National

ಪಾಕಿಸ್ತಾನದ ‘ಚೀನಾನಮಸ್ಕಾರ’ ಯೋಗ!

ಪಾಕಿಸ್ತಾನ ಪೂರಾ ದಿವಾಳಿಯಾಗುವ ಹಂತಕ್ಕೆ ಬಂದಿದೆ. ಇಮ್ರಾನ್ ಖಾನ್ ಚೀನಾದ ಬೀಜಿಂಗ್ಗೆ ಹೋಗಿದ್ದಾಗ ಪಾಕಿಸ್ತಾನದ ಟಿವಿಯೊಂದು ಬೀಜಿಂಗ್ ಎನ್ನುವುದನ್ನು ತಪ್ಪಾಗಿ ಬೆಗ್ಗಿಂಗ್ ಎಂದು ಬರೆದು ಪ್ರಧಾನಿಯನ್ನು ಮುಜುಗರಕ್ಕೊಳಪಡಿಸಿತ್ತು. ಬರೆದಿದ್ದು ತಪ್ಪಾಗಿದೆ ಎಂದು ಸಂಪಾದಕರು ಹೇಳಿದರೂ ಅದು ವಾಸ್ತವ ಸ್ಥಿತಿಯನ್ನೇ ಪ್ರತಿನಿಧಿಸುತ್ತಿದ್ದುದರಿಂದ ಈ ತಪ್ಪೆಸಗಿದವನನ್ನು ಸಹಿಸಿಕೊಳ್ಳಲಾಗದೇ ಕೆಲಸದಿಂದ ಕಿತ್ತು ಬಿಸಾಡಲಾಯ್ತು. ಪಾಕಿಸ್ತಾನದ ಪರಿಸ್ಥಿತಿ ಬಲು ವಿಕಟವಾಗಿದೆ. ಸೌದಿ ಕೊಟ್ಟ ಆರು ಬಿಲಿಯನ್ ಡಾಲರ್ ಅನ್ನು ಸಂಭ್ರಮಿಸುತ್ತಿರುವಾಗಲೇ ಅದು ತನ್ನ ಅರಿವಿಗೇ ಬಾರದಂತೆ ಇನ್ನುಳಿದ ಹಣಕ್ಕಾಗಿ ಚೀನಾಕ್ಕೆ ಸಾಷ್ಟಾಂಗ ಪ್ರಣಾಮ ಮಾಡುತ್ತಿದೆ. ಬಹುಶಃ ಪಾಕಿಸ್ತಾನದ ಮೌಲ್ವಿಗಳು ಅಲ್ಲಾಹ್ನಿಗೆ ಸಮತೂಕದ ಮತ್ತೊಂದು ದೇವರನ್ನು ಕಾಣಬಾರದೆಂದು ಎಷ್ಟೇ ಬೋಧಿಸಿದರೂ ಪಾಕಿಸ್ತಾನದ ಪ್ರಧಾನಿ ಇಮ್ರಾನ್ಖಾನ್ಗೆ ಮಾತ್ರ ಸದ್ಯದ ಮಟ್ಟಿಗೆ ಚೀನಾದ ಅಧ್ಯಕ್ಷರೇ ದೇವರು. ಹಾಗಂತ ಚೀನಾ ನೀಡುವುದು ತಾತ್ಕಾಲಿಕ ನೆಮ್ಮದಿ ಮಾತ್ರ. ಜಗತ್ತಿನಲ್ಲೆಲ್ಲಾ ರಾಷ್ಟ್ರಗಳನ್ನು ಸಾಲದ ಸುಳಿಯಲ್ಲಿ ಸಿಲುಕಿಸಿ ಆ ರಾಷ್ಟ್ರಗಳು ತನ್ನ ಅಡಿಯಾಳಾಗುವಂತೆ ಮಾಡಿಕೊಳ್ಳುವಲ್ಲಿ ಚೀನಾ ನಿಸ್ಸೀಮವಾಗಿದೆ. ಭಾರತದ ಸುತ್ತಲೂ ಇರುವ ರಾಷ್ಟ್ರಗಳನ್ನು ಈ ರೀತಿ ತನ್ನ ತೆಕ್ಕೆಗೆ ಸೆಳೆದುಕೊಂಡ ಚೀನಾ ಭಾರತಕ್ಕೆ ಉರುಳನ್ನು ಹಾಕುವ ಪ್ರಯತ್ನವನ್ನಂತೂ ಮಾಡಿಯೇ ಇತ್ತು. ಶ್ರೀಲಂಕಾ ಅವರ ತೆಕ್ಕೆಯಿಂದ ಜಾರಿತು. ಭೂತಾನ್ ಅವರನ್ನು ನಂಬಲಿಲ್ಲ. ಬಾಂಗ್ಲಾದೇಶವನ್ನು ಮೋದಿ ಚಾಲಾಕಿತನದಿಂದ ತಮ್ಮತ್ತ ಸೆಳೆದುಕೊಂಡರು. ಮಾಲ್ಡೀವ್ಸ್ ಕಳಚಿ ಬಿತ್ತು. ಈಗ ಚೀನಾ ಅಧಿಕೃತವಾಗಿ ಹಿಡಿತ ಹೊಂದಿರುವುದು ಪಾಕಿಸ್ತಾನದ ಮೇಲೆ ಮಾತ್ರ. ಚೀನಾ ಪಾಕ್ ಎಕನಾಮಿಕ್ ಕಾರಿಡಾರ್ ನೆಪದಲ್ಲಿ ಪಾಕಿಸ್ತಾನಕ್ಕೆ ಸಾಲಕೊಟ್ಟು, ಪಾಕಿಸ್ತಾನದ ಅನೇಕ ಭೂಪ್ರದೇಶಗಳ ಮೇಲೆ ಸ್ವಾಮ್ಯ ಸಾಧಿಸಿರುವ ಚೀನಾ ಅಲ್ಲೊಂದು ಆಂತರಿಕ ಸಂಘರ್ಷಕ್ಕೆ ಕಾರಣವಾಗಿದೆ.

ಪಾಕಿಸ್ತಾನ ತನಗೆ ಅರಿವೇ ಇಲ್ಲದಂತೆ ಚೀನಾ ನಿಮರ್ಿಸಿರುವ ಖೇಡ್ಡಾದೊಳಕ್ಕೆ ಜಾರಿಬಿದ್ದಿದೆ. ಇತ್ತೀಚೆಗೆ ಪಾಕಿಸ್ತಾನದ ಪತ್ರಕರ್ತನೊಬ್ಬ ಲಾಹೋರಿನಲ್ಲಿ ಚೀನಾದ ಇಂಜಿನಿಯರ್ ಪಾಕಿಸ್ತಾನದ ಹುಡುಗಿಯನ್ನು ಮದುವೆ ಆಗುವ ವಿಡಿಯೊ ಶೇರ್ ಮಾಡಿ ಸಾಮಾಜಿಕ ಬದಲಾವಣೆ ಎಂದು ಕೊಂಡಾಡಿದ್ದ. ಆದರೆ ಇದು ಬರಿಯ ಸಾಮಾಜಿಕ ಬದಲಾವಣೆಯಷ್ಟೇ ಅಲ್ಲ. ಬದಲಿಗೆ ಪಾಕಿಸ್ತಾನದಲ್ಲಿ ಬದಲಾಗುತ್ತಿರುವ ಜನಸಂಖ್ಯಾಂಕಿಯ ಮುನ್ನೋಟವೂ ಹೌದು. ಟಿಬೆಟ್ ಅನ್ನು ಹೀಗೇ ಚೀನಾ ಕಬಳಿಸಿದ್ದು ನಿಮಗೆ ನೆನಪಿರಬೇಕು. ಎಕನಾಮಿಕ್ ಕಾರಿಡಾರ್ನ ನೆಪದಲ್ಲಿ ಪಾಕಿಸ್ತಾನಕ್ಕೆ ನುಗ್ಗುತ್ತಿರುವ ಚೀನಿಯರು ತಾವು ಕಾಲಿಟ್ಟೆಡೆಯಲ್ಲೆಲ್ಲಾ ಜನರಿಗೆ ಚೀನಾದ ಭಾಷೆಯನ್ನು ಕಲಿಸುತ್ತಿದ್ದಾರೆ. ಆ ಭಾಗದಲ್ಲಿ ಅದಾಗಲೇ ಚೀನಾದ ಕರೆನ್ಸಿಗಳು ಕಾರ್ಯ ನಿರ್ವಹಿಸಲು ಶುರು ಮಾಡಿವೆ. ಚೀನಾದ ರೆಡಿಯೊ, ಟಿವಿ ಚಾನೆಲ್ಲುಗಳು ಮುಲಾಜಿಲ್ಲದೇ ಕೆಲಸ ಮಾಡುತ್ತಿವೆ. ಮುಲ್ಲಾಗಳ ಒತ್ತಾಯದ ಬದುಕಿನ ವಿರುದ್ಧ ಚೀನಾದ ಈ ಉಡುಗೊರೆಗಳು ಆಕರ್ಷಕವೆನಿಸುತ್ತಿವೆ. ಮೊಘಲರ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ನಮ್ಮಲ್ಲನೇಕರು ಇಂಗ್ಲೀಷರ ಮೊರೆ ಹೋದಂತೆಯೇ ಇದು.


ಚೀನಾದಲ್ಲಿ ಕಳೆದ ಕೆಲವಾರು ದಶಕಗಳಿಂದ ಭಯಾನಕವಾದ ಸಮಸ್ಯೆಯೊಂದು ತಲೆದೋರಿದೆ. ಒಂದು ಮಗು ಸಾಕು ಎಂಬ ಧಾವಂತಕ್ಕೆ ಬಿದ್ದ ಚೀನಿಯರಲ್ಲಿ ಈಗ ಮುಂದಿನ ಪೀಳಿಗೆಯದ್ದೇ ಕೊರತೆ. ಚೀನಾವನ್ನು ಅಧ್ಯಯನ ಮಾಡಿದ ಮಿತ್ರರೊಬ್ಬರು ಇತ್ತೀಚೆಗೆ ತಮಾಷೆ ಮಾಡುತ್ತಾ ಚೀನಾದಲ್ಲಿ ಹುಟ್ಟಿದ ಒಂದು ಮಗುವನ್ನು ನೋಡಿಕೊಳ್ಳಲು ಆರು ಜನರಿದ್ದಾರೆ ಎಂದು ಲೆಕ್ಕ ಕೊಟ್ಟಿದ್ದರು. ಅದು ಬಲು ಸರಳ ಲೆಕ್ಕ. ಮಗುವಿನ ತಂದೆ-ತಾಯಿ ಇವರು ತಮ್ಮ ತಂದೆ ತಾಯಿಯಂದಿರಿಗೆ ಒಂದೊಂದೇ ಸಂತಾನವಾದ್ದರಿಂದ ಮಗುವಿನ ಎರಡೂ ಕಡೆಯ ಅಜ್ಜ-ಅಜ್ಜಿಯರೂ ಅದೇ ಮನೆಯಲ್ಲಿ. ಒಟ್ಟು ಆರಾಯ್ತಲ್ಲ! ಈ ಕಾರಣಕ್ಕೆ ಅಲ್ಲಿನ ಈ ಪೀಳಿಗೆಯ ತರುಣನನ್ನು ಜಗತ್ತಿನ ಬೇರೆ ಬೇರೆ ಭಾಗಗಳಿಗೆ ಕಳಿಸಿ ಅಲ್ಲೆಲ್ಲಾ ಚೀನಾವನ್ನು ಹುಟ್ಟು ಹಾಕುವ ಕುಟಿಲ ಯೋಜನೆ ರೂಪಿಸಲಾಗುತ್ತಿದೆ ಎನ್ನುತ್ತಾರೆ. ಯಾವ ರಾಷ್ಟ್ರಗಳು ಬಲಿಯಾಗುತ್ತವೋ ಗೊತ್ತಿಲ್ಲ, ಪಾಕಿಸ್ತಾನವಂತೂ ಅಡ್ಡ ಮಲಗಿದೆ. ಚೀನಾದಲ್ಲಿ ಇಸ್ಲಾಮಿಗೆ ಬೆಲೆ ಇಲ್ಲದಿರುವುದರಿಂದ ಚೀನಿಯನನ್ನು ಮದುವೆಯಾದ ಹುಡುಗಿ ಮುಸಲ್ಮಾನ್ ಆಗಿ ಮುಂದುವರಿಯದೇ ಆಕೆ ಅನಿವಾರ್ಯವಾಗಿ ಚೀನಿಯನ ಪಂಥವನ್ನೇ ಒಪ್ಪಿಕೊಳ್ಳಬೇಕಾಗುತ್ತದೆ. ಅಲ್ಲಿಗೇ ಭಾರತದ ಗಡಿಗೆ ಹೊಂದಿಕೊಂಡಂತಹ ಪಾಕಿಸ್ತಾನದ ಭಾಗ ಚೀನಾ ಆಗಿ ಬದಲಾಗುವ ಹೊತ್ತು ಬಹಳ ದೂರವಿಲ್ಲವೆಂದಾಯ್ತು.

ಇದಕ್ಕೆ ಸರಿಯಾಗಿ ಡೊನಾಲ್ಡ್ ಟ್ರಂಪ್ ಮತ್ತು ಇಡಿಯ ಜಗತ್ತು ಪಾಕಿಸ್ತಾನಕ್ಕೆ ಭಾರತದ ವಿರುದ್ಧ ಸಹಾಯ ಮಾಡಲು ಒಪ್ಪಿಕೊಳ್ಳುತ್ತಿಲ್ಲ. ಈಗ ಪಾಕಿಸ್ತಾನಕ್ಕಿರುವುದು ಒಂದೇ ಆಸರೆ, ಅದು ಚೀನಾ ಮಾತ್ರ. ಅದಾಗಲೇ ಚೀನಾದ ಸಾಲದ ಸುಳಿಯಲ್ಲಿ ಸಿಕ್ಕಿರುವ ಪಾಕಿಸ್ತಾನ ಬರಲಿರುವ ದಿನಗಳಲ್ಲಿ ಇನ್ನೂ ಭಯಾನಕವಾದ ಸ್ಥಿತಿಯನ್ನು ಎದುರಿಸಲಿದೆ. ಎಕನಾಮಿಕ್ ಕಾರಿಡಾರ್ನ ನೆಪದಲ್ಲಿ ಪಾಕಿಸ್ತಾನದ ಸಂಪನ್ಮೂಲವನ್ನು ಕಬಳಿಸಿ ನುಂಗಿರುವ ಚೀನಾ ಮಾನವ ಸಂಪನ್ಮೂಲವನ್ನು ತನ್ನಿಚ್ಛೆಗೆ ತಕ್ಕಂತೆ ಬಳಸಿಕೊಳ್ಳಲಿದೆ. ಈಗ ಭಾರತದ ಹೊಣೆಗಾರಿಕೆ ಬಲುದೊಡ್ಡದ್ದು. ಈ ಒಟ್ಟಾರೆ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಸಿಂಧ್, ಪಿಒಕೆ ಮತ್ತು ಬಲೂಚಿಸ್ತಾನಗಳನ್ನು ಭಾರತ ಪ್ರತ್ಯೇಕಗೊಳಿಸಲು ಜಾಗತಿಕ ಸಹಮತಿಯನ್ನು ರೂಪಿಸಬೇಕಿದೆ. ಒಮ್ಮೆ ಹೀಗೆ ಪಾಕಿಸ್ತಾನ ನಾಲ್ಕು ಚೂರಾಗಿ ಒಡೆದು ಹೋದರೆ ಮುಂದಿನ ಮೂನರ್ಾಲ್ಕು ದಶಕಗಳ ಕಾಲವಾದರೂ ಅವುಗಳ ಮೇಲೆ ಭಾರತದ ಹಿಡಿತ ಇರುವುದು ಖಾತ್ರಿ. ಇಲ್ಲವಾದರೆ ಚೀನಾದ ಪ್ರಭಾವಕ್ಕೆ ಒಳಗಾಗುವ ಈ ಪ್ರದೇಶಗಳು ಶಾಶ್ವತವಾಗಿ ಭಾರತ ವಿರೋಧಿಯಾಗಿ ನಿಂತುಬಿಡಬಲ್ಲವು.


ಕೆಲವೊಮ್ಮೆ ಯೋಚಿಸುತ್ತಾ ಕುಳಿತಾಗ ಇಷ್ಟೆಲ್ಲಾ ದಿಸೆಯಲ್ಲಿ ಆಲೋಚಿಸುವ ತಾಕತ್ತು ರಾಹುಲನಿಗಿದೆಯಾ ಎಂದೆನಿಸಿಬಿಡುತ್ತದೆ. ನಾಲ್ಕನೇ ಕ್ಲಾಸಿನ ಮಗುವೊಂದನ್ನು ದ್ವಿತೀಯ ಪಿಯುಸಿ ಪರೀಕ್ಷೆಗೆ ಕೂರಿಸುವುದು ಆ ವಿದ್ಯಾಥರ್ಿಗೆ ಅದೆಷ್ಟು ಬೌದ್ಧಿಕ ಕಿರಿಕಿರಿ ಉಂಟು ಮಾಡುತ್ತದೋ, ರಾಹುಲ್ನಿಗೆ ರಾಷ್ಟ್ರ ಅಂಥದ್ದೇ ಕಿರಿಕಿರಿ ಮಾಡುತ್ತದೆ ಎಂದೂ ಎನಿಸುತ್ತದೆ. ಮೊದಲೆಲ್ಲಾ ಭಾರತ ಮತ್ತು ಜಾಗತಿಕ ಮಟ್ಟದ ಸಂಗತಿಗಳು ನಮ್ಮ ಅರಿವಿಗೇ ಬರುತ್ತಿರಲಿಲ್ಲ. ಇವರು ಹೇಳಿದ್ದೆಲ್ಲಾ ಒಪ್ಪಿಕೊಂಡು ನಡೆಯಬೇಕಾದ ಅನಿವಾರ್ಯತೆ ಇತ್ತು. ಸಾಮಾಜಿಕ ಮಾಧ್ಯಮಗಳು ವ್ಯಾಪಕಗೊಂಡ ನಂತರ ಪ್ರತಿಯೊಬ್ಬನೂ ಆಲೋಚನಾಶಕ್ತಿಯಿಂದ ಬಲವಾಗಿದ್ದಾನೆ. ಹೀಗಾಗಿಯೇ ಈಗಿನ ತರುಣ ರಾಷ್ಟ್ರದ ಹಿತದ ಕುರಿತಂತೆ ಸ್ಪಷ್ಟವಾಗಿ ಆಲೋಚಿಸಬಲ್ಲ. ನರೇಂದ್ರಮೋದಿಯವರ ನಿಜವಾದ ಶಕ್ತಿ ಅಡಗಿರುವುದು ಇಲ್ಲೇ.

-ಚಕ್ರವರ್ತಿ ಸೂಲಿಬೆಲೆ

1 Comment

1 Comment

  1. Adarsh

    November 13, 2018 at 9:36 am

    superb article

Leave a Reply

Your email address will not be published. Required fields are marked *

Most Popular

To Top