National

ಬಂಡೀಪುರ ಅಭಯಾರಣ್ಯಕ್ಕೆ ತಗುಲಿರುವ ಬೆಂಕಿಯನ್ನು ನಂದಿಸಲು ಭಾರತೀಯ ವಾಯುಸೇನೆ ಸಹಾಯಹಸ್ತ!!

ಎರಡು ಭಾರತೀಯ ವಾಯುಸೇನೆಯ ಚಾಪರ್ ಗಳು ಬಂಡೀಪುರ ಅಭಯಾರಣ್ಯಕ್ಕೆ ತಗುಲಿರುವ ಬೆಂಕಿಯನ್ನು ನಂದಿಸಲು ಧಾವಿಸಿವೆ. ಕಳೆದ ವಾರ ಗೋಪಾಲಸ್ವಾಮಿ ಬೆಟ್ಟಕ್ಕೆ ಸೇರಿಕೊಂಡಿರುವಂತೆ ಬಂಡೀಪುರ ಅಭಯಾರಣ್ಯಕ್ಕೆ ಅಗ್ನಿ ತಗುಲಿತ್ತು.

ಫೆಬ್ರವರಿ 25 ರಂದೇ ವಾಯುಸೇನೆಯ ಈ ಚಾಪರ್ ಗಳು ತಮ್ಮ ಕೆಲಸ ಆರಂಭಿಸಿದ್ದವು. ಸಂಜೆ ವೇಳೆಗೆ ಬೆಳಕು ಕಡಿಮೆಯಿದ್ದ ಕಾರಣ ನಿಲ್ಲಿಸಬೇಕಾಗಿ ಬಂದರೂ, 26 ರ ಬೆಳಿಗ್ಗೆಯಿಂದಲೇ ಮತ್ತೆ ತನ್ನ ಕೆಲಸವನ್ನು ಆರಂಭಿಸಿತು.

ಎಮ್ಐ-17  ವಿ5 ಎಂಬ ಎರಡು ಚಾಪರ್ ಗಳು ಕರ್ನಾಟಕ ಸರ್ಕಾರದ ಬೇಡಿಕೆಯ ಮೇರೆಗೆ ತಮ್ಮ ಕಾರ್ಯ ನಿರ್ವಹಿಸುತ್ತಿವೆ. ಬೆಂಕಿಯನ್ನು ನಂದಿಸುವಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯೂ ದೊರೆತಿದೆ. ಚಾಪರ್ ಗಳು ಬಂದು ಅಲ್ಲಿನ ಸುತ್ತಮುತ್ತಲ ಪ್ರದೇಶದ ಸರ್ವೇ ನಡೆಸಿ, ಹತ್ತಿರದಲ್ಲಿ ದೊರೆಯುವ ನೀರಿನ ಪ್ರಮಾಣವನ್ನೂ ಲೆಕ್ಕಹಾಕಿವೆ. ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಹತ್ತಿರದ ನುಗು ಜಲಾಶಯದಿಂದ ಹೆಲಿಕಾಪ್ಟರ್ ಗೆ ಹೊಂದಿಕೊಂಡಂತೆ ಇರುವ ಟ್ಯಾಂಕ್ ಗಳಲ್ಲಿ ನೀರನ್ನು ತಂದು ಕಾಡಿನಲ್ಲಿ ಸುರಿಯಲಾಯ್ತು.

ಅದಾಗಲೇ ಮೂಲೆಹೊಳೆಯ ಬಳಿಯ ಅಷ್ಟೂ ಬೆಂಕಿಯನ್ನು ನಂದಿಸಲಾಗಿದೆ. ಆದರೆ ಚಮ್ಮನಹಳ್ಳದ ಬಳಿ ಇನ್ನೂ ಬೆಂಕಿಯನ್ನು ನಂದಿಸುವ ಪ್ರಯತ್ನ ಸಾಗಿದೆ. ಎರಡೂ ಹೆಲಿಕಾಪ್ಟರ್ ಗಳಿಂದ ಸುಮಾರು 30,000 ಲೀಟರ್ ನಷ್ಟು ನೀರನ್ನು ಸುರಿಯಲಾಗಿದೆ.

Click to comment

Leave a Reply

Your email address will not be published. Required fields are marked *

Most Popular

To Top