National

ಬುರ್ಖಾ ನಿಷೇಧಕ್ಕೆ ಮುನ್ನುಡಿ?

ಭಾರತದಲ್ಲಿ ಬುಖರ್ಾದ ಕುರಿತಂತೆ ಚಚರ್ೆ ಆರಂಭವಾಗಿಬಿಟ್ಟಿದೆ. ವಾಸ್ತವವಾಗಿ ಇದು ಭಾರತದೊಳಗೇ ಹುಟ್ಟಿಕೊಂಡದ್ದೇನಲ್ಲ. ಶ್ರೀಲಂಕಾದ ಚಚರ್್ ಬ್ಲಾಸ್ಟ್ಗಳ ನಂತರ ಅಲ್ಲಿನ ಸಕರ್ಾರ ರಾಷ್ಟ್ರೀಯ ಸುರಕ್ಷತೆಯ ಹಿನ್ನೆಲೆಯಲ್ಲಿ ತೆಗೆದುಕೊಂಡ ನಿಧರ್ಾರ. ಆನಂತರವೇ ಭಾರತದಲ್ಲೂ ಈ ಕುರಿತಂತೆ ಚಚರ್ೆಯಾಗುತ್ತಿರೋದು. ಹಾಗೆ ನೋಡಿದರೆ ಜಾಗತಿಕವಾಗಿ ಮುಸಲ್ಮಾನ ಮಹಿಳೆಯರೇ ಬುಖರ್ಾದಿಂದ ಆಚೆ ಬರಲು ಪ್ರಯತ್ನಿಸುತ್ತಿರುವುದು ಕಣ್ಣಿಗೆ ರಾಚುತ್ತಿದೆ. ಸಾಮಾಜಿಕ ಜಾಲತಾಣಗಳ ತುಂಬೆಲ್ಲಾ ಇರಾನಿನಲ್ಲಿ ಬುಖರ್ಾ ತೆಗೆದೆಸೆಯುತ್ತಿರುವ ಮಹಿಳೆಯರೇ ಕಂಡು ಬರುತ್ತಾರೆ. ಆದರೆ ಈ ಬಾರಿ ಚಚರ್ೆಯಾಗುತ್ತಿರುವುದು ಧಾಮರ್ಿಕ ಕಾರಣವಾಗಿ ಅಲ್ಲ, ಬದಲಿಗೆ ರಾಷ್ಟ್ರೀಯ ಭದ್ರತೆ ಮತ್ತು ಸುರಕ್ಷತೆಯ ಕಾರಣಕ್ಕಾಗಿ. ಹೀಗಾಗಿ ಇದು ಕಾನೂನಿನ ಮೂಲಕ ತರಬೇಕಾದ್ದು ಅಲ್ಲವೇ ಅಲ್ಲ. ಪ್ರತಿಯೊಬ್ಬ ಜೀವಪರ ಮುಸಲ್ಮಾನನೂ ಭಾರತೀಯತೆಯ ಹಿನ್ನೆಲೆಯಲ್ಲಿ ಆಲೋಚಿಸಬೇಕಾಗಿರುವಂಥದ್ದು!


ಬುಖರ್ಾ ಹಾಕಿಕೊಂಡು ಮತಗಟ್ಟೆಗೆ ಮೋಸದಿಂದ ಮತಹಾಕಲು ಬರುವವರನ್ನು ಏಜೆಂಟುಗಳು ಕಂಡುಹಿಡಿಯಲಾರದೆ ತತ್ತರಿಸುತ್ತಾರೆ. ಬುಖರ್ಾ ತೆಗೆದು ಯಾರಾದರೂ ಪರೀಕ್ಷಿಸಲು ಹೊರಟರೆ ಅವರ ಕಥೆ ಮುಗಿದೇಹೋಯ್ತು! ಅದು ಧಾಮರ್ಿಕ ಆಘಾತವೆನಿಸಿಕೊಂಡುಬಿಡುತ್ತದೆ. ಮತದಾನದ ವಿಚಾರದಲ್ಲೇ ಹೀಗಿರುವಾಗ ಇನ್ನು ಸಹಜವಾಗಿ ರಸ್ತೆಯಲ್ಲಿ ಓಡಾಡುವವರನ್ನು ಪರೀಕ್ಷಿಸುವ ಸಾಧ್ಯತೆ ಉಂಟೇನು?! ಭಯೋತ್ಪಾದನೆಯಿಂದ ಪೀಡಿತವಾಗಿರುವ ರಾಷ್ಟ್ರವೊಂದರಲ್ಲಿ ಈತರಹದ ವ್ಯವಸ್ಥೆಗಳು ಉಳಿದುಕೊಂಡುಬಿಟ್ಟರೆ ರಕ್ಷಣೆ ಗಗನ ಕುಸುಮವೇ. ಭಾರತದ 90 ಪ್ರತಿಶತ ಮುಸಲ್ಮಾನರು ಈಗಲೂ ದೇಶಭಕ್ತರೇ ಆಗಿರುವುದರಿಂದ ಅವಘಡಗಳು ನಡೆಯುತ್ತಿಲ್ಲ. ಇಲ್ಲವಾದಲ್ಲಿ ಈ ಎಲ್ಲ ಕಾನೂನುಗಳ ನಡುವೆ ಬದುಕುವುದೇ ದುಸ್ಸಾಧ್ಯವಾಗಿತ್ತೇನೋ! ಉಳಿದ ಶೇಕಡಾ 10ರಷ್ಟು ಮತಾಂಧ ಮೂಲಭೂತವಾದಿಗಳು ತೆಪ್ಪಗೆ ಬಿದ್ದುಕೊಂಡಿರಲು ಭಾರತದ ಗುಪ್ತಚರ ವಿಭಾಗಗಳೂ ಕಾರಣ. ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟವಾದ ನಂತರ ಹೊರಬರುತ್ತಿರುವ ಮಾಹಿತಿಗಳು ಎಂಥವನಲ್ಲೂ ಗಾಬರಿ ಹುಟ್ಟಿಸಬಲ್ಲವು. ಅಲ್ಲಿ ಸ್ಫೋಟಕ್ಕೆ ಕಾರಣವಾದ ಕೆಲವರು ಭಾರತದ ಕೆಲವು ರಾಜ್ಯಗಳಿಗೆ ಭೇಟಿಕೊಟ್ಟು ಹೋಗಿದ್ದರೆಂಬ ಸುದ್ದಿಯಿದೆ. ಹಾಗೇನಾದರೂ ಆ ಸುದ್ದಿ ನಿಜವೇ ಆಗಿದ್ದಲ್ಲಿ ಇಂತಹ ಉಗ್ರರಿಂದ ಪ್ರೇರೇಪಣೆ ಪಡೆದ ನಂತರವೂ ಯಾವ ಕೃತ್ಯವನ್ನೂ ಮಾಡಲಾಗದಂತೆ ಈ ಭಯೋತ್ಪಾದಕರನ್ನು ಕಟ್ಟಿ ಹಾಕಿರುವುದಕ್ಕೆ ನಮ್ಮೆಲ್ಲ ರಕ್ಷಣಾ ಇಲಾಖೆಯವರಿಗೂ ಧನ್ಯವಾದಗಳನ್ನು ಹೇಳಲೇಬೇಕು.


ಇನ್ನೊಂದು ಗಂಭೀರವಾದ ಸಂಗತಿಯೆಂದರೆ ಈ ಘಟನೆಗೆ ಕಾರಣವಾದ ಭಯೋತ್ಪಾದಕನೊಬ್ಬ ಮೊಹಮ್ಮದ್ ಹಸ್ತೂನ್. ಆತ ಪುಲಸ್ತಿನಿ ಮಹೇಂದ್ರನ್ ಎಂಬ ಹಿಂದೂ ಹುಡುಗಿಯೊಬ್ಬಳ ಗಂಡ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಶ್ರೀಲಂಕಾದ ಸಂಪ್ರದಾಯಬದ್ಧ ಹಿಂದೂ ಕುಟುಂಬವೊಂದರಲ್ಲಿ ಹುಟ್ಟಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಪುಲಸ್ತಿನಿ ಮಹೇಂದ್ರನ್ ಅವಳನ್ನು ಅಬ್ದುಲ್ ರಜೀಕ್ ಎಂಬ ವ್ಯಕ್ತಿಯೊಬ್ಬ ತಲೆಕೆಡಿಸಿ ಅಪಹರಿಸಿಕೊಂಡು ಹೋಗಿದ್ದ. ಆಕೆಯನ್ನು ಇಸ್ಲಾಂ ಅಧ್ಯಯನಕ್ಕೆ ಪ್ರೇರೇಪಿಸಿ ಕೊನೆಗೊಂದು ದಿನ ಹಸ್ತೂನ್ನೊಂದಿಗೆ ಮದುವೆಯೂ ಮಾಡಿಕೊಟ್ಟಾಯ್ತು. ಇಸ್ಲಾಂನ ಚಹರೆಯ ಭಾಗದೊಂದಿಗೆ ಪ್ರೇಮ ಬೆಳೆಸಿಕೊಂಡಿದ್ದಂತಹ ಪುಲಸ್ತಿನಿ ಹಸ್ತೂನ್ನ ವಿವಾಹವಾದ ನಂತರ ಅದರ ಕರಾಳ ಮುಖಗಳನ್ನು ಹತ್ತಿರದಿಂದ ಕಂಡಳು. ಮಧ್ಯೆ ಒಂದು ದಿನ ತನ್ನ ತಾಯಿಗೆ ಕರೆ ಮಾಡಿ ತನ್ನ ಬದುಕು ಸುಗಮವಾಗಿಲ್ಲವೆಂದೂ, ತಾನು ಬದುಕಿನ ದೊಡ್ಡ ತಪ್ಪು ಮಾಡಿದೆನೆಂದು ಹೇಳಿಕೊಂಡಳು. ಅಷ್ಟು ಹೊತ್ತಿಗೆ ಕಾಲ ಮಿಂಚಿಹೋಗಿತ್ತು. ಲವ್ಜಿಹಾದ್ ಒಂದು ಹಿಂದೂ ಹೆಣ್ಣುಮಗಳ ಸುಂದರ ಬದುಕನ್ನು ನುಂಗಿಹಾಕಿತ್ತು. ಮೊನ್ನಿನ ಚಚರ್್ ಪ್ರಕರಣದಲ್ಲಿ ಬಾಂಬ್ ಸ್ಫೋಟಕ್ಕೆ ಪುಲಸ್ತಿನಿಯನ್ನು ಬಳಸಿಕೊಂಡಿದ್ದಾರೆ ಎಂಬುದು ಶ್ರೀಲಂಕಾದ ಗೂಢಚರ ವರದಿ.


ಈಗ ಹೇಳಿ ಲವ್ಜಿಹಾದ್ನ ವಿರುದ್ಧ ನಡೆದ ಹೋರಾಟ ವ್ಯರ್ಥವಾದುದೇ? ಈ ದೇಶದಲ್ಲೂ ಅನೇಕ ಹೆಣ್ಣುಮಕ್ಕಳನ್ನು ಪ್ರೇಮದ ನೆಪದಲ್ಲಿ ಹೊತ್ತೊಯ್ದೊ ಮತಾಂತರಗೊಳಿಸಿ ತಲೆಯೊಳಗೆ ವಿಷತುಂಬಿ ಅವರನ್ನು ದೇಶವಿರೋಧಿ ಕೃತ್ಯಕ್ಕೆ ಬಳಸಿಕೊಳ್ಳಲಾಗುತ್ತದಲ್ಲ, ಇದನ್ನು ಪ್ರೇಮವೆಂದು ಯಾವ ಪರಿಭಾಷೆಯಲ್ಲಿ ಕರೆಯಬೇಕೋ ದೇವರೇ ಬಲ್ಲ. ಇದು ತಾನಾಗಿಯೇ ನಿಲ್ಲಬೇಕು ಇಲ್ಲವೇ ಇದಕ್ಕಾಗಿ ಕಾನೂನು ಬರಬೇಕು. ಹಾಗೆಯೇ ಬುಖರ್ಾದ ಕುರಿತಂತೆಯೂ. ಇಸ್ಲಾಂ ಮಾತ್ರವಲ್ಲ, ಯಾವ ಮತ-ಪಂಥಗಳಾದರೂ ಸರಿ ರಾಷ್ಟ್ರದ ಭದ್ರತೆ ಮತ್ತು ಸುರಕ್ಷತೆಯ ವಿಚಾರ ಬಂದಾಗ ಮುಲಾಜಿಟ್ಟುಕೊಳ್ಳುವಂತೆಯೇ ಇಲ್ಲ. ಮಥುರಾದಲ್ಲಿ ಕೃಷ್ಣ ಜನ್ಮಸ್ಥಾನದ ಮಂದಿರವಿದೆ. ಅದಕ್ಕೆ ಹೊಂದಿಕೊಂಡೇ ಮಸೀದಿ. ಆಕ್ರಮಣಕಾರಿಗಳ ಕ್ರೌರ್ಯದ ಸ್ಪಷ್ಟ ನಿದರ್ಶನ ಇದು. ನಮ್ಮದ್ದೇ ನೆಲದಲ್ಲಿ ನಮ್ಮದ್ದೇ ಮಂದಿರವನ್ನು ಮಸೀದಿಯೊಳಗೆ ಹಂಚಿಕೊಳ್ಳಬೇಕಾದ ದುದರ್ೈವ ಮುಂದಿನ ಪೀಳಿಗೆಗೆ ಇರದಿದ್ದರೆ ಒಳಿತು. ಆದರೆ ಪ್ರಶ್ನೆ ಅದಲ್ಲ. ಮಥುರಾ ದೇವಸ್ಥಾನಕ್ಕೆ ಹೋಗುವಾಗ ನಿಮ್ಮನ್ನು ಅಡಿಯಿಂದ ಮುಡಿಯವರೆಗೂ ಜಾಲಾಡಿಬಿಡುತ್ತಾರೆ. ನೀವು ಮೊಬೈಲ್ ಫೋನು ತೆಗೆದುಕೊಂಡು ಹೋಗುವುದಿರಲಿ ಜೇಬಿನೊಳಗೆ ಹೆಚ್ಚುವರಿ ಕೀಲಿಕೈಯನ್ನೂ ಇಟ್ಟುಕೊಳ್ಳುವಂತಿಲ್ಲ. ನಮ್ಮ ದೇವಸ್ಥಾನಕ್ಕೆ ಹೋಗಬೇಕಾದಾಗ ನಾವುಗಳೇ ಹೀಗೆ ಹೋಗಬೇಕಾ? ಪ್ರಶ್ನೆ ಸಮರ್ಪಕವಾದ್ದಾದರೂ ಸುರಕ್ಷತೆಯ ವಿಚಾರ ಬಂದಾಗ ಅತ್ಯಗತ್ಯ. ಗೋವನ್ನು ಪ್ರತಿಯೊಬ್ಬ ಹಿಂದುವೂ ದೇವರೆಂದೇ ಪೂಜಿಸುತ್ತಾನೆ. ಸಂಪ್ರದಾಯದ ದೃಷ್ಟಿಯಿಂದ ಅದಕ್ಕೊಂದು ಮೌಲ್ಯವಿದೆ. ಆದರೆ ಹಿಂದೂಗಳನ್ನು ಅವಮಾನಿಸಲೆಂದೇ ಕೆಲವರು ಅದನ್ನು ತಿನ್ನುವುದನ್ನು ರೂಢಿಯಾಗಿಸಿಕೊಂಡಿದ್ದಾರೆ. ಪುಲ್ವಾಮಾ ದಾಳಿಕೋರನಂತೂ ಗೋಮೂತ್ರ ಕುಡಿಯುವವರನ್ನು ನಾಶ ಮಾಡಲೆಂದೇ ಬಂದಿದ್ದೇನೆ ಎಂದು ಹೇಳಿಕೊಳ್ಳುತ್ತಾನೆ. ಏನಿದರರ್ಥ? ಅನ್ಯರ ಸಂಪ್ರದಾಯಗಳಿಗೆ ಗೌರವ ಕೊಡದಿರುವುದು ಮತ್ತು ತಮ್ಮ ಸಂಪ್ರದಾಯವನ್ನು ಉಳಿಸಿಕೊಳ್ಳಲಿಕ್ಕಾಗಿ ಸಾವಿರಾರು ಜನರ ಮಾರಣಹೋಮ ನಡೆಸುವುದು! ಅನಕ್ಷರಸ್ಥರು, ಅಜ್ಞಾನಿಗಳು ಹೀಗೆ ಮಾತನಾಡಿದರೆ ಒಪ್ಪಿಕೊಳ್ಳಬಹುದೇನೋ. ಜಾವೇದ್ ಅಖ್ತರ್ನಂತಹ ಗೀತ ರಚನಾಕಾರರು ‘ಬುಖರ್ಾ ತೆಗೆಯುವುದಿದ್ದರೆ ಹಿಂದೂಗಳು ಹಾಕುವ ಪರದೆಯನ್ನೂ ತೆಗೆಸಬೇಕು’ ಎಂದಿರುವುದು ರಕ್ತದಲ್ಲಿ ಹರಿಯುವ ಮತಾಂಧತೆಗೆ ಹಿಡಿದ ಕೈಗನ್ನಡಿ. ಉತ್ತರ ಭಾರತದ ಮಹಿಳೆಯರು ಮುಖದ ಮೇಲೆ ಇಳಿ ಬಿಟ್ಟುಕೊಳ್ಳುವ ಪರದೆ ಬುಖರ್ಾದಂತೆ ಇಡಿಯ ಮೈಯನ್ನು ಮುಚ್ಚವಂಥದ್ದಲ್ಲ. ಈ ಪರದೆ ತೊಟ್ಟು ಶಾಲೆ-ಕಾಲೇಜಿಗೆ ಹೆಣ್ಣುಮಕ್ಕಳೂ ಬರುವುದಿಲ್ಲ. ಅಕಸ್ಮಾತ್ ಸುರಕ್ಷತೆಯ ದೃಷ್ಟಿಯಿಂದ ಪರದೆ ತೆಗೆದು ಮುಖತೋರಿಸಿ ಎಂದುಬಿಟ್ಟರು ಹಾಗೆ ಹೇಳಿದವನನ್ನು ಹೊಡೆದು ಕೊಲ್ಲಲು ಹಿಂದೂ ಸಮಾಜದ ತರುಣರೂ ನಿಲ್ಲುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಪರದೆ ಧರಿಸಿದ ಹೆಣ್ಣುಮಗಳೊಬ್ಬಳು ಬಾಂಬು ಸಿಡಿಸಿದ ಘಟನೆ ಇದುವರೆಗೂ ವರದಿಯಾಗಿಲ್ಲ. ಇಷ್ಟಾದರೂ ಕೆಲವು ಬುದ್ಧಿವಂತರಿಗೆ ಬುಖರ್ಾವನ್ನು ಪರದೆಗೆ ಹೋಲಿಸುವ ಚಟ ಇದೆಯೆಂದರೆ ಯಾರು ತಾನೇ ಏನು ಮಾಡಲು ಸಾಧ್ಯ.

ಮುಸಲ್ಮಾನ ಸಮಾಜದ ಪ್ರಜ್ಞಾವಂತರು ಎಚ್ಚೆತ್ತುಕೊಂಡು ಇದಕ್ಕೊಂದು ಪರಿಹಾರ ಹುಡುಕಬೇಕು. ಸಕರ್ಾರದ ಕಾನೂನುಗಳಲ್ಲ, ಬದಲಿಗೆ ಸ್ವಯಂ ಪ್ರೇರಣೆಯಿಂದ ಇವೆಲ್ಲವೂ ಜಾರಿಗೆ ಬರಬೇಕು. ಏಕೆಂದರೆ ಭಯೋತ್ಪಾದಕರ ದಾಳಿಯಲ್ಲಿ ಸಾಯುವುದು ಹಿಂದೂಗಳು ಮಾತ್ರ ಅಲ್ಲ ಎಂಬುದನ್ನು ನೆನಪಿಡಬೇಕು ಮತ್ತು ಕೊಲ್ಲುವುದಲ್ಲ, ಕಾಯುವುದು ಭಗವಂತನ ಪ್ರೀತಿಗೆ ಹತ್ತಿರವೆಂಬುದನ್ನು ಯಾರೂ ಮರೆಯಬಾರದು.

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top