International

ದೇಶವಿರೋಧಿಯಾದರೂ ಪರವಾಗಿಲ್ಲ, ನಮ್ಮ ಮತದವನಾದರೆ ಸಾಕು!!

ದೇಶಭಕ್ತ ಮುಸಲ್ಮಾನರು ಎನ್ನುವ ಪದ ನಿಧಾನವಾಗಿ ತನ್ನ ಅರ್ಥವನ್ನು ಕಳೆದುಕೊಳ್ಳುತ್ತಿದೆ. ಮತಾಂಧತೆ ಮುಸಲ್ಮಾನರ ರಕ್ತದಲ್ಲಿ ಹರಿಯುತ್ತಿದೆ ಎಂಬುದನ್ನು ಮುಸ್ಲೀಂ ರಾಷ್ಟ್ರೀಯ ಮಂಚ್ನ ಕಾರ್ಯಕರ್ತರು ಕೊನೆಗೂ ಸಾಬೀತುಪಡಿಸಿಬಿಟ್ಟಿದ್ದಾರೆ. ಇತ್ತೀಚೆಗೆ ಅವರು ಫ್ರಾನ್ಸಿನ ಅಧ್ಯಕ್ಷರ ಭಾವಚಿತ್ರವನ್ನು ಸುಡುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದ್ದು ನಿಜಕ್ಕೂ ದುರದೃಷ್ಟಕರ. ಕಳೆದ ಅನೇಕ ವರ್ಷಗಳಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಸಲ್ಮಾನರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನವನ್ನು ಮಾಡಿತಲ್ಲ, ಅದೆಲ್ಲವೂ ನೀರಿನಲ್ಲಿ ಹೋಮವಾದಂತಾಯ್ತು. ಇಷ್ಟಕ್ಕೂ ಇಸ್ಲಾಂ ವಿಶ್ವಭ್ರಾತೃತ್ವವನ್ನು ಬೋಧಿಸುವಂತಹ ಮತವೆಂದು ಹೇಳಲಾಗುತ್ತದೆ. ಆದರೆ ಈ ವಿಶ್ವಭ್ರಾತೃತ್ವದಲ್ಲಿ ಮುಸಲ್ಮಾನರನ್ನು ಬಿಟ್ಟರೆ ಬೇರೆಯವರಿಗೆ ಜಾಗವೇ ಇಲ್ಲ. ಮುಸಲ್ಮಾನನೊಬ್ಬ ಸಜ್ಜನನ ತಲೆಕಡಿದರೂ ಇತರ ಮುಸಲ್ಮಾನರಿಗೆ ತಲೆ ಕಡಿಸಿಕೊಂಡವರ ಬಗ್ಗೆ ಅನುಕಂಪವಲ್ಲ, ತಲೆ ಕಡಿದವನ ಬಗ್ಗೆಯೇ ಪ್ರೇಮ ಹೆಚ್ಚು. ಸ್ವತಃ ಅಂಬೇಡ್ಕರರು ಇದನ್ನು ಗುರುತಿಸುತ್ತಾರೆ. ಈ ಹಿನ್ನೆಲೆಯಲ್ಲಿಯೇ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕ ನಿರ್ದಯವಾಗಿ ಹಿಂದೂಗಳನ್ನು ಕೊಂದಾಗಲೂ ಭಾರತದ ಮುಸಲ್ಮಾನ ಬೀದಿಗೆ ಬಂದು ಪ್ರತಿಭಟಿಸುವುದಿಲ್ಲ. ಅವನಿಗೆ ಸತ್ತ ಭಾರತೀಯನಿಗಿಂತಲೂ ಕೊಂದ ಪಾಕಿಸ್ತಾನಿ ಹತ್ತಿರದವನು.


ಹಾಗೆ ಸುಮ್ಮನೆ ಒಂದಷ್ಟು ಪ್ರಶ್ನೆ ಮನದಲ್ಲಿ ಸುಳಿದುಹೋಯ್ತು. ಸ್ವಾತಂತ್ರ್ಯ ಬಂದ ಹೊಸತರಲ್ಲಿ ಪಾಕಿಸ್ತಾನ ಕಾಶ್ಮೀರದ ಮೇಲೆ ಆಕ್ರಮಣ ಮಾಡಿತಲ್ಲ, ಆಗ ಇಲ್ಲಿನ ಮುಸಲ್ಮಾನರು ಮೊಹಮ್ಮದ್ ಅಲಿ ಜಿನ್ಹಾನ ಪ್ರತಿಕೃತಿಗೆ ಬೆಂಕಿ ಇಟ್ಟಿದ್ದನ್ನು ಕೇಳಿದ್ದೀರಾ? ಹೋಗಲಿ, ಕಾಗರ್ಿಲ್ ಯುದ್ಧದ ಹೊತ್ತಿನಲ್ಲಿ ಸ್ನೇಹದ ಹಸ್ತ ಚಾಚಿದ್ದ ಭಾರತದ ಬೆನ್ನಿಗೆ ಮುಷರ್ರಫ್ ಚೂರಿಯನ್ನೇ ಇರಿದನಲ್ಲ, ಎಂದಾದರೂ ಭಾರತೀಯ ಮುಸಲ್ಮಾನ ಮುಷರ್ರಫ್ ಭಾವಚಿತ್ರಕ್ಕೆ ಬೆಂಕಿಹಚ್ಚಿದ್ದು ನೆನಪಿದೆಯಾ? ಹಳೆಯದ್ದಾಯ್ತು ಎಂದೆನಿಸದರೆ ಉರಿಯಲ್ಲಿ ಮಲಗಿದ್ದ ಸೈನಿಕರನ್ನು ಹೇಡಿಗಳಂತೆ ಬಂದು ಹತ್ಯೆ ಮಾಡಿ ಹೋದರಲ್ಲ, ಅವತ್ತಾದರೂ ನಿಮ್ಮ ಮನೆಯ ಪಕ್ಕದಲ್ಲಿರುವ ಮುಸಲ್ಮಾನ ಪಾಕಿಸ್ತಾನದ ಹಫೀಜ್ ಸಯೀದ್ನ ಚಿತ್ರಕ್ಕೆ ಉಗುಳಿದ್ದನ್ನು ಕಂಡಿದ್ದೀರಾ? ಹೋಗಲಿ ಬಿಡಿ, ಪುಲ್ವಾಮಾದಲ್ಲಿ ಗಾಡಿಯಲ್ಲಿ ತೆರಳುತ್ತಿದ್ದ ಸೈನಿಕರ ಮೇಲೆ ಆರ್ಡಿಎಕ್ಸ್ ಪ್ರಯೋಗಿಸಿ ಕೊಂದರಲ್ಲ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು, ಅಂದಾದರೂ ನಾಲ್ಕು ಜನ ಮುಸಲ್ಮಾನರು ಬೀದಿಗೆ ಬಂದು ‘ಹಾಯ್, ಹಾಯ್ ಪಾಕಿಸ್ತಾನ’ ಎಂದಿದ್ದನ್ನು ಕೇಳಿದ್ದೀರಾ? ಮುಂಬೈನಲ್ಲಿ ಸೀರಿಯಲ್ ಬ್ಲಾಸ್ಟ್ಗೆ ಕಾರಣನಾದವ ದಾವೂದ್ ಇಬ್ರಾಹಿಂ ಎಂಬ ಸುದ್ದಿ ಬಂದ ನಂತರವೂ ಹಿಂದಿ ಸಿನಿಮಾ ನಟರು ಅವನ ಬೆನ್ನಿಗೆ ನಿಂತಿರುತ್ತಾರಲ್ಲ, ಅವನ ವಿರುದ್ಧ ಮಾತನಾಡುವ ಧೈರ್ಯವನ್ನೇ ತೋರುವುದಿಲ್ಲವಲ್ಲ, ದೇಶಕ್ಕಿಂತ ಹೆಚ್ಚು ಇವರಿಗೆ ದಾವೂದ್ ಹತ್ತಿರವಾದನೇ? ಎಲ್ಲಾ ಬಿಡಿ, ಹಿಂದೂ ದೇವತೆಗಳನ್ನು ಮನಸೋ ಇಚ್ಛೆ ಹಳಿಯುವ, ಅವಮಾನಿಸುವ ಅಮೀರ್ಖಾನ್ ಭಯೋತ್ಪಾದಕರಿದ್ದ ಕೋಣೆಯೊಳಗೆ ಮಾತುಕತೆಗೆ ಕುಳಿತಿರುವುದು ಕಂಡು ಬರುತ್ತದಲ್ಲ; ಇಡಿಯ ಜಗತ್ತನ್ನು ಮುಸ್ಲೀಂ ಭಯೋತ್ಪಾದನೆಯ ಬೆಂಕಿಯಲ್ಲಿ ಬೇಯಿಸಬೇಕೆಂದು ತವಕಿಸುತ್ತಿರುವ ಟಕರ್ಿಯ ಪ್ರಧಾನಿ ಎಡರ್ೋಗನ್ನ ಮನೆಗೆ ಹೋಗಿ ಅವನ ಆಡಳಿತವನ್ನು ಹೊಗಳಿ ಬುರುತ್ತಾನಲ್ಲ, ಒಬ್ಬನಾದರೂ ಮುಸಲ್ಮಾನ ಎದ್ದು ನಿಂತು ಪ್ರಶ್ನಿಸಿದ್ದನ್ನು ಕೇಳಿದ್ದೀರೇನು?


ಈಗ ಇವರೆಲ್ಲರೂ ಒಟ್ಟಾಗಿದ್ದಾರೆ. ಲಾಕ್ಡೌನಿನ ಹೊತ್ತಿನಲ್ಲೂ ಫ್ರಾನ್ಸಿನ ಅಧ್ಯಕ್ಷರ ವಿರುದ್ಧ ಬೀದಿಗೆ ಬಂದು ರಂಪಾಟ ಮಾಡುತ್ತಿದ್ದಾರೆ. ಯಾವ ಮ್ಯಾಕ್ರೊನ್ ಭಾರತಕ್ಕೆ ತುತರ್ು ಅಗತ್ಯವಿದ್ದಾಗ ಅವಧಿಗಿಂತ ಮುನ್ನ ರಫೇಲ್ಗಳನ್ನು ತಲುಪಿಸಿದ್ದರೋ ಅವರ ವಿರುದ್ಧ ಇವರ ಅರಚಾಟ. ಈ ರಫೇಲ್ಗಳು ಬಂದಿದ್ದರಿಂದಲೇ ಹಿಮಾಲಯದ ಗಡಿಗಳಲ್ಲಿ ಚೀನಾ ಮಿಸುಕಾಡದೇ ತೆಪ್ಪಗೆ ಬಿದ್ದಿದೆ ಎಂಬುದನ್ನು ನಾವು ಮರೆಯುವಂತಿಲ್ಲ. ನನ್ನ ದೇಶಕ್ಕೆ ಕಷ್ಟಕಾಲದಲ್ಲಿ ನೆರವಾದ ಫ್ರಾನ್ಸಿನ ಅಧ್ಯಕ್ಷರ ವಿರುದ್ಧ ದನಿ ಎತ್ತಲು ಇವರಿಗೆ ಮನಸ್ಸು ಬಂದಿದ್ದಾದರೂ ಹೇಗೆ? ಏಕೆ ಗೊತ್ತೇ? ಭಾರತ ಪೋಖ್ರಾನಿನಲ್ಲಿ ಅಮೇರಿಕಾಕ್ಕೂ ತಿಳಿಯದಂತೆ ಅಣುಸ್ಫೋಟ ನಡೆಸಿದಾಗ ಜಗತ್ತಿನ ಶಕ್ತ ರಾಷ್ಟ್ರಗಳೆಲ್ಲ ನಮ್ಮ ವಿರುದ್ಧ ಕೂಗಾಡಿದವು. ಆದರೆ ಅಂದೂ ಫ್ರಾನ್ಸ್ ನಮ್ಮ ಬೆಂಬಲಕ್ಕೆ ನಿಂತಿತ್ತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವಕ್ಕೆ ನಮ್ಮನ್ನು ಬಲವಾಗಿ ಬೆಂಬಲಿಸುತ್ತಿರುವುದು ಇದೇ ಫ್ರಾನ್ಸ್. ಪಾಕಿಸ್ತಾನದ ವಿರುದ್ಧ ಸಜರ್ಿಕಲ್ ಸ್ಟ್ರೈಕ್ಗೆ ನಾವು ಬಳಸಿದ ಮಿರೇಜ್ ಏರ್ಕ್ರಾಫ್ಟ್ಗಳಿದ್ದವಲ್ಲ ಅವೂ ಕೂಡ ಫ್ರಾನ್ಸಿನದ್ದೇ. ಈ ಬುದ್ಧಿಯಿಲ್ಲದ, ಶತ ಪ್ರತಿಶತ ಅಜ್ಞಾನಿಗಳಾಗಿರುವ, ಕೆಲಸಕ್ಕೆ ಬಾರದ ಮುಸಲ್ಮಾನರೆನಿಸಿಕೊಂಡವರು ಬೀದಿಗೆ ಬಂದು ಫ್ರಾನ್ಸಿನ ವಸ್ತುಗಳನ್ನು ನಿಷೇಧಿಸಿ ಎನ್ನುತ್ತಿದ್ದಾರೆ. ಸ್ವತಃ ಟಕರ್ಿ ತನ್ನ ಸೈನ್ಯದಲ್ಲಿ ಬಳಸುತ್ತಿರುವ ಯುದ್ಧದ ವಿಮಾನಗಳಲ್ಲಿ ಬಹುತೇಕ ಫ್ರಾನ್ಸಿನಲ್ಲೇ ನಿಮರ್ಾಣವಾಗಿರುವಂಥದ್ದು. ಟಕರ್ಿಯ ಅಧ್ಯಕ್ಷರ ಹೆಂಡತಿ, ಕೈಲಿ ಹಿಡಿದು ತಿರುಗುತ್ತಿರುವ ವ್ಯಾನೆಟಿ ಬ್ಯಾಗ್ ಕೂಡ ಅದೇ ಫ್ರಾನ್ಸಿನದ್ದು. ಹೀಗಿರುವಾಗ ಇವರು ನಿಷೇಧಿಸುವುದು ಏನನ್ನು?


ಇಷ್ಟಕ್ಕೂ ಮಾನವೀಯತೆಯುಳ್ಳ ಯಾರಾದರೂ ಇಂದು ಫ್ರಾನ್ಸನ್ನು ವಿರೋಧಿಸುವುದು ಸಾಧ್ಯವಿದೆಯೇನು? ಒಂದು ಕಾಟರ್ೂನಿಗಾಗಿ, ಒಂದು ಹೇಳಿಕೆಗಾಗಿ ಯಾರನ್ನಾದರೂ ಕೊಲ್ಲಬೇಕು ಎಂದಿದ್ದರೆ ಇಂದು ಭಾರತದಲ್ಲಿ ಅರ್ಧದಷ್ಟು ಕ್ರಿಶ್ಚಿಯನ್ ಮತಪ್ರಚಾರಕರನ್ನು ಮತ್ತು ಮುಸಲ್ಮಾನರನ್ನು ಹಿಂದೂಗಳು ಕೊಂದಿರಬೇಕಿತ್ತು. ಕಳೆದ ಅನೇಕ ದಶಕಗಳಿಂದ ಇಷ್ಟೆಲ್ಲ ವ್ಯಾಪಕವಾಗಿ ಹಿಂದೂಧರ್ಮವನ್ನು, ದೇವತೆಗಳನ್ನು, ಸಂತರನ್ನು ಅವಮಾನಗೊಳಿಸುತ್ತಿರುವುದಲ್ಲದೇ ಹಿಂದೂಗಳಿಗೆ ಪೂಜ್ಯವೆನಿಸಿದ ಗೋವುಗಳನ್ನು ಕಡಿದು, ಸಂತರನ್ನು ಥಳಿಸಿ ಅಗೌರವ ತೋರುತ್ತಿದ್ದಾರಲ್ಲ ಏನು ಮಾಡಬೇಕಿತ್ತು ಹೇಳಿ? ಮಾನವೀಯತೆ ಇವೆಲ್ಲವನ್ನೂ ಮೀರಿರುವಂಥದ್ದು. ಅದು ಅರ್ಥವಾಗಲೂ, ಅದನ್ನು ಆಚರಿಸಲೂ ಒಂದಷ್ಟು ಯೋಗ್ಯತೆ ಬೇಕು. ಅವುಗಳ ಕೊರತೆ ಇರುವವರು ಇಂದು ಫ್ರಾನ್ಸಿನಲ್ಲಿ ನಡೆದ ಭಯೋತ್ಪಾದಕ ಘಟನೆಯ ಪರವಾಗಿ ನಿಂತಿದ್ದಾರೆ, ಅಧ್ಯಕ್ಷರ ವಿರುದ್ಧವಾಗಿ ಕೂಗಾಡುತ್ತಾ ನಿಂತಿದ್ದಾರೆ. ಒಳ್ಳೆಯದ್ದೇ, ಎಲ್ಲರ ಬಂಡವಾಳಗಳೂ ಆದಷ್ಟು ಬೇಗ ಹೊರಗೆ ಬರಬೇಕು. ಬಹುಶಃ ಜಾಗತಿಕ ವೇದಿಕೆ ಅದಕ್ಕಾಗಿಯೇ ನಿಮರ್ಾಣವಾಗುತ್ತಿದೆ ಎನಿಸುತ್ತಿದೆ!!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top