State

ಬಂಡೀಪುರ ಅಭಯಾರಣ್ಯದ ನಂತರ ಇದೀಗ ನಂದಿಬೆಟ್ಟದಲ್ಲಿ ಅಗ್ನಿ ಅವಘಡ!

ಬೆಂಗಳೂರಿನ ಬಳಿಯಿರುವ ಪ್ರಖ್ಯಾತ ಪ್ರವಾಸಿ ತಾಣ ನಂದಿ ಬೆಟ್ಟಕ್ಕೆ ಬೆಂಕಿ ತಗುಲಿದೆ. ವರದಿಯ ಪ್ರಕಾರ ಬೆಟ್ಟದ ಬಳಿ ಧಗಧಗಿಸುವ ಜ್ವಾಲೆ ಕಾಣಿಸಿಕೊಂಡಿದೆ. ಸುತ್ತಮುತ್ತಲ ಪ್ರದೇಶಕ್ಕೂ ಅಪಾರವಾದ ಹಾನಿಯಾಗಿದೆ.

ಈ ಅಗ್ನಿದುರಂತಕ್ಕೆ ಕಾರಣವಿನ್ನೂ ತಿಳಿದು ಬಂದಿಲ್ಲ. ಆಗಿರುವ ನಷ್ಟದ ಪ್ರಮಾಣವನ್ನೂ ಇನ್ನೂ ಲೆಕ್ಕ ಹಾಕಬೇಕಿದೆ. ಬಂಡೀಪುರ ಅಭಯಾರಣ್ಯಕ್ಕೆ ಬೆಂಕಿ ಬಿದ್ದ ಎರಡೇ ದಿನದಲ್ಲೇ ಈ ಅವಘಡ ಸಂಭವಿಸಿದೆ.

ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಭಾರತೀಯ ವಾಯುಸೇನೆಗೆ ಬಂಡೀಪುರ ಅಭಯಾರಣ್ಯದ ಏರಿಯಲ್ ಸರ್ವೇ ಮಾಡಬೇಕೆಂದು ಕೇಳಿಕೊಂಡಿದ್ದಾರೆ. ಹಾಗೆಯೇ ಹತ್ತಿರದಲ್ಲಿರುವ ನುಗು ಜಲಾಶಯದಿಂದ ನೀರನ್ನು ತಂದು ಪರಿಹಾರ ಕಾರ್ಯಾಚರಣೆ ನಡೆಸಬೇಕೆಂದು ಕೇಳಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top