National

ನಮ್ಮ ಕಂಗಳಲ್ಲಿ ಮೋದಿ ಎಂಬ ವಿಶ್ವಾಸದ ಅಲೆ!

ನರೇಂದ್ರಮೋದಿ 2.0! ಇಡಿಯ ದೇಶದ ಆಸೆ ಆಕಾಂಕ್ಷೆಗಳ ಪ್ರತಿರೂಪವಾಗಿ ಮೋದಿ ಮತ್ತೆ ಅಧಿಕಾರದ ಗದ್ದುಗೆ ಏರಿದ್ದಾರೆ. ಈ ಬಾರಿ ಹಿಂದೆಂದಿಗಿಂತಲೂ ಶಕ್ತವಾಗಿ. ಜಗತ್ತಿನ ಅತ್ಯಂತ ಪ್ರಭಾವಿ ನಾಯಕರಲ್ಲೊಬ್ಬರಾಗಿ ಅವರು ಹೊರಹೊಮ್ಮಿದ್ದಾರೆ. ಹಾಗೆ ಹೇಳಲು ಕಾರಣವೂ ಇದೆ. ಜಗತ್ತಿನ ಅತೀ ಹೆಚ್ಚು ಜನಸಂಖ್ಯೆಯುಳ್ಳ ಎರಡನೇ ರಾಷ್ಟ್ರ ನಮ್ಮದ್ದು. ಹಾಗೆಯೇ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಕೂಡ. ಹೀಗೆ ನೂರು ಕೋಟಿ ಜನರಿಂದ ಬಹುಮತ ಪಡೆದು ಆಯ್ಕೆಯಾಗಲ್ಪಟ್ಟು ಅಧಿಕಾರ ನಡೆಸುವ ಸಾಮಥ್ರ್ಯವನ್ನು ಪಡೆದಿರೋದು ನರೇಂದ್ರಮೋದಿಯೊಬ್ಬರೇ! ನಮಗಿಂತ ದೊಡ್ಡ ರಾಷ್ಟ್ರವಾದರೂ ಚೀನಾದಲ್ಲಿ ಪ್ರಜಾಪ್ರಭುತ್ವವಿಲ್ಲ. ಷಿ ಜಿನ್ಪಿಂಗ್ನ ಪಾದದಡಿಯಲ್ಲಿ ಇಡಿಯ ಚೀನಾದ ಅಧಿಕಾರ ಇಡಲ್ಪಟ್ಟಿದೆ. ಅಮೇರಿಕಾ, ಬ್ರಿಟನ್ಗಳು ಪ್ರಜಾಪ್ರಭುತ್ವ ರಾಷ್ಟ್ರಗಳಾದರೂ ಅಲ್ಲಿನ ಹೋರಾಟ ಭಾರತದಷ್ಟು ಕಠೋರವೂ, ವೈವಿಧ್ಯಮಯವೂ ಆಗಿರುವುದಿಲ್ಲ. ಇಲ್ಲಿ ರಾಜ್ಯಗಳ ಸಂರಚನೆಗಳು ಬೇರೆ. ಪ್ರತೀ ರಾಜ್ಯದ ಸಂಸ್ಕೃತಿ, ಭಾಷೆಗಳು ಬೇರೆ. ಪ್ರತಿ ನೂರು ಕಿ.ಮೀಗೊಮ್ಮೆ ಇವೆಲ್ಲವೂ ಬದಲಾಗುವುದನ್ನು ಕಾಣುತ್ತೇವೆ. ನಮ್ಮನ್ನು ತಮ್ಮೊಳಗೆ ಒಡೆಯಲು ಬೇಕಾಗಿರುವ ಅನೇಕ ಸಂಗತಿಗಳು ಇರುವಾಗ ಎಲ್ಲರನ್ನೂ ಏಕಸೂತ್ರದಡಿ ಬಂಧಿಸಿ ರಾಷ್ಟ್ರ ಪುನರ್ನಿಮರ್ಾಣ ಕಾರ್ಯದಲ್ಲಿ ಸೇರ್ಪಡೆಗೊಳಿಸುವುದು ಸುಲಭದ ಕೆಲಸವಲ್ಲ. ಹೀಗಾಗಿಯೇ 2014ರಲ್ಲಿ ನರೇಂದ್ರಮೋದಿ ಬಹುಮತ ಪಡೆದು ಪ್ರಧಾನಿಯಾದರೆ ತಾನು ದೇಶವನ್ನೇ ಬಿಡುವುದಾಗಿ ಹೇಳಿದ್ದು ದೇವೇಗೌಡರು. ಆನಂತರ ನರೇಂದ್ರಮೋದಿ ಗೆದ್ದ ಮೇಲೆ ಆ ಮಾತನ್ನು ಅವರು ಮರೆತೂಬಿಟ್ಟರು. ಆ ಕುಟುಂಬಕ್ಕೆ ಮಾತು ಕೊಟ್ಟು ಮರೆಯುವುದು ಹೊಸ ಸಂಗತಿಯೇನಲ್ಲ ಬಿಡಿ. 2014ರಲ್ಲಿ ಮೋದಿ-ಶಾ ಜೋಡಿ ಆಲೋಚನೆ ಮಾಡಿದ್ದು ವಿಶಿಷ್ಟವಾಗಿತ್ತು. ಭಾಜಪ ಸ್ಥಾಪನೆಯಾದಾಗಿನಿಂದಲೂ ಒಂದಲ್ಲ ಒಂದು ಕ್ಷೇತ್ರಗಳಲ್ಲಿ ಒಮ್ಮೆಯಾದರೂ ಗೆದ್ದಿರುವಂತಹ ಸೀಟುಗಳನ್ನು ಲೆಕ್ಕ ಹಾಕಿ ಅಲ್ಲಿಯೇ ಹೆಚ್ಚು ಕೆಲಸ ಮಾಡುವ ತಯಾರಿ ಆರಂಭಿಸಿದರು. ಅದರ ಪರಿಣಾಮ ಕಳೆದುಹೋಗಿದ್ದ ಭಾಜಪದ ವೈಭವ ಮರುಕಳಿಸಿತು. ಐದು ವರ್ಷ ಮೋದಿ ಸಮರ್ಥವಾದ ಆಳ್ವಿಕೆ ನೀಡಿ ತಮಗೆ ವೋಟು ಹಾಕಿದ್ದನ್ನು ಸಮಥರ್ಿಸಿಕೊಳ್ಳುವಂತೆ ಬದುಕಿದರು. ಇದು ಎದುರಾಳಿಗಳಲ್ಲಿ ನಡುಕ ಹುಟ್ಟಿಸಲು ಸಾಕಾಗಿತ್ತು. ಒಂದು ಹಂತದಲ್ಲಂತೂ ಒಮರ್ ಅಬ್ದುಲ್ಲಾ 2019ರಲ್ಲಿ ಮೋದಿಯನ್ನು ಎದುರಿಸುವುದು ಸಾಧ್ಯವೇ ಇಲ್ಲ, ಅದಕ್ಕೆ ಬದಲಾಗಿ 2024ರ ತಯಾರಿ ಮಾಡಿಕೊಳ್ಳಿ ಎಂದುಬಿಟ್ಟಿದ್ದ. ಹೀಗಾಗಿಯೇ ಈ ಸುನಾಮಿಯನ್ನು ತಡೆಯಲು ಮಹಾಘಟಬಂಧನ್ ರಚನೆಯಾಗಿದ್ದು. ಆರಂಭದಿಂದಲೂ ಮಹಾಘಟಬಂಧನ್ ಉತ್ತರಪ್ರದೇಶದಲ್ಲಿ ಬಿಟ್ಟರೆ ಮತ್ತೆಲ್ಲೂ ಕೆಲಸಕ್ಕೆ ಬರುವುದಿಲ್ಲವೆಂದು ಎಲ್ಲರಿಗೂ ಗೊತ್ತಿತ್ತು. ಮತ್ತು ಉತ್ತರಪ್ರದೇಶವನ್ನು ತಡೆಯುವುದೇ ಅವರ ಪಾಲಿನ ಬಹುದೊಡ್ಡ ಸಾಧನೆಯಾಗಿತ್ತು. ಬಿಹಾರದಲ್ಲಿ ಲಾಲೂ-ನಿತೀಶ್ ಜೋಡಿಯ ಪರಿಣಾಮ ಮೋದಿಯ ಸೋಲೆಂಬುದು ಅವರಿಗೀಗ ಆದರ್ಶವೆನಿಸಿತ್ತು. ಹಗಲೂ-ರಾತ್ರಿ ಕುಳಿತು ಬಗೆ-ಬಗೆಯ ಯೋಜನೆಗಳನ್ನು ರೂಪಿಸಿ, ಸಾಹಸಗೈದು ಎಲ್ಲ ಕಪ್ಪೆಗಳನ್ನು ಒಂದು ತಕ್ಕಡಿಗೆ ಹಾಕಿ ಮಹಾಘಟಬಂಧನ್ ರಚಿಸಲಾಯ್ತು. ಅವರ ದುರದೃಷ್ಟಕ್ಕೆ ಈ ಬಂಧನ್ ರಚನೆಯಾದದ್ದೇ ನರೇಂದ್ರಮೋದಿಯವರನ್ನು ಜನ ಇನ್ನೂ ಗಟ್ಟಿಯಾಗಿ ಅಪ್ಪಿಕೊಳ್ಳಲು ಕಾರಣವಾಯ್ತು!


ಅದೊಂದು ಮಾನಸಿಕ ಅವಸ್ಥೆ. ನಿಮ್ಮನ್ನು ಜನ ತುಂಬಾ ಹೊಗಳುತ್ತಿದ್ದರೆ ಸದಾ ನಿಮ್ಮ ಜೊತೆಗಿರುವವರೇ ನಿಮ್ಮನ್ನು ವಿರೋಧಿಸಲಾರಂಭಿಸುತ್ತಾರೆ. ಅದಕ್ಕೆ ಪ್ರತಿಯಾಗಿ ಹೊರಗಿನವರು ನಿಮ್ಮನ್ನು ದೂಷಿಸಲಾರಂಭಿಸಿದರೆ ನಿಮ್ಮ ಜೊತೆಗಾರರು ನಿಮ್ಮನ್ನು ಬಲವಾಗಿ ಆತುಕೊಳ್ಳುತ್ತಾರೆ. ನರೇಂದ್ರಮೋದಿಯ ವಿಚಾರದಲ್ಲಿಯೂ ಹೀಗೇ ಆಗಿದ್ದು. ಮಹಾಘಟಬಂಧನ್ ಒಂದಾದ ಚಿತ್ರಗಳನ್ನು ಪತ್ರಿಕೆಗಳಲ್ಲಿ ನೋಡುತ್ತಿದ್ದಂತೆ ಮೋದಿಯ ಪರವಾಗಿರುವವರಲ್ಲಿ ಆಕ್ರೋಶ ಹೆಚ್ಚಲಾರಂಭಿಸಿತು. ಹಿಂದೆಂದಿಗಿಂತಲೂ ಹೆಚ್ಚು ಬಲವಾಗಿ ಅವರು ಮೋದಿಯೊಂದಿಗೆ ನಿಂತರು. ಮೂರು ರಾಜ್ಯಗಳ ಸೋಲಿನ ನಂತರವಂತೂ ಜನ ಈ ಬಾರಿ ಎಡವುವಂತಿಲ್ಲ ಎಂಬ ದೃಢನಿಶ್ಚಯ ಮಾಡಿದರು. ಅದೇ 2019ರ ಚುನಾವಣೆಯನ್ನು ಜನಾಂದೋಲನವಾಗಿ ರೂಪಿಸಿದ್ದು. ಈ ಕಾರಣಕ್ಕಾಗಿಯೇ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನರೇಂದ್ರಮೋದಿಯವರನ್ನು ಸೋಲಿಸುವ ದೃಢನಿಶ್ಚಯದೊಂದಿಗೆ 28 ಪಾಟರ್ಿಗಳ ಘಟಬಂಧನ್ ಬೀದಿಗಿಳಿದಾಗ ಜನಸಾಮಾನ್ಯರಿಂದ ಬಲುದೊಡ್ಡ ವಿರೋಧ ಎದುರಾಗಿದ್ದು. ರೇವಣ್ಣ ‘ಮೋದಿ ಯಾವ ಕಾರಣಕ್ಕೂ ಪ್ರಧಾನಿಯಾಗುವುದಿಲ್ಲ. ಹಾಗಾದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ’ ಎಂದಿದ್ದು. 2014ರ ಮೋದಿಯ ಗೆಲುವು ಆಕಸ್ಮಿಕ ಎಂಬುದು ಎಲ್ಲ ರಾಜಕೀಯ ಪಂಡಿತರ ಲೆಕ್ಕಾಚಾರವಾಗಿತ್ತು. ಆದರೆ ಮೋದಿ ಮತ್ತು ಶಾ ಜೋಡಿ ಭಾವನಾತ್ಮಕವಾಗಿ ಈ ಒಟ್ಟಾರೆ ಸಂಗತಿಯನ್ನು ಬಳಸಿಕೊಂಡೇ ಚುನಾವಣೆಯನ್ನು ಗೆಲ್ಲುವ ರಣತಂತ್ರ ರೂಪಿಸಿಯಾಗಿತ್ತು. ಈ ಬಾರಿ ಮೋದಿ ಉತ್ತರಪ್ರದೇಶದಲ್ಲಿ ಸೋಲಬಹುದಾಗಿದ್ದಷ್ಟು ಕ್ಷೇತ್ರಗಳನ್ನು ಬೇರೆಡೆ ಗೆಲ್ಲುವ ವ್ಯವಸ್ಥಿತ ಯೋಜನೆಗಳನ್ನು ರೂಪಿಸಿಕೊಂಡಿದ್ದರು. ಪಶ್ಚಿಮಬಂಗಾಳ ಬಿಜೆಪಿಯ ಬಾವುಟ ಹಾರಿಸುವ ಹೊಸ ಜಾಗವಾಗಿ ಮಾರ್ಪಟ್ಟಿತು. ಒಡಿಸ್ಸಾ ಕೂಡ ಪೂರಕವಾಗಿ ಪ್ರತಿಸ್ಪಂದಿಸಿತು. ದಕ್ಷಿಣ ಭಾರತದಲ್ಲೂ ಮೋದಿಯವರ ಲೆಕ್ಕಾಚಾರಗಳು ಕೆಲಸ ಮಾಡುತ್ತಿದ್ದವು. ಕೊನೆಗೂ ಫಲಿತಾಂಶ ಬಂದಾಗ 2014ರ ಗೆಲುವಿಗಿಂತಲೂ ಜೋರಾದ ಸಮರ್ಥವಾದ ಗೆಲುವನ್ನು ಮೋದಿ ತಮ್ಮದಾಗಿಸಿಕೊಂಡಿದ್ದರು!

ಈ ಬಾರಿಯ ಈ ಗೆಲುವು ವಿಶಿಷ್ಟವಾದುದು ಏಕೆಂದರೆ ಭಾಜಪದ ವ್ಯಾಪ್ತಿ ಹಿಂದೆಂದಿಗಿಂತಲೂ ವಿಸ್ತಾರವಾಗಿದೆ. ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಹರಿಯಾಣಗಳಿಗೆ ಸೀಮಿತವಾಗಿದ್ದ ಪಕ್ಷ ಈಗ ಈಶಾನ್ಯ ರಾಜ್ಯ, ಪಶ್ಚಿಮಬಂಗಾಳ, ಒಡಿಸ್ಸಾಗಳಿಗೂ ತನ್ನನ್ನು ವಿಸ್ತರಿಸಿಕೊಂಡಿದೆ. ಕಮಲದ ಚಿಹ್ನೆ ಈಗ ದೇಶದ ಯಾವ ಭಾಗಕ್ಕೂ ಹೊಸತಲ್ಲ, ಅಪಥ್ಯವೂ ಅಲ್ಲ. ಬಿಜೆಪಿ ಈಗ ರಾಷ್ಟ್ರವ್ಯಾಪಿ ಹಬ್ಬಿಕೊಂಡ ಪಕ್ಷವಾಗಿ ಹೊಮ್ಮಿದೆ. ದಕ್ಷಿಣಕ್ಕೆ ಇಣುಕಿದರೆ ಕನರ್ಾಟಕ ಹಿಂದೆಂದಿಗಿಂತಲೂ ಹೆಚ್ಚು ಬಲವಾಗಿ ಬಿಜೆಪಿಯನ್ನು ಆತುಕೊಂಡಿದೆ. ತೆಲಂಗಾಣ ಕೂಡ ಬಿಜೆಪಿಗೆ ದಾರಿಮಾಡಿಕೊಟ್ಟಿದೆ. ಆಂಧ್ರ ಭರವಸೆ ಮೂಡಿಸಿದೆ. ತಮಿಳುನಾಡು, ಕೇರಳಗಳು ಬರಲಿರುವ ದಿನಗಳಲ್ಲಿ ಬಿಜೆಪಿಯ ತೆಕ್ಕೆಗೆ ಬಂದರೆ ಆಶ್ಚರ್ಯ ಪಡಬೇಕಿಲ್ಲ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ಸಿನ ಸ್ಥಿತಿ ನೋಡಿ. ಅನೇಕ ಪ್ರಮುಖ ರಾಜ್ಯಗಳಲ್ಲಿ ಕಾಂಗ್ರೆಸ್ ಸೋತು ಸುಣ್ಣವಾಗಿದೆ. ಕಾಂಗ್ರೆಸ್ಸಿನ ಅಸ್ತಿತ್ವವೇ ಇಲ್ಲದ ರಾಜ್ಯಗಳು ಈಗ ತುಂಬಿಹೋಗಿವೆ. ಮಂಗಳೂರಿನಿಂದ ಶುರುಮಾಡಿ ಮಹಾರಾಷ್ಟ್ರ, ಮಧ್ಯಪ್ರದೇಶಗಳನ್ನೆಲ್ಲಾ ಹಾದುಹೋದರೆ ಕಾಂಗ್ರೆಸ್ಸಿನ ಮೊದಲ ಎಮ್ಪಿ ಸಿಗುವುದು 3900 ಕಿ.ಮೀಗಳನ್ನು ಕ್ರಮಿಸಿದ ನಂತರವೇ ಎಂದು ಯಾರೋ ತಮಾಷೆ ಮಾಡುತ್ತಿದ್ದರು. ಮುಂಬೈನಲ್ಲಿ ರೈಲು ಹತ್ತಿದರೆ ಮೊದಲ ಕಾಂಗ್ರೆಸ್ ಎಮ್ಪಿ ಪಂಜಾಬ್ನಲ್ಲೇ ಸಿಗೋದು ಎಂತಲೂ ಹೇಳುತ್ತಿದ್ದರು. ನರೇಂದ್ರಮೋದಿಯವರ ಗೆಲುವು ಹೇಗೆ ಆಕಸ್ಮಿಕವಲ್ಲವೋ ಕಾಂಗ್ರೆಸ್ಸಿನ ಈ ಪರಿಯ ನಾಶವೂ ಆಕಸ್ಮಿಕವಲ್ಲ. ರಾಹುಲ್ ಕಾಂಗ್ರೆಸ್ಸಿನ ಚುಕ್ಕಾಣಿ ಹಿಡಿದ ದಿನದಿಂದಲೂ ಕಾಂಗ್ರೆಸ್ಸಿನ ನಾಶಕ್ಕೆ ಮುನ್ನುಡಿ ಬರೆದುಕೊಂಡೇ ಕೂರಲಾಗಿತ್ತು. ಅದಕ್ಕೆ ಪ್ರಿಯಾಂಕ ವಾದ್ರಾ ಆಗಮನ ಇನ್ನೊಂದಷ್ಟು ವೇಗ ತಂದುಕೊಟ್ಟಿತಲ್ಲದೇ ಮತ್ತೇನೂ ಅಲ್ಲ. ಅಕ್ಷರಶಃ ಕಾಂಗ್ರೆಸ್ಸು ಈಗ ಛಿದ್ರಗೊಂಡು ಹತ್ತಾರು ಪಕ್ಷಗಳಾಗಿ ವಿಭಜನೆಯಾಗುವ ಹೊಸ್ತಿಲಲ್ಲಿ ಬಂದು ನಿಂತಿದೆ. ಚುನಾವಣೆಯಲ್ಲಿ ಸೋತನಂತರವಾದರೂ ಬುದ್ಧಿ ಕಲಿಯುವ ಯಾವ ಧಾವಂತವನ್ನೂ ಕಾಂಗ್ರೆಸ್ಸು ತೋರಲಿಲ್ಲ. ತಪ್ಪುಗಳನ್ನು ಅಥರ್ೈಸಿಕೊಂಡು ತಿದ್ದಿಕೊಳ್ಳುವ ಪ್ರಯತ್ನ ಮಾಡಿದ್ದಿದ್ದರೆ ಬರಲಿರುವ ಚುನಾವಣೆಗಳಲ್ಲಾದರೂ ಅದು ಗೆಲುವು ಸಾಧಿಸುತ್ತಿತ್ತೇನೋ. ಎಲ್ಲಾ ತಪ್ಪುಗಳನ್ನು ಮತಯಂತ್ರದ ಮೇಲೆ ಹೊರಿಸುವ ಪ್ರಯತ್ನ ಮಾಡಿ ಕಾಂಗ್ರೆಸ್ಸು ಆ ಅವಕಾಶವನ್ನೂ ಕಳೆದುಕೊಂಡಿತು. ಮತಯಂತ್ರ ಮತ್ತು ವಿವಿಪ್ಯಾಟ್ಗಳ ತಾಳೆ ಹಾಕುವಿಕೆ ಮುಗಿದ ಮೇಲಂತೂ ಕಾಂಗ್ರೆಸ್ಸಿಗೆ ಮುಖ ಉಳಿಸಿಕೊಳ್ಳಲೂ ಮಾರ್ಗವಿಲ್ಲದಂತಾಗಿದೆ!


ಹಾಗಂತ ಸೋತು ಸುಣ್ಣವಾಗಿದ್ದು ಕಾಂಗ್ರೆಸ್ ಮಾತ್ರವಲ್ಲ. ಕಾಂಗ್ರೆಸ್ಸಿನ ಕಾರಣಕ್ಕೆ ಹುಟ್ಟಿಕೊಂಡ ಎಲ್ಲ ಆಲೋಚನೆಗಳು ಈ ಚುನಾವಣೆಯಲ್ಲಿ ಅಂತ್ಯಕಂಡಿವೆ. ಜಾತಿಯ ರಾಜಕಾರಣ ಸತ್ತುಹೋಯ್ತು. ಗೌಡರು ಜೆಡಿಎಸ್ಗೆ ಮಾತ್ರ ಮತ ಹಾಕುತ್ತಾರೆಂಬ, ಕುರುಬರು ಕಾಂಗ್ರೆಸ್ಸಿಗೆ ಮಾತ್ರ ಮತ ಹಾಕುತ್ತಾರೆಂಬ ಮತ್ತು ದಲಿತರು ಎಂದೆಂದಿಗೂ ಬಿಜೆಪಿಗೆ ಮತ ಹಾಕುವುದಿಲ್ಲವೆಂಬ ಎಲ್ಲ ಸಿದ್ಧಾಂತಗಳು ಕುಸಿದುಬಿದ್ದಿವೆ. ಜನ ಈ ಬಾರಿ ಜಾತಿಯನ್ನು ನೋಡಲಿಲ್ಲ, ಬದಲಿಗೆ ರಾಷ್ಟ್ರದ ವಿಕಾಸಕ್ಕೆ ಮತ ಚಲಾಯಿಸಿದ್ದಾರೆ. ಇಲ್ಲವಾದಲ್ಲಿ ಉತ್ತರಪ್ರದೇಶದಲ್ಲಿ 60ರಷ್ಟು ಸೀಟು ಗೆಲ್ಲುವುದು ಅಸಾಧ್ಯವೇ ಆಗಿತ್ತು. ಈ ಚುನಾವಣೆಯಲ್ಲಿ ಹಣದ ಆರ್ಭಟವೂ ನಡೆದಿಲ್ಲ. ಸೋಲುವುದು ಖಾತ್ರಿ ಎಂದೆನಿಸಿದ್ದರಿಂದ ಕಾಂಗ್ರೆಸ್ಸು ಹಣ ಖಚರ್ು ಮಾಡಿಲ್ಲ, ಮೋದಿಯವರ ಮೇಲಿನ ವಿಶ್ವಾಸದಿಂದಾಗಿ ಬಿಜೆಪಿಯೂ ವೆಚ್ಚ ಮಾಡಿಲ್ಲ. ಹಾಗೆಯೇ ಈ ಚುನಾವಣೆಯಲ್ಲಿ ದೇಶ ವಿಭಜನೆಯ ಮಾತುಗಳನ್ನಾಡುತ್ತಿದ್ದವರೆಲ್ಲಾ ಮನೆ ಸೇರಿಕೊಂಡಿದ್ದಾರೆ. ಬಿಹಾರದಲ್ಲಿ ಕನ್ಹಯ್ಯಾ ಕುಮಾರ್ ನಾಲ್ಕುವರೆ ಲಕ್ಷ ಮತಗಳ ಅಂತರದಿಂದ ಭರ್ಜರಿಯಾಗಿ ಸೋತಿದ್ದಾನೆ. ಭಾರತವನ್ನು ವಿಭಜಿಸುವ ಈ ಕಲ್ಪನೆಗಳಿಗೆ ತಮ್ಮ ಬೆಂಬಲವಿಲ್ಲವೆಂದು ಮತದಾರ ಸ್ಪಷ್ಟಪಡಿಸಿದ್ದಾನೆ. ಬೆಂಗಳೂರಿನಿಂದ ಪ್ರತಿಸ್ಪಧರ್ಿಸಿದ್ದ ಪ್ರಕಾಶ್ರಾಜ್ಗೂ ಇದೇ ಗತಿಯಾಗಿದೆ. ಠೇವಣಿ ಉಳಿಸಿಕೊಳ್ಳಲೂ ಆತನಿಂದ ಸಾಧ್ಯವಾಗಲಿಲ್ಲ. ಭಾರತೀಯ ಸಂಸ್ಕೃತಿಯನ್ನು ತುಚ್ಛವಾಗಿ ಕಂಡು ಅದನ್ನು ಆಡಿಕೊಳ್ಳುತ್ತಿದ್ದ ಇಂಥವರ ಮುಖಕ್ಕೆ ಇದು ಬಿಗಿಯಾದ ಕಪಾಳಮೋಕ್ಷ. ಅಷ್ಟೇ ಅಲ್ಲ, ಸೈನ್ಯದ ಸಜರ್ಿಕಲ್ ಸ್ಟ್ರೈಕ್ಗೆ ಪುರಾವೆ ಕೇಳಿದ್ದ ಅರವಿಂದ್ ಕೇಜ್ರಿವಾಲ್ನನ್ನು, ಆತನ ಪಕ್ಷವನ್ನು ಬೋಡರ್ಿಗೂ ಇಲ್ಲದಂತೆ ಮಾಡಿ ಮನೆಗಟ್ಟಲಾಗಿದೆ. ಭಾರತ ಈಗ ರಾಷ್ಟ್ರೀಯತೆಯ ಓತಪ್ರೋತ ಪ್ರವಾಹದಲ್ಲಿ ಮೀಯುತ್ತಿದೆ. ಚುನಾವಣೆಯ ಹೊತ್ತಲ್ಲಿ ಸೈನಿಕನನ್ನು ಅವಮಾನಿಸಿ ಎರಡು ಹೊತ್ತಿನ ಊಟಕ್ಕಾಗಿ ಆತ ಸೈನ್ಯಕ್ಕೆ ಸೇರುತ್ತಾನೆ ಎಂದಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಗೂ ತಕ್ಕ ಶಾಸ್ತಿಯೇ ಆಗಿದೆ.


ಒಟ್ಟಾರೆ ಮೋದಿ ಪ್ರಧಾನಿಯಾಗುವುದೆಂದರೆ ಜನರ ಮನಸ್ಸುಗಳಲ್ಲಿ ಭಾರತದ ಕುರಿತ ಕನಸುಗಳು ಕಟ್ಟಲ್ಪಡುವುದು ಎಂದರ್ಥ. ಮೋದಿ ಪ್ರಧಾನಿಯಾಗುವುದೆಂದರೆ ಭಾರತದ ಜನ ತಾವೇ ತಾವಾಗಿ ರಾಷ್ಟ್ರದ ಹಿತಕ್ಕಾಗಿ ದುಡಿಯುವುದು ಎಂದರ್ಥ. ನರೇಂದ್ರಮೋದಿಯವರಿಗೆ ಮುನ್ನೂರು ಸೀಟುಗಳನ್ನು ಕೊಟ್ಟು ಭಾರತೀಯ ತನ್ನನ್ನು ತಾನೇ ರಕ್ಷಿಸಿಕೊಂಡಿದ್ದಾನೆ. ರಾಷ್ಟ್ರವನ್ನು ಮುಂದಿನ ಪೀಳಿಗೆಗೆ ಬಲವಾಗಿ ಉಳಿಸುವಂತೆ ನೋಡಿಕೊಂಡಿದ್ದಾನೆ. ಹಾಗಂತ ಸವಾಲುಗಳೇನು ಕಡಿಮೆಯಿಲ್ಲ. ಪಾಕಿಸ್ತಾನ, ಚೀನಾಗಳು ದಿನ ಬೆಳಗಾದರೆ ಹೊಸ ಸುದ್ದಿಯನ್ನು ಕೊಡುತ್ತಿವೆ. ಆಂತರಿಕವಾಗಿ ನೋಡುವುದಾದರೆ ಇಸ್ಲಾಮಿಕ್ ಸ್ಟೇಟ್ಸ್ ಉಗ್ರರು ನಿಧಾನವಾಗಿ ಭಾರತದ ಮುಸ್ಲೀಂ ತರುಣರನ್ನು ಆಕಷರ್ಿಸುತ್ತಿದ್ದಾರೆ. ಹೆಚ್ಚು-ಹೆಚ್ಚು ತರುಣರು ಮತ ನೀಡಲು ಬರುತ್ತಿದ್ದಾರೆನ್ನುವುದು ನಿಜವೇ ಆದರೂ ಅವರು ಕೆಲಸಕ್ಕಾಗಿ ಅಷ್ಟೇ ಬಡಿದಾಡುತ್ತಿದ್ದಾರೆ ಎಂಬುದೂ ಸತ್ಯ. ಬಗೆ-ಬಗೆಯ ಉದ್ದಿಮೆಗಳ ಮೂಲಕ ಅವರೆಲ್ಲರನ್ನೂ ಸದೃಢಗೊಳಿಸುವುದೂ ನಮ್ಮ ಮುಂದಿನ ಸವಾಲೇ. ನರೇಂದ್ರಮೋದಿ ಈಗ ಎಲ್ಲಕ್ಕೂ ಸಿದ್ಧವಾಗಿದ್ದಾರೆ. ಹಿಂದಿನ ಅವಧಿಯ ವಿಕಾಸಪರ ಕೆಲಸಗಳು ಮುಂದುವರೆಯುತ್ತವಾದರೂ ಕಠೋರವಾದ ಒಂದಷ್ಟು ನಿರ್ಣಯಗಳನ್ನು ಮೋದಿ ಕೈಗೊಳ್ಳಲಿದ್ದಾರೆ. ಆ ವಿಶ್ವಾಸ ಇರುವುದರಿಂದಲೇ ಕಾಂಗ್ರೆಸ್ಸಿಗೆ ನಡುಕ ಶುರುವಾಗಿರೋದು. ಇನ್ನು 60 ತಿಂಗಳು ನಾವು ನಿಶ್ಚಿಂತೆಯಾಗಿ ನಿದ್ದೆ ಮಾಡಬಹುದು ಎನ್ನುವುದಂತೂ ಹೌದು. ಆ ವಿಶ್ವಾಸವನ್ನು ಮೋದಿ ಭಾರತೀಯರ ಕಂಗಳಲ್ಲಿ ಹುಟ್ಟುಹಾಕಿಬಿಟ್ಟಿದ್ದಾರೆ!

-ಚಕ್ರವರ್ತಿ ಸೂಲಿಬೆಲೆ

1 Comment

1 Comment

  1. ಶಶಿಕಲಾ. ಎಸ್.

    May 27, 2019 at 2:50 am

    ನಿಮ್ಮಷ್ಟು ವಿಶ್ಲೇಷಣೆ ಬರುವದಿಲ್ಲವಾದರೂ ಹಿಂದೂಗಳು ಒಟ್ಟಾಗಿ ದೇಶ ಉಳಿಸಿಕೊಳ್ಳಲು ಅವರಿಗೆ ಸ್ಥೈರ್ಯ ತುಂಬಿದ್ದು ಮೋದಿ‌ ಎಂಬ ಮಾಂತ್ರಿಕ.ನಮ್ಮೆಲ್ಲರ ಸುಕೃತವೋ ಎನೋ ನಮ್ಮ ಸಮಕಾಲೀನರಾಗಿ ಭಾರತದ ಹೊಸ ಭವಿಷ್ಯ ಬರೆಯಲು ಹೊರಟಿದ್ದಾರೆ. ಸರ್ವಶಕ್ತ ಅವರಿಗೆ ಶಕ್ತಿ ನೀಡಲಿ. 🙏

Leave a Reply

Your email address will not be published. Required fields are marked *

Most Popular

To Top