National

ಪಟೇಲರ ಪ್ರತಿಮೆ ನೋಡಿ ಮೈ ಪರಚಿಕೊಳ್ಳುವ ಸರದಿ ಈಗ ಇಂಗ್ಲೆಂಡಿನದ್ದು!

ಉರಿಯೋದು ಅಂದರೆ ಹೀಗೇ. ಸ್ವಾತಂತ್ರ್ಯದ ಹೊತ್ತಲ್ಲಿ ಬ್ರಿಟನ್ ಅಮೇರಿಕದ ಒತ್ತಡಕ್ಕೆ ಮಣಿದು ಒಲ್ಲದ ಮನಸ್ಸಿನಿಂದಲೇ ನಮ್ಮನ್ನು ಬಿಟ್ಟು ಹೋಗಿತ್ತು. ಆ ಹೊತ್ತಿನಲ್ಲಿ ಇಂಗ್ಲೆಂಡಿನ ಪ್ರಧಾನಿ ಕ್ಲೆಮೆಂಟ್ ಆಟ್ಲಿಯನ್ನು ಭಾರತದ ಸ್ವಾತಂತ್ರ್ಯದಲ್ಲಿ ಗಾಂಧೀಜಿಯವರ ಅಹಿಂಸೆಯ ಪಾತ್ರವೆಷ್ಟು ಎಂದು ಕೇಳಿದಾಗ ಕ-ನಿ-ಷ್ಠ ಎಂದು ಒತ್ತಿ ಹೇಳಿದ್ದರು. ಭಾರತೀಯರ ಕಾಲೆಳೆಯುವ ಗುಣಗಳನ್ನು ಗಮನಿಸಿ ಇದು ಎಂದಿಗೂ ಉದ್ಧಾರವಾಗದ ರಾಷ್ಟ್ರವೆಂದು ಶಾಪವೂ ಕೊಟ್ಟು ಹೋಗಿದ್ದರು. ಅವರನ್ನೇ ಆರಾಧಿಸಿದ ಆನಂತರದ ಭಾರತೀಯರು ಅವರ ಮಾತುಗಳನ್ನು ಸುಳ್ಳಾಗಲು ಬಿಡದಂತೆ ನಡೆದುಕೊಂಡರು. ನರೇಂದ್ರಮೋದಿ ಪ್ರಧಾನಿಯಾಗದೇ ಹೋಗಿದ್ದರೆ ಶಶಿತರೂರ್, ಚಿದಂಬರಂರಂತಹ ರಾಜಕೀಯ ಧುರೀಣರು, ಬಖರ್ಾ, ರಾಜ್ದೀಪ್ರಂತಹ ಫೇಕ್ನ್ಯೂಸ್ ಉತ್ಪಾದಕರು, ನಾಡಿನೊಳಗೆ ಕುಳಿತ ಒಂದಷ್ಟು ಬುದ್ಧಿಜೀವಿಗಳು ಆಟ್ಲಿಯನ್ನು ದೃಷ್ಟಾರನೆಂದು ಗುರುತಿಸಿ ಭಾರತೀಯರ ಯೋಗ್ಯತೆಯನ್ನು ಆತ ಮೊದಲೇ ಗುರುತಿಸಿದ್ದ ಎಂದೂ ಹೇಳಿಬಿಡುತ್ತಿದ್ದರೆನೋ! ಆದರೆ ಹಾಗಾಗಲಿಲ್ಲ. ಕಳೆದ 5 ವರ್ಷಗಳಲ್ಲಿ ಭಾರತ ಕಣ್ಣಿಗೆ ಕಾಣುವಂತಹ ಬೆಳವಣಿಗೆ ಸಾಧಿಸಿತು. ಇಂಗ್ಲೆಂಡಿನ ಪ್ರಧಾನಿ ಮತ್ತು ಭಾರತದ ಪ್ರಧಾನಿಯನ್ನು ಒಟ್ಟಿಗೆ ನಿಲ್ಲಿಸಿದರೆ ಜಗತ್ತು ಹೊರಳುವುದು ಮೋದಿಯವರತ್ತಲೇ ಎಂಬುದು ಈಗ ಗುಟ್ಟಾಗೇನೂ ಉಳಿದಿಲ್ಲ. ಮೋದಿ ಜಗತ್ತಿಗೆ ಅಷ್ಟು ಅನಿವಾರ್ಯವಾಗಿಬಿಟ್ಟಿದ್ದಾರೆ. ವಿವೇಕಾನಂದರನ್ನೇ ಕರಿಯನೆಂದು ಜರಿದ ಈ ಇಂಗ್ಲೀಷಿನವರಿಗೆ ಮೋದಿಯನ್ನು ಸಹಿಸುವುದಾದರೂ ಹೇಗೆ ಸಾಧ್ಯ ಹೇಳಿ? ಭಾರತವೀಗ ವೇಗವಾಗಿ ಬೆಳೆಯುತ್ತಿರುವ ಆಥರ್ಿಕತೆಯುಳ್ಳ ರಾಷ್ಟ್ರಗಳ ಸಾಲಿನಲ್ಲಿದೆ. ಭಾರತವೀಗ ಸಶಕ್ತ, ಸದೃಢ ಮತ್ತು ಜಗತ್ತಿಗೆ ಮಾರ್ಗದರ್ಶನ ಮಾಡಬಲ್ಲ ಕೆಲವೇ ರಾಷ್ಟ್ರಗಳ ಸಾಲಿನಲ್ಲಿದೆ. ಎಲ್ಲ ಬಿಟ್ಟರೂ ಕಳೆದ ಅಕ್ಟೋಬರ್ ಕೊನೆಯಲ್ಲಿ ನರೇಂದ್ರಮೋದಿ ಲೋಕಾರ್ಪಣೆ ಮಾಡಿದ ಸರದಾರ್ ಪಟೇಲರ ಮೂತರ್ಿ ಜಗತ್ತಿನಲ್ಲೇ ದೊಡ್ಡದ್ದೆಂದು ಖ್ಯಾತಿ ಪಡೆದಿದೆ. ತಮ್ಮನ್ನನುಸರಿಸದ ರಾಷ್ಟ್ರವೊಂದು ಈ ಬಗೆಯ ಬೆಳವಣಿಗೆಯನ್ನು ದಾಖಲಿಸುತ್ತದೆ ಎನ್ನುವುದೇ ಇಂಗ್ಲೆಂಡಿಗೆ ಬಲುದೊಡ್ಡ ಹಿನ್ನಡೆ. ಈ ನೋವನ್ನು ಅದು ಕಾರಿಕೊಂಡಿದ್ದು ಹೇಗೆ ಗೊತ್ತೇನು?

ಇಂಗ್ಲೆಂಡಿನ ಎಕ್ಸ್ಪ್ರೆಸ್ ಎನ್ನುವ ಪತ್ರಿಕೆ ಇಂಗ್ಲೆಂಡು ಭಾರತಕ್ಕೆ ಕೊಡುವ ಒಂದು ಬಿಲಿಯನ್ ಪೌಂಡ್ನಷ್ಟು ಸಹಾಯದಲ್ಲಿ 330 ಮಿಲಿಯನ್ ಪೌಂಡುಗಳನ್ನು ಅದು ಕಂಚಿನ ಪ್ರತಿಮೆಗೆ ಬಳಸಿಬಿಟ್ಟಿರುವುದು ಆಕ್ರೋಶಕ್ಕೆ ಕಾರಣವಾಗಿದೆ ಎಂದು ಕೂಗಾಡಿದೆ. 56 ತಿಂಗಳುಗಳಲ್ಲಿ ಭಾರತ ನಿಮರ್ಿಸಿರುವ ಈ ಅದ್ಭುತವಾದ ಪ್ರತಿಮೆಗೆ ಇಂಗ್ಲೆಂಡಿನ ತೆರಿಗೆದಾರರ ಹಣವನ್ನು ಬಳಸಲಾಗಿದೆ ಎಂದು ಅದು ಆರೋಪ ಮಾಡಿದೆ. ಅಷ್ಟೇ ಅಲ್ಲ, 2012 ರಲ್ಲಿ ಇಂಗ್ಲೆಂಡು 300 ಮಿಲಿಯನ್ ಹಣದ ಮೊದಲ ಕಂತನ್ನು ಕಳಿಸಿದಾಗ ಈ ಕೆಲಸ ಆರಂಭವಾಯ್ತು, 2013 ರಲ್ಲಿ 268 ಮಿಲಿಯನ್ ಪೌಂಡುಗಳಷ್ಟು ನಿಧಿ ನೀಡಲಾಗಿತ್ತು, 2014 ಮತ್ತು 15 ರಲ್ಲಿ ಕ್ರಮವಾಗಿ 278 ಮಿಲಿಯನ್ನಷ್ಟು ಮತ್ತು 185 ಮಿಲಿಯನ್ಗಳಷ್ಟು ಧನಸಹಾಯ ಮಾಡಲಾಗಿತ್ತು. ಈ ಕುರಿತಂತೆ ಅಲ್ಲಿನ ಸಂಸದ ಪೀಟರ್ ಬೋನ್ ‘ನಮ್ಮಿಂದ ಧನಸಹಾಯ ಪಡೆದು ಅದನ್ನು ಪ್ರತಿಮೆಗೆ ಬಳಸಿರುವುದು ಅಸಂಬದ್ಧ’ ಎಂದು ಸಭೆಯಲ್ಲಿ ಕೂಗಾಡಿದ್ದಾರೆ. ಇನ್ನು ಮುಂದೆ ಹಣ ಕೊಡಬೇಕೋ ಬೇಡವೋ ಎಂದು ಚಿಂತಿಸಬೇಕಿದೆ ಎಂದೂ ಸೇರಿಸಿದ್ದಾರೆ.

ಈಗ ವಿಷಯಕ್ಕೆ ಬರೋಣ. ಮೊದಲನೆಯದು ಭಾರತ ಇಂದು ಸಹಾಯಧನ ಪಡೆಯುವ ರಾಷ್ಟ್ರವಾಗಿ ಉಳಿದಿಲ್ಲ. ಬದಲಿಗೆ ಒಟ್ಟಾರೆ ಲೆಕ್ಕ ಹಾಕಿದರೆ ಸಹಾಯ ಕೊಡುವ ರಾಷ್ಟ್ರವಾಗಿ ಬೆಳೆದು ನಿಂತಿದೆ. ಇಂಗ್ಲೆಂಡಿನಿಂದ ಭಾರತ ಸಕರ್ಾರ ಯಾವುದೇ ಹಣವನ್ನು ಸಹಾಯವಾಗಿ ಸ್ವೀಕರಿಸುತ್ತಿಲ್ಲ. ಬದಲಿಗೆ ಸ್ವತಃ ಇಂಗ್ಲೆಂಡು ಭಾರತದ ಸಕರ್ಾರೇತರ ಸಂಸ್ಥೆಗಳಿಗೆ ಹಣಕೊಟ್ಟು ಇಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡುತ್ತದೆ. ಸಹಜ ಬುದ್ಧಿಗೆ ನಿಲುಕುವ ಮತ್ತೊಂದು ಸಂಗತಿಯೆಂದರೆ ಈ ಪ್ರತಿಮೆ ನಿಮರ್ಾಣಗೊಂಡಿರುವುದು ಕೇಂದ್ರ ಸಕರ್ಾರದ ಹಣದಲ್ಲಲ್ಲ, ಬದಲಿಗೆ ಗುಜರಾತ್ ಸಕರ್ಾರದ ಹಣದಲ್ಲಿ. ಹೀಗಾಗಿ ಕೇಂದ್ರ ಸಕರ್ಾರಕ್ಕೆ ಕೊಟ್ಟಿರುವ ಯಾವ ನಿಧಿಯೂ ಕೂಡ ಇದಕ್ಕೆ ಬಳಕೆಯಾಗಿರುವುದು ಸಾಧ್ಯವೇ ಇಲ್ಲ. ಇನ್ನು ನಾಲ್ಕನೆಯದು ಇಂಗ್ಲೆಂಡಿನ ದಾರಿದ್ರ್ಯ ಯಾವ ಮಟ್ಟಿಗೆ ಬಂದಿದೆ ಎಂದರೆ ಭಾರತದ ಮುಂದೆ ಭಿಕ್ಷಾ ಪಾತ್ರೆ ಹಿಡಿದು ದಯವಿಟ್ಟು ಹೂಡಿಕೆ ಮಾಡಿ ಎಂದು ನಮ್ಮನ್ನು ಕೇಳಿಕೊಳ್ಳುತ್ತಿದೆ. ಅದರ ಪರಿಣಾಮವಾಗಿಯೇ ಇಂಗ್ಲೆಂಡಿನ ಮೂರನೇ ದೊಡ್ಡ ಹೂಡಿಕೆದಾರರು ನಾವಾಗಿದ್ದೇವೆ ಅಷ್ಟೇ ಅಲ್ಲದೇ ಅಲ್ಲಿ ಎರಡನೇ ದೊಡ್ಡ ಉದ್ಯೋಗ ಸೃಷ್ಟಿ ಮಾಡುವ ರಾಷ್ಟ್ರವೂ ನಾವೇ ಆಗಿದ್ದೇವೆ.


ಹಾಗಂತ ಇಷ್ಟಕ್ಕೂ ಮುಗಿಯುವುದಿಲ್ಲ. 2013 ರ ವೇಳೆಗ ಇಂಗ್ಲೆಂಡ್ ನೀಡುವ ಸಹಾಯಧನದಿಂದ ಭಾರತ ಸಾಕಷ್ಟು ಕಿರಿಕಿರಿ ಅನುಭವಿಸಿತ್ತು. ನೆನಪಿಡಿ. ಈ ಸಹಾಯಧನವನ್ನು ಇಂಗ್ಲೆಂಡು ಸಕರ್ಾರಕ್ಕೆ ನೀಡುವುದಿಲ್ಲ ಬದಲಿಗೆ ತಾನೇ ಆರಿಸಿದ ಸಕರ್ಾರೇತರ ಸಂಸ್ಥೆಗಳಿಗೆ ತಲುಪಿಸುತ್ತದೆ. ಈ ಸಂಸ್ಥೆಗಳೂ ಭಾರತದಲ್ಲಿದ್ದುಕೊಂಡು ಈ ದೇಶದ ಸಾಮಾಜಿಕ ಹಂದರವನ್ನು ನಾಶಪಡಿಸುವಲ್ಲಿ ನಿರಂತರ ಪ್ರಯತ್ನ ಮಾಡುತ್ತಿರುತ್ತದೆ. ಈ ಎನ್ಜಿಒಗಳಲ್ಲಿ ಬಹುತೇಕ ಮಿಷನರಿಗಳಾಗಿದ್ದು ಅವು ಇಲ್ಲಿ ಮತಾಂತರಕ್ಕೂ ಸಾಕಷ್ಟು ಪ್ರಯತ್ನ ಮಾಡುತ್ತವೆ. ನರೇಂದ್ರಮೋದಿಯವರು ಅಧಿಕಾರಕ್ಕೆ ಬಂದೊಡನೆ ಮಾಡಿದ ಮೊದಲ ಕೆಲಸವೆಂದರೆ ವಿದೇಶೀ ಹಣ ಸ್ವೀಕಾರದ ಕಾಯ್ದೆಯ ವಿರುದ್ಧವಾಗಿ ಹಣ ಪಡೆದು ರಾಷ್ಟ್ರವಿರೋಧಿ ಕೃತ್ಯಗಳಲ್ಲಿ ತೊಡಗಿರುವ ಇಂತಹ ಸಂಸ್ಥೆಗಳನ್ನು ಗುರುತಿಸಿ ಅವುಗಳಿಗೆ ಹಣ ಬರದಂತೆ ತಡೆದಿದ್ದುದು. ಭಾರತವನ್ನು ರಿಮೋಟ್ ಕಂಟ್ರೋಲ್ನ ಮೂಲಕ ನಿಯಂತ್ರಿಸುವ ಪ್ರಯತ್ನ ಮಾಡುತ್ತಿದ್ದ ಈ ಅಯೋಗ್ಯ ರಾಷ್ಟ್ರಗಳಿಗೆಲ್ಲಾ ಇದು ನುಂಗಲಾರದು ತುತ್ತಾಯ್ತು. ಹೀಗಾಗಿ ಭಿನ್ನ-ಭಿನ್ನ ಮಾರ್ಗಗಳನ್ನು ಬಳಸಿ ಮೋದಿಯವರನ್ನು ಹಳಿಯುವ ಪ್ರಯತ್ನವೇನೋ ಮಾಡಿದರು. ಅಷ್ಟಾಗಿಯೂ ಈ ಮನುಷ್ಯ ದೈತ್ಯಾಕಾರವಾಗಿ ಬೆಳೆದು ನಿಲ್ಲುತ್ತಿರುವಾಗ ಸಹಿಸಿಕೊಳ್ಳಲಾರದೇ ಪರಚಿಕೊಂಡರು. ಈಗ ಈ ಬಗೆಯ ಕಥೆ ಮುಂದಿಡುತ್ತಿದ್ದಾರೆ. ಎನ್ಜಿಒಗಳಿಗೆ ಕೊಟ್ಟ ಹಣ ಮೂತರ್ಿಗಳಿಗೆ ಹೇಗೆ ಬಳಕೆಯಾಗುತ್ತದೆ ಎಂಬ ಸಾಮಾನ್ಯ ಜ್ಞಾನ ಇಂಗ್ಲೆಂಡಿನ ಸಂಸತ್ ಸದಸ್ಯನಿಗೊಬ್ಬನಿಗಿಲ್ಲವೆಂದರೆ ಅವರ ಬೌದ್ಧಿಕ ದಿವಾಳಿತನ ಯಾವ ಮಟ್ಟಿಗೆ ಆಗಿದೆಯೆಂದು ನಾವೇ ಆಲೋಚಿಸಬೇಕು.


ಇಂಟರ್ನ್ಯಾಶನಲ್ ಕೋಟರ್್ ಆಫ್ ಜಸ್ಟೀಸ್ನ ಚುನಾವಣಾ ಪ್ರಕ್ರಿಯೆಯಲ್ಲಿ ಭಾರತೀಯ ದಲ್ವಿಂದರ್ ಭಂಡಾರಿಯನ್ನು ಎದುರಿಸಲಾಗದೇ ಉಮೇದುವಾರಿಕೆಯನ್ನೇ ಹಿಂತೆಗೆದುಕೊಂಡ ಇಂಗ್ಲೆಂಡಿಗೆ ಭಾರತದ ಮುಂದೆ ತನ್ನ ಯೋಗ್ಯತೆ ಸ್ಪಷ್ಟವಾಗಿಯೇ ಅರಿವಾಗಿದೆ. ಹೀಗಾಗಿಯೇ ಈ ಹಾರಾಟ-ಚೀರಾಟಗಳೆಲ್ಲಾ. ಈ ಬಾರಿ ಮತ್ತೊಮ್ಮೆ ಮೋದಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರಲ್ಲ; ಆಗ ಇವರೆಲ್ಲರ ಸ್ಥಿತಿ ಹೇಗಿರಬಹುದು ಎನ್ನುವುದೇ ನನ್ನನ್ನು ಕಾಡುತ್ತಿರುವ ಪ್ರಶ್ನೆ!

Click to comment

Leave a Reply

Your email address will not be published. Required fields are marked *

Most Popular

To Top