National

ಪಿಎಫ್ಐ ಉಗ್ರ ಸಂಘಟನೆಯನ್ನು ನಿಷೇಧಿಸಿದ ಜಾರ್ಖಂಡ್ ಸರ್ಕಾರ!!

ಜಾರ್ಖಂಡ್ ಸರ್ಕಾರ ನಿನ್ನೆ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಎಂಬ ಸಂಘಟನೆಯನ್ನು ನಿಷೇಧಿಸಿದೆ. ಇಸ್ಲಾಮಿಕ್ ಸ್ಟೇಟ್ ಜೊತೆಗೆ ಪಿ.ಎಫ್.ಐ ಸಂಘಟನೆಯು ಸಂಬಂಧ ಹೊಂದಿದೆ ಎಂದು ಆರೋಪಿಸಲಾಗಿದೆ. ಇದು ಜಾರ್ಖಂಡ್ ನಲ್ಲಿ ನಿಷೇಧಕ್ಕೊಳಪಡುತ್ತಿರುವ ಎರಡನೆಯ ಸಂಘಟನೆ!

ಕ್ರಿಮಿನಲ್ ಲಾ ಅಮೆಂಡ್ಮೆಂಟ್ ಕಾಯ್ದೆಯ ಸೆಕ್ಷನ್ 16 ರ ಅಡಿಯಲ್ಲಿ ಈ ಸಂಘಟನೆಯನ್ನು ನಿಷೇಧಿಸಲಾಗಿದೆ.

ಮುಖ್ಯಮಂತ್ರಿ ರಘುಬರ್ ದಾಸ್ ಅವರು ನಡೆಸುತ್ತಿದ್ದ ರಾಜ್ಯ ಸರ್ಕಾರ ಫೆಬ್ರವರಿ 20, 2018 ರಂದು ಈ ಸಂಘಟನೆಯನ್ನೂ ಈ ಹಿಂದೆಯೂ ನಿಷೇಧಿಸಿತ್ತು. ಆದರೆ ಆಗಸ್ಟ್ 2018 ರಲ್ಲಿ ಜಾರ್ಖಂಡ್ ನ ಹೈಕೋರ್ಟ್ ಈ ನಿಷೇಧವನ್ನು ತೆಗೆದು ಹಾಕಿತ್ತು.

ಸರ್ಕಾರ ‘ರಾಜ್ಯ ಸರ್ಕಾರ ಜಾರ್ಖಂಡ್ ನಲ್ಲಿ ಸಕ್ರಿಯವಾಗಿರುವ ಪಾಪುಲರ್ ಫ್ರಂಟ್ ಆಫ್ ಇಂಡಿಯಾವನ್ನು ನಿಷೇಧಿಸಿದೆ. ಗೃಹ ಕಾರ್ಯಾಲಯ ನಿಷೇಧವನ್ನು ಹೇರಿದೆ’ ಎಂದು ವರದಿಯನ್ನು ಪ್ರಕಟಪಡಿಸಿದೆ.

ಪಿಎಫ್ಐ ಪಕುರ್ ಜಿಲ್ಲೆಯಲ್ಲಿ ಸಕ್ರಿಯವಾಗಿದೆ ಮತ್ತು ಈ ಸಂಘಟನೆ ಕೇರಳದಲ್ಲಿ ಸ್ಥಾಪಿತವಾಗಿದ್ದು. ಕೆಲವು ಕಾರ್ಯಕರ್ತರು ಐಸಿಸ್ ಉಗ್ರ ಸಂಘಟನೆಯನ್ನೂ ಸೇರಿದ್ದಾರೆಂದು ಗೃಹ ಸಚಿವಾಲಯದ ವರದಿಯಲ್ಲಿ ಹೇಳಿಕೆ ನೀಡಲಾಗಿದೆ.

Click to comment

Leave a Reply

Your email address will not be published. Required fields are marked *

Most Popular

To Top