National

ಭಯೋತ್ಪಾದಕರ ಮಹಾಜಾಲ ಭೇದಿಸಿದ ಎನ್ಐಎ!

ನಿನ್ನೆ ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಉತ್ತರಪ್ರದೇಶದ ಭಯೋತ್ಪಾದಕ ನಿಗ್ರಹ ದಳ ಮತ್ತು ದೆಹಲಿ ವಿಶೇಷ ಪೊಲೀಸರೊಂದಿಗೆ ಸೇರಿ ಉತ್ತರಪ್ರದೇಶ ಮತ್ತು ದೆಹಲಿಯ 17 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಐಸಿಸ್ ಉಗ್ರ ಸಂಘಟನೆಯ ಹೊಸ ಅಂಗ ಸಂಸ್ಥೆಯಾದ ಹರ್ಕತ್-ಉಲ್-ಹರ್ಬ್-ಎ-ಇಸ್ಲಾಂ ನ ಹತ್ತು ಜನರನ್ನು ಬಂಧಿಸಿದೆ.

ಎನ್ಐಎಯ ವರದಿಯ ಪ್ರಕಾರ, ಮೌಲ್ವಿ, ನೋಯ್ಡಾದ ಅಮಿಟಿ ವಿಶ್ವವಿದ್ಯಾಲಯದ ಸಿವಿಲ್ ಇಂಜಿನಿಯರ್ ವಿದ್ಯಾರ್ಥಿ, ಮೂರನೇ ವರ್ಷದ ಬಿಎ ವಿದ್ಯಾರ್ಥಿ, ಆಟೋರಿಕ್ಷಾ ಚಾಲಕ, ವೆಲ್ಡಿಂಗ್ ಶಾಪ್ ನ ಮಾಲಿಕ ಮತ್ತು ಗಾರ್ಮೆಂಟ್ ನ ಮಾಲಿಕ ಹತ್ತು ಜನ ಬಂಧಿತರಲ್ಲಿ ಇದ್ದಾರೆ. ಇದರೊಡನೆ ಸಂಪರ್ಕವಿರಬಹುದು ಎಂಬ ಹೆಣ್ಣುಮಗಳನ್ನೂ ಬಂಧಿಸಿ ವಿಚಾರಣೆ ನಡೆಸಲಾಗಿದೆ. ಹತ್ತು ಜನರಲ್ಲಿ ಐವರು ಅಮ್ರೋಹದವರೇ ಆಗಿದ್ದಾರೆ. ದಾಳಿಯಲ್ಲಿ ಎನ್ಐಎ 7.5 ಲಕ್ಷ ರೂಪಾಯಿ ಹಣ, 91 ಮೊಬೈಲ್ ಫೋನುಗಳು, 134 ಸಿಮ್ ಕಾರ್ಡ್ ಗಳು ಮತ್ತು 3 ಲ್ಯಾಪ್ ಟಾಪ್ ಗಳು, ಅಮೋನಿಯಂ ನೈಟ್ರೇಟ್, ಪೊಟಾಷಿಯಂ ನೈಟ್ರೇಟ್, ಸಲ್ಫರ್ ಹೀಗೆ 25 ಕೆಜಿ ಕೆಮಿಕಲ್ ರಾಸಾಯನಿಕಗಳು, 12 ಪಿಸ್ತೂಲುಗಳು, ಒಂದು ದೇಶೀ ರಾಕೆಟ್ ಲಾಂಚರ್, 112 ಗಡಿಯಾರಗಳು, ಮೊಬೈಲ್ ಫೋನ್ ಸರ್ಕ್ಯುಟ್ಸ್, ಬ್ಯಾಟರಿಗಳು, 51 ಪೈಪುಗಳು, ಟ್ರಿಗರ್ ಮಾಡಬಹುದಾದ ಸ್ವಿಚ್ಚನ್ನು ಹೊಂದಿರುವ ರಿಮೋಟ್ ಕಂಟ್ರೋಲ್, ಸ್ಟೀಲ್ ಪಾತ್ರೆಗಳು, ಎಲೆಕ್ಟ್ರಿಕ್ ವೈರುಗಳು, ಕತ್ತಿ, ಚಾಕು, ಐಸಿಸ್ ಗೆ ಸಂಬಂಧಪಟ್ಟ ಒಂದಷ್ಟು ಬರಹಳು ಇವಿಷ್ಟನ್ನೂ ವಶಪಡಿಸಿಕೊಳ್ಳಲಾಗಿದೆ.

ಎನ್ಐಎಯ ಅಧಿಕಾರಿಗಳ ಪ್ರಕಾರ ಬಂಧಿಸಲ್ಪಟ್ಟವರು ದೆಹಲಿಯ ಸುತ್ತ-ಮುತ್ತ ಭಯೋತ್ಪಾದಕ ದಾಳಿಯನ್ನು ನಡೆಸುವ ಸಂಚು ಮಾಡಿದ್ದರು.  ಭಾರತದಲ್ಲಿ ಐಸಿಸ್ ಗೆ ಸೇರುತ್ತಿರುವ ಮುಸಲ್ಮಾನರ ಸಂಖ್ಯೆ ಹೆಚ್ಚುತ್ತಿರುವುದು ಆತಂಕದ ಸಂಗತಿಯೇ. ದೇಶದಲ್ಲಿ ಐಸಿಸ್ ಗೆ ಸೇರಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇಷ್ಟಾದರೂ ನಿನ್ನೆ ಎನ್ಐಎ ನಡೆಸಿದ ದಾಳಿಯನ್ನು ಹಲವು ಎಡಪಂಥೀಯ ಬುದ್ಧಿಜೀವಿಗಳು ಇದೊಂದು ರಾಜಕೀಯ ಗಿಮಿಕಗ ಎಂದು ಕರೆದಿದ್ದಾರೆ. ಭಾರತದಲ್ಲಿ ಇಸ್ಲಾಮಿನ ವಿರುದ್ಧ ಜನರಿಗೆ ಹೆದರಿಕೆ ಹುಟ್ಟಿಸುವ ಸಲುವಾಗಿ ಈ ರೀತಿಯ ಆಟವನ್ನು ಸರ್ಕಾರ ಮಾಡುತ್ತಿದೆ ಎಂದವರು ಆರೋಪಿಸಿದ್ದಾರೆ. ವಶಪಡಿಸಿಕೊಂಡ ವಸ್ತುಗಳ್ಯಾವುವೂ ಉಗ್ರ ದಾಳಿ ನಡೆಸಲು ಸಾಕಾಗುವ ವಸ್ತುಗಳಲ್ಲ ಎಂದು ಬೊಬ್ಬೆ ಹೊಡೆದಿದ್ದಾರೆ. ದಾಳಿ ನಡೆಸಿದಾಗ ವಶಪಡಿಸಿಕೊಂಡಿರುವ ವಸ್ತುಗಳಲ್ಲಿ ಪಿಸ್ತೂಲು, ಬಾಂಬ್ ತಯಾರಿಕಾ ರಾಸಾಯನಿಕಗಳು ಇತ್ತೆಂಬುದಕ್ಕೆ ಅವರ ಬಳಿ ಉತ್ತರವಿಲ್ಲ.

ಎನ್ಐಎ ನಡೆಸಿದ ದಾಳಿಯನ್ನು ರಾಜಕೀಯದಾಟ ಎಂದು ಆರೋಪ ಮಾಡುವ ಹಂತಕ್ಕೆ ನಾವು ತಲುಪಿರುವುದೇ ವಿಷಾದಕರ ಸಂಗತಿ. ಎನ್ಐಎ ಕೆಲವು ವರ್ಷಗಳಿಂದ ನಡೆಸುತ್ತಿರುವ ಹಲವು ದಾಳಿಗಳ ಕುರಿತು ಹೆಮ್ಮೆ ಪಡುವುದರ ಬದಲು ಎನ್ಐಎಯ ಖ್ಯಾತಿಯನ್ನು ಹಾಳುವ ಮಾಡುವ, ಗೌರವವನ್ನು ಕಡಿಮೆ ಮಾಡುವ ಕೆಲಸಗಳನ್ನು ಬೇಕೆಂದೇ ಮಾಡಲಾಗುತ್ತಿದೆ. ಬುದ್ಧಿಜೀವಿಗಳು, ಕೆಲವು ಎಡಪಂಥೀಯ ಪತ್ರಕರ್ತರು ಜನರಲ್ಲಿ ಎನ್ಐಎ ಮೇಲಿರುವ ಗೌರವವನ್ನು ಕಡಿಮೆ ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಮೋದಿ-ದೋವೆಲ್ ಮೇಲಿನ ತಮ್ಮ ದ್ವೇಷಕ್ಕೆ ಇದನ್ನು ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ದಾಳಿಯಲ್ಲಿ ವಶಪಡಿಸಿಕೊಂಡ ವಸ್ತುಗಳಿಂದ ಬಾಂಬುಗಳನ್ನು ತಯಾರಿಸಬಹುದೆಂದು ಯಾರಿಗಾದರೂ ನೋಡಿದ ತಕ್ಷಣ ತಿಳಿಯುತ್ತದೆ. ಪಟಾಕಿಗಳನ್ನೂ ಉಪಯೋಗಿಸಿ ಬಾಂಬುಗಳನ್ನು ಮಾಡಿರುವುದು ಈ ಹಿಂದೆಯೇ ನಡೆದಿದೆ.

ಇನ್ನೂ ಆಘಾತಕಾರಿ ಸಂಗತಿಯೆಂದರೆ, ನಿನ್ನೆ ಎನ್ಐಎ ಅಮ್ರೋಹಾದಲ್ಲಿ ಬಂಧಿಸಿದ ಉಗ್ರರ ಕುಟುಂಬದವರು ಇಂದು ಎನ್ಐಎ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ತಮ್ಮ ವಿರುದ್ಧ ಮಾಡುತ್ತಿರುವ ಷಡ್ಯಂತ್ರವೆಂದು ಅವರು ಹೇಳಿದ್ದಾರೆ. ಇವರ ಬೆಂಬಲಕ್ಕೆ ಕಾಂಗ್ರೆಸ್ಸಿನ ನಾಯಕರು, ಪತ್ರಕರ್ತರು, ಬುದ್ಧಿಜೀವಿಗಳು ನಿಂತಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್ಸಿನ ನಾಯಕ ಸಘೀರ್ ಖಾನ್ ಸೇನೆ ಕಾಶ್ಮೀರದಲ್ಲಿ ಮುಗ್ಧ ಜನರನ್ನು ಕೊಲ್ಲುತ್ತಿದೆ. ತಾವು ಅಧಿಕಾರಕ್ಕೆ ಬಂದರೆ ಅಂಥವರ ಕುಟುಂಬಕ್ಕೆ ತಲಾ ಒಂದು ಕೋಟಿ ರೂಪಾಯಿ ನೀಡುವುದಾಗಿ ಹೇಳಿಕೆ ನೀಡಿದ್ದಾರೆ. ಅದರ ಜೊತೆಗೆ ಉಗ್ರರೆಂಬ ಆರೋಪ ಹೊತ್ತು ಜೈಲಿನಲ್ಲಿರುವವರನ್ನೂ ತಾನು ಬಂಧಮುಕ್ತಗೊಳಿಸುವುದಾಗಿ ಹೇಳಿಕೆ ನೀಡಿದ್ದಾನೆ. ಕಾಂಗ್ರೆಸ್ಸು ಅಧಿಕಾರಕ್ಕೆ ಬಂದರೆ ಭಾರತ ಐಸಿಸ್ ಉಗ್ರರ ತಾಣವೇ ಆಗಿಬಿಡುವುದೆಂದು ಸೊಷಿಯಲ್ ಮಿಡಿಯಾದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ.

Click to comment

Leave a Reply

Your email address will not be published. Required fields are marked *

Most Popular

To Top