National

ಭಯೋತ್ಪಾದಕರ ಸಮಾಧಿಯ ಮೇಲೆ ಶಾಂತಿಯ ಪಾರಿವಾಳಗಳು ಹಾರಾಡಲಿ!!

ಭಾರತದ ಪ್ರತೀಕಾರದ ತಾಕತ್ತು ಅನೇಕ ವರ್ಷಗಳ ನಂತರ ಈಗ ಬೆಳಕಿಗೆ ಬಂದಿದೆ. ಯಾವುದೇ ಸಮಸ್ಯೆಗೆ ಪರಿಹಾರದ ಮಾರ್ಗಗಳು ಎರಡೇ. ಮೊದಲನೆಯದು ಸಮಸ್ಯೆಯೇ ಇಲ್ಲವೆಂಬಂತೆ ಬದುಕಿಬಿಡಬಹುದು. ಎರಡನೆಯದು ಸಮಸ್ಯೆಯೇ ಇರದಂತೆ ಮಾಡುವುದು. ಮೊದಲನೆಯದರಲ್ಲಿ ಬೂಟಾಟಿಕೆ ಇರುತ್ತದೆ. ನಮಗೆ ನಾವೇ ಮಾಡಿಕೊಳ್ಳುವ ಮೋಸವೂ ಅಡಗಿರುತ್ತದೆ. ಅದು ನಿತ್ಯ ಸಾಯುವ ಸ್ಥಿತಿ. ಎರಡನೆಯದರಲ್ಲಿ ಸವಾಲುಗಳು ತಾತ್ಕಾಲಿಕವಾದರೂ ಬೆಟ್ಟದಷ್ಟಿರುತ್ತದೆ. ಅದನ್ನೆದುರಿಸಿ ಮೆಟ್ಟಿ ನಿಂತುಬಿಟ್ಟರೆ ಶಾಶ್ವತವಾದ ಆನಂದ ನಮ್ಮದಾಗುತ್ತದೆ. ಗೆಲುವು ನಮಗೆ ದಕ್ಕುತ್ತದೆ. ಸಮಸ್ಯೆ ಇನ್ನು ಮುಂದೆ ಕಾಡುವುದನ್ನೇ ಬಿಟ್ಟುಬಿಡುತ್ತದೆ. ನರೇಂದ್ರಮೋದಿ ಎರಡನೆಯದನ್ನೇ ಆರಿಸಿಕೊಂಡರು.

ಈ ದೇಶ ಕಳೆದ ಅನೇಕ ದಶಕಗಳಿಂದ ಸಮಸ್ಯೆಗೆ ದೀರ್ಘಕಾಲದ ಪರಿಹಾರದ ಮಾರ್ಗವನ್ನು ತನ್ನದಾಗಿಸಿಕೊಂಡಿತ್ತು. ಪಾಕಿಸ್ತಾನ ಪದೇ ಪದೇ ಭಯೋತ್ಪಾದಕ ದಾಳಿ ನಡೆಸಿದಾಗ ‘ನಾವು ದೊಡ್ಡಮನೆಯವರು. ಪ್ರತೀಕಾರದ ಕ್ರಮ ಕೈಗೊಳ್ಳಬಾರದು. ಇಂದಲ್ಲ ನಾಳೆ ಪಾಕಿಸ್ತಾನ ಸುಧಾರಿಸಿಕೊಂಡುಬಿಡುತ್ತದೆ. ಜಗತ್ತಿನಲ್ಲೆಲ್ಲಾ ಇಸ್ಲಾಮಿಕ್ ಭಯೋತ್ಪಾದನೆಯನ್ನು ಎದುರಿಸಿ ನಿಲ್ಲಬಲ್ಲ ಸಾರ್ಮಥ್ರ್ಯವಿದ್ದವರು ನಾವೇ. ನಮ್ಮ ಸಂಸ್ಕೃತಿ ಬಲುದೊಡ್ಡದ್ದು. ಶತಶತಮಾನಗಳಿಂದಲೂ ನಾಶವಾಗದ್ದು’ ಎಂದೆಲ್ಲಾ ಬಡಾಯಿ ಕೊಚ್ಚಿಕೊಂಡೇ 70 ವರ್ಷ ತಳ್ಳಿಬಿಟ್ಟೆವು. ಇದ್ಯಾವುದೂ ಸುಳ್ಳಲ್ಲ ನಿಜ. ಆದರೆ ಇವೆಲ್ಲವೂ ಮಿಲಿಟರಿ ಶಕ್ತಿಯಿಂದ ಸಾಬೀತುಗೊಂಡ ನಂತರವೇ ಬೆಲೆ ಪಡೆದುಕೊಳ್ಳುವ ಸಂಗತಿಗಳು ಎಂದು ನಾವು ಮರೆತೇ ಬಿಟ್ಟಿದ್ದೆವು. ಒಂದೇ ಮಾತಿನಲ್ಲಿ ಹೇಳುವುದಾದರೆ ಜಗತ್ತಿನವರೆಲ್ಲಾ ಸಸ್ಯಹಾರಿಗಳಾಗಬೇಕೆಂದು ಕುರಿ ನೀಡುವ ಬೋಧನೆಗೂ ಸಿಂಹ ಹೇಳುವ ಮಾತಿಗೂ ಸಾಕಷ್ಟು ಭಿನ್ನತೆಯಿದೆ. ಕುರಿಯ ಮಾತನ್ನು ಜನ ಅಪಹಾಸ್ಯದಿಂದ ನೋಡಿದರೆ ಸಿಂಹದ ಮಾತನ್ನು ಗೌರವಿಸಿ ಸ್ವೀಕರಿಸುತ್ತಾರೆ. ಇಷ್ಟೂ ದಿನ ಭಾರತ ಜಗತ್ತಿನ ಮುಂದೆ ಕುರಿಯಂತೆ ಬೋಧಿಸುತ್ತಿತ್ತು. ಈಗ ಸಿಂಹವಾಗಿ ನಿಲ್ಲುತ್ತಿದ್ದೇವೆ!

ಪುಲ್ವಾಮಾ ದಾಳಿಯ ನಂತರ ನಾವು ನಡೆಸಿದ ಪ್ರತೀಕಾರದ ದಾಳಿಯ ಒಂದೊಂದು ವಿವರಗಳೂ ಈಗ ಹೊರಬರುತ್ತಿವೆ. ಆದರೆ ಇವುಗಳಲ್ಲೂ ಜಗತ್ತಿಗೆ ತಿಳಿಸಬಹುದಾದ ವಿವರಗಳನ್ನು ಮಾತ್ರ ಹೊರಗೆ ಹೇಳಲಾಗುತ್ತಿದೆ. ಉಳಿದವೆಲ್ಲಾ ಕಡತಗಳಲ್ಲೇ ಹುದುಗಿ ಹೋಗುತ್ತವೆ. ಆದರೆ ಒಂದಂತೂ ಸತ್ಯ. ಪಾಕಿಸ್ತಾನದ ಒಳಗೆ ನುಗ್ಗಿ ನಾವು ನಡೆಸಿದ ಈ ದಾಳಿ ಅತ್ಯಂತ ಕರಾರುವಾಕ್ಕಾಗಿಯೂ ಮತ್ತು ಜಗತ್ತೆಲ್ಲಾ ಭಾರತದ ಸೈನಿಕ ಶಕ್ತಿಯ ಕುರಿತಂತೆ ಗಾಬರಿಗೊಳ್ಳುವಂಥದ್ದೂ ಆಗಿತ್ತು. ಯಾರಿಗೆ ಗೊತ್ತಾಗಿದೆಯೋ ಬಿಟ್ಟಿದೆಯೋ ಪಾಕಿಸ್ತಾನಕ್ಕಂತೂ ಈ ದಾಳಿಯ ತೀವ್ರತೆ ಸ್ಪಷ್ಟವಾಗಿ ಅರಿವಾಗಿದೆ. ಮೌಲಾನಾ ಅಮ್ಮರ್ ಒಂದು ಧ್ವನಿ ಸಂದೇಶವನ್ನು ಬಿಡುಗಡೆಗೊಳಿಸಿ ‘ಭಾರತ ಜೈಶ್-ಎ-ಮೊಹಮ್ಮದ್ನ ಕೇಂದ್ರವಾಗಿದ್ದ ಮಸೀದಿಯನ್ನು ಧ್ವಂಸಗೊಳಿಸಿದೆ. ಇಲ್ಲಿ ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ತರಬೇತುಗೊಳ್ಳುತ್ತಿದ್ದ ತರುಣರನ್ನು ನಾಶಮಾಡಿದೆ. ಹೀಗಾಗಿ ಕಾಶ್ಮೀರ ಈಗ ಭಾರತದ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕು’ ಎಂದೆಲ್ಲಾ ಹೇಳಿದ್ದಾನೆ. ಅದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯೊಂದಿಗೆ, ಸಕರ್ಾರದೊಂದಿಗೆ ಬಲವಾಗಿ ನಿಲ್ಲಬೇಕಿದ್ದ ನಮ್ಮದ್ದೇ ಪ್ರತಿಪಕ್ಷಗಳ ನಾಯಕರು ಪಾಕಿಸ್ತಾನದವರ ಗುಣಗಾನ ಮಾಡುತ್ತಿದ್ದಾರೆ. ಮಮತಾ ಬ್ಯಾನಜರ್ಿ ಈ ದಾಳಿಗೆ ಸಾಕ್ಷ್ಯಗಳನ್ನು ಕೇಳಿದ್ದಾಳೆ. ಸತ್ತವರ ಹೆಣಗಳ ಫೋಟೊಗಳೇಕಿಲ್ಲವೆಂದು ಬಾಲಿಶವಾಗಿ ಕೇಳಿಕೊಂಡಿದ್ದಾಳೆ. ಈ ಅನುಮಾನ ಏಕೆ ಬಂತೆಂದು ಪ್ರಶ್ನಿಸಿದ್ದಕ್ಕೆ ನ್ಯೂಯಾಕರ್್ ಟೈಮ್ಸ್ ಮತ್ತು ಹಫ್ಟಿಂಗ್ಟನ್ಸ್ ಪೋಸ್ಟ್ಗಳನ್ನು ಉಲ್ಲೇಖಿಸಿದ್ದಾಳೆ. ಇವರಿಗೆ ಭಾರತದ ವಾಯುಸೇನೆಯ ಅಧಿಕಾರಿಗಳು ಹೇಳಿದ್ದಕ್ಕಿಂತ ವಿರೋಧಿ ಪಾಳಯದ ಪ್ರಾಪಗ್ಯಾಂಡಿಸ್ಟ್ಗಳು ಹೇಳಿದ್ದೇ ಸತ್ಯ. ಭಾರತದ ಪರವಾಗಿ ನಿಲ್ಲುವ ಪ್ರತಿಪಕ್ಷಗಳ ಆರಂಭಿಕ ಹೇಳಿಕೆಯಲ್ಲೂ ಪಾಕಿಸ್ತಾನವನ್ನು ವಿರೋಧಿಸುವ ಮಾತುಗಳಿರಲಿಲ್ಲ. ಗುಲಾಮ್ ನಬಿ ಆಜಾದ್ನಂತೂ ‘ನಾನು ಪಾಕಿಸ್ತಾನವನ್ನು ದೂಷಿಸಲಾರೆ’ ಎಂದುಬಿಟ್ಟ. ಕನ್ನಡದಲ್ಲೂ ಕೆಲವು ಅಂಕಣಕಾರರು ಭಾರತದ ಸೈನಿಕರ ಸಾಧನೆಯನ್ನೇ ಪ್ರಶ್ನಿಸಿದ್ದು ಅಪಹಾಸ್ಯವೆನಿಸುವಂತಿತ್ತು. ಪಾಕಿಸ್ತಾನದ ಪತ್ರಿಕೆಗಳು ದಾಳಿಯಲ್ಲಿ ಸಾವು-ನೋವುಗಳೇ ಆಗಿಲ್ಲ, ಒಂದೆರಡು ಮರ ಸೀಳಿದೆಯಷ್ಟೇ ಎಂದು ಹೇಳಿದ್ದನ್ನು ಇವರೆಲ್ಲಾ ಉಲ್ಲೇಖಿಸುತ್ತಿದ್ದರು.


ಇದಕ್ಕೆ ಪ್ರತಿಯಾಗಿ ಹೇಳಿಕೆ ಕೊಟ್ಟಿರುವ ವಾಯುಸೇನೆ ಎಲ್ಲಾ ವಿವರವನ್ನು ಸೂಚ್ಯವಾಗಿ ಬಿಚ್ಚಿಟ್ಟಿದೆ. ಬೆಳಗ್ಗಿನ ಜಾವ ಪಾಕಿಸ್ತಾನದ ಮೇಲೆ ಏರಿ ಹೋಗುವ ಮುನ್ನ ಜಗತ್ತಿನ ಯಾವ ವಿಮಾನಯಾನಗಳಿಗೂ ತೊಂದರೆಯಾಗದಂತೆ ಅಥವಾ ಅಲ್ಲಿನ ಟ್ರಾಫಿಕ್ ಕಂಟ್ರೋಲರ್ಗಳ ಗಮನಕ್ಕೆ ಬರದಂತೆ ಒಂದು ಡಾಕರ್್ ಕಾರಿಡಾರ್ ಅನ್ನು ನಿಮರ್ಾಣ ಮಾಡಿಕೊಂಡು ಸ್ವಲ್ಪ ಸುದೀರ್ಘವಾದರೂ ಆ ದಾರಿಯನ್ನು ಬಳಸಿಕೊಂಡಿತ್ತಂತೆ. ಮಿರಾಜ್ 2000 ವಿಮಾನಗಳು ಈ ದಾಳಿಗೆ ಬಳಸಿದ್ದು ಇಸ್ರೇಲಿನ ಎಸ್ 2000 ಎನ್ನುವ ಪ್ರೆಸಿಷನ್ ಗೈಡೆಡ್ ಮ್ಯುನಿಷನ್ಸ್ ಬಾಂಬುಗಳನ್ನು. ಈ ಬಾಂಬುಗಳು ನೇರವಾಗಿ ಹೋಗಿ ಬಿದ್ದು ಸಿಡಿದುಬಿಡುವುದಿಲ್ಲ. ಇವು ಪ್ರೋಗ್ರಾಮ್ ಮಾಡಲ್ಪಟ್ಟವಾಗಿರುತ್ತವಾದ್ದರಿಂದ ಆಯ್ಕೆ ಮಾಡಿಕೊಂಡ ಮನೆಯ ಮೇಲೆ ಬೀಳುತ್ತವೆ. ಆ ಮನೆಗಿರಬಹುದಾದ ಛಾವಣಿಯ ದಪ್ಪ, ಸಾಮಥ್ರ್ಯವನ್ನೆಲ್ಲಾ ಅದಕ್ಕೆ ಮೊದಲೇ ಪ್ರೋಗ್ರಾಮ್ ಮಾಡಿಟ್ಟಿದ್ದರೆ ಛಾವಣಿಯನ್ನು ಸೀಳಿಕೊಂಡು ಹೋಗಿ ಆನಂತರ ಸಿಡಿಯುತ್ತದೆ. ಅಂದರೆ ಇಸ್ರೇಲಿನ ಈ ಬಾಂಬುಗಳು ಪೂತರ್ಿ ಕಟ್ಟಡವನ್ನು ಧ್ವಂಸಗೊಳಿಸುವುದಿಲ್ಲ. ಬದಲಿಗೆ ಕಟ್ಟಡದೊಳಕ್ಕೆ ನುಗ್ಗಿ ಆನಂತರ ಒಳಗಿರುವವರೊಬ್ಬರನ್ನೂ ಬಿಡದಂತೆ ಕೊಲ್ಲುತ್ತದೆ. ಹೀಗಾಗಿಯೇ ಭಾರತ ನಿಖರವಾಗಿಯೇ ಎರಡು ಡಜನ್ಗೂ ಹೆಚ್ಚು ಜೈಶ್-ಎ-ಮೊಹಮ್ಮದ್ನ ನಾಯಕರು ಧ್ವಂಸಗೊಂಡಿರುವಂತಹ ವರದಿಯನ್ನು ಕೊಡುತ್ತಿದೆ. ಈ ಬಾಂಬುಗಳು ಬಿದ್ದು ಆಗಿರುವ ಹಾನಿಯನ್ನು ಪೂರ್ಣ ದೃಶ್ಯದ ಮೂಲಕ ತೋರಿಸಲಾಗುವುದಿಲ್ಲವಾದರೂ ಏರ್ ಫೋಸರ್್ನ ಸಿಂಥೆಟಿಕ್ ಅಪರ್ಚರ್ ರೆಡಾರ್ಗಳು ಒಂದಷ್ಟು ಚಿತ್ರಗಳನ್ನು ಸೆರೆಹಿಡಿದಿವೆ. ಈ ಚಿತ್ರಗಳು ದಾಳಿ ಕರಾರುವಾಕ್ಕಾಗಿರುವುದನ್ನಂತೂ ದೃಢೀಕರಿಸುತ್ತಿವೆ. ಇಂಟೆಲಿಜೆನ್ಸ್ ಮಾಹಿತಿಯ ಪ್ರಕಾರ ಮಸೂದ್ನ ಭಾವ ಮೌಲಾನಾ ಯೂಸುಫ್ ಅಜರ್ ಒಳಗೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ. ಆತ ಮೃತಪಟ್ಟಿರುವುದು ಸತ್ಯ. ಆತನ ವಿಶ್ರಾಂತಿ ಕೋಣೆಯ ಪಕ್ಕದಲ್ಲೇ ಎಲ್ ಆಕಾರದ ಕಟ್ಟಡವಿದ್ದು ಅದರಲ್ಲೂ ಒಂದಷ್ಟು ತರಬೇತುದಾರರು ವಾಸವಾಗಿದ್ದರು. ಅವರೂ ಮೃತಪಟ್ಟಿದ್ದಾರೆ. ಫಸ್ಟ್ ಪೋಸ್ಟ್ ಪ್ರಕಟಿಸಿರುವ ವರದಿಯ ಪ್ರಕಾರ ಒಳಗೆ ಅಡಗಿದ್ದ ಐಎಸ್ಐನ ಅಧಿಕಾರಿ ಕರ್ನಲ್ ಸಲೀಂ ಮತ್ತು ಜೈಶ್-ಎ-ಮೊಹಮ್ಮದ್ನ ಮುಫ್ತಿ ಮೊಯೀನ್ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಕರ್ನಲ್ ಜರಾರ್ ಜಕ್ರಿ ಗಾಯಗೊಂಡಿದ್ದಾನೆ. ಇವ್ಯಾವುವೂ ಕೂಡ ಭಾರತದ ಪ್ರತಿಪಕ್ಷಗಳ ನಾಯಕರಿಗೆ ಸಾಕೆನಿಸುತ್ತಿಲ್ಲ. ಅವರಿಗೆ ಈ ದಾಳಿ ವ್ಯರ್ಥವಾದುದೆಂಬುದನ್ನು ಜನರಿಗೆ ಹೇಳಬೇಕೆಂಬ ತುಡಿತವಿದೆ. ಹಾಗೆ ಹೇಳುವ ಮೂಲಕ ನಾವು ಭಾರತೀಯ ಸೇನೆಯನ್ನೇ ಅವನಮಾನಿಸುತ್ತಿದ್ದೇವೆಂಬ ಸಾಮಾನ್ಯ ಜ್ಞಾನವೂ ಅವರಿಗಿಲ್ಲ. ಒಮ್ಮೆ ನಮ್ಮ ಸೇನೆಯನ್ನು ಹೀಗೆ ಬೆತ್ತಲಾಗಿ ನಿಲ್ಲಿಸಿದರೆ ಅದರ ಮೇಲೆ ಭರವಸೆಯನ್ನು ಭಾರತೀಯರು ಕಳೆದುಕೊಳ್ಳುವುದಲ್ಲದೇ ಸ್ವತಃ ಸೈನಿಕರು ಯುದ್ಧಾವೇಶವನ್ನು ಕಳೆದುಕೊಂಡುಬಿಡುತ್ತಾರೆ ಎಂಬುದರ ಅರಿವೂ ಇಲ್ಲದೇ ಚುನಾವಣೆ ಗೆಲ್ಲುವುದಕ್ಕಾಗಿ ಏನನ್ನು ಬೇಕಾದರೂ ಮಾಡಲು ಹೇಸದ ಇವರುಗಳೆಲ್ಲಾ ಪ್ರಧಾನಮಂತ್ರಿ ಅಭ್ಯಥರ್ಿಗಳೆನ್ನುವುದೇ ಸೋಜಿಗ.


ಈ ನಡುವೆ ಇನ್ನೊಂದಷ್ಟು ಜನ ಗಂಭೀರವಾದ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಅನುಮಾನಗಳಿಗೆ ಇಂಬು ಕೊಡುವಂತೆ ಪಾಕಿಸ್ತಾನವೂ ಸಾಕಷ್ಟು ಎಡವಟ್ಟುಗಳನ್ನು ಮಾಡಿಕೊಳ್ಳುತ್ತಿದೆ. ಭಾರತ ಪದೇ ಪದೇ ತಾನು ಮಾಡಿದ ದಾಳಿ ಪಾಕಿಸ್ತಾನ ಕೇಂದ್ರಿತವಲ್ಲವೆಂದೂ ಅದು ಭಯೋತ್ಪಾದಕರ ಅಡಗುದಾಣಗಳ ಮೇಲೆ ಭಾರತದ ಪ್ರಹಾರವೆಂದು ಹೇಳಿಕೊಂಡಿತ್ತು. ಅದನ್ನು ಅಲ್ಲವೆಂದೇ ವಾದಿಸಬೇಕಿದ್ದ ಪಾಕಿಸ್ತಾನದ ವಿದೇಶಾಂಗ ಸಚಿವ ಕುರೇಷಿ ಬಿಬಿಸಿ ಎದುರು ಮಾತನಾಡುತ್ತಾ ಮೌಲಾನಾ ಮಸೂದ್ ಅಜರ್ ಪಾಕಿಸ್ತಾನದಲ್ಲಿರುವುದು ನಿಜವೆಂದೂ ಆತ ತೀರಾ ಅನಾರೋಗ್ಯಕರ ಸ್ಥಿತಯಲ್ಲಿದ್ದಾನೆಂದೂ ಪದೇ ಪದೇ ಹೇಳಿಕೊಂಡ. ಅದರೊಟ್ಟಿಗೆ ಆತ ಆಸ್ಪತ್ರೆಯಲ್ಲಿ ಕಿಡ್ನಿಯ ತೊಂದರೆಗಾಗಿ ಆಗಾಗ ಡಯಾಲಿಸೀಸ್ ಮಾಡಿಸಿಕೊಳ್ಳುವುದನ್ನೂ ಪತ್ರಿಕೆಗಳು ವರದಿ ಮಾಡಿದವು. ಪ್ರತೀ ಬಾರಿ ಈ ಬಗೆಯ ದಾಳಿ ನಡೆದಾಗಿ ಮಾತನಾಡುತ್ತಿದ್ದ ಮೌಲಾನಾ ಮಸೂದ್ ಈ ಬಾರಿ ತಾನೇ ಯಾವ ಹೇಳಿಕೆಯನ್ನೂ ಕೊಡಲಿಲ್ಲ. ಅದರರ್ಥ ಅವನೇ ದಾಳಿಯಲ್ಲಿ ಕೊನೆಯಾಗಿಬಿಟ್ಟನಾ? ಹಾಗೆಂದು ದೃಢವಾಗಿ ಹೇಳಲಾಗುವುದಿಲ್ಲ ನಿಜ. ಆದರೆ ಅನುಮಾನದ ಹುತ್ತವಂತೂ ಹಾಗೆಯೇ ಬೆಳುಯುತ್ತಿದೆ. ಕೆಲವು ತಿಂಗಳ ನಂತರ ಚಿಕಿತ್ಸೆ ಫಲಕಾರಿಯಾಗದೇ ಮಸೂದ್ ಅಜರ್ ಸತ್ತನೆಂದು ಪಾಕಿಸ್ತಾನ ಹೇಳಿಕೆ ಕೊಟ್ಟರೆ ಯಾರೂ ಅಚ್ಚರಿ ಪೆಡಬೇಕಿಲ್ಲ.

ವಾಸ್ತವವಾಗಿ ಭಾರತದ ದಾಳಿಯನ್ನು ನಿರೀಕ್ಷಿಸಿದ್ದ ಪಾಕಿಸ್ತಾನ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಈ ದಾಳಿಯನ್ನು ಭಾರತ ಮಾಡಬಹುದೆಂದು ಆಲೋಚಿಸಿತ್ತು. ಆ ಮೂಲಕ ಭಾರತ ಜಗತ್ತಿನೆದುರಿಗೆ ನಮ್ಮದ್ದೇ ಭೂಭಾಗದ ಮೇಲೆ ಆಕ್ರಮಿಸಿರುವುದರಿಂದ ಇದು ಅನ್ಯರಾಷ್ಟ್ರದ ಸ್ವಾರ್ವಭೌಮತೆಗೆ ಧಕ್ಕೆ ತಂದಂತಲ್ಲ ಎಂದು ಬಿಂಬಿಸಿಕೊಳ್ಳುವುದೆಂದು ಭಾವಿಸಿತ್ತು. ಅದಕ್ಕೆಂದೇ ಪಿಒಕೆಯಲ್ಲಿ ಅಡಗಿದ್ದ ಎಲ್ಲಾ ಭಯೋತ್ಪಾದಕ ಪ್ರಮುಖರನ್ನು ಅಬೊಟಾಬಾದ್ನ ಸೇನಾ ನೆಲೆಯ ಪಕ್ಕದಲ್ಲೇ ಇದ್ದ ಬಾಲಾಕೋಟ್ಗೆ ಸ್ಥಳಾಂತರಿಸಿತ್ತು. ಪಾಕಿಸ್ತಾನದ ಪಾಲಿಗೆ ಅದು ಅತ್ಯಂತ ಸುರಕ್ಷಿತ ಪ್ರದಶೇ. ಈ ಕುರಿತ ಸ್ಪಷ್ಟ ಗುಪ್ತಚರ ಮಾಹಿತಿಯನ್ನು ಪಡೆದುಕೊಂಡ ಭಾರತ ವಾಯುಸೇನೆಯ ಮೂಲಕ ದಾಳಿಯನ್ನು ಸಂಘಟಿಸಿದ್ದು ಪಾಕಿಸ್ತಾನಕ್ಕೆ ಬಲುದೊಡ್ಡ ಹೊಡೆತ. ಅದೀಗ ಈ ವಿಚಾರವನ್ನು ಯಾರಿಗೂ ಹೇಳಿಕೊಳ್ಳಲಾಗದ ವಿಕಟ ಸ್ಥಿತಿಯಲ್ಲಿ ನಿಂತಿದೆ. ದುರಂತವೆಂದರೆ ಈ ಹಂತದಲ್ಲಿ ಅವರನ್ನು ಒಗ್ಗಟ್ಟಾಗಿ ಬಡಿದು ಬಿಸಾಡಬೇಕಿದ್ದ ನಾಯಕರು ಪಾಕಿಸ್ತಾನದ ಎಂಜಲು ತಿಂದ ನಾಯಿಗಳಂತೆ ವತರ್ಿಸುತ್ತಿದ್ದಾರೆ.


ನರೇಂದ್ರಮೋದಿ ಇವಕ್ಕೆಲ್ಲಾ ಸೊಪ್ಪು ಹಾಕುವುದಿಲ್ಲವೆಂದು ಈ ದೇಶದ ನಾಯಕರಿಗೂ ಗೊತ್ತಿದೆ. ಪಾಕಿಸ್ತಾನದ ನಾಯಕರಿಗೂ ಗೊತ್ತಿದೆ, ಜಗತ್ತಿನ ಅನೇಕರಿಗೂ ಗೊತ್ತಿದೆ. ಹೀಗಾಗಿ ಈ ರಾಷ್ಟ್ರವನ್ನುಳಿಸಿಕೊಳ್ಳಲು ನರೇಂದ್ರಮೋದಿ ದಿಟ್ಟ ಹೆಜ್ಜೆಯನ್ನಿಡಲು ಸಿದ್ಧವಾಗಿಯೇ ನಿಂತಿದ್ದಾರೆ. ಯುದ್ಧದ ಕಾಮರ್ೋಡಗಳು ಕಳೆದೇ ಹೋಗಿಬಿಟ್ಟಿದೆ ಎಂದು ಅನೇಕರು ಭಾವಿಸಿಬಿಟ್ಟಿದ್ದಾರೆ. ಹಾಗೇನಿಲ್ಲ. ಈಗ ಭಾರತದ ಕೈ ಮೇಲಾಗಿದೆ ಎನ್ನುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ನಾವು ಬಲವಾಗಿದ್ದು ನಮ್ಮ ಶಕ್ತಿ-ಸಾಮಥ್ರ್ಯಗಳು ಜೋರಾಗಿದ್ದಾಗಲೇ ಕೆಲಸ ಮಾಡಿ ಮುಗಿಸಿಬಿಡಬೇಕು. ಇಲ್ಲವಾದರೆ ಶತ್ರುಗಳು ಬಲವಾಗಿಬಿಟ್ಟರೆ ನಾವು ಸೋತು ಅವಮಾನಕ್ಕೆ ಒಳಗಾಗುವ ಪ್ರಸಂಗಗಳು ಬರುವ ಸಾಧ್ಯತೆಗಳಿವೆ. ಮೋದಿ ಖಂಡಿತವಾಗಿಯೂ ಈ ಅವಕಾಶವನ್ನು ಬಿಟ್ಟುಕೊಡಲಾರರು. ಗಡಿಯಲ್ಲಿ ಪಾಕಿಸ್ತಾನ ಅಪ್ರಚೋದಿತ ಶೆಲ್ದಾಳಿ ನಡೆಸುತ್ತಿರುವಾಗ ಭಾರತ ಜಗತ್ತಿಗೆ ಸ್ಪಷ್ಟ ಸಂದೇಶ ರವಾನಿಸಿದೆ. ನಮ್ಮ ರಾಷ್ಟ್ರವನ್ನು ಕಾಪಾಡಿಕೊಳ್ಳುವ ಬಗೆ ನಮಗೆ ಗೊತ್ತಿದೆ ಅಂತ. ಅದಕ್ಕೆ ಪೂರಕವಾಗಿಯೇ ಭಾರತ ಆಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ಗಳ ಪ್ರಯೋಗ ಪರೀಕ್ಷೆ ಮೊನ್ನೆ ನಡೆಸಿದೆ. ಪಾಕಿಸ್ತಾನದ ಮೇಲೆ ವಾಯುದಾಳಿ ನಡೆಸುವ ಮುನ್ನವೂ ಹೀಗೆ ನಿಖರ ಗುರಿಯನ್ನು ಸಾಧಿಸುವ ಅಭ್ಯಾಸವನ್ನು ವಾಯುಸೇನೆ ಮಾಡಿದ್ದನ್ನು ಯಾರೂ ಮರೆಯುವಂತಿಲ್ಲ. ಈಗ ಭೂಸೇನೆಯ ಕಸರತ್ತು ಆರಂಭವಾಗಿದೆ. ತುತರ್ಾಗಿ ಸೇನೆಗೆ ಬೇಕಾಗಿರುವಂತಹ 3000 ಕೋಟಿ ರೂಪಾಯಿಗಳ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಅನುಮತಿ ಕೊಟ್ಟಾಗಿದೆ. ಅಂದರೆ ಭಾರತ ತಯಾರಿ ನಡೆಸುತ್ತಿದೆ. ಈ ಬಾರಿ ಪಾಕಿಸ್ತಾನದ ಸರ್ವನಾಶವೇ ಭಾರತದ ಗುರಿ. ಒಮ್ಮೆ ಈ ರೀತಿಯ ಹೆಜ್ಜೆ ನಾವಿಟ್ಟುಬಿಟ್ಟರೆ ಸಮಸ್ಯೆ ಶಾಶ್ವತವಾದ ಪರಿಹಾರ ಕಾಣುವುದರಲ್ಲಿ ಅನುಮಾನವೇ ಇಲ್ಲ.


ಎಷ್ಟೂಂತ ಪ್ರತಿದಿನ ಸಾಯೋದು ಹೇಳಿ. ಒಂದೇ ಸಲಕ್ಕೆ ಕೊಲ್ಲುವವರನ್ನೆಲ್ಲಾ ಮುಗಿಸಿಬಿಟ್ಟರೆ ಆಮೇಲಿನ ಬದುಕಾದರೂ ಸುಧಾರಿಸುತ್ತದೆ. ಸ್ವಲ್ಪ ದಿನಗಳ ಕಾಲ ಶಾಂತಿಯ ಪಾರಿವಾಳಗಳನ್ನೆಲ್ಲಾ ಬುಟ್ಟಿಯಲ್ಲಿ ಹಾಕಿಟ್ಟು ಸೈನಿಕರ ಕೈಗಳಿಗೆ ಒಂದಷ್ಟು ಬಲ ತುಂಬೋಣ. ಜಗತ್ತಿನ ನೆಮ್ಮದಿ ಕದಡಿರುವ ಭಯೋತ್ಪಾದಕರನ್ನೆಲ್ಲಾ ನಾಶಗೊಳಿಸಿ ಅವರ ಸಮಾಧಿಯ ಮೇಲೆ ವಿಶ್ವದ ಶಾಂತಿಗಾಗಿ ಬಿಳಿಯ ಪಾರಿವಾಳಗಳನ್ನು ಹಾರಿಸೋಣ!

– ಚಕ್ರವರ್ತಿ ಸೂಲಿಬೆಲೆ

1 Comment

1 Comment

  1. ಶಶಿಕಲಾ. ಎಸ್.

    March 4, 2019 at 3:46 am

    ಸೈನಿಕರ ಆತ್ಮ ಸ್ಥೈರ್ಯ ಕುಗ್ಗಿಸುವಂತಹ ಹೇಳಿಕೆ ಕೊಡುತ್ತಿರುವವರಿಗೆ ಜನ ಬುದ್ದಿ ಕಲಿಸ ಬೇಕು. ಏನಾಗಿದೆ ಬೆಂಗಾಲಿಗರಿಗೆ.ಟ್ರಾಲ್ ಮಾಡಿ ಅವರಿಗೆ ಬುದ್ದಿ ಕಲಿಸಲು. ಕನ್ನಡಿಗರೇ ವಾಸಿ. ಪ್ರತಿಭಾ ನಂದಕುಮಾರ್ ತಮ್ಮ ಪೋಸ್ಟ್ ಡಿಲೀಟ್ ಮಾಡುವಂತೆ ಮಾಡಿದ್ದಾರೆ. ಅನಂತಮೂರ್ತಿ ಅವರನ್ನೇ ಬಿಡಲಿಲ್ಲ ನಾವು.
    ಸೋಯಲ್ ಮೀಡಿಯಾ ನಮಗಲ್ಲಾ ಶಕ್ತಿ ತುಂಬಿದೆ. ಒಬ್ಬ ಅನ್ಶುಲ್ ಮಾಡ್ತಾನೆ ಬೆಂಗಾಲಿಗರು ಒಟ್ಟುಗೂಡಿ ಮಾಡಲಾಗಲ್ವ?
    ತೆಲುಗರು ಬಹಳ ಅಕ್ಟಿವ್ ಇದ್ದಾರೆ.

Leave a Reply

Your email address will not be published. Required fields are marked *

Most Popular

To Top