Vishwaguru

ಪ್ರಧಾನಿ ಇಂದಿರಾಳನ್ನು ‘ಸ್ವೀಟ್ ಹಾರ್ಟ್’ ಎನ್ನುತ್ತಿದ್ದ ಆತ ಯಾರು ಗೊತ್ತೇ?

ಕೊಲ್ಕತ್ತಾದ ಸಾರ್ವಜನಿಕ ಸಭೆ. ವ್ಯಕ್ತಿಯೊಬ್ಬರು ವೇದಿಕೆಯ ಮೇಲೆ ಮಾತನಾಡುತ್ತಿದ್ದರು. ಆ ಹೊತ್ತಲ್ಲಿ ಎದುರಿಗೆ ಕುಳಿತಿದ್ದ ತರುಣನೊಬ್ಬ ಎದ್ದುನಿಂತು ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಲಾರಂಭಿಸಿದ. ಘೋಷಣೆಗಳನ್ನು ಕೂಗಲಾರಂಭಿಸಿದ. ವೇದಿಕೆಯ ಮೇಲಿದ್ದ ಭಾಷಣಕಾರ ಕೆಳಗಿಳಿದು ಬಂದು ಗಲಾಟೆ ಮಾಡುತ್ತಿದ್ದ ಹುಡುಗನೆದುರಿಗೆ ನಿಂತು ಹಿಂದಿ ಮಿಶ್ರಿತ ಇಂಗ್ಲೀಷನಲ್ಲಿ ಬೈಯ್ಯುತ್ತಾ ಛಟೀರ್ ಎಂದು ಕೆನ್ನೆಗೆ ಬಾರಿಸಿದರು. ಹುಡುಗ ಅವಾಕ್ಕಾಗಿ ‘ನನಗೆ ನಿಮ್ಮ ಆಟೋಗ್ರಾಫ್ ಬೇಕಿತ್ತು. ಅದಕ್ಕೋಸ್ಕರ ಹೀಗೆ ಮಾಡಿದೆ’ ಎಂದ. ಈ ವ್ಯಕ್ತಿಯೂ ಸುಮ್ಮನಾಗದೇ ‘ನನ್ನ ಆಟೋಗ್ರಾಫ್ನಿಂದೇನು? ನನ್ನ ಹೆಂಡತಿಯ ಬಳಿ ತೆಗೆದುಕೊ. ಒಂದು ಫೋಟೋನೂ ತೆಗೆಸಿಕೊ’ ಎಂದು ನಗುತ್ತಾ ಮತ್ತೆ ವೇದಿಕೆ ಏರಿಬಿಟ್ಟರು. ಅವನ ಹೆಂಡತಿಗೆ ಈ ವಿಚಾರ ಗೊತ್ತಾದಾಗ ಸ್ಯಾಮ್ ಒಬ್ಬ ಹುಚ್ಚ ಎಂದು ನಕ್ಕು ಸುಮ್ಮನಾಗಿಬಿಟ್ಟರು. ಇಷ್ಟಕ್ಕೂ ತನ್ನ ಮೇಲೆ ತಾನೇ ತಮಾಷೆ ಮಾಡಿಕೊಳ್ಳುತ್ತಿದ್ದ ಅತ್ಯಂತ ಕಠಿಣ ಪರಿಸ್ಥಿತಿಯನ್ನು ನಗುವಿನ ಮೂಲಕ ನಿಭಾಯಿಸುತ್ತಿದ್ದ ಆ ವ್ಯಕ್ತಿ ಯಾರು ಗೊತ್ತೇನು. ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಷಾ! ದೇಶದ ಜನ ಮರೆತೇ ಹೋಗಿರುವ, ಸೈನಿಕರು ಸ್ಯಾಮ್ ಎಂದು ನೆನಪಿಸಿಕೊಳ್ಳುವ, ಗೂಖರ್ಾಗಳು ಸ್ಯಾಮ್ ಬಹದ್ದೂರ್ ಎಂದು ಗೌರವಿಸುವ ಭಾರತ ಕಂಡ ಶ್ರೇಷ್ಠ ಸೇನಾನಿ ಆತ. ತನ್ನ ಮುಲಾಜಿಲ್ಲದ ನಡೆಯಿಂದಲೇ ಅನೇಕ ಬಾರಿ ಕಠಿಣ ಪರಿಸ್ಥಿತಿಗೆ ಒಳಗಾಗುತ್ತಿದ್ದ ಸ್ಯಾಮ್ ಭಾರತದ ಪಾಲಿಗೆ ಶ್ರೇಷ್ಠ ರತ್ನ. ತಾನು ಸೈನ್ಯದಲ್ಲಿದ್ದ ಅವಧಿಯಲ್ಲಿ ದ್ವಿತೀಯ ಮಹಾಯುದ್ಧದಿಂದ ಹಿಡಿದು 1971 ರ ಬಾಂಗ್ಲಾ ವಿಮೋಚನೆ ವೇಳೆಗೆ ಐದು ಯುದ್ಧದಲ್ಲಿ ಭಾಗವಹಿಸಿದ ಸ್ಯಾಮ್ ಭಾರತದ ಕೀತರ್ಿ ಪತಾಕೆಯನ್ನು ಯುದ್ಧ ಇತಿಹಾಸದಲ್ಲಿ ಹಿಮಾಲಯದೆತ್ತರಕ್ಕೆ ಹಾರಿಸಿದ ವ್ಯಕ್ತಿ.

ಬೆಚ್ಚಗೆ ಕಾಫಿ ಹೀರುತ್ತಾ ಈ ಲೇಖನವನ್ನು ಓದುತ್ತಿರುವ ನಮಗೆ ಸ್ಯಾಮ್ರ ಗಡಸು ವ್ಯಕ್ತಿತ್ವ ಮತ್ತು ತನ್ನವರನ್ನು ಪ್ರೀತಿಸುತ್ತಿದ್ದ ಮೃದು ಹೃದಯ ಎರಡನ್ನೂ ಜೀಣರ್ಿಸಿಕೊಳ್ಳುವುದು ಬಲು ಕಷ್ಟ. ಸ್ಯಾಮ್ ವ್ಯಕ್ತಿಯಾಗಿ ಅಪರೂಪವಷ್ಟೇ ಅಲ್ಲ. ಸೈನಿಕನಾಗಿಯೂ ಹುಡುಕಿದರೂ ಸಿಗದ ಮುತ್ತು. ಒಮ್ಮೆ ಅವರನ್ನು ವಿಭಜನೆಯ ಸಂದರ್ಭದಲ್ಲಿ ‘ನೀವು ಪಾಕಿಸ್ತಾನಕ್ಕೆ ಸೇರಿಬಿಟ್ಟಿದ್ದರೆ ಏನಾಗುತ್ತಿತ್ತು’ ಎಂದು ಯಾರೋ ಕೇಳಿದರಂತೆ. ಸ್ಯಾಮ್ ಉತ್ತರವೇನಿತ್ತು ಗೊತ್ತೇ? ‘ಪಾಕಿಸ್ತಾನ ಒಂದು ಯುದ್ಧವನ್ನೂ ಸೋಲುತ್ತಿರಲಿಲ್ಲ’ ಅಂತ. ಸ್ಯಾಮ್ ಸಾಮಥ್ರ್ಯಕ್ಕೆ ಈ ಉತ್ತರವೇ ಕೈಗನ್ನಡಿ.

ಅಮೃತ್ಸರದ ಪಂಜಾಬ್ನಲ್ಲಿ ಪಾಸರ್ಿ ದಂಪತಿಗಳಾಗಿದ್ದ ಹೊಮರ್ೂಸ್ಜಿ ಮಾಣಿಕ್ ಷಾ ಮತ್ತು ಹಿಲ್ಲಾರಿಗೆ ಜನಿಸಿದ ಸ್ಯಾಮ್ ನೈನಿತಾಲ್ನಲ್ಲಿ ಕಾಲೇಜು ಅಧ್ಯಯನ ಮುಗಿಸಿ ಡಿಸ್ಟಿಂಕ್ಷನ್ ಸಟರ್ಿಫಿಕೇಟನ್ನು ಪಡೆದುಕೊಂಡರು. ಲಂಡನಿನಲ್ಲಿ ವೈದ್ಯಕೀಯ ವಿಷಯದ ಅಧ್ಯಯನ ಮಾಡಬೇಕೆಂದು ಮನಸ್ಸಿಟ್ಟುಕೊಂಡಿದ್ದ ಸ್ಯಾಮ್ಗೆ ತಂದೆ ನಿರಾಸೆ ಮಾಡಿಸಿದರು. ಅಷ್ಟು ದೂರ ಒಬ್ಬನೇ ಅವನನ್ನು ಕಳಿಸಲು ಒಪ್ಪದ ತಂದೆಯ ನಿಧರ್ಾರದಿಂದಾಗಿ ಕುಪಿತನಾಗಿದ್ದ ಆತ ಪ್ರತೀಕಾರವೆಂದೇ ಇಂಡಿಯನ್ ಮಿಲಿಟರಿ ಅಕಾಡೆಮಿಯ ಪರೀಕ್ಷೆ ಬರೆದರು. ಬುದ್ಧಿವಂತನೂ ಆಗಿದ್ದರಿಂದ ಆಯ್ಕೆಯಾಗುವುದರಲ್ಲಿ ಅನುಮಾನವೇ ಇರಲಿಲ್ಲ. ಮಗನ ಫಲಿತಾಂಶವನ್ನು ಕಂಡು ಖುಷಿಪಡುವ ಬದಲು ಮತ್ತೆ ಬೇಸರಿಸಿಕೊಂಡ ತಂದೆ ಸೈನ್ಯಕ್ಕೆ ಕಳಿಸುವುದಿಲ್ಲವೆಂದರು. ಹಠಕ್ಕೆ ಬಿದ್ದ ಹುಡುಗ ಸೈನ್ಯವನ್ನೇ ಆಯ್ಕೆ ಮಾಡಿಕೊಂಡು ತನ್ನ ಭವಿಷ್ಯವನ್ನು ದೃಢವಾಗಿಸಿಕೊಂಡ. ಅಂದಿನ ನಿಯಮಾವಳಿಗಳಂತೆ ಭಾರತೀಯ ತುಕಡಿಗೆ ಸೇರುವ ಮುನ್ನ ಅವರು ಬ್ರಿಟೀಷ್ ರೆಜಿಮೆಂಟುಗಳಲ್ಲಿ ಕೆಲಸ ಮಾಡಬೇಕಿತ್ತು. ಮಾಣಿಕ್ ಷಾ ಲಾಹೋರಿನಲ್ಲಿರುವ ರಾಯಲ್ ಸ್ಕಾಟ್ಸ್ಗೆ ಸೇರಿಕೊಂಡರು. ಆನಂತರ ನಾಲ್ಕನೇ ಬಟಾಲಿಯನ್ನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಮುಂದೆ ಲೆಫ್ಟಿನೆಂಟ್ ಆಗಿ ಬಡ್ತಿ ಪಡೆದ ಸ್ಯಾಮ್ 1942 ರ ದ್ವಿತೀಯ ಮಹಾಯುದ್ಧದಲ್ಲಿ ಕ್ಯಾಪ್ಟನ್ ಆಗಿ ಕಾದಾಡಿದರು. ಪಗೋಡಾ ಹಿಲ್ನಲ್ಲಿ ಮುಂದೆ ನಿಂತು ಕಾದಾಡುತ್ತಿರುವಾಗ ಶತ್ರುಗಳ ಲೈಟ್ ಮೆಷಿನ್ ಗನ್ನಿನಿಂದ ಹೊರಟ ಗುಂಡಿನ ಗುಚ್ಛ ಅವರ ಹೊಟ್ಟೆಯನ್ನು ಸೀಳಿಬಿಟ್ಟಿತು. ಮೇಜರ್ ಜನರಲ್ ಡೇವಿಡ್ ಕೋವಾನ್ ಪ್ರಾಣವುಳಿಸಿಕೊಳ್ಳಲು ಹೆಣಗಾಡುತ್ತಿದ್ದ ಮಾಣಿಕ್ ಷಾರನ್ನು ನೋಡಿ ಇಂಥ ಕದನ ಕಲಿಯನ್ನು ಕಳೆದುಕೊಳ್ಳಲೊಪ್ಪದೇ ಅವರ ಬಳಿ ಧಾವಿಸಿ ಬಂದರು. ಗಂಭೀರ ಸ್ಥಿತಿಯಲ್ಲಿದ್ದ ಸ್ಯಾಮ್ರನ್ನು ನೋಡಿ ಅವರ ಸಾವನ್ನು ಊಹಿಸಿದ ಡೇವಿಡ್ ಕೋವಾನ್ ತನ್ನ ಎದೆಯ ಮೇಲಿದ್ದ ಮಿಲಿಟರಿ ಕ್ರಾಸ್ ರಿಬ್ಬನ್ನನ್ನು ಸ್ಯಾಮ್ ಎದೆಗೆ ಚುಚ್ಚಿ ‘ಸತ್ತ ನಂತರ ಈ ಗೌರವ ಕೊಡಲಾಗುವುದಿಲ್ಲ’ ಎಂದು ನೊಂದುಕೊಂಡರು. ಮುಂದೆ ಸ್ಯಾಮ್ಗೆ ಈ ಗೌರವ ಖಾಯಂ ಆಯ್ತು. ರಣ ಭೂಮಿಯಿಂದ ಅವರನ್ನು ಆಸ್ಪತ್ರೆಗೆ ಕರೆತಂದು ಆಸ್ಟ್ರೇಲಿಯನ್ ಚಿಕಿತ್ಸಕನೊಬ್ಬನ ಬಳಿ ಬಿಡಲಾಯ್ತು. ಅವರ ಚಿಕಿತ್ಸೆ ಮಾಡಲೊಪ್ಪದ ಆ ವೈದ್ಯರು ‘ಈತ ಸಾಯುವುದು ಖಾತ್ರಿ ಚಿಕಿತ್ಸೆ ಮಾಡಿ ಉಪಯೋಗವಿಲ್ಲ’ ಎಂದುಬಿಟ್ಟಿದ್ದರು. ಒತ್ತಾಯಕ್ಕೆ ಕಟ್ಟುಬಿದ್ದು ಚಿಕಿತ್ಸೆ ಮಾಡಲೇಬೇಕಾಗಿ ಬಂದಾಗ ವೈದ್ಯರು ಸ್ಯಾಮ್ ಬಳಿ ಬಂದು ಸಹಜವಾಗಿಯೇ ‘ಏನಾಯ್ತು’ ಎಂದರಂತೆ. ಆ ನೋವಿನಲ್ಲೂ ಕಣ್ಣು ಮಿಟುಕಿಸುತ್ತಾ ಸ್ಯಾಮ್ ‘ಕತ್ತೆ ಒದ್ದುಬಿಟ್ಟಿತು’ ಎಂದರು. ಇಂತಹ ವಿಷಮ ಪರಿಸ್ಥಿತಿಯಲ್ಲೂ ಸ್ಯಾಮ್ನ ಹೃದಯದಲ್ಲಿದ್ದ ಹಾಸ್ಯ ಪ್ರಜ್ಞೆಯನ್ನು ಅಪಾರವಾಗಿ ಗೌರವಿಸಿದ ವೈದ್ಯರು ಆತನನ್ನು ಉಳಿಸಿಕೊಳ್ಳಲೇಬೇಕೆಂದು ನಿರ್ಧರಿಸಿದರು. ಶ್ವಾಸಕೋಶ, ಲಿವರ್, ಕಿಡ್ನಿಗಳಿಗೆ ಬಡಿದಿದ್ದ ಏಳು ಬುಲೆಟ್ಗಳನ್ನು ಹೊರತೆಗೆದರು. ಬಹುಪಾಲು ಸಣ್ಣಕರುಳು ನಾಶವಾಗಿ ಹೋಗಿತ್ತು. ಅವೆಲ್ಲವನ್ನೂ ತೆಗೆದು ಸ್ಯಾಮ್ರನ್ನು ಉಳಿಸಿಕೊಳ್ಳಲಾಯ್ತು. ಏನು ಆಗಿಲ್ಲವೆಂಬಂತೆ ಸ್ಯಾಮ್ ಮತ್ತೆ ಸೈನ್ಯದ ಚಟುವಟಿಕೆಗೆ ತೊಡಗಿಕೊಂಡರು. ಮುಂದೊಮ್ಮೆ 1971 ರ ಯುದ್ಧದ ವೇಳೆಗೆ ಗಾಯಾಳುವಾಗಿ ಮಲಗಿದ್ದ ಸೈನಿಕನೊಬ್ಬನನ್ನು ನೋಡಿ ‘ನಿನ್ನ ವಯಸ್ಸಿನಲ್ಲಿದ್ದಾಗ ನಾನು 9 ಗುಂಡು ತಿಂದಿದ್ದೆ. ನೀನು ಮೂರು ಗುಂಡು ಬಡಿಸಿಕೊಂಡಿದ್ದೀಯ. ನಾನಿಂದು ಭಾರತೀಯ ಸೇನೆಯ ಸವರ್ೋಚ್ಚ ನಾಯಕ. ನೀನೇನಾಗಬಲ್ಲೆ ಎಂದು ಊಹಿಸು’ ಎಂದು ಧೈರ್ಯ ತುಂಬಿದ್ದರು!

ಸ್ವಾತಂತ್ರ್ಯಾನಂತರ ಪಾಕಿಸ್ತಾನದೊಂದಿಗಿನ ಮೊದಲನೇ ಯುದ್ಧದಲ್ಲಿಯೇ ಸ್ಯಾಮ್ಗೆ ಮಹತ್ವದ ಜವಾಬ್ದಾರಿ ಒದಗಿಸಿಕೊಡಲಾಗಿತ್ತು. ಪ್ರತಿಯೊಂದು ಹಂತದಲ್ಲೂ ತನಗೆ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಲ್ಲದೇ ತನ್ನ ಸೇನೆಯ ಗೌರವವನ್ನು ಒಂದಿನಿತೂ ಕಡಿಮೆ ಮಾಡಲು ಸ್ಯಾಮ್ ಒಪ್ಪುತ್ತಿರಲಿಲ್ಲ. ಅದೊಮ್ಮೆ ರಕ್ಷಣಾ ಸಚಿವ ಕೃಷ್ಣ ಮೆನನ್ ಜನರಲ್ ಕೆ.ಎಸ್ ತಿಮ್ಮಯ್ಯನವರ ಕುರಿತಂತೆ ಸ್ಯಾಮ್ರ ಅಭಿಪ್ರಾಯ ಕೇಳಿದಾಗ ಖಡಕ್ಕಾಗಿ ಉತ್ತರಿಸಿದ ಸ್ಯಾಮ್ ಏನೆಂದರು ಗೊತ್ತಾ? ‘ಮಂತ್ರಿಗಳೇ, ಅವರ ಬಗ್ಗೆ ನಾನ್ಯಾಕೆ ಆಲೋಚನೆ ಮಾಡಬೇಕು. ಆತ ನನ್ನ ನಾಯಕ. ನಾಳೆ ನೀವು ನನ್ನ ಕೆಳಗಿನ ಬ್ರಿಗೇಡಿಯಸರ್್ ಮತ್ತು ಕರ್ನಲ್ಗಳಲ್ಲಿ ನನ್ನ ಬಗ್ಗೆ ಅಭಿಪ್ರಾಯ ಕೇಳುತ್ತೀರಿ. ನೀವು ಸೇನೆಯೊಳಗಿನ ಶಿಸ್ತನ್ನು ನಾಶ ಮಾಡುತ್ತಿದ್ದೀರಿ. ಮುಂದೆಂದೂ ಹೀಗೆ ಮಾಡಬೇಡಿ’ ಎಂದಿದ್ದರು. ಮೆನನ್ ಮುಖ ಇಂಗು ತಿಂದ ಮಂಗನಂತಾಗಿತ್ತು. 1969 ರಲ್ಲಿ ಜನರಲ್ ಪಿ.ಪಿ ಕುಮಾರ ಮಂಗಲಂ ನಿವೃತ್ತರಾದ ನಂತರ ಚೀಫ್ ಆಫ್ ಆಮರ್ಿ ಸ್ಟಾಫ್ ಸ್ಥಾನಕ್ಕೆ ಸ್ಯಾಮ್ ಸೂಕ್ತವಾದ ಆಯ್ಕೆಯಾದರು. ಆದರೆ ಅವರ ಗಡಸು ವ್ಯಕ್ತಿತ್ವದಿಂದಾಗಿಯೇ ಅಲ್ಲಿಂದ ಮುಂದೆ ಹೋಗುವುದಕ್ಕೆ ಅವರಿಗೆ ಬಹಳ ಸಮಯ ಹಿಡಿಯಿತು. ಈ ವೇಳೆಯಲ್ಲಿಯೇ ಮಾಣಿಕಾ ಷಾ ಒಮ್ಮೆ ಗೂಖರ್ಾ ಯುನಿಟ್ಗೆ ಭೇಟಿ ಕೊಟ್ಟಿದ್ದರು. ಅವರು ಗೂಖರ್ಾ ರೆಜಿಮೆಂಟ್ನಲ್ಲಿ ಎಂದಿಗೂ ಕೆಲಸ ಮಾಡಿದ್ದವರಲ್ಲ ಆದರೂ ಗೂಖರ್ಾಗಳನ್ನು ಕಂಡರೆ ಅವರಿಗೆ ವಿಶೇಷವಾದ ಪ್ರೀತಿ. ‘ಸೈನಿಕನೊಬ್ಬ ತನಗೆ ಸಾವಿನ ಭಯ ಇಲ್ಲ ಎನ್ನುತ್ತಿದ್ದಾನೆ ಎಂದಾದರೆ ಒಂದೋ ಆತ ಸುಳ್ಳು ಹೇಳುತ್ತಿರಬೇಕು ಅಥವಾ ಆತ ಗೂಖರ್ಾ ಆಗಿರಬೇಕು’ ಎನ್ನುತ್ತಿದ್ದರು ಸ್ಯಾಮ್. ಗೂಖರ್ಾಗಳಿಗೂ ಅವರನ್ನು ಕಂಡರೆ ಅಪಾರವಾದ ಪ್ರೀತಿ. ಇಂದಿಗೂ ಅವರ ಮನೆಗಳಲ್ಲಿ ಸ್ಯಾಮ್ರ ಕುರಿತಂತಹ ದಂತಕಥೆಗಳು ಕೇಳಿ ಬರುತ್ತವೆ. ಅವರನ್ನು ಸ್ಯಾಮ್ ಬಹದ್ದೂರ್ ಎಂದು ಗೌರವದಿಂದ ಕರೆದು ತಮ್ಮವರಾಗಿಸಿಕೊಂಡಿದ್ದು ಗೂಖರ್ಾಗಳೇ. ಅದರ ಹಿನ್ನೆಲೆಯೂ ಬಲು ಕೌತುಕವಾದ್ದು. ಅದೊಮ್ಮೆ ಮಾಣಿಕ್ ಷಾ ಗೂಖರ್ಾ ಸೈನಿಕನೊಬ್ಬನ ಬಳಿ ಇದ್ದಕ್ಕಿದ್ದಂತೆ ಎತ್ತರದ ದನಿಯಲ್ಲಿ ‘ನನ್ನ ಹೆಸರೇನು ಗೊತ್ತಾ?’ ಎಂದು ಕೇಳಿದರಂತೆ. ಸೈನಿಕನು ಗಲಿಬಿಲಿಗೊಳಗಾಗದೇ ‘ಸ್ಯಾಮ್ ಬಹದ್ದೂರ್ ಸಾಬ್’ ಎಂದನಂತೆ. ಇಂದಿಗೂ ಗೂಖರ್ಾಗಳು ಸ್ಯಾಮ್ ಬಹದ್ದೂರ್ ಎಂದೇ ಅವರನ್ನು ಪ್ರೀತಿಯಿಂದ ಕರೆಯೋದು.

ಮಾಣಿಕ್ ಷಾ ಅವರ ನಿಜವಾದ ವ್ಯಕ್ತಿತ್ವ ಅನಾವರಣಗೊಂಡಿದ್ದು 1959 ರ ಆಸುಪಾಸಿನಲ್ಲಿ. ಆಗವರು ವೆಲ್ಲಿಂಗ್ ಟನ್ನ ಡಿಫೆನ್ಸ್ ಸವರ್ೀಸ್ ಸ್ಟಾಫ್ ಕಾಲೇಜಿನ ಮುಖ್ಯಸ್ಥರಾಗಿದ್ದರು. ಈ ಹೊತ್ತಲ್ಲಿ ರಕ್ಷಣಾ ಸಚಿವರಾದಿಯಾಗಿ ಪ್ರಧಾನಮಂತ್ರಿಗಳು ಸೇರಿದಂತೆ ಸೈನ್ಯದಲ್ಲಿ ಎಲ್ಲರೂ ಮೂಗು ತೂರಿಸುವುದು ಹೆಚ್ಚಾಗಿತ್ತು. ಮೇಜರ್ ಜನರಲ್ ಬ್ರಿಜ್ ಮೋಹನ್ ಕೌಲ್, ಮಂತ್ರಿ ಮೆನನ್ರ ಪ್ರಭಾವದಿಂದಾಗಿಯೇ ಲೆಫ್ಟಿನೆಂಟ್ ಜನರಲ್ನಿಂದ ಕ್ವಾರ್ಟರ್ ಮಾಸ್ಟರ್ ಜನರಲ್ ಹುದ್ದೆಗೆ ಏರಿಸಲ್ಪಟ್ಟಿದ್ದರು. ಈತ ಪ್ರಧಾನಂತ್ರಿಗಳ ಮತ್ತು ರಕ್ಷಣಾ ಸಚಿವರ ಬೆಂಬಲವಿದೆ ಎಂಬ ಕಾರಣಕ್ಕೆ ಚೀಫ್ ಆಫ್ ಆಮರ್ಿ ಸ್ಟಾಫ್ಗಿಂತಲೂ ಪ್ರಭಾವಿಯಾಗಿಬಿಟ್ಟದ್ದರು. ಈ ಕಿರಿಕಿರಿಯನ್ನು ತಾಳಲಾಗದೆಯೇ ಜನರಲ್ ತಿಮ್ಮಯ್ಯ ರಾಜಿನಾಮೆ ಎಸೆದರೂ ಕೂಡ. ಯಾವುದಕ್ಕೂ ಮುಲಾಜಿಟ್ಟುಕೊಳ್ಳದ ಮಾಣಿಕ್ ಷಾ ಮಂತ್ರಿಗಳೇನು ಪ್ರಧಾನಮಂತ್ರಿಗಳನ್ನು ಬಿಡದೇ ಬಲವಾಗಿಯೇ ಟೀಕಿಸಿದರು. ‘ರಕ್ಷಣಾ ಇಲಾಖೆಯ ಜವಾಬ್ದಾರಿ ಕೊಟ್ಟಿರುವಂತಹ ನಮ್ಮ ನಾಯಕರುಗಳಿಗೆ ಮೋಟರ್ಾರಿಗೂ ಮೋಟಾರಿಗೂ, ಗನ್ಗೂ ಹೋವಿಟ್ಜರ್ಗೂ, ಗೆರಿಲ್ಲಾಕ್ಕೂ ಗೊರಿಲ್ಲಾಕ್ಕೂ ವ್ಯತ್ಯಾಸವೇ ಗೊತ್ತಿಲ್ಲ. ಬಹುತೇಕರು ಗೊರಿಲ್ಲಾಗಳೆಂತೆಯೇ ಇರುತ್ತಾರೆ’ ಎಂದುಬಿಟ್ಟಿದ್ದರು. 1971 ರ ವೇಳೆಗೆ ಇವರ ಕಾರ್ಯಶೈಲಿಯನ್ನು ಗಮನಿಸಿ ಗಾಬರಿಗೊಂಡಿದ್ದ ಇಂದಿರಾ ‘ಸೈನ್ಯ ಪ್ರಭುತ್ವದ ವಿರುದ್ಧ ದಂಗೆಯೇಳುತ್ತದೆ ಎಂಬ ವದಂತಿ ನಿಜವೇ?’ ಎಂದು ಸ್ಯಾಮ್ರನ್ನು ಕೇಳಿದ್ದರು. ಆಗ ಇವರ ಉತ್ತರ ಏನಿತ್ತು ಗೊತ್ತೇ? ‘ನಿಮ್ಮ ಕೆಲಸ ನೀವು ಮಾಡಿ. ನನ್ನ ಕೆಲಸ ನನಗೆ ಮಾಡಲು ಬಿಡಿ. ನಿಮ್ಮ ಪ್ರೀತಿಪಾತ್ರರಿಗೆ ನೀವು ಮುತ್ತುಕೊಡಿ. ನಾನು ನನ್ನವರಿಗೆ ಕೊಡುತ್ತೇನೆ. ನನ್ನ ಸೇನೆಯೊಳಗೆ ಯಾರೂ ತಲೆಹಾಕದಿರುವವರೆಗೆ ನಾನು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಲಾರೆ’ ಎಂದಿದ್ದರು. ಸವರ್ಾಧಿಕಾರಿ ಇಂದಿರಾಳಿಗೆ ಆಕೆಯ ತಂದೆಯ ವಯಸ್ಸಿನವರೂ ಹೆದರಿಕೊಂಡು ಕೈ ಕಟ್ಟಿಕೊಂಡು ನಿಲ್ಲುವಂಥ ಸ್ಥಿತಿಯಿದ್ದಾಗ ಸ್ಯಾಮ್ ಮಾತ್ರ ಸೈನ್ಯದ ಘನತೆಯನ್ನು ಒಂದಿನಿತೂ ಮುಕ್ಕಾಗಲು ಬಿಡುತ್ತಿರಲಿಲ್ಲ. ಇಂದಿರಾಳನ್ನಂತೂ ಅವರು ‘ಹಾಯ್ ಸ್ವೀಟಿ’ ಎಂದೇ ಸಂಬೋಧಿಸುತ್ತಿದ್ದರು. ಓಹ್! ಮಾಣಿಕ್ ಷಾರನ್ನು ಅಥರ್ೈಸಿಕೊಳ್ಳೋದು ಬಲು ಕಷ್ಟ.


1971 ರಲ್ಲಿ ಸ್ಯಾಮ್ ನಿಜವಾಗಿಯೂ ಏನೆಂಬುದು ರಾಷ್ಟ್ರಕ್ಕೆ, ಶತ್ರು ರಾಷ್ಟ್ರಕ್ಕೆ, ರಣಹದ್ದುಗಳಂತೆ ತಿನ್ನಲು ಕಾಯುತ್ತಿದ್ದ ರಾಷ್ಟ್ರಳಿಗೆ ಮತ್ತು ಆಳುವ ವರ್ಗಕ್ಕೆ ಸ್ಪಷ್ಟವಾಗಿ ಅರಿವಾಯ್ತು. ಆ ವರ್ಷದ ಏಪ್ರಿಲ್ ತಿಂಗಳಲ್ಲಿ ಇದ್ದಕ್ಕಿದ್ದಂತೆ ಒಂದು ದಿನ ಇಂದಿರಾ ಸ್ಯಾಮ್ರನ್ನು ತಮ್ಮ ಕಛೇರಿಯ ಸಭೆಗೆ ಆಹ್ವಾನಿಸಿದರು. ಪೂರ್ವ ಪಾಕಿಸ್ತಾನದಿಂದ ಅಪಾರ ಸಂಖ್ಯೆಯಲ್ಲಿ ನಿರಾಶ್ರಿತರು ಪಶ್ಚಿಮಬಂಗಾಳ, ಅಸ್ಸಾಂ ಮತ್ತು ತ್ರಿಪುರಾಕ್ಕೆ ಧಾವಿಸಿ ಬರುವುದರಿಂದ ಆಕೆ ಗಾಬರಿಗೊಳಗಾಗಿದ್ದರು. ಮಂತ್ರಿಗಳು, ಅಧಿಕಾರಿಗಳು ಮತ್ತು ಸ್ಯಾಮ್ ಆ ಸಭೆಯಲ್ಲಿದ್ದರು. ಸೈನ್ಯದ ಮೇಲೆ ತಾವು ಅಧಿಕಾರ ಹೊಂದಿದ್ದೇವೆಂಬ ಧಿಮಾಕಿನಿಂದ ಮಾತನಾಡಿದ ಇಂದಿರಾ ಸ್ಯಾಮ್ರತ್ತ ತಿರುಗಿ ‘ನಿರಾಶ್ರತರು ಒಳ ನುಗ್ಗುತ್ತಿರುವುದಕ್ಕೆ ನೀವೇನು ಮಾಡುತ್ತಿದ್ದೀರಿ?’ ಎಂದು ಕೇಳಿದರು. ಅಷ್ಟೇ ವೇಗವಾಗಿ ಉತ್ತರಿಸಿದ ಸ್ಯಾಮ್ ‘ಬಿಎಸ್ಎಫ್, ಸಿಆರ್ಪಿ ಮತ್ತು ರಾ ಗಳ ಮೂಲಕ ಪೂರ್ವ ಪಾಕಿಸ್ತಾನಿಯರಿಗೆ ದಂಗೆಯೇಳಲು ಪ್ರಚೋದಿಸುವಾಗಿ ನನ್ನನ್ನು ಕೇಳಿಕೊಂಡಿದ್ದಿರೇನು’ ಎಂದ ಸ್ಯಾಮ್ ‘ಸಮಸ್ಯೆಯನ್ನು ಮೈಮೇಲೆಳೆದುಕೊಂಡಿದ್ದೀರಿ ಸರಿಪಡಿಸಿಕೊಳ್ಳಿ’ ಎಂದರು. ಆದಷ್ಟು ಬೇಗ ಪೂರ್ವ ಪಾಕಿಸ್ತಾನದೊಳಕ್ಕೆ ನುಗ್ಗಬೇಕು ಎಂದು ಯುದ್ಧದ ಆದೇಶವನ್ನು ಆಕೆ ಕೊಡುವಾಗ ಅಷ್ಟೇ ನಿರಮ್ಮಳವಾಗಿ ಕುಳಿತಿದ್ದ ಮಾಣಿಕ್ ಷಾ ‘ನೀವು ಸಿದ್ಧವಾಗಿರಬಹುದು ನಾನಲ್ಲ’ ಎಂದರು. ‘ಏಪ್ರಿಲ್ ತಿಂಗಳ ಕೊನೆಯಲ್ಲಿ ಹಿಮಾಲಯದ ದಾರಿಗಳು ಮುಕ್ತವಾಗಿಬಿಡುತ್ತವೆ. ಚೀನಾ ಕೂಡ ದಾಳಿ ಮಾಡಬಹುದು. ಪೂರ್ವ ಪಾಕಿಸ್ತಾನದಲ್ಲೂ ಮಳೆ ಸುರಿಯುತ್ತಿರುವುದರಿಂದ ಕದನ ಬಲು ಕಷ್ಟ. ನಮ್ಮ ಬಳಿ ಸಾಕಷ್ಟು ಶಸ್ತ್ರಾಸ್ತ್ರ ಸಂಗ್ರಹಣೆಯೂ ಇಲ್ಲ’ ಎಂದು ಮುಖಕ್ಕೆ ಹೊಡೆದಂತೆ ಹೇಳಿಬಿಟ್ಟರು. ಮರು ಮಾತನಾಡದ ಇಂದಿರಾ ಸಭೆಯನ್ನು ಬಕರ್ಾಸ್ತುಗೊಳಿಸಿ ಸಂಜೆ ಸೇರೋಣ ಎಂದರು. ಎಲ್ಲರೂ ಕೋಣೆಯಿಂದ ಹೊರಗೆ ಹೋಗಿದ್ದಾಯ್ತು. ಇಂದಿರಾ ಮಾಣಿಕ್ ಷಾರವರನ್ನು ಮಾತ್ರ ಕೋಣೆಯೊಳಗೆ ಉಳಿಯುವಂತೆ ಕೇಳಿಕೊಂಡರು. ತತ್ಕ್ಷಣ ಆಕೆಯ ಕಣ್ಣಲ್ಲಿ ಕಣ್ಣಿಟ್ಟು ನೋಡಿದ ಸ್ಯಾಮ್ ‘ಪ್ರಧಾನಮಂತ್ರಿಗಳೇ, ನೀವು ಇನ್ನೊಂದು ಮಾತನಾಡುವ ಮುನ್ನ ನಾನು ರಾಜಿನಾಮೆ ಪತ್ರವನ್ನು ಬರೆದುಕೊಡಲೇ. ನನ್ನ ದೈಹಿಕ ಅಥವಾ ಮಾನಸಿಕ ಆರೋಗ್ಯ, ಯಾವುದು ಚೆನ್ನಾಗಿಲ್ಲ ಎಂದು ಬರೆಯಬೇಕು ಹೇಳಿ’ ಎಂದು ಕೇಳಿಬಿಟ್ಟರು. ಇಂದಿರಾ ಸವರ್ಾಧಿಕಾರಕ್ಕೆ ಇದಕ್ಕಿಂತಲೂ ಸೂಕ್ತ ಮದ್ದಿರಲಿಲ್ಲ. ಮೆತ್ತಗಾದ ಆಕೆ ನೀವು ಹೇಳಿದಂತೆ ಯುದ್ಧ ನಡೆಯಲಿ ಎಂದು ಪೂರ್ಣ ಅನುಮತಿ ಕೊಟ್ಟರು. ಆನಂತರ ನಡೆದದ್ದು ಇತಿಹಾಸ. ಏಳು ತಿಂಗಳ ನಂತರ ಎಲ್ಲ ತಯಾರಿಯೊಂದಿಗೆ ಯುದ್ಧ ಸನ್ನದ್ಧರಾಗಿ ಬಂದ ಸ್ಯಾಮ್ರನ್ನು ಇಂದಿರಾ ‘ಎಲ್ಲ ತಯಾರಾಗಿದೆಯೇ’ ಎಂದು ಕೇಳಿದಾಗ ‘ಐ ಆಮ್ ಆಲ್ವೇಸ್ ರೆಡಿ ಸ್ವೀಟಿ’ ಎಂದಿದ್ದರು ಸ್ಯಾಮ್. ಅಮೆರಿಕನ್ನರು ಈ ಯುದ್ಧ ಒಂದೂವರೆ ತಿಂಗಳಾದರೂ ನಡೆಯಬಹುದೆಂದು ಲೆಕ್ಕ ಹಾಕಿ ಕುಳಿತಿದ್ದಾಗ ಮಾಣಿಕ್ ಷಾ ತಂತ್ರಗಾರಿಕೆ ಇದನ್ನು 13 ದಿನಗಳಲ್ಲೇ ಮುಗಿಸಿಬಿಟ್ಟಿತು. 93,000 ಜನ ಯುದ್ಧ ಖೈದಿಗಳಾಗಿ ಸಿಕ್ಕು ಬಿದ್ದಿದ್ದರು. ಶರಣಾಗತರನ್ನು ಒಪ್ಪಿಸಿಕೊಳ್ಳುವ ಅವಕಾಶ ಸಿಕ್ಕಾಗ ನಿರಾಕರಿಸಿದ ಮಾಣಿಕ್ ಷಾ ‘ಅದು ಆ ಡಿವಿಷನ್ ನ ಮುಖ್ಯಸ್ಥರ ಹೊಣೆಗಾರಿಕೆ. ಅವರೇ ಈ ಗೌರವವನ್ನು ಪಡೆಯಲಿ’ ಎಂದು ಹೇಳುತ್ತಾ ತಮ್ಮ ದೊಡ್ಡತನವನ್ನು ಮೆರೆದುಬಿಟ್ಟರು. ಸ್ವಾತಂತ್ರ್ಯಕ್ಕೂ ಮುನ್ನ ಪಾಕಿಸ್ತಾನದ ಸೇನಾನಿ ಯಾಹ್ಯಾ ಮಾಣಿಕ್ ಷಾರ ಬೈಕೊಂದನ್ನು ಕೊಂಡು ಕೊಂಡಿದ್ದ. ಒಂದು ಸಾವಿರ ರೂಪಾಯಿ ಹಣವನ್ನು ಕೊಟ್ಟಿರಲಿಲ್ಲ. ಮುಂದೆ ಇದೇ ಯಾಹ್ಯಾ ಪಾಕಿಸ್ತಾನದ ಅಧ್ಯಕ್ಷರಾದಾಗಲೇ 1971 ರ ಯುದ್ಧ ನಡೆದದ್ದು. ಮಾಣಿಕ್ ಷಾ ನಗುನಗುತ್ತಲೇ ‘ನನ್ನ ಸಾವಿರ ರೂಪಾಯಿ ಸಾಲ ಉಳಿಸಿಕೊಂಡಿದ್ದ ಯಾಹ್ಯಾ ಈಗ ಅವನ ಅರ್ಧ ರಾಷ್ಟ್ರವನ್ನು ನನಗೆ ಕೊಟ್ಟುಬಿಟ್ಟಿದ್ದಾನೆ’ ಎಂದಿದ್ದರು.

ಮಾಣಿಕ್ ಷಾ ತಮಿಳುನಾಡಿನ ವೆಲ್ಲಿಂಗ್ಟನ್ ಆಸ್ಪತ್ರೆಯಲ್ಲಿ ನ್ಯುಮೋನಿಯಾದಿಂದ ತೀರಿಕೊಂಡಾಗ ದೇಶ ಅವರನ್ನು ಗುರುತಿಸಲು ಮರೆತೇ ಹೋಗಿತ್ತು. 1971 ರ ಯುದ್ಧದ ನಿಜವಾದ ಹೀರೋ ಮಾಣಿಕ್ ಷಾ ಎಂಬುದನ್ನು ಕಾಂಗ್ರೆಸ್ಸು ಸಹಿಸಲಿಲ್ಲ. ಹೀಗಾಗಿ ಇಂತಹ ಅದ್ಭುತ ಸೇನಾನಿಯೊಬ್ಬ ತೀರಿಕೊಂಡಾಗ ಗಣ್ಯರಾರು ಅಂತಿಮ ದರ್ಶನಕ್ಕೆ ಬರಲೇ ಇಲ್ಲ. ಅವರ ಸಾವನ್ನು ರಾಷ್ಟ್ರೀಯ ಶೋಕವೆಂದು ಆಚರಿಸಲಿಲ್ಲ. ನೆಹರು-ಇಂದಿರಾ ಭಾರತ ರತ್ನವನ್ನು ತಮ್ಮ ಮುಡಿಗೇರಿಸಿಕೊಂಡುಬಿಟ್ಟರು. ನಿಜವಾದ ಇಂತಹ ರತ್ನಗಳು ಅನಾಥವಾಗಿ ಉಳಿದುಬಿಟ್ಟವು. ಅಹಮದಾಬಾದ್ನಲ್ಲಿ ಒಂದು ಫ್ಲೈ ಓವರ್ಗೆ ಮಾಣಿಕ್ ಷಾ ಹೆಸರಿಡಲು ಮುಖ್ಯಮಂತ್ರಿ ನರೇಂದ್ರಮೋದಿಯವರೇ ಬೇಕಾಯ್ತು! ಹುತಾತ್ಮರನ್ನು, ಮಹಾತ್ಮರನ್ನು ಸ್ಮರಿಸದ ದೇಶಕ್ಕೆ ಭವಿಷ್ಯವಿಲ್ಲ ಅಂತಾರೆ. 70 ವರ್ಷಗಳ ಕಾಲ ಪ್ರಗತಿ ಕಾಣದೇ ತೊಳಲಾಡಿದ್ದು ಬಹುಶಃ ಇದೇ ಕಾರಣಕ್ಕಿರಬಹುದು!!

-ಚಕ್ರವರ್ತಿ ಸೂಲಿಬೆಲೆ

2 Comments

2 Comments

 1. Kumar

  July 4, 2018 at 3:12 am

  ರೋಮಾಂಚನವಾಗುತ್ತೆ ಓದುತ್ತಿದ್ದರೆ, ಯಾಕೋ ಗೊತ್ತಿಲ್ಲ ನಮ್ಮ ಸೈನಿಕರ ಬಗ್ಗೆ ನಿಮ್ಮ ಮಾತಿನ ವರಸೆಗಳು ಕಣ್ಣಲ್ಲಿ ನೀರು ತರಿಸುತ್ತವೆ. Salute to our great soldiers

 2. Lasonya

  July 7, 2018 at 2:28 am

  I think this is among the so much important information for me.
  Annd i’m glad studying your article. However should remark on some basic things, The siite style is wonderful, thhe articles is truly
  excellent : D. Excellent activity, cheers http://irvin.helm@nasihudin.blog.4pets.es/php.php?a%5B%5D=%3Ca+href%3Dhttp%3A%2F%2Fwww.Digitalcurrencycouncil.com%2Fmembers%2Ftightswire6%2Factivity%2F296155%2F%3Escr888+old+version%3C%2Fa%3E

Leave a Reply

Your email address will not be published. Required fields are marked *

Most Popular

To Top