National

ಬಲಿಷ್ಠ ಡಾಲರ್, ಕುಸಿಯಿತು ರೂಪಾಯಿ!

ರೂಪಾಯಿಗೆ ಭಾರತ ಆತುಕೊಂಡಿದ್ದೇ 1975 ರ ನಂತರ. ಅದಕ್ಕೂ ಮುಂಚೆ ಇಂಗ್ಲೆಂಡಿನ ಕರೆನ್ಸಿಯೊಂದಿಗೆ ನಾವು ಜೋಡಿಸಿಕೊಂಡಿದ್ದೆವು. ಅದು ಸಹಜವೂ ಆಗಿತ್ತು. ಈ ದೇಶದಲ್ಲಿ ಬ್ರಿಟೀಷರ ಆಳ್ವಿಕೆಯಿಂದಾಗಿ ವಿಭಿನ್ನ ರೂಪಗಳನ್ನು ಪಡೆದ ಇಲ್ಲಿನ ಕರೆನ್ಸಿ ಸ್ವಾತಂತ್ರ್ಯಕ್ಕೂ ಕೆಲವು ದಶಕಗಳ ಮುನ್ನ ಪೌಂಡಿನೊಂದಿಗೆ ನೇರ ವಿನಿಮಯಕ್ಕೆ ಒಳಗಾಯಿತು. ಈ ಕಾರಣದಿಂದಾಗಿಯೇ ಡಾಲರ್ ಮತ್ತು ರೂಪಾಯಿಯನ್ನು ಲೆಕ್ಕ ಹಾಕುವಾಗ 1947 ರ ವೇಳೆಗೆ ಡಾಲರ್ ಮತ್ತು ರೂಪಾಯಿ ಒಂದೇ ಮೌಲ್ಯವನ್ನು ಹೊಂದಿದ್ದವೆಂದು ಹೇಳಲಾಗುತ್ತದೆ. ಆದರೆ ವಾಸ್ತವವಾಗಿ ಸ್ವಾತಂತ್ರ್ಯದ ಹೊಸ್ತಿಲಲ್ಲಿ ನಮಗೆ ಡಾಲರ್ನೊಂದಿಗೆ ನೇರ ಸಂಬಂಧವೇ ಇರಲಿಲ್ಲ. ಸಾಲವನ್ನೂ ಮಾಡದಿದ್ದುದರಿಂದ ಆ ವೇಳೆಗೆ ಡಾಲರ್ನ ಮೌಲ್ಯ ಲೆಕ್ಕ ಹಾಕುವ ಪರಿಸ್ಥಿತಿಯೂ ಇರಲಿಲ್ಲ. ಸ್ವಾತಂತ್ರ್ಯಾ ನಂತರ ನಾವು ರೂಪಿಸಿದ ಎಲ್ಲ ಯೋಜನೆಗಳೂ ವಿತ್ತೀಯ ಕೊರತೆಯನ್ನೇ ದಾಖಲಿಸಿದವು. ಅಭಿವೃದ್ಧಿಗೆ ನಾವು ಸಾಲದ ಮೊರೆ ಹೋಗಬೇಕಾಯಿತಲ್ಲದೇ ವಿದೇಶದಿಂದ ಅನೇಕ ವಸ್ತುಗಳನ್ನು ಆಮದು ಮಾಡಿಕೊಳ್ಳಬೇಕಾಗಿಯೂ ಬಂತು. ಇಷ್ಟಾಗಿಯೂ ನಾವು ಪೌಂಡಿನ ಸೆರಗನ್ನು ಬಿಟ್ಟೇ ಇರಲಿಲ್ಲ. 1958 ರ ವೇಳೆಗೆ ಜಗತ್ತಿನ ಬಹುತೇಕ ರಾಷ್ಟ್ರಗಳು ಪೌಂಡನ್ನು ತ್ಯಜಿಸಿ ಡಾಲರ್ಗೆ ಆತುಕೊಂಡಾಗಿತ್ತು. ಆದರೆ ಭಾರತದ ಭಾವನೆಗಳು ಇಂಗ್ಲೆಂಡಿನೊಂದಿಗೆ ಬಲವಾಗಿದ್ದುದರಿಂದ ಅಷ್ಟು ಬೇಗ ಬಿಡಲೊಪ್ಪಲಿಲ್ಲ. ಹಾಗೆ ನೋಡಿದರೆ ಜಾಗತಿಕ ಕರೆನ್ಸಿಯಾಗಿ ಡಾಲರ್ ರೂಪುಗೊಂಡಿದ್ದು ಎರಡನೇ ವಿಶ್ವಯುದ್ಧದ ನಂತರವೇ. ಯುದ್ಧದಲ್ಲಿ ಭಾಗವಹಿಸಿದ ಮತ್ತು ಸೋತ ಎಲ್ಲಾ ರಾಷ್ಟ್ರಗಳು ಸಾಕಷ್ಟು ಹಾನಿಗೊಳಗಾಗಿದ್ದರಿಂದ ಅವುಗಳನ್ನು ಮರುನಿಮರ್ಿಸಲು ಸಮರ್ಥ ಶಕ್ತಿಯೊಂದರ ಬೆಂಬಲ ಬೇಕಾಗಿತ್ತು. ಆ ದಿನಗಳಲ್ಲಿ ಯುದ್ಧದಲ್ಲಿ ಭಾಗವಹಿಸಿಯೂ ಹೆಚ್ಚು ಹಾನಿಗೊಳಗಾಗದ ರಾಷ್ಟ್ರ ಅಮೇರಿಕಾವೇ ಆಗಿತ್ತು. ಅದರ ಕರೆನ್ಸಿಯು ಬಲವಾಗಿದ್ದುದರಿಂದ ವಿಶ್ವ ಒಕ್ಕೂಟ ಅದನ್ನೇ ಜಾಗತಿಕ ಕರೆನ್ಸಿಯಾಗಿ ಒಪ್ಪಿಕೊಂಡಿತ್ತು. ಆಗಲೇ ಶುರುವಾಗಿದ್ದು ಐಎಂಎಫ್ ಮತ್ತು ವಲ್ಡರ್್ ಬ್ಯಾಂಕ್. ಆ ಹೊತ್ತಿನಲ್ಲೇ ಡಾಲರ್ಗೆ ಪ್ರತಿಯಾಗಿ ಚಿನ್ನದ ವಿನಿಮಯವನ್ನು ಜಗತ್ತು ಒಪ್ಪಿಕೊಂಡಿತು. ಅಂದರೆ ಅಮೇರಿಕಕ್ಕೆ ಚಿನ್ನವನ್ನು ಕೊಟ್ಟು ಡಾಲರ್ ಪಡೆಯಬಹುದಾಗಿತ್ತು. ನಮ್ಮ ಪರಿಸ್ಥಿತಿ ಕೇಳಿ.

ನಾವು ನಮ್ಮ ಹಣವನ್ನು ಪೌಂಡಿಗೆ ಬದಲಾಯಿಸಿಕೊಂಡು, ಅದರ ಮೂಲಕ ಡಾಲರ್ ಅನ್ನು ಕೊಂಡುಕೊಳ್ಳಬೇಕಾಗಿತ್ತು. 1971 ರ ವೇಳೆಗೆ ಅಮೆರಿಕಾ ಡಾಲರ್ಗಳನ್ನು ಅಗತ್ಯಕ್ಕಿಂತ ಹೆಚ್ಚು ಮುದ್ರಿಸಿ ಹಂಚುತ್ತಿದೆ ಎಂಬ ಅನುಮಾನ ಜಾಗತಿಕ ಮಟ್ಟದಲ್ಲಿ ಬಲವಾಗಿ ಹಬ್ಬಿತು. ಆಗ ಕೆಲವು ರಾಷ್ಟ್ರಗಳು ಡಾಲರ್ಗೆ ಪ್ರತಿಯಾಗಿ ಚಿನ್ನವನ್ನು ಮರಳಿಕೊಡಿರೆಂದು ಕೇಳಿಕೊಂಡಾಗ ಅಧ್ಯಕ್ಷ ರಿಚಡರ್್ ನಿಕ್ಸನ್ ನಿರ್ಲಜ್ಜವಾಗಿಯೇ ನಿರಾಕರಿಸಿಬಿಟ್ಟ. ಇದು ಡಾಲರ್ನ ಕುರಿತಂತೆ ಇದ್ದ ಅನುಮಾನಗಳನ್ನು ಮತ್ತೂ ಹೆಚ್ಚಿಸಿತು. ಇದ್ದಕ್ಕಿದ್ದಂತೆ ಅದರ ಮೌಲ್ಯ ಕುಸಿದುಹೋಯ್ತು. ಅಮೇರಿಕಾ ಎಲ್ಲವನ್ನೂ ಕಳೆದುಕೊಳ್ಳುವ ಹಂತದಲ್ಲಿದ್ದಾಗ ಅದರ ಬೆಂಬಲಕ್ಕೆ ಬಂದಿದ್ದು ತೈಲ ರಾಷ್ಟ್ರಗಳು. ಅದಾಗಲೇ ಇಸ್ರೇಲ್ನಂತಹ ರಾಷ್ಟ್ರಗಳಿಂದ ಸಾಕಷ್ಟು ಬೆದರಿಕೆಗೆ ಒಳಗಾಗಿದ್ದ ಸೌದಿಗೆ ಸಮರ್ಥರೊಬ್ಬರ ರಕ್ಷಣೆ ಬೇಕಿತ್ತು. ಇತ್ತ ಅಮೇರಿಕಾಕ್ಕೆ ತನ್ನ ಡಾಲರನ್ನು ಉಳಿಸಿಕೊಳ್ಳಬೇಕಿತ್ತು. ಚುರುಕು ಮತಿಯಿಂದ ಅಮೇರಿಕಾ ತೈಲ ರಾಷ್ಟ್ರಗಳೊಂದಿಗೆ ಒಪ್ಪಂದ ಮಾಡಿಕೊಂಡು ಈ ರಾಷ್ಟ್ರಗಳು ತೈಲವನ್ನು ಡಾಲರ್ನಲ್ಲಿ ಮಾರಾಟ ಮಾಡಿದರೆ ತಾನು ಈ ರಾಷ್ಟ್ರಗಳಿಗೆ ರಕ್ಷಣೆ ಕೊಡುವ ಜವಾಬ್ದಾರಿಯನ್ನು ಹೊರುತ್ತೇನೆಂದಿತು. ಜಗತ್ತಿನ ಎಲ್ಲಾ ರಾಷ್ಟ್ರಗಳು ಯಾವುದಾದರು ಒಂದು ವಸ್ತುವಿನ ಆಮದು ಮಾಡಲೇಬೇಕೆಂದರೆ ಅದು ತೈಲವೊಂದೇ ಆಗಿದ್ದರಿಂದ ಡಾಲರ್ ಮಿಂಚಲಾರಂಭಿಸಿತು. ಕಳೆದುಕೊಂಡಿದ್ದ ಮೌಲ್ಯವನ್ನು ಮರಳಿ ಪಡೆಯಿತಲ್ಲದೇ ಜಗತ್ತೆಲ್ಲವೂ ಅನಿವಾರ್ಯವಾಗಿ ಡಾಲರ್ನೆದುರು ಕೈಚಾಚಿ ನಿಲ್ಲುವಂತೆ ಮಾಡಿಬಿಟ್ಟಿತು. ಒಮ್ಮೆ ಅಮೇರಿಕಾ ಬಲವಾಗಿ ನಿಂತೊಡನೆ ಮತ್ತೆ ತನ್ನದ್ದೇ ಚಾಳಿ ಮುಂದುವರಿಸಿತು. ಇಸ್ರೇಲಿಗೆ ತಾನು ನೀಡುವ ಬೆಂಬಲವನ್ನು ಅದು ಎಂದಿಗೂ ಕಡಿಮೆ ಮಾಡಲಿಲ್ಲ. ತೈಲ ರಾಷ್ಟ್ರಗಳಿಗೆ ಇವೆಲ್ಲವೂ ಅರ್ಥವಾದರೂ ಪ್ರತಿಕ್ರಿಯಿಸುವಷ್ಟು ಅವು ಸಮರ್ಥವಾಗಿರಲಿಲ್ಲ. ಆ ರಾಷ್ಟ್ರಗಳ ಎಲ್ಲ ಪ್ರಮುಖರು ಅಮೇರಿಕಾದ ಕೈಗೊಂಬೆಗಳಾಗಿಬಿಟ್ಟಿದ್ದರು. ಸ್ವಲ್ಪ ಬುದ್ಧಿವಂತಿಕೆ ಉಪಯೋಗಿಸಿದ ಸದ್ದಾಂ ಹುಸೇನ್ ಅಮೇರಿಕಾಕ್ಕೆ ಪಾಠ ಕಲಿಸಲು ನಿರ್ಧರಿಸಿ ತೈಲವನ್ನು ತನ್ನದೇ ಕರೆನ್ಸಿಯಲ್ಲಿ ಮಾರುವ ನಿರ್ಣಯ ಕೈಗೊಂಡ. ಆತ ಯಶಸ್ವಿಯಾಗಿದ್ದರೆ ಇಷ್ಟು ಹೊತ್ತಿಗೆ ಅಮೇರಿಕಾ ಮೂಲೆ ಗುಂಪಾಗಬೇಕಿತ್ತು. ಆದರೆ ಅಮೆರಿಕಾ ಸದ್ದಾಂ ಹುಸೇನನ ಮೇಲೆ ಬಗೆ-ಬಗೆಯ ಆರೋಪಗಳನ್ನು ಹೊರಿಸಿ ಇರಾಕಿನ ಮೇಲೆ ದಾಳಿ ಮಾಡುವ ಮುನ್ಸೂಚನೆ ಕೊಟ್ಟಿತು. ಹಾಗಾದೊಡನೆ ಎಲ್ಲೆಡೆ ಇಂಧನದ ಬೆಲೆ ಗಗನ ಮುಟ್ಟಿತು. ತನ್ನೆಲ್ಲಾ ಸಮಸ್ಯೆಗಳಿಂದಲೂ ಚೇತರಿಸಿಕೊಳ್ಳುತ್ತಿದ್ದ ಭಾರತಕ್ಕೆ ಇದು ಬಲವಾದ ಹೊಡೆತವಾಗಿತ್ತು. ಒಂದೆಡೆ ತನ್ನ ಆಪ್ತ ಸಖನಾಗಿದ್ದ ರಷ್ಯಾ ಛಿದ್ರ-ಛಿದ್ರಗೊಂಡಿತು. ಮತ್ತೊಂದೆಡೆ ತೈಲ ಬೆಲೆ ಏರಿಕೆಯಿಂದಾಗಿ ನಮ್ಮ ವಿದೇಶೀ ವಿನಿಮಯ ಆತಂಕದ ಸ್ಥಿತಿಗೆ ತಲುಪಿತ್ತು. ಇನ್ನು ಪ್ರಧಾನಿ ರಾಜೀವ್ ಶಾಬಾನು ವಿಚಾರದಲ್ಲಿ ಮೂಗು ತೂರಿಸಿ ದೇಶದಾದ್ಯಂತ ಜನರ ಅವಕೃಪೆಗೆ ಒಳಗಾಗಿದ್ದರು. ಸಕರ್ಾರ ಬಿತ್ತೂ ಕೂಡ. ರಾಜಕೀಯ ಅಸ್ಥಿರತೆಯಿಂದಾಗಿ ಆಥರ್ಿಕ ಪ್ರಗತಿಯೂ ಕುಂಠಿತಗೊಂಡಿತ್ತು. ಆ ಹೊತ್ತಿನಲ್ಲಿ ತಾತ್ಕಾಲಿಕವಾಗಿ ಅಧಿಕಾರಕ್ಕೇರಿದ್ದು ಚಂದ್ರಶೇಖರ್. ಐಎಮ್ಎಫ್ನಿಂದ ಭಾರತಕ್ಕೆ ಸಾಲ ತೆಗೆದುಕೊಳ್ಳುವ ಪ್ರಯತ್ನ ಅವರು ಮಾಡಿದರಾದರೂ ಅಮೇರಿಕಾದ ಅನುಮತಿಯಿಲ್ಲದೇ ಐಎಮ್ಎಫ್ ಕೊಡುವಂತಿರಲಿಲ್ಲ. ತಕ್ಷಣ ಅಮೇರಿಕಾದೊಂದಿಗೆ ಸಂಧಾನದ ಜವಾಬ್ದಾರಿಯನ್ನು ಹೊತ್ತ ಸುಬ್ರಮಣಿಯನ್ ಸ್ವಾಮಿ ರಾಯಭಾರಿಯೊಂದಿಗೆ ಮಾತನಾಡಿ ಎರಡು ಶತಕೋಟಿ ಡಾಲರ್ಗಳಷ್ಟು ಹಣಕ್ಕೆ ಬೇಡಿಕೆ ಸಲ್ಲಿಸಿದರು. ಅದಕ್ಕೆ ಪ್ರತಿಯಾಗಿ ಅಮೇರಿಕಾ ಇರಾಕ್ ಮೇಲೆ ದಾಳಿ ಮಾಡಲಿರುವ ತನ್ನ ವಿಮಾನಗಳಿಗೆ ಭಾರತದಲ್ಲಿ ಇಂಧನ ತುಂಬಿಕೊಳ್ಳಲು ಅವಕಾಶ ಕೊಡಬೇಕೆಂದು ಕೇಳಿಕೊಂಡಿತು. ಅತ್ಯಂತ ದೀನಸ್ಥಿತಿಯಲ್ಲಿದ್ದ ಭಾರತ ಇದಕ್ಕೆ ತಲೆಬಾಗಿತು. ಆದರೆ ಐಎಮ್ಎಫ್ನ ಈ ಹಣವೂ ಸಾಕಾಗುವಂತಿರಲಿಲ್ಲ. ಆಗಲೇ ಭಾರತೀಯ ರಿಸವರ್್ ಬ್ಯಾಂಕ್ ತನ್ನ ಬಳಿಯಿದ್ದ ಚಿನ್ನವನ್ನು ಅಡವಿಡುವ ಐಡಿಯಾ ತೆಗೆದುಕೊಂಡು ಬಂತು. ದೇಶವನ್ನು ಕತ್ತಲಲ್ಲಿಟ್ಟು ಈ ದೇಶದ ಚಿನ್ನವನ್ನು ಬ್ಯಾಂಕ್ ಆಫ್ ಇಂಗ್ಲೆಂಡ್, ಬ್ಯಾಂಕ್ ಆಫ್ ಸ್ವಿಟ್ಜರ್ಲ್ಯಾಂಡ್ ಮತ್ತು ಬ್ಯಾಂಕ್ ಆಫ್ ಜಪಾನಿಗೆ ಸಾಗಿಸಲಾಯ್ತು. ಸುದ್ದಿ ಪತ್ರಕರ್ತರೊಬ್ಬರ ಮೂಲಕ ಜಗಜ್ಜಾಹೀರಾದಾಗ ಇಡಿಯ ದೇಶದ ಆತ್ಮಾಭಿಮಾನವೇ ಕುಸಿದು ಹೋದಂತಾಗಿತ್ತು. ಆಗ ಅಧಿಕಾರಕ್ಕೆ ಬಂದವರು ಪಿ.ವಿ ನರಸಿಂಹರಾವ್. ಕಠೋರ ನಿರ್ಣಯಗಳನ್ನು ಅವರೀಗ ಕೈಗೊಳ್ಳಲೇಬೇಕಿತ್ತು. ಅಲ್ಲಿಯವರೆಗೂ ತನ್ನದೇ ಆದ ಚೌಕಟ್ಟಿನಲ್ಲಿ ಬೆಳೆಯಲು ಪ್ರಯತ್ನಿಸುತ್ತಿದ್ದ ಭಾರತಕ್ಕೆ ಈಗವರು ಜಾಗತೀಕರಣದ ಹೊಸ ಲೇಪವನ್ನು ಕೊಡುವ ಸಂಕಲ್ಪ ಮಾಡಿದರು. ನೆಹರೂ ರಾಜೀವ್ರ ಕಾಲದಲ್ಲಿ ರಾರಾಜಿಸುತ್ತಿದ್ದ ಪಮರ್ಿಟ್ ರಾಜ್ ಅನ್ನು ಕಿತ್ತೆಸೆದು ವ್ಯಾಪಾರ ವಹಿವಾಟನ್ನು ಸರಳಗೊಳಿಸಿದರು. ಸಾಲ ನೀಡಲು ಜಗತ್ತು ಹಾಕಿದ ಎಲ್ಲ ಶರತ್ತುಗಳನ್ನು ಒಪ್ಪಿಕೊಂಡರಲ್ಲದೇ ರೂಪಾಯಿಯನ್ನು ಬಲುದೊಡ್ಡ ಪ್ರಮಾಣದಲ್ಲಿ ಅಪಮೌಲ್ಯಗೊಳಿಸಿದರು. ಹೀಗೆ ರೂಪಾಯಿ ಅಪಮೌಲ್ಯಗೊಳಿಸುವುದರಿಂದ ರಫ್ತು ಹೆಚ್ಚುವುದು ಎಂಬುದು ಅವರ ವಾದವಾಗಿತ್ತು. ಆದರೆ ಒಂದಷ್ಟು ಲಾಭವಾಗಿದ್ದಂತೂ ನಿಜ. ಕೆಲವು ಭಾರತೀಯ ಉದ್ಯಮಗಳು ಜಾಗತಿಕ ಮಟ್ಟಕ್ಕೆ ಬೆಳೆದು ನಿಂತವು. ದುರದೃಷ್ಟವಶಾತ್ ಜಾಗತಿಕ ಕಂಪೆನಿಗಳನೇಕವು ಭಾರತಕ್ಕೆ ದಾಂಗುಡಿಯಿಟ್ಟವು. ಆದರೆ ಜನ ಸಾಮಾನ್ಯರ ಕೈಯ್ಯಲ್ಲಿ ಹಣ ಓಡಾಡಲಾರಂಭಿಸಿದ್ದಂತೂ ಅಕ್ಷರಶಃ ಸತ್ಯ.

ಆನಂತರ ಈ ಪರಿಯ ಮತ್ತೊಂದು ತೊಂದರೆ ನಾವು ಕಂಡಿದ್ದು ಅಟಲ್ ಬಿಹಾರಿ ವಾಜಪೇಯಿಯವರ ಕಾಲಕ್ಕೆ. ಒಂದೆಡೆ ಪಾಕಿಸ್ತಾನದೊಂದಿಗಿನ ಯುದ್ಧ, ಮತ್ತೊಂದೆಡೆ ಪೋಖ್ರಾನ್ ಅಣುಸ್ಫೋಟದಿಂದಾಗಿ ಅಮೇರಿಕಾ ಹೇರಿದ್ದ ನಿರ್ಬಂಧ. ಇವೆರಡರ ಕಾರಣದಿಂದಾಗಿ ಆಥರ್ಿಕ ಸಂಕಷ್ಟಕ್ಕೆ ಸಿಲುಕಿದ್ದು ಸತ್ಯ. ಆದರೆ ಡಾಲರ್ಗಳ ಕೊರತೆಯನ್ನು ಅಟಲ್ಜಿ ಬಲು ಚಾಣಾಕ್ಷತನದಿಂದ ನಿರ್ವಹಿಸಿದರು. ಅನಿವಾಸಿ ಭಾರತೀಯರಿಗಾಗಿ ಬಾಂಡ್ ಪೇಪರ್ಗಳನ್ನು ಕೊಟ್ಟು ಅವರಿಂದ ಡಾಲರ್ಗಳನ್ನು ಸಂಗ್ರಹಿಸಿದರು. ಅಟಲ್ಜಿಯವರು ಅಧಿಕಾರ ಬಿಡುವಾಗ ನೂರು ಬಿಲಿಯನ್ ಡಾಲರ್ಗಳಷ್ಟು ವಿದೇಶಿ ವಿನಿಮಯ ನಮ್ಮ ಬಳಿ ಇತ್ತು. ಆನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸು ಈ ವಿದೇಶಿ ವಿನಿಮಯದ ಲಾಭವನ್ನು ಚೆನ್ನಾಗಿಯೇ ಪಡೆದುಕೊಂಡಿತು. ಅವರ ಮೊದಲ ಐದು ವರ್ಷ ನಿಭರ್ೀತಿಯಿಂದ ಸಾಗಲು ಅಟಲ್ಜಿಯವರು ಕೂಡಿಟ್ಟಿದ್ದ ಈ ವಿದೇಶೀ ವಿನಿಮಯವೇ ಕಾರಣವಾಗಿತ್ತು. ಮುಂದಿನ ಐದು ವರ್ಷಗಳಲ್ಲಿ ಭಾರತದ ಸಾಲ ಹೆಚ್ಚಾಯಿತು. ಆಮದು ಹೆಚ್ಚಾಗಿ ರಫ್ತು ಕಡಿಮೆಯಾಯಿತು. ಈ ಕಾರಣಕ್ಕಾಗಿಯೇ ರೂಪಾಯಿ ಓಲಾಡಲಾರಂಭಿಸಿತ್ತು. ಅಟಲ್ಜಿಯವರ ಕಾಲದಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡು ಬಂದಿದ್ದ ರೂಪಾಯಿ ಮುಂದಿನ ಹತ್ತು ವರ್ಷಗಳಲ್ಲಿ ನಮ್ಮದ್ದೇ ತಪ್ಪಿನಿಂದಾಗಿ ಹೊಯ್ದಾಡಿತು. ಸುಬ್ರಮಣಿಯನ್ ಸ್ವಾಮಿಯನ್ನು ಒಪ್ಪುವುದಾದರೆ ಕಾತರ್ಿ ಚಿದಂಬರಂ ಸಿಂಗಪೂರ್ನಲ್ಲಿ ಕುಳಿತು ಡಾಲರ್ಗಳನ್ನು ಪಡೆದು ಭಾರತದಲ್ಲಿ ರೂಪಾಯಿಯ ಮೌಲ್ಯವನ್ನು ಕುಸಿಯುವಂತೆ ಮಾಡಿ ಆ ಡಾಲರ್ಗಳನ್ನು ರೂಪಾಯಿಯಲ್ಲಿ ಮರಳಿಸಿ ತಾನು ಕುಳಿತಲ್ಲೇ ಸಾವಿರಾರು ಕೋಟಿ ರೂಪಾಯಿ ಧಂಧೆ ಮಾಡಿದ ಎಂದು ಆರೋಪಿಸಿದರು. ಆ ಆರೋಪಕ್ಕೆ ಆಳುವ ವರ್ಗದವರ್ಯಾರೂ ಪ್ರತಿಕ್ರಿಯಿಸಿರಲಿಲ್ಲ, ವಿರೋಧವನ್ನೂ ವ್ಯಕ್ತಪಡಿಸಿರಲಿಲ್ಲ.

ಅದಾದಮೇಲೆಯೇ ಕುಸಿದು ಹೋಗಿರುವ ಈ ಆಥರ್ಿಕತೆಯನ್ನು ಸರಿಪಡಿಸಲು ಬಲವಾದ ನಿರ್ಣಯಗಳನ್ನು ಕೈಗೊಳ್ಳುವ ಅವಶಕ್ಯತೆ ಇದೆ ಎಂದು ಜನರನ್ನು ಒಪ್ಪಿಸಿಯೇ ಅಧಿಕಾರ ಪಡೆದವರು ಮೋದಿ. ಸಕರ್ಾರದ ಹಣವನ್ನು ಲೂಟಿ ಮಾಡುತ್ತಿದ್ದ ಜನರಿಗೆ ಪಾಠ ಕಲಿಸಲೆಂದೇ ನೋಟು ಅಮಾನ್ಯೀಕರಣದಂತ ಬಲವಾದ ನಿರ್ಣಯಗಳನ್ನು ಮುಲಾಜಿಲ್ಲದೇ ತೆಗೆದುಕೊಂಡರು. 2014 ರ ನಂತರ ಐಎಮ್ಎಫ್ನಿಂದ ತೆಗೆದುಕೊಳ್ಳುವ ಸಾಲದ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿ ಜಗತ್ತು ಅಭಿನಂದಿಸಿತು. ಭಾರತಕ್ಕೆ ವಿದೇಶೀ ಹೂಡಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಆಹ್ವಾನಿಸುವ ಮೋದಿಯವರ ಪ್ರಯತ್ನವೂ ಫಲಕೊಡಲಾರಂಭಿಸಿತು. ನೋಡ ನೋಡುತ್ತಲೇ ನಮ್ಮ ವಿದೇಶೀ ವಿನಿಮಯ ಉಳಿತಾಯ 400 ಬಿಲಿಯನ್ ಡಾಲರ್ಗಳಿಗೇರಿತು. ಭಾರತದ ಅರ್ಥ ವ್ಯವಸ್ಥೆ ಬಲುಬೇಗ ನಾಶವಾಗಬಲ್ಲ ಸ್ಥಾನದಿಂದ ಜಗತ್ತಿನ ಐದನೇ ಅರ್ಥವ್ಯವಸ್ಥೆಯಾಗಿ ಗುರುತಿಸುವ ಮಟ್ಟಕ್ಕೆ ಹೋಯ್ತು. ರಷ್ಯಾ ಮತ್ತು ಅಮೆರಿಕಾಗಳೊಂದಿಗೆ ತನ್ನ ಸಂಬಂಧವನ್ನು ಸಹಜವೆಂಬಂತೆ ಕಾಪಾಡಿಕೊಂಡ ಮೋದಿ ದೇಶಕ್ಕೆ ಲಾಭವಾಗುವ ಎಲ್ಲ ಸಂಗತಿಗಳಲ್ಲೂ ಬಲವಾಗಿಯೇ ನಿಂತುಕೊಂಡರು.

ಆಗಲೇ ಈ ಹೊಡೆತ ಬಿದ್ದದ್ದು. ಟ್ರಂಪ್ ತಮ್ಮ ದೇಶದ ಬಡ್ಡಿ ದರವನ್ನು ಹೆಚ್ಚಿಸಿದರು. ಅದರ ಪರಿಣಾಮವಾಗಿ ಡಾಲರ್ಗಳು ಅತ್ತ ಹರಿಯಲಾರಂಭಿಸಿದವು. ಡಾಲರ್ಗಳ ಬೇಡಿಕೆ ಹೆಚ್ಚಿದಂತೆ ಅದರ ಎದುರಿಗಿನ ಎಲ್ಲ ಕರೆನ್ಸಿಯ ಮೌಲ್ಯವೂ ಕುಸಿಯಲಾರಂಭಿಸಿತು. ಚೀನಾವನ್ನು ಮಟ್ಟ ಹಾಕುವ ಭರದಲ್ಲಿ ಚೀನಾದೊಂದಿಗಿನ ವಿತ್ತೀಯ ಕೊರತೆಯನ್ನು ಕಡಿಮೆ ಮಾಡಲು ಆಲೋಚಿಸಿದ ಟ್ರಂಪ್ ವ್ಯಾಪಾರ ಕದನಕ್ಕಿಳಿದರು. ಚೀನಾ ಕೂಡ ಅದಕ್ಕೆ ಬಲವಾಗಿಯೇ ಪ್ರತಿಕ್ರಿಯಿಸಿತು. ಬಲಾಢ್ಯವೆನಿಸಿದ್ದ ತನ್ನ ಕರೆನ್ಸಿಯನ್ನು ನಾಲ್ಕು ಪ್ರತಿಶತದಷ್ಟು ಅಪಮೌಲ್ಯಗೊಳಿಸಿ ಅಮೇರಿಕಾಕ್ಕೆ ಸೆಡ್ಡು ಹೊಡೆಯಿತು. ಮೊದಲೇ ಚೀನಾದ ವಸ್ತುಗಳು ಕಡಿಮೆ ಬೆಲೆಯದ್ದು. ಈಗ ಕರೆನ್ಸಿಯ ಮೌಲ್ಯ ಕುಸಿದಿದ್ದರಿಂದ ಅಮೇರಿಕಾದ ವಸ್ತುಗಳೇನು ಭಾರತದ ವಸ್ತುಗಳೂ ಜಾಗತಿಕ ಮಟ್ಟದಲ್ಲಿ ಸ್ಪಧರ್ಿಸಲು ತೊಡಕಾಯ್ತು. ಅದಕ್ಕೆ ಪ್ರತಿಯಾಗಿ ಜಗತ್ತಿನ ಬಹುತೇಕ ರಾಷ್ಟ್ರಗಳು ತಮ್ಮ ಕರೆನ್ಸಿಯನ್ನು ಅಪಮೌಲ್ಯಗೊಳಿಸಬೇಕಾಯ್ತು.

ಸಾಕಷ್ಟು ಪ್ರಯತ್ನಗಳ ನಂತರ ಇರಾನಿನೊಂದಿಗೆ ರುಪಾಯಿಯಲ್ಲೇ ತೈಲವನ್ನು ಕೊಂಡುಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದ ಮೋದಿಯವರಿಗೆ ಇರಾನ್ ಮೇಲೆ ಹೇರಿದ ನಿರ್ಬಂಧವೂ ಸಾಕಷ್ಟು ಕಿರಿಕಿರಿ ಉಂಟುಮಾಡಿತು. ಈ ಒಪ್ಪಂದದಿಂದಾಗಿ ನಮಗೆ ಡಾಲರ್ನ ಖರೀದಿಯ ಅವಶ್ಯಕತೆಯೂ ತಪ್ಪುತ್ತಿತ್ತು. ಮತ್ತು ತೈಲ ಮಾರುಕಟ್ಟೆಯಲ್ಲಿ ರೂಪಾಯಿಯನ್ನು ಬಲಗೊಳಿಸುವ ಅವಕಾಶವೂ ದೊರೆಯುತ್ತಿತ್ತು. ಆದರೆ ಈ ಒಪ್ಪಂದವನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸುವ ಪ್ರಯತ್ನಕ್ಕೆ ಅಡ್ಡಗಾಲಾದ ಅಮೇರಿಕಾ ರೂಪಾಯಿಯ ಓಟಕ್ಕೆ ತಡೆಯೊಡ್ಡಿತು. ಅತ್ತ ಟಕರ್ಿಯ ಲಿರಾ ಅತಿ ಕೆಟ್ಟ ಪರಿಸ್ಥಿತಿಯಲ್ಲಿರುವುದು, ಬ್ರೆಜಿಲ್, ರಷ್ಯಾದಂತಹ ರಾಷ್ಟ್ರಗಳೂ ಪತರಗುಟ್ಟಿರುವುದೂ ನೋಡಿದರೆ ಭಾರತ ಬಲವಾಗಿಯೇ ಇದೆ. ಈಗ ಆಗಿರುವ ಈ ರೂಪಾಯಿಯ ಅಪಮೌಲ್ಯ ನಮಗೆ ಅನೇಕ ಸಮಸ್ಯೆಗಳನ್ನು ತಂದೊಡ್ಡಿರುವುದು ನಿಜವಾದರೂ ಇದು ಜಾಗತಿಕ ಸಮಸ್ಯೆಯಾಗಿರುವುದರಿಂದ ಇದಕ್ಕೊಂದು ಪರಿಹಾರ ಬಲುಬೇಗ ದೊರಕಬಹುದೆಂಬ ವಿಶ್ವಾಸ ಖಂಡಿತ ಇದೆ. ಅದಾಗಲೇ ಮೋದಿ ರಷ್ಯಾದೊಂದಿಗೆ ದ್ವಿಪಕ್ಷೀಯ ಕರೆನ್ಸಿ ವಿನಿಮಯದ ಒಪ್ಪಂದ ಮಾಡಿಕೊಂಡಿದ್ದಾರೆ. ಬರಲಿರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರಾಷ್ಟ್ರಗಳು ಈ ದಿಕ್ಕಿನತ್ತ ಒಲವು ತೋರಬಹುದು. ಈ ಎಲ್ಲ ಕಾರಣಗಳಿಂದಾಗಿ ರಿಸವರ್್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗೌವರ್ನರ್ ರಘುರಾಮ್ ರಾಜನ್ ಆತಂಕ ಪಡುವ ಸಂಗತಿಯೇನಲ್ಲ ಎಂದು ಉದ್ಗರಿಸಿದ್ದಾರೆ!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top