National

ಬಿಜೆಪಿಗೆ ಒಂದೋ ಅವಜ್ಞೆ, ಇಲ್ಲವೇ ಉಡಾಫೆ!

ನಿನ್ನೆಯೂ ಅರ್ನಬ್ ಗೋಸ್ವಾಮಿಯ ಜಾಮೀನು ಅಜರ್ಿ ತಿರಸ್ಕೃತವಾಗಿದೆ. ಇದು ಒಳ್ಳೆಯ ಲಕ್ಷಣವಂತೂ ಅಲ್ಲ. ಅನ್ವಯ್ ನಾಯ್ಕ್ನ ಆತ್ಮಹತ್ಯೆಗೆ ಅರ್ನಬ್ ಕಾರಣವೆನ್ನುವುದೇ ಆತನ ಬಂಧನಕ್ಕೆ ಹಿನ್ನೆಲೆಯಾದರೆ ಪ್ರತಿಯೊಬ್ಬ ರೈತನಿಗೂ ಬೆಂಬಲ ಬೆಲೆ ಕೊಡುವಲ್ಲಿ ಹಿಂದೆ ಸರಿದ, ಆತನ ಸಾಲ ಹೆಚ್ಚಲು ಕಾರಣವಾದ ಪ್ರತಿ ಸಕರ್ಾರವೂ ದೋಷಿಯೇ ಅಲ್ಲವೇನು? ನಿಮ್ಮ ಮನೆಯನ್ನು ಕಟ್ಟಿಕೊಡುತ್ತೇನೆಂದು ಬಂದು ಅರ್ಧಕ್ಕೇ ನಿಲ್ಲಿಸಿ ಹೋದವ ಅರ್ಧದಷ್ಟಾದರೂ ದುಡ್ಡನ್ನು ಕೊಡಿ ಎಂದು ಕೇಳಿದರೆ ನೀವು ಒಪ್ಪುವಿರಾ? ಹೋಗಲಿ ಅದನ್ನು ಪೂರ್ಣಗೊಳಿಸಲು ಮತ್ತೊಬ್ಬನಾದರೂ ಸಿಗುತ್ತಾನಾ? ನಿಮ್ಮ ಕೆಲಸ ಪೂರ್ಣಗೊಳಿಸದೇ ಹೋದವ ನಿಮ್ಮ ಹೆಸರು ಬರೆದಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡರೆ ತಪ್ಪಿತಸ್ಥ ಯಾರೆಂದು ಹೇಳುವುದು ಹೇಗೆ? ಅರ್ನಬ್ನ ವಿಚಾರದಲ್ಲಿ ಇದು ನೆಪಮಾತ್ರ. ನಿಜವಾದ ಉದ್ದೇಶವಿರುವುದು ಆತನನ್ನು ಒಳಹಾಕಿ ಬಲಪಂಥೀಯ ವಿಚಾರಧಾರೆಯ ದನಿ ಅಡಗಿಸುವುದು ಮಾತ್ರ! ಇದು ಕಾಂಗ್ರೆಸ್ಸಿನ ಹಳೆಯ ಚಾಳಿಯೇ. ಶ್ಯಾಮ್ ಪ್ರಸಾದ್ ಮುಖಜರ್ಿ ಕಾಶ್ಮೀರದ ವಿಚಾರದಲ್ಲಿ ಕಾಂಗ್ರೆಸ್ಸನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದರು. ಅವರನ್ನು ಯಾವ್ಯಾವುದೋ ನೆಪಗಳನ್ನು ಮುಂದಿಟ್ಟು ಜೈಲಿಗೆ ಕಳಿಸಿ ನಿಗೂಢವಾಗಿ ಸಾಯುವಂತೆ ಮಾಡಲಾಯ್ತು. ಅನೇಕ ಹೋರಾಟಗಾರರು ವ್ಯವಸ್ಥೆಯ ವಿರುದ್ಧ ತಿರುಗಿ ನಿಂತೊಡನೆ ರಸ್ತೆ ಅಪಘಾತಗಳಲ್ಲಿ ಸಾಯುವುದು ಸವರ್ೇ ಸಾಮಾನ್ಯ. ತನಗಾಗದವರನ್ನು ಕೊಲ್ಲುವ ಫ್ಯಾಸಿಸ್ಟ್ ಮಾನಸಿಕತೆ ಕಾಂಗ್ರೆಸ್ಸಿಗೆ ಯಾವಾಗಲೂ ಇದೆ. ಹೀಗಿರುವಾಗ ಇಷ್ಟು ದಿನ ಅವರು ಅರ್ನಬ್ ಗೋಸ್ವಾಮಿಯನ್ನು ಬಿಟ್ಟಿದ್ದೇ ವಿಶೇಷ.


ನೆನಪು ಮಾಡಿಕೊಳ್ಳಿ. ಇತರೆ ಪತ್ರಕರ್ತರು ಅಧಿಕಾರಸ್ಥ ಕಾಂಗ್ರೆಸ್ಸಿನ ಕಾಲು ತೊಳೆಯುತ್ತಾ ಕುಳಿತಿದ್ದಾಗ ಟೈಮ್ಸ್ ನೌನ ಮುಖ್ಯ ಕಾರ್ಯಕ್ರಮಕ್ಕೆ ಬರುತ್ತಿದ್ದ ಅರ್ನಬ್ 2ಜಿ, 3ಜಿ ಹಗರಣಗಳನ್ನು ಬಯಲಿಗೆಳೆಯುವ ಮೂಲಕ ರಾಷ್ಟ್ರದಲ್ಲೇ ಉತ್ಪಾತವೆಬ್ಬಿಸಿಬಿಟ್ಟಿದ್ದ. ಉಳಿದೆಲ್ಲಾ ಚಾನೆಲ್ಗಳು ಪ್ರಕರಣವನ್ನು ಮುಚ್ಚಿ ಸಮಾಧಿ ಮಾಡಲು ಯತ್ನಿಸುತ್ತಿದ್ದರೆ ಅರ್ನಬ್ ಒಬ್ಬನೇ ನಿಂತು ಆಳುವ ಪಕ್ಷವನ್ನೇ ಎದುರು ಹಾಕಿಕೊಂಡಿದ್ದ. ಅದಕ್ಕೆ ಸರಿಯಾಗಿ ಮೋದಿ ನಾಯಕರಾಗಿ ಕಂಡು ಬಂದರು. ಆನಂತರ ಚುನಾವಣೆಗಳಲ್ಲಿ ಬಿಜೆಪಿ ಜಯವನ್ನೂ ಪಡೆದುಕೊಂಡಿತ್ತು. ನಿಸ್ಸಂಶಯವಾಗಿ ಜನಮಾನಸದಲ್ಲಿ ಕಾಂಗ್ರೆಸ್ಸಿನ ಭ್ರಷ್ಟಾಚಾರದ ವಿರುದ್ಧದ ಅಸಮಾಧಾನವನ್ನು ಭುಗಿಲೇಳುವಂತೆ ಮಾಡಿದವ ಅರ್ನಬ್ನೇ. ಬರುಬರುತ್ತಾ ಕಾಂಗ್ರೆಸ್ಸಿಗೆ ಆತನ ತೀಕ್ಷ್ಣ ವಿಮಶರ್ೆಯನ್ನು ಎದುರಿಸುವ ತಾಕತ್ತು ಉಳಿಯಲಿಲ್ಲ. ಹೀಗಾಗಿ ಮತ್ತೆ ಹಿಂಬಾಗಿಲಿನಿಂದ ಟೈಮ್ಸ್ ಗ್ರೂಪಿನ ಮೇಲೆ ಒತ್ತಡವನ್ನು ಹೇರಿ ಅರ್ನಬ್ ಕೆಲಸವನ್ನೇ ಬಿಟ್ಟು ಹೋಗುವಂತೆ ಮಾಡಿಬಿಟ್ಟರು. ಆಗ ದೆಹಲಿಯಿಂದ ದೂರ ಭಾರತದ ಕೇಂದ್ರ ಭಾಗ ಮುಂಬೈನಲ್ಲಿ ಸ್ಟುಡಿಯೊ ಸ್ಥಾಪಿಸಿಕೊಂಡು ಕೆಲಸ ಆರಂಭಿಸಿದವ ಆತ. ಕೇಂದ್ರಸಕರ್ಾರದ ಅಂಗಳದಲ್ಲಿರುವುದು ಬೇಡ ಎಂಬುದೇ ಆತನ ನಿಶ್ಚಯವಾಗಿತ್ತು. ಚಾನೆಲ್ ಶುರುವಾದ ಆರಂಭದ ದಿನಗಳಲ್ಲಿ ಬ್ರಿಜೇಶ್ ಕಾಳಪ್ಪ ‘ಚಾನೆಲ್ಗೆ ಬಂದಿರುವ ಹಣ ಎಲ್ಲಿಂದ ಸಂದಾಯವಾಗಿದೆ ಎಂಬುದು ಗೊತ್ತಿದೆ’ ಎಂದು ಆತ ಹೇಳಿದಾಗ ಕುಪಿತ ಅರ್ನಬ್ ಪ್ರತಿಕ್ರಿಯಿಸಿದ ರೀತಿ ಇತ್ತಲ್ಲ, ಈಗಲೂ ಮೈ ಝುಮ್ಮೆನಿಸುವಂಥದ್ದು. ಭಾರತೀಯ ಸೇನೆ, ಭಾರತೀಯ ಪರಂಪರೆ, ರಾಷ್ಟ್ರದ ಗೌರವ ಈ ವಿಚಾರಗಳು ಬಂದಾಗ ಆತ ಅಕ್ಷರಶಃ ಉಗ್ರನಾಗಿಬಿಡುತ್ತಾನೆ. ಈ ಕಾರಣಕ್ಕೆ ಅನೇಕರಿಗೆ ಆತ ಇಷ್ಟವಾಗೋದು. ಕಾಂಗ್ರೆಸ್ಸಿಗೆ ಕಷ್ಟವಾಗೋದು ಇದೇ ಕಾರಣಕ್ಕೆ!


ಹಾಗೇ ಸುಮ್ಮನೆ ಆಲೋಚಿಸಿ ನೋಡಿ. ಕಳೆದ ಆರು ವರ್ಷಗಳಲ್ಲಿ ಕಾಂಗ್ರೆಸ್ ಮಾಡಬೇಕೆಂದುಕೊಂಡಿದ್ದ ಪ್ರಾಪಗ್ಯಾಂಡವನ್ನೆಲ್ಲಾ ಹಳ್ಳ ಹಿಡಿಸಿದ್ದು ಅರ್ನಬ್ನೇ. ಅವಾಡರ್್ ವಾಪ್ಸಿಯಿಂದ ಹಿಡಿದು ತೀರಾ ಇತ್ತೀಚಿನ ಹತ್ರಾಸ್ ಪ್ರಕರಣದವರೆಗೂ ಸತ್ಯವನ್ನು ಬಯಲಿಗೆಳೆದು ಕಾಂಗ್ರೆಸ್ಸಿನ ಎಲ್ಲ ಆಕಾಂಕ್ಷೆಗಳನ್ನು ಮಣ್ಣುಗೂಡಿಸಿದವ ಆತ. ಈ ಕಾರಣಕ್ಕಾಗಿಯೇ ಅವನನ್ನೀಗ ಒಳಗಟ್ಟಲಾಗಿದೆ. ಅರ್ನಬ್ ನೆಪಮಾತ್ರ. ಅವನಂಥವನನ್ನೇ ಬಂಧಿಸಿ ಒಳಗಿಟ್ಟಮೇಲೆ ನೀವ್ಯಾರೂ ಹೊರತಲ್ಲ ಎಂಬುದರ ಸ್ಪಷ್ಟ ಘೋಷಣೆ. ಉದ್ಧವ್ ಠಾಕ್ರೆಯಂತೂ ತನ್ನ ಹೆಸರನ್ನು ಅದೆಷ್ಟು ಕೆಡಿಸಿಕೊಂಡಿದ್ದಾನೆಂದರೆ ತನ್ನ ವಿರುದ್ಧ ಫೇಸ್ಬುಕ್ ಪೋಸ್ಟ್ ಹಾಕಿದವರನ್ನು ಆತ ಬಿಡದೇ ಜೈಲಿಗಟ್ಟುತ್ತಿದ್ದಾನೆ. ಇನ್ನು ದಿನ ಬೆಳಗಾದರೆ ತನ್ನ ಬಗ್ಗೆ ಆರೋಪಗಳ ಸರಮಾಲೆಯನ್ನೇ ಪ್ರಸ್ತುತ ಪಡಿಸುವ ಅರ್ನಬ್ನನ್ನು ಬಿಟ್ಟಾನೇನು? ಒಂದು ಸಂದೇಶವಂತೂ ಸ್ಪಷ್ಟವಾಗಿದೆ. ಹೇಗೆ ಜೊಬೈಡನ್ ಅಧಿಕಾರಕ್ಕೆ ಬಂದೊಡನೆ ರಿಪಬ್ಲಿಕನ್ ಪಾಟರ್ಿಯ ಟ್ರಂಪ್ನ ಕಡು ಬೆಂಬಲಿಗರನ್ನು ಹುಡುಹುಡುಕಿ ಪ್ರತೀಕಾರ ತೆಗೆದುಕೊಳ್ಳಲಾಗುವುದು ಎಂದು ಹೇಳುತ್ತಿದ್ದಾರೋ ಹಾಗೆಯೇ ಅಧಿಕಾರಕ್ಕೆ ಕಾಂಗ್ರೆಸ್ಸು ಮರಳಿದರೆ ಬಲಪಂಥೀಯ ವಿಚಾರಧಾರೆಯವರನ್ನೆಲ್ಲಾ ಹುಡುಹುಡುಕಿ ಪ್ರತೀಕಾರ ತೆಗೆದುಕೊಳ್ಳುತ್ತದೆ. ಅಧಿಕಾರವಿರುವಾಗಲೇ ಬೆಂಬಲಕ್ಕೆ ಬರದ ಭಾಜಪ ಆ ಹೊತ್ತಿನಲ್ಲಿ ಸಹಕಾರಕ್ಕೆ ನಿಲ್ಲಬಹುದೆಂಬುದು ಅನುಮಾನವೇ ಸರಿ! ಅರ್ನಬ್ನ ಈ ಬಂಧನ ಮತ್ತು ಅವನನ್ನು ಗೌರವದಿಂದ ಉಳಿಸಲಾಗದ ಭಾಜಪದವರ ಹೇಡಿತನ ಬಲು ದಿನಗಳ ಕಾಲ ಕಾಡಲಿದೆ. ಸಹಜವಾಗಿಯೇ ನ್ಯಾಯ ವ್ಯವಸ್ಥೆಯ ಮೇಲೂ ಅನೇಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಮಧ್ಯರಾತ್ರಿ 12 ಗಂಟೆಗೆ ತಾವಾಗಿಯೇ ಬಾಗಿಲು ತೆಗೆದು ಕೆಲವರಿಗೆ ವಿಶೇಷ ಅವಕಾಶ ಮಾಡಿಕೊಡುವಂತಹ ನ್ಯಾಯಾಲಯಗಳು ಅರ್ನಬ್ನ ವಿಚಾರದಲ್ಲಿ ಇಷ್ಟು ಕಠಿಣವಾಗಿರುವುದೇಕೆಂಬುದಕ್ಕೆ ಉತ್ತರವಂತೂ ಸಿಗುತ್ತಿಲ್ಲ. ಹೀಗಾಗಿಯೇ ಮುಂದಿನ ಹೋರಾಟ ಸ್ವಂತ ಬಲದ ಮೇಲಯೇ ನಡೆಯಬೇಕು.


ಕನರ್ಾಟಕದಲ್ಲಿ ಬಲಪಂಥೀಯ ವಿಚಾರಧಾರೆಯ ಸಕರ್ಾರ ಉರುಳಿ ಎಡಪಂಥೀಯರು ಪ್ರಮುಖ ಸ್ಥಾನವನ್ನು ಅಲಂಕರಿಸಿಬಿಟ್ಟರೆ ದಿನಗಳು ಬಲುಕಷ್ಟ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಹಿಂದುಗಳ ವ್ಯಾಪಕ ಹತ್ಯೆಯಾಗುತ್ತಿದ್ದುದನ್ನು ನೋಡಿದಿರಲ್ಲವೇ? ಮುಂದೆಯೂ ಅದೇ ರೀತಿ ನಡೆದರೆ ಅಚ್ಚರಿ ಪಡಬೇಕಿಲ್ಲ. ಇಷ್ಟಕ್ಕೂ ದನಿಯನ್ನು ಅಡಗಿಸುವ ಎಡಪಂಥೀಯ ಪ್ರಯತ್ನ ಹೊಸತೇನೂ ಅಲ್ಲ. ಅದಕ್ಕೆ ಗೊಬ್ಬರ ಮತ್ತು ನೀರೆರೆಯಲು ಕಾಂಗ್ರೆಸ್ಸೂ ಸೇರಿಕೊಂಡುಬಿಟ್ಟರೆ ಬಲುಕಷ್ಟ. ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಭಾಜಪದ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ಈ ವಿಚಾರವನ್ನು ಹೇಳಿದ್ದಕ್ಕೆ ಬಲುವ್ಯಂಗ್ಯವಾಗಿ ತಮಗೆಲ್ಲಾ ಗೊತ್ತಿದೆ ಎನ್ನುವಂತಹ ಉತ್ತರ ಕೊಟ್ಟಿದ್ದನ್ನು ನೋಡಿದರೆ ಒಂದೋ ಈ ಪ್ರಕರಣವನ್ನು ಅವರು ಅವಜ್ಞೆ ಮಾಡಿದ್ದಾರೆ ಅಥವಾ ಮುಂದಾಗಲಿರುವ ಸ್ಥಿತಿಯ ಕುರಿತು ಉಡಾಫೆ ಹೊಂದಿದ್ದಾರೆ! ಕಾದು ನೋಡೋಣ..

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top