National

ಬಲಪಂಥೀಯ ಹೋರಾಟಗಾರರನ್ನು, ಬಿಜೆಪಿ ಬೆಂಬಲಿಗರನ್ನು ಬಂಧಿಸುತ್ತಿರುವ ಸರ್ಕಾರಗಳು!!

ಮೇ 9 ರಂದು ಪಶ್ಚಿಮ ಬಂಗಾಳದ ಬಿಜೆಪಿಯ ಯುವನಾಯಕಿ ಪ್ರಿಯಾಂಕ ಶರ್ಮಾ ಅವರು ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದರು. ಪ್ರಿಯಾಂಕ ಚೋಪ್ರಾಳ ಮೆಟ್ ಗಾಲಾದ ಫೊಟೊಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಮುಖವನ್ನು ಎಡಿಟ್ ಮಾಡಿದ್ದ ಫೋಟೊ ಅದು. ಅದನ್ನು ಸೊಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ಕಾರಣಕ್ಕೆ ತೃಣಮೂಲ ಕಾಂಗ್ರೆಸ್ಸಿನ ವಿಭಾಸ್ ಹಾಜ್ರಾ ಅವರು ಪ್ರಿಯಾಂಕ ಅವರ ಮೇಲೆ ದೂರು ದಾಖಲಿಸಿದ್ದರು.

ದೂರನ್ನು ಅನುಸರಿಸಿ ಪಶ್ಚಿಮ ಬಂಗಾಳದ ಪೊಲೀಸರು ಆಕೆಯನ್ನು ಬಂಧಿಸಿದ್ದರು. ಇದೀಗ ಆಕೆಯ ಮೇಲೆ ಜಾಮೀನು ರಹಿತ ವಾರೆಂಟ್ ಅನ್ನು ಜಾರಿಗೊಳಿಸಲಾಗಿದೆ. 14 ದಿನಗಳ ಕಾಲ ಆಕೆಯನ್ನು ಬಂಧನದಲ್ಲಿರಿಸಲಾಗಿದೆ.

ದೂರಿನಲ್ಲಿ ‘ಈಕೆ ತನ್ನ ಫೇಸ್ ಬುಕ್ ಪೋಸ್ಟ್ ನ ಮೂಲಕ ಬಂಗಾಳದ ಗೌರವಾನ್ವಿತ ಮುಖ್ಯಮಂತ್ರಿಗೆ ಅವಮಾನವಾಗುವಂತೆ ಮಾಡಿದ್ದಾಳಷ್ಟೇ ಅಲ್ಲದೇ ಬಂಗಾಳದ ಸಂಸ್ಕೃತಿಗೂ ಅವಮಾನವಾಗುವಂತೆ ಬರೆದಿದ್ದಾಳೆ. ಇದು ಸೈಬರ್ ಕ್ರೈಮ್’ ಎಂದು ನಮೂದಿಸಲಾಗಿದೆ. ಪ್ರಿಯಾಂಕ ಶರ್ಮಾ ಅವರ ಮೇಲೆ ಐಪಿಸಿ ಸೆಕ್ಷನ್ 500, 66ಎ ಮತ್ತು ಇನ್ಫಾರ್ಮೇಷನ್ ಟೆಕ್ನಾಲಜಿ ಕಾಯ್ದೆಯ 67ಎ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ. ಸೆಕ್ಷನ್ 66ಎ ಯನ್ನು ಸರ್ವೋಚ್ಚ ನ್ಯಾಯಾಲಯ 2015ರ ಮಾರ್ಚ್ ನಲ್ಲಿಯೇ ಅಸಿಂಧುವಾಗಿಸಿತ್ತು ಎನ್ನುವುದು ಈಗ ನೆನಪಿಸಿಕೊಳ್ಳಬೇಕಾದ ಸಂಗತಿ.

ಇದು ಕ್ರಿಮಿನಲ್ ಅಪರಾಧ ಮತ್ತು ಪೊಲೀಸರು ಸರಿಯಾದ ಕ್ರಮ ಕೈಗೊಂಡಿದ್ದಾರೆಂದು ಟಿ ಎಮ್ ಸಿ ನಾಯಕ ಅರೂಪ್ ರಾಯ್ ತಿಳಿಸಿದ್ದಾರೆ. 56,000 ಕ್ಕೂ ಹೆಚ್ಚು ಜನ ಟ್ವಿಟರ್ ನಲ್ಲಿ ಪ್ರಿಯಾಂಕ ಪರ ಬೆಂಬಲಕ್ಕೆ ನಿಂತಿದ್ದರು.

ಇತ್ತೀಚೆಗೆ ಕರ್ನಾಟಕದಲ್ಲಿಯೂ ಮಹೇಶ್ ವಿಕ್ರಮ್ ಹೆಗ್ಡೆ, ಶಾರದಾ, ಶೃತಿ ಬೆಳ್ಳಕ್ಕಿ, ಅಜಿತ್ ಹೆರಾಂಜೆ ಅವರುಗಳ ಮೇಲೆ ಸೊಷಿಯಲ್ ಮಿಡಿಯಾದಲ್ಲಿ ಸುದ್ದಿಯನ್ನು ಹಂಚಿಕೊಂಡ ಕಾರಣ ರಾಜ್ಯ ಸರ್ಕಾರ ಕಾನೂನು ಕ್ರಮ ಕೈಗೊಳ್ಳುವಂತೆ ನೋಡಿಕೊಂಡಿದ್ದು ತಿಳಿಯದ ಸಂಗತಿಯಲ್ಲ. ಆದರೆ, ಹೀಗೆ ಬಲಪಂಥೀಯ, ಬಿಜೆಪಿ ಬೆಂಬಲಿಗರ ಮೇಲೆಯೇ ಕೇಸನ್ನು ದಾಖಲಿಸುತ್ತಿರುವುದು ಮಹಾಘಟಬಂಧನದ ನಾಯಕರ ಅಸಹಾಯಕತೆಯನ್ನು ಎತ್ತಿ ತೋರುತ್ತಿದೆ! ಪಶ್ಚಿಮ ಬಂಗಾಳದಲ್ಲಿ ದೀದಿ, ಕರ್ನಾಟಕದಲ್ಲಿ ಕುಮಾರಸ್ವಾಮಿ, ಸಿದ್ದರಾಮಯ್ಯನವರು ತಮ್ಮ ಮನಸ್ಸಿಗೆ ಬಂದಂತೆ ಸರ್ಕಾರ ನಡೆಸುತ್ತಿರುವುದಕ್ಕೆ ಇದು ಸಾಕ್ಷಿ. ಮೋದಿಯವರನ್ನು ಸೋಲಿಸುವುದನ್ನೇ ತಮ್ಮ ಗುರಿಯೆಂದು ಭಾವಿಸಿರುವ ಈ ಸರ್ಕಾರಗಳು ರಾಜ್ಯದಲ್ಲಿ ಒಂದು ರೀತಿಯ ತುರ್ತು ಪರಿಸ್ಥಿತಿಯನ್ನು ಹೇರಿರುವುದು ನಿಜ.

ಮುಖ್ಯಮಂತ್ರಿಗಳನ್ನು ಅವಮಾನಿಸುವ ಪೋಸ್ಟುಗಳು ಎಂದು ಸುಳ್ಳು ಕೇಸು ಹಾಕಿ ಇಲ್ಲದ ಸೆಕ್ಷನ್ ಗಳ ಅಡಿಯಲ್ಲಿ ಬಂಧಿಸುವ ಸರ್ಕಾರಗಳು ರಾಷ್ಟ್ರದ ಪ್ರಧಾನಿಮಂತ್ರಿ, ರಾಷ್ಟ್ರಪತಿಯವರ ವಿರುದ್ಧ ಅವಹೇಳನಕಾರಿ ಪೋಸ್ಟುಗಳಿದ್ದರೂ ಗಮನಿಸದೇ ಇರುವುದು ಇವರಿಗಿರುವ ದೇಶಾಭಿಮಾನವನ್ನು ತೋರುತ್ತದೆ. ಇದರ ಜೊತೆಗೆ ಸದಾ ಪತ್ರಿಕಾ ಸ್ವಾತಂತ್ರ್ಯ, ಮಾಧ್ಯಮ ಸ್ವಾತಂತ್ರ್ಯದ ಮಾತುಗಳನ್ನಾಡುವ ಸೋ ಕಾಲ್ಡ್ ಬುದ್ಧಿಜೀವಿಗಳು ಈಗ ಮೌನವಹಿಸಿರುವುದು ಕಂಡುಬಂದಿದೆ.

Click to comment

Leave a Reply

Your email address will not be published. Required fields are marked *

Most Popular

To Top