National

ಪುಲ್ವಾಮಾ ದಾಳಿಗೆ ಕಾರಣರಾದ ಪ್ರಮುಖ ಜೈಶ್ ಉಗ್ರರನ್ನು ಯಮಪುರಿಗಟ್ಟಿದ ಭಾರತೀಯ ಸೇನೆ!

ಭಾರತೀಯ ಸೇನೆ ಪುಲ್ವಾಮಾ ದಾಳಿಗೆ ಕಾರಣರಾಗಿದ್ದ ಭಯೋತ್ಪಾದಕ ಮಸೂದ್ ಅಜರ್‌ನ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್‌ನ ಅಷ್ಟೂ ಭಯೋತ್ಪಾದಕರನ್ನು ಬೇರೆ ಬೇರೆ ಆಪರೇಶನ್‌ಗಳಲ್ಲಿ ದಾಳಿ ನಡೆದ 45‌ ದಿನಗಳಲ್ಲಿ ಕೊಂದು ಹಾಕಿದೆ.
ಈ ದಾಳಿಗೆ ಸಂಬಂಧಪಟ್ಟಿದ್ದ ಉಗ್ರರನ್ನು ಬೇರೆ ಬೇರೆ ದಿನದಂದು ವಿವಿಧ ಆಪರೇಶನ್‌ಗಳಲ್ಲಿ ಕೊಲ್ಲಲಾಗಿದೆ. 2019 ರಲ್ಲಿ ಭಾರತೀಯ ಸೇನೆ ಒಟ್ಟು 66 ಉಗ್ರರನ್ನು ಕೊಂದು ಬಿಸಾಡಿದೆ. ಅದರಲ್ಲಿ 27 ಉಗ್ರರು ಜೈಶ್-ಎ-ಮೊಹಮ್ಮದ್‌ನೊಂದಿಗೇ ಗುರುತಿಸಿಕೊಂಡಿದ್ದವರು. ಪುಲ್ವಾಮಾ ದಾಳಿಯ ನಂತರ ಇವರಲ್ಲಿ 19 ಉಗ್ರರನ್ನು ಸದೆಬಡೆಯಲಾಗಿದೆ. ಸತ್ತವರಲ್ಲಿ ಕಮ್ರಾನ್, ಮುಷಶಿರ್ ಅಹ್ಮದ್ ಖಾನ್ ಮತ್ತು ಸಜ್ಜದ್ ಭಟ್ ಪ್ರಮುಖರು.
ದಾಳಿಯಲ್ಲಿ ನೇರವಾದ ಕೈವಾಡ ಹೊಂದಿದ್ದ ನಾಲ್ವರನ್ನು ಕೊಲ್ಲಲಾಗಿದ್ದು, ನಾಲ್ವರನ್ನು ಬಂಧಿಸಲಾಗಿತ್ತು.‌ ಕಾಶ್ಮೀರದಲ್ಲಿ ಸುಮಾರು 40 ಮಂದಿ ಜೈಶ್ ಬೆಂಬಲಿಗರನ್ನು ವಿಚಾರಣೆ ನಡೆಸಿದ ನಂತರ ಈ ದಾಳಿಯ ಈ ಮುಖ್ಯ ಆರೋಪಿಗಳ ಸುಳಿವು ಸಿಕ್ಕಿತ್ತು.
ಇದರೊಟ್ಟಿಗೆ ಎನ್‌ಐಎ ಜೈಶ್-ಎ-ಮೊಹಮ್ಮದ್ ‌ನ ಉಗ್ರರಾದ ನಿಸಾರ್ ಅಹ್ಮದ್ ತಂತ್ರಾಯ್ ಮತ್ತು ಸಜ್ಜದ್ ಎಂಬ ಇಬ್ಬರು ಉಗ್ರರನ್ನು ಬಂಧಿಸಿ ವಶಕ್ಕೆ ತೆಗೆದುಕೊಂಡಿದೆ. ಪಾಕಿಸ್ತಾನಿ ಉಗ್ರನೊಬ್ಬನಿಂದ ಐಇಡಿಯನ್ನು  ಸ್ವೀಕರಿಸಿ ಅದನ್ನು ಆತ್ಮಹತ್ಯಾ ದಾಳಿ ನಡೆಸಿದ ಉಗ್ರ ಆದಿಲ್ ಅಹ್ಮದ್ ದಾರ್‌ಗೆ ನೀಡಿದ್ದು ಇವರೇ ಎಂದು ಶಂಕಿಸಲಾಗಿದೆ.
Click to comment

Leave a Reply

Your email address will not be published. Required fields are marked *

Most Popular

To Top