Politics

ನಿಯತ್ತಾಗಿ ನಡೆದುಕೊಂಡರೆ ಅಧಿಕಾರ; ಎಡವಟ್ಟಾದರೆ ಬದುಕು ನರಕ!!

ಅಧಿಕಾರ ಎನ್ನುವುದು ಹಾಗೆಯೇ. ಬರುವಾಗ ಸದ್ದು ಮಾಡಿಕೊಂಡು ಬರುತ್ತದೆ. ಹೋಗುವಾಗ ಅನಾಥವಾಗಿಸಿ ಹೋಗುತ್ತದೆ. ಅಧಿಕಾರ ಬಂದಾಗ ಅದರ ಮತ್ತನ್ನು ತಲೆಗೇರಿಸಿಕೊಳ್ಳದವರು ಮಾತ್ರ ಅದನ್ನು ಕಳಕೊಂಡಾಗ ಕಣ್ಣೀರಿಡಬೇಕಾದ ಪರಿಸ್ಥಿತಿ ಬರುವುದಿಲ್ಲ. ಕುಚರ್ಿಯ ಮೇಲೆ ಕುಳಿತಾಗ ಜನ ನಮ್ಮನ್ನು ನೋಡುವ ರೀತಿ, ಗೌರವಿಸುವ ರೀತಿ ಬೇರೆಯೇ. ಆಗೆಲ್ಲಾ ಅವರು ನಮ್ಮನ್ನು ಗೌರವಿಸುತ್ತಿದ್ದಾರೆಂದು ಭಾವಿಸಿದರೆ ಅದು ಬಲುದೊಡ್ಡ ಪ್ರಮಾದ. ಅದನ್ನು ಕಳಕೊಂಡಾಗಲೂ ಆ ಗೌರವ ಉಳಿಸಿಕೊಳ್ಳುವಂತಹ ಕೆಲಸ ನಮ್ಮಿಂದಾಗಬೇಕು ಅಷ್ಟೇ. ಅದರಲ್ಲೂ ರಾಜಕೀಯದ ಕಾರಣದ ಅಧಿಕಾರಕ್ಕೋಸ್ಕರ ಸಿಗುವ ಗೌರವ ಅದನ್ನು ಕಳಕೊಂಡ ಮರುಕ್ಷಣ ಧ್ವಂಸವಾಗಿಬಿಟ್ಟಿರುತ್ತದೆ. ತಾತ್ಕಾಲಿಕ ಅವಧಿಗಾಗಿ ಮುಖ್ಯಮಂತ್ರಿಯಾಗಿದ್ದ ಕನರ್ಾಟಕದವರೇ ಒಬ್ಬರು ಅದನ್ನು ಕಳಕೊಂಡಾಗ ಮನೆಗೆ ಯಾರೊಬ್ಬರೂ ಬರದೇ ಒಂಟಿಯಾಗಿ ಖಿನ್ನತೆಯಲ್ಲಿ ಕುಳಿತಿರುತ್ತಿದ್ದುದನ್ನು ಅವರ ಸುತ್ತಲಿನವರು ಗಮನಿಸಿ ಹೇಳಿಕೊಳ್ಳುತ್ತಿದ್ದರು. ಇದನ್ನು ಅರಿತ ನಂತರವೂ ಮತ್ತೆ ಅಧಿಕಾರದ ಗದ್ದುಗೆ ಏರಿದಾಗ ಅವರು ಹಳೆಯ ಮಾತನ್ನು ಮುಂದುವರೆಸಿಯೇ ಇದ್ದದ್ದು ಕಣ್ಣೆದುರಿಗೇ ರಾಚುತ್ತಿತ್ತು. ನಿನ್ನೆ-ಮೊನ್ನೆಯವರೆಗೂ ಏಕವಚನದಲ್ಲಿ ಮಾತನಾಡಿಸುತ್ತಿದ್ದ ವ್ಯಕ್ತಿ ನೀವು ಶಾಸಕರೋ ಸಂಸದರೋ ಆಗಿಬಿಟ್ಟ ಮರುದಿನವೇ ಬಹುವಚನದಲ್ಲಿ ಮಾತನಾಡಿಸುತ್ತಾರೆ, ಕೈಕಟ್ಟಿಕೊಂಡು ಸೊಂಟವನ್ನು ಬಗ್ಗಿಸಿ ನಿಂತುಬಿಡುತ್ತಾರೆ. ಇದಕ್ಕೇನಾದರೂ ಮೈ ಮರೆತರೆ ಬದುಕು ಮೂರಾಬಟ್ಟೆಯೇ ಸರಿ!


ನರೇಂದ್ರಮೋದಿ ಇಷ್ಟವಾಗೋದು ಆ ಕಾರಣಕ್ಕಾಗಿಯೇ. ಅವರ ಸುತ್ತಮುತ್ತ ಅಪ್ಪಟ ದೇಸೀ ಭಾಷೆಯಲ್ಲಿ ಹೇಳಬಹುದಾದರೆ ಬಕೀಟು ಹಿಡಿಯುವ ಜನರೇ ಇಲ್ಲ. ಹೀಗಾಗಿ ಸಾಮಾನ್ಯ ಜನತೆಯೇ ಅವರನ್ನು ಆರಾಧಿಸೋದು. ಕಳೆದ 17 ವರ್ಷಗಳಿಂದ ಅವರು ಅಧಿಕಾರದ ಮೊಗಸಾಲೆಯಲ್ಲಿ ಉನ್ನತ ಹುದ್ದೆಯಲ್ಲೇ ಇದ್ದಾರೆ. ಆದರೆಂದಿಗೂ ತಮ್ಮದ್ದೇ ಆದ ವಲಯವೊಂದನ್ನು ಸೃಷ್ಟಿಸಿಕೊಂಡು ಅದರ ಪ್ರಭೆಗೆ ಸಿಲುಕಿ ಸಾಮಾನ್ಯರಿಂದ ದೂರವಾಗಲೇ ಇಲ್ಲ. ಅವರಿಗೆ ದೈವಭಕ್ತಿ ಕಡಿಮೆ ಇಲ್ಲ. ಹಾಗಂತ ತನ್ನ ಕರ್ತವ್ಯವನ್ನು ಬಿಟ್ಟು ದೇವಸ್ಥಾನಗಳಿಗೆ ಸುತ್ತುವುದನ್ನೇ ರೂಢಿ ಮಾಡಿಕೊಂಡಿಲ್ಲ. ಅವರ ಬದುಕಿನ ಹಾದಿಯನ್ನು ನಮ್ಮ ರಾಜಕಾರಣಿಗಳೊಂದಿಗೆ ಒಮ್ಮೆ ತುಲನೆ ಮಾಡಿ ನೋಡಿ. ರೇವಣ್ಣನವರು ಕೈಯಲ್ಲಿ ನಿಂಬೆಹಣ್ಣು ಹಿಡಿದುಕೊಂಡೇ ಖ್ಯಾತರಾದವರು. ಅದೆಲ್ಲಿಂದ ಈ ನಿಂಬೆಹಣ್ಣಿನ ದೆವ್ವ ಸಿದ್ದರಾಮಯ್ಯನವರ ಮೇಲೆ ಸವಾರಿ ಮಾಡಿತ್ತೋ ಗೊತ್ತಿಲ್ಲ. ಅವರೂ ಕೈಲಿ ಅನೇಕ ಬಾರಿ ನಿಂಬೆಹಣ್ಣು ಹಿಡಿದುಕೊಂಡು ಎಲ್ಲರ ಮುಂದೆ ಕಾಣಿಸಿಕೊಂಡದ್ದಿದೆ. ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಗೆ ತರುತ್ತೇನೆನ್ನುತ್ತಲೇ ಕಾಗೆ ಕೂತಿದ್ದಕ್ಕೆ ಕಾರನ್ನು ಬದಲಾಯಿಸಿದ ಭೂಪ ಅವರು. ಇನ್ನು ಈಗ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿರುವ ಯಡ್ಯೂರಪ್ಪನವರು ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಹೆಸರಿಗೆ ಒಂದು ‘ಡಿ’ ಸೇರಿಸಿಕೊಂಡಿದ್ದರು, ಈ ಬಾರಿ ಅದನ್ನು ತೆಗೆದುಬಿಟ್ಟಿದ್ದಾರೆ. ಅದಕ್ಕೆ ಸಂಖ್ಯಾಶಾಸ್ತ್ರದ ನೆಪಗಳು ಬೇರೆ. ಹೊಸ ಪೀಳಿಗೆಯ ತರುಣರು ಇವನ್ನೆಲ್ಲಾ ಗಮನಿಸುವುದಿಲ್ಲ ಎಂದುಕೊಳ್ಳಬೇಡಿ. ಅವರಿಗೆ ದೈವಭಕ್ತಿ ಇಲ್ಲವೆಂದಲ್ಲ. ಆದರೆ ಅದನ್ನು ಮೌಢ್ಯತನದಿಂದ ಸ್ವೀಕಾರ ಮಾಡುವ ಸ್ಥಿತಿಯಲ್ಲಿ ಅವರಿಲ್ಲ. ಅವರು ದೇವಸ್ಥಾನಕ್ಕೆ ಹೋಗುತ್ತಾರೆ ನಿಜ. ಆದರೆ ಜ್ಯೋತಿಷಿಗಳು ಹೇಳುವ ಅನವಶ್ಯಕ ಆಚರಣೆಗಳ ಕುರಿತಂತೆ ಆಡಿಕೊಂಡು ನಗುತ್ತಾರೆ. ಇಂತಹ ನವತರುಣರೇ ತುಂಬಿರುವ ಈ ನಾಡನ್ನು ಆಳುವುದಕ್ಕೆ ಅದೇ ಪ್ರಜ್ಞಾವಂತಿಕೆ ಬೇಕಲ್ಲವೇ. ಬಹುಶಃ ನಮ್ಮ ಮಂತ್ರಿ, ಶಾಸಕ, ಮುಖ್ಯಮಂತ್ರಿಗಳೆಲ್ಲಾ ಕಲಿಯಬೇಕಾಗಿರುವ ಮೊದಲನೇ ಪಾಠ ಇದೇ! ನೀವು ಒಂದು ದೇವಸ್ಥಾನಕ್ಕೆ ಹೋದರೆ ಮತ್ತೊಂದು ದೇವಸ್ಥಾನದವರು ನಿಮ್ಮ ಬಳಿ ಧಾವಿಸಿ ಬರುತ್ತಾರೆ ಮತ್ತು ಅವರವರ ದೃಷ್ಟಿಯಲ್ಲಿ ಅವರವರ ದೇವರು ಉಳಿದೆಲ್ಲರಿಗಿಂತ ಪವರ್ಫುಲ್ಲೇ. ಮೋದಿ ಯಾವುದಾದರೂ ದೇವಸ್ಥಾನಕ್ಕೆ ಹೋದರೂ ಅಲ್ಲಿ ಕೊಡಬೇಕಾದಷ್ಟು ಸಮಯವನ್ನು ಕೊಟ್ಟು ನೀಡಬೇಕಾದ ಸಂದೇಶವನ್ನು ಸಮಾಜಕ್ಕೆ ನೀಡಿ ಹೊರಟುಬಿಡುತ್ತಾರೆ. ಅವರು ದೇಶದ ಯಾವುದೇ ಮಠಗಳಿಗೆ, ಯಾವುದೇ ಗುರುಗಳ ಬಳಿ ಪದೇ ಪದೇ ಭೇಟಿ ಕೊಡುವುದನ್ನು ಯಾರೂ ಕಂಡೇ ಇಲ್ಲ. ಏಕೆಂದರೆ ಒಬ್ಬ ಮಠಾಧೀಶರ ಬಳಿ ಹೋದೊಡನೆ ಉಳಿದೆಲ್ಲರಿಗೂ ಅಪೇಕ್ಷೆ ಶುರುವಾಗಿಬಿಡುತ್ತದೆ ಮತ್ತು ತಾನು ಪ್ರಧಾನಿಯಾಗಿರುವುದು ಮಠದ ಪ್ರಮುಖರ ಬಯಕೆ ಈಡೇರಿಸಲಿಕ್ಕಲ್ಲ, ಬದಲಿಗೆ ಆರಿಸಿ ಕಳಿಸಿದ ಜನರ ಮತ್ತು ಈ ದೇಶದ ಗೌರವವನ್ನು ಹೆಚ್ಚಿಸಲು ಎಂಬುದ ಅವರಿಗೆ ಚೆನ್ನಾಗಿ ಗೊತ್ತಿದೆ.

ಅಧಿಕಾರದಲ್ಲಿರುವವರಿಗೆ ದೊಡ್ಡ ಸಮಸ್ಯೆ ಅವರ ಪರಿವಾರವೇ. ಮೋದಿಯವರು ದೂರದಿಂದ ನೋಡಿದರೆ ಭಾಗ್ಯವಂತರೇ. ಅವರಿಗೆ ಮದುವೆಯಾಗದಿರುವುದರಿಂದ ಪರಿವಾರದ ಸಮಸ್ಯೆಯಿಲ್ಲ ಎಂದು ಮೇಲ್ನೋಟಕ್ಕೆ ಹೇಳಬಹುದಾದರೂ ಮದುವೆಯಾಗದ ಅಟಲ್ ಬಿಹಾರಿ ವಾಜಪೇಯಿಯವರಿಗೂ ಅಪವಾದಗಳು ತಪ್ಪಿರಲಿಲ್ಲ. ದತ್ತು ಪುತ್ರಿಯ ಗಂಡ ಅಂದರೆ ಅಟಲ್ಜೀಯವರ ಅಳಿಯ ಪ್ರಧಾನಮಂತ್ರಿ ಕಛೇರಿಯಲ್ಲಿ ಬಹುವಾಗಿ ಕೈಯ್ಯಾಡಿಸುತ್ತಾನೆ ಎಂಬ ಆಪಾದನೆಗಳು ಜೀವಹಿಂಡಿದ್ದವು. ಹಾಗಂತ ಮದುವೆಯಾದರೆ ಹೆಂಡತಿ ಮತ್ತು ಅವರ ಪರಿವಾರ ಸೇರಿಕೊಳ್ಳಬಹುದಷ್ಟೇ. ಹಾಳು ಮಾಡಲು ಸ್ವಂತ ಪರಿವಾರವಂತೂ ಇದ್ದೇ ಇದೆಯಲ್ಲ. ಮೋದಿ ಎಂದಾದರೂ ಅಧಿಕಾರದ ಪಡಸಾಲೆಗೆ ತಮ್ಮ ಅಣ್ಣ-ತಮ್ಮಂದಿರನ್ನು, ಸೋದರ ಸಂಬಂಧಿಗಳನ್ನು ಕರೆತಂದದ್ದನ್ನು ನೋಡಿದಿರೇನು? ದೇವೇಗೌಡರೇನಾದರೂ ತಮ್ಮ ಮಕ್ಕಳನ್ನು ರಾಜಕಾರಣಕ್ಕೆ ತರದೇ ಸಮರ್ಥ ವ್ಯಕ್ತಿಗಳಿಗೆ ಪಕ್ಷದ ವಾರಸುದಾರಿಕೆ ಕೊಡುವಂತಹ ಆಲೋಚನೆ ಮಾಡಿದ್ದಿದ್ದರೆ ಇಂದು ರಾಜ್ಯದ ದೃಷ್ಟಿಯಲ್ಲಿ ಅಕ್ಷರಶಃ ದೇವರಾಗಿಬಿಟ್ಟಿರುತ್ತಿದ್ದರು. ನಮ್ಮೆಲ್ಲ ರಾಜಕಾರಣಿಗಳಿಗೂ ತಮ್ಮ ಅಧಿಕಾರವನ್ನು ಪರಿವಾರದವರಿಗೇ ಹಂಚಬೇಕೆಂಬ ತುಡಿತ. ಕಾರ್ಯಕರ್ತರೂ ಹಾಗೆಯೇ ಆಗಿಬಿಟ್ಟಿದ್ದಾರೆ. ಅವರ ಮಕ್ಕಳಿಗೆ ಬಿಟ್ಟು ಉಳಿದ ಜಾಗಕ್ಕಾಗಿಯೇ ತಾವು ಕೋರಿಕೆ ಮಂಡಿಸುತ್ತಾರೆ. ಸದಸ್ಯತಾ ಅಭಿಯಾನದಲ್ಲಿ ಮೈಮುರಿದು ದುಡಿಯುವ ಭಾಜಪದ ಕಾರ್ಯಕರ್ತರು ಶಾಸಕರಿಗೊಬ್ಬ ಮಗನಿದ್ದರೆ ತಾವು ಶಾಸಕನಾಗುವ ಕನಸ್ಸನ್ನೇ ಕಟ್ಟಿ ಅಟ್ಟಕ್ಕೆಸೆದುಬಿಡುತ್ತಾರೆ. ಪಕ್ಷವೂ ಕೂಡ ಇಂಥದ್ದರ ಕುರಿತಂತೆ ಎಚ್ಚರಿಕೆ ವಹಿಸುವುದನ್ನು ಮರೆತುಬಿಡುತ್ತದೆ. ಮೋದಿ ಜನರ ಕಣ್ಮಣಿಯಾಗಿರುವುದೇಕೆಂದರೆ ಅವರು ತಮ್ಮವಯರ್ಾರನ್ನೂ ಕರೆತರದೇ ಕಾರ್ಯಕರ್ತರಲ್ಲೇ ಇರುವ ಸಮರ್ಥರನ್ನು ಗುರುತಿಸಿ ಮುನ್ನೆಲೆಗೆ ಎಳೆತರುತ್ತಾರೆ. ಅಮಿತ್ಶಾ ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಅವರ ಮಗ ತನ್ನದ್ದೇ ಆದ ಉದ್ದಿಮೆಯನ್ನು ನಡೆಸುತ್ತಾನೆಯೇ ಹೊರತು ತಂದೆಯ ಕ್ಷೇತ್ರದಲ್ಲಿ ತಾನು ಚುನಾವಣೆಗೆ ನಿಲ್ಲುತ್ತೇನೆ ಎನ್ನುವುದಿಲ್ಲ!

ಪರಿವಾರದವರನ್ನು ಬಿಟ್ಟುಕೊಂಡರೆ ನಿಜವಾದ ಸಮಸ್ಯೆಯೇನು ಗೊತ್ತೇ? ಅಪ್ಪನಿಗಾಗದ ಅನೇಕ ಡೀಲುಗಳನ್ನು ಮಕ್ಕಳು ಮಾಡಿಕೊಂಡುಬಿಡುತ್ತಾರೆ. ಅನೇಕ ದೊಡ್ಡ ದೊಡ್ಡ ರಾಜಕಾರಣಿಗಳು ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿರುವುದು ಅವರ ಮಕ್ಕಳ ಕಾರಣದಿಂದಾಗಿಯೇ ಹೊರತು ಸ್ವಂತದ್ದಲ್ಲವೇ ಅಲ್ಲ. ಕೆಲವರಂತೂ ಅಧಿಕಾರದಲ್ಲಿರುವ ತಂದೆಯ ಸಹಿಯನ್ನೂ ತಾವೇ ಹಾಕಿ ಅನೇಕ ಭ್ರಷ್ಟಾಚಾರಕ್ಕೆ ಕಾರಣವಾಗಿದ್ದೂ ರಾಜಕೀಯದ ಪಡಸಾಲೆಗಳಲ್ಲಿ ಕೇಳಿಬರುತ್ತದೆ. ವಿಚಾರ ತಂದೆಗೆ ಗೊತ್ತಾದಾಗ ತನ್ನ ಮಕ್ಕಳನ್ನೂ ಶಿಕ್ಷಿಸಿ ಜೈಲಿಗೆ ಕಳಿಸಲು ಆತನೇನು ಅಮೋಘವರ್ಷ ನೃಪತುಂಗನೇ?!

ಎಲ್ಲಕ್ಕೂ ಮಿಗಿಲಾಗಿ ಯಾವುದೇ ಅಧಿಕಾರವಿರಲಿ ಅದು ಜನಸೇವೆಗೆಂದೇ ಸಿದ್ಧಿಸಿರುವಂಥದ್ದು. ಅಧಿಕಾರ ಬಿಡಿ, ವಿವೇಕಾನಂದರಂತೂ ನಿಮ್ಮ ಬಳಿಯಿರುವ ಹಣ ಭಗವಂತ ಇತರರ ಸೇವೆಗೆಂದು ನಿಮಗೆ ಕೊಟ್ಟಿರುವುದು. ಆತನ ಸಂಪತ್ತನ್ನು ಸೂಕ್ತ ರೀತಿಯಲ್ಲಿ ಬಳಸಲು ನೀವು ‘ಟ್ರಸ್ಟೀ’ಗಳಷ್ಟೇ ಎನ್ನುತ್ತಿದ್ದರು. ಹಾಗಿದ್ದ ಮೇಲೆ ಇನ್ನು ಅಧಿಕಾರದ ಮಾತೇನೆಂದು ಹೇಳುವುದು. ಅಧಿಕಾರದ ಅಮಲೇರಿರುವಾಗ ಇದನ್ನೆಲ್ಲಾ ಮರೆತು ಕುಳಿತುಬಿಟ್ಟವರು ಅಧಿಕಾರ ಕಳಕೊಂಡಾಗ ಇನ್ನೂ ಸ್ವಲ್ಪ ಕೆಲಸ ಮಾಡಬಹುದಿತ್ತು ಎಂದು ದುಃಖಿಸುತ್ತಾರೆ. ರಾಜಕಾರಣದ ಮೆಟ್ಟಿಲುಗಳನ್ನೇರುತ್ತಾ ಉನ್ನತ ಪದವಿ ತಲುಪಿದವರಂತೂ ಅಧಿಕಾರ ಕೈಲಿರುವಾಗ ಜನಮೆಚ್ಚುವ ಕೆಲಸ ಮಾಡಿಬಿಡಬೇಕು. ತಮ್ಮವರು, ಇತರರು ಎಂಬ ಭೇದವನ್ನು ಪಕ್ಕಕ್ಕಿಟ್ಟು ಸಬ್ಕಾ ಸಾಥ್ ಸಬ್ಕಾ ವಿಕಾಸ್ ಮಾಡಿಯೇಬಿಡಬೇಕು. ಹಾಗೆ ನೋಡಿದರೆ ಎಂಥವರೇ ಆದರೂ ಐದು ವರ್ಷದ ಅಧಿಕಾರಾವಧಿಯಲ್ಲಿ ಪ್ರಭೆಯನ್ನು ಕಳೆದುಕೊಳ್ಳುತ್ತಾರೆ. ಮೋದಿಯನ್ನು ನೋಡಿ, ಈ ಬಾರಿಯ ಚುನಾವಣೆಯಲ್ಲೂ ಅವರ ಹೆಸರು ಹೇಗೆ ಕೆಲಸ ಮಾಡಿದೆ ಎಂದರೆ ನಿಸ್ಸಂಶಯವಾಗಿ ಐದು ವರ್ಷದ ಹಿಂದೆ ಇದ್ದ ಪ್ರಭೆಗಿಂತಲೂ ಈ ಬಾರಿ ಅವರದ್ದು ಜೋರಾಗಿದೆ. ರಾಷ್ಟ್ರಕ್ಕೆ ಈತ ಅಗತ್ಯವೆಂದೆನಿಸಿರುವುದೇ ಅದಕ್ಕೆ ಕಾರಣ. ಪದವಿಯ ಮೇಲೆ ಕುಳಿತೊಡನೆ ಈ ಕುರಿತಂತೆ ಆಲೋಚನೆ ಮಾಡಲು ಶುರುಮಾಡಿಬಿಟ್ಟರೆ ಅರ್ಧ ಕೆಲಸ ಮುಗಿದಂತೆ. ಆದರೇನು ಗೊತ್ತೇ? ಸಂಸದನಾದ, ಶಾಸಕನಾದ ಮೊದಲ ಆರು ತಿಂಗಳು ಜನರಿಂದ ಸನ್ಮಾನ ಸ್ವೀಕರಿಸುವುದು ಮತ್ತು ದೇವಸ್ಥಾನ-ಮಸೀದಿಗಳಿಗೆ ಸುತ್ತುವುದರಲ್ಲೇ ಕಾಲ ಕಳೆದು ಬಿಡುತ್ತಾರೆ. ಅವಧಿಯ ಕೊನೆಯ ಆರೆಂಟು ತಿಂಗಳು ಚುನಾವಣೆಗೆ ರಣತಂತ್ರ ರೂಪಿಸುವುದರಲ್ಲೇ ಕಳೆದು ಹೋಗಿಬಿಡುತ್ತದೆ. ಇನ್ನೂ ಕೆಲಸ ಮಾಡುವುದು ಯಾವಾಗ? ಕನರ್ಾಟಕದ ಕಥೆಯಂತೂ ನಿಜಕ್ಕೂ ಭಯಾನಕವಾಗಿದೆ. ಸಿದ್ದರಾಮಯ್ಯನವರ ಐದು ವರ್ಷಗಳ ಅವಧಿಯಲ್ಲಿ ಪ್ರಗತಿಯ ಕಲ್ಪನೆಯೇ ಇರಲಿಲ್ಲ. ಅದಕ್ಕಿಂತಲೂ ಐದು ವರ್ಷ ಮುಂಚೆ ಭಾಜಪ ಸಕರ್ಾರ ನಡೆಸಿತ್ತು. ಆರಂಭದಲ್ಲಿ ಪ್ರಭಾವಿಯಾಗಿ ಕಂಡರೂ ಬರು-ಬರುತ್ತಾ ತಿಕ್ಕಾಟಗಳಲ್ಲೇ ಕಳೆದುಹೋಗಿ ಅರಾಜಕತೆ ತಾಂಡವವಾಡಿತ್ತು. ಕಳೆದ ಒಂದು ವರ್ಷದಲ್ಲಿ ಕುಮಾರಸ್ವಾಮಿ ತಮ್ಮೆಲ್ಲಾ ದುಃಖವನ್ನೂ ಕಣ್ಣೀರಾಗಿ ಹರಿಸುತ್ತಾ ಸಾಮಾನ್ಯ ಜನರೊಂದಿಗೆ ಕಿತ್ತಾಡುತ್ತಾ ಕಾಲಕಳೆದುಬಿಟ್ಟರು. ಈಗ ಯಡ್ಯೂರಪ್ಪ ಅಧಿಕಾರಕ್ಕೆ ಬಂದಿದ್ದಾರೆ. ಹೆಚ್ಚೆಂದರೆ ಮೂರೂವರೆ ವರ್ಷ ಮಾತ್ರ. ಅನುಮಾನವೇ ಇಲ್ಲ, ಇದು ಹಗ್ಗದ ಮೇಲಿನ ನಡಿಗೆ. ಅನ್ಯಪಕ್ಷದ ಅತೃಪ್ತರನ್ನು ಅದರಲ್ಲೂ ಅಧಿಕಾರದಲ್ಲಿರುವ ಕಾಂಗ್ರೆಸ್ನಲ್ಲೇ ಅತೃಪ್ತಿ ಕಂಡವರಿಗೆ ಇಲ್ಲಿ ತೃಪ್ತಿಯನ್ನು ಕರುಣಿಸಬೇಕೆಂದರೆ ಸಾಮಾನ್ಯವಾದ ಸಂಗತಿಯಂತೂ ಖಂಡಿತ ಅಲ್ಲ. ಇವುಗಳೆಲ್ಲವನ್ನೂ ಸಂಭಾಳಿಸಿಕೊಂಡು ತಮ್ಮವರ ನಡುವೆ ಹುಟ್ಟಬಹುದಾಗಿರುವ ಅತೃಪ್ತಿಯನ್ನು ಅದುಮಿಟ್ಟು ಜನರ ಪ್ರೀತಿ ಗಳಿಸಿ ಮುಂದುವರೆಯಬೇಕೆಂದರೆ ಎಂಟೆದೆಗಿಂತ ಹೆಚ್ಚು ಚಾಕಚಕ್ಯತೆಯೂ ಬೇಕು. ರಾಷ್ಟ್ರವೆಲ್ಲಾ ವಿಕಾಸದ ಹಾದಿಯಲ್ಲಿ ಓಡುತ್ತಿರುವುದರಿಂದ ಕನರ್ಾಟಕದಲ್ಲೂ ಕೂಡ ಅದೇ ಮಾನಸಿಕ ಸ್ಥಿತಿಯಿದೆ. ಇದಕ್ಕೆ ಸೂಕ್ತವಾಗಿ ಪ್ರತಿಸ್ಪಂದಿಸಲು ಸಾಧ್ಯವಾದರೆ ಸಂಶಯವೇ ಇಲ್ಲ, ಯಡ್ಯೂರಪ್ಪ ಅಪರೂಪದ ಮುಖ್ಯಮಂತ್ರಿಯಾಗಿಬಿಡುತ್ತಾರೆ. ಮೊದಲ ಅವಧಿಯಲ್ಲಿ ಯಡ್ಯೂರಪ್ಪ ಮುಖ್ಯಮಂತ್ರಿಯಾದಾಗ ಮೂಲಸೌಕರ್ಯದ ದೃಷ್ಟಿಯಿಂದ ಉತ್ತರಕನರ್ಾಟಕದಲ್ಲಿ ಭರ್ಜರಿ ಬದಲಾವಣೆಗಳು ಬಂದಿದ್ದವು. ಉತ್ತರ ಮತ್ತು ದಕ್ಷಿಣದ ನಡುವಿನ ಭೇದವನ್ನು ನಿವಾರಿಸಲು ಇದಕ್ಕಿಂತಲೂ ಸಮರ್ಥವಾದ ಮಾರ್ಗ ಮತ್ತೊಂದಿಲ್ಲ. ಗೋವಾದಲ್ಲಿ, ಮಹಾರಾಷ್ಟ್ರದಲ್ಲಿ, ಕೇಂದ್ರದಲ್ಲೂ ಭಾಜಪದ್ದೇ ಸಕರ್ಾರವಿರುವುದರಿಂದ ಮಹಾದಾಯಿ ಸಮಸ್ಯೆ ನಿವಾರಣೆಗೂ ಯಡ್ಯೂರಪ್ಪ ಒಂದು ಹೆಜ್ಜೆ ಮುಂದಿಡಬಹುದು. ಮೊದಲ ಬಾರಿಗೆ ಅವರು ಮುಖ್ಯಮಂತ್ರಿಯಾಗಿದ್ದಾಗ ತಮಿಳುನಾಡಿನೊಂದಿಗೆ ಸಾಮರಸ್ಯ ಬೆಸೆಯುವ ಕೆಲಸ ಮಾಡಿದ್ದನ್ನು ಇಂದಿಗೂ ನಾಡು ಮರೆತಿಲ್ಲ. ಸದಾ ಭಾಜಪಕ್ಕೆ ಜೊತೆಯಾಗಿ ನಿಲ್ಲುವ ಕರಾವಳಿ ಭಾಗಕ್ಕೆ ಮುಖ್ಯಮಂತ್ರಿಗಳು ಆಸರೆಯಾಗಬೇಕಿದೆ. ಉತ್ತರಕನ್ನಡದವರ ಬೇಡಿಕೆ ಈಡೇರಿಸಲಾಗದ್ದೇನಲ್ಲಾ, ಅವರಿಗೊಂದು ತುತರ್ು ಆಸ್ಪತ್ರೆ ಬೇಕಿದೆ. ತಾನೇ ಮಾಡಲಾಗದಿದ್ದರೆ ಸಕರ್ಾರ ಯಾವುದಾದರೂ ಸ್ವಯಂಸೇವಾ ಸಂಸ್ಥೆಗಳಿಗಾದರೂ ವಿನಂತಿಸಿ ಅವರಿಗೆ ಬೇಕಾದ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟು ಒಂದು ಆಸ್ಪತ್ರೆಯನ್ನು ನಿಮರ್ಿಸಿಕೊಡಬಹುದು. ಸ್ಮಾಟರ್್ಸಿಟಿಯಾಗಲು ಕೇಂದ್ರದಿಂದ ಅನುಮೋದನೆ ಪಡೆದಿರುವ ಮಂಗಳೂರು-ಶಿವಮೊಗ್ಗಗಳಲ್ಲಿ ಚಟುವಟಿಕೆಯನ್ನು ತೀವ್ರಗೊಳಿಸಬಹುದು. ನೀರಿನ ಸಮಸ್ಯೆಗೆ ಕನರ್ಾಟಕ ತೀವ್ರವಾಗಿ ಬಳಲುವುದು ಕಾಣುತ್ತಿದೆ. ರೈತರ ಹಸಿರುಶಾಲು ಹೊದ್ದು ಪ್ರಮಾಣವಚನ ಸ್ವೀಕರಿಸಿರುವ ಮುಖ್ಯಮಂತ್ರಿಗಳು ನಾಡಿನಲ್ಲಿ ನೀರಿನ ಸ್ರೋತವನ್ನು ಉಳಿಸುವ ನದಿ-ತೊರೆಗಳನ್ನು ಕಾಪಾಡಿಕೊಳ್ಳುವ ಸಮರ್ಥ ಯೋಜನೆಗಳನ್ನು ಆಚರಣೆಗೆ ತಂದರೆ ನೂರಾರು ವರ್ಷಗಳ ಕಾಲ ಅವರು ನೆನಪಿನಲ್ಲಿ ಉಳಿಯುತ್ತಾರೆ. ಇನ್ನು ಬೆಂಗಳೂರಿನ ಮೇಲಿನ ಹೊರೆಯನ್ನು ತಗ್ಗಿಸಿ ಸುತ್ತಮುತ್ತಲೂ ಇರುವ ಜಿಲ್ಲೆಗಳನ್ನು ಭಿನ್ನ-ಭಿನ್ನ ಕೇಂದ್ರಗಳಾಗಿ ಅಭಿವೃದ್ಧಿ ಪಡಿಸುವಲ್ಲಿ ಅವರು ಖಂಡಿತ ಆಲೋಚಿಸಬೇಕು.

ನನಗೆ ಗೊತ್ತು, ಎಲ್ಲವೂ ದೊಡ್ಡ ದೊಡ್ಡ ಬಯಕೆಗಳೇ. ಸಮಯ ಬಲು ಕಡಿಮೆ. ಆದರೆ ಮೋದಿಯಂತಹ ನಾಯಕರನ್ನು ನೋಡಿ ಕೆಲಸ ಮಾಡುವ ಪಾಠವನ್ನು ನಾವು ಕಲಿಯದಿದ್ದರೆ ಹೇಗೆ? ಚುನಾವಣೆ ನಡೆಯುವಾಗಲೇ ಮೋದಿ ಮೊದಲ ನೂರು ದಿನಗಳ ಯೋಜನೆಯನ್ನು ರೂಪಿಸಿಕೊಂಡಿದ್ದು ನೆನಪಿದೆ ತಾನೇ? ಅಧಿಕಾರ ಹಾಗೆಯೇ. ನೀವು ಗೌರವದಿಂದ ನಡೆದುಕೊಂಡರೆ ಅದು ಸತ್ತ ನಂತರವೂ ನಿಮ್ಮ ಹೆಸರನ್ನು ಶಾಶ್ವತವಾಗಿಸುತ್ತದೆ. ಸ್ವಲ್ಪ ಎಡವಟ್ಟು ಮಾಡಿಕೊಂಡರೆ ಬದುಕನ್ನೇ ನರಕವಾಗಿಸಿಬಿಡುತ್ತದೆ!

ಕನರ್ಾಟಕ್ಕಕೆ ಹೊಸ ಮುಖ್ಯಮಂತ್ರಿ ಶುಭತರಲಿ!

-ಚಕ್ರವರ್ತಿ ಸೂಲಿಬೆಲೆ

1 Comment

1 Comment

  1. ಶಶಿಕಲಾ. ಎಸ್.

    July 29, 2019 at 5:06 am

    ಈ ಬಾರಿ ಯಡಿಯೂರಪ್ಪ ನವರು ಪ್ರಬುದ್ದ ರಾಗಿ ಆಡಳಿತ ನಿರ್ವಹಿಸಬೇಕು. ಹಿಂದಿನ ತಪ್ಪುಗಳನ್ನು ಸರಿಪಡಿಸುವ ಚಾನ್ಸ್ ದೊರೆತಿದೆ. ಕೇಂದ್ರ ಸರ್ಕಾರದ ಜೊತೆಯಲ್ಲಿ ಹೆಜ್ಜೆ ಹಾಕಿದರೆ ಸಾಕು ಗುರಿ ತಲುಪುವುದರಲ್ಲಿ ಅನುಮಾನ ಇಲ್ಲ. ರಾಘವೇಂದ್ರ & ಶೋಭ ಕರಂದ್ಲಾಜೆ ಅವರ ಜೊತೆ ಹೆಚ್ಚು ಕಾಣಿಸಿದಷ್ಟೂ ಅಪಾಯ. ಅಮಿತ್ ಷಾ ಒಂದೇ ನಮಗೆ ಬೆಳ್ಳಿಯ ಗೆರೆ.

Leave a Reply

Your email address will not be published. Required fields are marked *

Most Popular

To Top