ಟ್ರೈನ್-18 ಅಥವಾ ವಂದೇ ಭಾರತ್ ಎಕ್ಸ್ಪ್ರೆಸ್ನ ಏರ್ ಕಂಡೀಷನ್ ಕೋಚುಗಳು ಮತ್ತು ಎಕ್ಸಿಕ್ಯುಟಿವ್ ಕ್ಲಾಸ್ನ ಕೋಚುಗಳಲ್ಲಿ ದೆಹಲಿಯಿಂದ ವಾರಣಾಸಿಗೆ ಟಿಕೆಟಿನ ಬೆಲೆ ಕ್ರಮವಾಗಿ 1850 ರೂಪಾಯಿ ಮತ್ತು 3520 ರೂಪಾಯಿಗಳು.
ಪಿಟಿಐ ವರದಿಯ ಪ್ರಕಾರ ಹಿಂದಿರುಗಿ ಬರಲು ಎಸಿ ಕೋಚಿನಲ್ಲಿ 1795 ರೂಪಾಯಿಗಳು ಮತ್ತು ಎಕ್ಸಿಕ್ಯುಟಿವ್ ಕೋಚ್ನಲ್ಲಿ 3470 ರೂಪಾಯಿಗಳಾಗುತ್ತವೆ.
ಅಷ್ಟೇ ದೂರವನ್ನು ಕ್ರಮಿಸಿವ ಶತಾಬ್ದಿ ಎಕ್ಸ್ಪ್ರೆಸ್ನ ಬೆಲೆಗಳು ಎಸಿ ಕೋಚಿನ ಟ್ರೈನ್-18 ಬೆಲೆಗಿಂತ 1.5 ಪಟ್ಟು ಕಡಿಮೆ ಮತ್ತು ಎಕ್ಸಿಕ್ಯುಟಿವ್ ಕೋಚಿನ ಬೆಲೆ ಟ್ರೈನ್-18 ಬೆಲೆಗಿಂತ 1.4 ಪಟ್ಟು ಕಡಿಮೆ. ಈ ಹೊಸ ವೇಗದ ರೈಲನ್ನು ಫೆಬ್ರವರಿ 15 ರಂದು ಪ್ರಧಾನಮಂತ್ರಿ ನರೇಂದ್ರಮೋದಿಯವರು ಉದ್ಘಾಟಿಸಲಿದ್ದಾರೆ.
ಮಾಹಿತಿಯೊಂದರ ಪ್ರಕಾರ ಟ್ರೈನು ಎರಡು ರೀತಿಯ ಬೆಲೆಗಳುಳ್ಳ ಟಿಕೆಟನ್ನು ಹೊಂದಿದೆ. ಒಂದು ಚೇರ್ ಕಾರ್ ಮತ್ತೊಂದು ಎಕ್ಸಿಕ್ಯುಟಿವ್ ಕ್ಲಾಸ್. ಎರಡರಲ್ಲೂ ಊಟವಿರುತ್ತದೆ, ಆದರೆ ಬೆಲೆಯಲ್ಲಿ ವ್ಯತ್ಯಾಸವಿದೆ. ದೆಹಲಿ ಮತ್ತು ವಾರಣಾಸಿ ನಡುವೆ ಸಂಚರಿಸುವ ಈ ರೈಲಿನ ಎಕ್ಸಿಕ್ಯುಟಿವ್ ಕೋಚುಗಳಲ್ಲಿನ ಪ್ರಯಾಣಿಕರು ಟೀ, ತಿಂಡಿ ಮತ್ತು ಊಟಕ್ಕೆ 399 ರೂಪಾಯಿ ನೀಡಬೇಕಾಗುತ್ತದೆ ಮತ್ತು ಎಸಿ ಕೋಚುಗಳಲ್ಲಿರುವ ಪ್ರಯಾಣಿಕರು 344 ರೂಪಾಯಿ ನೀಡಬೇಕಾಗುತ್ತದೆ.
ವಾರಣಾಸಿಯಿಂದ ದೆಹಲಿಗೆ ಹಿಂದಿರುಗುವ ಸಂದರ್ಭದಲ್ಲಿ ಎಕ್ಸಿಕ್ಯುಟಿವ್ನಲ್ಲಿ 349 ರೂಪಾಯಿ ಮತ್ತು ಚೇರ್ ಕಾರ್ನಲ್ಲಿ 288 ರೂಪಾಯಿಯನ್ನು ಸ್ವೀಕರಿಸಲಾಗುತ್ತದೆ. ದೆಹಲಿಯಿಂದ ಕಾನ್ಪುರ್ ಮತ್ತು ಪ್ರಯಾಗ್ರಾಜ್ಗೆ ಸಂಚರಿಸುವ ಪ್ರಯಾಣಿಕರು 155 ರೂಪಾಯಿ ಮತ್ತು 122 ರೂಪಾಯಿಯನ್ನು ಎಕ್ಸಿಕ್ಯುಟಿವ್ ಮತ್ತು ಚೇರ್ ಕಾರಿಗೆ ಕ್ರಮವಾಗಿ ನೀಡಬೇಕು.
