National

ಪರಿಕ್ಕರ್ ರ ಸಾವಿಗೆ ಕಾಯುತ್ತಿತ್ತೇ ಕಾಂಗ್ರೆಸ್ಸು!!

ಮನೋಹರ್ ಪರಿಕ್ಕರ್. ಆ ಹೆಸರು ಈಗ ಒಂದು ಪ್ರೇರಣಾದಾಯಿ ವ್ಯಕ್ತಿತ್ವ. ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ನಿಂದ ಬಳಲುತ್ತಿದ್ದ ಪರಿಕ್ಕರ್ ಗೋವಾದ ಮತ್ತು ರಾಷ್ಟ್ರದ ನಂಬಿಕೆಯನ್ನುಳಿಸಿಕೊಂಡ ಅಪರೂಪದ ರಾಜಕಾರಣಿ. ಅವರು ತೀರಿಕೊಂಡಾಗ ಇಡಿಯ ದೇಶ ಕಣ್ಣೀರಿಡಲು ಕಾರಣವಿದ್ದೇ ಇತ್ತು. ಮೋದಿಯ ಅಭಿಮಾನಿಯಾಗಿ ನನಗೆ ಅವರ ಮೇಲೆ ಒಂದು ವಿಶೇಷವಾದ ಗೌರವ ಏಕೆಂದರೆ ಮೋದಿಯೊಳಗಿನ ಪ್ರಧಾನಿಯನ್ನು ಗುರುತಿಸಿ ಅವರ ಹೆಸರನ್ನು ಮೊದಲಿಗೆ ಸೂಚಿಸಿದ್ದೇ ಪರಿಕ್ಕರ್.


ಗೋವಾದಲ್ಲಿ ಕ್ರಿಶ್ಚಿಯನ್ನರೇ ಹೆಚ್ಚಿರುವುದರಿಂದ ಭಾಜಪ ಗೆಲ್ಲುವುದು ಅಸಾಧ್ಯವೇ ಆಗಿತ್ತು. 80ರ ದಶಕದ ಕೊನೆಯ ಭಾಗದಲ್ಲಿ ಚುನಾವಣೆಗಳು ನಡೆದಾಗ ಕಾರ್ಯಕರ್ತರಾಗಿ ಪರಿಕ್ಕರ್ ದುಡಿಯುತ್ತಿದ್ದರು. ಆಗ ಬಿಜೆಪಿಗೆ ಶೇಕಡಾ ಒಂದಕ್ಕಿಂತಲೂ ಕಡಿಮೆ ಮತಗಳು ಬಂದಿದ್ದವು. ಅದಾದ ಹತ್ತೇ ವರ್ಷಗಳಲ್ಲಿ ಅದೇ ಮನೋಹರ್ ಪರಿಕ್ಕರ್ ಗೋವಾದ ಮುಖ್ಯಮಂತ್ರಿಯಾಗಿಬಿಟ್ಟಿದ್ದರು. ಜೊತೆಗಾರರನ್ನು ಕರೆದೊಯ್ಯುವ ಎಲ್ಲರನ್ನೂ ಪ್ರೀತಿಯಿಂದ ಉಳಿಸಿಕೊಳ್ಳುವ ಕಲೆ ಅವರಿಗೆ ಜನ್ಮಜಾತ. ಅವರೆಂದಿಗೂ ರಾಜಕಾರಣಿಗಳಿಗೆ ಬರುವ ಸಹಜವಾದ ಧಿಮಾಕಿನ ರೋಗದಿಂದ ಬಳಲಿದವರೇ ಅಲ್ಲ. ಗೋವಾ ಚಿಕ್ಕ ರಾಜ್ಯವಾದ್ದರಿಂದ ಮತ್ತು ಪ್ರಜ್ಞಾವಂತರೇ ಹೆಚ್ಚು ತುಂಬಿರುವುದರಿಂದ ಧಿಮಾಕು ಅಲ್ಲಿ ನಡೆಯುವುದಿಲ್ಲ ಎನ್ನುವುದಾದರೆ ದೇಶದ ರಕ್ಷಣಾ ಸಚಿವರಾದಾಗಲೂ ಕೂಡ ಪರಿಕ್ಕರ್ ಅಷ್ಟೇ ಸರಳವಾಗಿದ್ದರು. ಐಐಟಿಯಿಂದ ಪದವಿ ಪಡೆದಿದ್ದ ಅವರು ತಮ್ಮ ಪಾಂಡಿತ್ಯದ ಭಾರದಿಂದ ಎಂದಿಗೂ ಕುಸಿದು ಹೋಗಲಿಲ್ಲ. ಇದನ್ನು ವಿಶೇಷವಾಗಿ ಏಕೆ ಹೇಳಬೇಕಾಯಿತೆಂದರೆ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಐಐಟಿ ಪದವೀಧರರೇ ಆಗಿದ್ದು ಅವರ ಪತನ ಕಣ್ಣಿಗೆ ರಾಚುತ್ತಿದೆ.

ಪರಿಕ್ಕರ್ ಇಂದು ಒಂದು ದಂತಕಥೆ. ಅವರ ಸರಳತೆಯ, ಸೌಜನ್ಯದ ಕಥೆಗಳು ಲೆಕ್ಕವಿಲ್ಲದಷ್ಟು ತಿರುಗಾಡುತ್ತಿವೆ. ಅದೊಮ್ಮೆ ಗೋವೆಯಲ್ಲಿ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಸ್ಕೂಟಿಯಲ್ಲಿ ಹೋಗುತ್ತಿದ್ದ ಮತ್ತೊಬ್ಬ ವ್ಯಕ್ತಿಯನ್ನು ಅಡ್ಡಹಾಕಿ ಕೆಟ್ಟದಾಗಿ ವತರ್ಿಸಿ ತನ್ನ ತಾನು ಪೊಲೀಸ್ ಕಮಿಷನರ್ರ ಮಗ ಎಂದು ಧಿಮಾಕಿನಿಂದ ನುಡಿದನಂತೆ. ಸ್ಕೂಟಿಯಲ್ಲಿದ್ದ ವ್ಯಕ್ತಿ ಆ ತರುಣನಿಗೆ ನಮಸ್ಕಾರ ಮಾಡಿ ನಾನು ಈ ರಾಜ್ಯದ ಮುಖ್ಯಮಂತ್ರಿ ಎಂದಿದ್ದರಂತೆ. ಅಧಿಕಾರದಲ್ಲಿರುವಾಗಲೇ ಪತ್ನಿಯನ್ನು ಕಳೆದುಕೊಂಡಿದ್ದ ಪರಿಕ್ಕರ್ ಮಗನ ಪರೀಕ್ಷೆಗೆಂದು ರಜೆಯನ್ನು ತೆಗೆದುಕೊಂಡು ಅವನಿಗೆ ಅಭ್ಯಾಸ ಮಾಡಿಸಲು ಜೊತೆಗಿದ್ದರು. ಈ ಹೊತ್ತಿನಲ್ಲಿ ಸಕರ್ಾರದ ಯಾವುದೇ ಸವಲತ್ತುಗಳನ್ನು ಬಳಸಿಕೊಳ್ಳದೇ ಸಂಬಳವನ್ನು ತೆಗೆದುಕೊಳ್ಳದೇ ಮಾದರಿ ರಾಜಕಾರಣಿಯಾಗಿ ನಿಂತರು. ತಮ್ಮ ಮಕ್ಕಳನ್ನು, ಮೊಮ್ಮಕ್ಕಳನ್ನು, ಮರಿಮಕ್ಕಳನ್ನು ರಾಜಕೀಯಕ್ಕೆ ತಂದು ಪರಿವಾರ ರಾಜಕಾರಣದ ಕಲ್ಪನೆಯಲ್ಲಿ ರಾಜ್ಯ, ದೇಶಗಳ ಹಿತಾಸಕ್ತಿ ಬಲಿಕೊಡುವ ಪ್ರತಿಯೊಬ್ಬರೂ ಒಮ್ಮೆ ಪರಿಕ್ಕರರನ್ನು ಹತ್ತಿರದಿಂದ ನೋಡಲೇಬೇಕು.


ಮುಂದೆ ರಕ್ಷಣಾ ಸಚಿವರಾದಾಗಲೂ ಅವರು ಎಂದಿನ ಸರಳ ಉಡುಪನ್ನು ಧರಿಸಿಕೊಂಡು ಸರಳವಾದ ಚಪ್ಪಲಿಯನ್ನೇ ಹಾಕಿಕೊಂಡು ಬರುತ್ತಿದ್ದುದನ್ನು ನೋಡಿದರೆ ಕೆಲವು ಹಿರಿಯ ಅಧಿಕಾರಿಗಳಿಗೆ ಕೋಪ ಬರುತ್ತಿತ್ತೇನೋ ನಿಜ, ಆದರೆ ಇಡಿಯ ಸೈನ್ಯಕ್ಕೆ ಆಗಬೇಕಾಗಿದ್ದ ಕಾಯಕಲ್ಪಕ್ಕೆ ಅವರಿಟ್ಟ ದಿಟ್ಟ ಹೆಜ್ಜೆಗಳು ಆ ಸೈನಿಕರನ್ನೂ ಬೆಚ್ಚಿ ಬೀಳಿಸುತ್ತಿದ್ದವು. ರಷ್ಯಾದಿಂದ ಎಸ್-400 ಮಿಸೈಲ್ ಸಿಸ್ಟಮ್ಗಳನ್ನು ಖರೀದಿಸುವ ಒಪ್ಪಂದವಾಗಿದ್ದು ಪರಿಕ್ಕರ್ರ ಕಾಲದಲ್ಲೇ. ಹಾಗೆ ನೋಡಿದರೆ ಜಗತ್ತಿನ ಅತ್ಯಂತ ದುಬಾರಿ ಮಿಸೈಲ್ ವ್ಯವಸ್ಥೆ ಅದು. ಶತ್ರು ಆಕ್ರಮಣವನ್ನು ತಡೆಯಲು ಕಡಿಮೆ ದೂರಕ್ಕೆ ದಾಳಿ ಮಾಡಬಲ್ಲ ಮತ್ತು ಹೆಚ್ಚು ದೂರಕ್ಕೆ ದಾಳಿ ಮಾಡಬಲ್ಲ ಕ್ಷಿಪಣಿ ವ್ಯವಸ್ಥೆಗಳು ಬೇಕಾಗುತ್ತವೆ. ಸೈನ್ಯದ ಪ್ರಮುಖರು ಇವೆರಡಕ್ಕೂ ಬೇಡಿಕೆ ಸಲ್ಲಿಸಿದ್ದರು. ಎಲ್ಲ ವಿವರಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ಪರಿಕ್ಕರ್ ಎಸ್-400 ಅನ್ನು ತಂದರೆ ಎರಡು ಪ್ರತ್ಯೇಕವಾದ ಮಿಸೈಲ್ ವ್ಯವಸ್ಥೆ ಬೇಡವೆಂಬುದನ್ನು ಸೈನ್ಯದ ಮುಖ್ಯಸ್ಥರಿಗೆ ಮನವರಿಕೆ ಮಾಡಿಕೊಟ್ಟರು. ಆ ಮೂಲಕ ಭಾರತಕ್ಕೆ ಕನಿಷ್ಠ 50,000 ಕೋಟಿ ರೂಪಾಯಿ ಉಳಿಸಿದರು. ರಕ್ಷಣಾ ವ್ಯವಸ್ಥೆ ಬಲಾಢ್ಯಾವಾಯ್ತು ಜೊತೆಗೆ ದೊಡ್ಡಮಟ್ಟದ ಹಣದ ಉಳಿಕೆಯೂ ಆಯ್ತು. ಇದು ಪರಿಕ್ಕರ್ರ ದೂರದೃಷ್ಟಿ. ಸೈನಿಕರಿಗೆ ಒನ್ ರ್ಯಾಂಕ್ ಒನ್ ಪೆನ್ಷನ್ನ ಕೊಡುಗೆ ಸಿಕ್ಕಿದ್ದು ಪರಿಕ್ಕರ್ರ ಸಂದರ್ಭದಲ್ಲೇ. ಅಮೇರಿಕಾದಲ್ಲಿ ಹಿಂದಿನ ಸಕರ್ಾರಗಳು ಇಟ್ಟು ಮರೆತಿದ್ದ ಸಾವಿರಾರು ಕೋಟಿ ರೂಪಾಯಿ ಹಣವನ್ನು ಖರೀದಿಗೆ ಬಳಸಿಕೊಳ್ಳುವಲ್ಲಿ ಚಾಕಚಕ್ಯತೆ ತೋರಿದ್ದೂ ಪರಿಕ್ಕರರೇ.

ಹಾಗಂತ ಅವರು ವಿವಾದಗಳಿಂದ ಹೊರತಾಗಿದ್ದರೆಂದೇನೂ ಅಲ್ಲ. ಗೋವಾದಲ್ಲಿ ಸ್ವತಃ ಸಂಘದ ಹಿರಿಯರು ಅವರ ವಿರುದ್ಧ ನಿಂತರು. ಚುನಾವಣೆಯಲ್ಲಿ ಸೋಲಿಸುವ ಸವಾಲೊಡ್ಡಿದರು. ಯಾವುದೂ ಪರಿಕ್ಕರರ ಎದುರು ನಿಲ್ಲಲಿಲ್ಲ. ಅವರು ಗಳಿಸಿದ್ದ ಜನಪ್ರೇಮ ಅಂತಹುದ್ದು. ಕಳೆದ ಚುನಾವಣೆಯಲ್ಲಿ ಗೋವೆಯಲ್ಲಿ ಬಹುಮತಕ್ಕೆ ಕೊರತೆಯಾದಾಗ ಅನ್ಯ ಪಕ್ಷಗಳು ಭಾಜಪಕ್ಕೆ ಸಹಕರಿಸಿದ್ದು ಒಂದೇ ನಿಯಮದ ಆಧಾರದ ಮೇಲೆ ಪರಿಕ್ಕರರು ಮುಖ್ಯಮಂತ್ರಿಯಾದರೆ ಬೆಂಬಲ ಎಂದು. ಹೀಗಾಗಿಯೇ ಅವರು ರಾಷ್ಟ್ರದ ಹುದ್ದೆಯನ್ನು ಬಿಟ್ಟು ಮರಳಿ ರಾಜ್ಯಕ್ಕೆ ಬಂದರು. ಕ್ಯಾನ್ಸರ್ ಪೀಡಿತರೆಂಬುದು ಗೊತ್ತಾದಾಗಲೂ ಹಗಲು-ರಾತ್ರಿ ದುಡಿದರು. ರಾಜ್ಯದ ಕಾಮಗಾರಿಗಳನ್ನು ವೀಕ್ಷಿಸಿದರು.


ದುರಂತವೇನು ಗೊತ್ತೇ? ಅವರ ಆರೋಗ್ಯ ಹದಗೆಡುತ್ತಿದೆ ಎಂದು ಗೊತ್ತಾದೊಡನೆ ಕಾಂಗ್ರೆಸ್ಸು ರಾಜ್ಯಪಾಲರಿಗೆ ಎರಡೆರಡು ಪತ್ರಗಳನ್ನು ಬರೆದು ಸಕರ್ಾರ ರಚಿಸುವ ಬೇಡಿಕೆಯನ್ನು ಮುಂದಿಟ್ಟಿತು. ರಾಹುಲ್ ಅಧ್ಯಕ್ಷನಾಗಿರುವ ಈ ಪಕ್ಷದಿಂದ ಮತ್ತೇನು ನಿರೀಕ್ಷಿಸಲು ಸಾಧ್ಯ ಹೇಳಿ? ಪರಿಕ್ಕರ್ರನ್ನು ಸೌಜನ್ಯಕ್ಕಾಗಿ ಕೆಲವು ದಿನಗಳ ಹಿಂದೆ ಭೇಟಿ ಮಾಡಿದ್ದ ರಾಹುಲ್ ಆನಂತರ ತುಂಬಿದ ಸಭೆಯಲ್ಲಿ ರಫೇಲ್ ಡೀಲಿನ ಅನೇಕ ವಿಚಾರಗಳು ನನಗೆ ಗೊತ್ತೇ ಇಲ್ಲ ಎಂದು ಪರಿಕ್ಕರ್ ಅಳಲು ತೋಡಿಕೊಂಡಿದ್ದರು ಎಂದು ಸುಳ್ಳುಹೇಳಿಬಿಟ್ಟಿದ್ದ. ಗಾಬರಿಗೊಂಡ ಪರಿಕ್ಕರರು ರಾಹುಲ್ಗೆ ಬಹಿರಂಗ ಪತ್ರವೊಂದನ್ನು ಬರೆದು ‘ಎರಡು ನಿಮಿಷ ಭೇಟಿಯಲ್ಲಿ ಇಷ್ಟೆಲ್ಲಾ ಮಾತನಾಡಲೇ ಇಲ್ಲ, ಏಕೆ ಸುಳ್ಳು ಹೇಳುತ್ತೀರಿ’ ಎಂದು ಪ್ರಶ್ನಿಸಿದ್ದಕ್ಕೆ ರಾಹುಲ್ ಬಳಿ ಉತ್ತರವೇ ಇರಲಿಲ್ಲ. ಈಗ ಕಾಂಗ್ರೆಸ್ಸು ಅವರ ಸಾವಿಗೇ ಕಾಯುತ್ತಿದ್ದೆವೆಂಬಂತೆ ವತರ್ಿಸಿದ್ದಾರೆ. ಕಾಲ ಎಲ್ಲಕ್ಕೂ ಉತ್ತರಿಸುತ್ತದೆ!!

– ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top