National

ನಮಗೆ ಧರ್ಮ ನೀಡಲು ಬಂದವರು ನಮ್ಮ ಮಕ್ಕಳನ್ನೇ ಮಾರಿದರು!

– ಚಕ್ರವರ್ತಿ ಸೂಲಿಬೆಲೆ

ಜಾರ್ಖಂಡ್ನ ರಾಂಚಿಯಿಂದ ಎದೆ ನಡುಗಿಸುವ ಸುದ್ದಿಯೊಂದು ಕಳೆದೊಂದು ವಾರದಿಂದ ತಿರುಗಾಡುತ್ತಿದೆ. ಸುದ್ದಿ ಏನು ಹೊಸತಲ್ಲ. ಇಷ್ಟೂ ದಿನಗಳ ಕಾಲ ಬಲಪಂಥೀಯರು ಹೇಳುತ್ತಿದ್ದ ಈ ವಿಚಾರವನ್ನು ಅವರು ಹುಟ್ಟುಹಾಕಿದ ಕಥೆ ಎಂದೇ ಬಣ್ಣಿಸಲಾಗುತ್ತಿತ್ತು. ಈಗ ಸತ್ಯ ಬೆಳಕಿಗೆ ಬಂದಿದೆ ಅಷ್ಟೇ. ಕ್ಯಾಥೋಲಿಕ್ ಕ್ರಿಶ್ಚಿಯನ್ನರು ನಡೆಸುವ ಮಿಷನರೀಸ್ ಆಫ್ ಚಾರಿಟಿಯ ನಿರ್ಮಲ ಹೃದಯ ಸಂಸ್ಥೆಯಿಂದ ಅನಾಥ ಮಕ್ಕಳ ಮಾರಾಟವನ್ನು ನನ್ಗಳು ವ್ಯವಸ್ಥಿತವಾಗಿ ನಡೆಸುತ್ತಿದ್ದರೆಂಬುದು ಬೆಳಕಿಗೆ ಬಂದಿದೆ. ಅಲ್ಲಿಯೇ ಕೆಲಸ ಮಾಡುತ್ತಿದ್ದ ನಿರ್ಮಲ ಹೃದಯದ ಮುಖ್ಯಸ್ಥೆ ಸಿಸ್ಟರ್ ಕೊಶ್ಲೇನಿಯಾ ಮತ್ತೊಬ್ಬ ನನ್ ಹಾಗೂ ಅಲ್ಲಿನ ಕಸ ಗುಡಿಸುವಾಕೆ ಮೂವರನ್ನೂ 250 ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿದ ಸುದ್ದಿಯ ಜಾಡು ಹಿಡಿದು ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್ನ ರಾಜ್ಯ ಮಕ್ಕಳ ರಕ್ಷಣಾ ಸೊಸೈಟಿಯ ಮುಖ್ಯಸ್ಥರಾದ ಆರತಿ ಕುಜೂರ್ ಈ ಪ್ರಕರಣವನ್ನು ಭೇದಿಸಿದವರು. ಕಳೆದ ಆರು ತಿಂಗಳಿನಿಂದ ನಿರಂತರವಾಗಿ ನಿರ್ಮಲ ಹೃದಯದ ಕುರಿತಂತೆ ದೂರುಗಳನ್ನು ಪಡೆಯುತ್ತಿದ್ದ ಅವರು ಸಂಸ್ಥೆಯ ಮೇಲೆ ತೀವ್ರ ನಿಗಾ ಇರಿಸಿದ್ದರು. ಆನಂತರವೇ ಭಯಾನಕವಾದ ಸತ್ಯಗಳು ಹೊರಬಂದದ್ದು. ಈ ಸಂಸ್ಥೆ ಪ್ರತಿಯೊಂದು ಮಗುವನ್ನೂ 450 ಪೌಂಡ್ನಿಂದ 1000 ಪೌಂಡ್ಗೆ ಮಾರಾಟ ಮಾಡುತ್ತಿದ್ದವು. ಮಕ್ಕಳ ಬಗ್ಗೆ ಕಾಳಜಿ ಹೊಂದಿರುವ ನಟನೆ ಮಾಡುತ್ತಲೇ ಯಾರಿಗೂ ಅರಿವಾಗದಂತೆ ಅವರ ಮಾರಾಟದ ಜಾಲವೊಂದನ್ನು ರೂಪಿಸಿದ್ದರು. 2015 ರಲ್ಲಿ ಸಕರ್ಾರ ರೂಪಿಸಿದ್ದ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ನಿಯಮಾವಳಿಯನ್ನು ಈ ಸಂಸ್ಥೆ ವಿರೋಧಿಸಿ ಪ್ರತಿಭಟನೆ ನಡೆಸಿತ್ತು. ಮಕ್ಕಳನ್ನು ದತ್ತು ಪಡೆದುಕೊಳ್ಳುವ ಪ್ರಕ್ರಿಯೆಯನ್ನು ಸಕರ್ಾರ ಸುಲಭಗೊಳಿಸಿದೆ ಎಂದು ದೂರುತ್ತಾ ತಾವು ಇನ್ನು ಮುಂದೆ ದತ್ತು ನೀಡುವ ಸಕರ್ಾರಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದೂ ಎಚ್ಚರಿಕೆ ಕೊಟ್ಟಿತ್ತು. ಆದರೆ ಇವೆಲ್ಲವೂ ಅವರ ಬೂಟಾಟಿಕೆಯ ಮತ್ತೊಂದು ಭಾಗವೆಂದು ಈಗ ಅರಿವಾಗಿದೆ. ಮಕ್ಕಳನ್ನು ದತ್ತು ಕೊಡಲೊಪ್ಪದ ಈ ಸಂಸ್ಥೆ ಮಾರಾಟ ಮಾಡಲು ಮಾತ್ರ ಮುಂದೆ ನಿಂತಿದ್ದಿದ್ದು ದುರಂತಕಾರಿ ಸಂಗತಿ. ಕ್ರಿಶ್ಚಿಯನ್ ಮಿಷನರಿಗಳಿಗೆ ಭಾರತೀಯರು ತಮ್ಮ ಉಪಯೋಗಕ್ಕೆ ಬಳಕೆಯಾಗುವ ವಸ್ತುಗಳಷ್ಟೇ ಎಂಬುದು ಮತ್ತೊಮ್ಮೆ ಸಾಬೀತಾಯ್ತು.

 

ಮಿಷನರೀಸ್ ಆಫ್ ಚಾರಿಟಿ ರೋಮನ್ ಕ್ಯಾಥೋಲಿಕ್ನ ವಿಚಾರಗಳನ್ನು ಹರಡಿಸಲೆಂದೇ 1950 ರಲ್ಲಿ ಮದರ್ ತೆರೆಸಾ ಕಲ್ಕತ್ತಾದಲ್ಲಿ ಶುರು ಮಾಡಿದ್ದು. 2012 ರ ವೇಳೆಗೆ ನಾಲ್ಕುವರೆ ಸಾವಿರ ಸಿಸ್ಟರ್ಗಳನ್ನು ಹೊಂದುವ ಮೂಲಕ ಅದು ಅತ್ಯಂತ ದೊಡ್ಡ ಜಾಲವಾಗಿ ಬೆಳೆದುಬಿಟ್ಟಿತು. ಇಲ್ಲಿ ನನ್ಗಳಾಗಿ ಸೇರಿಕೊಳ್ಳುವವರು ಎಂದಿನಂತೆ ಬ್ರಹ್ಮಚರ್ಯದ, ಬಡತನದ ಮತ್ತು ನಿಷ್ಠೆಯ ಸಂಕಲ್ಪವನ್ನು ಜೀವನದುದ್ದಕ್ಕೂ ಪಾಲಿಸಬೇಕಿತ್ತು. ಬಡವರಲ್ಲೇ ಬಡವರಾದವರಿಗೆ ಹೃದಯ ತುಂಬಿದ ಸೇವೆ ಮಾಡುತ್ತೇವೆಂಬ ಮಾನಸಿಕ ದೃಢತೆ ಇರಬೇಕಿತ್ತು. ನಿರಾಶ್ರಿತರು, ವೇಶ್ಯಾವೃತ್ತಿಗಿಳಿದವರು, ಮಾನಸಿಕ ಸ್ಥಿಮಿತ ಕಳೆದುಕೊಂಡವರು, ರೋಗ ಪೀಡಿತ, ಅನಾಥ, ಎಚ್ಐವಿ ಸೋಂಕಿತ ಮಕ್ಕಳು, ವೃದ್ಧರು ಇವರೆಲ್ಲರನ್ನೂ ನೋಡಿಕೊಳ್ಳುತ್ತೇವೆಂದು ಹೇಳಿಕೊಂಡಿತ್ತು ಮಿಷನರೀಸ್ ಆಫ್ ಚಾರಿಟಿ. ಕಲ್ಕತ್ತಾದಲ್ಲಿ 1950 ರಲ್ಲಿ ಬಲು ಚಿಕ್ಕದಾಗಿಯೇ ಆರಂಭವಾದ ಈ ಸಂಸ್ಥೆ ವಾಟಿಕನ್ನ ಅನುಮತಿ ಪಡೆದು ಚಚರ್್ನ ಒಂದು ಅಂಗವೆಂದು ಘೋಷಿಸಿಕೊಂಡಿತು. ಪೀಡಿತ ಮಕ್ಕಳನ್ನು ನೋಡಿಕೊಳ್ಳುತ್ತೇವೆಂಬ ನಾಟಕ ಮಾಡುತ್ತಲೇ ಜಗತ್ತಿಗೆ ಭಾರತದ ಕುರಿತಂತೆ ಕೆಟ್ಟ ಸಂದೇಶಗಳನ್ನು ರವಾನಿಸಲಾರಂಭಿಸಿತು. ಕಲ್ಕತ್ತಾ ಎಂದರೆ ಕೊಳೆಗೇರಿ, ಮಕ್ಕಳನ್ನು ಕಸದ ತೊಟ್ಟಿಗೆಸೆಯುವ ಜನರಿಂದ ಕೂಡಿರುವಂಥ ಊರು, ಇಡಿಯ ಭಾರತವೇ ಮನುಕುಲ ವಿರೋಧಿ ಎಂಬೆಲ್ಲಾ ಚಿತ್ರಣಗಳನ್ನು ಜಗತ್ತಿಗೆ ನೀಡುತ್ತಾ ಭಾರತದ ಮಾನ ಹರಾಜು ಹಾಕುತ್ತಿದ್ದ ತೆರೆಸಾ ಅಪಾರ ಪ್ರಮಾಣದ ದಾನವನ್ನು ವಿದೇಶದಿಂದ ಭಾರತಕ್ಕೆ ತರುತ್ತಿದ್ದರು. ತನ್ನ ನನ್ಗಳ ಜಾಲದ ಮೂಲಕ ಮತ್ತೆ ಅವುಗಳನ್ನು ಬಡ ಭಾರತೀಯರ ನಡುವೆ ಹಂಚುತ್ತಾ ಮತಾಂತರದ ಚಟುವಟಿಕೆಯನ್ನು ಜೋರಾಗಿಯೇ ನಡೆಸುತ್ತಿದ್ದರು. 1965 ರಲ್ಲಿ ತೆರೆಸಾ ಚಟುವಟಿಕೆಯ ಪ್ರಭಾವವನ್ನು ಗಮನಿಸಿದ ಚಚರ್ು ಆಕೆಗೆ ಜಗತ್ತಿನಾದ್ಯಂತ ಸಂಸ್ಥೆಗಳನ್ನು ವಿಸ್ತರಿಸುವ ಅನುಮತಿ ಕೊಟ್ಟಿತು. ಏಷ್ಯಾ ಮತ್ತು ಆಫ್ರಿಕಾಗಳನ್ನು ಗಮನದಲ್ಲಿರಿಸಿಕೊಂಡೇ ತೆರೆಸಾ ಮಿಷನರಿ ಚಟುವಟಿಕೆಗಳನ್ನು ವಿಸ್ತರಿಸಿದರು.

ಭಾರತದಲ್ಲಿ ತೆರೆಸಾಗೆ ವಿಶೇಷ ಪ್ರಚಾರ ಸಿಗುವಂತೆ ನೋಡಿಕೊಳ್ಳಲಾಯ್ತು. ಜವಹರ್ಲಾಲ್ ನೆಹರೂ ಆಕೆಯ ಸಂಸ್ಥೆಗೆ ಭೇಟಿ ನೀಡಿ ಆಕೆಯನ್ನು ದೇವರೆಂದು ಬಣ್ಣಿಸಿದ್ದನ್ನು ನಾವೆಲ್ಲ ಪಠ್ಯ ಪುಸ್ತಕದಲ್ಲೇ ಓದಿದ್ದೆವು. ಪತ್ರಿಕೆಗಳು ಆಕೆಯ ಬಗ್ಗೆ ಪುಟಗಟ್ಟಲೆ ಲೇಖನಗಳನ್ನೇ ಬರೆದವು. ಸೇವೆಗೆ ಪಯರ್ಾಯ ಪದವೇ ಕ್ರಿಶ್ಚಿಯನ್ನರು ಎಂಬುವಷ್ಟರ ಮಟ್ಟಿಗೆ ಬೆಳೆದು ನಿಂತಿತ್ತು ತೆರೆಸಾ ಪ್ರಭಾವ. ಆಗೊಂದು ಕಾಲಘಟ್ಟವೂ ಹಾಗೆಯೇ ಇತ್ತು. ಎರಡು ಶತಮಾನಗಳ ಕಾಲ ಭಾರತದ ಮೇಲೆ ಕ್ರೂರ ಆಡಳಿತ ನಡೆಸಿದ ಕ್ರಿಶ್ಚಿಯನ್ನರು ಇಲ್ಲಿನ ಒಟ್ಟಾರೆ ವ್ಯವಸ್ಥೆಗಳನ್ನು ಉಧ್ವಸ್ಥಗೊಳಿಸಿಬಿಟ್ಟಿದ್ದರು. ಜನರನ್ನು ಯಾವ ಪರಿಯ ದಾರಿದ್ರ್ಯಕ್ಕೆ ನೂಕಿದ್ದರೆಂದರೆ ಒಂದು ಕಾಲದಲ್ಲಿ ಸಿರಿವಂತವಾಗಿದ್ದ ಕೋಲ್ಕತ್ತಾ ನೋಡ ನೋಡುತ್ತಲೇ ಕೊಳಗೇರಿಯಾಗಿಬಿಟ್ಟಿತು. ಕೃತಕ ಕ್ಷಾಮಗಳನ್ನು ಬಿಡಿ, ಜನರನ್ನು ಮತಾಂತರಿಸಲೆಂದು ಪ್ಲೇಗ್ ಕಾಲರಾಗಳಂತಹ ಕೃತಕ ಹೆಮ್ಮಾರಿಗಳನ್ನೂ ಸೃಷ್ಟಿಸಲಾಯ್ತು. ಇಂಥವೇ ತೆರೆಸಾರಂಥವರಿಗೆ ಒಳನುಸುಳಲು ಸಹಕಾರಿಯಾಗಿತ್ತು. ಈಶಾನ್ಯ ರಾಜ್ಯಗಳಿಗಂತೂ ಇತರೆ ಭಾಗಗಳಿಂದ ಹಿಂದುಗಳು ಹೋಗುವುದನ್ನು ನಿರಾಕರಿಸಲಾಯಿತಷ್ಟೇ ಅಲ್ಲದೇ ಇಡಿಯ ದೇಶದಲ್ಲಿದ್ದ ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ನಾಶಗೊಳಿಸಿ ಕ್ರಿಸ್ತನನ್ನು ಒಪ್ಪುವ ಹೊಸ ತರುಣರನ್ನು ಸೃಷ್ಟಿ ಮಾಡುವ ಜವಾಬ್ದಾರಿಯನ್ನು ನನ್ಗಳ ಕೈಗಿರಿಸಲಾಯ್ತು. ಕಾಲಕ್ರಮದಲ್ಲಿ ಶಿಕ್ಷಣ, ಆರೋಗ್ಯ, ಸ್ವಚ್ಛತೆ ಈ ಮೂರಕ್ಕೂ ಕ್ರಿಶ್ಚಿಯನ್ನರನ್ನು ಪಯರ್ಾಯವೆಂದು ರೂಪಿಸಿ ಅದನ್ನೆ ಆದರ್ಶವಾಗಿ ತೋರಿಸುತ್ತಾ ಹೊಸ ಪೀಳಿಗೆಯನ್ನು ಸೆಳೆಯುವ ಪ್ರಯತ್ನವನ್ನು ಮಾಡಲಾಯ್ತು. ಅವರದ್ದು ಹಳೆಯ ಹಪ್ಪಟ್ಟು ಮತಾಂತರದ ಪದ್ಧತಿ. ಬಡವರಿಗೆ ಮತ್ತು ತಿಳಿಯದವರಿಗೆ ಕಾಯಿಲೆ ಬರುವಂತೆ ಮಾಡಿ ಅಥವಾ ಸಾಂಕ್ರಾಮಿಕ ರೋಗ ಹರಡುವೆಡೆಗೆ ತಂಡ ತೆಗೆದುಕೊಂಡು ಧಾವಿಸಿ, ಅಲ್ಲಿ ಅವರನ್ನು ಗುಣ ಪಡಿಸುವ ನಾಟಕ ಮಾಡುತ್ತಾ ಕ್ರಿಸ್ತನನ್ನು ಎದುರಿಗಿಟ್ಟು ಪ್ರಾರ್ಥನೆ ಮಾಡುವಂತೆ ಕೇಳಿಕೊಳ್ಳಿ, ನಿಧಾನವಾಗಿ ಚಚರ್್ಗೆ ಕರೆತನ್ನಿ, ಮನೆಯಲ್ಲಿರುವ ಹಿಂದೂ ದೇವತೆಗಳನ್ನು ಬೀದಿಗೆಸೆಯಲು ಹೇಳಿ ಅಷ್ಟೇ! ನಾನು ಬಹಳ ಹಳೆಯ ಸಂಗತಿಗಳನ್ನೇನು ಮಾತನಾಡುತ್ತಿಲ್ಲ. ದಕ್ಷಿಣ ಭಾರತಕ್ಕೆ ಸುನಾಮಿ ಅಪ್ಪಳಿಸಿದ ಹೊತ್ತು ನಿಮಗೆಲ್ಲರಿಗೂ ನೆನಪಿರಬೇಕು. ಅಂದೂ ಅಷ್ಟೇ. ಸಕರ್ಾರ ನೀಡುತ್ತಿದ್ದ ಸವಲತ್ತುಗಳನ್ನು ತಾವೇ ಕೊಡುತ್ತೇವೆಂದು ನಂಬಿಸಿದ ಮಿಷನರಿಗಳು ಊಟದ ಜೊತೆಗೆ ಬೈಬಲ್ ಅನ್ನೂ ಕೊಟ್ಟು ಬರುತ್ತಿದ್ದವು. ಹಸಿದವರಿಗೆ ಅನ್ನ ಕೊಡುವ, ಆರೋಗ್ಯ ಕಳಕೊಂಡವರಿಗೆ ಗುಣಪಡಿಸುವ ನೆಪದಲ್ಲಿ, ಶಿಲುಬೆಯನ್ನು ಮಾರುವ ಈ ಪ್ರಯತ್ನ ಹಿಂದುವಾದವನು ಎಂದಿಗೂ ಒಪ್ಪಲಾರ. ಹಾಗಂತ ಬಲು ಹಿಂದೆಯೇ ಸ್ವಾಮಿ ವಿವೇಕಾನಂದರು ಪಶ್ಚಿಮದ ಚಚರ್ುಗಳಲ್ಲಿ ಬಲು ಜೋರಾಗಿಯೇ ಸಾರಿದ್ದರು.


ಇದೇ ಬಗೆಯ ಅನೇಕ ಸತ್ಯ ಘಟನೆಗಳು ತೆರೆಸಾ ಕುರಿತಂತೆ ಹೊರ ಬಂದಿವೆ. ಆಕೆಯ ಸಂಸ್ಥೆಯಲ್ಲಿ ಕೆಲಸ ಮಾಡಿದ ಅರೂಪ್ ಚಟಜರ್ಿ ಆನಂತರದ ದಿನಗಳಲ್ಲಿ ಅಲ್ಲಿರುವ ಆಥರ್ಿಕ ಗೊಂದಲಗಳನ್ನು ಬಯಲಿಗೆಳೆದಿದ್ದರು. ಬ್ರಿಟಿಷ್ ಪತ್ರಕರ್ತರಾದ ಕ್ರಿಸ್ಟೋಫರ್ ಹಿಚನ್ಸ್ ಮತ್ತು ತಾರಿಕ್ ಅಲಿ ಚಾನೆಲ್ 4 ಗೆಂದೇ ನಿದರ್ೇಶಿಸಿದ ‘ಹೆಲ್ಸ್ ಏಜೆಂಲ್’ ಎನ್ನುವ ಸಾಕ್ಷ್ಯಚಿತ್ರ ಇಂದಿಗೂ ಉತ್ತರಿಸಲಾಗದ ಪ್ರಶ್ನೆಗಳನ್ನು ಮಿಷನರಿಗಳೆದುರಿಗಿಟ್ಟಿದೆ. ‘ದ ಲ್ಯಾನ್ಸೆಟ್’ನ ಪತ್ರಕರ್ತ ರಾಬಿನ್ ಫಾಕ್ಸ್ ತೆರೆಸಾ ಸಂಸ್ಥೆಗೆ ಭೇಟಿ ಕೊಟ್ಟು ಅಲ್ಲಿನ ವ್ಯವಸ್ಥೆಗಳ ಕುರಿತಂತೆ ಬಹುವಾಗಿ ಆಕ್ಷೇಪವೆತ್ತಿದ್ದ. ತೆರೆಸಾ ಸಾಯುವ ರೋಗಿಗಳನ್ನು ಮತಾಂತರಿಸುವ ಕುರಿತಂತೆ ವ್ಯಾಪಕವಾದಂತ ಟೀಕೆ ವ್ಯಕ್ತವಾಗಿತ್ತು. ಬರಿ ಮತಾಂತರದ್ದಷ್ಟೇ ಅಲ್ಲ. ಕ್ಯಾಥೋಲಿಕ್ ಚಚರ್ುಗಳೊಳಗೆ ನನ್ಗಳ ಮೇಲೆ ಲೈಂಗಿಕವಾದ ಅತ್ಯಾಚಾರಗಳೂ ನಡೆಯುತ್ತವೆಂಬ ಸುದ್ದಿ ಆಗಿಂದಾಗೆ ಹೊರಬರುತ್ತಲೇ ಇರುತ್ತವೆ. ಕೇರಳದ ಚಚರ್ೊಂದನ್ನು ತನ್ನ 68 ನೇ ವಯಸ್ಸಿನಲ್ಲಿ ಬಿಟ್ಟು ಬಂದ ಸಿಸ್ಟರ್ ಮೇರಿ ಬರೆದ ಕೃತಿ ‘ಆ್ಯನ್ ಆಟೋಬಯೋಗ್ರಫಿ ಆಫ್ ಎ ನನ್’ ಈ ವಿಚಾರದಲ್ಲಿ ಉತ್ಪಾತವನ್ನೇ ಸೃಷ್ಟಿಸಿತ್ತು. ಸಿಸ್ಟರ್ ಮೇರಿ ಚಚರ್ುಗಳಲ್ಲಿ ಪಾದ್ರಿಗಳಿಂದ ನನ್ಗಳ ಮೇಲೆ ನಡೆಯುವ ಲೈಂಗಿಕ ಶೋಷಣೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದರು. ಜೇಸ್ಮೆ ರಾಫೆಲ್ ಬರೆದ ಕೃತಿ ಕೂಡ ಇಷ್ಟೇ ಸದ್ದು ಮಾಡಿತ್ತು. ಶಿಬು ಕಲಪ್ಪರಂಬೆಲ್ ಶ್ವೇತ ವಸ್ತ್ರಧಾರಿಯಾಗಿದ್ದ ಚಚರ್ಿನ ಬ್ರದರ್. ಆತ ಕೂಡ ಚಚರ್ುಗಳೊಳಗಿನ ಕತ್ತಲ ಕಥನಗಳನ್ನು ಬಿಚ್ಚಿಟ್ಟಿದ್ದ. ಸಿಸ್ಟರ್ ಮೇರಿ ಹೇಳುವ ಪ್ರಕಾರ ‘ಚಚರ್ುಗಳೊಳಗೆ ಸಹಿಸಲಾಗದ ನೋವಿದೆ. ಅಸಹಾಯಕತೆ ಇದೆ. ಕೆಲವರು ಓಡಿ ಹೋಗುತ್ತಾರೆ. ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಕೆಲವರು ದೀರ್ಘಕಾಲ ಉಳಿದುಕೊಳ್ಳುತ್ತಾರೆ ಏಕೆಂದರೆ ನನ್ ಪದವಿಯನ್ನು ಸ್ವೀಕರಿಸುವಾಗಲೇ ಕ್ರಿಸ್ತನ ಹಾದಿಯಲ್ಲಿ ಎಂಥ ಕಠಿಣ ಸಂದರ್ಭಗಳನ್ನೂ ಎದುರಿಸಬೇಕೆಂಬ ಪಾಠವನ್ನು ಬೋಧಿಸಲಾಗಿರುತ್ತದೆ. ಪಾದ್ರಿಗಳು ಆಗಾಗ ಕಾನ್ವೆಂಟ್ಗಳಿಗೆ ಬಂದುಬಿಡುತ್ತಾರೆ ಮತ್ತು ಅಲ್ಲಿರುವ ನನ್ಗಳೊಂದಿಗೆ ಚಕ್ಕಂದವಾಡುತ್ತಾರೆ. ಅನೇಕ ಬಾರಿ ನನ್ಗಳ ಕೋಣೆಯೊಳಕ್ಕೆ ಹೊಕ್ಕರೆ ಅಸಹ್ಯವೆನಿಸುವ ಸ್ಥಿತಿ ಇರುತ್ತದೆ’ ಒಟ್ಟಾರೆ ಚಚರ್ುಗಳ ಬಣ್ಣ ಬಯಲು ಮಾಡುವ ಕೃತಿ ಮಿಷನರೀಸ್ ಇನ್ ಇಂಡಿಯಾ ಎಂಬ ಕೃತಿಯನ್ನು ಅರುಣ್ ಶೌರಿಯವರು ಬರೆದಿದ್ದಾರೆ.

ಬರಿ ದೇಶದಲ್ಲಷ್ಟೇ ಅಲ್ಲ ಜಾಗತಿಕ ಮಟ್ಟದಲ್ಲೂ ಇವರ ಕುರಿತಂತೆ ಇವೇ ಆರೋಪಗಳಿವೆ. ತೀರಿಕೊಂಡ ಎರಡೇ ದಶಕಗಳಲ್ಲಿ ತೆರೆಸಾರಿಗೆ ಸಂತ ಪದವಿಯನ್ನು ಕೊಟ್ಟಿದ್ದಂತೂ ಇಂದಿಗೂ ಅಪಹಾಸ್ಯದ ವಸ್ತುವಾಗಿದೆ. ಹಿಂದೂ ಧರ್ಮದ ಆಚರಣೆಗಳನ್ನು ಆಡಿಕೊಳ್ಳುವ ಮಿಷನರಿಗಳು ಮತ್ತು ಬುದ್ಧಿಜೀವಿಗಳು ತೆರೆಸಾರಿಗೆ ಕೊಟ್ಟ ಸಂತ ಪದವಿಯ ಕುರಿತಂತೆ ಎಂದಿಗೂ ಮಾತನಾಡುವುದೇ ಇಲ್ಲ. ಏಸು ಕ್ರಿಸ್ತನಿಗೆ ಸಮಪರ್ಿಸಿಕೊಂಡ ವ್ಯಕ್ತಿಯೊಬ್ಬ ಮಾಡಿರುವ ಪವಾಡಗಳ ಆಧಾರದ ಮೇಲೆ ಅವರು ತೀರಿಕೊಂಡ ನಂತರ ಸಂತ ಪದವಿ ನೀಡಲಾಗುತ್ತದೆ. ತೆರೆಸಾ ಕನಸಿನಲ್ಲಿ ಬಂದು ವ್ಯಕ್ತಿಯೊಬ್ಬರ ಬ್ರೈನ್ ಟ್ಯೂಮರ್ ಸರಿಪಡಿಸಿದರೆಂದು 21 ನೇ ಶತಮಾನದಲ್ಲಿ ವ್ಯಾಟಿಕನ್ ಚಚರ್ಿನ ಮುಖ್ಯಸ್ಥರು ಘೋಷಿಸಿ ಆಕೆಗೆ ಸಂತ ಪದವಿಯನ್ನು ನೀಡಿದ್ದು ಇಂದಿಗೂ ಬೌದ್ಧಿಕ ವಲಯದ ಸುದೀರ್ಘ ಚಚರ್ೆ. ಸಾಯಿಬಾಬಾ ಪವಾಡಗಳ ಕುರಿತಂತೆ ಬಾಯಿ ಹರಿದುಕೊಳ್ಳುವ ಯಾವಾನಾದರೂ ಒಬ್ಬ ತೆರೆಸಾಳ ಸಂತತ್ವದ ಕುರಿತಂತೆ ಮಾತನಾಡಿದ್ದಾನಾ?! ನನಗಂತೂ ನೆನಪಿಲ್ಲ.

ಚಚರ್ುಗಳ ಕುರಿತಂತೆ ಎಷ್ಟು ಬರೆದರೂ ಕಡಿಮೆಯೇ. ಸ್ವತಃ ಮಹಾತ್ಮಾ ಗಾಂಧೀಜಿ ಅವರ ಮನೋಧರ್ಮದ ಕುರಿತಂತೆ ಯಾವಾಗಲೂ ಟೀಕಿಸುತ್ತಿದ್ದರು. ಅದೊಮ್ಮೆ ಪೋಲ್ಯಾಂಡ್ನ ಪ್ರಾಧ್ಯಾಪಕರೊಬ್ಬರು ಅವರ ಬಳಿ ಕ್ಯಾಥೋಲಿಕ್ ಒಂದೇ ನಿಜವಾದ ಧರ್ಮ ಎಂದಿದ್ದಕ್ಕೆ ಪ್ರತಿಕ್ರಿಯಿಸುತ್ತಾ ‘ಮತಾಂತರವೆಂಬುದು ಸತ್ಯದ ಅಮೃತಕೆ ಸುರಿದಿರುವ ವಿಷ ಎಂಬುದನ್ನು ಎಂದಿಗೂ ಮರೆಯದಿರಿ’ ಎಂದು ಎಚ್ಚರಿಸಿದ್ದರು. ಮುಂದೊಮ್ಮೆ ಕಾನೂನನ್ನು ರೂಪಿಸುವ ಅಧಿಕಾರ ನನಗೆ ಬಂದರೆ ಎಲ್ಲ ಬಗೆಯ ಮತಾಂತರದ ಚಟುವಟಿಕೆಯನ್ನು ನಾನು ನಿಷೇಧಿಸುತ್ತೇನೆ ಎಂದಿದ್ದರು ಗಾಂಧೀಜಿ. ಗಾಂಧಿಯ ಹೆಸರನ್ನು ಬಳಸಿಕೊಂಡೇ ರಾಜಕಾರಣ ಮಾಡುತ್ತಿರುವವರಿಗೆ ಕಾನೂನು ಮಾಡುವ ಅಧಿಕಾರ ಬಂತಷ್ಟೇ. ಮತಾಂತರ ನಿಷೇಧಿಸುವ ಧೈರ್ಯ ಬರಲಿಲ್ಲ.

ಜಾರ್ಖಂಡ್ನಲ್ಲಿ ತಾನು ಮಕ್ಕಳನ್ನು ಮಾರುತ್ತಿದ್ದುದು ನಿಜ. ‘ಎರಡು ಮಕ್ಕಳನ್ನು ಮಾರಿ ಒಂದು ಮಗುವನ್ನು ಉಚಿತವಾಗಿ ಕೊಟ್ಟೆ’ ಎಂದು ಹೇಳುವ ನನ್ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ. ಆದರೆ ಬುದ್ಧಿಜೀವಿಗಳು ಮಾತ್ರ ಶಾಂತಿಗೆ ಶರಣಾಗಿದ್ದಾರೆ. ಒಂದೆರಡು ವರ್ಷಗಳ ಹಿಂದೆ ಔಟ್ಲುಕ್ ಎನ್ನುವ ಪತ್ರಿಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಕ್ಕಳನ್ನು ಮಾರಾಟ ಮಾಡುವ ಜಾಲ ನಡೆಸುತ್ತದೆ ಎಂಬ ಸುಳ್ಳು ಸುದ್ದಿಯನ್ನು ರಾಜಾರೋಷವಾಗಿಯೇ ಪ್ರಕಟಿಸಿತ್ತು. ಅದನ್ನು ಸಮಾಜದ ಪ್ರತಿಯೊಂದು ವಿಭಾಗದಿಂದಲೂ ಪ್ರಶ್ನಿಸಲಾರಂಭಿಸಿದಾಗ ಕ್ಷಮೆ ಕೇಳುವ ಗೋಜಿಗೂ ಹೋಗದೇ ಪತ್ರಿಕೆ ಸಹಜವಾಗಿ ನಡೆಯಲಾರಂಭಿಸಿತು. ಆದರೆ ಈಗ ಮಾತ್ರ ನನ್ಗಳು ನಡೆಸುತ್ತಿರುವ ಈ ಧಂಧೆ ಸಾಕ್ಷಿ ಸಮೇತ ಹೊರಬಿದ್ದ ನಂತರವೂ ಆ ಕುರಿತಂತೆ ಮಾತನಾಡುವ, ಬರೆಯುವ ಧೈರ್ಯವನ್ನು ಯಾರೂ ತೋರುತ್ತಿಲ್ಲವೆಂಬುದೇ ಅಚ್ಚರಿಯ ಸಂಗತಿ! ಇಷ್ಟು ಮಾತ್ರ ಕಾವಿಧಾರಿಯೊಬ್ಬ ಯಾವುದಾದರೂ ಪ್ರಕರಣದಲ್ಲಿ ಸಿಕ್ಕುಹಾಕಿಕೊಂಡರೆ ಮಾಧ್ಯಮಗಳು, ಬುದ್ಧಿಜೀವಿಗಳು, ಹೋರಾಟಗಾರರು, ಟಾಬ್ಲಾಯ್ಡ್ ಪತ್ರಕರ್ತರು ಸುಮ್ಮನಿರುತ್ತಿದ್ದರಾ? 24 ತಾಸೂ ಇದೇ ವಿಚಾರವನ್ನು ಪದೇ ಪದೇ ಹೇಳಿ ಹಿಂದೂ ಧರ್ಮವನ್ನು ಕೆಟ್ಟದಾಗಿ ಚಿತ್ರಿಸುವ ಪ್ರಯತ್ನ ಮಾಡುತ್ತಿದ್ದರು. ಅವರ ಪಾಲಿಗೆ ಆಗ ಎಡವಿದ್ದು ಬರೀ ಒಬ್ಬ ಸಂತನಲ್ಲ ಇಡಿಯ ಹಿಂದೂಧರ್ಮ. ಆದರೆ ಮಕ್ಕಳ ಮಾರಾಟದ ವಿಚಾರ ಬಂದಾಗ ಎಡವಿರೋದು ಯಃಕಶ್ಚಿತ್ ನನ್, ಕ್ರಿಶ್ಚಿಯಾನಿಟಿ ಅಲ್ಲ!

Click to comment

Leave a Reply

Your email address will not be published. Required fields are marked *

Most Popular

To Top