National

ಬದಲಾಗುವುದೇ ಕಾಶ್ಮೀರದ ನಕ್ಷೆ?!

ಕೊರೋನಾದತ್ತ ಗಮನ ಹರಿಸಿದ ಮೇಲೆ ಕಾಶ್ಮೀರವನ್ನು ನಾವು ಮರೆತೇಬಿಟ್ಟಿದ್ದೇವೆ. ಆಟರ್ಿಕಲ್ 370ಯನ್ನು ಕಿತ್ತೊಗೆದ ಮೇಲೆ ಶಾಂತವಾಗಿದ್ದ ಕಾಶ್ಮೀರ ಈಗ ಮತ್ತೂ ಕರಾಳಶಾಂತಿಯತ್ತ ಹೊರಳುತ್ತಿದೆ. ಈಗಿನ ಈ ಕರಾಳಶಾಂತಿ ಪಾಕಿಸ್ತಾನದ, ಚೀನಿಯನ್ನರ ಮತ್ತು ಜಗತ್ತಿನ ಅನೇಕ ಉದಾರವಾದಿಗಳ ನೆಮ್ಮದಿಯನ್ನಂತೂ ಹಾಳುಗೆಡವುತ್ತಿದೆ. ಒಂದಷ್ಟು ವಿಸ್ತಾರವಾಗಿ ಇದನ್ನು ಒರೆಗೆ ಹಚ್ಚೋಣ.


ಕಾಶ್ಮೀರದಿಂದ ಆಟರ್ಿಕಲ್ 370 ಕಿತ್ತರೆ ದೇಶದಲ್ಲೆಲ್ಲಾ ಮುಸಲ್ಮಾನರು ದಂಗೆ ಏಳುತ್ತಾರೆ ಎಂದು ಸ್ವಾತಂತ್ರ್ಯದ ಲಾಗಾಯ್ತು ನಂಬಿಸಿಕೊಂಡು ಬಂದಿದ್ದೆವು. ಅಮಿತ್ಶಾ ಬಲು ಚಾಕಚಕ್ಯತೆಯಿಂದ ಇದರ ವಿರೋಧಕ್ಕೆ ಬೇಕಾಗುವ ತಯಾರಿಯನ್ನು ದೇಶದ ಮುಸಲ್ಮಾನರು, ಪಾಕಿಸ್ತಾನದ ಐಎಸ್ಐ ಮಾಡಿಕೊಳ್ಳುವ ಮೊದಲೇ ಸಂವಿಧಾನದ ತಿದ್ದುಪಡಿಯನ್ನೇ ಮಾಡಿಬಿಟ್ಟಿದ್ದರು. ಈ ವಿಧಿಯನ್ನು ತೆಗೆದಿದ್ದಕ್ಕೆ ಪ್ರತಿಕ್ರಿಯೆ ಹೇಗೆ ಕೊಡಬೇಕೆಂದು ಯೋಜನೆ ರೂಪಿಸುತ್ತಿರುವಾಗಲೇ ಕೇಂದ್ರಸಕರ್ಾರ ಸಿಎಎ ಜಾರಿಗೆ ತಂತು. ಆಟರ್ಿಕಲ್ 370 ಮತ್ತು ಸಿಎಎ ನಡುವಣ ಅವಧಿಯಲ್ಲಿ ಐಎಸ್ಐ ಭಾರತದಲ್ಲಿರುವ ತಮ್ಮ ಏಜೆಂಟುಗಳನ್ನು ತಿವಿದಿದ್ದರ ಪರಿಣಾಮವಾಗಿ ಅಂತೂ ಸಿಎಎ ವಿರುದ್ಧ ವ್ಯಾಪಕ ಪ್ರತಿಭಟನೆ ಆಯ್ತು. ಅದು ದೇಶವನ್ನು ಅಲುಗಾಡಿಸಿಬಿಡಲಿದೆ ಎಂಬ ಭ್ರಮೆಯಲ್ಲಿದ್ದ ಪಾಕಿಸ್ತಾನಿಗಳಿಗೆ ಬಲುದೊಡ್ಡ ನಷ್ಟವೇ ಆಯ್ತು. ಏಕೆಂದರೆ ಶಾಹಿನ್ಬಾಗ್ನಲ್ಲಿ ಪ್ರತಿಭಟನೆಗೆ ಕುಳಿತವರಿಂದ ಹಿಡಿದು ಮಂಗಳೂರಿನಲ್ಲಿ ಗುಂಡೇಟು ತಿಂದು ಸತ್ತವರವರೆಗೆ ಯಾರ ಕುರಿತಂತೆಯೂ ಜಾಗತಿಕ ಮಟ್ಟದಲ್ಲಾಗಲಿ, ದೇಶೀಯ ನೆಲೆಕಟ್ಟಿನಲ್ಲಾಗಲಿ ಅನುಕಂಪದ ಅಲೆ ವ್ಯಕ್ತವಾಗಲೇ ಇಲ್ಲ. ಇದು ಪ್ರತ್ಯೇಕ ಕಾಶ್ಮೀರದ ಭಾವನೆಗೆ ನಿಜಕ್ಕೂ ದೊಡ್ಡ ಹೊಡೆತವೇ ಆಗಿತ್ತು. ಕಾಶ್ಮೀರದಲ್ಲಿ ದಂಗೆಗಳೇ ನಡೆಯದಂತೆ ಸೈನಿಕರು ನೋಡಿಕೊಂಡಿರುವುದನ್ನು ಐಎಸ್ಐಗೆ ದುಡ್ಡು ಕೊಡುತ್ತಿದ್ದವರು ಸಹಜವಾಗಿ ಪ್ರಶ್ನಿಸಲಾರಂಭಿಸಿದರು. ಆಗ ಅವರಿಗೆ ವರದಾನವಾಗಿ ಬಂದಿದ್ದು ಕೊರೋನಾ!


ರಾಕ್ಷಸರೆಂದರೆ ಹಾಗೇ ಇರುತ್ತಾರೆ. ಇತರರು ನೋವಿನಲ್ಲಿರುವಾಗಲೂ ಅವರ ಮೇಲೆ ದಾಳಿ ಮಾಡಿ ವಿಕೃತ ಆನಂದವನ್ನು ಅನುಭವಿಸುತ್ತಾರೆ. ಇವರೂ ಹಾಗೆಯೇ. ಕೊರೋನಾ ವಿರುದ್ಧ ಭಾರತ ತಾನು ಹೋರಾಟ ಮಾಡುತ್ತಿರುವುದಲ್ಲದೇ ಸಂಕಟದಲ್ಲಿರುವ ಇತರ ರಾಷ್ಟ್ರಗಳಿಗೂ ಸಹಾಯಹಸ್ತವನ್ನು ಚಾಚಲು ಸಿದ್ಧವಾಗಿ ನಿಂತಿದ್ದಾಗಲೇ ಕಾಶ್ಮೀರದೊಳಕ್ಕೆ ಭಯೋತ್ಪಾದಕರನ್ನು ನುಸುಳಿಸುವ ಪಾಕಿಸ್ತಾನದ ಕೃತ್ಯ ಬೆಳಕಿಗೆ ಬಂತು. ಹಾಗಂತ ಸೇನೆ ತಯಾರಾಗಿರಲಿಲ್ಲವೆಂದೇನಲ್ಲ. ಈ ಹೊಸವರ್ಷ ಆರಂಭವಾಗುತ್ತಿದ್ದಂತೆಯೇ ಒಳನುಸುಳುತ್ತಿದ್ದ ಭಯೋತ್ಪಾದಕರನ್ನು ಹುಡುಹುಡುಕಿ ಕೊಲ್ಲಲು ಆರಂಭಮಾಡಿಬಿಟ್ಟಿದ್ದರು. ಹೀಗೆ ಸತ್ತ ಭಯೋತ್ಪಾದಕರ ಕುರಿತಂತೆ ಪಾಕಿಸ್ತಾನಕ್ಕೆ ಜವಾಬ್ದಾರಿಯೇನೂ ಇಲ್ಲ. ಇನ್ನೊಂದಷ್ಟು ಜನರ ತಲೆಕೆಡಿಸಿ ಒಳನುಸುಳಿಸಿದರಾಯ್ತು. ಹಾಗೆಂದುಕೊಂಡೇ ಪಾಕಿಸ್ತಾನ ದುಡ್ಡಿನ ಆಮಿಷ ತೋರಿಸಿ, ಮತದ ಅಫೀಮು ತಿನ್ನಿಸಿ ಒಂದಷ್ಟು ಜನರನ್ನು ನುಗ್ಗಿಸಿಬಿಡುತ್ತದೆ. ಭಯೋತ್ಪಾದಕರು ಗೆದ್ದರೆ ಪಾಕಿಸ್ತಾನಕ್ಕೆ ಲಾಭ, ಸತ್ತರೆ ನಷ್ಟವೇನೂ ಇಲ್ಲ. ಈ ಬಾರಿ ಭಾರತೀಯ ಸೇನೆ ಒಳಗೆ ಬರಲೆತ್ನಿಸಿದ ಪ್ರತಿಯಬ್ಬರನ್ನೂ ಕೊಂದು ಬಿಸಾಡಲೇಬೇಕೆಂದು ಪಾಕ್ ಆಕ್ರಮಿತ ಕಾಶ್ಮೀರದ ಗಡಿಗಳ ಮೇಲೆ ಗಮನವಿಟ್ಟೇ ಕುಳಿತಿತ್ತು. ನೆನಪಿಡಿ, ಗಡಿರೇಖೆಯಲ್ಲಿ ಯಾವಾಗ ಪಾಕಿಸ್ತಾನ ಅಪ್ರಚೋದಿತ ದಾಳಿ ಮಾಡುತ್ತದೆಯೋ ಆಗ ಅದು ಭಾರತೀಯ ಸೈನಿಕರ ಗಮನವನ್ನು ನುಸುಳುಕೋರರಿಂದ ಪಕ್ಕಕ್ಕೆ ತಿರುಗಿಸುವ ಪ್ರಯತ್ನವೇ ಆಗಿರುತ್ತದೆ! ಈ ಬಾರಿ ಕೊರೋನಾ ಬಂದಾಗ ಈ ರೀತಿಯ ಅಪ್ರಚೋದಿತ ದಾಳಿ ಅಂದುಕೊಂಡಿದ್ದಕ್ಕಿಂತ ಹೆಚ್ಚೇ ಆಗಿತ್ತು. ಅದು ಪಾಕಿಸ್ತಾನಕ್ಕೆ ಹೆಮ್ಮೆಯ ಸಂಗತಿ ಕೂಡ. ಹೀಗೆ ಒಳ ಬಂದವರನ್ನು ಗಡಿಯಲ್ಲೇ ತಡೆಗಟ್ಟಿ ಕೊಂದರೆ ಒಂದು ಹಂತದ ಲಾಭ. ಅವರೇನಾದರೂ ಒಳಬಂದುಬಿಟ್ಟರೆ ಅವರನ್ನು ಹುಡುಕಿ ಕೊಲ್ಲುವುದು ಸುಲಭದ ಸಂಗತಿಯಲ್ಲ. ಆದರೂ ನಮ್ಮ ಸೈನಿಕರು ಮುಲಾಜಿಲ್ಲದೇ ಕಾಯರ್ಾಚರಣೆಯನ್ನು ನಡೆಸಿ ಅವರನ್ನು ಕೊಂದು ಮುಗಿಸುತ್ತಾರೆ. ಇದೇ ರೀತಿ ಅಡಗಿದ್ದ ಭಯೋತ್ಪಾದಕರನ್ನು ಹುಡುಕಿ ಕೊಲ್ಲುವಾಗಲೇ ಕಾಶ್ಮೀರದ ಹಂದ್ವಾರಾದಲ್ಲಿ ನಾಲ್ಕು ಜನ ಸೈನಿಕರನ್ನು, ಒಬ್ಬ ಪೊಲೀಸರನ್ನು ಭಾರತ ಕಳೆದುಕೊಂಡಿದ್ದು! ಅದು ಭಯೋತ್ಪಾದಕರಿಗೆ ವಿಜಯೋತ್ಸವದ ದಿನ. ಅವರು ಗೆದ್ದೆವೆಂದು ಬೀಗುವಷ್ಟರಲ್ಲಿ ಭಾರತೀಯ ಸೇನೆ ರಿಯಾಜ್ ನಾಯ್ಕೂ ಎಂಬ ಹಿಜ್ಬುಲ್ ಮುಜಾಹಿದ್ದೀನ್ನ ಮುಖ್ಯಸ್ಥನನ್ನು ಕೊಂದು ಬಿಸಾಡಿ ಭಯೋತ್ಪಾದಕರ ಗೋಣನ್ನೇ ಮುರಿದುಬಿಟ್ಟಿದ್ದಾರೆ. ರಿಯಾಜ್ ನಾಯ್ಕೂವಿನ ಸಾವು ಪಾಕಿಸ್ತಾನದ ಭಯೋತ್ಪಾದಕ ಪ್ರಮುಖರಿಗೆ ಎಷ್ಟು ದೊಡ್ಡ ಹೊಡೆತ ಎನ್ನುವುದು ಅನೇಕರಿಗೆ ಅರ್ಥವಾಗಿರಲಿಕ್ಕಿಲ್ಲ. ಈತ ಕಾಶ್ಮೀರಿ ಭಯೋತ್ಪಾದಕರ ಇತಿಹಾಸದಲ್ಲೇ 8 ವರ್ಷಗಳಷ್ಟು ದೀರ್ಘಕಾಲ ಕ್ರಿಯಾಶೀಲವಾಗಿದ್ದವನು. ಬುರ್ಹನ್ವನಿ ತೀರಿಕೊಂಡ ನಂತರವೂ, ಹಿಜ್ಬುಲ್ ಒಡೆದು ಹೋಗುತ್ತದೆ ಎನ್ನುವ ಸಂದರ್ಭ ಬಂದಾಗಲೂ ಅದನ್ನು ಬಲವಾಗಿ ಹಿಡಿದು ನಿಲ್ಲಿಸಿದವನು ಆತ. ಆತನ ನಾಯಕತ್ವದ ಛವಿ ಹೇಗಿತ್ತೆಂದರೆ 2010ರಲ್ಲಿ 54 ಜನ ಸ್ಥಳೀಯರು ಭಯೋತ್ಪಾದಕರಾಗಲು ಮುಂದೆ ಬಂದು ಸಂಘಟನೆಗೆ ಸೇರಿಕೊಂಡರೆ ಅದಾದ ಮೂರು ವರ್ಷಗಳಲ್ಲಿ ಹೀಗೆ ಸೇರುವ ಸ್ಥಳೀಯರ ಪ್ರಮಾಣ ತೀರಾ ಕಡಿಮೆಯಾಯ್ತು. 2011-12ರಲ್ಲಿ 20ರ ಆಸುಪಾಸಿನಲ್ಲಿ ಸ್ಥಳೀಯರು ಸೇರ್ಪಡೆಗೊಂಡರೆ 2013ರಲ್ಲಿ ಹೀಗೆ ಸೇರಿಕೊಂಡವರ ಸಂಖ್ಯೆ 6 ಮಾತ್ರ. 2017ರಲ್ಲಿ ಬುರ್ಹನ್ವನಿ ತೀರಿಕೊಂಡು ನಾಯ್ಕೂ ಅಧಿಕಾರ ಪಡೆದಾಗ 126 ಜನ ಸೇರಿಕೊಂಡಿದ್ದರು. ಅದನ್ನೇ ಹೆಚ್ಚೆಂದು ಎಲ್ಲರೂ ಭಾವಿಸುತ್ತಿದ್ದರೆ, ಮರುವರ್ಷವೇ ಈತ ತನ್ನ ಪ್ರಭಾವ ಬಳಸಿ 200ಕ್ಕೂ ಹೆಚ್ಚು ತರುಣರ ತಲೆಕೆಡಿಸಿ ಭಯೋತ್ಪಾದಕರನ್ನಾಗಿಸಿದ್ದ! ಸುಮಾರು 12ಕ್ಕೂ ಹೆಚ್ಚು ಗುಪ್ತಸ್ಥಳಗಳನ್ನು ಹೊಂದಿದ್ದ ಈತ ಹತ್ತಾರು ಬಾರಿಯಾದರೂ ಸೈನಿಕರಿಗೆ ಚಳ್ಳೆಹಣ್ಣು ತಿನ್ನಿಸಿ ಪಾರಾಗಿಬಿಟ್ಟಿದ್ದ. ಪಾಕಿಸ್ತಾನದಲ್ಲಿರುವ ಲಷ್ಕರ್-ಎ-ತಯ್ಬಾದ ಮುಖ್ಯಸ್ಥ ಸೈಯ್ಯೀದ್ ಸಲಾಹುದ್ದೀನ್ನ ಆತ್ಮೀಯರ ಪಟ್ಟಿಯಲ್ಲಿದ್ದ ಈತ ಎಷ್ಟು ಪ್ರಭಾವಿಯಾಗಿದ್ದನೆಂದರೆ ಈತ ದಾಳಿಯಲ್ಲಿ ಮೃತಪಟ್ಟೊಡನೆ ಆ ದುಃಖವನ್ನು ಭರಿಸಲಾಗದೇ ಸಲಾಹುದ್ದೀನ್ ಒಂದು ಶೋಕಸಭೆಯನ್ನೇ ಕರೆದು ಅದರೊಳಗೆ ತನ್ನ ಹೃದಯಕ್ಕೆ ಆರದ ಗಾಯವಾಗಿದೆ ಎಂದೆಲ್ಲಾ ಅಲವತ್ತುಕೊಂಡ. ಅಷ್ಟೇ ಅಲ್ಲದೇ ಜನವರಿಯಿಂದೀಚೆಗೆ 80 ಜನ ಭಯೋತ್ಪಾದಕರನ್ನು ಭಾರತ ಹೊಡೆದುರುಳಿಸಿದೆ ಎಂಬುದನ್ನು ಒಪ್ಪಿಕೊಂಡುಬಿಟ್ಟ. ಇವರೆಲ್ಲರ ಹೌತಾತ್ಮ್ಯವೇ ಕಾಶ್ಮೀರದ ಮುಕ್ತಿಗೆ ರಾಜಮಾರ್ಗ ಎಂದು ಸೇರಿಸುವುದನ್ನು ಆತ ಮರೆಯಲಿಲ್ಲ!


ನಾಯ್ಕೂ ಹುಟ್ಟಿದ್ದು ಪುಲ್ವಾಮಾದ ಅವಂತಿಪುರ ತಾಲೂಕಿನ ಬೇಗ್ಪುರದಲ್ಲಿ. ತಂದೆ ಅಸಾದುಲ್ಲ ಹೊಲಿಗೆಯಂತ್ರವನ್ನಿಟ್ಟುಕೊಂಡಿದ್ದವರು. ಶಿಕ್ಷಣ ಮುಗಿಸಿದ ನಂತರ ಗಣಿತದ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ನಾಯ್ಕೂ. 2010 ರಿಂದ 12ರ ನಡುವೆ ಭಯೋತ್ಪಾದಕರ ಸಂಪರ್ಕಕ್ಕೆ ಬಂದು ಅವರ ಹಿತೈಷಿಯಾಗಿ ಅವರಿಗೆ ಸ್ಥಳೀಯ ಸಹಕಾರಗಳನ್ನು ಒದಗಿಸಲಾರಂಭಿಸಿದ. 2012ರ ಮೇ ತಿಂಗಳಲ್ಲಿ ಹಿಜ್ಬುಲ್ ಮುಜಾಹಿದ್ದೀನ್ಗೆ ಅಧಿಕೃತವಾಗಿ ಸೇರಿಕೊಂಡ. ಮುಂದಿನ ಐದು ವರ್ಷಗಳಲ್ಲಿ ಸಂಘಟನೆಯನ್ನು ಬಲಪಡಿಸುವಲ್ಲಿ ತನ್ನನ್ನು ತೊಡಗಿಸಿಕೊಂಡ. ಬುರ್ಹನ್ವನಿಗೂ ನಾಯ್ಕುಗೂ ಚಟುವಟಿಕೆಯ ಶೈಲಿಯಲ್ಲಿ ಒಂದು ಭಿನ್ನತೆಯಿತ್ತು. ಆತ ಫೇಸ್ಬುಕ್ನಲ್ಲಿ, ಟ್ವಿಟರ್ನಲ್ಲಿ ತನ್ನ ಚಿತ್ರಗಳನ್ನು ಹಾಕಿಕೊಂಡು ತರುಣರನ್ನು ಆಕಷರ್ಿಸುತ್ತಾ ಸಂಘಟನೆಯನ್ನು ವಿಸ್ತಾರಗೊಳಿಸುವ ವಿಚಾರದಲ್ಲಿ ನಂಬಿಕೆಯಿಟ್ಟಿದ್ದರೆ, ನಾಯ್ಕೂ ಪ್ರತಿಯೊಬ್ಬರ ಜೊತೆ ಸಂಪರ್ಕ ಬಲಗೊಳಿಸಿಕೊಳ್ಳುವ ಮೂಲಕ ಮತ್ತು ಶತ್ರುಗಳಲ್ಲಿ ಹೆದರಿಕೆ ಹುಟ್ಟಿಸುವ ಕ್ರಿಯೆಗಳಿಗೆ ಪ್ರೇರೇಪಣೆ ಕೊಡುವ ಮೂಲಕ ತರುಣರನ್ನು ತನ್ನವರನ್ನಾಗಿಸಿಕೊಳ್ಳುತ್ತಿದ್ದ. ಬುರ್ಹನ್ವನಿಯೊಂದಿಗೆ ಯಾವ ಫೋಟೊದಲ್ಲೂ ಈತ ಕಾಣಿಸಿಕೊಂಡವನೇ ಅಲ್ಲ. ಈತ ಓದಿಕೊಂಡವನೆಂಬ ಗೌರವ ಇದ್ದುದರಿಂದ ಜೊತೆಗಾರರೆಲ್ಲಾ ಇವನ ಬಗ್ಗೆ ವಿಶೇಷವಾದ ಅಭಿಮಾನ ಹೊಂದಿದ್ದರು. ಅದೂ ಕೂಡ ಸಂಘಟನೆಯಲ್ಲಿ ವೇಗವಾಗಿ ಬೆಳೆಯಲು ಇವನಿಗೆ ಅನುವು ಮಾಡಿಕೊಟ್ಟಿತು. 2016ರಲ್ಲಿ ಬುರ್ಹನ್ವನಿಯನ್ನು ಪೊಲೀಸರು ಕೊಂದು ಬಿಸಾಡಿದಮೇಲೆ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಅಲುಗಾಡುವಂತೆ ಕಾಣುತ್ತಿತ್ತು. ಬುರ್ಹನ್ವನಿಯ ನಂತರ ಅಧಿಕಾರ ಸ್ವೀಕರಿಸಿದ ಜಾಕಿರ್ ಮೂಸಾ ಸಂಘಟನೆಯ ನಿಷ್ಠೆಯನ್ನು ಪಾಕಿಸ್ತಾನಕ್ಕಿಡಬೇಕೋ ಅಥವಾ ವೈಶ್ವಿಕ ಮಟ್ಟದ್ದಾಗಿರಬೇಕೋ ಎಂಬ ವಿಚಾರದಲ್ಲಿ ಹಿಜ್ಬುಲ್ನಿಂದ ಹೊರಬಂದ. ತನ್ನದ್ದೇ ಆದ ಅನ್ಸರ್-ಉಲ್ ಗಜ್ವಾತ್-ಉಲ್-ಹಿಂದ್ ಎಂಬ ಸಂಘಟನೆಯನ್ನು ಕಟ್ಟಿಕೊಂಡು ಆ ಮೂಲಕ ಚಟುವಟಿಕೆ ನಡೆಸಲಾರಂಭಿಸಿದ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಸಂಘಟನೆಯನ್ನು ಕೈಗೆತ್ತಿಕೊಂಡವ ನಾಯ್ಕೂ. ತನ್ನ ನಿಷ್ಠೆಯನ್ನು ಪಾಕಿಸ್ತಾನಕ್ಕೆ ಬಲವಾಗಿರಿಸಿ ಜೊತೆಗಾರರು ಈ ದಿಸೆಯಲ್ಲಿ ಹಾದಿ ತಪ್ಪದಂತೆ ನೋಡಿಕೊಂಡ ಆತ ಜಾಕಿರ್ ಮೂಸಾನ ಸಂಘಟನೆ ಬೆಳೆಯದಂತೆ ನೋಡಿಕೊಂಡ! ಮೇಲ್ನೋಟಕ್ಕೆ ಭಯೋತ್ಪಾದಕರೆಲ್ಲಾ ಒಂದೇ ಎಂದು ನಮಗೆ ಕಂಡರೂ ಅವರಲ್ಲಿಯೂ ಅಧಿಕಾರ ದಾಹ, ಹಣದ ವ್ಯಾಮೋಹ, ಹೆಣ್ಣಿನ ಗೀಳು ಕಡಿಮೆಯೇನು ಇರುವುದಿಲ್ಲ. ಕೆಲವೊಮ್ಮೆ ಈ ಚಟಗಳ ಕಾರಣಕ್ಕೆ ಅವರು ತಮಗೆ ಅರಿವಿಲ್ಲದಂತೆ ಭಯೋತ್ಪಾದನೆಯ ತೆಕ್ಕೆಗೆ ಬಿದ್ದುಬಿಡುತ್ತಾರೆ. ಈಗ ನಾಯ್ಕೂ ಇಂತಹುದ್ದೇ ಆಮಿಷಗಳನ್ನೊಡ್ಡಿ ಹೊಸಬರನೇಕರನ್ನು ತನ್ನೆಡೆಗೆ ಸೆಳೆದುಕೊಂಡಿದ್ದ. ಜಾಕಿರ್ಮೂಸಾ ಸೈನಿಕರ ಎನ್ಕೌಂಟರ್ನಲ್ಲಿ ತೀರಿಕೊಂಡಮೇಲೆ ನಾಯ್ಕೂ ಕಾಶ್ಮೀರಕೊಳ್ಳದ ಅನಭಿಷಕ್ತ ದೊರೆಯಾಗಿಬಿಟ್ಟ. ಒಂದಷ್ಟು ಭಯಾನಕವಾದ ಕಾಯರ್ಾಚರಣೆಗಳ್ನು ನಡೆಸಿದ. ಪೊಲೀಸರನ್ನು ಕೊಂದುಹಾಕಿದ. ಒಮ್ಮೆಯಂತೂ ಈತನ ಸುಳಿವು ಕೊಡುವಂತೆ ಪೊಲೀಸರು ಅವನ ತಂದೆಯನ್ನು ಬಂಧಿಸಿದಾಗ ನಾಯ್ಕೂ ಒಂದಷ್ಟು ಪೊಲೀಸರನ್ನೇ ಅಪಹರಿಸಿಕೊಂಡು ಹೋಗಿ ತಂದೆಯ ಬಿಡುಗಡೆಗಾಗಿ ಒತ್ತಾಯಿಸಿದ. ಇವೆಲ್ಲವನ್ನೂ ಭಾರತೀಯ ಸೇನೆ ಗಮನಿಸುತ್ತಲೇ ಇತ್ತು. ತನ್ನ ಸುಳಿವನ್ನು ಯಾವ ಕಾರಣಕ್ಕೂ ಬಿಟ್ಟುಕೊಡದಿದ್ದ ನಾಯ್ಕೂ ತನ್ನ ತಂದೆಯ ಬಿಡುಗಡೆಯಾದ ಮೇಲೆ ‘ವೆಲ್ಡನ್ ಬಾಯ್ಸ್’ ಎಂದು ಟ್ವಿಟರ್ನಲ್ಲಿ ಹಾಕಿಕೊಂಡಿದ್ದ. ನಾಯ್ಕೂವಿನ ಕಾಲಕ್ಕೆ ಭಯೋತ್ಪಾದಕರು ಪೊಲೀಸರಿಗೆ ಸುಳಿವು ಕೊಡುತ್ತಾರೆನ್ನುವ ಕಾರಣಕ್ಕೆ ಸ್ಥಳೀಯರ ಹತ್ಯೆಗೂ ಮುಂದಾದರು. ತಮ್ಮೊಂದಿಗೆ ಸೇರಿಕೊಳ್ಳದ ತರುಣರನ್ನು ಮಾಹಿತಿಗಾರರು ಎಂಬ ಆರೋಪ ಮಾಡಿ ಕೊಂದುಬಿಸಾಡುವ ಪೃಥೆಯನ್ನು ತಂದವನೇ ಈತ. ಸ್ಥಳೀಯ ರೈತರನ್ನೂ, ಸಿರಿವಂತರನ್ನೂ ಸಂಘಟನೆಗೆ ಹಣದ ನೆಪದಲ್ಲಿ ಲೂಟಿ ಮಾಡಲಾರಂಭಿಸಿದವನೂ ಈತನೇ. ಈತನನ್ನು ಹಿಡಿಯಬೇಕೆಂದು ಸೈನ್ಯ ಸಾಕಷ್ಟು ಪರಿಶ್ರಮ ಹಾಕಿತ್ತು. ಇವನ ತಲೆಗೆ 12ಲಕ್ಷ ಬಹುಮಾನವನ್ನೂ ಕೊಟ್ಟಿತ್ತು. ಮೊನ್ನೆ ಈತನ ಅಡಗುತಾಣದ ನಿಖರ ಸುದ್ದಿಯನ್ನು ಪಡೆದುಕೊಂಡ ಸೈನಿಕರು ಅತ್ತ ಹೊರಟೇಬಿಟ್ಟರು. ನಾಲ್ಕು ಅಧಿಕಾರಿಗಳನ್ನು ಕಳೆದುಕೊಂಡಿದ್ದ ದುಃಖದಲ್ಲಿದ್ದ ಸೈನಿಕರಿಗೆ ದೊಡ್ಡದೊಂದು ಗೆಲುವು ಈಗ ಬೇಕೇಬೇಕಾಗಿತ್ತು. ಸೈನ್ಯ, ಸಿಆರ್ಪಿಎಫ್ ಮತ್ತು ಪೊಲೀಸರು ಜೊತೆಗೂಡಿ ನಾಯ್ಕೂ ಅಡಗಿದ್ದ ಮನೆಯನ್ನು ಸುತ್ತುವರೆದರು. ಸುಮಾರು 15 ದಿನಗಳಿಂದ ಆತನನ್ನು ಹಿಂಬಾಲಿಸುವ ಪ್ರಕ್ರಿಯೆ ನಡೆದಿದ್ದರಿಂದ ಆತ ತಪ್ಪಿಸಿಕೊಂಡು ಹೋಗಲು ಯಾವ ಅವಕಾಶವನ್ನೂ ನೀಡಬಾರದೆಂದು ನಿರ್ಧರಿಸಿಯಾಗಿತ್ತು. ಆದರೆ ಆತ ಅಡಗಿದ್ದಾನೆಂದು ಹೇಳಲಾಗುವ ಮನೆಯನ್ನು ಪೂತರ್ಿಯಾಗಿ ಪರಿಶೀಲಿಸಿದ ನಂತರವೂ ಆತ ಇರುವ ಸುಳಿವೇ ಸಿಗಲಿಲ್ಲ! ಸೈನ್ಯದ ಒಂದು ತುಕಡಿ ಮರಳಿಬಿಟ್ಟಿತು. ಆದರೆ ಪೂರ್ವ ನಿಯೋಜಿತ ಯೋಜನೆಯಂತೆ ಆ ಮನೆಯನ್ನು ಗಮನಿಸಲು ದೂರದಲ್ಲಿ ಪೊಲೀಸರನ್ನು ಹಾಗೆಯೇ ಇರಿಸಲಾಗಿತ್ತು. ಆ ಮನೆಯೊಳಗೆ ಅಡಗುತಾಣಗಳಿದ್ದು ನಾಯ್ಕೂ ಬಚ್ಚಿಟ್ಟುಕೊಂಡಿದ್ದಾನೆ ಎಂಬ ವಿಶ್ವಾಸ ಎಲ್ಲರಲ್ಲೂ ಇತ್ತು. ಮತ್ತು ಅವನಿಗೆ ಪ್ರತಿನಿತ್ಯ ಊಟ ಕೊಡುತ್ತಿದ್ದವನೇ ಸೈನಿಕರಿಗೆ ಈ ಮಾಹಿತಿ ಕೊಟ್ಟಿದ್ದುದರಿಂದ ಅದು ಸುಳ್ಳಾಗಲು ಸಾಧ್ಯವೇ ಇರಲಿಲ್ಲ. ಸ್ವಲ್ಪಹೊತ್ತಿಗೆ ಆತ ಇರುವ ಸುಳಿವು ಖಚಿತವಾಗುತ್ತಿದ್ದಂತೆ ಸೇನೆ ತೀವ್ರಪ್ರಮಾಣದಲ್ಲಿ ಮುತ್ತಿಗೆ ಹಾಕಿತು. ನಾಯ್ಕೂ ಜೊತೆಯಲ್ಲಿದ್ದ ಮತ್ತೊಬ್ಬ ಭಯೋತ್ಪಾದಕ ಸೈನಿಕರೊಂದಿಗೆ ಕದನ ನಡೆಸುತ್ತಲೇ ಪ್ರಾಣಬಿಟ್ಟ. ಆದರೆ ಎಲ್ಲರೆದುರು ಜೋರು-ಜೋರಾಗಿ ಮಾತನಾಡುವ ನಾಯ್ಕೂ, ಕಾಶ್ಮೀರದ ಬಿಡುಗಡೆಗೆ ರಕ್ತವನ್ನಾದರೂ ಚೆಲ್ಲಬೇಕೆಂದು ಹೇಳುತ್ತಾ ತರುಣರ ತಲೆಕೆಡಿಸುತ್ತಿದ್ದ ನಾಯ್ಕೂ ಮೃತ್ಯು ಎದುರಿಗೆ ನಿಂತಾಗ ಮಾತ್ರ ಹೇಡಿಯಾಗಿಬಿಟ್ಟ. ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಓಡುತ್ತಲೇ ಇದ್ದ. ಪೊಲೀಸರು ಸುತ್ತುವರಿದುಬಿಟ್ಟಿದ್ದಾರೆ ಎಂದು ಗೊತ್ತಾದಾಗ ಮೂನರ್ಾಲ್ಕು ಸುತ್ತಿನ ಗುಂಡು ಹಾರಿಸಿದ. ಇಷ್ಟಾಗುವ ವೇಳೆಗೆ ಆತನ ಗುರಿಯಲ್ಲೂ ನಿಖರತೆಯಿಲ್ಲವೆಂದರಿತ ಸೈನಿಕರು ಮುನ್ನುಗ್ಗಿದರು. ಕೆಲವರು ಹೇಳುವ ಪ್ರಕಾರ ತನ್ನನ್ನು ಬಿಟ್ಟುಬಿಡಿರೆಂದು ಆತ ಸೈನಿಕರೆದುರು ಗೋಗರೆದಿದ್ದನಲ್ಲದೇ ‘ಪಾಕಿಸ್ತಾನಕ್ಕೆ ಮುದರ್ಾಬಾದ್’ ಎಂದೂ ಘೋಷಣೆ ಕೂಗಿದ್ದನಂತೆ! ಅದರ ಸತ್ಯಾಸತ್ಯತೆಯನ್ನು ಬದಿಗಿಟ್ಟು ನೋಡುವುದಾದರೂ ರಿಯಾಜ್ ಹಿಜ್ಬುಲ್ನ ನಾಯಕನಾಗಿ ಹೋರಾಟ ಮಾಡದೇ ಈ ಪರಿ ಸಾವಿಗೆ ಶರಣಾಗಿದ್ದು ಮಾತ್ರ ಭಯೋತ್ಪಾದಕರ ಹೇಡಿತನಕ್ಕೆ ಸ್ಪಷ್ಟ ಉದಾಹರಣೆ.


ದುರಂತವೆಂದರೆ ಆತ ತೀರಿಕೊಂಡ ನಂತರ ಭಯೋತ್ಪಾದಕರ ಮುಖವಾಣಿ ಎನಿಸಿಕೊಂಡ ಕೆಲವು ಪತ್ರಿಕೆಗಳು ನಾಯ್ಕೂವನ್ನು ಹೊಗಳಿ, ಅಟ್ಟಕ್ಕೇರಿಸಿದವು. ಅದು ಆತನ ಶವಯಾತ್ರೆಗೆ ಹೆಚ್ಚು-ಹೆಚ್ಚು ತರುಣರನ್ನು ಒಟ್ಟುಗೂಡಿಸುವ ಪ್ರಯತ್ನವಾಗಿತ್ತು. ಆ ಮೂಲಕ ಹೆಚ್ಚು ಭಯೋತ್ಪಾದಕರನ್ನು ಕಾಶ್ಮೀರದ ನೆಲದಲ್ಲಿ ಸೃಷ್ಟಿಸುವ ಹುನ್ನಾರವೂ ಕೂಡ. ಆದರೆ ಭಾರತೀಯಸೇನೆ ಕೊರೋನಾದ ನೆಪಹೇಳಿ ಶವವನ್ನು ಯಾರಿಗೂ ಕೊಡದೇ ಅಜ್ಞಾತಸ್ಥಳದಲ್ಲಿ ಅವನಿಗೆ ಸಂಸ್ಕಾರ ಮಾಡಿಬಿಟ್ಟಿತು. ಪಾಕಿಸ್ತಾನ ಈಗ ಚಡಪಡಿಸುತ್ತಿದೆ. ಅದಕ್ಕೀಗ ಕಾಶ್ಮೀರದಲ್ಲಿ ಹೊಸದಾಗಿ ಸೇರ್ಪಡೆಗೊಳ್ಳುತ್ತಿರುವವರಿಲ್ಲ. ಅತ್ತ ಪಾಕಿಸ್ತಾನದಲ್ಲೂ ಸಾಕಷ್ಟು ನಿಧಿ ಹುಟ್ಟುತ್ತಿಲ್ಲ. ಇಷ್ಟೇ ಅಲ್ಲದೇ, ಹೇಗೆ ಕೊರೋನಾ ಸಂದರ್ಭದಲ್ಲಿ ಭಯೋತ್ಪಾದಕರ ಮೂಲಕ ನಮ್ಮ ನಿದ್ದೆಗೆಡಿಸಲು ಪಾಕಿಸ್ತಾನ ಪ್ರಯತ್ನಪಟ್ಟಿತೋ, ಹಾಗೇ ಪಿಒಕೆಯನ್ನು ಮರಳಿ ಪಡೆಯುವ ಮಾತುಗಳನ್ನಾಡುತ್ತಾ ಭಾರತ ಈ ಹೊತ್ತಿನಲ್ಲೇ ಪಾಕಿಸ್ತಾನವನ್ನು ಹೆದರಿಸುತ್ತಿದೆ. ಗಿಲ್ಗಿಟ್, ಬಾಲ್ಟಿಸ್ತಾನಗಳನ್ನು ತನ್ನದ್ದೇ ಅಂಗವೆಂದು ಹೇಳಿದೆಯಲ್ಲದೇ ಹವಾಮಾನ ವರದಿಯಲ್ಲೂ ಅವುಗಳನ್ನು ಉಲ್ಲೇಖಿಸುವ ಪ್ರಯತ್ನ ಮಾಡಿ ಪಾಕಿಸ್ತಾನದ ನಿದ್ದೆ ಹಾರುವಂತೆ ಮಾಡಿದೆ! ಇನ್ನೇನಿದ್ದರೂ ಅದನ್ನು ವಶಪಡಿಸಿಕೊಳ್ಳುವ ಪ್ರಯತ್ನ ಆಗಬೇಕಿದೆ ಅಷ್ಟೇ. ಅಥವಾ ಪಿಒಕೆಯಲ್ಲಿ ಹೆದರಿಕೆ ಹುಟ್ಟಿಸಿ ಬಲೂಚಿಸ್ತಾನವನ್ನೇ ಪ್ರತ್ಯೇಕಗೊಳಿಸಿದರೂ ಇಲ್ಲವೆನ್ನಲಾಗುವುದಿಲ್ಲ. ಅದಾಗಲೇ ಅಜಿತ್ದೋವೆಲ್ ಇದಕ್ಕಾಗಿ ಬೇಕಾಗಿರುವ ತಯಾರಿಯನ್ನು ಆರಂಭಿಸಿಬಿಟ್ಟಿದ್ದಾರೆ ಎಂಬ ಸುದ್ದಿ ಬರುತ್ತಿದೆ. ನಾವು-ನೀವು ಕೊರೋನಾದೊಂದಿಗೆ ಹೋರಾಡುತ್ತಿರುವಾಗಲೇ ಭಾರತ ಮಹತ್ವದ ಕಾಯರ್ಾಚರಣೆಯೊಂದಕ್ಕೆ ಮುನ್ನುಡಿ ಬರೆಯುತ್ತಿದೆ. ಕಾದು ನೋಡೋಣ!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top