National

ಪಟೇಲರ ಪ್ರತಿಮೆಯೆದುರು ನಿಂತು ಬಾಯಿ ಬಡಕೊಂಡವರ ಕಥೆ!

ಗುಜರಾತಿನ ಕೇವಡಿಯಾದಲ್ಲಿ 3000 ಕೋಟಿ ರೂಪಾಯಿ ವೆಚ್ಚದಲ್ಲಿ ಅನಾವರಣಗೊಂಡಿರುವ 182 ಮೀಟರ್ ಉದ್ದದ ಸರದಾರ್ ವಲ್ಲಭಬಾಯಿ ಪಟೇಲರ ಪ್ರತಿಮೆ ಜಾಗತಿಕ ಮಟ್ಟದಲ್ಲಿ ಗೌರವವನ್ನು ಗಳಿಸಿರುವುದು ಸತ್ಯವಾದರೆ ಇತ್ತ ದೇಶದೊಳಗೆ ಏಳು ದಶಕಗಳಷ್ಟು ಹಳೆಯ ಭಾರತೀಯ ರಾಜಕಾರಣವನ್ನು ಮತ್ತೆ ಮೆಲುಕು ಹಾಕುವಂತೆ ಮಾಡಿದೆ. ‘ಸರದಾರ್ ಪಟೇಲರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ಅಖಂಡ ಮತ್ತು ಜಾತ್ಯತೀತ ಭಾರತಕ್ಕೋಸ್ಕರ ಬಡಿದಾಡಿದ ದೇಶಭಕ್ತರಾಗಿದ್ದರು. ಅವರಿಗೊಂದು ಪ್ರಬಲ ಇಚ್ಛಾಶಕ್ತಿ ಇತ್ತು. ಅವರಿಗೆ ಕೋಮುವಾದವನ್ನು ಕಂಡರಾಗುತ್ತಿರಲಿಲ್ಲ. ಅವರು ಪ್ರಖರ ಕಾಂಗ್ರೆಸ್ವಾದಿಯಾಗಿದ್ದರು’ ಎಂದು ಟ್ವೀಟ್ ಮಾಡಿದ್ದು ಬೇರೆ ಯಾರೂ ಅಲ್ಲ, ಕಾಂಗ್ರೆಸ್ಸಿನ ಈಗಿನ ಅಧ್ಯಕ್ಷ ರಾಹುಲ್. ‘ಪಟೇಲ್ ಸರಳ ಜೀವಿಯಾಗಿದ್ದು ಮಹಾತ್ಮಾ ಗಾಂಧೀಜಿಯವರ ಕಟ್ಟರ್ ಅನುಯಾಯಿಯಾಗಿದ್ದರು’ ಎಂದಿದ್ದು ಕಾಂಗ್ರೆಸ್ಸಿನ ಫರಾಗೊ ನಾಯಕ ಶಶಿತರೂರ್. ‘ಪಟೇಲರು ಮಹಾನ್ ನಾಯಕರಾಗಿದ್ದು ಈ ಪ್ರತಿಮೆ ನಿಮರ್ಾಣದಲ್ಲಿ ದುರುದ್ದೇಶವಿದೆ’ ಎಂದಿದ್ದು ಕನರ್ಾಟಕದ ಖ್ಯಾತ ನಾಯಕ ಮಲ್ಲಿಕಾಜರ್ುನ್ ಖಗರ್ೆ. ‘ನಾನು ಪ್ರತಿಮೆಗಳನ್ನು ನಿಲ್ಲಿಸಿದಾಗ ಕೂಗಾಡಿದ್ದ ಭಾಜಪ ಈಗ ಪಟೇಲರ ಇಷ್ಟು ದೊಡ್ಡ ಪ್ರತಿಮೆ ಮಾಡಿದೆ. ಇದು ನಷ್ಟವಲ್ಲವೇನು?’ ಎಂದು ಪ್ರಶ್ನಿಸಿರೋದು ಮಾಯಾವತಿ. ಒಟ್ಟಿನಲ್ಲಿ ಪಟೇಲರ ಮೂತರ್ಿ ಅಲ್ಲಿ ನಿಂತರೆ ಇಲ್ಲಿ ಎದುರು ಪಕ್ಷಗಳವರೆಲ್ಲ ಮೈ ಪರಚಿಕೊಳ್ಳುತ್ತಿದ್ದಾರೆ. ಪ್ರತಿಕ್ರಿಯಿಸಲಾಗದೇ ತಿಣುಕಾಡುತ್ತಿರುವುದು ಮಾತ್ರ ಸ್ವತಃ ಕಾಂಗ್ರೆಸ್ಸು. ಕಾಂಗ್ರೆಸ್ಗೆ ಇಂದು ಅನೇಕ ಪ್ರಶ್ನೆಗಳಿಗೆ ಉತ್ತರ ಕೊಡಲಾಗುತ್ತಿಲ್ಲ.


ಸ್ವಾತಂತ್ರ್ಯಕ್ಕೂ ಒಂದು ವರ್ಷ ಮುನ್ನ ಮುಂದಿನ ಪ್ರಧಾನಿ ಯಾರಾಗಬೇಕೆಂಬ ಚಚರ್ೆ ನಡೆದಾಗ ಕಾಂಗ್ರೆಸ್ಸಿನ ಕಾರ್ಯಕಾರಿ ಸಮಿತಿಯ ಸದಸ್ಯರೆಲ್ಲರೂ ಆಯ್ಕೆ ಮಾಡಿದ್ದು ಸರದಾರ್ ಪಟೇಲರನ್ನೇ. ಮಹಾತ್ಮಾ ಗಾಂಧೀಜಿಯವರ ಮಧ್ಯ ಪ್ರವೇಶದಿಂದಾಗಿ ಜವಾಹರ್ಲಾಲ್ ನೆಹರೂ ಪ್ರಧಾನಿ ಕುಚರ್ಿಯನ್ನೇರಿದರು. ಹಾಗೆ ನೋಡಿದರೆ ನೆಹರೂ ಅಡಿಯಲ್ಲಿ ಕೆಲಸ ಮಾಡಲಾಗದೆಂದು ಪಟೇಲರು ಆಕ್ಷೇಪವೆತ್ತಿದರೂ ಕೂಡ. ಮಹಾತ್ಮಾ ಗಾಂಧೀಜಿಯವರು ತಾಕೀತು ಮಾಡಿದ್ದರಿಂದಲೇ ಪಟೇಲರು ಕ್ಯಾಬಿನೆಟ್ಟನ್ನು ಸೇರುವಂತಾಗಿದ್ದು. ಅನೇಕ ಬಾರಿ ನೆಹರೂ ಜೊತೆಗಿನ ತಮ್ಮ ಅಸಮಾಧಾನವನ್ನು ಆಪ್ತರ ಬಳಿ ಅವರು ತೋಡಿಕೊಂಡೇ ಇದ್ದರು. ಪಟೇಲರ ಖಡಕ್ಕು ವ್ಯಕ್ತಿತ್ವದೊಂದಿಗೆ ಸಂಭಾಳಿಸಲಾಗದೇ ಹೆಣಗಾಡುತ್ತಿದ್ದ ಶೋಕಿಲಾಲ ನೆಹರೂ ಅನೇಕ ಬಾರಿ ರಾಜಿನಾಮೆ ಕೊಟ್ಟುಬಿಡುತ್ತೇನೆಂದು ಬೆದರಿಸಿಯೂ ಇದ್ದರು. ಬಹುಶಃ ಈ ವಿಚಾರದಲ್ಲಿ ಒಮ್ಮೆಯಾದರೂ ಪಟೇಲರು ಖಡಕ್ಕಾಗಿ ಪ್ರತಿಕ್ರಿಯಿಸಿದ್ದರೆ ಭಾರತದ ಇತಿಹಾಸವೇ ಬದಲಾಗಿರುತ್ತಿತ್ತೇನೋ!


ಬಿಡಿ. ಕಳೆದು ಹೋದದ್ದಕ್ಕೆ ತುಂಬಾ ಚಿಂತಿಸಿ ಫಲವಿಲ್ಲ. ಇಂದು ಪಟೇಲರ ಗುಣಗಾನ ಮಾಡುತ್ತಿರುವ ಕಾಂಗ್ರೆಸ್ಸು ಪಟೇಲರ ನಿರ್ಣಯಗಳನ್ನೆಲ್ಲಾ ಆನಂತರದ ದಿನಗಳಲ್ಲಿ ಹೇಗೆ ಗಾಳಿಗೆ ತೂರಿತೆಂಬುದಕ್ಕೆ ಒಂದು ನಿದರ್ಶನ ಕೊಡುತ್ತೇನೆ. ಎಲ್ಲಾ ಬಗೆಯ ಸಾಹಸ ಮಾಡಿ ಪಟೇಲರು ರಾಜರುಗಳನ್ನು ಒಲಿಸಿ ಅವರು ಆಳ್ವಿಕೆ ನಡೆಸುತ್ತಿದ್ದ ಭೂಭಾಗಗಳನ್ನು ಭಾರತಕ್ಕೆ ಸೇರಿಸಿದ್ದರು. ಭಾರತದ 48 ಪ್ರತಿಶತ ಭೂಭಾಗವನ್ನು ಮತ್ತು 28 ಪ್ರತಿಶತ ಜನಸಂಖ್ಯೆಯನ್ನು ಈ ರಾಜಮನೆತನಗಳು ಹೊಂದಿದ್ದವು. ಒಬ್ಬೊಬ್ಬರನ್ನೂ ಮಾತನಾಡಿಸಿ ಸಾಮ, ಧಾನ, ಭೇದ, ದಂಡೋಪಾಯಗಳನ್ನೆಲ್ಲಾ ಬುದ್ಧಿವಂತಿಕೆಯಿಂದ ಬಳಸಿದ ಸರದಾರ್ ಪಟೇಲರು ಈ ರಾಜರುಗಳನ್ನು ಒಲಿಸಿ ಅವರಿಂದ ಭೂಭಾಗವನ್ನು ಪಡೆದುಕೊಂಡಿದ್ದಲ್ಲದೇ ಭಾರತಕ್ಕೆ ನಿಷ್ಠವಾಗಿರುವ ಮಾತನ್ನು ಅವರಿಂದ ಪಡೆದುಕೊಂಡರು. ಇದರಿಂದಾಗಿಯೇ ಸಾವಿರಾರು ಹಳ್ಳಿಗಳು, ಸಾವಿರಾರು ಎಕರೆ ಅಲ್ಲಲ್ಲಿ ಹರಡಿಕೊಂಡಿದ್ದ ಜಾಗೀರು ಭೂಮಿ, ಅರಮನೆಗಳು, ಮ್ಯೂಸಿಯಂಗಳು, ಕಟ್ಟಡಗಳು, ವಿಮಾನಗಳು, ಹಣ ಮತ್ತು 77 ಕೋಟಿ ರೂಪಾಯಿಯಷ್ಟು ಹೂಡಿಕೆ ಅಲ್ಲದೇ 12,000 ಮೈಲಿ ಉದ್ದದ ರೈಲ್ವೇ ವ್ಯವಸ್ಥೆ ಇವೆಲ್ಲವೂ ಕೇಂದ್ರಕ್ಕೆ ಯಾವುದೇ ಪ್ರತಿಕ್ರಿಯೆಯಿಲ್ಲದೇ ಒಪ್ಪಿಸಲ್ಪಟ್ಟಿದ್ದವು. ಇದಕ್ಕೆ ಪ್ರತಿಯಾಗಿ ಪ್ರತಿ ರಾಜ್ಯಗಳ ವಾಷರ್ಿಕ ಆದಾಯದ ಎಂಟೂವರೆ ಪ್ರತಿಶತದಷ್ಟು ಹಣವನ್ನು ಕೇಂದ್ರಸಕರ್ಾರ ಅವರಿಗೆ ಕೊಡಬೇಕೆಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಕೆಲವು ರಾಜರುಗಳಿಗೆ ಕೆಲವು ಲಕ್ಷದಷ್ಟು ಬಂದರೆ ಇನ್ನೂ ಕೆಲವರಿಗೆ ಸಾವಿರ ರೂಪಾಯಿಯೂ ವರ್ಷಕ್ಕೆ ದಾಟುತ್ತಿರಲಿಲ್ಲ. ಹೈದರಾಬಾದ್ ನಿಜಾಮನಿಗೆ ಅತ್ಯಂತ ಹೆಚ್ಚು ಎಂದರೆ 43 ಲಕ್ಷ ರೂಪಾಯಿ, ಕಟೋಡಿಯಾದ ರಾಜನಿಗೆ ಕನಿಷ್ಠ ಎಂದರೆ 192 ರೂಪಾಯಿ ಸಿಗುತ್ತಿತ್ತು. 1947 ರಲ್ಲಿ ಭಾರತ ಸಕರ್ಾರಕ್ಕೆ ಈ ಹೊರೆ ಇದ್ದದ್ದು ಆರು ಕೋಟಿ ರೂಪಾಯಿಯಷ್ಟು. ಕಾಲಕ್ರಮದಲ್ಲಿ ಇದನ್ನು ಕಡಿತಗೊಳಿಸುತ್ತಾ ಬಂದ ನಂತರ ಇದು 1970 ರ ವೇಳೆಗೆ 4 ಕೋಟಿ ರೂಪಾಯಿ ಇತ್ತು. ಸ್ವಾತಂತ್ರ್ಯದ ಹೊಸ್ತಿಲಲ್ಲಿ ಸಂವಿಧಾನದಲ್ಲಿ ಈ ರಾಜರುಗಳ ಕುರಿತಂತೆ ಈ ಧನಸಹಾಯದ ಆಲೋಚನೆಯನ್ನು ಸೇರಿಸಬೇಕೆಂದು ಆಗ್ರಹ ಮಂಡಿಸಿದ ಸರದಾರ್ ಪಟೇಲರು ಮನಸೂರೆಗೊಳ್ಳುವ ಭಾಷಣವೊಂದನ್ನು ಮಾಡಿದರು. ‘ರಕ್ತರಹಿತ ಕ್ರಾಂತಿಯೊಂದರ ಮೂಲಕ ಲಕ್ಷಾಂತರ ಜನರನ್ನು ಭಾರತದ ತೆಕ್ಕೆಗೆ ಸೇರಿಸಿದ್ದ ಈ ಪ್ರಯತ್ನಕ್ಕೆ ನಾವು ಕೊಡಮಾಡುತ್ತಿರುವುದು ಅತ್ಯಲ್ಪ’ ಎಂಬ ಅವರ ಮಾತು ಎಲ್ಲ ಸದಸ್ಯರಿಗೂ ಒಪ್ಪಿಗೆಯಾಗಿತ್ತು. ಸರದಾರ್ ಪಟೇಲರು ಗುಜರಾತಿಯೇ ಅಲ್ಲವೇನು?! ಲೆಕ್ಕಾಚಾರದಲ್ಲಿ ಯಾವಾಗಲೂ ಒಂದು ಕೈ ಮುಂದು. ಸದಸ್ಯರ ಪ್ರತಿರೋಧ ಇಲ್ಲದಿರಲೆಂದು ಮಧ್ಯ ಭಾರತವೊಂದರಲ್ಲೇ ರಾಜರುಗಳಿಂದ ಪಡೆದುಕೊಂಡ ಆಸ್ತಿಯನ್ನು ಹೂಡಿಕೆ ಮಾಡಿದರೂ ಸಿಗುವ ಬಡ್ಡಿಯಲ್ಲಿ ಈ ಹಣ ಸಂದಾಯ ಮಾಡಬಹುದೆಂದು ಅರ್ಥವಾಗುವಂತೆ ಬಿಡಿಸಿ ಹೇಳಿದರು. ಎಲ್ಲರೂ ಒಪ್ಪಿಕೊಂಡ ನಂತರವೇ ಸ್ವತಂತ್ರ ಭಾರತದ ಸಕರ್ಾರ ರಾಜರುಗಳೊಂದಿಗೆ ಒಂದು ಒಪ್ಪಂದಕ್ಕೆ ಬಂದಿತ್ತು.


1967 ರಲ್ಲಿ ಈ ರಾಜರುಗಳಲ್ಲಿ ಅನೇಕರು ಸಿ.ರಾಜಗೋಪಾಲಾಚಾರಿಯವರ ಸ್ವತಂತ್ರ ಪಕ್ಷಕ್ಕೆ ಬೆಂಬಲಿಸಿದರು. ಕಾಂಗ್ರೆಸ್ ಅಭ್ಯಥರ್ಿಗಳನ್ನು ಸೋಲಿಸುವುದರಲ್ಲಿ ಅವರೆಲ್ಲರ ಪಾತ್ರ ಜೋರಾಗಿತ್ತು. ಕುಪಿತ ಇಂದಿರಾ ರಾಜರುಗಳಿಗೆ ಸಿಗುತ್ತಿದ್ದ ಸಕರ್ಾರದ ಧನಸಹಾಯವನ್ನು ತಡೆಯಬೇಕೆಂದು ಹಠಕ್ಕೆ ಬಿದ್ದಳು. 1967 ರ ಜೂನ್ 25ಕ್ಕೆ ಅಖಿಲ ಭಾರತ ಕಾಂಗ್ರೆಸ್ ಒಂದು ರೆಸಲ್ಯೂಷನ್ ಪಾಸ್ ಮಾಡಿ ಸಂವಿಧಾನಕ್ಕೆ ತಿದ್ದುಪಡಿ ತರಲೆತ್ನಿಸಿತು. 1970 ರಲ್ಲಿ ಲೋಕಸಭೆಯಲ್ಲಿ 332 ಕ್ಕೆ 154 ವೋಟುಗಳಿಂದ ಗೆಲುವು ಸಾಧಿಸಿದ ಈ ನಿರ್ಣಯ ರಾಜಸಭೆಯಲ್ಲಿ ಸೋತು ಹೋಯಿತು. ಮುಂದೆ ಇಂದಿರಾ ಅಧ್ಯಕ್ಷರಾದ ವಿ.ವಿ ಗಿರಿಯವರಿಗೆ ಒತ್ತಡ ತಂದು ಎಲ್ಲ ರಾಜರುಗಳನ್ನು ಅಮಾನ್ಯ ಮಾಡುವ ನಿರ್ಣಯ ಹೊರಹಾಕಿದರು. ಇದನ್ನು ಪ್ರಶ್ನಿಸಿ ಪಾಲ್ಕಿವಾಲಾ ಸವರ್ೋಚ್ಚ ನ್ಯಾಯಾಲಯಕ್ಕೆ ಹೋದರು. 1971 ರ ಚುನಾವಣೆಯಲ್ಲಿ ಬಹುಮತದಿಂದ ಗೆಲುವು ಸಾಧಿಸಿದ ಇಂದಿರಾ ಸಂವಿಧಾನದಿಂದಲೇ ರಾಜರುಗಳಿಗೆ ಸಿಗಬೇಕಾಗಿದ್ದ ಸವಲತ್ತಿನ ಅಂಶಗಳನ್ನು ಕಿತ್ತು ಬಿಸಾಡಿದರು. ಇಪ್ಪತ್ತೇ ವರ್ಷಗಳಲ್ಲಿ ಕಾಂಗ್ರೆಸ್ಸು ತನ್ನದ್ದೇ ನಾಯಕನೊಬ್ಬನ ಆಗ್ರಹದ ನಿರ್ಣಯವನ್ನು ಮೂಲೊಗುಂಪು ಮಾಡಿತು. ಅದು ನಾಯಕನೊಬ್ಬನ ನಿರ್ಣಯವಲ್ಲ. ಇಡಿಯ ಭಾರತ ಸಕರ್ಾರದ ಅಥವಾ ಈ ರಾಷ್ಟ್ರದ ನಿರ್ಣಯ. ಈ ರಾಷ್ಟ್ರ ತನ್ನ ಜನರೊಂದಿಗೆ ಮಾಡಿಕೊಂಡ ಒಪ್ಪಂದವೊಂದನ್ನು ಈ ರಾಷ್ಟ್ರವೇ ಮುರಿದುಬಿಡುವುದೆಂದರೆ ಅದಕ್ಕಿಂತಲೂ ಅವಮಾನ ಮತ್ತೊಂದಿಲ್ಲ. ಅಷ್ಡಕ್ಕೂ ಆ ವೇಳೆಗೆ ರಾಜರಿಗೆಂದು ಸಕರ್ಾರ ವ್ಯಯಿಸುತ್ತಿದ್ದ ಹಣ 4 ಕೋಟಿ ರೂಪಾಯಿಯನ್ನೂ ದಾಟುತ್ತಿರಲಿಲ್ಲ.

ಕಾಂಗ್ರೆಸ್ಸಿಗೆ ಇದು ಹೊಸತೇನಲ್ಲ. ಒಂದು ಪರಿವಾರ ಹೇಳಿದ್ದನ್ನು ಇಡಿ ರಾಷ್ಟ್ರವೆಲ್ಲಾ ಕೇಳಬೇಕೆಂಬ ಅವರ ತುಡಿತಕ್ಕೆ ಬ್ರೇಕು ಬಿದ್ದಿರುವುದೇ ಈಗ. ಸರದಾರ್ ಪಟೇಲರು ತಮ್ಮ ಗುರುವೆಂದು ಭಾವಿಸುತ್ತಿದ್ದ ಮಹಾತ್ಮಾ ಗಾಂಧೀಜಿಯವರ ಮಾತನ್ನು ಧಿಕ್ಕರಿಸಿ ಅಂದೇ ರಾಷ್ಟ್ರ ಹಿತಕ್ಕಾಗಿ ಪ್ರಧಾನಿಯಾಗಿಬಿಟ್ಟಿರುತ್ತಿದ್ದರೆ ನಾವಿಂದು ಸರದಾರ್ ಪಟೇಲರ ಮೂತರ್ಿಯನ್ನೇ ನಿಮರ್ಿಸಬೇಕಾಗುತ್ತಿರಲಿಲ್ಲ. ಆದರೆ ಕಳೆದ ನಾಲ್ಕು ದಶಕಗಳಲ್ಲಿ ದೇಶದ ಏಕತೆ, ಅಖಂಡತೆಗೋಸ್ಕರ ಶ್ರಮಿಸಿದ ಆ ವ್ಯಕ್ತಿಯನ್ನು ಕಾಂಗ್ರೆಸ್ಸು ಕಾಲ ಕಸದಂತೆ ಕಂಡಿತಲ್ಲ, ಅವರ ವ್ಯಕ್ತಿತ್ವ ನೆಹರೂ ಪರಿವಾರದ ಎಲ್ಲರನ್ನೂ ಒಬ್ಬರ ಮೇಲೊಬ್ಬರನ್ನು ನಿಲ್ಲಿಸಿದರೆ ಎಷ್ಟು ಎತ್ತರವಾಗಬಹುದೋ ಅದಕ್ಕಿಂತಲೂ ಅಗಾಧವಾದುದು ಎಂದು ತೋರಿಸಲಿಕ್ಕೆ ಈ ಪ್ರತಿಮೆ ಖಂಡಿತ ಬೇಕಿತ್ತು.


ನರೇಂದ್ರಮೋದಿ ಆರಂಭದಿಂದಲೂ ಸರದಾರ್ ಪಟೇಲರಿಗೆ ಗೌರವವನ್ನು ಸಲ್ಲಿಸುತ್ತಲೇ ಬಂದವರು. ಈ ಪ್ರತಿಮೆಯ ನಿಮರ್ಾಣದ ಅವರ ಕನಸು ಬಹಳ ಹಳೆಯದ್ದು. ಅದು 2019 ರ ಚುನಾವಣೆಯ ವೇಳೆಗೆ ಮುಗಿದಿದೆ ಅಷ್ಟೇ. ಇದನ್ನು ಲೋಕಾರ್ಪಣೆ ಮಾಡುವಾಗ ಅವರು ಹೇಳಿದ ಮಾತು ಅಕ್ಷರಶಃ ಸತ್ಯ. ‘ಪಟೇಲರಿಲ್ಲದೇ ಹೋಗಿದ್ದರೆ ಶಿವಭಕ್ತರೆನಿಸಿಕೊಂಡ ಕೆಲವರು ಸೋಮನಾಥಕ್ಕೆ ಹೋಗಲು ವೀಸಾ ಪಡೆಯಬೇಕಾಗುತ್ತಿತ್ತು. ಚಾರ್ಮಿನಾರ್ ನೋಡಲು ಮತ್ತೊಂದು ರಾಷ್ಟ್ರದ ವೀಸಾ ಬೇಕಾಗುತ್ತಿತ್ತು’. ಪ್ರತಿಮೆ ಅನಾವರಣದ ದಿನ ಪ್ರಧಾನಸೇವಕರು ಪಟೇಲರ ಪದತಲದಲ್ಲಿ ನಿಂತದ್ದನ್ನು ಕಂಡು ಸಹಿಸಲಾರದೇ ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಪಕ್ಷಿಯೊಂದರ ಹಿಕ್ಕೆಗೆ ಅವರನ್ನು ಹೋಲಿಸಿದ್ದು ನೀಚೋಪಮೆಯಾಗಿತ್ತು. ಇಡಿಯ ಕಾಂಗ್ರೆಸ್ಸಿನ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿತ್ತು. ಮಹಾನಾಯಕರುಗಳನ್ನು ಕಾಂಗ್ರೆಸ್ ದಶಕಗಳಿಂದಲೂ ನಡೆಸಿಕೊಂಡಿದ್ದು ಹೀಗೆಯೇ. ರಾಷ್ಟ್ರವಾದಿ ನಾಯಕನೊಬ್ಬ ಈಗ ಅಧಿಕಾರಕ್ಕೆ ಬಂದಿರುವುದು ಕಾಂಗ್ರೆಸ್ಸಿಗೆ ನುಂಗಲಾರದ ತುತ್ತೇ. ಭಾರತವೀಗ ಜಗತ್ತಿನ ಅತ್ಯಂತ ಎತ್ತರದ ಪ್ರತಿಮೆಗಳ ಸಾಲಿನಲ್ಲಿ ಜಾಗತಿಕ ಭೂಪಟದಲ್ಲಿ ಅಗ್ರಣಿಯಾಗಿ ನಿಂತಿದೆ. 3000 ಕೋಟಿ ಹೆಚ್ಚಾಯ್ತೆಂದು ಬಡಬಡಿಸುತ್ತಿರುವವರು 2ಜಿ ಹಗರಣದಲ್ಲಿನ 1,76,000 ಕೋಟಿ ರೂಪಾಯಿಯ ಒಂದಂಶವೂ ಇದಲ್ಲವೆಂದು ಮರೆತೇ ಬಿಟ್ಟಿದ್ದಾರೆ. ಇಷ್ಟಕ್ಕೂ ಅದು ಹಗರಣ, ಇದು ರಾಷ್ಟ್ರಾರ್ಪಣ!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top