National

ಬಡಗಾಂವ್ ವಿಮಾನ ದುರಂತದಲ್ಲಿ ತೀರಿಕೊಂಡ ವಿಂಗ್ ಕಮ್ಯಾಂಡರ್ ಸಿದ್ಧಾರ್ಥ್ ವಶಿಷ್ಟ್!

ವಿಂಗ್ ಕಮ್ಯಾಂಡರ್ ಸಿದ್ಧಾರ್ಥ ವಶಿಷ್ಟ್ ಅವರ ಅಂತ್ಯಕ್ರಿಯೆ ಗುರುವಾರ ಚಂಡೀಘಡದಲ್ಲಿ ನಡೆದಿದೆ. ಇವರು ಜಮ್ಮು-ಕಾಶ್ಮೀರದ ಹತ್ತಿರ ಬಡಗಾಂವ್ ನಲ್ಲಿ ಎಮ್ಐ-17 ಹೆಲಿಕಾಪ್ಟರ್ ದುರಂತದಲ್ಲಿ ತೀರಿಕೊಂಡಿದ್ದರು. ಫೆಬ್ರವರಿ 27 ರಂದು ಈ ದುರಂತ ನಡೆದಿತ್ತು.

ಜನವರಿ 26 ರಂದು ವಿಂಗ್ ಕಮ್ಯಾಂಡರ್ ಸಿದ್ಧಾರ್ಥ ವಶಿಷ್ಟ್ ಅವರಿಗೆ ಕೇರಳದಲ್ಲಿ ನಡೆದ ಪ್ರವಾಹದ ಸಂದರ್ಭದಲ್ಲಿ ಪರಿಹಾರ ಕಾರ್ಯವನ್ನು ಅತ್ಯುತ್ತಮವಾಗಿ ನಡೆಸಿದ ಕಾರಣ ಗೌರವ ಸಂದಿತ್ತು.

ಸಿದ್ಧಾರ್ಥ್ ವಶಿಷ್ಟ್ ತಂದೆ-ತಾಯಿಗೆ ಕಡೆಯ ಮಗ. ಫೆಬ್ರವರಿ 18 ರಂದು ಕೇವಲ ಎರಡು ಗಂಟೆಯನ್ನು ತನ್ನ ಕುಟುಂಬದೊಂದಿಗೆ ಕಳೆದಿದ್ದರು. 2010 ರಲ್ಲಿ ಇವರು ಭಾರತೀಯ ವಾಯುಸೇನೆಗೆ ನಿಯೋಜನೆಗೊಂಡಿದ್ದರು. 2014 ರಲ್ಲಿ ಭಾರತೀಯ ವಾಯುಸೇನೆಯ ಅಧಿಕಾರಿ ಆರತಿಯವರನ್ನು ವಿವಾಹವಾಗಿದ್ದರು. ಈಕೆ ಜಮ್ಮು-ಕಾಶ್ಮೀರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ರಕ್ಷಣಾ ವರದಿಯ ಪ್ರಕಾರ ಎಮ್ಐ-17 ಫೆಬ್ರವರಿ 27 ರಂದು ಬೆಳಿಗ್ಗೆ 10.10 ರ ವೇಳೆಗೆ ಬಡಗಾಂವ್ ಬಳಿ ನೆಲಕ್ಕುರುಳಿತು. ಅದರಲ್ಲಿದ್ದ ಆರೂ ಜನರಿಗೆ ಗಂಭೀರ ಗಾಯಗಳಾಗಿದ್ದವು. ಈ ಅಪಘಾತದ ಕುರಿತು ವಿಚಾರಣೆ ನಡೆಸಬೇಕೆಂದು ರಕ್ಷಣಾ ಇಲಾಖೆ ಹೇಳಿದೆ. ಅಪಘಾತದ ಕಾರಣವಿನ್ನೂ ತಿಳಿಯಬೇಕಿದೆ.

 

Click to comment

Leave a Reply

Your email address will not be published. Required fields are marked *

Most Popular

To Top