Desi

ನಾನು ಅದೃಷ್ಟ ಇಲ್ಲದವಳು ಅಂತ ಎಲ್ಲರೂ ಬಯ್ಯುತ್ತಾರೆ. ಏನು ಮಾಡಬೇಕು?!

-ಅಕ್ಷರ ಗುರೂಜಿ

ಪ್ರಶಾಂತ ಶಿವಮೊಗ್ಗ:- ಗುರೂಜಿ, ನನಗೀಗ 22 ವರ್ಷ ಮನಸ್ಸನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯ ಆಗ್ತಾ ಇಲ್ಲ. ಏನು ಮಾಡಲಿ?

ಗುರೂಜಿ:-ಮನಸ್ಸನ್ನು ಹಿಡಿದಿಟ್ಟುಕೊಳ್ಳಲು ಅನೇಕ ಬಗೆಯ ದಾರಿಗಳು ಇವೆ. ಹಾಗೆಯೇ ನಿಮ್ಮ ಸಮಸ್ಯೆಯ ಮೂಲ ತಿಳಿದರೆ ಪರಿಹರಿಸಲು ಸಾಧ್ಯವಾಗುತ್ತಿತ್ತು. 22 ವರ್ಷದವರಾದ ನೀವೀಗ ಜವಾಬ್ದಾರಿ ಸ್ಥಾನದಲ್ಲಿ ಇದ್ದೀರಿ. ಹಾಗಾಗಿ ನೀವೀಗ ಸದಾ ಒಳ್ಳೆಯ ಕೆಲಸದಲ್ಲಿ ಕಾರ್ಯಪ್ರವೃತ್ತರಾಗಿ. ಒಳ್ಳೆಯ  ಕೆಲಸ ಸದಾ ಒಳ್ಳೆಯದನ್ನೇ ತರುತ್ತದೆ. ಆಗ ನಿಮ್ಮ ಮನಸ್ಸು ಹಿಡಿತಕ್ಕೆ ಬರುತ್ತದೆ ಮತ್ತು ಸದಾ ಖುಷಿಯಿಂದ ಇರುತ್ತದೆ.

 

ರಾಗಿಣಿ ಬೆಂಗಳೂರು ಸಾಫ್ಟವೇರ್ ಉದ್ಯೋಗಿ:- ಮದುವೆ ಆಗಿ 2 ವರ್ಷ ಆಗಿದೆ. ನಾನು ನಮ್ಮ ಮನೆಯವರು ಇಬ್ಬರು ಕೆಲಸಕ್ಕೆ ಹೋಗುತ್ತೇವೆಯಾದರು ಸಂಸಾರದಲ್ಲಿ ನೆಮ್ಮದಿ ಇಲ್ಲ. ಸದಾ ಜಗಳ ಮನೆಯಲ್ಲಿ. ಏನು ಮಾಡಲಿ ಗುರೂಜಿ?

ಗುರೂಜಿ:-ಮುಂದಿನ ದಿನಗಳು ಚೆನ್ನಾಗಿರಲಿ ಅಂತ ನೀವಿಬ್ಬರೂ ದುಡಿಯುತ್ತಿದ್ದೀರಿ ಒಳ್ಳೆಯದೇ. ಆದರೆ ಸಂಸಾರದಲ್ಲಿ ಬಂದು  ಹೋಗುವ ಸಣ್ಣ-ಪುಟ್ಟ ವಿಷಯಗಳನ್ನು ಮರೆತಂತೆ ಕಾಣುತ್ತದೆ. ನೀವು ದುಡಿದು ಹಣ ಸಂಪಾದನೆ ಮಾಡುತ್ತಿದ್ದೀರಿ ಹೊರತು ನಿಮ್ಮಿಬ್ಬರ ನಡುವೆ ಇದ್ದ ಮಧುರ ಸಂಬಂಧದ ಬೆಲೆ ಮರೆತಿದ್ದೀರಿ. ಮೊದಲು ನೀವಿಬ್ಬರೂ ಕುಳಿತು ಆತ್ಮಾವಲೋಕನ ಮಾಡಿಕೊಳ್ಳಿ. ಸಣ್ಣ-ಸಣ್ಣ ವಿಷಯಗಳು ದೊಡ್ಡ ಖುಷಿಯನ್ನು ಕೆಲವು ಸಲ ಕೊಡುತ್ತವೆ. ಹಾಗಾಗಿ ಆ ಖುಷಿಗಳೇ ನಿಮ್ಮ ಸಂಸಾರದ  ನೌಕೆಯನ್ನು ಬಾಳಿನ ಸಾಗರದ ದಡ ಸೇರಿಸುತ್ತದೆ.

 

ದಿವ್ಯಾ ಹಿರೇಮಠ್ ಬಳ್ಳಾರಿ, ಸ್ಟೂಡೆಂಟ್ :- ಡಿಗ್ರಿ ಮುಗಿಸಿದ್ದೀನಿ. ಆದರೆ, ಕೆಲ್ಸ ಸಿಗ್ತಿಲ್ಲ. ಮನೇಲಿ ಎಲ್ಲರೂ ನಂಗೆ ತುಂಬಾ ಬಯ್ಯುತ್ತಾರೆ. ನೀನು ಅದೃಷ್ಟ ಇಲ್ಲದವಳು. ನಿನ್ನಿಂದಲೇ ಮನೇಲಿ ನಮಗೆ ನೆಮ್ಮದಿ ಇಲ್ಲ ಅಂತ ದಿನಾಲು ಬಯ್ಯುತ್ತಾರೆ. ಏನು ಮಾಡಲಿ? ನನ್ನದೇನು ತಪ್ಪು? ಏನು ಮಾಡಬೇಕು ತಿಳಿಯುತ್ತಿಲ್ಲ ದಯವಿಟ್ಟು ನೀವೇ ದಾರಿ ತೋರಿಸಿ

ಗುರೂಜಿ :- ಪ್ರತಿಯೊಬ್ಬ ಮನುಷ್ಯನ ಜನನ ಅದೃಷ್ಟವೆ. ಹೀಗಾಗಿ ನೀನು ಬಲು ಅದೃಷ್ಟವಂತಳು. ಅದರಲ್ಲೂ ನಿನ್ನದು ಹೆಣ್ಣು ಜನ್ಮ. ಸದಾ ತಾಳ್ಮೆಯ ಪ್ರತಿರೂಪ. ಇನ್ನು ನಿಮ್ಮ ಓದಿನ ವಿಷಯಕ್ಕೆ ಬರೋಣ ನೀವು ಡಿಗ್ರಿ ಮುಗಿಸಿರೋದ್ರಿಂದ ನೀವು ಮೊದಲು ಏನು ಕೆಲಸ ಮಾಡಬಹುದು ಅಂತ ಯೋಚಿಸಿ. ನಂತರ ಯಾವುದೇ ಕೆಲಸ ಸಿಕ್ಕರೂ ಮಾಡುವ ಮನಸ್ಥಿತಿ ಬೆಳಸಿಕೊಳ್ಳಿ. ಸಿಕ್ಕ ಕೆಲಸವನ್ನು ಅಚ್ಚುಕಟ್ಟಾಗಿ ಮತ್ತು ವಿಭಿನ್ನವಾಗಿ ಮಾಡಿ. ಇನ್ನು ಮನೆಯವರು ನೀವು ದುರಾದೃಷ್ಟಳು ಎನ್ನುವ ಪರಿಸರವನ್ನು ನೀವೇ ಬದಲಾಯಿಸಬೇಕು ಮತ್ತು ಅಂತಹ ಮಾತುಗಳಿಗೆ ನಿಮ್ಮ ಮೌನ ತುಂಬಾ ಅವಶ್ಯಕತೆ ಇದೆ. ಕಾಲ ಬದಲಾದಂತೆ ಅಂದಿನ ಮೌನಗಳೇ ಮುಂದೆ ಅವರಿಗೆ ಉತ್ತರವಾಗಿ ಗೋಚರಿಸಬಹುದು.

 

ನಿಮ್ಮಲ್ಲಿಯೂ ಇಂತಹ ಪ್ರಶ್ನೆಗಳಿದ್ದರೆ yuvaliveofficial@gmail.com ಗೆ ಮೈಲ್ ಮಾಡಿ.

1 Comment

1 Comment

  1. Shiva kumar

    August 1, 2018 at 5:51 pm

    Thuma olleya samadhana
    Manasige santhwana niduthe

Leave a Reply

Your email address will not be published. Required fields are marked *

Most Popular

To Top