National

ಪ್ರತಿನಿತ್ಯ ಗುಂಡಿಗಳನ್ನು ನೋಡಿ, ರಿಪೇರಿ ಮಾಡುವುದು ಸಾಧ್ಯವಿಲ್ಲ – ಕರ್ನಾಟಕ ಸಾರಿಗೆ ಸಚಿವರು!

‘ರಸ್ತೆಗಳಲ್ಲಿ ಗುಂಡಿಗಳಿದ್ದವಾ? ಹಾಗಿದ್ದರೆ ಹುಷಾರಾಗಿ ಗಾಡಿ ಓಡಿಸಿ’ ಈ ಸಲಹೆ ಬಂದಿದ್ದು ಇನ್ನಾರಿಂದಲೂ ಅಲ್ಲ, ಸಾರಿಗೆ ಸಚಿವರಾಗಿರುವ ಡಿ.ಸಿ ತಮ್ಮಣ್ಣ ಅವರಿಂದ! ಸೋಮವಾರ ನಡೆದ 30 ನೇ ರಾಷ್ಟ್ರೀಯ ರಸ್ತೆ ಸುರಕ್ಷತೆಯ ಸಮಾರೋಪ ಕಾರ್ಯಕ್ರಮದ ಸಂದರ್ಭದಲ್ಲಿ ಈ ಮಾತನ್ನು ಅವರು ಹೇಳಿದ್ದಾರೆ. ‘ಬೆಂಗಳೂರು ಸಾವಿರಾರು ಕಿಲೋಮೀಟರ್ ಗಳ ರಸ್ತೆಯನ್ನು ಹೊಂದಿದೆ. ಪ್ರತಿ ನಿತ್ಯ ಗುಂಡಿಗಳನ್ನು ಹುಡುಕಿ ಅದನ್ನು ರಿಪೇರಿ ಮಾಡುವುದು ಬಹಳ ಕಷ್ಟ’ ಎಂದವರು ಹೇಳಿದ್ದಾರೆ.

ರಸ್ತೆ ಸುರಕ್ಷತೆಯ ಪ್ರಾಮುಖ್ಯತೆಯ ಕುರಿತು ಅವರು ಮಾತನಾಡುತ್ತಿದ್ದಾಗ, ‘ಮಳೆ ಬಂದರೆ ಗುಂಡಿಗಳ ಸಂಖ್ಯೆಯೂ ವೃದ್ಧಿಸುತ್ತದೆ. ಹಾಗಾಗಿ ಗಾಡಿ ಓಡಿಸುವವರು ರಸ್ತೆಯ ಪರಿಸ್ಥಿತಿಯನ್ನು ನೋಡಿ ಹುಷಾರಾಗಿ ಗಾಡಿಯನ್ನು ಓಡಿಸಬೇಕು. ಅವರು ಮತ್ತೊಂದು ವಾಹನದಿಂದಲೂ ಒಂದಷ್ಟು ಅಂತರವನ್ನು ಕಾಯ್ದುಕೊಳ್ಳಬೇಕು’ ಎಂದು ಹೇಳಿದ್ದಾರೆ.

ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದು ಅಪಘಾತಕ್ಕೆ ಕಾರಣವೆಂಬ ಮಾತನ್ನೂ ಸಾರಿಗೆ ಸಚಿವರು ಹೇಳಿ ಆಶ್ಚರ್ಯ ಹುಟ್ಟಿಸಿದ್ದಾರೆ.  ಅವರು ಹೇಳಿದರು ‘ಕಳೆದ ಕೆಲವು ವರ್ಷಗಳಲ್ಲಿ, ಸರ್ಕಾರ ರಸ್ತೆಯನ್ನು ಅಭಿವೃದ್ಧಿಗೊಳಿಸಿದೆ. ಸುರಕ್ಷಿತವಾದ ಪ್ರಯಾಣಕ್ಕೆಂದೇ ಇರುವ ಒಳ್ಳೆಯ ರಸ್ತೆಗಳಲ್ಲಿ ಅತ್ಯಂತ ವೇಗವಾಗಿ ಗಾಡಿಗಳನ್ನು ಓಡಿಸುತ್ತಾರೆ. ಹಾಗಾಗಿ, ಟ್ರಾಫಿಕ್ ನಿಯಮಗಳನ್ನು ಅನುಸರಿಸುವಲ್ಲಿ ಸಾರ್ವಜನಿಕರೂ ಕೈ ಜೋಡಿಸಬೇಕು. ಅವರು ತಮ್ಮ ಜೀವ ಮತ್ತು ಇನ್ನಿತರರ ಕುರಿತು ಎಚ್ಚರಿಕೆ ವಹಿಸಬೇಕು. ಆಗ ಮಾತ್ರ ಅಪಘಾತವನ್ನು ತಡೆಯಲು ಸಾಧ್ಯ’ ಎಂದು.

 

Click to comment

Leave a Reply

Your email address will not be published. Required fields are marked *

Most Popular

To Top