಕೂಡ ಭಾರತದ ವಿರುದ್ಧ ನಿಂತು ಪಾಕಿಸ್ತಾನಕ್ಕೆ ಸಹಾಯ ಮಾಡುವ ಸ್ಥಿತಿಯಲ್ಲಂತೂ ಖಂಡಿತ ಇರಲಾರದು. ಇಷ್ಟಕ್ಕೂ ಪಾಕಿಸ್ತಾನಕ್ಕೆ ಸಹಾಯ ಮಾಡದಿರುವಂತೆ ಅಮೇರಿಕಾ ಎಮ್ಪಿಗಳು ಕೊಟ್ಟಿರುವ ಕಾರಣವಾದರೂ ಏನು ಗೊತ್ತೇ? ಮತ್ತೆ ಚೀನಾದ ಸಾಲವೇ. ಪಾಕಿಸ್ತಾನ ಈಗ ಅಂತರರಾಷ್ಟ್ರೀಯ ಮಟ್ಟದಿಂದ ಸಾಲ ಪಡೆದುಕೊಂಡರೂ ಅದನ್ನು ಚೀನಾದ ಸಾಲ ತೀರಿಸಲು ಬಳಸಿಬಿಡುವುದರಿಂದ ಈ ಹಣ ಪಾಕಿಸ್ತಾನದ ಉದ್ಧಾರಕ್ಕೆ ಬಳಕೆಯಾಗಲಾರದು ಎಂಬುದೇ ಎಲ್ಲರ ಆತಂಕ. ಅದರರ್ಥ ಚೀನಾದ ಸಾಲದ ಸುಳಿ ಪಾಕಿಸ್ತಾನದ ಕತ್ತು ಹಿಸುಕುತ್ತಿದೆ ಅಂತ. ಈ ಹಿನ್ನೆಲೆಯಲ್ಲಿಯೇ ಇಮ್ರಾನ್ಖಾನ್ ಮತ್ತೊಮ್ಮೆ ಮೋದಿ ಪ್ರಧಾನಿಯಾದರೆ ಶಾಂತಿ, ಸೌಹಾರ್ದತೆ ವೃದ್ಧಿಸುತ್ತದೆ ಎಂದು, ಮಾತುಕತೆಗೆ ಅನುಕೂಲವಾಗಲಿದೆ ಎಂದು ಬಡಬಡಿಸುತ್ತಿರೊದು! ಪಾಕಿಸ್ತಾನದಲ್ಲಿರುವ ಹಿಂದೂ ದೇವಸ್ಥಾನಗಳ ಪುನರುಜ್ಜೀವನಕ್ಕೆ ಆತ ಪ್ರಯತ್ನಿಸುತ್ತಿರೋದು. ಪಾಕಿಸ್ತಾನ ಈ ಪರಿಯ ದೈನೇಸಿ ಸ್ಥಿತಿಗೆ ತಲುಪಬಹುದೆಂದು ಯಾರೂ ಅಂದುಕೊಂಡಿರಲಿಲ್ಲ. ಇನ್ನೈದು ವರ್ಷ ನರೇಂದ್ರಮೋದಿ ಕೈಗೆ ಅಧಿಕಾರ ದಕ್ಕಿಬಿಟ್ಟರೆ ಪಾಕಿಸ್ತಾನ ನಾಲ್ಕು ಚೂರುಗಳಾಗಿ ಒಡೆದುಹೋಗಿ ಭಾರತದ ಭಯೋತ್ಪಾದನಾ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಿಬಿಡುತ್ತದೆ.


ಈಗ ಕಾಂಗ್ರೆಸ್ಸಿನ ವಿಚಾರಕ್ಕೆ ಬರೋಣ. ನರೇಂದ್ರಮೋದಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಾತ್ರಿಯಾಗುತ್ತಿದ್ದಂತೆ ಕಾಂಗ್ರೆಸ್ಸಿಗರ ಉತ್ಸಾಹ ಉಡುಗಿಹೋಗಿದೆ. ರಾಹುಲ್ ಸಾರ್ವಜನಿಕ ಸಭೆಗಳಲ್ಲಿ ಆಡುವ ಮಾತುಗಳಿಗೆ ಒಂದಕ್ಕೊಂದು ಸಂಬಂಧವೇ ಇಲ್ಲದಂತಾಗಿದೆ. ಮೋದಿಯ ಮೇಕ್ ಇನ್ ಇಂಡಿಯಾ ಫೇಲಾಗಿದೆ ಎನ್ನುವ ರಾಹುಲ್ ಎರಡು ಮೊಬೈಲ್ ಫ್ಯಾಕ್ಟರಿಗಳಿಂದ ನರೇಂದ್ರಮೋದಿ ಇನ್ನೂರಕ್ಕೇರಿಸಿದ್ದನ್ನು ಮರೆತೇಬಿಡುತ್ತಾರೆ. ಭಾರತದ ಯುದ್ಧವಿಮಾನ ತೇಜಸ್ಗೆ ನರೇಂದ್ರಮೋದಿ ಜಾಗತಿಕ ಮಟ್ಟದ ಬೇಡಿಕೆ ತರಿಸಿಕೊಟ್ಟಿದ್ದು ಈಗ ನಿಚ್ಚಳವಾಗಿ ಕಾಣುತ್ತಿದೆ. ಡಿಆರ್ಡಿಒ ನಿಮರ್ಿಸಿರುವ ಮಿಸೈಲುಗಳಿಗೆ ಅಂತರರಾಷ್ಟ್ರೀಯ ಮಟ್ಟದ ಬೇಡಿಕೆ ಬಂದಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತ ಶಸ್ತ್ರಾಸ್ತ್ರಗಳ ರಫ್ತು ಮಾಡುವ ರಾಷ್ಟ್ರವಾಗಿ ಗುರುತಿಸಿಕೊಳ್ಳಲಿದೆ. ನಾವು ತಯಾರು ಮಾಡುತ್ತಿರುವ ಸಬ್ಮರಿನ್ಗಳಿಗೂ ಇತರೆ ರಾಷ್ಟ್ರಗಳಿಂದ ಬೇಡಿಕೆ ಬಂದಿರುವುದರಿಂದ ಮೇಕ್ ಇನ್ ಇಂಡಿಯಾ ಮೊದಲಿಗಿಂತಲೂ ಹೆಚ್ಚು ಸಮರ್ಥವಾಗಿ ಕೆಲಸ ಮಾಡುತ್ತಿದೆ ಎಂಬುದು ಎಂಥವನ ಗಮನಕ್ಕೂ ಬರುತ್ತದೆ. ರಾಹುಲ್ ಮೋದಿಯವರ ಸ್ಟಾಟರ್್ಅಪ್ ಇಂಡಿಯಾವನ್ನು ಆಡಿಕೊಳ್ಳುತ್ತಾರೆ, ಆದರೆ ಕಳೆದ ವರ್ಷಕ್ಕೂ ಈ ವರ್ಷಕ್ಕೂ ಸಕರ್ಾರದಿಂದ ಬೆಂಬಲಿತ ಸ್ಟಾಟರ್್ಅಪ್ ಕಂಪೆನಿಗಳು 97 ಪ್ರತಿಶತ ವೃದ್ಧಿಯನ್ನು ಕಂಡಿವೆ. ಇದಕ್ಕಾಗಿ ಮೀಸಲಿಟ್ಟ ಹಣ 146 ಪ್ರತಿಶತ ವೃದ್ಧಿಯನ್ನು ಕಂಡಿದೆ. ಈ ಬಾರಿ ಚುನಾವಣಾ ಪ್ರಣಾಳಿಕೆಯಲ್ಲೂ ಮೋದಿ ಸ್ಟಾಟರ್್ಅಪ್ಗೆ ಹೆಚ್ಚು ಒತ್ತು ಕೊಟ್ಟು ತರುಣರನ್ನು ಆಕಷರ್ಿಸಿತ್ತಿದ್ದಾರೆ. ಒಂದೆಡೆ ಭಾರತವನ್ನು ನಾಗಾಲೋಟದಲ್ಲಿ ಓಡುವಂತೆ ಪ್ರೇರೇಪಿಸುತ್ತಿರುವ ನರೇಂದ್ರಮೋದಿಯಾದರೆ ಮತ್ತೊಂದೆಡೆ ಬಡವರಿಗೆ ಹಣಕೊಡುತ್ತೇನೆಂದು ಬರಿಯ ಕನಸು ಕಾಣಿಸುವ ರಾಹುಲ್!


ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಭಾರತ ಜಾಗತಿಕ ಮಟ್ಟದಲ್ಲಿ ಬಲಾಢ್ಯ ರಾಷ್ಟ್ರವಾಗುತ್ತದೆ. ರಾಹುಲ್ ಬಂದರೆ ತನ್ನ ಭಾರವನ್ನು ತಾನೇ ತಾಳಲಾಗದೇ ಭಾರತ ಆಂತರಿಕವಾಗಿ ಕುಸಿದು ಹೋಗುತ್ತದೆ. ಆಯ್ಕೆ ನಮ್ಮ ಬೆರಳ ತುದಿಯಲ್ಲಿದೆ. ಮತದಾನಕ್ಕೆ ಹೋಗುವ ಮುನ್ನ ಒಮ್ಮೆ ಭಾರತದ ಭವಿಷ್ಯವನ್ನು ಕಣ್ಣಮುಂದೆ ತಂದುಕೊಳ್ಳುವುದನ್ನು ಮರೆಯಬೇಡಿ.

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top