National

ನೋಟು ಬ್ಯಾನಿಗಿಂತ ನೋಟಾ ಬ್ಯಾನ್ ಮಾಡಿದರೆ ಆಪ್ ಗೆ ಒಳ್ಳೆಯದೇನೋ!!

ನಿನ್ನೆ ಇನ್ನೂ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಂದಿದೆ. ಎಲ್ಲಾ ಸುದ್ದಿ ಮಾಧ್ಯಮಗಳೂ ರಾಷ್ಟ್ರೀಯ ಪಕ್ಷಗಳ ವೋಟ್ ಶೇರ್ ಏನು, ಎಲ್ಲಿ ಯಾವ ಪಕ್ಷ ಅಧಿಕಾರ ಮಾಡಿದೆ, ಎಲ್ಲಿ ಯಾವ ಪಕ್ಷ ಪಾಠ ಕಲಿತಿದೆ ಎಂಬ ವರದಿಯನ್ನೆಲ್ಲಾ ಜನರ ಮುಂದಿಟ್ಟಿದ್ದಾರೆ. ಇಲ್ಲೊಂದು ಅಪರೂಪದ ವರದಿ ಹೊರಬಂದಿದೆ.

ಆಮ್ ಆದ್ಮಿ ಪಕ್ಷ, ಸಮಾಜವಾದಿ ಪಕ್ಷ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಇವೆಲ್ಲವುಗಳಿಗಿಂತ ನೋಟಾ ಅಥವಾ ಮೇಲಿನ ಯಾವುದೂ ಇಲ್ಲ ಎನ್ನುವ ಆಯ್ಕೆಗೆ ಜನ ಹೆಚ್ಚು ಆದ್ಯತೆ ನೀಡಿದ್ದಾರೆ! ಛತ್ತೀಸ್ ಘಡದಲ್ಲಿ ನೋಟಾಗೆ 2.0 ಪ್ರತಿಶತ ವೋಟು ಹಂಚಿಕೆಯಾಗಿದ್ದರೆ, ಮಿಜೋರಾಂನಲ್ಲಿ 0.5 ಪ್ರತಿಶತ ಹಾಗೂ ಉಳಿದ ಮೂರು ರಾಜ್ಯಗಳು, ಅಂದರೆ ರಾಜಸ್ಥಾನ, ಮಧ್ಯಪ್ರದೇಶ್, ತೆಲಂಗಾಣಗಳಲ್ಲಿ ಅಂದಾಜು 1.2 ಪ್ರತಿಶತದಷ್ಟು ವೋಟು ನೋಟಾಗೆ ಹಂಚಿಕೆಯಾಗಿದೆ ಎಂದು ಚುನಾವಣಾ ಆಯೋಗ ವರದಿ ಪ್ರಕಟ ಮಾಡಿದೆ.

ಛತ್ತೀಸ್ ಘಡದಲ್ಲಿ ಉತ್ತರಪ್ರದೇಶದ ಸಮಾಜವಾದಿ ಪಕ್ಷ, ಮಹಾರಾಷ್ಟ್ರದ ಎನ್ ಸಿ ಪಿ  ಮತ್ತು ಆಮ್ ಆದ್ಮಿ ಪಕ್ಷ ತಮ್ಮ ಅದೃಷ್ಟ ಪರೀಕ್ಷೆ ನಡೆಸಿದವು. ಆಪ್ ಗೆ 0.9 ಪ್ರತಿಶತ ವೋಟು, ಎನ್ ಸಿ ಪಿ  ಮತ್ತು ಎಸ್ ಪಿ ಗೆ ತಲಾ 0.2 ಪ್ರತಿಶತ ಮತ್ತು  ಸಿಪಿಐ ಗೆ 0.3 ಪ್ರತಿಶತ ವೋಟು ಹಂಚಿಕೆಯಾಗಿದೆ. ನೋಟಾ ಇವೆಲ್ಲವನ್ನೂ ಹಿಂದಿಕ್ಕಿ 2.0 ಪ್ರತಿಶತ ಅಂದರೆ ಸುಮಾರು 2,82,000 ವೋಟುಗಳನ್ನು ಪಡೆದುಕೊಂಡಿದೆ. ಇನ್ನೂ ಆಶ್ಚರ್ಯಕರ ಸಂಗತಿಯೆಂದರೆ, ಆಪ್, ಎಸ್ಪಿ, ಸಿಪಿಐ ಮತ್ತು ಎನ್ಸಿಪಿ ಇವೆಲ್ಲವನ್ನೂ ಸೇರಿಸಿ ಲೆಕ್ಕ ಹಾಕಿದರೂ ನೋಟಾಗಿಂತ ಕಡಿಮೆಯೇ! ಇವೆಲ್ಲವೂ ಒಟ್ಟಾರೆ ಗಳಿಸಿದ ವೋಟುಗಳು 2,22,000! ಉಳಿದ ನಾಲ್ಕು ರಾಜ್ಯಗಳಿಗಿಂತ ಛತ್ತೀಸ್ ಘಡದಲ್ಲಿ ನೋಟಾಗೆ ಹೆಚ್ಚು ವೋಟು ಹಂಚಿಕೆಯಾಗಿರುವುದು ಕಂಡು ಬಂದಿದೆ.

ಮಧ್ಯಪ್ರದೇಶದಲ್ಲಿ ಆಪ್ ತನ್ನ ಎಲ್ಲಾ ಅಭ್ಯರ್ಥಿಗಳನ್ನು ಕಳೆದುಕೊಂಡಿತು. 230 ಕ್ಷೇತ್ರಗಳಲ್ಲಿ 208 ಕ್ಷೇತ್ರಗಳಿಗೆ ಆಪ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಕೆಲವರಂತೂ ಠೇವಣಿಯನ್ನೂ ಕಳೆದುಕೊಂಡಿದ್ದಾರೆ. ಆಪ್ ನ ಮುಖ್ಯಮಂತ್ರಿ ಅಭ್ಯರ್ಥಿ ಅಲೋಕ್ ಅಗರ್ವಾಲ್ ಗಳಿಸಿದ ಒಟ್ಟು ವೋಟು 823!! ಆಪ್ 0.7 ಪ್ರತಿಶತದಷ್ಟು ವೋಟು ಹಂಚಿಕೆ ಕಂಡರೆ, ನೋಟಾಗೆ 1.4 ಪ್ರತಿಶತದಷ್ಟು! ಇಲ್ಲಿ ಎಸ್ಪಿ ಆಪ್ ಗಿಂತ ಚೆನ್ನಾಗಿಯೇ ಮಾಡಿ ತೋರಿಸಿದೆಯಾದರೂ ನೋಟಾವನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ. ಇಲ್ಲಿ ಎಸ್ಪಿಗೆ 1.3 ಪ್ರತಿಶತ ವೋಟು ಹಂಚಿಕೆಯಾಗಿದೆ!

ರಾಜಸ್ಥಾನದಲ್ಲಿ ಆಪ್ ಗೆ 0.4 ಪ್ರತಿಶತ ಮತ್ತು ಎಸ್ಪಿ ಹಾಗೂ ಎನ್ಸಿಪಿಗೆ ತಲಾ 0.2 ಪ್ರತಿಶತ ವೋಟು ಹಂಚಿಕೆ ಕಂಡಿದೆ. ನೋಟಾಗೆ 1.3 ಪ್ರತಿಶತ ವೋಟ್ ಶೇರ್ ಸಿಕ್ಕಿದೆ. ತೆಲಂಗಾಣದಲ್ಲಿ ಸಿಪಿಐ ಮತ್ತು ಸಿಪಿಎಂ ತಲಾ 0.4 ಪ್ರತಿಶತ ವೋಟು ಶೇರ್ ಪಡೆದರೆ, ನೋಟಾ 1.1 ಪ್ರತಿಶತ ವೋಟ್ ಶೇರ್ ಪಡೆದಿದೆ.

ಆಪ್ ಗೆ ಇದು ಮೊದಲನೆಯ ಬಾರಿಯೇನಲ್ಲ. ಕಳೆದ ವರ್ಷದ ಗುಜರಾತಿನ ಚುನಾವಣೆಯಲ್ಲಿ ಆಪ್ 182 ರಲ್ಲಿ 33 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಅಲ್ಲಿ ಎಲ್ಲಾ ಅಭ್ಯರ್ಥಿಗಳೂ ತಮ್ಮ ಠೇವಣಿಯನ್ನು ಕಳೆದುಕೊಂಡಿದ್ದರು! ನೋಟಾಗೆ ಆಪ್ ಗಿಂತ ಹೆಚ್ಚು ವೋಟ್ ಶೇರ್ ಲಭಿಸಿತ್ತು.

ಆಮ್ ಆದ್ಮಿ ಪಕ್ಷದಿಂದ ಹೊರಬಂದ ದೆಹಲಿಯ ಶಾಸಕ ಕಪಿಲ್ ಮಿಶ್ರಾ ಟ್ವೀಟ್ ಮಾಡಿ, ‘ಆಪ್ ಛತ್ತೀಸ್ ಘಡ ಮತ್ತು ಮಧ್ಯಪ್ರದೇಶಗಳಲ್ಲಿ ಸ್ಪರ್ಧಿಸಿತ್ತು. ದೆಹಲಿಯ ಮುಖ್ಯಮಂತ್ರಿ ಆಪ್ ನ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ರ್ಯಾಲಿ ನಡೆಸಿದ ಕಡೆಗಳಲ್ಲೂ ಆಪ್ ತನ್ನ ಠೇವಣಿಯನ್ನು ಕಳೆದುಕೊಂಡಿದೆ. ಅವರಿಗೆ ನೋಟಾಗಿಂತ ಕಡಿಮೆ ವೋಟು ಸಿಕ್ಕಿದೆ’ ಎಂದಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top