National

ಬಿಜೆಪಿ ಅಧಿಕಾರಕ್ಕೆ ಬಂದರೆ ಅಲ್ಪ ಸಂಖ್ಯಾತರು ಬದುಕೋದು ಕಷ್ಟವಾ?

ನರೇಂದ್ರಮೋದಿಯವರನ್ನು ಒಡೆದು ಆಳುವ ಮನಸ್ಥಿತಿಯವರು ಎಂದು ಕಾಂಗ್ರೆಸ್ಸು ಯಾವಾಗಲೂ ಆರೋಪಿಸುತ್ತಿತ್ತು. ಹಿಂದೂ-ಮುಸಲ್ಮಾನರ ನಡುವೆ ಭೇದದ ಬೀಜ ಬಿತ್ತಿ ಅದರ ಆಧಾರದ ಮೇಲೆ ಚುನಾವಣೆ ಗೆಲ್ಲುವವರು ಅನ್ನೋದು ಅವರ ಅಳಲಾಗಿತ್ತು. ಆದರೆ ವಾಸ್ತವವಾಗಿ ಮೇಲ್ನೋಟಕ್ಕೆ ಅದು ಒಡೆದು ಆಳುವಂತೆ ಕಂಡರೂ ಒಳತೋಟಿಯಲ್ಲಿ ಅದು ಜಾತಿ-ಮತ-ಪಂಥಗಳನ್ನೆಲ್ಲಾ ಮರೆಸಿ ಹಿಂದುತ್ವದ ಛತ್ರಛಾಯೆಯಡಿ ಎಲ್ಲರನ್ನೂ ಒಗ್ಗೂಡಿಸಿ ಮುಂದೊಯ್ಯುವ ಪ್ರಯತ್ನವಾಗಿತ್ತು. ಈಗಂತೂ ಎಲ್ಲರನ್ನೂ ಜೊತೆಯಲ್ಲಿ ತೆಗೆದುಕೊಂಡು ಹೋಗುವ ಮಾತನಾಡುತ್ತಿರುವುದು ನರೇಂದ್ರ ಮೋದಿಯೇ. ನರೇಂದ್ರಮೋದಿಯನ್ನು ಬೆದರು ಬೊಂಬೆಯಾಗಿಸಿ ಮುಸಲ್ಮಾನ-ಕ್ರಿಶ್ಚಿಯನ್ನರ ವೋಟು ಕಿತ್ತು ಗೆಲುವು ದಾಖಲಿಸುವ ಪ್ರಯತ್ನ ಮಾಡುತ್ತಿರುವುದು ಕಾಂಗ್ರೆಸ್ಸು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಹಿಂದೂಗಳನ್ನು ದೆವ್ವವಾಗಿ ತೋರಿಸಿ ಮುಸಲ್ಮಾನರನ್ನು ಒಗ್ಗೂಡಿಸುವ ಪ್ರಯತ್ನ ಕಾಂಗ್ರೆಸ್ಸಿನದ್ದು. ಇತ್ತ ಹಿಂದೂಗಳನ್ನು ಚೂರು-ಚೂರಾಗಿಸಿ, ಜಾತಿ-ಜಾತಿಗಳ ನಡುವಿನ ಕಂದಕಗಳನ್ನು ವಿಸ್ತಾರಗೊಳಿಸಿ, ಹಿಂದುತ್ವವೆಂಬ ಅಭಿಮಾನದಿಂದ ಅವರು ದೂರವಿರುವಂತೆ ಮಾಡುವ ನಿರುತ ಪ್ರಯತ್ನವನ್ನು ಸಿದ್ದರಾಮಯ್ಯನವರಂತು ಮಾಡುತ್ತಲೇ ಇದ್ದಾರೆ. ಥಡರ್್ ಪಾಟರ್ಿ ಕ್ಯಾಂಪೈನಿನ ನೆಪದಲ್ಲಿ ಮಂಗಳೂರಿನಲ್ಲಿ ಓಡಾಡುವಾಗ ಕ್ರಿಶ್ಚಿಯನ್ನರನ್ನು ಬಿಜೆಪಿಯ ವಿರುದ್ಧ ಎತ್ತಿಕಟ್ಟಲು ಕಾಂಗ್ರೆಸ್ಸು ಹರಸಾಹಸ ಮಾಡುತ್ತಿರುವುದು ಕಣ್ಣಿಗೆ ಬಿತ್ತು. ಬಿಜೆಪಿ ಅಧಿಕಾರಕ್ಕೆ ಬಂದರೆ ಚಚರ್ುಗಳು ಧರಾಶಾಯಿಯಾಗುತ್ತವೆ, ಮತಾಂತರಿತ ಕ್ರಿಶ್ಚಿಯನ್ನರನ್ನು ಮರಳಿ ಕರೆದೊಯ್ಯಲಾಗುತ್ತದೆ, ಬೈಬಲನ್ನು ಸುಡಲಾಗುತ್ತದೆ ಹೀಗೆ ನೂರೆಂಟು ಬಗೆಯ ಅಪಪ್ರಚಾರಗಳು. ಆದರೆ ಬಹುತೇಕರಿಗೆ ಗೊತ್ತೇ ಇಲ್ಲದ ಕೆಲವು ಸಂಗತಿಗಳಿವೆ.

ಇರಾಕಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಕೇರಳದ 46 ನಸರ್ುಗಳನ್ನು ಅಲ್ಲಿನ ಐಸಿಸ್ ಉಗ್ರಗಾಮಿಗಳು ಅಪಹರಿಸಿದ್ದರಲ್ಲಾ ಆಗ ಅವರನ್ನು ಬಿಡಿಸಿಕೊಂಡು ಬರುವಲ್ಲಿ ಸಾಹಸಪೂರ್ಣ ಪ್ರಯತ್ನ ಮಾಡಿದ್ದು ಈಗಿನ ಎನ್ಡಿಎ ಸಕರ್ಾರವೇ. ವಿದೇಶಗಳಲ್ಲಿ ಉಗ್ರಗಾಮಿಗಳ ಕೈಲಿ ಹೀಗೆ ಬಂಧಿತರಾಗಿರುವುದು ಬಲು ಅಸಹ್ಯಕರ ಸಂಗತಿ. 46 ಜನ 23 ದಿನಗಳ ಕಾಲ ಐಸಿಸ್ ಉಗ್ರಗಾಮಿಗಳ ಬಂಧಿಗಳಾಗಿ ಊಟಕ್ಕೂ ಪರದಾಡುತ್ತಾ ಭವಿಷ್ಯವೇನೆಂದರಿಯದೆ ಕಗ್ಗತ್ತಲ ಕೂಪದಲ್ಲಿ ಜೀವಿಸುವುದನ್ನು ಊಹಿಸಲೂ ಸಾಧ್ಯವಿಲ್ಲ. ಭಾರತದ ವಿದೇಶಾಂಗ ಸಚಿವಾಲಯ ಇರಾಕಿನ ಸಕರ್ಾರದೊಂದಿಗೆ ಮತ್ತು ಐಸಿಸ್ ಅನ್ನು ಪ್ರಭಾವಿಸಬಲ್ಲ ಮುಸ್ಲೀಂ ರಾಷ್ಟ್ರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಐಸಿಸ್ನ ಮೇಲೆ ಒತ್ತಡವನ್ನು ಹೇರಿ ನಸರ್ುಗಳನ್ನು ಬಿಡಿಸಿಕೊಂಡು ಬಂದಿದ್ದು ಕ್ರಿಶ್ಚಿಯನ್ನರು ಮರೆತೇ ಹೋಗಿಬಿಟ್ಟರಾ? ಆಮೇಲೆ ಬಂದ ವರದಿಗಳ ಪ್ರಕಾರ ಸ್ವತಃ ಐಸಿಸ್ನ ಜಾಲದೊಂದಿಗೆ ಪರೋಕ್ಷ ಸಂಪರ್ಕವನ್ನು ಏರ್ಪಡಿಸಲು ಭಾರತೀಯ ಸಚಿವಾಲಯ ಪ್ರಯತ್ನ ಪಟ್ಟು ಅದು ಕೈಕೊಟ್ಟರೆ ಅನ್ಯ ನೆಲದಲ್ಲಿಯೇ ಅವರ ಮೇಲೆ ಆಕ್ರಮಣ ಮಾಡಬಹುದಾಗಿರುವಂತಹ ಯೋಜನೆಗಳನ್ನು ರೂಪಿಸಿಕೊಂಡಿತ್ತು. ಕೊನೆಗೂ ಪ್ರಮುಖ ಭಾರತೀಯ ಉದ್ಯಮಿಗಳನ್ನೆಲ್ಲಾ ಈ ಕೆಲಸಕ್ಕೆ ಜೋಡಿಸಿ 46 ಜನರನ್ನು ಸುರಕ್ಷಿತವಾಗಿ ಕೇರಳಕ್ಕೆ ತಂದೊಪ್ಪಿಸಲಾಯಿತು.

ಬಂಗಾಳದ ಹೆಣ್ಣುಮಗಳು ಜುದಿತ್ ಡಿಸೋಜಾ ಆಘಾಖಾನ್ ಫೌಂಡೇಶನ್ನ ಪರವಾಗಿ ಅಫ್ಘಾನಿಸ್ತಾನದಲ್ಲಿ ಕೆಲಸ ಮಾಡುತ್ತಿದ್ದಳು. ಇದ್ದಕ್ಕಿದ್ದಂತೆ ಒಂದು ದಿನ ಅಫ್ಘಾನಿಸ್ತಾನದ ಕಾಬುಲಿನಿಂದ ಭಯೋತ್ಪಾದಕರು ಅವಳನ್ನು ಅಪಹರಿಸಿಕೊಂಡು ಹೋಗಿಬಿಟ್ಟರು. ಭಾರತೀಯ ಸಾರ್ವಭೌಮತೆಗೆ ಇದು ಅವಮಾನಕರ ಸಂಗತಿಯಾಗಿತ್ತು. ತನ್ನ ಪ್ರಜೆಯನ್ನು ಬಿಡಿಸಿಕೊಂಡು ಬರಲೇಬೇಕೆಂಬ ಹಠದಲ್ಲಿದ್ದ ಮೋದಿ ಸಕರ್ಾರ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಜುದಿತ್ಳನ್ನು ಬಿಡಿಸಿಕೊಂಡು ಬರುವಲ್ಲಿ ಬಲು ವಿಶಿಷ್ಟವಾದ ಪ್ರಯತ್ನ ಹಾಕಿದರು. ಅಫ್ಘಾನಿಸ್ತಾನದ ಭಾರತದ ರಾಯಭಾರಿ ಮನ್ಪ್ರೀತ್ ವೋರಾ ಈ ಸಂದರ್ಭದಲ್ಲಿ ಮಾಡಿದ ಪ್ರಯತ್ನ ಒಂದು ಸಿನಿಮಾಕ್ಕೆ ಆಗುವಷ್ಟೇ ಸರಕು. ಇತ್ತ ಜುದಿತ್ಳ ಮನೆಯವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಆಕೆಯನ್ನು ಬಿಡಿಸಿಕೊಂಡು ಬರುವ ಭರವಸೆ ಕೊಟ್ಟಿದ್ದ ಸಕರ್ಾರ 6 ವಾರಗಳ ನಂತರ ಅವಳನ್ನು ಮನೆ ಸೇರಿಸಿದಾಗ ಇಲ್ಲೆಲ್ಲಾ ಸಂಭ್ರಮದ ಹಬ್ಬ. ಜುದಿತ್ಳ ಅಣ್ಣ ಜೆರಾಮ್ ಕೇಂದ್ರ ಸಕರ್ಾರದ ಪ್ರಯತ್ನವನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದರು.

ಫಾದರ್ ಅಲೆಕ್ಸಿಸ್ ಪ್ರೇಮಕುಮಾರ್ ಅಫ್ಘಾನಿಸ್ತಾನದ ಹೇರತ್ನಿಂದ ಅಪಹರಣಗೊಂಡಾಗ ಅವರನ್ನು ಬಿಡಿಸಿಕೊಂಡು ಬರುವಲ್ಲಿ ಮೋದಿ ಮಾಡಿದ ಸಾಹಸ ಪೂರ್ಣ ಪ್ರಯತ್ನ ಯಾರಿಗೆ ಗೊತ್ತಿಲ್ಲವಾದರೂ ಅಲೆಕ್ಸಿಸ್ಗೆ ಚೆನ್ನಾಗಿ ಗೊತ್ತಿತ್ತು. ಅಪಹರಣಕಾರರಿಂದ ಮಾನಸಿಕವಾಗಿ ಹಲ್ಲೆಗೊಳಗಾಗಿದ್ದ ಅಲೆಕ್ಸಿಸ್ ದೆಹಲಿ ಏರ್ಪೋಟರ್ಿಗೆ ಕಾಲಿಟ್ಟೊಡನೆ ‘ಭಗವಂತನಿಗೆ ಮೊದಲ ಧನ್ಯವಾದಗಳು, ಆನಂತರ ನನ್ನ ಕೃತಙ್ಞತೆ ಸಲ್ಲುವುದು ಈ ದೇಶದ ಪ್ರಧಾನಿ ನರೇಂದ್ರಮೋದಿಯವರಿಗೇ’ ಎಂದಿದ್ದರು. ಅಪಹರಣದ 8 ತಿಂಗಳಲ್ಲಿ ನರೇಂದ್ರಮೋದಿ ಸ್ವತಃ ಅನೇಕ ರಾಷ್ಟ್ರಗಳ ಪ್ರಧಾನಮಂತ್ರಿಗಳೊಂದಿಗೆ ಮಾತನಾಡಿ ಕೆಲವೊಮ್ಮೆ ಅಪಹರಣಕಾರರ ಬೇಡಿಕೆಗಳನ್ನೂ ಪೂರೈಸಿ ಅಲೆಕ್ಸಿಸ್ರನ್ನು ಬಿಡಿಸಿ ತಂದಿದ್ದರು. ದೇಶದ ಯಾವುದೇ ಚಚರ್ಾದರೂ ಈ ವಿಚಾರವನ್ನು ಕ್ರಿಶ್ಚಿಯನ್ನರಿಗೆ ಹೇಳುತ್ತದೇನು?

ಫಾದರ್ ಟಾಮ್ ಯಮನ್ನಿಂದ ಅಪಹರಣಕ್ಕೊಳಗಾದಾಗ ಅವರನ್ನು ಬಿಡಿಸಿಕೊಂಡು ಬರಲಿಕ್ಕೆ ಒಮನ್ನಿನ ರಾಜನ ಮೂಲಕ ಮಧ್ಯಸ್ಥಿಕೆ ಮಾಡಿಸಿ 18 ತಿಂಗಳ ಪ್ರಯಾಸದ ನಂತರ ಬಿಡಿಸಿಕೊಂಡು ಬಂದದ್ದು ನರೇಂದ್ರಮೋದಿಯವರೇ. ಅಂದು ನರೇಂದ್ರಮೋದಿಯವರ ಪ್ರಯಾಸವನ್ನು ಹತ್ತಿರದಿಂದ ಗಮನಿಸಿದ್ದ ಕ್ಯಾಥೋಲಿಕ್ ಬಿಷಪ್ ಕಾನ್ಫರೆನ್ಸ್ ಆಫ್ ಇಂಡಿಯಾದ ಅಧ್ಯಕ್ಷರು, ಸೈರೋ ಮಲಂಕಾರಾ ಚಚರ್್ನ ಆಚರ್್ ಬಿಷಪ್ಗಳು, ಬಿಷಪ್ ಥಿಯೋಡರ್ ಮಸ್ಕರೆನಾಸ್ ಮುಂತಾದವರೆಲ್ಲಾ ಮುಕ್ತ ಕಂಠದಿಂದ ಹೊಗಳಿದ್ದರು. ಆದರೆ ಅದು ತಾತ್ಕಾಲಿಕವಾಗಿಯಷ್ಟೇ ಉಳಿಯಿತು. ಇದೇ ಚಚರ್ಿನ ಮುಂದಾಳುಗಳು ಗುಜರಾತಿನ ಚುನಾವಣೆಯ ಹೊತ್ತಲ್ಲಿ ಕಾಂಗ್ರೆಸ್ಸನ್ನು ಬೆಂಬಲಿಸಿರೆಂಬ ಸೂಚನೆಯನ್ನೇ ಕ್ರಿಶ್ಚಿಯನ್ನರಿಗೆ ಕೊಟ್ಟುಬಿಟ್ಟರು. ಕನರ್ಾಟಕದಲ್ಲಿ ಅತಿ ಹೆಚ್ಚು ಕ್ರಿಶ್ಚಿಯನ್ನರನ್ನು ಹೊಂದಿರುವ ಚಚರ್ುಗಳು ಕಾಂಗ್ರೆಸ್ಸನ್ನು ಬೆಂಬಲಿಸುವಂತೆ ಕರೆ ನೀಡುತ್ತಿದೆ. ಪ್ರಜ್ಞಾವಂತ ಕ್ರಿಶ್ಚಿಯನ್ನರು ಇದನ್ನೆ ಒಪ್ಪುವಂತೆ ಕಾಣುತ್ತಿರುವುದು ದುದರ್ೈವ. ಮೋದಿಯನ್ನು ಬೆದರು ಬೊಂಬೆಯಾಗಿಸಿ ವೋಟುಗಳಿಸುವ ಕಾಂಗ್ರೆಸ್ಸಿನ ಈ ಹುನ್ನಾರ ಬೌದ್ಧಿಕ ದಿವಾಳಿತನದ ಸೂಚನೆಯೇ ಹೊರತು ಮತ್ತಿನ್ನೇನೂ ಅಲ್ಲ.

ಮುಸಲ್ಮಾನರ ಕಥೆಯೂ ಇದಕ್ಕಿಂದ ಭಿನ್ನವಲ್ಲ. ಬಿಜೆಪಿ ಬಂದರೆ ದಂಗೆಗಳೇ ಆಗಿಬಿಡುತ್ತವೆ ಎಂದು ಹೆದರಿಸುತ್ತಾ ವೋಟು ಗಳಿಸುವುದೇ ಕಾಂಗ್ರೆಸ್ಸಿನ ಜಾಯಮಾನ. ಆದರೆ ನರೇಂದ್ರಮೋದಿಯವರು ಬಂದಾಗಿನಿಂದ ದೇಶಾದ್ಯಂತ ಒಂದೇ ಒಂದು ಹಿಂದು-ಮುಸ್ಲೀಂ ದಂಗೆಗಳು ನಡೆದಿಲ್ಲವೆಂಬುದೇ ಕಾಂಗ್ರೆಸ್ಸಿಗೆ ನುಂಗಲಾರದ ಬಿಸಿ ತುಪ್ಪ. ಮಮತಾ ಬ್ಯಾನಜರ್ಿಯ ಬಂಗಾಳದಲ್ಲಿ ದಿನ ಬೆಳಗಾದರೆ ಹಿಂದೂ-ಮುಸ್ಲಿಂ ಗಲಾಟೆಗಳು. ಕೇರಳದಲ್ಲಿ ಹಿಂದೂ-ಮುಸ್ಲೀಂ ಕಗ್ಗೊಲೆಗಳೇ ನಡೆಯುತ್ತಿವೆ. ಕನರ್ಾಟಕದಲ್ಲಿ ಸಿದ್ದರಾಮಯ್ಯನವರ ಮೂಗಿನಡಿಯಲ್ಲಿ 30ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಕೊಲೆಯಾಗಿಹೋಯ್ತು. ಯೋಗಿ ಬಂದಾಗಿನಿಂದ ಉತ್ತರ ಪ್ರದೇಶದಲ್ಲಿ ದಂಗೆಯಿಲ್ಲ. ಮಹಾರಾಷ್ಟ್ರ, ಹರಿಯಾಣ, ಮಧ್ಯಪ್ರದೇಶ, ಗುಜರಾತು, ರಾಜಸ್ಥಾನ ಎಲ್ಲೆಲ್ಲೂ ಎರಡೂ ಸಮಾಜ ಶಾಂತಿಯುತವಾಗಿ ಬದುಕಿದೆ. ಅದರರ್ಥ ಸ್ಪಷ್ಟ. ಕಾಂಗ್ರೆಸ್ಸು ದಂಗೆಗಳನ್ನು ಪ್ರಾಯೋಜಿಸಿಯೇ ಮುಸಲ್ಮಾನರಲ್ಲಿನ ಹೆದರಿಕೆಯನ್ನು ಜೀವಂತವಾಗಿರಿಸುತ್ತದೆ. ಹಿಂದುಗಳ ಹೆದರಿಕೆಯನ್ನು ಅವರ ಮನಸ್ಸಿನೊಳಗಿಟ್ಟೇ ವೋಟು ಗಳಿಸುವ ಅದರ ತಂತ್ರಗಾರಿಕೆ ನೆಹರೂ ಕಾಲದಿಂದಲೂ ನಡೆದುಕೊಂಡು ಬಂದಿದೆ. ಹಾಗೆ ನೋಡಿದರೆ ಮುಸಲ್ಮಾನರಿಗೆ ಅತ್ಯಂತ ಹೆಚ್ಚು ಸವಲತ್ತು ಕೊಟ್ಟಿರೋದೇ ನರೇಂದ್ರಮೋದಿ. ಆದರೆ ಈ ಎಲ್ಲಾ ಸವಲತ್ತುಗಳು ಪ್ರಗತಿಶೀಲವಾದವೇ ಹೊರತು ಗುಲಾಮರಾಗಿಸುವಂಥದ್ದಲ್ಲ. ಹಜ್ ಯಾತ್ರೆಗೆ ನೀಡುತ್ತಿದ್ದ ಸಬ್ಸಿಡಿಯನ್ನು ಪೂರ್ಣ ತಡೆದು ಮುಸಲ್ಮಾನರನ್ನು ಸ್ವಾಭಿಮಾನಿಗಳಾಗಿಸಿದ್ದು ನರೇಂದ್ರಮೋದಿಯೇ. ಇಷ್ಟಕ್ಕೂ ಹಜ್ ಯಾತ್ರೆ ಸ್ವಂತ ಹಣದಲ್ಲಿಯೇ ಮಾಡಬೇಕೆಂಬ ನಿಯಮವೇ ಇದೆ. ಇದನ್ನರಿತ ಮೋದಿ ಹಜ್ ಯಾತ್ರೆಗೆ ಮೀಸಲಿಟ್ಟ ಹಣವನ್ನು ತೆಗೆದು ಮುಸಲ್ಮಾನ ಹೆಣ್ಣುಮಕ್ಕಳ ಅಧ್ಯಯನಕ್ಕೆಂದು ಅದನ್ನು ಉಪಯೋಗಿಸುವ ಆಲೋಚನೆ ಮಾಡಿದರು. ಮುಸ್ಲೀಂ ಹೆಣ್ಣುಮಕ್ಕಳನ್ನು ಭವಿಷ್ಯದಲ್ಲಿ ಸ್ವಾವಲಂಬಿಯಾಗಿಸುವ ಬಲು ಸುಂದರವಾದ ಪ್ರಯತ್ನವಿದು. ಈ ಹೆಣ್ಣುಮಕ್ಕಳನ್ನು ಟ್ರಿಪಲ್ ತಲಾಖಿನಿಂದ ರಕ್ಷಿಸುವ ಪ್ರಯತ್ನ ಮಾಡಿದ್ದು ನರೇಂದ್ರಮೋದಿಯವರೇ. ಮದರಸಾಗಳಲ್ಲಿ ಬರಿಯ ಧಾಮರ್ಿಕ ಶಿಕ್ಷಣ ಕೊಟ್ಟು ಮುಗಿಸುತ್ತಿದ್ದ ಪದ್ಧತಿಯನ್ನು ಪರಿಷ್ಕರಣೆಗೊಳಿಸಿ ಅಲ್ಲಿಯೂ ಗಣಿತ-ವಿಜ್ಞಾನಗಳು ಬೋಧಿಸುವಂತಾಗಬೇಕೆಂಬ ಆಲೋಚನೆಗೆ ನೀರೆರೆದವರು ಮೋದಿಯೇ. ಅವರ ಉದ್ದೇಶ ಮುಸಲ್ಮಾನರನ್ನು ಮುಖ್ಯ ವಾಹಿನಿಗೆ ತಂದು ಅವರನ್ನು ರಾಷ್ಟ್ರದ ಅಭಿವೃದ್ಧಿಯ ಪಾಲುದಾರರನ್ನಾಗಿಸುವುದು. ಕಾಂಗ್ರೆಸ್ಸಿನದ್ದು ಹಾಗಲ್ಲ. ಮುಸಲ್ಮಾನರನ್ನು ಸದಾ ಬೇಡುವ ಸ್ಥಿತಿಯಲ್ಲಿರಿಸುವುದೇ ಅವರ ಮೂಲ ಗುರಿ. ಜಮೀರ್ ಅಹ್ಮದ್ ತನ್ನ ಜನರ ಮುಂದೆ ಮಾತನಾಡುವುದನ್ನು ನೀವು ಕೇಳಬೇಕು. ಅದು ಪ್ರಗತಿಪರ ಚಿಂತನೆಯಂತು ಅಲ್ಲವೇ ಅಲ್ಲ. ಮುಸಲ್ಮಾನರನ್ನು ದಿಕ್ಸೂಚಿ ರಹಿತ ಗತಿ ವಿಹೀನ ಸಮಾಜವಾಗಿ ಮಾಡುವ ಹುನ್ನಾರ. ಕಳೆದ 70 ವರ್ಷಗಳಿಂದ ಮುಸ್ಲೀಮರು ಮತ್ತು ಕ್ರಿಶ್ಚಿಯನ್ನರನ್ನು ಋಣಾತ್ಮಕ ಮತದಾನಕ್ಕೆ ಪ್ರೇರೇಪಿಸುತ್ತಿರುವುದು ಕಾಂಗ್ರೆಸ್ಸೇ. ಗೆಲ್ಲಬೇಕೆಂದು ವೋಟು ಹಾಕುವುದು ಧನಾತ್ಮಕವಾದರೆ ಮತ್ತೊಬ್ಬರನ್ನು ಸೋಲಿಸಬೇಕೆಂದು ವೋಟು ಹಾಕುವುದು ಋಣಾತ್ಮಕ. ಈ ಬಗೆಯ ಮತದಾನ ಪ್ರಗತಿ ಪೂರಕವಲ್ಲ. ಹೀಗಾಗಿಯೇ ಮುಸಲ್ಮಾನ ಸಮಾಜ 70 ವರ್ಷ ಕಳೆದರೂ ಇದ್ದಲ್ಲಿಯೇ ಇದೆ. ಕಾಂಗ್ರೆಸ್ಸು ದಲಿತರನ್ನು ಹಾಗೆಯೇ ಬಳಸಿಕೊಂಡಿದೆ. ಇತ್ತೀಚೆಗೆ ಅವರು ಸ್ವಲ್ಪ ಬುದ್ಧಿವಂತರಾಗುತ್ತಿರುವುದರಿಂದ ಪ್ರಗತಿಯ ಮೆಟ್ಟಿಲನ್ನು ಏರುತ್ತಿದ್ದಾರೆ. ಈ ಬಾರಿ ಸಿದ್ದರಾಮಯ್ಯ ಲಿಂಗಾಯತರನ್ನು ಋಣಾತ್ಮಕ ಮತದಾನಕ್ಕೆ ಪ್ರೇರೇಪಿಸುತ್ತಿದ್ದಾರೆ. ಇಂತ ವಿಭಜಕ ಶಕ್ತಿಗಳಿಂದ ದೂರವನ್ನು ಕಾಯ್ದುಕೊಳ್ಳಲಿಲ್ಲವೆಂದರೆ ರಾಷ್ಟ್ರವನ್ನು ಉಳಿಸಿಕೊಳ್ಳುವುದು ಬಲು ಕಷ್ಟ. ಮೇ 12 ಎಚ್ಚರಿಕೆಯಿಂದ ಮತದಾನ ಮಾಡಬೇಕಾದ ದಿನ. ಬನ್ನಿ ರಾಷ್ಟ್ರವನ್ನು ಗೆಲ್ಲಿಸೋಣ.

Click to comment

Leave a Reply

Your email address will not be published. Required fields are marked *

Most Popular

To Top