National

ಪ್ರತಿಭಟಿಸುತ್ತಲೇ ಪ್ರಪಾತಕ್ಕೆ ಬಿದ್ದವರು!

ಸಿಎಎ ಪ್ರತಿಭಟನೆ ಮೇಲ್ನೋಟಕ್ಕೆ ಮುಸಲ್ಮಾನರನ್ನು ಒಗ್ಗೂಡಿಸಿತೆಂದು ಕಂಡರೂ ಆಂತರಿಕವಾಗಿ ಹಿಂದೂಗಳನ್ನು ಹಿಂದೆಂದಿಗಿಂತಲೂ ಬಲವಾಗಿ ಜೋಡಿಸಿಬಿಟ್ಟಿದೆ. ಎಲ್ಲೆಡೆ ಮೌನವಾಗಿಯೇ ಹಿಂದೂಗಳು ಒಟ್ಟುಗೂಡುತ್ತಿರುವ ಆತಂಕವಾದಿಗಳ ವಿರುದ್ಧ ಕುದಿಯುತ್ತಿದ್ದಾರೆ. ಮತ್ತು ಇಷ್ಟು ದಿನ ಸೆಕ್ಯುಲರಿಸಂನ ಸೋಗಿನಲ್ಲಿ ಹಿಂದುತ್ವದ ವಿರೋಧ ಮಾಡುತ್ತಿದ್ದವರೆಲ್ಲರೂ ಈಗ ಒಂದೇ ಛತ್ರದಡಿ ಸೇರುತ್ತಿರುವುದು ದೃಗ್ಗೋಚರವಾಗುತ್ತಿದೆ. ಸುಮ್ಮನೆ ಅವಲೋಕನ ಮಾಡಬೇಕೆಂದರೆ ಆರಂಭದಲ್ಲಿ ದೆಹಲಿಯಲ್ಲಿ ಜೋರಾದ ಪ್ರತಿಭಟನೆಗಳು ನಡೆದವು. ಅದು ದೇಶದಾದ್ಯಂತ ಹಬ್ಬುತ್ತದೆ ಎಂಬ ಹೆದರಿಕೆ ಹುಟ್ಟಿಸಲಾಯ್ತು. ಮುಸಲ್ಮಾನರು ಬಲುದೊಡ್ಡ ಸಂಖ್ಯೆಯಲ್ಲಿರುವ ಉತ್ತರಪ್ರದೇಶದಲ್ಲಿ ಪ್ರತಿಭಟನೆಗಳು ನಡೆದದ್ದು ನಿಜವಾದರೂ ಯೋಗಿ ಆದಿತ್ಯನಾಥ್ ಬಲುಬೇಗ ಅದನ್ನು ತಹಬಂದಿಗೆ ತಂದರು. ಸಮಾಜ ಕಂಟಕರಾಗಿದ್ದ ಎಂಟ್ಹತ್ತು ಜನರನ್ನು ನಡುರಸ್ತೆಯಲ್ಲಿ ಕೊಂದುಬಿಸಾಡಲಾಯ್ತು. ಬಹುಶಃ ಮಂಗಳೂರಿನ ಪೊಲೀಸರು ಸ್ವಲ್ಪ ಹಿಂದುಮುಂದು ನೋಡಿದ್ದರೂ ಈ ವಿಷಕ್ರಿಮಿಗಳು ರಾಜ್ಯಕ್ಕೆ ಬೆಂಕಿ ಇಡುತ್ತಿದ್ದರೇನೋ. ಆದರೆ ಇಬ್ಬರನ್ನೂ ಅವರು ಬಯಸುವ ಸ್ವರ್ಗಕ್ಕೆ ಅಟ್ಟಿಸಿದ ನಂತರ ಇದ್ದಕ್ಕಿದ್ದಂತೆ ಇಡಿಯ ರಾಜ್ಯ ಶಾಂತಿಯುತ ಪ್ರತಿಭಟನೆಗೆ ಮರಳಿತು! ಹಾಗೆ ನೋಡಿದರೆ ಬಹುತೇಕ ಮುಸಲ್ಮಾನರನ್ನು ಸೆಳೆದಿದ್ದು ಈ ಶಾಂತಿಯುತ ಪ್ರತಿಭಟನೆಯೇ. ಲಕ್ಷಾಂತರ ಜನ ಈ ಪ್ರತಿಭಟನೆಗೆ ಸೇರಿಕೊಂಡರು. ಇದನ್ನು ರಾಷ್ಟ್ರೀಯತೆಯ ಪರವಾದ ಹೋರಾಟವೆಂದು ತೋರಿಸಲು ತಿರಂಗಾ ಹಿಡಿದು ಜನಗಣಮನವನ್ನೂ ಹೇಳಿದರು. ನಮ್ಮ ಜೀವಮಾನದಲ್ಲಿ ಓವೈಸಿ ಜನಗಣಮನ ಹಾಡುವ ದೃಶ್ಯ ನೋಡುತ್ತೇವೆಂದು ನಾವ್ಯಾರೂ ಅಂದುಕೊಂಡೇ ಇರಲಿಲ್ಲ. ಆದರೆ ದುರದೃಷ್ಟವೇನೆಂದರೆ ಹೀಗೆ ಭಾಗವಹಿಸಿದವರಲ್ಲಿ ಬಹುತೇಕರು ಸಿಎಎ ಬಗ್ಗೆ ಅರಿತಿರಲಿಲ್ಲ. ಇನ್ನು ಕಲ್ಪನೆಯೂ ರೂಪುಗೊಂಡಿರದಿದ್ದ ಎನ್ಆರ್ಸಿಯ ಬಗ್ಗೆ ಭಯಭೀತರಾಗಿ ಪ್ರತಿಕ್ರಿಯಿಸುತ್ತಿದ್ದರು. ಇನ್ನೂ ಹೆಚ್ಚಿನ ದುರಂತವೆಂದರೆ ತಾವು ತಿಳಿದುಕೊಂಡಿರುವ ವಿಚಾರದ ಮತ್ತೊಂದು ಮಗ್ಗುಲನ್ನು ಅರಿಯುವ ಧೈರ್ಯವೂ ಇವರಿಗಿರಲಿಲ್ಲ. ಮಂಗಳೂರಿನ ಕಾಲೇಜೊಂದರಲ್ಲಿ ಸಿಎಎ ಕುರಿತಂತೆ ಚಚರ್ೆ ಆರಂಭವಾದೊಡನೆ ಬುಖರ್ಾ ಧರಿಸಿದ್ದ ನಾಲ್ಕು ಹೆಣ್ಣುಮಕ್ಕಳು ಸಭೆಯಿಂದ ಹೊರಗೆ ನಡೆದರು. ಅವರಿಗೆ ಚಚರ್ೆ ನಡೆಯುವುದೇ ಇಷ್ಟವಿರಲಿಲ್ಲ. ಎಲ್ಲಾದರೂ ತಾವು ನಂಬಿಕೊಂಡು ಪ್ರತಿಭಟನೆ ಮಾಡಿದ್ದು ಸುಳ್ಳೆಂದು ಗೊತ್ತಾದರೆ ಹಾಟರ್್ ಅಟ್ಯಾಕ್ ಆಗಿಬಿಟ್ಟೀತೇನೋ ಎಂಬ ಭಯದಲ್ಲೇ ಕಾಲ ದೂಡುವಂತೆ ಅವರಿದ್ದರು!


ಪ್ರತಿಭಟನೆಯನ್ನು ಆರಂಭಿಸಿಯೇನೋ ಆಗಿತ್ತು. ಆದರೆ ದೇಶದ ಪ್ರಧಾನಿಯಾಗಲೀ ಗೃಹ ಸಚಿವರಾಗಲೀ ಅದರ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣುತ್ತಿರಲಿಲ್ಲ. ಮತ್ತೊಂದೆಡೆ ಈ ಪ್ರತಿಭಟನೆಯ ಕಾರಣದಿಂದಾಗಿ ಉಗ್ರಕೃತ್ಯಕ್ಕೆ ತಯಾರಿ ನಡೆಸಿಕೊಂಡಿದ್ದ ಅನೇಕರು ಸರಪಟಾಕಿಯಂತೆ ಸಿಕ್ಕುಬಿದ್ದರು. ಆರೇಳು ವರ್ಷಗಳಿಂದ ಇವರುಗಳು ನಡೆಸಿಕೊಂಡಿದ್ದ ತಯಾರಿ ಈ ಪ್ರತಿಭಟನೆಯ ಕಾರಣದಿಂದಾಗಿ ವ್ಯರ್ಥವಾಗಿಹೋಯ್ತು. ಈ ಆಕ್ರೋಶವನ್ನು ತೀರಿಸಿಕೊಳ್ಳಲು ಅವರಿಗಿದ್ದ ಮಾರ್ಗ ದೆಹಲಿಯ ನಟ್ಟನಡುವೆ ಪ್ರತಿಭಟಿಸುವುದು ಮಾತ್ರ ಆಗಿತ್ತು. ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾದ ಕೇಂದ್ರವಿರುವ ಶಾಹೀನ್ಬಾಗ್ನಲ್ಲಿ ಹೆಂಗಸರು, ಮಕ್ಕಳು ಬೀದಿಗೆ ಬಂದರು. ಬಂದವರೆಲ್ಲರೂ ಮುಸಲ್ಮಾನರೇ ಆಗಿದ್ದರೆಂಬುದಕ್ಕೆ ಅವರು ಧರಿಸಿದ್ದ ಬುಖರ್ಾ, ಹಿಜಬ್ಗಳೇ ಸಾಕ್ಷಿಯಾಗಿದ್ದವು. ಆಮ್ಆದ್ಮಿ ಪಾಟರ್ಿ ಮತ್ತು ಕಾಂಗ್ರೆಸ್ಸುಗಳು ಸಕರ್ಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಹೋರಾಟವಾಗಿ ಇದನ್ನು ಮಾರ್ಪಡಿಸಬೇಕೆಂದು ಪೂರ್ಣ ಬೆಂಬಲ ನೀಡಿದರು. ವಾಸ್ತವವಾಗಿ ಅವರಂದುಕೊಂಡಿದ್ದಕ್ಕಿಂತ ವಿಪರೀತವಾದದ್ದೇ ನಡೆದುಹೋಯ್ತು. ಶಾಂತಿಯುತ ಪ್ರತಿಭಟನೆ ಹೆಸರಲ್ಲಿ ಅವರು ರಸ್ತೆಯನ್ನೇ ಅಡ್ಡಗಟ್ಟಿ ಕುಳಿತಿದ್ದರಿಂದ ಇಡಿಯ ದೆಹಲಿಗೆ ಉಸಿರುಗಟ್ಟಿಸುವ ವಾತಾವರಣ ನಿಮರ್ಾಣವಾಯ್ತು. ಒಂದೆರಡು ದಿನಗಳಲ್ಲೇ ಸಕರ್ಾರ ತಲೆಬಾಗಿ ನಿಂತುಬಿಡುತ್ತದೆ ಎಂದು ಭಾವಿಸಿದ ಪ್ರತಿಭಟನಾಕಾರರಿಗೆ ಮೋದಿ ಮತ್ತು ಅಮಿತ್ಶಾರ ಕಲ್ಲುಮನಸ್ಸು ಅರಿವಾಗಲೇ ಇಲ್ಲ. ಉಲ್ಟಾ ಈ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗದೇ ದೆಹಲಿಗೆ ಪ್ರತಿಭಟನಾಕಾರರು ಹೊರೆಯಾಗಲಾರಂಭಿಸಿದರು. ರಸ್ತೆಗಳು ಅಡ್ಡಗಟ್ಟಲ್ಪಟ್ಟಿದ್ದರಿಂದ ಕಾಖರ್ಾನೆಗೆ ಹೋಗುವ, ಕಛೇರಿಗೆ ಹೋಗುವ, ಶಾಲೆಗೆ ಹೋಗುವ ಮಕ್ಕಳು ಕಿರಿಕಿರಿ ಅನುಭವಿಸಲಾರಂಭಿಸಿದರು. ನಿಧಾನವಾಗಿ ದೆಹಲಿಯ ಒಟ್ಟಾರೆ ಮನಸ್ಥಿತಿ ಈ ಪ್ರತಿಭಟನಾಕಾರರ ವಿರುದ್ಧವೇ ರೂಪುಗೊಳ್ಳುತ್ತಿರುವುದು ಸ್ಪಷ್ಟವಾಗಿ ಕಂಡುಬಂತು.

ಆಗಲೇ ಶಜರ್ೀಲ್ ಇಮಾಮ್ ಈ ಪ್ರತಿಭಟನೆಗಳನ್ನು ಈ ಸಂದರ್ಭದಲ್ಲಿ ಹಿಂತೆಗೆದುಕೊಂಡು ಮತ್ತೆ ಬೇಕೆಂದಾಗ ಮಾಡುವ ಕರೆಯನ್ನು ಕೊಟ್ಟ. ಹೆಂಡ ಕುಡಿದ ಮಂಗಕ್ಕೆ ಇವೆಲ್ಲಾ ಅರ್ಥವಾಗಬೇಕಲ್ಲಾ? ಪ್ರತಿಭಟನಾಕಾರರು ಈಗ ಜಿದ್ದಿಗೆ ಬಿದ್ದಿದ್ದರು. ಸಕರ್ಾರದ ಪರವಾಗಿ ಯಾರಾದರು ಒಬ್ಬರು ಮಾತನಾಡಿಬಿಟ್ಟರೆ ತಾವು ಹೊರಟೇಬಿಡುತ್ತೇವೆ ಎಂದು ಭಾವಿಸಿದ್ದರು. ಆದರಿದು ಕಾಂಗ್ರೆಸ್ ಸಕರ್ಾರ ಅಲ್ಲವಲ್ಲ. ಮೋದಿ-ಶಾ ಬಿಡಿ ಕೊನೆಗೆ ಬಿಜೆಪಿಯ ಸಾಮಾನ್ಯ ಸಂಸದನೂ ಕೂಡ ಅತ್ತ ತಲೆ ಹಾಕಲಿಲ್ಲ. ರೊಟ್ಟಿಯೇ ಜಾರಿ ತುಪ್ಪಕ್ಕೆ ಬಿದ್ದಿರುವಾಗ ಇವರಾದರೂ ಏಕೆ ತಲೆಕೆಡಿಸಿಕೊಳ್ಳುತ್ತಾರೆ. ನಿಧಾನವಾಗಿ ದೆಹಲಿಯ ಜನರ ಮನಸ್ಥಿತಿ ವಾಲುತ್ತಿದೆ ಎಂಬುದು ಗೊತ್ತಾಗುತ್ತಿದ್ದಂತೆ ಅರವಿಂದ್ ಕೇಜ್ರಿವಾಲ್ ಬಗೆ-ಬಗೆಯ ಪ್ರಯತ್ನಗಳನ್ನು ಆರಂಭಿಸಿಬಿಟ್ಟರು. ರಾಮ್ಭಕ್ತ ಗೋಪಾಲ್ ಎನ್ನುವ ಹೆಸರಿನವ ಮಾಧ್ಯಮಗಳ ಮುಂದೆಯೇ ಬಂದು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುವ ದೃಶ್ಯ ವೈರಲ್ ಆಯ್ತು. ಪಾಪ ಚಿತ್ರಕಥೆ ಚೆನ್ನಾಗಿತ್ತು, ನಿದರ್ೇಶನ ಮತ್ತು ಚಿತ್ರ ಬಿಡುಗಡೆಗೊಂಡ ಸಮಯ ಸ್ವಲ್ಪ ಕೆಟ್ಟದ್ದಾಗಿತ್ತು! ಗೋಪಾಲನ ಫೇಸ್ಬುಕ್ ಪ್ರೊಫೈಲನ್ನೆಲ್ಲಾ ಜಾಲಾಡಿದ ನೆಟ್ಟಿಗರು ಈ ಕೃತ್ಯಕ್ಕೋಸ್ಕರವೇ ಆತನನ್ನು ಆರಿಸಿಕೊಂಡು ತಯಾರು ಮಾಡಿದ್ದನ್ನು ಸ್ಪಷ್ಟವಾಗಿ ಸಾಬೀತುಪಡಿಸಿದರು. ಶಾಹೀನ್ಬಾಗ್ನಲ್ಲೂ ದಾಳಿ ಪ್ರಕರಣಗಳು ಹೊರಬಂದವಾದರೂ ಕೆನ್ನೆಗೆ ಪದೇ ಪದೇ ಏಟು ತಿಂದು ವೋಟು ಪಡೆಯುವ ಕೇಜ್ರಿವಾಲನ ನಾಟಕದ ಮುಂದುವರೆದ ಭಾಗ ಎಂದು ದೆಹಲಿ ಜನ ಗುರುತಿಸಿದರು. ಹೀಗಾಗಿಯೇ ಈ ಹಿಂದೆ ಮಾಡಿದ ಚುನಾವಣಾ ಸಮೀಕ್ಷೆಯಲ್ಲಿ ಆಮ್ಆದ್ಮಿ ಪಾಟರ್ಿಗೆ 50 ಸೀಟುಗಳು ಬರುತ್ತವೆ ಎಂದಿದ್ದವರೆಲ್ಲಾ ವರಸೆ ಬದಲಾಯಿಸತೊಡಗಿದ್ದಾರೆ. ಚುನಾವಣೆಗೆ ಇನ್ನು ನಾಲ್ಕು ದಿನ ಬಾಕಿ ಇದೆ. ಅಷ್ಟರೊಳಗೆ ಏನೆಲ್ಲಾ ಆಗುತ್ತದೆ ಎಂದು ಕಾದು ನೋಡಬೇಕಷ್ಟೇ. ಬಿಜೆಪಿ ಪಾಳಯದಲ್ಲಿ ಕಳೆದುಕೊಂಡ ಯುದ್ಧವನ್ನು ಗೆಲ್ಲುವ ಕನಸು ಚಿಗುರಿರುವುದೊಂತೂ ನೂರಕ್ಕೆ ನೂರು ಸತ್ಯ. ಹಾಗೇನಾದರೂ ಆಗಿಬಿಟ್ಟರೆ ಅದರ ಶ್ರೇಯವೆಲ್ಲಾ ಸಿಎಎ ವಿರುದ್ಧ ಪ್ರತಿಭಟನೆಗೇ ಸಲ್ಲಬೇಕು. ಅದರರ್ಥ ಮುಸಲ್ಮಾನರು ಪ್ರತಿಭಟಸಿದರೆ ದೇಶ ನಡುಗಬೇಕು ಎನ್ನುವ ಕಾಲ ಹೋಗಿ ಅವರ ಪ್ರತಿಭಟನೆಯಿಂದಲೇ ದೇಶ ಬಲವಾಗುವ ಹೊತ್ತು ಬಂತು ಅಂತ. ಯಾವುದಕ್ಕೂ ಫೆಬ್ರವರಿ 8ರವರೆಗೆ ಕಾಯಲೇಬೇಕು!!

-ಚಕ್ರವರ್ತಿ ಸೂಲಿಬೆಲೆ

 

Click to comment

Leave a Reply

Your email address will not be published. Required fields are marked *

Most Popular

To Top