National

ನಿರುದ್ಯೋಗವೇ ಐಸಿಸ್ಗೆ ಪ್ರೇರಣೆಯಾದರೆ ರಾಹುಲ್ ಕಮಾಂಡರ್ ಆಗಿರಬೇಕಿತ್ತು!

ರಾಷ್ಟ್ರದ ಮುಂದಿನ ಪ್ರಧಾನಿ ಎಂದು ಬಿಂಬಿಸಲ್ಪಟ್ಟಿರುವ ರಾಹುಲ್ ಇತ್ತೀಚೆಗೆ ದೇಶದ ಹೊರಗೆ ನಿಂತು ಭಾರತದ ಕುರಿತಂತೆ ಅಗೌರವಕಾರಿಯಾದ ಮಾತುಗಳನ್ನಾಡುತ್ತಿದ್ದಾರೆ. ಒಂದೆಡೆ ದೇಶದ ಹೊರಗಿರುವ ಅನಿವಾಸಿ ಭಾರತೀಯರು ಭಾರತದ ಗೌರವವನ್ನು ಹೆಚ್ಚಿಸಲು ತಮ್ಮೆಲ್ಲ ಪ್ರಯತ್ನಗಳನ್ನು ಕ್ರೋಢೀಕರಿಸುತ್ತಿದ್ದರೆ, ಪ್ರಧಾನಿ ನರೇಂದ್ರಮೋದಿ ಭಾರತವನ್ನು ಪುನರ್ರೂಪಿಸಲು ಎಪ್ಪತ್ತೂ ವರ್ಷಗಳಲ್ಲಿ ಮಾಡದ ಪ್ರಯತ್ನವನ್ನು ಮಾಡಲುಪಕ್ರಮಿಸಿದ್ದರೆ ರಾಹುಲ್ ಮಾತ್ರ ಜಾಗತಿಕ ಮಟ್ಟದಲ್ಲಿ ಅತ್ಯಂತ ಕೆಟ್ಟ ರೀತಿಯಲ್ಲಿ ಭಾರತವನ್ನು ಪ್ರಸ್ತುತ ಪಡಿಸುತ್ತಿರುವುದು ಒಪಿಕೊಳ್ಳಬಹುದಾದ ಮಾತೇ ಅಲ್ಲ. ಕೇರಳ-ಕೊಡಗುಗಳು ಪ್ರವಾಹದಲ್ಲಿ ಮಿಂದೆದ್ದು ಕಣ್ಣೀರಿಡುತ್ತಾ ಕುಳಿತಿರುವಾಗ ಕೇರಳದ್ದೇ ಪ್ರತಿನಿಧಿಯಾಗಿರುವ ಶಶಿ ತರೂರ್ ಮತ್ತು ರಾಷ್ಟ್ರದ ಎಲ್ಲರ ಪ್ರತಿನಿಧಿಯಾಗಲು ಹವಣಿಸುತ್ತಿರುವ ರಾಹುಲ್ ವಿದೇಶ ಯಾತ್ರೆಯಲ್ಲಿರುವುದು ಬಲು ಅವಮಾನಕರ. ಬರಿಯ ವಿದೇಶ ಯಾತ್ರೆ ಅಷ್ಟೇ ಅಲ್ಲ; ಕಾಲಿಟ್ಟೆಡೆಯೆಲ್ಲ ಭಾರತವನ್ನು ದೂಷಿಸುತ್ತಾ ನಡೆಯುತ್ತಿರುವುದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಇತ್ತೀಚೆಗೆ ರಾಹುಲ್ ಡೋಕ್ಲಾಂ ನಿರ್ವಹಣೆಯಲ್ಲಿ ಭಾರತ ಸೋತಿದೆ ಎಂದು ಅಸಂಬದ್ಧ ಹೇಳಿಕೆಯನ್ನು ವಿದೇಶದಲ್ಲಿ ಮಂಡಿಸುವಾಗ ಭಾರತದ ಕಾಂಗ್ರೆಸ್ ಅದನ್ನು ಸಂಭ್ರಮದಿಂದ ಕೊಂಡಾಡಿತ್ತು. ಆದರೆ ಅದೇ ಸಭೆಯಲ್ಲಿ ಡೋಕ್ಲಾಂ ನಿರ್ವಹಣೆಗೆ ನಿಮ್ಮ ಬಳಿ ಯಾವ ಉಪಾಯವಿತ್ತು ಎಂದು ಸಭಿಕರೊಬ್ಬರು ಕೇಳಿದ ಪ್ರಶ್ನೆಗೆ ‘ನನಗೆ ಡೋಕ್ಲಾಂನ ಸ್ಥಿತಿಗತಿ ಅರಿವಿಲ್ಲದಿರುವುದರಿಂದ ನಾನು ಈಗೇನೂ ಹೇಳಲಾರೆ’ ಎಂದುತ್ತರಿಸಿದ ರಾಹುಲ್ನಲ್ಲಿ ಅದ್ಯಾವ ಮುತ್ಸದ್ದಿಯನ್ನು ಹಿರಿಯ ಕಾಂಗ್ರೆಸ್ ನಾಯಕರು ಕಂಡರೊ ದೇವರೇ ಬಲ್ಲ. ಈ ಪರಿಯ ರಾಹುಲ್ ಅಪದ್ಧಗಳು ಮೊದಲ ಬಾರಿ ಏನಲ್ಲ. ಈ ಹಿಂದೆಯೂ ವಿದೇಶಕ್ಕೆ ಹೋದಾಗ ಮತ್ತು ಭಾರತದಲ್ಲಿಯೇ ಬುದ್ಧಿವಂತ ವಿದ್ಯಾಥರ್ಿಗಳೊಂದಿಗೆ ಮಾತನಾಡುವಾಗ ಹೀಗೆ ಆಭಾಸಕಾರಿ ಪ್ರಸಂಗಗಳನ್ನು ಎದುರಿಸಿದ್ದಿದೆ. ಮೊದಲೆಲ್ಲ ಭಾರತೀಯರಷ್ಟೇ ಆಡಿಕೊಂಡು ನಗುತ್ತಿದ್ದೆವು. ಈಗ ಜಗತ್ತೆಲ್ಲ 125 ವರ್ಷಗಳಿಗೂ ಹಳೆಯ ಕಾಂಗ್ರೆಸ್ಸಿನ ಇಂದಿನ ದುಃಸ್ಥಿತಿಯನ್ನು ಮತ್ತು ಈತ ಪ್ರಧಾನಿಯಾದರೆ ಭವಿಷ್ಯದ ಭಾರತವನ್ನು ಕಲ್ಪಿಸಿಕೊಂಡು ಪಕ್ಕೆಲುಬುಗಳು ಮುರಿದು ಹೋಗುವಂತೆ ನಗಲು ಸಾಕು.

ಇತ್ತೀಚೆಗೆ ರಾಹುಲ್ ಉದ್ಯೋಗ ಸಿಗದಿರುವುದೇ ತರುಣರು ಐಸಿಸ್ಗೆ ಸೇರಲು ಕಾರಣ ಎಂಬ ಹೇಳಿಕೆ ಕೊಟ್ಟು ಐಸಿಸ್ ಸೇರ್ಪಡೆಯಾದ ಮಕ್ಕಳ ಕುಟುಂಬದವರು ಗಾಬರಿಯಾಗುವಂತೆ ಮಾಡಿಬಿಟಿದ್ದಾರೆ. ಈ ಹೇಳಿಕೆ ಐಸಿಸ್ನ ಸಮರ್ಥನೆಯೋ ಅದಕ್ಕೆ ಸೇರುವುದರ ಕುರಿತಂತೆ ಕಾಂಗ್ರೆಸ್ಸಿನ ನೀತಿಯ ಚಿಂತನೆಯೋ ಅಥವಾ ಭಾರತದ ನೆಲದಲ್ಲಿ ಮುಸಲ್ಮಾನರನ್ನು ಓಲೈಸಿಕೊಳ್ಳುವ ಪರಿಯೋ ದೇವರೇ ಬಲ್ಲ. ಚುನಾವಣೆಗಾಗಿ ಜನಿವಾರ ಧರಿಸಿ ವಿದೇಶದ ನೆಲದಲ್ಲಿ ಐಸಿಸ್ ಅನ್ನು ಸಮಥರ್ಿಸಿಕೊಳ್ಳುವ ರಾಹುಲ್ನ ನಾಟಕ ಕಂಪೆನಿ ಶತ ದಿನೋತ್ಸವ ಆಚರಿಸಿದಷ್ಟು ಮೋದಿ ನಿಶ್ಚಿಂತೆಯಿಂದ ಅಧಿಕಾರದಲ್ಲಿರುತ್ತಾರೆ. ಬಹಶಃ ರೈಲ್ವೇ ಕೇಂದ್ರಗಳಲ್ಲಿ ಟೀ ಮಾರಿಕೊಂಡು ಬದುಕಿದ್ದ ನರೇಂದ್ರಮೋದಿ ಬದುಕನ್ನು ನೋಡುವ ದೃಷ್ಟಿಕೋನಕ್ಕೂ ಬೆಳ್ಳಿಯ ಚಮಚವನ್ನು ಬಾಯಲ್ಲೇ ಇಟ್ಟುಕೊಂಡು ಹುಟ್ಟಿದ ಇಂಥವರ ಬದುಕಿನ ದೃಷ್ಟಿಕೋನಕ್ಕೂ ಅಜಗಜಾಂತರ. ದೇಶದ ಜನಸಂಖ್ಯೆ 130 ಕೋಟಿ ದಾಟಿದೆ. ಇದರಲ್ಲಿ ಶೇಕಡಾ 10 ರಷ್ಟು ತರುಣರಿಗೆ ಉದ್ಯೋಗವಿಲ್ಲವೆಂದರೂ 13 ಕೋಟಿಯಾಯ್ತು. ರಾಹುಲ್ ಮಾತನ್ನು ಕೇಳಿ ಅಷ್ಟೂ ಜನ ಐಸಿಸ್ಗೆ ಸೇರಿಕೊಂಡರೆ ದೇಶವನ್ನೇನು ಇಡಿ ಜಗತ್ತನ್ನೇ ನುಚ್ಚು ನೂರು ಮಾಡಿಬಿಡಬಲ್ಲರು. ಭವಿಷ್ಯದ ಪ್ರಧಾನಿಯೆಂದು ತನ್ನ ತಾನು ಬಿಂಬಿಸಿಕೊಂಡಿರುವ ಅಭ್ಯಥರ್ಿಯೊಬ್ಬರಿಗೆ ದೇಶದ ಇಂತಹ ಸಮಸ್ಯೆಗಳ ಸ್ವಲ್ಪವಾದರೂ ಅರಿವಿರುವುದಿಲ್ಲ ಎನ್ನುತ್ತೀರಾ! ಅತ್ತ ನರೇಂದ್ರಮೋದಿ ಈ ದೇಶದ ತರುಣರ ಕೈಗೆ ಉದ್ಯೋಗ ಕೊಡಿಸಬೇಕೆಂಬ ಕಾರಣಕ್ಕೆ ಮೇಕ್ ಇನ್ ಇಂಡಿಯಾದ ಕಲ್ಪನೆಯನ್ನು ಸಾಕಾರಗೊಳಿಸಿ ವರ್ಷಕ್ಕೆ 2 ಕೋಟಿ ಉದ್ಯೋಗವನ್ನು ಸೃಷ್ಟಿಮಾಡುವ ತನ್ನ ಭರವಸೆಗೆ ಅಂಟಿಕೊಂಡು ನಿಂತು ಪೂರಕ ಚಟುವಟಿಕೆಗಳಲ್ಲಿ ಮಗ್ನರಾಗಿರುವಾಗ ಪ್ರತಿಪಕ್ಷದ ನಾಯಕರೊಬ್ಬರು ಇಷ್ಟು ಉಡಾಫೆಯ ಮಾತನ್ನಾಡುವುದೇ! ಸಕರ್ಾರಿ ನೌಕರಿಯ ಹಿಂದೆಯೇ ಓಡುತ್ತಿರುವ ತರುಣರ ಆತ್ಮಸ್ಥೈರ್ಯವನ್ನು ಹೆಚ್ಚಿಸಲೆಂದು ನರೇಂದ್ರಮೋದಿಯವರು ಪಕೋಡ ಮಾರಿಯಾದರು ಬದುಕು ನಡೆಸುವ ಸ್ವಾವಲಂಬಿತನದ ಕಲ್ಪನೆ ಕಟ್ಟಿಕೊಟ್ಟಿದ್ದನ್ನು ಅವತ್ತು ಆಡಿಕೊಂಡಿತ್ತು ಕಾಂಗ್ರೆಸ್ಸು. ಇಂದು ರಾಹುಲ್ ‘ಕೆಲಸ ಸಿಗದಿದ್ದರೆ ಐಸಿಸ್ಗೆ ಸೇರಿ’ ಎಂಬ ಭಯೋತ್ಪಾದಕ ಕೆಲಸ ಕೊಡಿಸುವ ಕಂಪನಿಯ ಮುಖ್ಯಸ್ಥರಂತೆ ಕಾರ್ಯನಿರ್ವಹಿಸುತ್ತಿದ್ದಾರಲ್ಲಾ! ಹಾಗೇ ಸುಮ್ಮನೇ ಜೀವನದಲ್ಲಿ ಸೋತಿದ್ದೇನೆ ಎನಿಸಿಕೊಂಡವರೊಂದಷ್ಟು ಜನರನ್ನು ಈ ಲೇಖನದುದ್ದಕ್ಕೂ ಪರಿಚಯಿಸಿಕೊಡುವ ಪ್ರಯತ್ನ ಮಾಡುತ್ತೇನೆ. ಕೆಲಸ ಸಿಗಲಿಲ್ಲವೆಂದ ಮಾತ್ರಕ್ಕೆ ಐಸಿಸ್ಗೆ ಸೇರುವುದೇ ಪರಿಹಾರವಲ್ಲ. ಭಾರತ ಕೆಲಸವನ್ನು ಸೃಷ್ಟಿಸುವ ಇತರರಿಗೆ ಕೆಲಸವನ್ನು ಕೊಡುವ ಮಹತ್ವದ ಶಕ್ತಿಯಾಗಿ ಬೆಳೆಯಬೇಕಿದೆ.

ಗೂಗಲ್ನಲ್ಲಿ ಸಂದೀಪ್ ಮಹೇಶ್ವರಿ ಅಂತ ಟೈಪ್ ಮಾಡಿ ನೋಡಿ. ಲಕ್ಷಾಂತರ ಜನರಿಂದ ನೋಡಲ್ಪಟ್ಟಿರುವ ಆತ್ಮವಿಶ್ವಾಸ ವೃದ್ಧಿಯ ಅನೇಕ ವಿಡಿಯೊಗಳು ಕಂಡುಬರುತ್ತವೆ. ಆದರೆ ಇದೇ ಸಂದೀಪ್ ವೈಯಕ್ತಿಕ ಕಾರಣಗಳಿಗೋಸ್ಕರ ಓದು ಪೂರೈಸಲಾಗದೇ ಕಾಲೇಜು ಬಿಟ್ಟವ. ಮುಂದೆ ತಾನೊಬ್ಬ ಫ್ರೀಲ್ಯಾನ್ಸ್ ಫೋಟೋಗ್ರಾಫರ್ ಆಗಿ ಜನರಿಗೆ ಬೇಕಾಗುವ ಭಿನ್ನ ಭಿನ್ನ ಫೋಟೋಗಳ ಸ್ಟಾಕ್ ಇಮೇಜ್ಗಳನ್ನು ಸಂಗ್ರಹಿಸಿ ಅಂತಜರ್ಾಲ ಲೋಕದಲ್ಲೇ ಇಮೇಜ್ ಬಜಾರ್ನ ಮುಖ್ಯಸ್ಥನಾಗಿ ಗುರುತಿಸಿಕೊಂಡವ ಆತ. ಸೋಲಿನ ಭೀತಿಯನ್ನು ಎದುರಿಸುತ್ತಿದ್ದವನಿಗೆ ವಿಶ್ವಾಸ, ಚೈತನ್ಯ ತುಂಬಿ ಮತ್ತೆ ಹೋರಾಟಕ್ಕೆ ಅಣಿಮಾಡಿಸಬಲ್ಲ ಸಾಮಥ್ರ್ಯ ಸಂದೀಪ್ಗಿದೆ. ವಿಶ್ವ ಕಲ್ಯಾಣ್ರದ್ದೂ ಇದೇ ಬಗೆಯ ಕಥೆ. ಅಧ್ಯಯನದ ನಂತರ ಕೆಲಸ ಪಡೆಯಲು ಹೆಣಗಾಡಿದ ಆತ ಸಿಕ್ಕ ಕೆಲಸದಿಂದಲೂ ಮೂರೇ ತಿಂಗಳಲ್ಲಿ ಹೊರದಬ್ಬಲ್ಪಟ್ಟ. ಮುಂದಿನ ಎರಡು ವರ್ಷಗಳ ಕಾಲ ಮಾನಸಿಕ ಖಿನ್ನತೆಗೆ ಒಳಗಾದ ವಿಶ್ವಕಲ್ಯಾಣ್ ಆ ಹಂತದಿಂದ ಮೇಲೆದ್ದು ನಿಂತ. ತೆಳ್ಳಗಾಗಿ ಸೊರಗಿ ಹೋಗಿದ್ದ ಆತನ ಆಕಾರ, ಆತನ ದನಿ ಇವೆಲ್ಲವೂ ಹಾಸ್ಯ ಕಲಾವಿದನಾಗಿ ರೂಪುಗೊಳ್ಳಲು ಆತನಿಗೊಂದು ಶಕ್ತಿಯಾಗಿದ್ದವು. ಬರು-ಬರುತ್ತಾ ಆತ ಅತ್ಯಂತ ಹೆಚ್ಚು ಜನರಿಂದ ನೋಡಲ್ಪಡುವ ಹಾಸ್ಯ ಕಲಾವಿದನೂ ಆಗಿಬಿಟ್ಟ. ರಾಹುಲ್ ಹೇಳಿದಂತೆ ಐಸಿಸ್ಗೆ ಸೇರಲಿಲ್ಲ ಅಷ್ಟೇ.

ಇವೆಲ್ಲ ಬಲು ದೂರದ ಕಥೆ ಎನಿಸುವುದಾದರೆ ನಮ್ಮದ್ದೇ ತೀರ್ಥಹಳ್ಳಿಯ ವಿಶ್ವನಾಥ್ ಕುಂಟುವಳ್ಳಿ ಇಂತಹುದ್ದೇ ವ್ಯತಿರಿಕ್ತ ಬದುಕನ್ನು ಕಂಡವರು. ಡಿಪ್ಲೊಮಾ ಓದುತ್ತಿರುವಾಗ ತರಗತಿಗೆ ಬಂದ ಮೇಷ್ಟ್ರು ಸ್ವಲ್ಪ ಬೈದರೆಂಬ ಕಾರಣಕ್ಕೆ ಇನ್ನು ಮುಂದೆ ಕಾಲೇಜಿಗೇ ಬರುವುದಿಲ್ಲವೆಂದು ಹೊರ ಬಂದವರು ಅವರು. ವಿಶ್ವನಾಥರ ತಲೆಯಲ್ಲಿ ಉತ್ಪಾದನೆಯ ಕುರಿತ ವಿಶ್ವವಿದ್ಯಾಲಯವೇ ಇತ್ತು. ತಮ್ಮ ತೋಟಕ್ಕೆ ಬೇಕಾದ ಟ್ರಾಕ್ಟರ್ಗಳನ್ನು, ಮೋಟಾರು ಗಾಡಿಗಳನ್ನು ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವ ಚಾಕಚಕ್ಯತೆ ತೋರಿದ ಅವರು ವಿ.ಕೆ ಟೆಕ್ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿ ಅಡಿಕೆ ಸುಲಿಯುವ ಯಂತ್ರದ ಆವಿಷ್ಕಾರ ಮಾಡಿದರು. ಡಿಪ್ಲೊಮಾ ಕಾಲೇಜನ್ನು ಬಿಟ್ಟ ಮಾತ್ರಕ್ಕೆ ಅವರೆದುರಿಗೆ ಅಂಧಕಾರ ಕವಿದಿತ್ತೆಂದೇನಿಲ್ಲ. ಅವರು ತಮಗಿದ್ದ ಅವಕಾಶಗಳನ್ನು ಬಳಸಿಕೊಂಡು ಬೆಳೆದು ನಿಂತಿದುದರ ಪರಿಣಾಮ ಪುಟ್ಟ ತೀರ್ಥಹಳ್ಳಿಯಿಂದ 5 ರಾಷ್ಟ್ರಗಳಿಗೆ ಈ ಯಂತ್ರಗಳನ್ನು ಅವರಿಂದು ರಫ್ತು ಮಾಡುತ್ತಾರೆ. ಇತ್ತೀಚೆಗೆ ಬ್ಯಾಟರಿ ಚಾಲಿತ ದೇಸೀ ಬೈಕುಗಳ ನಿಮರ್ಾಣದಲ್ಲಿ ತೀವ್ರವಾದ ಆಸಕ್ತಿ ತೋರುತ್ತಿರುವ ಅವರು ತುಮಕೂರಿನಲ್ಲಿ ದೊಡ್ಡ ಘಟಕವೊಂದನ್ನು ಆರಂಭಿಸಿಯೂಬಿಟ್ಟಿದ್ದಾರೆ.

12 ವರ್ಷಕ್ಕೆ ಮದುವೆಯಾದ ಕಲ್ಪನಾ ಸರೋಜ್ ಗಂಡನ ಮತ್ತು ಅತ್ತೆ ಮಾವನ ಕಿರುಕುಳ ತಾಳಲಾಗದೇ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಯತ್ನಿಸಿದ್ದವಳು. ದಲಿತರಿಗಾಗಿ ಸಕರ್ಾರ ನೀಡುತ್ತಿದ್ದ ಸಹಾಯವನ್ನು ಪಡೆದುಕೊಂಡು ಹೊಲಿಗೆ ಉದ್ಯಮ ಶುರುಮಾಡಿದ್ದ ಸರೋಜ್ ನಿಧಾನವಾಗಿ ಪೀಠೋಪಕರಣಗಳ ಉದ್ಯಮಕ್ಕೆ ಕೈ ಹಾಕಿದರು. ಆಕೆಯ ಆತ್ಮವಿಶ್ವಾಸ ಅದೆಷ್ಟು ಗರಿಗೆದರಿತ್ತೆಂದರೆ ನಷ್ಟದಲ್ಲಿದ್ದ ಕಬ್ಬಿಣದ ಕಂಪನಿಯೊಂದನ್ನು ಆಕೆ ಖರೀದಿ ಮಾಡಿ ಸಂಬಳವೇ ಇಲ್ಲದೇ ಹೆಣಗಾಡುತ್ತಿದ್ದ ಕೆಲಸಗಾರರಿಗೆ ಕೈ ತುಂಬ ಕೆಲಸ ಕೊಟ್ಟು ತನ್ನದೇ ಆದ ಶೈಲಿಯಲ್ಲಿ ಇಡಿ ಉದ್ಯಮವನ್ನು ಮತ್ತೆ ಲಾಭದಾಯಕವಾಗಿಸಿಕೊಂಡಳು. ಬಹುಶಃ ಆಕೆ ರಾಹುಲ್ನ ಈ ಭಾಷಣ ಕೇಳಿದ್ದಿದ್ದರೆ ಇಂದು ಐಸಿಸ್ನಲ್ಲಿ ದಾಸಿಯಾಗಿರಬೇಕಿತ್ತೇನೋ. ಬ್ಯಾಂಕಾಕ್ಗೆ ಮಾಷರ್ಿಯಲ್ ಆಟರ್್ ಕಲಿತು ಅಲ್ಲಿ ಅಡಿಗೆ ಭಟ್ಟನಾಗಬೇಕೆಂದು ಹೊರಟಿದ್ದ ಅಕ್ಷಯ್ಕುಮಾರ್ ಗುರುನಾನಕ್ ಖಾಲ್ಸಾ ಕಾಲೇಜಿನಿಂದ ಹೊರದಬ್ಬಲ್ಪಟ್ಟಿದ್ದವ. ಕೆಲಸ ಸಿಗಲಿಲ್ಲವೆಂದು ಆತ ಕೊರಗುತ್ತಾ ಕೂರಲಿಲ್ಲ, ಬದಲಿಗೆ ನಟನೆಯ ಕ್ಷೇತ್ರದಲ್ಲಿ ಪರಿಣತಿ ತೋರಿ ಇಂದು ಸಿನಿಮಾ ಕ್ಷೇತ್ರದಲ್ಲಿ ಅಪರೂಪದ ನಾಯಕನಾಗಿ ಹೆಸರುಗಳಿಸಿದ್ದಾನೆ. ಮುಂಬೈನ ಸೇಂಟ್ ಕ್ಸೇವಿಯರ್ ಕಾಲೇಜಿನಿಂದ ಓದು ಪೂರೈಸಲಾಗದೇ ಹೊರಬಂದು ಇಂದು ಸೆಲೆಬ್ರಿಟಿಯಾಗಿ ಬೆಳೆದು ನಿಂತಿರುವ ಸಲ್ಮಾನ್ ಖಾನ್ ಇಷ್ಟು ಹೊತ್ತಿಗೆ ಐಸಿಸ್ನ ಕಮಾಂಡರ್ ಆಗಿರಬೇಕಿತ್ತು.

ಎಂಬಿಎ ಕಾಲೇಜನ್ನು ಅರ್ಧದಲ್ಲೇ ಬಿಟ್ಟುಬಂದು ಜಗತ್ತಿನ ಹತ್ತಾರು ಸಿರಿವಂತರ ಪೈಕಿ ಗುರುತಿಸಿಕೊಳ್ಳುವ ವ್ಯಕ್ತಿ ಯಾರು ಗೊತ್ತೇ? ಮುಖೇಶ್ ಅಂಬಾನಿ. ಕಾಲೇಜು ಓದು ಪೂರೈಸಲಾಗದೇ ಹೊರಬಂದು ಮೈದಾನದಲ್ಲಿ ಬೆವರು ಸುರಿಸಿ ಶ್ರೇಷ್ಠ ಕ್ರಿಕೆಟರ್ ಆದವ ಕಪಿಲ್ ದೇವ್. ಹತ್ತನೇ ತರಗತಿಯಲ್ಲಿ ಫೇಲಾಗಿ ಮುಂದೆ ಓದಲಾಗದೇ ಕ್ರಿಕೆಟ್ ಲೋಕದಲ್ಲಿ ದೇವರೆಂದು ಕರೆಯಲ್ಪಟ್ಟ ತೆಂಡೂಲ್ಕರ್ ಭಿನ್ನವಾಗಿ ನಿಂತಿದ್ದಾನೆ. ರಾಹುಲ್ನ ಕಾಂಗ್ರೆಸ್ಸೇ ತೆಂಡೂಲ್ಕರ್ನನ್ನು ರಾಜ್ಯಸಭೆಗೆ ಆಯ್ಕೆ ಮಾಡಿತೇ ಹೊರತು ಭಯೋತ್ಪಾದಕ ಸಂಘಟನೆಗಲ್ಲ. ವಿಪ್ರೊ ಕಂಪನಿ ಕಟ್ಟಿದ ಅಜೀಂ ಪ್ರೇಮ್ಜಿ ಕಾಲೇಜು ಬಿಟ್ಟು 21 ನೇ ವಯಸ್ಸಿನ ವೇಳೆಗಾಗಲೇ ಕಂಪನಿ ಕಟ್ಟಿ ರಾಷ್ಟ್ರದ ಕೀತರ್ಿಯನ್ನು ಹೆಚ್ಚಿಸುವಲ್ಲಿ ತೊಡಗಿದ್ದರು.

ಕೆಲಸ ಕಳೆದುಕೊಳ್ಳುವುದು ಕೆಲಸ ಸಿಗದೇ ಇರುವುದು ಇವೆಲ್ಲಾ ಬದುಕಿನ ಏರುಪೇರುಗಳ ಒಂದು ಭಾಗವಷ್ಟೇ ಯಾವಾಗಲಾದರೂ ರಸ್ತೆಯ ಬದಿಯಲ್ಲಿ ದಿನಾಲು ನೂರಾರು ಜನರಿಗೆ ಪಾನಿಪುರಿ ಬೇಲ್ಪುರಿ ಮಾಡಿಕೊಡುವ ವ್ಯಕ್ತಿಯನ್ನು ಗಮನಿಸಿ ನೋಡಿ. ಅವರಲ್ಲಿ ಕೆಲವರು ನಿಸ್ಸಂಶಯವಾಗಿ ಪದವಿ ಪಡೆದವರಾಗಿರುತ್ತಾರೆ. ಬೆಂಗಳೂರಿನ ದೊಡ್ಡ ಮತ್ತು ಮಧ್ಯಮ ಹೋಟೆಲ್ಲುಗಳಲ್ಲಿ ತಿಂಡಿ ತಂದುಕೊಡುವ ಏನು ಬೇಕೆಂದು ಬರೆದುಕೊಳ್ಳುವ ವ್ಯಕ್ತಿಗಳನ್ನು ಮಾತನಾಡಿಸಿ ಅವರಲ್ಲಿ ಬಹುಪಾಲು ಜನ ಪದವಿ ಪಡೆದವರೇ ಆಗಿರುತ್ತಾರೆ. ಕೆಲಸ ಓದಿಗೆ ತಕ್ಕಂತದ್ದೇ ಆಗಿರಬೇಕೆಂದಲ್ಲ. ಹಾಗೆ ನೋಡಿದರೆ ಓದುವುದಕ್ಕೂ ಕೆಲಸಕ್ಕೂ ಸಂಬಂಧವೇ ಇಲ್ಲ. ಇಂಜಿನಿಯರಿಂಗ್ ಮುಗಿಸಿ ಸಂತರಾದ ಅನೇಕರು ರಾಮಕೃಷ್ಣಾಶ್ರಮದಲ್ಲಿ ಸಿಗುತ್ತಾರೆ. ಎಂಬಿಬಿಎಸ್ ಪದವಿ ಪಡೆದು ಉದ್ಯೋಗ ಬೇಡವೆಂದು ಪ್ರಚಾರಕರಾದವರೂ ಸಂಘದಲ್ಲಿದ್ದಾರೆ. ನಾವು ಮಾಡುವ ಕೆಲಸದಲ್ಲಿ ಆಸಕ್ತಿ ಮತ್ತು ಅದರಿಂದ ಸಿಗುವ ಆನಂದ ಇವು ನಮ್ಮ ಕೆಲಸವನ್ನು ನಿರ್ಧರಿಸುವಂತಾಗಬೇಕು. 23 ನೇ ವಯಸ್ಸಿನಲ್ಲಿ ತನ್ನ ಕೆಲಸವನ್ನು ಕಳೆದುಕೊಂಡು ಚುನಾವಣೆಯಲ್ಲಿ ಸೋತು, 26 ನೇ ವಯಸ್ಸಿನ ವೇಳೆಗೆ ತಾನು ಪ್ರೀತಿಸಿದವಳನ್ನು ಕಳೆದುಕೊಂಡು, 29 ರ ವೇಳೆಗೆ ಸದನದಲ್ಲಿ ಸ್ಪೀಕರ್ ಆಗುವ ಅವಕಾಶವನ್ನು ಕೈತಪ್ಪಿಸಿಕೊಂಡು, 39 ರ ವೇಳೆಗೆ ಕಮೀಷನರ್ ಆಗುವ ಅವಕಾಶ ಕೈ ತಪ್ಪಿ ಹೋಗಿ, 49 ರಲ್ಲಿ ಸೆನೆಟರ್ ಆಗುವ ಚುನಾವಣೆಯಲ್ಲಿ ಸೋತು, ಬದುಕೇ ಅಂಧಕಾರದಲ್ಲಿದ್ದಾಗಲೂ ಲಿಂಕನ್ ದೇಶ ವಿರೋಧಿ ಕೃತ್ಯಕ್ಕೋ ಭಯೋತ್ಪಾದಕ ವೃತ್ತಿಗೋ ಕೈ ಚಾಚಲಿಲ್ಲ. ಹೀಗಾಗಿಯೇ ತನ್ನ 52 ನೇ ವಯಸ್ಸಿನಲ್ಲಿ ಆತ ಅಮೇರಿಕಾದ ಅಧ್ಯಕ್ಷನೇ ಆಗಿಬಿಟ್ಟ. ಬಹುಶಃ ರಾಹುಲ್ಗೂ ಅದೇ ಕನಸಿದ್ದಿರಬಹುದೇನೋ!!

ಇಷ್ಟಕ್ಕೂ ಇವೆಲ್ಲ ಉದಾಹರಣೆಗಳ ಬದಲು ರಾಹುಲ್ನನ್ನೇ ಉದಾಹರಣೆ ಕೊಡಬಹುದಿತ್ತು. ಆತನ ಬಳಿ ಸ್ವಂತದ್ದೆನ್ನುವುದಕ್ಕೆ ತಂದೆಯ ಹೆಸರೊಂದನ್ನು ಬಿಟ್ಟರೆ ಮತ್ತೇನಿದೆ ಹೇಳಿ. ಅಧ್ಯಯನದ ವಿಚಾರಕ್ಕೆ ಬಂದರೆ ಪದವಿ ಪಡೆದಿರುವುದು ನಿಜವಾ ಎಂಬುದಕ್ಕೆ ಪುರಾವೆ ಇಲ್ಲ. ಬೌದ್ಧಿಕ ಸಾಮಥ್ರ್ಯಕ್ಕೆ ಬಂದರೆ ಯಾರೂ ಸಮಥರ್ಿಸಿಕೊಳ್ಳಬಹುದಾದ ಮಾತುಗಳನ್ನು ಆತ ಆಡುವುದೇ ಇಲ್ಲ. ಎಲ್ಲಕ್ಕೂ ಮಿಗಿಲಾಗಿ ಕಾಂಗ್ರೆಸ್ಸಿನಲ್ಲಿಯೇ ತುಲನಾತ್ಮಕವಾಗಿ ಆತನಿಗಿಂತ ಸಮರ್ಥರು ಅನೇಕರಿದ್ದಾರೆ. ಎಲ್ಲ ದಿಕ್ಕಿನಿಂದಲೂ ನಪಾಸಾದ ನಂತರವೂ ಐಸಿಸ್ಗೆ ಸೇರದೇ ರಾಹುಲ್ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದಾರೆಂದರೆ ಇದಕ್ಕಿಂತ ಹೆಚ್ಚು ಪ್ರೇರಣಾದಾಯಿ ಘಟನೆ ಮತ್ತೊಂದು ಇರಲು ಹೇಗೆ ಸಾಧ್ಯ! ಅಥವಾ ಮೋದಿ-ಶಾಹ್ ಜೋಡಿ ರಾಹುಲ್ನಿಂದ ಗೆಲುವಿನ ಎಲ್ಲ ಅವಕಾಶಗಳನ್ನು ಕಸಿದುಕೊಂಡಿರುವುದರಿಂದ ಆತ ನಿರುದ್ಯೋಗಿಯಾಗಿ ಐಸಿಸ್ ಸೇರಿಬಿಡುವನೆಂಬ ಹೆದರಿಕೆಯಿಂದಲೇ ಕಾಂಗ್ರೆಸ್ಸಿನ ಅಧ್ಯಕ್ಷ ಮಾಡಲಾಯಿತಾ? ಈಗ ಉತ್ತರ ಹುಡುಕಾಡಬೇಕು.

ರಾಹುಲ್ನ ಎಲ್ಲ ತಪ್ಪುಗಳನ್ನು ಭಾರತದ ಮತದಾರ ಕ್ಷಮಿಸಿಬಿಡಬಹುದೇನೋ. ಆದರೆ ಆತ ಭಾರತವನ್ನು ಜಾಗತಿಕ ಮಟ್ಟದಲ್ಲಿ ತುಚ್ಛವಾಗಿ ತೋರಿಸುವುದನ್ನು ಮಾತ್ರ ಯಾರೂ ಸಹಿಸಲಾರರು. ಅದಕ್ಕೆ ಪ್ರತಿಫಲವನ್ನು ಆತ ಉಣ್ಣಲೇಬೇಕು. ಹೀಮಾದಾಸ್ ಅಥ್ಲೆಟಿಕ್ಸ್ನಲ್ಲಿ ಚಿನ್ನ ಗಳಿಸಿ ರಾಷ್ಟ್ರಗೀತೆಯನ್ನು ಕೇಳುವಾಗ ಕಣ್ತುಂಬಿಸಿಕೊಂಡು ಅತ್ತಳಲ್ಲ ಅದರಲ್ಲಿ ಒಂದಂಶದ ರಾಷ್ಟ್ರಭಕ್ತಿಯಾದರೂ ಇದ್ದಿದ್ದರೆ ಇಂತಹ ಮಾತುಗಳನ್ನು ರಾಹುಲ್ ಖಂಡಿತ ಆಡುತ್ತಿರಲಿಲ್ಲ.

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top