National

ಪಾಕಿಸ್ತಾನದ ಅಸೆಂಬ್ಲಿಯಲ್ಲಿ ಇಮ್ರಾನ್ ಖಾನ್ ಗೆ ಶೇಮ್ ಶೇಮ್ ಎಂದ ವಿರೋಧಪಕ್ಷದ ನಾಯಕರು!

ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಗೆ ವಿರೋಧ ಪಕ್ಷದವರು ಪಾಕಿಸ್ತಾನದ ಅಸೆಂಬ್ಲಿಯಲ್ಲಿ ವಿರೋಧಿಸಿದ್ದಾರೆ. ಆತನ ವಿರುದ್ಧ ಘೋಷಣೆಯನ್ನು ಕೂಗಿದ್ದಾರೆ.

ವಿರೋಧ ಪಕ್ಷದವರು ‘ಶೇಮ್ ಶೇಮ್’ ಎಂದು ಕೂಗುತ್ತಿದ್ದರೆಂದು ವರದಿ ಸಿಕ್ಕಿದೆ. ಭಾರತೀಯ ವಾಯುಸೇನೆ ಪಾಕಿಸ್ತಾನದೊಳಗೆ ನುಗ್ಗಿ ಜೈಶ್-ಎ-ಮೊಹಮ್ಮದ್ ಉಗ್ರ ಕ್ಯಾಂಪುಗಳ ಮೇಲೆ ನಡೆಸಿದ ದಾಳಿಗೆ ಇತರ ಪಕ್ಷದ ನಾಯಕರು ಆಕ್ರೋಶದಿಂದ ಇಮ್ರಾನ್ ಖಾನ್ ಮೇಲೆ ಮಾತನಾಡಿದ್ದಾರೆ. ಇದರಿಂದ ಪಾಕಿಸ್ತಾನದ ನಾಯಕನಿಗೆ ತೀವ್ರ ಅವಮಾನವಾಗಿರುವುದಂತೂ ಸತ್ಯ!

ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಎಲ್ಲರೂ ಒಟ್ಟಾಗಿರಬೇಕೆಂದು ಕೇಳಿಕೊಂಡಿದ್ದಾರೆ. ಬೆಳಿಗ್ಗೆ 3.45 ರ ವೇಳೆಗೆ ಭಾರತೀಯ ವಾಯುಸೇನೆ ಪಾಕಿಸ್ತಾನದಲ್ಲಿ ಬಾಂಬ್ ಸಿಡಿಸಿ ಉಗ್ರರ ಕ್ಯಾಂಪುಗಳನ್ನು ಪುಡಿಪುಡಿಗೈದಿದೆ.

ಭಾರತದ ಮೇಲೆ ದಾಳಿಯಾದಾಗ ಇಡಿಯ ಭಾರತ ಸರ್ಕಾರದೊಡನೆ ನಿಂತು ಸರ್ಕಾರಕ್ಕೆ ಬಲತುಂಬುವ ಪ್ರಯತ್ನ ಮಾಡಿದ್ದನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳಬಹುದು! ಇದು ಭಾರತದ ತಾಕತ್ತು ಮತ್ತು ಭಾರತದ ಶಕ್ತಿ.

Click to comment

Leave a Reply

Your email address will not be published. Required fields are marked *

Most Popular

To Top