National

ಭಯೋತ್ಪಾದಕರ ಬೆಂಬಲಿಗರಿಗೆ ಮೋದಿ ‘ಗುನ್ನ’!

ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಶ್ರೀನಗರದ ಏಳು ಕಡೆಗಳಲ್ಲಿ ಭಯೋತ್ಪಾದನೆಗೆ ಹಣ ನೀಡುತ್ತಿರುವುದಕ್ಕೆ ಸಂಬಂಧಪಟ್ಟಂತೆ ದಾಳಿ ನಡೆಸಿದೆ. ಪ್ರತ್ಯೇಕತಾವಾದಿಗಳಾದ ಯಾಸಿನ್ ಮಲಿಕ್, ಶಬ್ಬೀರ್ ಶಾಹ್, ಮೀರ್ವಾಜ್ ಉಮರ್ ಫಾರೂಕ್, ಮೊಹಮ್ಮದ್ ಅಶ್ರಫ್ ಖಾನ್, ಮಸರತ್ ಅಲಮ್, ಜಫರ್ ಅಕ್ಬರ್ ಭಟ್ ಮತ್ತು ನಸೀಮ್ ಗಿಲಾನಿ ಅವರ ಮನೆಯ ಮೇಲೆ ದಾಳಿ ನಡೆದಿದೆ. ದಾಳಿ ನಡೆಯುವ ಸಂದರ್ಭದಲ್ಲಿ ಎನ್ಐಎ ಜೊತೆ ಸಿಆರ್ಪಿಎಫ್ ಯೋಧರು, ಜಮ್ಮು-ಕಾಶ್ಮೀರದ ಪೊಲೀಸರು ಜೊತೆಗಿದ್ದರು.

ಹಲವು ಮುಖ್ಯ ದಾಖಲೆಗಳನ್ನು, ಆಸ್ತಿ ಪತ್ರಗಳನ್ನು, ಹಣದ ವ್ಯವಹಾರದ ರಶೀದಿಗಳನ್ನು, ಬ್ಯಾಂಕ್ ಖಾತೆಯ ದಾಖಲೆಗಳನ್ನು ಈ ಸಮಯದಲ್ಲಿ ವಶಪಡಿಸಿಕೊಳ್ಳಲಾಗಿದೆ. ದಾಖಲೆಗಳನ್ನು ಹೊರತುಪಡಿಸಿ, ಲ್ಯಾಪ್ ಟಾಪ್, ಇ-ಟೇಬಲ್, ಮೊಬೈಲ್ ಫೋನುಗಳು, ಪೆನ್ ಡ್ರೈವ್, ಸಂವಹನ ವ್ಯವಸ್ಥೆಯ ಯಂತ್ರಗಳು ಮತ್ತು ಡಿವಿಆರ್ ಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ಟೈಮ್ಸ್ ನೌನ ವರದಿಯ ಪ್ರಕಾರ ಬೇರೆ ಬೇರೆ ಭಯೋತ್ಪಾದಕ ಸಂಘಟನೆಗಳ ಲೆಟರ್ ಹೆಡ್ ಗಳು, ಪಾಕಿಸ್ತಾನದ ಶಿಕ್ಷಣ ಸಂಸ್ಥೆಯೊಂದರಲ್ಲಿ ಸೇರಲು ಅರ್ಜಿಗಳು ಸಿಕ್ಕಿವೆ. ಹುರಿಯತ್ ನ ಚೇರ್ಮನ್ ಉಮರ್ ಫಾರೂಕ್ ಅವನ ಮನೆಯಿಂದ ಅತ್ಯಾಧುನಿಕ ಅಂತರ್ಜಾಲ ಸಂವಹನ ಯಂತ್ರಗಳು ಮತ್ತು ಇಂಡಿಪೆಂಡೆಂಟ್ ಸರ್ವರ್ ಗಳು ಸಿಕ್ಕಿವೆ. ಎನ್ಐಎ ಪ್ರಕಾರ ಫಾರೂಕ್ ಇದನ್ನು ಪಾಕಿಸ್ತಾನದ ತನ್ನ ಬಾಸ್ ನೊಂದಿಗೆ ಮಾತನಾಡಲು ಉಪಯೋಗಿಸುತ್ತಿದ್ದ.

ಫಾರೂಕ್ ಉಪಯೋಗಿಸುತ್ತಿದ್ದ ಸಂವಹನ ತಂತ್ರಜ್ಞಾನಕ್ಕೆ 40 ಅಡಿಯಷ್ಟು ದೊಡ್ಡ ಆ್ಯಂಟೆನಾ ಇತ್ತು. ಶ್ರೀನಗರದಂತಹ ಸೂಕ್ಷ್ಮ ಪ್ರದೇಶದಲ್ಲಿ ಇದನ್ನು ಉಪಯೋಗಿಸುವುದು ನಿಯಮಕ್ಕೆ ವಿರೋಧವೆಂದು ತಿಳಿಸಲಾಗಿದೆ. ನಿಯಮದ ಪ್ರಕಾರ ವ್ಯಕ್ತಿಯೊಬ್ಬ ಇಂತಹ ಯಂತ್ರಗಳನ್ನು ಉಪಯೋಗಿಸುವ ಹಾಗಿಲ್ಲ.

Click to comment

Leave a Reply

Your email address will not be published. Required fields are marked *

Most Popular

To Top