National

ನೇತಾಜಿಯ ಭಾರತ ಸರ್ಕಾರಕ್ಕೆ ಭರ್ತಿ ಎಪ್ಪತ್ತೈದು!

1943 ಅಕ್ಟೋಬರ್ 21.
ಸಿಂಗಾಪುರದ ಕ್ಯ್ಯಾಥೆ ಸಿನಿಮಾ ಭವನ.
ಜಪಾನ್, ಥಾಯ್ಲ್ಯಾಂಡ್, ಬಮರ್ಾ, ಬೋನರ್ಿಯೊ ಮೊದಲಾದ ದೇಶಗಳ ಪ್ರತಿನಿಧಿಗಳು.
ಸ್ವತಂತ್ರ ಭಾರತದ ಹಂಗಾಮಿ ಸಕರ್ಾರದ ರಚನೆ.
ಪ್ರಧಾನಿಯಾಗಿ ಸುಭಾಷ್ಚಂದ್ರ ಬೋಸರ ಪ್ರಮಾಣವಚನ ಸ್ವೀಕಾರ.
ಏನೆಂದು ಆಲೋಚಿಸುತ್ತಿದ್ದೀರಾ? ಈ ದೇಶದ ಸ್ವಾತಂತ್ರ್ಯ ಗಳಿಕೆಗೂ ಮುನ್ನ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ವಾತಂತ್ರ್ಯದ ಹೋರಾಟಕ್ಕೆ ಬೆಂಬಲ ಗಳಿಸಲೆಂದು ಸುಭಾಷ್ಚಂದ್ರ ಬೋಸರು ಅಧಿಕೃತವಾಗಿ ಸ್ಥಾಪಿಸಿದ ಭಾರತ ಸಕರ್ಾರ ಅದು. ಪ್ರಮಾಣ ವಚನ ಸ್ವೀಕಾರ ಸಮಾರಂಭ ಕಾಟಾಚಾರದ್ದೇನೂ ಆಗಿರಲಿಲ್ಲ. ಭಾರತದ ಗೌರವಕ್ಕೆ ಘನತೆಗೆ ಸೂಕ್ತವಾದ ರೀತಿಯಲ್ಲೇ ಆಗಿತ್ತು. ಘೋಷಣಾ ಫಲಕಗಳು, ಇಂದಿನಂತೆ ಅಂದೂ ಕೂಡ ವೇದಿಕೆಯ ಮುಂದೆ ಮೈಕ್ರೊಫೋನುಗಳು, ಭಾರತದ ರಾಷ್ಟ್ರಧ್ವಜ ಮತ್ತು ಅದರೆದುರಿಗೆ ಬೋಸ್! ಅವರೊಂದಿಗೆ ಇತರೆ ಸಂಪುಟದ ಸಚಿವರು, ಅಕ್ಕ-ಪಕ್ಕದಲ್ಲಿ ರಕ್ಷಣೆಗೆಂದು ನಿಂತ ಅಂಗರಕ್ಷಕರು, ಆನಂತರ ಇತರೆ ಸಚಿವರಿಂದಲೂ ಪ್ರಮಾಣವಚನ ಸ್ವೀಕಾರ. ಯಾವ ಕಾರಣಕ್ಕೂ ಇದೊಂದು ಸಕರ್ಾರ ರಚನೆಯಲ್ಲ ಎಂದು ಹೇಳುವಂತೆಯೇ ಇರಲಿಲ್ಲ. ಅಂದಿನ ದಿನವೇ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಸುಭಾಷ್ಬಾಬು 20 ಲಕ್ಷ ಭಾರತೀಯರು ಸಂಘಟಿತಗೊಂಡು ಚಲೋ ದಿಲ್ಲಿ ಘೋಷಣೆಯೊಂದಿಗೆ ಬ್ರಿಟೀಷರ ವಿರುದ್ಧ ಕಾದಾಡಲು ಮತ್ತು ಭಾರತವನ್ನು ಮುಕ್ತಗೊಳಿಸಲು ಪ್ರಚಂಡ ಉತ್ಸಾಹದೊಂದಿಗೆ ಹೊರಟಿದ್ದಾರೆಂಬ ಸಂಗತಿಯನ್ನು ಬಿಚ್ಚಿಟ್ಟರು. ಬರಲಿರುವ ದಿನಗಳಲ್ಲಿ ಖಾಯಂ ಸಕರ್ಾರ ಏರ್ಪಡಲಿದ್ದು ಈಗ ಸಂವೈಧಾನಿಕವಾಗಿ ರಚನೆಗೊಂಡಿರುವ ಈ ಹಂಗಾಮಿ ಸಕರ್ಾರಕ್ಕೆ ಭಾರತೀಯರೆಲ್ಲರ ನಿಷ್ಠೆ ಸಲ್ಲಬೇಕು ಎಂದು ಹೇಳಲು ಮರೆಯಲಿಲ್ಲ. ಬ್ರಿಟೀಷ್ ಪ್ರಭುತ್ವದ ವಿರುದ್ಧ ಧೈರ್ಯದಿಂದ ಹೋರಾಟ ನಡೆಸಲು ಇದೊಂದು ಪ್ರೇರಣೆಯಾಗಬೇಕೆಂಬ ಆಶಯ ವ್ಯಕ್ತಪಡಿಸಿದ ನೇತಾಜಿ ತಮ್ಮ ಅತ್ಯಂತ ಪ್ರೀತಿಪಾತ್ರರಾದ ಮಹಾತ್ಮಾ ಗಾಂಧೀಜಿಯನ್ನು ಉಲ್ಲೇಖಿಸಿ ಅವರಿಂದ ರಾಷ್ಟ್ರ ಸ್ವೀಕರಿಸಿರುವ ಅಂಶಗಳನ್ನು ಸ್ಮರಿಸಿಕೊಂಡರು.


ಅದಾದ ಮೂರು ದಿನಗಳಲ್ಲೇ ಹಂಗಾಮಿ ಭಾರತ ಸಕರ್ಾರ ಇಂಗ್ಲೆಂಡಿನ ವಿರುದ್ಧ ಅಧಿಕೃತವಾಗಿ ಸಮರ ಘೋಷಿಸಿತು. ಸಹಜವಾಗಿಯೇ ದ್ವಿತೀಯ ಮಹಾಯುದ್ಧದ ವೇಳೆ ಇಂಗ್ಲೆಂಡಿನೊಂದಿಗೆ ಬೆಂಬಲಕ್ಕೆ ನಿಂತ ಅಮೆರಿಕಾ ಮೇಲೂ ಭಾರತ ಸಕರ್ಾರದ ಆಕ್ರೋಶವಿತ್ತು. ನೇತಾಜಿ ಈಗ ಭಾರತ ದೇಶದ ಪ್ರಧಾನಿಯಷ್ಟೇ ಅಲ್ಲ, ಇಂಡಿಯನ್ ನ್ಯಾಷನಲ್ ಆಮರ್ಿಯ ದಂಡನಾಯಕರಾಗಿಯೂ ನಿಯುಕ್ತಿಗೊಂಡರು.

ಈ ಹಂಗಾಮಿ ಸಕರ್ಾರ ಕಾಟಾಚಾರಕ್ಕೆ ರಚನೆಯಾದ ಸಕರ್ಾರವಾಗಿರಲಿಲ್ಲ. ಭಾರತ ಸ್ವತಂತ್ರಗೊಂಡೊಡನೆ ಅದನ್ನು ಪುನರ್ರೂಪಿಸಲು ಕೈಗೊಳ್ಳಬೇಕಾದ ಕಾರ್ಯಗಳನ್ನು ಆದ್ಯತೆಯ ಮೇರೆಗೆ ನಿರ್ಧರಿಸಲೆಂದೇ ಉಪಸಮಿತಿಗಳನ್ನು ರಚಿಸಲಾಗಿತ್ತು. ಯುದ್ಧ ಮುಂದುವರಿದಂತೆ ವಶಪಡಿಸಿಕೊಂಡ ಭಾರತದ ಭಾಗಗಳಿಗೆ ಕಮಿಷನರ್ಗಳ ನೇಮಕ ಮಾಡಲಾಗುತ್ತಿತ್ತು. ವಿವಿಧ ಸಕರ್ಾರಿ ಖಾತೆಗಳ ಕಲ್ಪನೆಗಳನ್ನು ಕಟ್ಟಿಕೊಂಡಿದ್ದಲ್ಲದೇ ಗ್ರಾಮ ಮಟ್ಟದವರೆಗೂ ಆಡಳಿತ ಹಂದರದ ವಿನ್ಯಾಸದ ನೀಲನಕ್ಷೆ ರೂಪಿಸಲಾಗಿತ್ತು. ಹೊಸ ಸಕರ್ಾರದ ಪರವಾಗಿ ಕರೆನ್ಸಿ ಅಂಚೆಚೀಟಿಯನ್ನು ಬಿಡುಗಡೆಗೊಳಿಸಲಾಗಿತ್ತಲ್ಲದೇ ಹಣಕಾಸು ವ್ಯವಹಾರಕ್ಕಾಗಿ ಆಜಾದ್ ಹಿಂದ್ ಬ್ಯಾಂಕ್ ನಿಮರ್ಿಸಲಾಗಿತ್ತು. ಜೊತೆಗೆ ಯುದ್ಧದಲ್ಲಿ ಭಾಗವಹಿಸಿ ಅಪಾರ ಶೌರ್ಯವನ್ನು ತೋರಿದ್ದ ವೀರರಿಗೆ ವಿವಿಧ ಸ್ತರದ ಮೆಡಲ್ ಗೌರವಗಳನ್ನೂ ಕೂಡ ನೀಡಲಾಗುತ್ತಿತ್ತು. ನೇತಾಜಿಯವರ ಅಂತರರಾಷ್ಟ್ರೀಯ ಸಂಬಂಧಗಳು ಹೇಗಿದ್ದವೆಂದರೆ ಎರಡೇ ದಿನಗಳೊಳಗೆ ಜಪಾನಿನ ಅಧಿಕೃತ ಮನ್ನಣೆಯನ್ನು ಪಡೆದಿದ್ದಲ್ಲದೇ ಕೆಲವೇ ವಾರಗಳಲ್ಲಿ ಬಮರ್ಾ, ಜರ್ಮನಿ, ಇಟಲಿ, ಕ್ರೊವೇಶಿಯಾ, ಫಿಲಿಪೈನ್ಸ್ ಮೊದಲಾದ ದೇಶಗಳ ಮಾನ್ಯತೆಯನ್ನು ದಕ್ಕಿಸಿಕೊಂಡರು. ಆದರೆ ಇದ್ಯಾವುದೂ ಸುಲಭ ಸಾಧ್ಯ ಸಂಗತಿಯಾಗಿರಲಿಲ್ಲ. ಹಂಗಾಮಿ ಸಕರ್ಾರವೊಂದರ ಕಲ್ಪನೆಯನ್ನು ಕಟ್ಟಿಕೊಳ್ಳುವುದೇ ತಾಕತ್ತಿನ ಆಲೋಚನೆ, ಅಂಥದ್ದರಲ್ಲಿ ಅದನ್ನು ರೂಪಿಸಿ ದಕ್ಕಿಸಿಕೊಳ್ಳುವುದು ಬಹುಶಃ ಸುಭಾಷರಿಗೆ ಮಾತ್ರ ಸಾಧ್ಯವಾಗಿದ್ದ ಸಂಗತಿಯೆನಿಸುತ್ತದೆ. ಈ ಪ್ರಯತ್ನವನ್ನು ಅವರು ಬಲು ಹಿಂದಿನಿಂದಲೇ ಮಾಡಿದ್ದರು.


1941 ರ ಆರಂಭದಲ್ಲಿ ಸುಭಾಷ್ಚಂದ್ರ ಬೋಸರು ಗೃಹಬಂಧನದಿಂದ ಕಾಣೆಯಾದ ಸುದ್ದಿ ದೇಶದಾದ್ಯಂತ ಸಂಚಲನವುಂಟುಮಾಡಿತ್ತು. ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಪಹರೆ ಕಾಯುತ್ತಿದ್ದ ಬ್ರಿಟೀಷ್ ಪೊಲೀಸರ ನಟ್ಟನಡುವಿನಿಂದಲೇ ಸುಭಾಷ್ಬಾಬು ಮಾಯವಾಗಿಬಿಟ್ಟಿದ್ದರು! ಮನೆಯವರೆಲ್ಲಾ ಸುಭಾಷರ ವೈರಾಗ್ಯದ ತುಡಿತವನ್ನು ವಿವರಿಸಿ ಕೆಲವು ದೂತರನ್ನು ತೀರ್ಥಕ್ಷೇತ್ರಗಳಿಗೆ ಹುಡುಕಾಟಕ್ಕೆಂದೂ ಕಳಿಸಿಬಿಟ್ಟಿದ್ದರು. ಆದರೆ ಈ ಅಡಗೂಲಜ್ಜಿಯ ಕಥೆಗಳನ್ನು ನಂಬುವಷ್ಟು ಬ್ರಿಟೀಷರು ದಡ್ಡರಾಗಿರಲಿಲ್ಲ. ಅವರು ಎಲ್ಲ ಬಗೆಯ ಪ್ರಯತ್ನಗಳನ್ನು ಮಾಡುತ್ತಾ ಸುಭಾಷರನ್ನು ಮತ್ತೆ ಹಿಡಿದುಬಿಡಲು ಕಾತರಿಸುತ್ತಿದ್ದರು. ಗಾಂಧೀಜಿಯವರು ಕಳಿಸಿದ ಟೆಲಿಗ್ರಾಮ್ನಲ್ಲಿ ‘ಸುಭಾಷರಿಗೆ ನಿಜವಾಗಿಯೂ ಏನಾಗಿದೆ ಎಂದು ತಿಳಿಸಿ’ ಎಂಬ ಬಯಕೆಯಿತ್ತು. ಆದರೆ ಭಾರತೀಯರು ಕಾಣೆಯಾದ ಸುಭಾಷರ ಕುರಿತಂತಹ ಗೊಂದಲಗಳಿಂದ ಹೊರಬರುವ ವೇಳೆಗಾಗಲೇ ಸುಭಾಷರು ಕಾಬೂಲಿನ ಮೂಲಕ ಜರ್ಮನಿ ತಲುಪಿಯಾಗಿತ್ತು. ಈ ಹಿಂದೆಯೂ ಜರ್ಮನಿ, ಇಟಲಿಗಳಿಗೆ ಅವರು ಭೇಟಿಕೊಟ್ಟು ತಮ್ಮ ಪ್ರಭಾವವನ್ನು ಬಳಸಿ ಅಲ್ಲಿನ ಅಧಿಕಾರಿಗಳೊಂದಿಗೆ ಸಂಪರ್ಕವನ್ನು ಸಾಧಿಸಿದ್ದರಿಂದ ಈಗ ಅವರಿಗೆ ಆ ಎಲ್ಲಾ ಪ್ರಕ್ರಿಯೆಗಳ ಲಾಭ ದೊರೆಯಿತು. ಜರ್ಮನ್ ಸಕರ್ಾರದ ವಿದೇಶಾಂಗ ಖಾತೆಯಲ್ಲಿದ್ದ ಡಾ. ಅಲೆಗ್ಸಾಂಡರ್ ವೆಥರ್್ ಮತ್ತು ಫಾನ್ಟ್ರಾಟ್ ಸುಭಾಷರ ಬೆಂಬಲಕ್ಕೆ ನಿಂತು ಇಂಡಿಯನ್ ಲೀಜನ್ ಸೇನೆಯ ರಚನೆಗೆ ಬೆಂಬಲವಾದರು. ಯೋಜನೆ ಬಲು ಸರಳವಾಗಿತ್ತು. ಜರ್ಮನ್ನೊಂದಿಗೆ ಬ್ರಿಟೀಷರ ಯುದ್ಧದ ವೇಳೆಯಲ್ಲಿ ಸಿಕ್ಕಿರುವ ಭಾರತೀಯ ಯುದ್ಧ ಖೈದಿಗಳ ಮನಸ್ಸನ್ನೊಲಿಸಿ ಅವರನ್ನೇ ಭಾರತದ ಸ್ವಾತಂತ್ರ್ಯಕ್ಕೋಸ್ಕರ ಹೋರಾಟ ಮಾಡಬಲ್ಲ ಮೂಲದ್ರವ್ಯವಾಗಿ ಬಳಸಿಕೊಳ್ಳುವ ಕಲ್ಪನೆ ಅದು. ಹಾಗಂತ ಅದು ಸುಲಭವಾಗಿರಲಿಲ್ಲ. ಒಂದೆಡೆ ಜರ್ಮನ್ ಸಕರ್ಾರದ ಪೂರ್ಣ ಬೆಂಬಲ ಬೇಕಿತ್ತು ಮತ್ತೊಂದೆಡೆ ಅನೇಕ ವರ್ಷಗಳ ಕಾಲ ಬ್ರಿಟೀಷರಿಗೆ ನಿಷ್ಠವಾಗಿದ್ದ ಈ ಸೈನಿಕರನ್ನು ಭಾರತಕ್ಕೆ ನಿಷ್ಠರಾಗುವಂತೆ ಮಾಡಬೇಕಿತ್ತು. ಆಗಲೇ ಎಲ್ಲಾ ಕಾರ್ಯಗಳಿಗೂ ಪೂರಕವಾಗಿ ಫ್ರೀ ಇಂಡಿಯಾ ಸೆಂಟರ್ ಸ್ಥಾಪಿಸಿದ ಸುಭಾಷ್ಬಾಬು ಜರ್ಮನ್ ಸಕರ್ಾರದಿಂದ ಅದಕ್ಕಾಗಿ ಹಣವನ್ನು ಪಡೆದುಕೊಂಡರು. ಅವರ ಸ್ವಾಭಿಮಾನವನ್ನು ಮೆಚ್ಚಬೇಕಾದ್ದೇ. ಜರ್ಮನ್ ಸಕರ್ಾರ ಅದನ್ನು ಅನುದಾನವೆಂದು ನೀಡಿದರೂ ಸಾಲವೆಂದೇ ಅದನ್ನು ಪರಿಗಣಿಸಿದ ಸುಭಾಷರು 1944 ರಲ್ಲಿ ಏಷ್ಯಾದಲ್ಲಿದ್ದ ಭಾರತೀಯರಿಂದ ಹಣ ಸಂಗ್ರಹಿಸಿ ಜರ್ಮನ್ ಸಕರ್ಾರಕ್ಕೆ ಮರುಪಾವತಿಸಿಬಿಟ್ಟರು. ಫ್ರೀ ಇಂಡಿಯಾ ಸೆಂಟರ್ ತನ್ನ ಕೆಲಸವನ್ನು ವ್ಯಾಪಕಗೊಳಿಸಿತು. ಅದರ ಚಟುವಟಿಕೆಯ ತೀವ್ರತೆಯನ್ನು ಕಂಡೇ ಜರ್ಮನ್ ಸಕರ್ಾರ ಅಲ್ಲಿನ ಸದಸ್ಯರಿಗೆ ದೂತಾವಾಸ ಸಿಬ್ಬಂದಿಯ ಸ್ಥಾನಮಾನ ನೀಡಿತು. ಅಲ್ಲಿಂದಲೇ ನೇತಾಜಿ ರೆಡಿಯೊ ಭಾಷಣಗಳನ್ನು ಮಾಡುತ್ತಿದ್ದುದು. ಈ ಹೊತ್ತಿನಲ್ಲಿಯೇ ಅವರಿಗೆ ನೇತಾಜಿ ಎನ್ನುವ ಅಭಿದಾನವೂ ದೊರೆತದ್ದು, ಜೈ ಹಿಂದ್ ಘೋಷಣೆಯ ಆವಿಷ್ಕಾರವಾದದ್ದು ಇದೇ ಹೊತ್ತಿನಲ್ಲಿ. 1942 ರ ಫೆಬ್ರವರಿ 19ರಂದು ಕಾಣೆಯಾದ ಸುಮಾರು ಒಂದು ವರ್ಷಗಳ ನಂತರ ರೆಡಿಯೋದ ಮೂಲಕ ಮಾತನಾಡಿದ ಸುಭಾಷ್ಚಂದ್ರ ಬೋಸರು ‘ಆಜಾದ್ ಹಿಂದ್ ರೆಡಿಯೊದಿಂದ ನಾನು ಸುಭಾಷ್ಚಂದ್ರ ಬೋಸ್ ಮಾತನಾಡುತ್ತಿದ್ದೇನೆ’ ಎಂದದನ್ನು ಇಡಿಯ ದೇಶ ಕೇಳಿ ನಲಿದುಬಿಟ್ಟಿತು. ಅಲ್ಲಿಯವರೆಗಿನ ಎಲ್ಲಾ ಊಹಾಪೋಹಗಳಿಗೆ ತೆರೆಬಿತ್ತು. ಸುಭಾಷ್ಬಾಬು ತೀರಿಕೊಂಡಿದ್ದಾರೆನ್ನುವ ಒಂದಷ್ಟು ಜನರ ವಾದ, ಅವರು ತೀರ್ಥಯಾತ್ರೆಗೆ ಹೊರಟಿದ್ದಾರೆನ್ನುವ ಮತ್ತೊಂದಷ್ಟು ಜನರ ಆಸ್ಥೆ, ಸ್ವಾತಂತ್ರ್ಯ ಹೋರಾಟದಿಂದಲೇ ವಿಮುಖರಾಗಿಬಿಟ್ಟಿದ್ದಾರೆಂಬ ಇನ್ನಷ್ಟು ಜನರ ಹತಾಶೆ ಇವೆಲ್ಲಕ್ಕೂ ಈಗ ಬಲವಾದ ಬ್ರೇಕ್ ಬಿತ್ತು. ಸುಭಾಷ್ಬಾಬುವಿನ ಹೋರಾಟದ ಕಾವು ಒಂದಿನಿತೂ ಕಡಿಮೆಯಾಗಿರಲಿಲ್ಲ. ‘ಭಾರತ ಮತ್ತೆ ಸ್ವತಂತ್ರಗೊಳ್ಳುವವರೆಗೆ ಬ್ರಿಟೀಷ್ ಸಾಮ್ರಾಜ್ಯದ ವಿರುದ್ಧ ನಾನು ಹೋರಾಡುತ್ತೇನೆ’ ಎಂಬ ಅವರ ವಾಗ್ದಾನ ಭಾರತದಲ್ಲಿ ಉಡುಗಿಹೋಗಿದ್ದ ಶಕ್ತಿಯನ್ನು ಮತ್ತೆ ಸಂಘಟಿಸಿತ್ತು. ಅತ್ತ ಬ್ರಿಟೀಷರ ಕೈಯಿಂದ ಜಪಾನ್, ಸಿಂಗಪೂರವನ್ನು ಕಸಿದದ್ದು ಹೊಸ ಮನ್ವಂತರವೆಂದೇ ವಿಶ್ಲೇಷಿಸಲಾಗುತ್ತಿತ್ತು. ಅದೇ ಹೊತ್ತಿನಲ್ಲಿ ಆಕಾಶದಿಂದ ಬಂದ ಸುಭಾಷರ ದನಿ ಭಾರತದ ಸ್ವಾತಂತ್ರ್ಯ ಇನ್ನು ದೂರವಿಲ್ಲವೆಂಬ ವಿಶ್ವಾಸವನ್ನು ಭಾರತೀಯರಲ್ಲಿ ಮನೆಮಾಡಿಸಿತು. ಬರುಬರುತ್ತಾ ಆಜಾದ್ ಹಿಂದ್ ರೆಡಿಯೊ ಅದೆಷ್ಟು ಪ್ರಖ್ಯಾತವಾಯಿತೆಂದರೆ ಭಾರತದ ಪ್ರಮುಖ ಭಾಷೆಗಳಲ್ಲೆಲ್ಲಾ ಅದರ ಅನುವಾದವಾಗಲಾರಂಭಿಸಿತು. ಭಾಷಣಗಳ ರಚನೆಗೆಂದೇ ತಂಡ ನಿಮರ್ಾಣಗೊಂಡಿತ್ತು. ಭಾರತದಲ್ಲಾಗುವ ಸಣ್ಣ ಬದಲಾವಣೆಗೆ ಸುಭಾಷ್ಬಾಬು ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ಕೊಡುತ್ತಿದ್ದರು. ಕಾಂಗ್ರೆಸ್ಸಿನ ನಾಯಕರು ಇಲ್ಲಿ ಬ್ರಿಟೀಷರೊಂದಿಗೆ ಯಾವುದಾದರು ಒಪ್ಪಂದಕ್ಕೆ ಮುಂದಾದರೆ ಆಜಾದ್ ಹಿಂದ್ ರೆಡಿಯೊದಲ್ಲಿ ಸುಭಾಷರ ಪ್ರಖರ ವಾಗ್ಬಾಣಗಳು ಭಾರತೀಯರ ಎದೆಗೆ ನಾಟುತ್ತಿದ್ದವು. ಮುಂದೆ ಕಾಂಗ್ರೆಸ್ಸಿಗರು ಸುಭಾಷರನ್ನು ಕಂಠಮಟ್ಟ ವಿರೋಧಿಸುವುದಕ್ಕೆ ಇದೂ ಒಂದು ಕಾರಣ. ಏಕೆಂದರೆ ಜನರಿಗೆ ಅರಿವಾಗದಂತೆ ಅವರು ಮಾಡಿಕೊಳ್ಳಬಹುದಾದ ಒಪ್ಪಂದಗಳನ್ನು ಜನರಿಗೆ ತಿಳಿಹೇಳಿ ಅದರ ವಿರುದ್ಧ ಜನಾಂದೋಲನವನ್ನು ಭಾರತದಿಂದ ಬಲುದೂರ ಕುಳಿತೇ ಸುಭಾಷ್ ಬಾಬು ರೂಪಿಸುತ್ತಿದ್ದರು. ಕಣ್ಣಿಗೆ ಕಾಣದ ಶತ್ರುವಿನ ಕುರಿತಂತೆ ಬ್ರಿಟೀಷರು ತಳಮಳಗೊಂಡುಬಿಟ್ಟಿದ್ದರು. ಸುಭಾಷರನ್ನು ಶತ್ರುಗಳ ಗುಂಪಿಗೆ ಸೇರಿದವನೆಂದು ಬಣ್ಣಿಸಿ ಅವರ ವಿರುದ್ಧ ಇಲ್ಲಿನ ನಾಯಕರು ಪ್ರತಿಕ್ರಿಯಿಸುವಂತೆ ಮಾಡುವ ಪ್ರಯತ್ನವನ್ನು ಬ್ರಿಟೀಷರು ತೀವ್ರಗೊಳಿಸಿದ್ದರು. ಇವೆಲ್ಲಕ್ಕೂ ಸುಭಾಷ್ಬಾಬು ರೆಡಿಯೋ ಮೂಲಕ ಉತ್ತರಿಸುತ್ತಿದ್ದರು ಮತ್ತು ಅದನ್ನು ತಡೆಯುವ ತಾಕತ್ತು ಬ್ರಿಟೀಷರಿಗೆ ಇರಲಿಲ್ಲ.
ಸುಭಾಷರ ಈ ಎಲ್ಲಾ ಪ್ರಯಾಸಗಳನ್ನು ಗಮನಿಸಿದ ನಂತರವೇ ಹಿಟ್ಲರ್ ಅವರನ್ನು ಭೇಟಿಮಾಡಲು ಒಪ್ಪಿಕೊಂಡಿದ್ದು. ತನ್ನೆಲ್ಲಾ ಸಹಕಾರವನ್ನು ನೀಡುವುದಾಗಿ ಒಪ್ಪಿಕೊಂಡ ನಂತರವೂ ಹಿಟ್ಲರ್ ಭಾರತ ಮತ್ತು ಜರ್ಮನಿಯ ನಡುವಿನ ದೂರವನ್ನು ಮತ್ತೆ ನೆನಪಿಸಿಕೊಟ್ಟು ಪ್ರತ್ಯಕ್ಷ ರಣಾಂಗಣದಲ್ಲಿ ಸಹಕಾರ ನೀಡುವುದು ಬಲುಕಷ್ಟ ಎಂದು ಹೇಳಿದ. ಅದು ನಿಜವೂ ಆಯ್ತು ಕೂಡ. ಮುಂದೆ ಸುಭಾಷ್ಬಾಬು ಜರ್ಮನಿಯನ್ನು ಬಿಟ್ಟು ತಮ್ಮ ನೆಲೆಯನ್ನು ಏಷ್ಯಾಕ್ಕೆ ವಗರ್ಾಯಿಸಬೇಕಾಯ್ತು. ಅದಾಗಲೇ ಏಷ್ಯಾದಲ್ಲಿ ರಾಸ್ಬಿಹಾರಿ ಬೋಸರ ನೇತೃತ್ವದಲ್ಲಿ ಭಾರತೀಯ ಯುದ್ಧಖೈದಿಗಳನ್ನು ಸಂಘಟಿಸುವ ಪ್ರಯತ್ನ ಸುದೀರ್ಘ ಕಾಲದಿಂದಲೂ ನಡೆದಿತ್ತು. ಜಪಾನಿಗೆ ಬಂದ ನೇತಾಜಿ ರಾಸ್ಬಿಹಾರಿ ಬೋಸ್ರೊಂದಿಗೆ ಮಾತನಾಡಿ ಅವರು ಕಟ್ಟಿದ ಸೇನೆಯನ್ನು ತಮ್ಮ ತೆಕ್ಕೆಗೆ ಪಡೆದರು. ಜರ್ಮನಿಯಿಂದ ಜಪಾನಿಗೆ ಬರುವುದು ಸುಲಭದ ಸಂಗತಿಯಾಗಿರಲಿಲ್ಲ. ಯುದ್ಧದ ಕಾಮರ್ೋಡಗಳು ಆವರಿಸಿಕೊಂಡಿದ್ದ ಹೊತ್ತಿನಲ್ಲಿ ಜಲಾಂತಗರ್ಾಮಿ ನೌಕೆಗಳ ಮೂಲಕ ಯಾತನಾಮಯ ಯಾತ್ರೆಯನ್ನು ಸವಾಲಾಗಿ ಸ್ವೀಕರಿಸಿಯೇ ಜಪಾನಿಗೆ ಬಂದಿದ್ದರು ನೇತಾಜಿ. ಅಲ್ಲಿ ರಾಸ್ಬಿಹಾರಿ ಬೋಸರನ್ನು ಭೇಟಿ ಮಾಡಿ ತಮ್ಮೆಲ್ಲಾ ಕನಸುಗಳನ್ನು ಅವರೆದುರಿಗೆ ಬಿಚ್ಚಿಟ್ಟ ನಂತರವೇ ಆ ಸೇನೆಯನ್ನು ಮುನ್ನಡೆಸಲು ಒಪ್ಪಿಕೊಂಡಿದ್ದು. ರಾಸ್ಬಿಹಾರಿ ಬೋಸ್ ಕೂಡ ಸಾಧಾರಣ ಮಟ್ಟದ ಕ್ರಾಂತಿಕಾರಿಯಾಗಿರಲಿಲ್ಲ. ಮೊದಲ ಮಹಾಯುದ್ಧದ ವೇಳೆಗಾಗಲೇ ಬ್ರಿಟೀಷರನ್ನು ಭಾರತದಿಂದ ಓಡಿಸುವಂತಹ ಯೋಜನೆಯನ್ನು ರೂಪಿಸಿ ಕೆಲವು ದ್ರೋಹಿಗಳ ಕಾರಣದಿಂದ ಸಿಕ್ಕುಹಾಕಿಕೊಳ್ಳುವ ಪ್ರಸಂಗ ಬಂದಾಗ ದೇಶ ಬಿಟ್ಟು ಜಪಾನಿಗೆ ಬಂದು ನೆಲೆಸಿದವರು. ಇಲ್ಲಿ ಭಾರತೀಯರನ್ನು ಸಂಘಟಿಸಿ ಅವರ ಮೂಲಕ ಸ್ವಾತಂತ್ರ್ಯದ ಹೋರಾಟಕ್ಕೆ ಕೊಡುಗೆಯನ್ನು ಕೊಡುವ ತಮ್ಮ ಆಸೆಯನ್ನು ಜೀವಂತವಾಗಿರಿಸಿಕೊಂಡಿದ್ದರು. ಈಗ ನೇತಾಜಿಯನ್ನು ಕಂಡೊಡನೆ ಅವರ ಹೃದಯ ತುಂಬಿಬಂದಿತ್ತು. ಈ ಕೆಲಸವನ್ನು ಮಾಡಬಲ್ಲ ಸಮರ್ಥ ಸೇನಾನಿ ಎಂಬ ವಿಶ್ವಾಸ ಅವರಿಗೆ ಚಿಗುರಿತ್ತು.


ಇತ್ತ ಜಪಾನಿನ ಪ್ರಧಾನಿ ಟೊಜೊ ಸುಭಾಷರ ಆಪ್ತಮಿತ್ರನಾದ. ಜಪಾನಿನ ಸಂಸತ್ತಿಗೆ ಬೋಸರನ್ನು ಆಮಂತ್ರಿಸಲಾಯ್ತು. ಅಲ್ಲಿ ಟೊಜೊ ಭಾರತೀಯರ ಪರವಾಗಿ ಹೆಮ್ಮೆ ತರುವಂಥ ಮಾತುಗಳನ್ನಾಡಿದ ನೇತಾಜಿಯು ಇಂಡಿಯನ್ ನ್ಯಾಷನಲ್ ಆಮರ್ಿಯನ್ನು ಬಲವಾಗಿ ಕಟ್ಟುವ ಪ್ರಯತ್ನದಲ್ಲಿ ನಿರತವಾದರು. ಯುದ್ಧ ಖೈದಿಗಳಲ್ಲಿ ಭಾರತದ ಪರವಾಗಿ ನಿಲ್ಲಬೇಕೆಂಬ ಸ್ಫೂತರ್ಿಯನ್ನು ತುಂಬಿ ಅವರನ್ನು ರಾಷ್ಟ್ರಕಾರ್ಯಕ್ಕೆ ಪರಿವತರ್ಿಸುವ ಸವಾಲನ್ನು ಸ್ವೀಕರಿಸಿದರು. ಈ ಸೈನಿಕರಲ್ಲಿ ಮತ್ತು ಭಾರತದಲ್ಲಿರುವ ಅಸಂಖ್ಯ ದೇಶಾಭಿಮಾನಿಗಳಲ್ಲಿ ಹೋರಾಟದ ಕೆಚ್ಚು ನೂರ್ಮಡಿಗೊಳಿಸಲೆಂದೇ ನೇತಾಜಿ ಈ ಹಂಗಾಮಿ ಸಕರ್ಾರವನ್ನು ಕಟ್ಟಿದ್ದು. ಈ ಸಕರ್ಾರದ ರಚನೆಯ ನಂತರ ಜಗತ್ತಿನೊಂದಿಗೆ ವ್ಯವಹರಿಸುವಾಗ ಸುಭಾಷರು ಭಾರತದಿಂದ ದಾರಿತಪ್ಪಿ ಬಂದಿರುವ ಹೋರಾಟಗಾರನಾಗಿ ಕಾಣಿಸಿಕೊಳ್ಳಲಿಲ್ಲ. ಬದಲಿಗೆ ಭಾರತದ ಪ್ರಧಾನಿಯೆಂಬಂತೆ ಅಧಿಕೃತವಾಗಿಯೇ ಮಾತುಕತೆಗೆ ಕುಳಿತಿದ್ದರು. ಅಧಿಕೃತವಾಗಿಯೇ ತಮ್ಮ ಸೇನೆಗೆ ಭಾರತವನ್ನು ಆಕ್ರಮಿಸಿಕೊಂಡಿರುವ ಅನ್ಯದೇಶೀಯರ ಮೇಲೆ ಯುದ್ಧ ಸಾರುವಂತೆ ಘೋಷಿಸಿದರು. ಹಕ್ಕಿನಿಂದಲೇ ಇತರೆ ರಾಷ್ಟ್ರಗಳ ಸಹಕಾರ ಪಡೆದುಕೊಂಡರು. ಜನರಿಗೂ ಕೂಡ ಭರವಸೆ ತುಂಬಲು ಸಾಧ್ಯವಾಗಿದ್ದು ಈ ಮೂಲಕವೇ. ಸುಭಾಷ್ಬಾಬು ಜನರೊಳಗೆ ಸತ್ತೇ ಹೋಗಿದ್ದ ಸ್ವಾತಂತ್ರ್ಯದ ಕನಸುಗಳನ್ನು ಪುನರ್ಜಾಗೃತಿಗೊಳಿಸಿದರು. ನಿಮ್ಮ ರಕ್ತ ಕೊಡಿ ನಾನು ಸ್ವಾತಂತ್ರ್ಯ ಕೊಡುವೆ ಎನ್ನುವ ಅವರ ಮಾತು ಕಾಡ್ಗಿಚ್ಚಿನಂತೆ ಹಬ್ಬಿತು. ಎರಡನೇ ಮಹಾಯುದ್ಧದಲ್ಲಿ ಜಪಾನ್ ಶರಣಾಗುವ ಪರಿಸ್ಥಿತಿ ಬರದೇ ಹೋಗಿದ್ದರೆ ಭಾರತ ಸಕರ್ಾರದ ರಚನೆಯಾಗಿ ಈ ವೇಳೆಗೆ 75 ವರ್ಷಗಳು ತುಂಬಿರುತ್ತಿದ್ದವು. ಅಧಿಕೃತವಾಗಿ ಸುಭಾಷರೇ ಭಾರತದ ಮೊದಲ ಪ್ರಧಾನಿಯಾಗಿರುತ್ತಿದ್ದರು. ಪರಿವಾರ ವಾದ ಭಾರತವನ್ನು ಕೊಚ್ಚಿಕೊಂಡು ಹೋಗುವ ಸ್ಥಿತಿ ಬರುತ್ತಿರಲಿಲ್ಲ.


ನರೇಂದ್ರಮೋದಿ ನೆನ್ನೆ ಕೆಂಪುಕೋಟೆಯಲ್ಲಿ ತ್ರಿವರ್ಣಧ್ವಜ ಹಾರಿಸುವ ಮೂಲಕ ಈ ಎಲ್ಲಾ ಘಟನೆಗಳನ್ನು ಮತ್ತೆ ನೆನಪಿಸಿಕೊಟ್ಟುಬಿಟ್ಟಿದ್ದಾರೆ. ಜೈ ಹಿಂದ್!

-ಚಕ್ರವರ್ತಿ ಸೂಲಿಬೆಲೆ

1 Comment

1 Comment

Leave a Reply

Your email address will not be published. Required fields are marked *

Most Popular

To Top