National

ಪುಲ್ವಾಮಾ ದಾಳಿ; ಬೆತ್ತಲಾಗಿದ್ದು ಯಾರು?

ಪುಲ್ವಾಮಾ ದಾಳಿ ಮತ್ತು ಆನಂತರದ ಚಚರ್ೆಗಳು ಇನ್ನೂ ನಿಂತಿಲ್ಲ. ಆ ದಾಳಿಯಿಂದ ನಾವು ಕಲಿಯಬೇಕಾದ ಪಾಠಗಳು ಮತ್ತು ಬಯಲಿಗೆ ತಂದ ಸಂಗತಿಗಳು ಸಾಕಷ್ಟಿವೆ. ಪಕ್ಷಗಳು, ಪ್ರತಿಪಕ್ಷಗಳು ಒಂದಕ್ಕೊಂದು ಕೆಸರೆರಚಾಟದಲ್ಲಿ ಮಗ್ನರಾಗಿರುವಾಗ ಪಾಕಿಸ್ತಾನ ಅಚ್ಚರಿಯೆಂಬಂತೆ ಮುಗುಮ್ಮಾಗಿಬಿಟ್ಟಿದೆ. ಭಾರತ ವಾಯುದಾಳಿಯನ್ನೇ ಮಾಡಿಬಿಡಬಹುದೆಂದು ಅದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಇತ್ತ ಪುಲ್ವಾಮಾದಂತಹ ದಾಳಿಯನ್ನು ಪಾಕಿಸ್ತಾನ ಸಂಘಟಿಸಬಹುದೆಂಬ ಕಲ್ಪನೆಯೂ ಭಾರತಕ್ಕಿರಲಿಲ್ಲ. ಹೀಗಾಗಿ ಕಲಿಯಬೇಕಾದ್ದು ಸಾಕಷ್ಟಿದೆ ಎಂದಿದ್ದು!


ಪುಲ್ವಾಮಾ ದಾಳಿ ಭಯಾನಕವಾಗಿದ್ದು ನಿಜ. ಅದರಲ್ಲೂ ಆ ಯೋಜನೆಯನ್ನು ರೂಪಿಸಿದ ರೀತಿ, ಬಿಡುಗಡೆಗೈಯ್ದ ವಿಡಿಯೊ, ಮಾಡಿದ ದಾಳಿ ಇವೆಲ್ಲವೂ ಭಾರತದಲ್ಲಿ ಭಯೋತ್ಪಾದನೆಯ ಹೊಸ ಅಧ್ಯಾಯವನ್ನೇ ಬರೆಯುವಂಥದ್ದಾಗಿದ್ದವು. ಆದಿಲ್ ದಾರ್ ವಿಡಿಯೊ ಚಿತ್ರೀಕರಣ ಮಾಡಿದ್ದು ಪಾಕ್ ಆಕ್ರಮಿತ ಕಾಶ್ಮೀರದ ಗುಹೆಯೊಳಗೆ ಅಲ್ಲ. ಸಾರ್ವಭೌಮ ರಾಷ್ಟ್ರವಾದ ಕಾಶ್ಮೀರದ ಮನೆಯೊಳಗೆ ಎಂಬುದು ಬಲು ಆತಂಕದ ವಿಚಾರ. ಆತನಾಡಿದ ಮಾತುಗಳು ಬರಿಯ ದಾಳಿಯಷ್ಟೇ ಉದ್ದೇಶವಾಗಿರಲಿಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಒಂದೆಡೆ ತನ್ನ ಆಕ್ರಮಣ ಗೋಮೂತ್ರ ಕುಡಿಯುವವರ ವಿರುದ್ಧ ಎನ್ನುವ ಮೂಲಕ ಆತ ಹಿಂದೂಗಳ ವಿರುದ್ಧ ಮುಸಲ್ಮಾನರು ತೊಡೆತಟ್ಟಿ ನಿಲ್ಲಬೇಕಾದ ಅಗತ್ಯವನ್ನು ಮನಗಾಣಿಸುತ್ತಲೇ ಜಿಹಾದ್ನ ನಂತರ ತಾನು ಸ್ವಗರ್ಾರೋಹಿಯಾಗಿ 72 ಹೂರ್ಗಳೊಂದಿಗೆ ಆನಂದದಿಂದ ಕಾಲ ಸವೆಸುವ ಮಾತನಾಡುತ್ತಾನೆ. ಇದು ಹಿಂದೂಗಳ ವಿರುದ್ಧ ಸಿಡಿದೇಳಲು ಮುಸಲ್ಮಾನರಿಗೆ ಆತ ಕೊಡುವ ಪ್ರೇರಣೆ. ಈ ವಿಡಿಯೊ ಭವಿಷ್ಯದಲ್ಲಿ ಭಾರತದಲ್ಲಿ ನಡೆಯಬಹುದಾದ ದಂಗೆ-ದಾಳಿಗಳ ಮುನ್ಸೂಚನೆ. ಆದರೆ ಬುದ್ಧಿಜೀವಿಗಳೆನಿಸಿಕೊಂಡವರ್ಯಾರೂ ಈ ಒಟ್ಟಾರೆ ವಿಡಿಯೊ ಬಗ್ಗೆ ಮಾತನಾಡಲೇ ಇಲ್ಲ. ಗೋಮೂತ್ರ ಕುಡಿಯುವುದನ್ನು ಅವರು ಅನೇಕ ಬಾರಿ ಆಡಿಕೊಳ್ಳುತ್ತಾರೆ ನಿಜ. ಆದರೆ ಚಚರ್ುಗಳಲ್ಲಿ ವೈನು ಕುಡಿಯುವವರಿಗಿಂತ ಸಾವಿರ ಪಾಲು ಇದು ಮೇಲು ಎಂಬುದನ್ನು ಎಲ್ಲರೂ ಅನುಮೋದಿಸುತ್ತಾರೆ. ಅಲ್ಲವೇ ಮತ್ತೇ? ಕೊಳೆತ ಹಣ್ಣಿನ ಶರಬತ್ತಿಗಿಂತ ದೇಸೀ ಗೋಮೂತ್ರ ಒಳ್ಳೆಯದ್ದೆ. ಆದರೆ ಆ ವಿಚಾರವನ್ನು ಬದಿಗಿಟ್ಟು ಮಾತನಾಡುವುದಾದರೆ ಗೋಮೂತ್ರದ ವೈಜ್ಞಾನಿಕತೆಯನ್ನು ಪ್ರಶ್ನಿಸುವ ಈ ಮಂದಿ ಸತ್ತ ನಂತರ ಸ್ವರ್ಗಕ್ಕೆ ಹೋಗುವವರ ಕಲ್ಪನೆಯನ್ನು ಎಂದಿಗೂ ಆಡಿಕೊಳ್ಳುವುದೇ ಇಲ್ಲ. ಮೇಲೊಂದು ಸ್ವರ್ಗವಿದೆ. ಅಲ್ಲಿ 24 ತಾಸು ಮದಿರೆಯ ನದಿ ಹರಿಯುತ್ತದೆ. ಮಲ-ಮೂತ್ರ ವಿಸರ್ಜನೆಯೇ ಮಾಡದ ಪಾರದರ್ಶಕ ಹೆಣ್ಣುಮಕ್ಕಳು ಭಗವಂತನಿಗಾಗಿ ಹೋರಾಡಿದ ಈ ವೀರರ ಸೇವೆಗಾಗಿ ಕಾಯುತ್ತಿರುತ್ತಾರೆ ಎಂಬುದನ್ನೆಲ್ಲಾ ಹೇಳಿ ವಿದ್ಯಾವಂತರನ್ನು ನಂಬಿಸಿ ಅವರನ್ನು ಇತರರ ಕೊಲೆಗೆ ಪ್ರೇರೇಪಿಸಿಬಿಡುತ್ತಾರಲ್ಲಾ. ಇದರ ಕುರಿತಂತೆ ಬೌದ್ಧಿಕ ಸಾಮ್ರಾಜ್ಯ ಇನ್ನಾದರೂ ಪ್ರಶ್ನೆ ಕೇಳುವುದು ಬೇಡವೇ? ಇತರರಿಗೆ ತೊಂದರೆ ಕೊಡದೇ ಗೋಮೂತ್ರ ಕುಡಿಯುವವ ಒಂದೆಡೆಯಾದರೆ ಇತರರ ಶವದ ಮೇಲೆ ಸ್ವರ್ಗದ ಯಾತ್ರೆ ಮಾಡುವವ ಮತ್ತೊಂದೆಡೆ. ಸಮಾಜ ಕಂಟಕ ಯಾರು? ಇದನ್ನು ಗುರುತಿಸಲಾಗದೇ ದಾಳಿಯ ನಂತರ ಮೊದಲು ಬೆತ್ತಲಾದವರೇ ಬುದ್ಧಿಜೀವಿಗಳು ಅಥವಾ ಗುರುತಿಸಿಯೂ ಮಾತನಾಡಲಾಗದ ರಣಹೇಡಿಗಳು!


ಪಾಠ ಸಕರ್ಾರಕ್ಕೂ, ತನಿಖಾದಳಗಳಿಗೂ, ನಮ್ಮ ಸೈನ್ಯಕ್ಕೂ ಇದೆ. ಬಾರಾಮುಲ್ಲಾದಲ್ಲಿನ ಭಯೋತ್ಪಾದಕರನ್ನೆಲ್ಲಾ ಸಿಕ್ಕಸಿಕ್ಕಲ್ಲಿ ಕೊಂದು ಬಿಸಾಡಿದ ಹೆಗ್ಗಳಿಕೆ ನಮಗಿತ್ತು ನಿಜ. ಆದರೆ ಕಾಶ್ಮೀರದ ಜನತೆ ಪೂರ್ಣಪ್ರಮಾಣದಲ್ಲಿ ಇನ್ನೂ ಭಾರತೀಯರಾಗೇ ಇಲ್ಲ ಎಂಬುದು ಅಷ್ಟೇ ಸತ್ಯ. ಅವರು ಈಗಲೂ ಪಾಕಿಸ್ತಾನದ ಟಿವಿ ಚಾನೆಲ್ಲುಗಳನ್ನು ನೋಡಿ ಪ್ರಭಾವಿತರಾಗುತ್ತಾರೆ. ಇಲ್ಲಿನ ಪಾಕಿಸ್ತಾನ ಪರವಾದ ಪತ್ರಕರ್ತರ ಮಾತುಗಳನ್ನು ಕೇಳಿ ಪಾಕಿಸ್ತಾನದ ಕುರಿತಂತೆ ಹೆಮ್ಮೆ ಅನುಭವಿಸುತ್ತಾರೆ. ಹೀಗಾಗಿಯೇ ಆ ರಾಷ್ಟ್ರ ದಟ್ಟ ದರಿದ್ರವಾಗಿದ್ದಾಗಲೂ ಈ ಜನ ಅದರ ಪರವಾಗಿ ನಿಲ್ಲುತ್ತಾರೆ. ಅಧಿಕಾರದಲ್ಲಿದ್ದ ನಾಲ್ಕು ವರ್ಷಗಳ ಕಾಲ ಪಿಡಿಪಿಯ ಒತ್ತಡಕ್ಕೆ ಕಟ್ಟುಬಿದ್ದು ಕಾಶ್ಮೀರದಲ್ಲಿ ಸಚರ್್ ಆಪರೇಶನ್ ತಡೆಹಿಡಿದ ಪರಿಣಾಮ ಆಪರೇಶನ್ ಆಲ್ ಔಟ್ ಯಶಸ್ವಿ ಎನಿಸಿತೇನೋ ನಿಜ. ಆದರೆ ಮನೆ-ಮನೆಯೊಳಗೂ ಅಡಗಿದ್ದ ಉಗ್ರರನ್ನು ಹುಡುಕಿ ತೆಗೆಯುವಲ್ಲಿ, ಅವರಿಗಾಗಿ ರೂಪುಗೊಳ್ಳುತ್ತಿದ್ದ ಪೂರಕ ಪರಿಸರವನ್ನು ಧ್ವಂಸಗೊಳಿಸುವಲ್ಲಿ ನಾವು ಸೋತೇಹೋದೆವು. ನಮ್ಮ ಭ್ರಮೆಗಳು ನಮ್ಮೆದುರೇ ಬೆತ್ತಲಾಗಿ ನಿಂತಿದ್ದವು. ಹೀಗಾಗಿಯೇ ಮುಲಾಜಿಲ್ಲದೇ ಕಣಿವೆಯಲ್ಲಿದ್ದ ಪ್ರತ್ಯೇಕತಾವಾದಿಗಳನ್ನು ಆನಂತರ ಬಂಧಿಸಿದ್ದು. ಜಮಾತ್-ಎ-ಇಸ್ಲಾಮಿ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ನ ಮುಖವಾಡ ಎಂದು ಗೊತ್ತಿದ್ದಾಗ್ಯೂ ನಾಲ್ಕು ವರ್ಷಗಳ ಕಾಲ ಅದನ್ನು ಬೆಳೆಯಲು ಬಿಟ್ಟಿದ್ದು ತಪ್ಪೇ ಅಲ್ಲವೇನು? ಹೌದು, ಪುಲ್ವಾಮಾ ದಾಳಿ ನಮ್ಮ ವ್ಯವಸ್ಥೆಯನ್ನೂ ಒಮ್ಮೆ ಬೆತ್ತಲಾಗಿಸಿಬಿಟ್ಟಿತು! ಆದರೆ ನರೇಂದ್ರಮೋದಿ ನಾಲ್ಕು ವರ್ಷಗಳಲ್ಲಿ ಮಾಡಬೇಕಾಗಿದ್ದುದನ್ನು ಮೂರು ವಾರಗಳಲ್ಲಿ ಮಾಡಿ ಮುಗಿಸಿಬಿಟ್ಟರು. ಕಣಿವೆಯೊಳಗೆ ಅಡಗಿದ್ದ ಉಗ್ರರನ್ನು ಹುಡು-ಹುಡುಕಿ ತೆಗೆಯುವ ಚಟುವಟಿಕೆ ಶುರುವಾಗಿದ್ದಲ್ಲದೇ ಕಾಶ್ಮೀರದ ಪುಂಡರ ಎದೆಯೊಳಗೆ ಹೆದರಿಕೆಯ ಕಿಡಿ ಹೊತ್ತಿಸುವಲ್ಲಿ ಸಫಲರಾಗಿಬಿಟ್ಟರು. ಕಲ್ಲೆಸೆಯುತ್ತಿದ್ದ ತರುಣರೆಲ್ಲಾ ಈಗ ಅವಡುಗಚ್ಚಿ ಕುಳಿತಿದ್ದಾರೆ. ಭಯೋತ್ಪಾದಕ ವಲಯದಲ್ಲಿ ಅವ್ಯಕ್ತವಾದ ಹೆದರಿಕೆಯೊಂದು ಆವರಿಸಿಕೊಂಡಿದೆ.


ಈ ದಾಳಿಯ ನಂತರ ಭಾರತ ತೆಗೆದುಕೊಂಡ ನಿರ್ಣಯಗಳು ಜಗತ್ತಿನ ಆಲೋಚನಾ ದಿಕ್ಕನ್ನೇ ಬದಲಾಯಿಸಿಬಿಟ್ಟಿದ್ದವು. ಚುನಾವಣೆಯನ್ನು ಮುಂದಿಟ್ಟುಕೊಂಡು ನರೇಂದ್ರಮೋದಿ ದಾಳಿಗೈಯ್ಯಲು ಸ್ವಲ್ಪ ಹಿಂದು-ಮುಂದು ನೋಡಿದ್ದರೂ ಅವರ ನಾಲ್ಕೂವರೆ ವರ್ಷಗಳ ಸಾಧನೆ ಮಣ್ಣುಪಾಲಾಗಿ ಹೋಗುತ್ತಿತ್ತು. ಸೇನೆಗೆ ಪೂರ್ಣ ಅಧಿಕಾರವನ್ನು ಕೊಟ್ಟು ಅವರು ಮುನ್ನುಗ್ಗಲು ಹೇಳಿದಾಗ ಅದು ಪಾಕಿಸ್ತಾನದ ಒಳನುಸುಳಿ ಮಾಡಬಹುದಾದ ವಾಯುಮಾರ್ಗದ ಆಕ್ರಮಣವೆಂದು ಕನಸು ಮನಸಿನಲ್ಲೂ ಯಾರೂ ಎಣಿಸಿರಲಿಕ್ಕಿಲ್ಲ. ಅದರಲ್ಲೂ ಹೀಗೊಂದು ಆಕ್ರಮಣದ ಸಾಧ್ಯತೆ ಇದೆ ಎಂದು ಪಾಕಿಸ್ತಾನ ಕಾಯುತ್ತಾ ಕುಳಿತಾಗಲೇ ಭಾರತ ದಾಳಿ ಮಾಡಿದ್ದು ಅತ್ಯಾಶ್ಚರ್ಯಕರವೂ ಸಾಹಸಮಯವೂ ಆಗಿತ್ತು. ಅಟಲ್ಜಿ ಇದ್ದಾಗ ಕಾಗರ್ಿಲ್ ಯುದ್ಧವಾಗಿತ್ತು ನೆನಪಿದೆಯಲ್ಲಾ. ಪೋಖ್ರಾನ್ ಅಣುಸ್ಫೋಟ ಪರೀಕ್ಷೆಯ ಮೂಲಕ ಅಮೇರಿಕಾವನ್ನು ಎದುರುಹಾಕಿಕೊಳ್ಳಲು ಹಿಂಜರಿಯದ ಅಟಲ್ಜಿ ಕಾಗರ್ಿಲ್ ಯುದ್ಧದ ಹೊತ್ತಲ್ಲಿ ಲೈನ್ ಆಫ್ ಕಂಟ್ರೋಲ್ ದಾಟದೇ ಯುದ್ಧಕ್ಕೆ ನಿಂತಿದ್ದರು. ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ ಹುಟ್ಟಿಸಿದ ಭ್ರಮೆಯೊಂದು ಅಟಲ್ಜಿಯವರ ಹೆದೆರಿಕೆಗೆ ಕಾರಣವಾಗಿತ್ತು. ಪಾಕಿಸ್ತಾನ ತನ್ನ ಬಳಿಯಿರುವ ಪರಮಾಣು ಶಸ್ತ್ರಾಸ್ತ್ರಗಳನ್ನು ಮನಸೋ ಇಚ್ಛೆ ಬಳಸುವ ಹೆದರಿಕೆಯನ್ನು ನಮಗೆ ಯಾವಾಗಲೂ ತೋರುತ್ತಿತ್ತು. ಹಾಗೇನಾದರೂ ಭಾರತ ಗಡಿ ರೇಖೆ ದಾಟಿ ಒಳನುಸುಳಿಬಿಟ್ಟರೆ ಪಾಕಿಸ್ತಾನದ ದಿಕ್ಕಿನಿಂದ ಪರಮಾಣು ದಾಳಿ ನಿಶ್ಚಿತ ಎಂದು ಜಗತ್ತೂ ನಂಬಿತ್ತು, ನಾವೂ ನಂಬಿದ್ದೆವು! ಭಾರತದ ಈ ವಾಯುದಾಳಿಯ ನಂತರ ಅದೆಲ್ಲವೂ ಭಾರತವನ್ನು ಬೆದರಿಸಿ ಕೂರಿಸುವ ಪಾಕಿಸ್ತಾನದ ಅಸ್ತ್ರಗಳಷ್ಟೇ ಆಗಿದ್ದವೆಂಬುದನ್ನು ನರೇಂದ್ರಮೋದಿ ಬಯಲಿಗೆಳೆದುಬಿಟ್ಟರು. ಗಡಿಯನ್ನು ದಾಟಿ ಒಳಗೆ ನುಗ್ಗಿ ಬಾಲಾಕೋಟ್ನಲ್ಲಿರುವ ಜೈಶ್-ಎ-ಮೊಹಮ್ಮದ್ನ ಪ್ರಮುಖ ತರಬೇತಿ ಕೇಂದ್ರಗಳನ್ನು ಉಡಾಯಿಸಿ ಮರಳಿ ಬಂದರೂ ಪಾಕಿಸ್ತಾನ ಏನೂ ಮಾಡಲಾಗದೇ ಷಂಡನಂತೆ ಕುಳಿತುಬಿಟ್ಟಿತು. ಜನರ ಆಕ್ರೋಶಕ್ಕೆ ಉತ್ತರ ಕೊಡಲೆಂದು ಪೂರ್ಣ ತಯಾರಿ ಮಾಡಿಕೊಂಡು ಎಫ್-16 ಹೊತ್ತುಕೊಂಡು ಬಂದರೆ ಭಾರತದ ಅತ್ಯಂತ ಹಳೆಯ ಮಿಗ್-21 ಅದನ್ನು ಉರುಳಿಸಿ ಗೆಲುವಿನ ನಗೆ ನಕ್ಕುಬಿಟ್ಟಿತು. ಈ ಧಾವಂತದಲ್ಲಿ ವಿಂಗ್ ಕಮ್ಯಾಂಡರ್ ಅಭಿನಂದನ್ ಕೈಗೆ ಸಿಕ್ಕಿರಲಿಲ್ಲವೆಂದರ ಪಾಕಿಸ್ತಾನದ ಕಳಪೆ ಯುದ್ಧಕೌಶಲವೂ ಜಾಗತಿಕ ಮಟ್ಟದಲ್ಲಿ ಚಚರ್ೆಗೆ ಬಂದುಬಿಟ್ಟಿರುತ್ತಿತ್ತು. ಪಾಕಿಸ್ತಾನ ಪೂರ್ಣಪ್ರಮಾಣದಲ್ಲಿ ಬೆತ್ತಲಾಗಿ ನಿಂತುಬಿಟ್ಟಿತು.

ವಾಯುದಾಳಿಯ ನಂತರ ನರೇಂದ್ರಮೋದಿ ಜಾಗತಿಕ ಮಟ್ಟದಲ್ಲಿ ತಮ್ಮ ಪ್ರಭಾವವನ್ನು ವಿಸ್ತರಿಸಿಕೊಂಡು ಪ್ರಮುಖ ರಾಷ್ಟ್ರಗಳ ಮೂಲಕ ಪಾಕಿಸ್ತಾನದ ಮೇಲೆ ಒತ್ತಡ ಹೇರಿ ಅದು ಮಿಸುಕಾಡದಂತೆ ಮಾಡಿದ ಪರಿಯಂತೂ ಅನನ್ಯವಾದ್ದು. ಶಕ್ತರಾಷ್ಟ್ರಗಳು ಮಾತ್ರ ಈ ಪರಿಯ ದಿಗ್ಬಂಧನ ಹೇರಬಹುದೆನ್ನುವುದಾದರೆ ಭಾರತ ಇಂದೂ ಅದೇ ರಾಷ್ಟ್ರಗಳ ಸಾಲಿನಲ್ಲಿ ನಿಂತಿದೆ ಎಂದಾಯ್ತು. ಸ್ವತಃ ಚೀನಾ ಕೂಡ ಪಾಕಿಸ್ತಾನದ ಸಹಕಾರಕ್ಕೆ ಬರದೇ ದೂರವೇ ಉಳಿದು ಮೌನವನ್ನು ಕಾಪಾಡಿಕೊಂಡಿದ್ದು ಪಾಕಿಸ್ತಾನ ತನ್ನ ಆಲೋಚನಾ ದಿಸೆಯನ್ನು ಬದಲಾಯಿಸಬೇಕೆಂಬುದಕ್ಕೆ ಉದಾಹರಣೆಯಾಯ್ತು. ಈ ನಡುವೆಯೇ ಬಂದ ಮತ್ತೊಂದು ಸುದ್ದಿ ಪಾಕಿಸ್ತಾನದ ಪಾಲಿಗೆ ಆಘಾತಕಾರಿಯೇ ಸರಿ. ಅಲ್ಲಿನ ಸೇನಾ ಮುಖ್ಯಸ್ಥ ಬಾಜ್ವಾನ ಗಮನಕ್ಕೂ ತರದಂತೆ ಸೈನಿಕರು ಮತ್ತು ಜೈಶ್-ಎ-ಮೊಹಮ್ಮದ್ನ ಕಮ್ಯಾಂಡರುಗಳು ಈ ಯೋಜನೆಯನ್ನು ರೂಪಿಸಿದ್ದರಂತೆ. ಅಂದರೆ ಭಯೋತ್ಪಾದಕರು ಈಗ ಸೇನೆಯನ್ನೂ ಮೀರಿ ಬೆಳೆದಿದ್ದಾರೆ. ಪಾಕಿಸ್ತಾನ ಬಿತ್ತಿದ ಬೀಜ ಹೆಮ್ಮಾರಿಯಾಗಿ ಅವರನ್ನೇ ತಿನ್ನುತ್ತಿದೆ. ವಿಕಾಸದ ಕನಸನ್ನು ಹೊತ್ತು ಬಂದ ಇಮ್ರಾನ್ ಹಿಂದೆಂದೂ ಇಲ್ಲದಂತಹ ಪ್ರತಿರೋಧವನ್ನು ಈಗ ಎದುರಿಸುತ್ತಿದ್ದಾರೆ. ಒಂದೆಡೆ ಬಲಾಢ್ಯವಾಗಿರುವ ಭಾರತ, ಮುಲಾಜಿಲ್ಲದ ಮೋದಿ ಮತ್ತೊಂದೆಡೆ ಕೈಗೇ ಸಿಗದ ಪಾಕಿಸ್ತಾನದ ಆಥರ್ಿಕತೆ ಮತ್ತು ರಾಷ್ಟ್ರವನ್ನೇ ಮೀರಿ ಬೆಳೆಯುತ್ತಿರುವ ಭಯೋತ್ಪಾದಕರು, ಇವು ಅವನನ್ನು ಖಂಡಿತವಾಗಿಯೂ ತಿನ್ನುತ್ತಿವೆ.


ಇವೆಲ್ಲದರ ನಡುವೆ ಬೆತ್ತಲಾದವರು ಮತ್ತೊಂದಷ್ಟು ಜನರಿದ್ದಾರೆ. ಅವರು ಕಾಂಗ್ರೆಸ್ಸಿಗರು ಮತ್ತು ಅವರ ಬೂಟು ನೆಕ್ಕುವ ಪತ್ರಕರ್ತರು. 1947ರ ಯುದ್ಧದ ಲಾಗಾಯ್ತು ಪಾಕಿಸ್ತಾನ ಒಂದೇ ಒಂದು ಸತ್ಯವನ್ನೂ ಜಗತ್ತಿನ ಮುಂದಿಟ್ಟಿಲ್ಲ. ಅಲ್ಲಿನ ಜನ ಇಂದಿಗೂ 47ರ, 65ರ, 71ರ ಕೊನೆಗೆ 99ರ ಕಾಗರ್ಿಲ್ ಯುದ್ಧವನ್ನೂ ತಮ್ಮದೇ ಜಯವೆಂದು ಬಣ್ಣಿಸುತ್ತಾರೆ. ಭಾರತ ಅಮೇರಿಕಾದ ಬಳಿ ಹೋಗಿ ಗೋಗರೆದದ್ದಕ್ಕೆ ಗಡಿಯನ್ನು ಬಿಟ್ಟು ಬರಬೇಕಾಯ್ತೆಂದು ಬಡಾಯಿಕೊಚ್ಚಿಕೊಳ್ಳುತ್ತಾರೆ. ಈಗಲೂ ಹಾಗೆಯೇ ವಾಯುದಾಳಿಗೆ ಮೋದಿ ಅನುಮತಿ ಕೊಟ್ಟು ಪಾಕಿಸ್ತಾನದ ಅಹಂಕಾರವನ್ನು ನುಚ್ಚುನೂರು ಮಾಡದಿದ್ದರೆ ಇಲ್ಲಿ ಕಾಂಗ್ರೆಸ್ಸಿಗರಿಗೆ ಆದಷ್ಟೇ ಸಂಭ್ರಮ ಅಲ್ಲಿ ಪಾಕಿಸ್ತಾನಿಯರಿಗೂ ಆಗಿರುತ್ತಿತ್ತು. ಆದರೆ ಈ ನಡುವೆ ಕಾಂಗ್ರೆಸ್ಸು ಮತ್ತು ಅದರ ಮಿತ್ರ ಪಕ್ಷಗಳು ದೇಶದ ಸೇನೆಯನ್ನು ಅವಮಾನಿಸಿದ್ದು ಮಾತ್ರ ಈ ಎಲ್ಲಾ ಪಕ್ಷಗಳಿಗೂ ಮರಣ ಶಾಸನ ಬರೆದಂತೆಯೇ ಸರಿ. ಜಾಗತಿಕ ಮಟ್ಟದಲ್ಲಿ ಭಾರತ ಸೇನೆಯ ಕುರಿತಂತೆ ಗೌರವ ಅಪಾರವಾಗಿದೆ. ವಾಯುಸೇನೆಯ ಮುಖ್ಯಸ್ಥರು ತಾವು ದಾಳಿ ಮಾಡಿದ್ದೆವೆಂದು ಹೇಳಿದರೆ ಅದು ಅಕ್ಷರಶಃ ದಾಳಿಯೇ ಆಗಿರುತ್ತದೆ. ಆದರೆ ರಾಹುಲ್, ಮಮತಾ, ಕೇಜ್ರಿಯಂಥವರು ಸೇನೆಯಿಂದ ಸಾಕ್ಷಿ ಕೇಳಿ ಭಾರತದ ಜನರಿಂದ ಛೀ ಥೂ ಎಂದು ಉಗಿಸಿಕೊಂಡಿದ್ದಾರೆ. ಇವರು ಪ್ರತೀ ಬಾರಿ ಸಾಕ್ಷಿ ಕೇಳಿದಾಗಲೂ ಅದಕ್ಕೆ ಉತ್ತರ ಕೊಟ್ಟಿದ್ದು ಪಾಕಿಸ್ತಾನವೇ. ವಾಯುದಾಳಿಯನ್ನೇ ಸುಳ್ಳೆಂದು ಆರಂಭದಲ್ಲಿ ಜರಿದ ಪ್ರತಿಪಕ್ಷಗಳಿಗೆ ಅದು ನಡೆದದ್ದು ನಿಜವೆಂದು ಕೇಳುವ ಮುನ್ನವೇ ಒಪ್ಪಿಕೊಂಡಿದ್ದು ಪಾಕಿಸ್ತಾನವೇ. ಬಾಲಾಕೋಟ್ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವಂತಹ ಪ್ರದೇಶವೆಂದು ಸುಳ್ಳನ್ನು ಸೃಷ್ಟಿಸಲು ಕಾಂಗ್ರೆಸ್ಸು ಪ್ರಯತ್ನ ಪಡುತ್ತಿದ್ದರೆ ಸ್ವತಃ ಪಾಕಿಸ್ತಾನ ಭಾರತ ತನ್ನ ಗಡಿಯೊಳಕ್ಕೆ ಸಾಕಷ್ಟು ದೂರ ಬಂದಿತ್ತೆಂದು ತಾನೇ ಹೇಳಿಕೆಕೊಟ್ಟು ಕಾಂಗ್ರೆಸ್ಸನ್ನು ಪೇಚಿಗೆ ಸಿಲುಕಿಸಿತು! ಇನ್ನೇನೂ ಸಿಗುವುದಿಲ್ಲವೆಂದು ಅರಿವಾದಾಗ ಸತ್ತವರ ಚಿತ್ರಗಳನ್ನು ತೋರಿಸುವಂತೆ ಪ್ರತಿಪಕ್ಷಗಳು ಸವಾಲೆಸೆದವು. ಈ ದಾಳಿಯಲ್ಲಾದ ಸಾವನ್ನು ಮುಚ್ಚಿಡಲು ಆರಂಭದಿಂದಲೂ ಪ್ರಯತ್ನಸುತ್ತಿದ್ದ ಪಾಕಿಸ್ತಾನ ಮೂರು ವಾರಗಳ ನಂತರವೂ ಅಂತರರಾಷ್ಟ್ರೀಯ ಮಟ್ಟದ ಯಾವ ಪತ್ರಕರ್ತರನ್ನೂ ಘಟನಾ ಸ್ಥಳಕ್ಕೆ ಬಿಡದೇ ತಡೆಯೊಡ್ಡಿದ್ದು ಆಗಿರಬಹುದಾದ ಅಪಾರ ಪ್ರಮಾಣದ ಹಾನಿಯ ಸಾಕ್ಷಿಯೇ ಆಗಿತ್ತು. ಕಾಂಗ್ರೆಸ್ಸಿನೊಂದಿಗೆ ಎಲ್ಲ ಪ್ರತಿಪಕ್ಷಗಳೂ ಜನರ ಮುಂದೆ ಬೆತ್ತಲಾಗಲೇಬೇಕಾಯ್ತು.

ಎಲ್ಲಕ್ಕಿಂತಲೂ ಬಲುಮುಖ್ಯ ಸಂಗತಿ ಎಂದರೆ ಪುಲ್ವಾಮಾ ದಾಳಿಯನ್ನು ಖಂಡಿಸಿ ಅನೇಕ ಮುಸಲ್ಮಾನರು ಬೀದಿಗೆ ಬಂದು ಪಾಕಿಸ್ತಾನದ ವಿರುದ್ಧ ಧಿಕ್ಕಾರ ಕೂಗಿ ಈ ದೇಶದಲ್ಲಿ ಭಾರತ ಭಕ್ತ ಮುಸಲ್ಮಾನರೂ ಇದ್ದಾರೆ ಎಂಬುದನ್ನು ಸಾಬೀತುಪಡಿಸಿದರು. ಇವರಿಗಿಂತಲೂ ಕೊಳಕು ಮತ್ತು ದೇಶದ್ರೋಹಿಗಳು ಪ್ರತಿಪಕ್ಷದ ಜನ, ಬುದ್ಧಿಜೀವಿಗಳು, ಕೆಲವು ಪತ್ರಕರ್ತರು ಎಂಬುದು ಅರಿವಿಗೆ ಬಂದ ನಂತರ ನಮ್ಮಲ್ಲನೇಕರ ಆಲೋಚನೆಗಳು ಬೆತ್ತಲಾಗಿಬಿಟ್ಟವು.


ಆರಂಭದಲ್ಲೇ ಹೇಳಿದೆನಲ್ಲ ಪುಲ್ವಾಮಾ ಅನೇಕರನ್ನು ಬಟಾ ಬಯಲಾಗಿಸಿದೆ. ಮೋದಿಯವರ ಮುಂದಿನ ಐದು ವರ್ಷ ಈ ಅನುಭವದ ಆಧಾರದ ಮೇಲೆಯೇ ರೂಪುಗೊಳ್ಳುವುದರಿಂದ ಹೊಸ ನಾಡು ಸ್ಪಷ್ಟವಾಗಿ ಮೈದಳೆಯಲಿದೆ. ಆ ನಾಡಿನ ಕಲ್ಪನೆಯೇ ರೋಮಾಂಚನವೆನಿಸುತ್ತಿದೆ. 2019 ಮೋದಿಯ ಪಾಲಿಗೆ ಸಹಜ ಹೋರಾಟವಾದರೆ ಈ ದೇಶದ್ರೋಹಿಗಳ ಪಾಲಿಗೆ ಜೀವನ್ಮರಣದ ಹೋರಾಟ. ಅವರು ಗೆದ್ದರೆ ದೇಶ ಸೋಲುತ್ತದೆ, ಮೋದಿ ಗೆದ್ದರೆ ಭಾರತ ಬದುಕುತ್ತದೆ!

– ಚಕ್ರವರ್ತಿ ಸೂಲಿಬೆಲೆ

1 Comment

1 Comment

  1. ಶಶಿಕಲಾ. ಎಸ್.

    March 11, 2019 at 3:16 am

    ದೇಶವೇ ಗೆಲ್ಲ ಬೇಕು ಗೆಲ್ಲುತ್ತೆ. ಆದರೆ ಮನೆಯೊಳಗಿರುವ ದುಷ್ಟ ಶಕ್ತಿಗಳ ನಿಗ್ರಹ ಹೇಗೆ? ಚುನಾವಣೆ ಘೋಷಣೆ ಮೊದಲೆ ಈ ಪರಿ ಹಾರಾಟ. ಈಗ ಘೋಷಣೆ ಆದ ಮೇಲೆ ಏನೇನು ಸುಳ್ಳು ಪುಕಾರುಗಳನ್ನು ಹಬ್ಬಿಸಿ ಜನರ ದಿಕ್ಕು ತಪ್ಪಿಸ ಬಹುದು.ಆದರೆ ಅಸಹಾಯಕ ನಿರಪರಾಧಿಗಳು ಯಾವುದೇ ಕುತಂತ್ರಗಳಿಗೆ ಬಲಿಯಾಗದಂತೆ ಎಚ್ಚರ ವಹಿಸ ಬೇಕಿದೆ.

Leave a Reply

Your email address will not be published. Required fields are marked *

Most Popular

To Top