National

‘ಪಾಕಿಸ್ತಾನ ಸ್ವರ್ಗ’ ಎಂದವರು ಎಲ್ಲಿದ್ದಾರೆ ಈಗ?!

ಪುಲ್ವಾಮಾ ದಾಳಿಯನ್ನು ಹೆಚ್ಚು-ಕಡಿಮೆ ಮರೆತೇ ಬಿಟ್ಟಿದ್ದೇವಲ್ಲವೇ. ಚುನಾವಣೆಯ ಕಾಲಕ್ಕೆ ಅದರ ಬಗ್ಗೆ ಸಾಕಷ್ಟು ಚಚರ್ೆಗಳಾಗಿವೆ. ಆನಂತರ ಭಾರತೀಯ ವಾಯುಪಡೆ ನಡೆಸಿದ ಕರಾರುವಾಕ್ಕು ದಾಳಿಗೆ ಪಾಕಿಸ್ತಾನದ ಆಂತರ್ಯ ಅಲುಗಾಡಿಹೋಗಿತ್ತು. ಭಾರತದಲ್ಲಿ ಅದು ಚುನಾವಣೆಯ ಹೊತ್ತಾಗಿದ್ದುದರಿಂದ ಇಡಿಯ ಘಟನೆ ಮಹತ್ವದ ತಿರುವು ಪಡೆದುಕೊಂಡಿದೆ. ಜನಸಾಮಾನ್ಯರು ಪಾಕಿಸ್ತಾನದ ಮೇಲಿನ ಈ ದಾಳಿಯನ್ನು ಹಬ್ಬದಂತೆ ಸಂಭ್ರಮಿಸಿದರೆ ಪ್ರತಿಪಕ್ಷಗಳು ಹೀಗೊಂದು ದಾಳಿಯೇ ನಡೆದಿಲ್ಲವೆಂದು ಸಾಬೀತುಪಡಿಸಲು ಕುಳಿತಿದ್ದರು. ಎಲ್ಲಕ್ಕಿಂತಲೂ ಅಸಹ್ಯಕರ ಸಂಗತಿಯೆಂದರೆ ಕೆಲವು ಪುಣ್ಯಾತ್ಮರು ಭಾರತೀಯ ವಾಯುಸೇನೆಯ ಅಧಿಕೃತ ಮಾಹಿತಿಗಳನ್ನು ನಂಬದೇ ಪಾಕಿಸ್ತಾನ ಹೇಳಿದ ಸುಳ್ಳುಗಳನ್ನು ಇಲ್ಲಿ ಪತ್ರಿಕಾಗೋಷ್ಠಿ ಕರೆದು ಪುನರುಚ್ಚರಿಸುತ್ತಿದ್ದರು.


ಆಗೆಲ್ಲಾ ಪಾಕಿಸ್ತಾನ ಹೇಳುತ್ತಿತ್ತಲ್ಲ, ‘ಭಾರತದ ದಾಳಿಯಿಂದ ನಷ್ಟವೇ ಆಗಿಲ್ಲ. ಒಂದು ಮರ ಸುಟ್ಟು ಹೋಗಿರಬಹುದಷ್ಟೇ’ ಎಂದು. ಹಾಗೆ ಹೇಳುವ ಮೂಲಕ ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ ಯಾವ ಪರಿ ಕುಸಿದುಹೋಗಿತ್ತೆಂದರೆ ದಾಳಿಗೆ ಸಾವು-ನೋವುಗಳೆಷ್ಟಾಗಿವೆಯೋ ಅದು ಪಕ್ಕಕ್ಕಿಡಿ, ಪಾಕಿಸ್ತಾನದ ವಾಯುರಕ್ಷಣಾ ವ್ಯವಸ್ಥೆಯನ್ನು ಭೇದಿಸಿ 100 ಕಿ.ಮೀನಷ್ಟು ಒಳನುಗ್ಗಿ ಭಾರತೀಯ ವಿಮಾನಗಳು ದಾಳಿಗೈದು ಕೇಕೆಹಾಕುತ್ತಾ ಮರಳಿದವಲ್ಲಾ, ಅದು ಪಾಕಿಸ್ತಾನದ ಪಾಲಿಗೆ ಮುಖಭಂಗವೇ ಆಗಿತ್ತು. ಆಗ ಇಲ್ಲಿ ಚಚರ್ೆ ನಡೆಯುತ್ತಿದ್ದುದು ಸತ್ತವರೆಷ್ಟು ಎಂಬುದರ ಬಗ್ಗೆ ಮಾತ್ರ. ತನ್ನ ಬಳಿಯಿದ್ದ ಮೊಬೈಲ್ ಹೀಟ್ಮ್ಯಾಪ್ಗಳ ಆಧಾರದಲ್ಲಿ ಮತ್ತು ತಾನು ಬಳಸಿದ ಬಾಂಬಿನ ವಿನ್ಯಾಸದ ಆಧಾರದ ಮೇಲೆ ವಾಯುಸೇನೆ ಸಂಖ್ಯೆಯನ್ನು 200ಕ್ಕೂ ಹೆಚ್ಚು ಎಂದಿತು. ಆ ಹೊತ್ತಿನಲ್ಲಿ ಭಾರತದ ಜೊತೆಗೆ ನಿಲ್ಲಬೇಕಿದ್ದವರೆಲ್ಲಾ ಈ ಸಂಖ್ಯೆಯನ್ನು ಆಡಿಕೊಂಡರು, ಪ್ರಧಾನಮಂತ್ರಿಯನ್ನು ಆಡಿಕೊಂಡರು, ಕೊನೆಗೆ ವಾಯುಸೇನೆಯ ಮುಖ್ಯಸ್ಥರ ಮಾತುಗಳನ್ನೂ ಕೂಡ ನಂಬದಿರುವಂತೆ ಜಗತ್ತಿಗೆ ಕರೆಕೊಟ್ಟರು!


ಇವೆಲ್ಲಾ ಕಳೆದು ನಾಲ್ಕೈದು ತಿಂಗಳುಗಳೇ ಆದವು. ಹೊಸಕಥೆ ಏನು ಗೊತ್ತೇ? ವಾಯುದಾಳಿಯಾದ ಮರುದಿನದಿಂದ ಪಾಕಿಸ್ತಾನ ತನ್ನ ಮೇಲೆ ವಿಮಾನಗಳಿಗೆ ಹಾರಾಡುವ ಅನುಮತಿ ನಿಷೇಧಿಸಿತ್ತಲ್ಲ, ಅದನ್ನು ಇಂದಿಗೂ ತೆರೆದಿಲ್ಲ. ಅದು ನೀಡುವ ಕಾರಣವೇನು ಗೊತ್ತೇ? ‘ಭಾರತೀಯ ವಾಯುಸೇನೆ ಮತ್ತೊಮ್ಮೆ ಗಡಿದಾಟುವುದಿಲ್ಲವೆಂಬ ಭರವಸೆ ಕೊಟ್ಟರೆ ಮಾತ್ರ ಏರ್ಸ್ಪೇಸ್ ತೆರೆಯಲಾಗುವುದು’ ಎಂದು. ಅಷ್ಟೇ ಅಲ್ಲ. ತನ್ನ ರೆಡಾರ್ಗಳ ವ್ಯವಸ್ಥೆಯನ್ನು ಆಧುನಿಕಗೊಳಿಸಲು ಪಾಕಿಸ್ತಾನ ಈಗ ಹೆಣಗಾಡುತ್ತಿದೆ. ಭಾರತದ ಈ ಗಡಿಯಗುಂಟ ವಿಶೇಷ ತುಕಡಿಗಳನ್ನು ನಿಲ್ಲಿಸಿ ವಾಯುದಾಳಿಯ ಪ್ರಕ್ರಿಯೆಯ ಕುರಿತಂತೆ ಎಚ್ಚರಿಕೆಯಿಂದಿರುವಂತೆ ಹೇಳಲಾಗಿದೆ. ಎಲ್ಲಕ್ಕೂ ಮಿಗಿಲಾಗಿ ಅತ್ಯಾಧುನಿಕ ವಿಮಾನಗಳನ್ನು ಸೇನೆಗೆ ಸೇರ್ಪಡೆಗೊಳಿಸಿಕೊಳ್ಳಲು ಹಣತೆಗೆದಿರಿಸಲು ಆಲೋಚಿಸುತ್ತಿದೆ.

ನನ್ನ ಪ್ರಶ್ನೆ ಒಂದೇ. ಭಾರತದ ವಿಮಾನದಾಳಿಯನ್ನು ಅಲ್ಲಗಳೆದ, ನಗಣ್ಯವೆಂದ ಪಾಕಿಸ್ತಾನ ಈಗ ಇಷ್ಟು ಹೆದರುತ್ತಿರುವುದಾದರೂ ಏಕೆ? ಅಂತರ್ರಾಷ್ಟ್ರೀಯ ವಿಮಾನಗಳಿಗೆ ಏರ್ಸ್ಪೇಸ್ ಅನ್ನು ತಡೆಹಿಡಿದಿರುವುದರಿಂದ ನೂರಾರು ಕೋಟಿ ರೂಪಾಯಿ ನಷ್ಟ ಅನುಭವಿಸಿದರೂ ಪಾಕಿಸ್ತಾನ ಸುಮ್ಮನಿರುವುದು ಹೇಗೆ? ಅಂದರೆ ಅಂದು ನಡೆದ ಆ ವಾಯುದಾಳಿಯಲ್ಲಿ ಪಾಕಿಸ್ತಾನಕ್ಕೆ ಬಲವಾದ ಆಘಾತ ಆಗಿರಲೇಬೇಕು. ಯಾರ ಮುಂದೆಯೂ ಹೇಳಿಕೊಳ್ಳಲಾಗದ, ಯಾರೊಂದಿಗೂ ಹಂಚಿಕೊಳ್ಳಲಾಗದ ಅಂತವರ್ೇದನೆ ಅದು. ಆದರೆ ಬೇಸರ ಅವರ ಮೇಲಲ್ಲ. ಭಾರತದಲ್ಲಿದ್ದು, ಅಧಿಕಾರವನ್ನನುಭವಿಸಿ, ದುಡ್ಡು ಮಾಡಿಕೊಂಡು, ತಮಗೆ ತಮ್ಮ ಮುಂದಿನ ಪೀಳಿಗೆಗಳಿಗೆ ಬೇಕಾದಷ್ಟು ಸವಲತ್ತುಗಳನ್ನು ವ್ಯವಸ್ಥಿತಗೊಳಿಸಿಕೊಂಡು ಮೆರೆಯುತ್ತಿರುವ ಅಯೋಗ್ಯರು ಭಾರತವನ್ನು, ಭಾರತೀಯ ಸೇನೆಯನ್ನು ಸಮಯ ಬಂದಾಗ ಹರಾಜು ಹಾಕಲು ನಿಂತುಬಿಡುತ್ತಾರಲ್ಲಾ ಏನೆಂದು ಹೇಳಬೇಕು!


ಪಾಕಿಸ್ತಾನದ ಕುರಿತಂತೆ ತಲೆಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ. ನಾವು ಪಾಕಿಸ್ತಾನಕ್ಕಿಂತಲೂ ಹಿಂದುಳಿದಿದ್ದೇವೆ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಪಾಕಿಸ್ತಾನದ ಪ್ರಮೋಟರ್ಗಳು ಇತ್ತೀಚೆಗೆ ತಮ್ಮ ವರಸೆ ಬದಲಾಯಿಸಿದ್ದಾರೆ. ಭಾರತ ಎಲ್ಲ ರಂಗಗಳಲ್ಲೂ ಪಾಕಿಸ್ತಾನಕ್ಕಿಂತಲೂ ಮುಂದೆ ಧಾವಿಸುತ್ತಿರುವುದನ್ನು ಅಂಕಿ-ಅಂಶಗಳಿಂದ ಸಾಬೀತುಪಡಿಸಿದೊಡನೆ ಅವರು ನಮ್ಮ ತುಲನೆ ಪಾಕಿಸ್ತಾನದೊಂದಿಗಲ್ಲ, ಚೀನಾದೊಂದಿಗೆ ಆಗಬೇಕು ಎಂಬ ವರಾತ ಮಂಡಿಸುತ್ತಿದ್ದಾರೆ. ಅದೂ ಸರಿಯೇ ಬಿಡಿ. ನಾವೀಗ ಬಡರಾಷ್ಟ್ರಗಳ ಪಟ್ಟಿಯಲ್ಲಿಲ್ಲ. ಕಳೆದ ಐದು ವರ್ಷಗಳಲ್ಲಿ 27 ಕೋಟಿಗೂ ಹೆಚ್ಚು ಜನ ಬಡತನರೇಖೆಗಿಂತ ಮೇಲೆ ಬಂದಿದ್ದಾರೆಂದು ವಿಶ್ವಬ್ಯಾಂಕಿನ ಅಧಿಕೃತ ಅಂಕಿ-ಅಂಶಗಳೇ ಹೇಳುತ್ತಿವೆ. ಅತ್ತ ಪಾಕಿಸ್ತಾನ ಬೆಂದುಹೋಗುತ್ತಿದೆ. ದಿನೇ ದಿನೇ ಬಡತನ ರೇಖೆಗಿಂತ ಕೆಳಗಿಳಿಯುವವರ ಸಂಖ್ಯೆ ಅಲ್ಲಿ ವೃದ್ಧಿಸುತ್ತಲೇ ಇದೆ. ಐಎಮ್ಎಫ್ ಸಾಲಕೊಡುವ ನೆಪದಲ್ಲಿ ಪಾಕಿಸ್ತಾನದ ಮೇಲೆ ಹಾಕಿರುವ ಒತ್ತಡ ಎಂಥದ್ದೆಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ಖಾನ್ ಅಮೇರಿಕಾದ ಭೇಟಿಯ ಕುರಿತಂತೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾ ಡೊನಾಲ್ಡ್ ಟ್ರಂಪ್ರನ್ನು ಭೇಟಿಮಾಡುವ ಕುರಿತಂತೆ ಕೊಚ್ಚಿಕೊಳ್ಳುತ್ತಿರುವಾಗಲೇ ಅಮೇರಿಕಾದ ಅಧಿಕೃತ ಪ್ರಕಟಣೆ ಇದ್ಯಾವುದೂ ತನಗೆ ಗೊತ್ತೇ ಇಲ್ಲವೆಂದು ಹೇಳಿ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಇರುಸುಮುರುಸಾಗುವಂತೆ ಮಾಡಿತ್ತು. ಇಡಿಯ ಪಾಕಿಸ್ತಾನ ಹಣ ಉಳಿಸುವ ಒತ್ತಡಕ್ಕೆ ಹೇಗೆ ಸಿಲುಕಿದೆಯೆಂದರೆ ಅಮೇರಿಕಾಕ್ಕೆ ಭೇಟಿಕೊಡಲಿರುವ ಇಮ್ರಾನ್ ಖಾಸಗಿ ಹೊಟೆಲ್ನಲ್ಲಿರುವುದಿಲ್ಲವೆಂದೂ ಪಾಕಿಸ್ತಾನದ ರಾಯಭಾರಿ ಕಛೇರಿಯಲ್ಲಿ ತಂಗುವೆನೆಂದು ಹೇಳಿಕೆ ಕೊಟ್ಟಿದ್ದಾರೆ. ಪಾಕಿಸ್ತಾನದ ದೃಷ್ಟಿಯಿಂದ ಇದು ಸರಿ ಎನಿಸಬಹುದಾದರೂ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಸ್ಥಿತಿಗತಿ ಮತ್ತೂ ಕೆಳಗೆ ಹೋಗಲಿವೆ. ರಕ್ಷಣೆಯ ದೃಷ್ಟಿಯಿಂದ ಈ ವ್ಯವಸ್ಥೆಯನ್ನು ಒಪ್ಪಲು ಸಾಧ್ಯವಿಲ್ಲವೆಂದು ಅಮೇರಿಕಾ ನಿರಾಕರಿಸಿದ ಮೇಲಂತೂ ಪಾಕಿಸ್ತಾನ ಹಣ ಉಳಿಸುವುದು ದೂರ ಇದ್ದ ಮಾನವನ್ನೂ ಹರಾಜು ಹಾಕಿಕೊಂಡಂತಾಗಿದೆ. ನರೇಂದ್ರಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ಪಾಕಿಸ್ತಾನದ ದೆಸೆ ಹೀಗೇ ಆಗಿದೆ. ಅತ್ತ ಆ ರಾಷ್ಟ್ರದ ಪರಿಸ್ಥಿತಿ ಹಾಗಾದರೆ ಇತ್ತ ಅದನ್ನೇ ನಂಬಿಕೊಂಡು ಬದುಕಿದವರ ಸ್ಥಿತಿ ಮತ್ತೂ ಕೆಟ್ಟಿದೆ. ಕಾಶ್ಮೀರದಲ್ಲಿ ಪಾಕಿಸ್ತಾನ ಬೆಂಬಲಿತ ಜನತೆಗೆ ಮತ್ತು ಕೆಲವು ಎನ್ಜಿಒಗಳಿಗೆ ಅಲ್ಲಿಂದ ದುಡ್ಡು ಬರದೇ ಕುದಿ ಹೆಚ್ಚುತ್ತಿದೆ. ಇಂಥವರಲ್ಲೇ ಕೆಲವರು ಕೆಲವಾರು ದಿನಗಳ ಹಿಂದೆ ಪಾಕಿಸ್ತಾನದ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದರು. ಗಂಜಿಗಿರಾಕಿಗಳಿಗೆ ಇದು ನುಂಗಲಾರದ ತುತ್ತು. ಅಚ್ಛೇದಿನ್ ಎನ್ನುವುದು ಒಂದೇ ದಿನಕ್ಕೆ ಕಂಡುಬಿಡುವಂಥದ್ದಲ್ಲ. ಅದೊಂದು ಪ್ರಕ್ರಿಯೆ. ಭಾರತದಲ್ಲಿ ಆ ಪ್ರಕ್ರಿಯೆ ಶುರುವಾಗಿ ಐದು ವರ್ಷಗಳು ಕಳೆದಿವೆ!

-ಚಕ್ರವರ್ತಿ ಸೂಲಿಬೆಲೆ

 

Click to comment

Leave a Reply

Your email address will not be published. Required fields are marked *

Most Popular

To Top