National

ಬಾರಮುಲ್ಲಾ ಈಗ ಭಯೋತ್ಪಾದನಾ ಮುಕ್ತವಾಗಿದೆ ಗೊತ್ತಿದೆಯೇನು?!

ಮೊನ್ನೆ ಜನವರಿ 23 ಕ್ಕೆ ನಾವೆಲ್ಲರೂ ಸುಭಾಷ್ಚಂದ್ರ ಬೋಸರ ಜಯಂತಿಯನ್ನು ಆಚರಿಸುತ್ತಿದ್ದಾಗ ಜಮ್ಮು-ಕಾಶ್ಮೀರದ ಬಾರಮುಲ್ಲಾದಲ್ಲಿ ಅಡಗಿ ಕುಳಿತಿದ್ದ ಉಗ್ರರ ಕುರಿತಂತೆ ನಿಖರ ಮಾಹಿತಿ ಪಡೆದು ಭಾರತೀಯ ಸೇನೆ ದಾಳಿ ನಡೆಸುತ್ತಿತ್ತು. ಲಷ್ಕರ್-ಎ-ತೊಯ್ಬಾಕ್ಕೆ ಸೇರಿದ ಮೊಹಸ್ಸೀನ್ ಮುಷ್ತಾಕ್, ಸುಹೇಬ್-ಫಾರುಖ್ ಅಖೂನ್ ಮತ್ತು ನಾಜಿರ್ ಅಹ್ಮದ್ ದಜರ್ಿ ಈ ಮೂವರೂ ಅಡಗಿದ್ದ ತಾಣಕ್ಕೆ ನುಗ್ಗಿ ಅಲ್ಲೇ ಅವರನ್ನು ಕೊಂದು ಬಿಸಾಡುವಲ್ಲಿ ಯಶಸ್ವಿಯಾಗಿತ್ತು ಸೇನೆ. ಈ ಮೂವರೂ ಸೋಪುರ್-ಬಾರಮುಲ್ಲಾ ಭಾಗಗಳಲ್ಲಿ ಕಳೆದ ಅನೇಕ ವಾರಗಳಿಂದ ಬಲು ಚುರುಕಾಗಿ ಕೆಲಸ ಮಾಡುತ್ತಿದ್ದರು. 2017ರ ಡಿಸೆಂಬರ್ನಲ್ಲಿ ಬಾರಮುಲ್ಲಾದ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ ವರದಿಗಳು ಬಂದಿತ್ತಲ್ಲಾ, ಅದರಲ್ಲೂ ಇವರದ್ದೇ ಪಾತ್ರವಿತ್ತು. ಈ ಭಾಗದಲ್ಲಿ ಅಡಗಿ ಕುಳಿತ ಕೊನೆಯ ಚರಣದ ಉಗ್ರಗಾಮಿಗಳಾಗಿದ್ದರು ಇವರು. ಹೀಗಾಗಿಯೇ ಇವರನ್ನು ಇಲ್ಲವಾಗಿಸುವುದು ಸೇನೆಯ ಆದ್ಯ ಸವಾಲಾಗಿತ್ತು. ಈ ಸೇನಾ ಕಾಯರ್ಾಚರಣೆ ನಡೆಯುವ ವೇಳೆಗೆ ಈ ಭಯೋತ್ಪಾದಕರನ್ನು ಉಳಿಸಲೆಂದು ಸ್ಥಳೀಯ ತರುಣರು ಕೈಗೆ ಕಲ್ಲೆತ್ತಿಕೊಂಡು ಭಾರತದ ಸೈನಿಕರ ಮೇಲೆ ಎಸೆಯುತ್ತಿದ್ದರು. ಒಂದೆಡೆ ಈ ಕಲ್ಲೆಸೆತದಿಂದ ಪಾರಾಗುತ್ತಾ ಮತ್ತೊಂದೆಡೆ ಉಗ್ರರ ಜೊತೆ ಕದನ ನಡೆಸುತ್ತಾ ಸಾಹಸ ಪ್ರದಶರ್ಿಸಿದ ಭಾರತದ ಸೈನಿಕರು ಕೊನೆಗೂ ಆ ಉಗ್ರರನ್ನು ಸದೆಬಡಿದಾಗ ಜಯಘೋಷ ಮುಗಿಲು ಮುಟ್ಟಿತ್ತು. ಬಾರಮುಲ್ಲಾದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದ್ದ ಬಿನ್ನಾರ್ ಎಂಬ ಹಳ್ಳಿಯಲ್ಲಿ ಅಡಗಿದ್ದ ಈ ಉಗ್ರರನ್ನು ಮುಗಿಸುವುದರೊಂದಿಗೆ ಬಾರಮುಲ್ಲಾ ಭಯೋತ್ಪಾದಕ ಮುಕ್ತ ನಗರವೆಂಬ ಹೆಗ್ಗಳಿಕೆಗೆ ಪಾತ್ರವಾಯ್ತು. ಚುನಾವಣೆಗೆ ತೆರಳುವ ಮುನ್ನ ನರೇಂದ್ರಮೋದಿಯವರು ಭಾರತದ ಜನತೆಗೆ ಕೊಟ್ಟ ಬಲುದೊಡ್ಡ ಉಡುಗೊರೆ ಇದು!

ಆರಂಭದಿಂದಲೂ ಬಿಜೆಪಿಯದ್ದು ಭಯೋತ್ಪಾದನೆಯ ವಿರುದ್ಧ ಪ್ರಖರ ಸಮರವೇ. ಭಾರತವನ್ನು ಭಯೋತ್ಪಾದಕರ ಕಪಿಮುಷ್ಟಿಯಿಂದ ರಕ್ಷಿಸಿ ಪಾಕಿಸ್ತಾನದ ಗೋಣು ಮುರಿಯಬೇಕು ಮತ್ತು ಅದನ್ನು ಮುಂದಿಟ್ಟುಕೊಂಡು ಸೆಣೆಸಾಡುವ ಚೀನಾದ ಬೆನ್ನುಮೂಳೆ ಕಡಿಯಬೇಕೆಂಬ ನಿಶ್ಚಯ ಭಾಜಪಾಕ್ಕೆ ಇದ್ದೇ ಇತ್ತು. ವಾಜಪೇಯಿಯವರ ಕಾಲಕ್ಕೆ ಪಾಕಿಸ್ತಾನಕ್ಕೆ ಬಸ್ಸು ಓಡಿಸಿದ್ದು, ಸಂಝೋತಾ ಎಕ್ಸ್ಪ್ರೆಸ್ ರೈಲು ಬಿಟ್ಟಿದ್ದು ಸ್ನೇಹದ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾದರೂ ಕಾಗರ್ಿಲ್ನ ಯುದ್ಧದಲ್ಲಿ ಪಾಕಿಸ್ತಾನವನ್ನು ಮುಲಾಜಿಲ್ಲದೇ ಬಡಿದು ಬಿಸಾಡಿದ್ದು ಭಾರತದ ಪ್ರಬಲ ಇಚ್ಛಾಶಕ್ತಿಯ ಸಂಕೇತವಾಗಿತ್ತು. ಕಾಂಗ್ರೆಸ್ಸಿನ ಅವಧಿಯಲ್ಲೂ ಕಾಶ್ಮೀರದಲ್ಲಿ ಸೇನಾ ಕಾಯರ್ಾಚರಣೆಗಳು ನಿರಂತರವಾಗಿ ನಡೆದಿವೆಯಾದರೂ ಭಾರತ ತನ್ನ ಪ್ರಬಲ ಇಚ್ಛಾಶಕ್ತಿಯನ್ನು ಜಾಗತಿಕವಾಗಿ ಎಂದೂ ಪ್ರದಶರ್ಿಸಲೇ ಇಲ್ಲ. ಜಮ್ಮು-ಕಾಶ್ಮೀರಕ್ಕೆ ಪ್ಯಾಕೇಜುಗಳನ್ನು ಘೋಷಿಸಿ ಪ್ರತ್ಯೇಕತಾವಾದದ ಮಾತುಗಳನ್ನಾಡುವವರನ್ನು ಪುಸಲಾಯಿಸಿ, ಅಧಿಕಾರ ನಡೆಸಿದರೆ ಸಾಕಾಗಿತ್ತು ಅಷ್ಟೇ. 2014 ರಲ್ಲಿ ಪ್ರಧಾನಿ ಕುಚರ್ಿಯ ಮೇಲೆ ಮೋದಿ ಬಂದು ಕುಳಿತಾಗಿನಿಂದ ಸ್ಥಿತಿಗತಿಗಳು ಬದಲಾದವು. ತಮ್ಮ ಪ್ರಮಾಣ ವಚನಕ್ಕೆ ಪಾಕಿಸ್ತಾನದ ಪ್ರಧಾನಿಯನ್ನು ಆಹ್ವಾನಿಸಿದ ಮೋದಿ ಅಚಾನಕ್ಕಾಗಿ ಪಾಕಿಸ್ತಾನಕ್ಕೂ ಹೋಗಿ ಬಂದು ಸ್ನೇಹದ ಹಸ್ತವನ್ನು ಬಲವಾಗಿಯೇ ಚಾಚಿದರು. ಹಾಗಂತ ಅಟಲ್ಜಿಯಂತೆ ಮೈಮರೆಯಲಿಲ್ಲ. ಐಎಸ್ಐಯ ಯೋಜನೆಗಳೆಲ್ಲವೂ ಈ ಹಂತದಲ್ಲಿಯೇ ತಲೆಕೆಳಗಾಗಿದ್ದು. ಮೋದಿ ಪಾಕಿಸ್ತಾನದೊಂದಿಗೆ ಸೌಹಾರ್ದದ, ಸಂಬಂಧದ ಮಾತನಾಡುತ್ತಲೇ ಗಡಿ ಬೇಲಿಯನ್ನು ಭದ್ರಗೊಳಿಸಿದ್ದರು. ಒಳನುಸುಳಿ ಬಂದ ಭಯೋತ್ಪಾದಕರನ್ನು ಮುಲಾಜಿಲ್ಲದೇ ಕೊಲ್ಲುವಂತೆ ಆದೇಶಿಸಿದ್ದರು. ಕಲ್ಲೆಸೆಯುವವರ ವಿರುದ್ಧ ರಬ್ಬರ್ ಬುಲೆಟ್ಗಳನ್ನು ಬಳಸುವ ಆದೇಶ ಜಾರಿಯಾಗಿದ್ದೂ ಇದೇ ಹೊತ್ತಿನಲ್ಲಿ. ಈ ರೀತಿ ದಾರಿ ತಪ್ಪಿದ ಯುವಕನೊಬ್ಬನನ್ನು ಮೇಜರ್ ಗೊಗೊಯ್ ತನ್ನ ಜೀಪಿಗೇ ಕಟ್ಟಿಕೊಂಡು ಬಂದಾಗ ಇಡೀ ದೇಶ ಭಾರತೀಯ ಸೈನಿಕನ ಈ ಛಾತಿಯನ್ನು ಕಂಡು ಹೆಮ್ಮೆಯಿಂದ ತಲೆಯಾಡಿಸಿತ್ತು. ಇದು ಬದಲಾದ ಪ್ರಧಾನಿಯ ಸದೃಢ ಇಚ್ಛಾಶಕ್ತಿಯ ಪ್ರದರ್ಶನವೆಂಬಂತೆ ಬಿಂಬಿತವಾಗಿತ್ತು. ಉರಿಯ ಮೇಲೆ ದಾಳಿಯಾದಾಗ ಜಗತ್ತಿನೆದುರು ಆರೋಪ ಪಟ್ಟಿ ನೀಡುತ್ತಾ ಕೂರದೇ ಭಾರತ ಪಾಕಿಸ್ತಾನದ ಗಡಿಯೊಳಕ್ಕೆ ನುಗ್ಗಿ ನಾಲ್ಕು ಲಾಂಚ್ಪ್ಯಾಡುಗಳನ್ನು ಧ್ವಂಸ ಮಾಡಿದ ರೀತಿ ಭಾರತದ ಸೈನ್ಯ ಕೌಶಲ್ಯವನ್ನು ಜಗಜ್ಜಾಹೀರುಗೊಳಿಸಿತ್ತು. ಈ ಲಾಂಚ್ಪ್ಯಾಡುಗಳ ಮೂಲಕ ತರಬೇತಿ ಪಡೆದುಕೊಂಡು ಭಾರತದೊಳಕ್ಕೆ ಕಾಲಕ್ರಮದಲ್ಲಿ ನುಸುಳಬೇಕಾದ ಉಗ್ರರನ್ನು ಭಾರತ ಮೊಗ್ಗಿನಲ್ಲೇ ಚಿವುಟಿ ಬಿಸಾಡಿತ್ತು. ಇಷ್ಟಾದರೂ ಒಳನುಗ್ಗಿ ಬಂದ ನೂರಾರು ಭಯೋತ್ಪಾದಕರನ್ನು ಹುಡು-ಹುಡುಕಿ ಕೊಲ್ಲಲಾಯ್ತು. 2018ರೊಂದರಲ್ಲಿಯೇ ಸುಮಾರು 225 ಭಯೋತ್ಪಾದಕರನ್ನು ಗುಂಡಿಟ್ಟು ಕೊಲ್ಲಲಾಗಿದೆ. ಇವರಲ್ಲಿ ಸುಮಾರು 95 ಜನ ವಿದೇಶದಿಂದ ಬಂದ ಭಯೋತ್ಪಾದಕರು. ಇನ್ನುಳಿದವರನ್ನು ಇಲ್ಲಿಂದಲೇ ಪಡೆಗೆ ಸೇರಿಸಿಕೊಂಡು ತರಬೇತಿ ನೀಡಲಾಗಿತ್ತು. ಇತ್ತೀಚೆಗೆ ಸಿಆರ್ಪಿಎಫ್ನ ಡೈರೆಕ್ಟರ್ ಜನರಲ್ ರಾಜಿವ್ ಭಟ್ನಾಗರ್ ‘ಭಾರತದೊಳಕ್ಕೆ ನುಸುಳಿರುವ ಭಯೋತ್ಪಾದಕರ ಶೆಲ್ಫ್ ಲೈಫ್ ಕಡಿಮೆಯಾಗಿರುವುದರಿಂದ ಹೊಸದಾಗಿ ಸೇರ್ಪಡೆಯಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಇಳಿದಿದೆ’ ಎಂದು ಹೇಳಿದ್ದರು. ಕಿರಾಣಿ ಅಂಗಡಿಗಳ ಶೆಲ್ಫ್ ಮೇಲೆ ಇಟ್ಟ ವಸ್ತುಗಳು ಎಷ್ಟು ದಿನ ಬಾಳಿಕೆಗೆ ಬರುವುದು ಎಂಬುದನ್ನು ಶೆಲ್ಫ್ ಲೈಫ್ ಎನ್ನುತ್ತಾರೆ. ಉದಾಹರಣೆಗೆ ತರಕಾರಿಗಳಿಗಿಂತಲೂ ಬೇಕರಿ ವಸ್ತುಗಳ ಶೆಲ್ಫ್ ಲೈಫ್ ಹೆಚ್ಚು. ಇನ್ನು ಅವುಗಳಿಗಿಂತಲೂ ಗೋಧಿ, ಸಕ್ಕರೆ ಇತ್ಯಾದಿ. ಆ ದೃಷ್ಟಿಯಲ್ಲಿ ಭಯೋತ್ಪಾದಕರ ಶೆಲ್ಫ್ ಲೈಫ್ ಮೋದಿಯ ನಂತರ ಬಹುವಾಗಿ ಕ್ಷೀಣಿಸುತ್ತಿದೆ. ಅದನ್ನು ಸರಿದೂಗಿಸಲು ಹೆಚ್ಚು-ಹೆಚ್ಚು ತರುಣರನ್ನು ಭಯೋತ್ಪಾದನೆಗೆ ಜೋಡಿಸಿಕೊಳ್ಳುವಂತೆ ಮಾಡಿದರೆ ಏನಾಗಬಹುದೆಂಬ ಪ್ರಶ್ನೆಗೆ ಅಷ್ಟೇ ನಿರಮ್ಮಳವಾಗಿ ಉತ್ತರಿಸಿದ ಭಟ್ನಾಗರ್ ‘ಆಗುವುದೇನು? ಅವರನ್ನು ಹುಡುಕಿ ಮುಗಿಸುತ್ತೇವೆ ಅಷ್ಟೇ’ ಎಂದು ಸ್ಪಷ್ಟವಾಗಿಯೇ ಹೇಳಿದ್ದಾರೆ.


ಕಳೆದ 5 ವರ್ಷಗಳಲ್ಲಿ ಬುಹರ್ಾನ್ ವನಿಯೂ ಸೇರಿದಂತೆ ಅನೇಕ ಭಯೋತ್ಪಾದಕರನ್ನು ಕೊಂದು ಶವವನ್ನು ಅನಾಥವಾಗಿ ಬಿಸಾಡಲಾಗಿದೆ. ಇದರ ಪರಿಣಾಮವೇನು ಗೊತ್ತೇ? ಭಾರತದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಕೋಲ್ಕತ್ತಾ, ಬೆಂಗಳೂರು, ಚೆನ್ನೈ, ಹೈದರಾಬಾದ್, ಅಹ್ಮದಾಬಾದ್, ಪುಣೆಗಳಲ್ಲಿ ಯುಪಿಎಯ ಹತ್ತು ವರ್ಷಗಳಲ್ಲಿ 18 ಭಯೋತ್ಪಾದನಾ ದಾಳಿಗಳು ನಡೆದಿವೆ, ಮೋದಿಯ ಈ ಅವಧಿಯಲ್ಲಿ ಒಂದೇ ಒಂದು ಪ್ರಮುಖ ಭಯೋತ್ಪಾದನಾ ದಾಳಿ ನಡೆದಿಲ್ಲ. ಯುಪಿಎಯ ಹತ್ತು ವರ್ಷದ ಅಧಿಕಾರಾವಧಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳವುದಾದರೆ ವರ್ಷಕ್ಕೆ ಸರಾಸರಿ 757 ನಾಗರಿಕರು ಭಯೋತ್ಪಾದಕರ ದಾಳಿಗೆ ತುತ್ತಾಗಿದ್ದರೆ ನರೇಂದ್ರಮೋದಿಯವರ ಅವಧಿಯಲ್ಲಿ ಈ ಸಂಖ್ಯೆ 241 ಕ್ಕೆ ಇಳಿದಿದೆ. ವ್ಯತ್ಯಾಸ 516 ರಷ್ಟು. ಉಗ್ರರ ಕೊಲ್ಲುವಿಕೆ ಮತ್ತು ಸೈನಿಕರ ಹೌತಾತ್ಮ್ಯದ ಅನುಪಾತ ಎರಡೂ ಸಕರ್ಾರಗಳಿಗೂ ಬಹಳ ಭಿನ್ನವೇನಲ್ಲ. ಆದರೆ ಭಯೋತ್ಪಾದಕರ ಸಾವು ಮತ್ತು ನಾಗರಿಕರ ಜೀವ ಕಳೆದುಕೊಳ್ಳುವಿಕೆಯ ಅನುಪಾತ ಯುಪಿಎ ಅವಧಿಗೆ 1.25ರಷ್ಟಿದ್ದರೆ ಎನ್ಡಿಎ ಅನುಪಾತ 2.01ರಷ್ಟು. ಅದರರ್ಥ ಭಾರತ ಈ ಹೋರಾಟದಲ್ಲಿ ಕಡಿಮೆ ನಾಗರಿಕರನ್ನು ಕಳೆದುಕೊಳ್ಳುತ್ತಿದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಈ ದೇಶದ ಸೈನಿಕ ತನ್ನ ಪ್ರಾಣವನ್ನೂ ಪಣಕ್ಕಿಟ್ಟು ದೇಶದ ಜನರನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ.

ಒಟ್ಟಾರೆ ಟ್ರೆಂಡು ಭಾರತದ ಪರವಾಗಿದೆ. ಐಎಸ್ಐ ಭಾರತದ ವಿರುದ್ಧ ಯಾವ ನಿರ್ಣಯಗಳನ್ನೂ ಕೈಗೊಳ್ಳಲಾರದೇ ಅವಡುಗಚ್ಚಿ ಕುಳಿತಿದೆ. ಜಗತ್ತಿನಿಂದ ಬರುತ್ತಿದ್ದ ಸಾಲಗಳೂ ನಿಂತು ಹೋಗಿರುವುದರಿಂದ ಕೈಯಲ್ಲಿ ಭಿಕ್ಷಾಪಾತ್ರೆ ಹಿಡಿದು ರಾಷ್ಟ್ರದಿಂದ ರಾಷ್ಟ್ರಕ್ಕೆ ಅಲೆದಾಡುತ್ತಿದ್ದಾರೆ ಪಾಕಿಸ್ತಾನದ ಪ್ರಧಾನಿ. ಐದು ವರ್ಷಗಳ ಹಿಂದೆ ಅವಕಾಶ ಸಿಕ್ಕಾಗಲೆಲ್ಲಾ ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗುತ್ತಾ ಧ್ವಜ ಸುಟ್ಟುಹಾಕುವ ಕೆಲಸ ನಾವು ಮಾಡುತ್ತಿದ್ದೆವು. ಮೋದಿ ಕಳೆದೈದು ವರ್ಷಗಳಿಂದ ಪಾಕಿಸ್ತಾನವನ್ನು ದೂಷಿಸುವ ಅವಕಾಶವನ್ನೂ ನಮಗೆ ಕೊಟ್ಟಿಲ್ಲ. ತಾನೇ ನಿಮರ್ಿಸಿದ ಖೆಡ್ಡಾದೊಳಕ್ಕೆ ಉರುಳಿ ಬೀಳುವಂತೆ ಪಾಕಿಸ್ತಾನದ ಪರಿಸ್ಥಿತಿ ಮಾಡಿಟ್ಟಿದ್ದಾರೆ ನರೇಂದ್ರಮೋದಿ. ಒಟ್ಟಾರೆ ಸ್ವಾತಂತ್ರ್ಯ ಬಂದಲಾಗಾಯ್ತು ಪಾಕಿಸ್ತಾನದ ದ್ವೇಷವನ್ನು ತುಂಬುತ್ತಲೇ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದವು. ಮೋದಿ ಹಾಗಲ್ಲ. ಪಾಕಿಸ್ತಾನದ ವಿರುದ್ಧ ಮಾತೇ ಆಡಲಿಲ್ಲ. ಆದರೆ ಭಾರತದ ಸೇನೆಯನ್ನು ಬಲಪಡಿಸಿದರು. ಈ ಧನಾತ್ಮಕ ಬದಲಾವಣೆಯಿಂದಾಗಿ ಇಂದು ಪಾಕಿಸ್ತಾನದ ಭಯೋತ್ಪಾದಕರು ಭಾರತದೊಳಕ್ಕೇ ಕಾಲಿಡಲೂ ಆಗದ ಸ್ಥಿತಿಯಲ್ಲಿ ನಿಂತಿದ್ದಾರೆ. ಸತ್ಯಾಗ್ರಹ ನಮ್ಮದ್ದೇ ದೇಶದವರ ವಿರುದ್ಧ. ಹೊರದೇಶದವನು ತಂಟೆ ಮಾಡಿದರೆ, ಮಾತುಕತೆಯಲ್ಲ, ನಾಲ್ಕು ಬಾರಿಸುವುದೇ ಪರಿಹಾರವೆಂದು ಮೋದಿ ಸ್ಪಷ್ಟ ಸಂದೇಶ ರವಾನಿಸಿರುವುದರಿಂದ ಭಾರತ ಈಗ ಬಲಾಢ್ಯವಾಗಿ ನಿಂತಿದೆ. 70 ವರ್ಷಗಳ ನಂತರ ಇಂಥದ್ದೊಂದು ವಾತಾವರಣದಲ್ಲಿ ನಾವಿದ್ದೇವೆ.

ಧನ್ಯವಾದಗಳು ಮೋದಿಜೀ..

-ಚಕ್ರವರ್ತಿ ಸೂಲಿಬೆಲೆ

1 Comment

1 Comment

  1. ಶಶಿಕಲಾ. ಎಸ್.

    January 26, 2019 at 9:26 am

    ಮೋದಿಯವರ ಕಾರ್ಯ ಶ್ಲಾಘನೀಯ. ಆದರೆ ಕಾಂಗ್ರೆಸ್ ದಿನಕ್ಕೊಂದು ಸುಳ್ಳನ್ನು ಹುಟ್ಟುಹಾಕಿ ಜನರರನ್ನು ದಿಕ್ಕೆಡಿಸುತ್ತಿದೆ. ಇದರ ಪರಿಣಾಮಗಾಗಿ ಜನ ಪುಕಾರುಗಳನ್ನು ನಂಬಿ ವೋಟ್ ಮಾಡು ವಂತಾಗಬಾರದು. ಅದ್ದರಿಂದ ಕಾಂಗ್ರೆಸ್ ನ ಯಾವುದೇ ಹೇಳಿಕೆಗಳಿಗೆ ಸ್ಪಷ್ಟ ಉತ್ತರವನ್ನು ಜನರು ಆಲೋಚಿಸುವ‌ ಮಾರ್ಗದಲ್ಲಿ ನಿಮ್ಮ ಬರಹ ಮತ್ತು ಭಾಷಣಗಳಿರಲಿ.🙏 🇮🇳

Leave a Reply

Your email address will not be published. Required fields are marked *

Most Popular

To Top