National

ನಭಕ್ಕೆ ಹೊಸ ಹಕ್ಕಿ! ಭಾರತೀಯ ವಾಯುಸೇನೆಗೆ ಚಿನೂಕ್ ಹೆಲಿಕಾಪ್ಟರ್ಗಳ ಸೇರ್ಪಡೆ!!

ಭಾರತೀಯ ವಾಯುಸೇನೆಗೆ ಬೊಯಿಂಗ್ ನಾಲ್ಕು ಚಿನೂಕ್ ಹೆಲಿಕಾಪ್ಟರ್‌ಗಳನ್ನು ಕಳಿಸಿದೆ. ಈ ಚಿನಾಕ್ ಹೆಲಿಕಾಪ್ಟರ್‌ಗಳನ್ನು ಗುಜರಾತಿನ ಮುಂದ್ರಾ ಬಂದರಿನಲ್ಲಿ ಭಾರತ ಸ್ವೀಕರಿಸಿದೆ ಎಂದು ಬೊಯಿಂಗ್ ಹೇಳಿಕೆ‌ ನೀಡಿದೆ.‌ ಇದನ್ನು ನಂತರ ಚಂಡೀಗಢಕ್ಕೆ ಕಳುಹಿಸಲಾಗುವುದು.

ಈ ವರ್ಷದ ಕೊನೆಯಲ್ಲಿ ಈ ಹೆಲಿಕಾಪ್ಟರ್‌ಗಳನ್ನು ಅಧಿಕೃತವಾಗಿ ಭಾರತೀಯ ವಾಯುಸೇನೆಗೆ ಸೇರಿಸಲಾಗುವುದು. ಈ ಹೆಲಿಕಾಪ್ಟರ್‌ಗಳನ್ನು ಸೈನಿಕರ ತಂಡಗಳನ್ನು, ಶಸ್ತ್ರಾಸ್ತ್ರಗಳನ್ನು, ಯಂತ್ರಗಳನ್ನು ಸಾಗಿಸುವಲ್ಲಿ ಮತ್ತು ಭೀಕರ ಪ್ರವಾಹ, ಇನ್ನಿತರ ತೊಂದರೆಗಳಾದಾಗ ಪರಿಹಾರ ಕಾರ್ಯಕ್ಕೆ ಬಳಸಬಹುದು.

ಬೊಯಿಂಗ್‌ನ ಪ್ರಕಾರ ಚಿನೂಕ್ ಹೆಲಿಕಾಪ್ಟರ್‌ಗಳು ಭಾರತೀಯ ವಾಯುಸೇನೆಗೆ ಅದ್ಭುತ ಏರ್‌ಲಿಫ್ಟ್ ಕೆಪಾಸಿಟಿಯನ್ನು ಒದಗಿಸಲಿದೆ. 2015 ರಲ್ಲಿ 15 ಚಿನೂಕ್ ಹೆಲಿಕಾಪ್ಟರ್‌ಗಳು ಮತ್ತು 22 ಅಪಾಚೆ ಹೆಲಿಕಾಪ್ಟರ್‌ಗಳನ್ನು ಕೊಳ್ಳುವ ಡೀಲನ್ನು ಮಾಡಿಕೊಳ್ಳಲಾಗಿತ್ತು. ಈ ಡೀಲ್‌ನ ಒಟ್ಟಾರೆ ಬೆಲೆ 3 ಬಿಲಿಯನ್ ಡಾಲರ್‌ಗಳಷ್ಟು!

ಇಷ್ಟು‌ ದೊಡ್ಡ ರಕ್ಷಣಾ ಡೀಲ್‌ನಲ್ಲಿ ಮೇಕ್ ಇನ್ ಇಂಡಿಯಾದ್ದೂ ಪಾತ್ರವಿದೆ! ಬೊಯಿಂಗ್ ತನ್ನೊಡನೆ 160 ಭಾರತೀಯ ಕಂಪೆನಿಗಳನ್ನು ಸೇರಿಸಿಕೊಂಡಿದೆ. ಅಷ್ಟೇ ಅಲ್ಲದೇ ಅಪಾಚೆ ಹೆಲಿಕಾಪ್ಟರ್‌ನ ಭಾಗವೊಂದನ್ನು ಭಾರತೀಯ ಕಂಪೆನಿಯೊಡನೆ ಜಾಯಿಂಟ್‌ ವೆಂಚರ್‌ನಲ್ಲಿ ತಯಾರಿಸಲಿದೆ.

ಈ ಹೆಲಿಕಾಪ್ಟರ್‌ಗಳನ್ನು ಫ್ಲೈ-ಅವೇ ಸ್ಥಿತಿಯಲ್ಲಿಯೇ ಭಾರತಕ್ಕೆ‌ ನೀಡುವವರಿದ್ದಾರೆ. ಈ ಬೃಹತ್ ಯಂತ್ರದ ಕೆಲವು ಭಾಗಗಳು ಭಾರತದ ಹೊರಗೆ ತಯಾರುತ್ತಿದೆ.

ಡೈನಾಮೆಟಿಕ್ಸ್ ಟೆಕ್ನಾಲಜೀಸ್ ಲಿಮಿಟೆಡ್ ಎಂಬ ಬೆಂಗಳೂರಿನ ಕಂಪನಿಯು ಹೆಲಿಕಾಪ್ಟರ್ ‌ನ ಕೆಲವು ಭಾಗವನ್ನು ತಯಾರಿಸುವ ಕಂಪೆನಿಗಳಲ್ಲಿ ಒಂದಾಗಿದೆ.

1 Comment

1 Comment

  1. ಶಶಿಕಲಾ. ಎಸ್.

    February 11, 2019 at 1:52 pm

    ನೋಡಿದರೆ ರೋಮಾಂಚನ ಆಗುತ್ತೆ. ನಮ್ಮ ಬುದ್ದಿಮತ್ತೆಗೆ ತಕ್ಕ ಉಪಕರಣ ಕೈ ಸೇರುತ್ತಿದೆ. ಸೈನ್ಯ ಮತ್ತು ಎಡಿಆರ್ಎಫ್ ಬಲಿಷ್ಠವಾದಷ್ಟು ನಾವು ಸುಭದ್ರ ರಾಗುತ್ತೇವೆ. ಬಲಿದಾನಗಳೂ ಪ್ರಾರ್ಥನೆಗಳೂ ಫಲ ನೀಡುತ್ತಿವೆ.

Leave a Reply

Your email address will not be published. Required fields are marked *

Most Popular

To Top