State

ನವೆಂಬರ್ನೊಂದಿಗೆ ಕನ್ನಡ ಪ್ರೇಮವೂ ಕೊನೆಯಾಗದಿರಲಿ!

ಕನ್ನಡದ ತಿಂಗಳು ಕಳೆದೇಹೋಯ್ತು. ನವೆಂಬರ್ ಬಂದೊಡನೆ ಕನ್ನಡ ನಮಗೆಲ್ಲರಿಗೂ ನೆನಪಾಗಿಬಿಡುತ್ತದೆ. ಆಮೇಲೆ ಸುದೀರ್ಘ ದಿವ್ಯಮೌನ. ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಉತ್ಸಾಹ ಕನ್ನಡದ ಕುರಿತಂತೆ ನಾಡಿನಾದ್ಯಂತ ಕಂಡುಬಂದಿದೆ. ಸಾಫ್ಟ್ವೇರ್ ಕಂಪೆನಿಗಳಲ್ಲಿ, ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೊನೆಗೆ ಯುನಿವಸರ್ಿಟಿಯ ಆವರಣಗಳಲ್ಲೂ ಕನ್ನಡದ ಹಬ್ಬ ವಿಶೇಷವಾಗಿ ಆಚರಿಸಲ್ಪಟ್ಟಿದೆ. ಅಂದರೆ ಕನ್ನಡ ಎಂಬುದು ಮೇಲ್ವಲಯಗಳಲ್ಲೂ ಈಗ ಒಪ್ಪಿಕೊಂಡ ಭಾಷೆ. ಬಹುಶಃ ಹಾಗೆ ತುಂಬ ಕನ್ನಡವನ್ನು ಅಪ್ಪಿಕೊಂಡು ಬದುಕುವ ಯತ್ನ ನಡೆಸಲಿಲ್ಲವೆಂದರೆ ನಮ್ಮ ಕಣ್ಣೆದುರಿಗೇ ಅದು ಲುಪ್ತವಾಗಿಹೋದರೂ ಅಚ್ಚರಿ ಪಡಬೇಕಿಲ್ಲ. ಭಾಷಾಪ್ರೇಮ ಮತ್ತು ಭಾಷಾಂಧತೆ ಎರಡೂ ಭಿನ್ನವಾದವೇ. ತನ್ನ ಭಾಷೆಯನ್ನು ತಾನು ಪ್ರೀತಿಸಿ, ಅನ್ಯ ಭಾಷೆಯನ್ನು ಗೌರವಿಸುವ ವ್ಯಕ್ತಿತ್ವ ಬಲು ಅಗತ್ಯವಾದ್ದು. ಚಿದಾನಂದಮೂತರ್ಿಗಳು ಇದನ್ನೇ ಸ್ವಾಭಿಮಾನದ ಕನ್ನಡ ಎಂದು ಕರೆಯುತ್ತಾರೆ. ಅವರ ಮಾತಿನಂತೆ ಕನ್ನಡದ ಸಾಮ್ರಾಜ್ಯ ಹುಟ್ಟಿದ್ದೇ ಸ್ವಾಭಿಮಾನದ ನೆಲಕಟ್ಟಿನ ಮೇಲೆ. ಪಲ್ಲವರ ಕಂಚಿಯಲ್ಲಿ ಆದ ಅವಮಾನಕ್ಕೆ ಪ್ರತೀಕಾರ ಬಯಸಿ ಕನ್ನಡದ ಸಾಮ್ರಾಜ್ಯವನ್ನೇ ಹುಟ್ಟುಹಾಕಿದ ಮಯೂರವರ್ಮ, ಅವರ ಈ ಮಾತಿನ ಆಧಾರ. ಹಾಗಂತ ಇದು ಅಲ್ಲಿಗೇ ನಿಲ್ಲಲಿಲ್ಲ. ಪೋಚರ್ುಗೀಸರನ್ನು ಸಮುದ್ರತೀರದಲ್ಲಿ ಅಡ್ಡಗಟ್ಟಿದ ರಾಣಿ ಅಬ್ಬಕ್ಕ ನಾವೆಲ್ಲಾ ಹೆಮ್ಮೆಪಡುವ ಹೆಣ್ಣುಮಗಳು. ಡಾಲ್ಹೌಸಿಯ ದತ್ತುಮಕ್ಕಳಿಗೆ ಹಕಿಲ್ಲವೆಂಬ ಕಾನೂನನ್ನು ಧಿಕ್ಕರಿಸಿ, ಥ್ಯಾಕರೆಯೊಂದಿಗೆ ಕಾದಾಡುತ್ತಾ ಅವನನ್ನು ಯಮಪುರಿಗಟ್ಟಿದ ಕಿತ್ತೂರು ಚೆನ್ನಮ್ಮ ಕನ್ನಡಿಗರ ಸ್ವಾಭಿಮಾನದ ಪ್ರತೀಕವೇ. ಮತ್ತು ಈ ಘಟನೆ ಝಾನ್ಸಿ ರಾಣಿ ಲಕ್ಷ್ಮಿಬಾಯಿ ಬ್ರಿಟೀಷರ ವಿರುದ್ಧ ಸಿಡಿದೇಳುವುದಕ್ಕಿಂತಲೂ ಸುಮಾರು ಎರಡೂವರೆ ದಶಕಕ್ಕೂ ಮುನ್ನವೇ ನಡೆದದ್ದು. ಆಕೆಯ ಬಂಟ ಸಂಗೊಳ್ಳಿ ರಾಯಣ್ಣನದು ಅದೇ ಸ್ವಾಭಿಮಾನ. ಹಲಗಲಿಯ ಬೇಡರಾಗಲೀ, ನರಗುಂದದ ಬಾಬಾಸಾಹೇಬರಾಗಲೀ, ತುಘಲಕ್ರನ್ನು ಎದುರಿಸಿ ನಿಂತ ಗಂಡುಗಲಿ ಕುಮಾರರಾಮನೇ ಆಗಲಿ ಕನ್ನಡಿಗರು ಹೆಮ್ಮೆ ಪಡಬಹುದಾದ ವ್ಯಕ್ತಿತ್ವದವರೇ. ವಿಜಯನಗರ ಸಾಮ್ರಾಜ್ಯವೂ ಕೂಡ ಆ ಸ್ವಾಭಿಮಾನದ ಅಡಿಪಾಯದ ಮೇಲೆ ಕಟ್ಟಲ್ಪಟ್ಟಿದ್ದೇ! ವಿದ್ಯಾರಣ್ಯರಂತಹ ಸಾಧುಗಳ ತಪಸ್ಸು, ಹಕ್ಕಬುಕ್ಕರಂತಹ ವೀರರ ಕ್ಷಾತ್ರ ಬೆರೆತು ರೂಪುಗೊಂಡಿದ್ದು ಸ್ವಾಭಿಮಾನದ ಕನ್ನಡ ಸಾಮ್ರಾಜ್ಯ. ಇಡೀ ದೇಶ ಇಂದಿಗೂ ಹೆಮ್ಮೆ ಪಡಬಹುದಾದ ಮತ್ತು ಸ್ವತಃ ಶಿವಾಜಿಗೂ ಪ್ರೇರಣೆ ನೀಡಿದ ವೈಭವದ ಸಾಮ್ರಾಜ್ಯ ಅದು.


ಈ ಬಗೆಯ ಅನೇಕ ಘಟನೆಗಳನ್ನು ಉಲ್ಲೇಖಿಸಬಹುದಾದರೂ ಆನಂತರ ಕನರ್ಾಟಕವನ್ನು ಕಟ್ಟಿದ ಒಂದಷ್ಟು ಮಹನೀಯರ ಬದುಕನ್ನು ಈ ಹೊತ್ತಿನಲ್ಲಾದರೂ ಅರಿಯಲೇಬೇಕಾದ್ದು ಕರ್ತವ್ಯ. ಕನರ್ಾಟಕದ ಕುಲಪುರೋಹಿತರೆನಿಸಿಕೊಂಡ ಆಲೂರು ವೆಂಕಟರಾಯರು ಇತಿಹಾಸದ ಪುಟಗಳನ್ನು ಕೆದಕುತ್ತಾ ತಾಮ್ರಪತ್ರಗಳನ್ನು, ಶಾಸನಗಳನ್ನು ಹುಡುಕಿ, ಅಧ್ಯಯನ ಮಾಡಿ, ಹಳ್ಳಿಗಳಲ್ಲಿ ದೊರೆತ ಹಳೆಯ ನಾಣ್ಯಗಳ ಆಧಾರದ ಮೇಲೆ ಕನರ್ಾಟಕದ ಗಡಿಯನ್ನು ಗುರುತಿಸುವ ಪ್ರಯತ್ನ ಮಾಡದೇ ಹೋಗಿದ್ದರೆ ಅಥವಾ ಆ ನಿಟ್ಟಿನಲ್ಲಿ ಕನ್ನಡಿಗರಿಗೆ ಪ್ರೇರಣೆ ಕೊಡದೇ ಹೋಗಿದ್ದರೆ ಬಹುಶಃ ಈ ರೂಪ ಕಾಣಲಾಗುತ್ತಿರಲಿಲ್ಲವೇನೋ! ಹಗಲೂ-ರಾತ್ರಿ ಕನ್ನಡದ ಏಳಿಗೆಯ ಚಿಂತನೆಯನ್ನೇ ಮಾಡಿದ ಅವರನ್ನು ಬೇಂದ್ರೆಯವರು ಕನರ್ಾಟಕದ ಪ್ರಾಣೋಪಾಸಕ ಎಂದು ಕರೆದದ್ದು ಸೂಕ್ತವೇ ಸರಿ. ಪುಣೆಯ ಫಗ್ಯರ್ೂಸನ್ ಕಾಲೇಜಿನಲ್ಲಿ ಸಿಕ್ಕ ಸಾವರ್ಕರ್, ತಿಲಕರ ಸಹವಾಸ ಅವರನ್ನು ರಾಷ್ಟ್ರೀಯತೆಯ ಮಹಾಪ್ರವಾಹದೆಡೆಗೆ ಎಳೆತಂದದ್ದು ನಿಜವಾದರೂ ಅದಕ್ಕೆ ಕನರ್ಾಟಕ ತೆರೆಯಾಗಿ ಸೇರಿಕೊಳ್ಳಬೇಕೆಂದು ಅವರಿಗೆ ಪ್ರೇರಣೆ ದೊರೆತಿದ್ದು ಹಂಪಿಯ ಅವಶೇಷಗಳನ್ನು ಕಂಡಮೇಲೆಯೇ. ಕನರ್ಾಟಕ ಏಕೀಕರಣಗೊಂಡ ಸಂತಸದ ಸುದ್ದಿ ತಿಳಿದೊಡನೆ ಹಂಪಿಗೆ ಹೋಗಿ ವಿರೂಪಾಕ್ಷನಿಗೆ ತಾವೇ ಪುರೋಹಿತರಾಗಿ ನಿಂತು ಪೂಜೆಗೈದಿದ್ದರಂತೆ ಆಲೂರರು! ಅವರೇ ಆರಂಭಿಸಿದ ಜಯ ಕನರ್ಾಟಕ ಪತ್ರಿಕೆ ಅಂದಿನ ದಿನಗಳಲ್ಲಿ ಕನ್ನಡಿಗರ ಮನೆ-ಮನೆಯನ್ನೂ ಅಲಂಕರಿಸಿತ್ತು. ಅವರ ಪ್ರೇರಣೆಯಿಂದಲೇ ಸಾಹಿತ್ಯ ಪರಿಷತ್ತೂ ಆರಂಭಗೊಂಡದ್ದು. ಅನೇಕ ಕವಿ-ಸಾಹಿತಿಗಳಿಗೆ ವಸ್ತುವನ್ನು ಕೊಟ್ಟು ಬರೆಯಲು ಪ್ರೇರೇಪಣೆ ಕೊಡುತ್ತಿದ್ದವರೂ ಅವರೇ ಅಂತೆ. ಅವರಂತೆ ಮುಂದಿನ ದಿನಗಳಲ್ಲಿ ಹೊಸ ಬರಹಗಾರರಿಗೆ ಬೆನ್ನು ತಟ್ಟಿ ಪ್ರೇರೇಪಿಸುತ್ತಿದ್ದ ಅ.ನ ಕೃಷ್ಣರಾಯರು, ಮಾಸ್ತಿ, ಕನ್ನಡದ ಪುಸ್ತಕಗಳನ್ನು ಮಾರಿ ಕನ್ನಡದ ಸೌಧ ಕಟ್ಟಲು ಜೀವತೇಯ್ದ ಗಳಗನಾಥರು, ಜಿ.ಪಿ ರಾಜರತ್ನಂ ಇವರೆಲ್ಲಾ ಸ್ಮರಿಸಿಕೊಳ್ಳಬೇಕಾದವರೇ. ಇನ್ನು ನವೋದಯದ ಕಾಲದಲ್ಲಿ ಕನ್ನಡಕ್ಕೊಂದು ಹೊಸ ಆವೇಗವನ್ನು ತಂದುಕೊಟ್ಟ ಬಿಎಮ್ಶ್ರೀರವರಿಂದ ಹಿಡಿದು ಕುವೆಂಪುವರೆಗಿನ ಪರಂಪರೆಯೊಂತು ಅತ್ಯದ್ಭುತವಾದ್ದೇ!


ಕನರ್ಾಟಕ ಸಾಹಿತಿಗಳದ್ದಷ್ಟೇ ಲೋಕವಲ್ಲ. ಇಲ್ಲಿ ವಿಜ್ಞಾನಿಗಳಿದ್ದಾರೆ, ನಾಡು ಬೆಳಗಿದ ವಿಶ್ವೇಶ್ವರಯ್ಯನವರಂತಹ ಇಂಜಿನಿಯರುಗಳಿದ್ದಾರೆ, ಭಾರತಕ್ಕೆ ಅಗತ್ಯಬಿದ್ದಾಗ ಪ್ರತಿಸ್ಪಂದಿಸಿದ ಫೀಲ್ಡ್ ಮಾರ್ಶಲ್ ಕಾರ್ಯಪ್ಪ, ಮಾಣಿಕ್ಷಾರಂಥವರೂ ಇದ್ದಾರೆ. ಇವರೆಲ್ಲರುಗಳ ಒಟ್ಟಾರೆ ಸ್ವರೂಪವೇ ಕನರ್ಾಟಕ. ಹಾಗಂತ ತೀರಾ ಇತ್ತೀಚಿನದ್ದನ್ನು ಮಾತ್ರ ಉಲ್ಲೇಖಿಸಿದ್ದೇವೆಂದುಕೊಳ್ಳಬೇಡಿ. ಇಡೀ ದೇಶದಲ್ಲೇ ವಿಭಿನ್ನವಾದ ಪರಂಪರೆಯನ್ನು ಕಟ್ಟಿಕೊಟ್ಟ ಶರಣರು, ದಾಸಪಂಥದ ಮೂಲಕ ಹೊಸ ಚಿಂತನೆಯನ್ನು ಸಮಾಜಕ್ಕೆ ನೀಡಿದ ದಾಸಶ್ರೇಷ್ಠರು ತಮ್ಮ ಬದುಕಿನಿಂದಲೂ ಜೀವನದಿಂದಲೂ ಜಗತ್ತಿಗೇ ಮಾದರಿ. ಇವರೆಲ್ಲರೂ ನಿಜವಾದ ಕನ್ನಡ ರತ್ನಗಳು. ಇತ್ತೀಚೆಗೆ ಇವರೆಲ್ಲರನ್ನೂ ಮತ್ತೊಮ್ಮೆ ಪರಿಚಯಿಸುವ ವಿಭಿನ್ನವಾದ ಕಾರ್ಯಗಳನ್ನು ಯುವಾಬ್ರಿಗೇಡ್ನ ಕಾರ್ಯಕರ್ತರು ಆಯೋಜಿಸಿದ್ದರು. ಫೇಸ್ಬುಕ್ಕಿನ ಮೂಲಕ ದಿನಕ್ಕೊಬ್ಬರಂತೆ ಮುವ್ವತ್ತು ಕನ್ನಡರತ್ನಗಳನ್ನು ಪರಿಚಯಿಸುವ ಪ್ರಯತ್ನ ತಾತ್ಕಾಲಿಕವಾಗಿಯಾದರೂ ಯಶಸ್ಸು ಕಂಡಿತ್ತು ಏಕೆಂದರೆ ದಿನಬೆಳಗಾದರೆ ಫೇಸ್ಬುಕ್ಕಿನಲ್ಲಿ, ವಾಟ್ಸಪ್ನಲ್ಲಿ ವೇಳೆ ಕಳೆಯುವ ತರುಣ ಪೀಳಿಗೆಯನ್ನು ಮುಟ್ಟಲು ಹೊಸ ಮಾರ್ಗವನ್ನು ಬಳಸದೇ ವಿಧಿಯಿಲ್ಲ! ಅವರಿಗೆ ಭಾಷಣ ಕೇಳುವ ಪುರಸೊತ್ತಿಲ್ಲ, ಕನ್ನಡದ ಕವಿಗಳ ಕವನ ಓದುವ ಬಯಕೆಯಿಲ್ಲ. ಹೀಗಾಗಿ ಅವರದ್ದೇ ಮಾರ್ಗವನ್ನು ಹಿಡಿಯುವುದು ಒಳಿತೆಂಬುದರಿಂದ ಈ ಪ್ರಯತ್ನ ಅಷ್ಟೇ. ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ವಸಂತ್ ಕುಮಾರ್ ಇದಕ್ಕೆ ಪೂರಕವಾಗಿ ಕನ್ನಡ ಕವಿಗಳ ಕವನವನ್ನೋದುವ ಸವಾಲನ್ನು ನೀಡುವುದರೊಂದಿಗೆ ಈ ಬಾರಿಯ ರಾಜ್ಯೋತ್ಸವ ಆರಂಭದಲ್ಲೇ ವಿಭಿನ್ನ ಸ್ವರೂಪ ಪಡೆದುಕೊಂಡಿತ್ತು. ಅನೇಕ ಚಲನಚಿತ್ರ ನಟರೂ ಕೂಡ ಇದಕ್ಕೆ ಪ್ರತಿಸ್ಪಂದಿಸಿ ಕನ್ನಡದ ಕವಿಗಳ ಸಾಲುಗಳನ್ನು ಮೆಲುಕು ಹಾಕುವುದರ ಮೂಲಕ ರಾಜ್ಯೋತ್ಸವಕ್ಕೆ ರಂಗೇರಿಸಿಬಿಟ್ಟಿದ್ದರು.


ಈ ನಡುವೆ ಮತ್ತೊಂದು ಪ್ರಯತ್ನ ಕನ್ನಡ ಕಲಿಸುವ ದಿಕ್ಕಿನಲ್ಲಿ ಆರಂಭವಾಯ್ತು. ಅನೇಕ ಬಾರಿ ನಮ್ಮೆಲ್ಲರ ಆರೋಪ ಇರುವುದೇ ಬೆಂಗಳೂರಿನಲ್ಲಿ ನೆಲೆಸಿರುವ ಹೊರರಾಜ್ಯದ ಮಂದಿ ಕನ್ನಡ ಮಾತನಾಡುವುದಿಲ್ಲ ಅನ್ನೋದು. ಅವರಿಗೇಕೆ ಕನ್ನಡ ಕಲಿಸಬಾರದು ಎಂಬ ದೃಷ್ಟಿಯಿಂದ ಆರಂಭಗೊಂಡ ಈ ಪ್ರಯತ್ನಕ್ಕೆ 2000ಕ್ಕೂ ಹೆಚ್ಚು ಜನ ಆಸಕ್ತಿ ತೋರಿದರು. ಎಂಟ್ಹತ್ತು ದಿನಗಳ ಕಾಲ ದಿನಕ್ಕರ್ಧಗಂಟೆಯಂತೆ ಫೋನಿನಲ್ಲಿ ಸಂಭಾಷಣೆಯ ಮೂಲಕವೇ ಕನ್ನಡ ಹೇಳಿಕೊಡುವ ಪ್ರಯತ್ನ ವ್ಯಾಪಕ ಪ್ರಶಂಸೆಗಳಿಸಿತು. ಕನ್ನಡ ಸುಗಂಧ ಹಬ್ಬಿಸುವ ಈ ಸಾಹಸದಲ್ಲಿ ಅನೇಕರು ಸ್ವಯಂ ಪ್ರೇರಣೆಯಿಂದ ಭಾಗವಹಿಸಿದರು. ಕನರ್ಾಟಕದ ಹೊರಗಿರುವ ಕನ್ನಡಿಗರಿಗಂತೂ ಕನ್ನಡದ ಸೇವೆಗೈಯ್ಯುವ ಮಹಾಭಾಗ್ಯವಿದು ಎಂದೆನಿಸಿತ್ತು. ದೆಹಲಿ, ಪೂಣಾಗಳಿಂದಲೂ ಅಲ್ಲದೇ ದೂರದ ಅಮೇರಿಕಾದಲ್ಲಿರುವ ಕನ್ನಡಿಗರೂ ಈ ಕಾರ್ಯದಲ್ಲಿ ಸ್ವಯಂಸ್ಫೂತರ್ಿಯಿಂದ ಭಾಗವಹಿಸಿ ಬೆಂಗಳೂರಿನಲ್ಲಿರುವ ಹೊರನಾಡಿಗರನ್ನು ಕನ್ನಡಿಗರಾಗಿಸುವ ಪ್ರಯತ್ನ ಮಾಡುತ್ತಿದ್ದಾರೆ!
ಭಾಷೆ ಆಡುವ ಮಾತಾಗಿ ಉಳಿದುಬಿಡುತ್ತದೆ. ಆ ಕೆಲಸವನ್ನು ಸಿನಿಮಾ ಸುಲಭವಾಗಿ ಮಾಡುತ್ತದೆ. ನಾಟಕ, ಸಂಗೀತ, ನೃತ್ಯದಂತಹ ಕಲಾ ಪ್ರಕಾರಗಳು ಅನೇಕವೇಳೆ ಇದಕ್ಕೆ ಪೂರಕವಾಗಿಯೇ ಕೆಲಸ ಮಾಡುತ್ತವೆ. ಆದರೆ ಸಾಹಿತ್ಯವನ್ನು, ಅದನ್ನು ರಚನೆ ಮಾಡಿದ ಸಾಹಿತಿಯನ್ನು ಅರಿಯದ ಹೊರತು ಭಾಷೆ ಹೊಸ ಎತ್ತರಕ್ಕೆ ಏರುವುದು ಕಷ್ಟ. ಈಚಿನ ದಿನಗಳಲ್ಲಿ ಕಠಿಣ ಛಂದಸ್ಸುಗಳನ್ನು ಬಿಡಿ, ಭಾಮಿನಿ ಷಟ್ಪದಿ ಎಂದರೇನೇ ಮೇಲೆ ಕೆಳಗಾಗುವ ಪರಿಸ್ಥಿತಿ! ಭಾಷೆಯನ್ನಾಡುವ ಜನರು ಬೌದ್ಧಿಕವಾದ ಕಸರತ್ತುಗಳಲ್ಲಿ ತೊಡಗದಿದ್ದರೆ ಆ ಭಾಷೆ ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಕನ್ನಡ ಹೊಸತನವನ್ನು ಆವಾಹಿಸಿಕೊಳ್ಳುತ್ತಲೇ ಹಳೆಯ ಸಾಮಥ್ರ್ಯವನ್ನು ಉಳಿಸಿಕೊಂಡ ಭಾಷೆ. ಹೀಗಾಗಿ ಆಧುನಿಕವಾದ ಸಾಮಾಜಿಕ ಜಾಲತಾಣಗಳ ಭರಾಟೆಯ ನಡುವೆ ಹೊಸ ನೀರಿಗೆ ತೆರೆದುಕೊಂಡ ನಾವು ಹಳೆಯ ವೈಭವವನ್ನು ಮರೆಯುವಂತಿಲ್ಲ. ಹಾಗೆಂದೇ ಇಂದಿನ ಮಕ್ಕಳಿಗೆ ಕನ್ನಡದ ಸಾಹಿತಿಗಳನ್ನು ಮರುಪರಿಚಯಿಸುವ ಕಾರ್ಯ ಕಸರತ್ತು ಎಂಬ ಆಟದೊಂದಿಗೆ ಆರಂಭವಾಗಿದೆ. ಮೊದಲೆಲ್ಲಾ ಮಕ್ಕಳು ಕುಸ್ತಿಪಟುಗಳ ಸಾಧನೆಯುಳ್ಳ ಇಸ್ಪೀಟಿನಂತಹ ಕಾಡರ್ುಗಳೊಂದಿಗೆ ಆಡುತ್ತಿದ್ದುದನ್ನು ನೀವೆಲ್ಲಾ ನೋಡಿರಬೇಕು. ಈಗ ಅದೇ ಜಾಗದಲ್ಲಿ ಸಾಹಿತಿಗಳ ಕಾಡರ್ುಗಳನ್ನು ಪರಿಚಯಿಸುವಂತಹ ಪ್ರಯತ್ನ ಮಾಡಲಾಗಿದೆ. ಮಕ್ಕಳು ಆಟವಾಡಲು ಬೇಕಾಗಿರುವ ಸಮಾನ ಭೂಮಿಕೆಯನ್ನು ನಿಮರ್ಾಣ ಮಾಡಿಕೊಟ್ಟು ಈ ಕಾಡರ್ುಗಳನ್ನು ರೂಪಿಸಲಾಗಿದೆ. ಪ್ರೌಢಶಾಲೆಯಲ್ಲಿ ಬಂದಿರುವ ಸಾಹಿತಿಗಳನ್ನು ಸಾಧ್ಯವಾದಷ್ಟು ಈ ಕಾಡರ್ುಗಳಲ್ಲಿ ಬಳಸುವ ಪ್ರಯತ್ನ ಮಾಡಿರುವುದರಿಂದ ಆ ಮಕ್ಕಳು ಈ ಆಟದಲ್ಲಿ ಪಂಟರಾದರೆಂದರೆ 50ಕ್ಕೂ ಹೆಚ್ಚು ಸಾಹಿತಿಗಳ ಕುರಿತ ಸಮಗ್ರ ವಿಚಾರ ಅರಿತಂತೆಯೇ!

ಇವಿಷ್ಟನ್ನೂ ಏಕೆ ಹಂಚಿಕೊಳ್ಳಬೇಕಾಯ್ತೆಂದರೆ ಕನರ್ಾಟಕವನ್ನು ಮತ್ತು ಕನ್ನಡವನ್ನು ಕಟ್ಟುವಲ್ಲಿ ಮಹತ್ವದ ಪಾತ್ರವನ್ನು ಕನ್ನಡಿಗರೀಗ ನಿರ್ವಹಿಸಲೇಬೇಕಿದೆ. ಅಂದಿನಿಂದ ಇಂದಿನವರೆಗೂ ಕನರ್ಾಟಕ ಬಲು ಸಭ್ಯ. ಬಹುಶಃ ಅದು ಮೈಸೂರಿನ ಮಹಾರಾಜರ ಕೊಡುಗೆ ಇರಬೇಕು. ದೇಶ ಮುಂದೊಮ್ಮೆ ಮಾಡುವ ಕೆಲಸವನ್ನು ಮುಂಚಿತವಾಗಿಯೇ ಆಲೋಚಿಸುವ ಸಾಮಥ್ರ್ಯವಿರುವುದು ಬಹುಶಃ ಕನರ್ಾಟಕಕ್ಕೆ ಮಾತ್ರ. ಜಾತಿ-ಮತ-ಪಂಥಗಳ ಮುಂದೊದಗುವ ತಾಕಲಾಟಕ್ಕೆ 12ನೇ ಶತಮಾನದಲ್ಲೇ ಬಸವಾದಿ ಶರಣರು ಉತ್ತರಿಸಿದ್ದರು. ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನವೇ ಚೆನ್ನಮ್ಮ ಬ್ರಿಟೀಷರ ವಿರುದ್ಧ ಕತ್ತಿ ಹಿಡಿದು ನಿಂತಿದ್ದಳು. ಆಧ್ಯಾತ್ಮ ಜಗತ್ತಿನಲ್ಲಿ ಎಲ್ಲರಿಗೂ ಬೇಕಾದ ಮಾರ್ಗವನ್ನು ತೋರಲು ಮೂರೂ ಆಚಾರ್ಯರೂ ಕನರ್ಾಟಕವನ್ನೇ ಆರಿಸಿಕೊಂಡಿದ್ದರು. ಪ್ರಜಾಪ್ರತಿನಿಧಿಸಭಾವನ್ನು ಮೈಸೂರು ಮಹಾರಾಜರಷ್ಟು ಚೊಕ್ಕವಾಗಿ ನಡೆಸಿದವರು ಮತ್ತ್ಯಾರೂ ಇಲ್ಲ. ಸ್ವಾತಂತ್ರ್ಯಕ್ಕೂ ಮುನ್ನವೇ ಆಧುನಿಕ ಕೈಗಾರಿಕೆಗಳ ಕುರಿತಂತೆ ಕನರ್ಾಟಕ ಯೋಚನೆ ಮಾಡಿಯಾಗಿತ್ತು. ಎಲ್ಲಕ್ಕೂ ಮಿಗಿಲಾಗಿ ಇಡಿಯ ದೇಶ ವಿಜ್ಞಾನ ಯಂತ್ರಗಳನ್ನು ಆಮದು ಮಾಡಿಕೊಳ್ಳುವಾಗ ವೈಜ್ಞಾನಿಕ ಸಂಶೋಧನಾ ಕೇಂದ್ರವೊಂದಕ್ಕೆ ಜಮ್ಶೆಡ್ಜೀ ಟಾಟಾರಿಗೆ ಭೂಮಿಕೊಟ್ಟದ್ದೇ ಕನರ್ಾಟಕ. ಅದೇ ಇಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಂದು ಜಾಗತಿಕ ಮಟ್ಟದಲ್ಲಿ ಮೆರೆಯುತ್ತಿರೋದು. ಬಂಗಾಳದ ಜನರ ಓತಪ್ರೋತ ರಾಜ್ಯಭಾವನೆಯಿಂದ ನೊಂದುಬಂದ ಸರ್ ಸಿವಿ ರಾಮನ್ರಿಗೂ ಜಾಗಕೊಟ್ಟು ವೆಜ್ಞಾನಿಕ ಸಂಸ್ಥೆಯನ್ನು ರೂಪಿಸಲು ಅವಕಾಶ ಮಾಡಿಕೊಟ್ಟಿದ್ದೂ ಕನರ್ಾಟಕವೇ. ಇದು ಮೈಸೂರಿನ ಮಹಾರಾಜರ ದೂರದೃಷ್ಟಿ!

ನಿಸ್ಸಂಶಯವಾಗಿ ನಾವು ಭಾರತದ ಅವಿಭಾಜ್ಯ ಅಂಗ. ಭಾರತದ ಏಳ್ಗೆಯಲ್ಲೇ ಕನರ್ಾಟಕದ ಏಳ್ಗೆಯೂ ಇದೆ. ಅದರೊಂದಿಗೆ ಭಾರತದ ಏಳ್ಗೆಗೆ ನಾವು ಕೊಡಬೇಕಾದ ಕೊಡುಗೆಯೂ ಸಾಕಷ್ಟಿದೆ. ಪ್ರತೀ ಬಾರಿ ರಾಜ್ಯೋತ್ಸವಗಳು ನವೆಂಬರ್ ತಿಂಗಳ ಉತ್ಸವಗಳಷ್ಟೇ ಆಗದೇ ಈ ನಿಟ್ಟಿನಲ್ಲಿ ನಮಗೊಂದಷ್ಟು ಪ್ರೇರಣೆ ಕೊಡುತ್ತದೆ ಎನ್ನುವುದಾದರೆ ನಿಜಕ್ಕೂ ಪ್ರಯತ್ನ ಸಾರ್ಥಕ. ಕನ್ನಡದ ಈ ಹಬ್ಬ ವರ್ಷಪೂತರ್ಿ ಸಾಧ್ಯವಾದರೆ ಬದುಕಿನ ಕೊನೆಯುಸಿರಿನವರೆಗೂ ನಮ್ಮನ್ನು ವ್ಯಾಪಿಸಿಕೊಳ್ಳುತ್ತದೆ!!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top