National

ದೇಶದ ಮಾನವನ್ನು ಹರಾಜು ಹಾಕುವವ ನಾಯಕನೇ?!

ದೇಶಕ್ಕೆ ಸಂಕಟ ಬಂದಾಗ ಎಂತಹ ವಿರೋಧಿಯಾದರೂ ಜೊತೆಗೆ ನಿಲ್ಲಲೇಬೇಕು. ವೈಯಕ್ತಿಕ ವರ್ಚಸ್ಸಿಗೆ ಅಲ್ಲಿ ಮೌಲ್ಯವಿಲ್ಲ. ದೇಶ ನಮ್ಮೆಲ್ಲರಿಗಿಂತಲೂ ದೊಡ್ಡದ್ದು. ಈ ಎಲ್ಲಾ ಮಾತುಗಳಿಗೆ ಅರ್ಥವನ್ನು ಹುಡುಕಬೇಕೆಂದರೆ ಅಮೇರಿಕಾವನ್ನು ನೋಡಬೇಕು. ಅಲ್ಲಿ ವ್ಯಕ್ತಿಯ ಅಹಂಕಾರಕ್ಕೆ ಕಿಂಚಿತ್ತೂ ಮೌಲ್ಯವಿಲ್ಲ. ಆತ ಸಮಾಜಕ್ಕಾಗಿ ದುಡಿಯುತ್ತಿದ್ದಾನೆ ಅಥವಾ ಒಂದು ಯೋಜನೆಯನ್ನು ಪೂರ್ಣಗೊಳಿಸಲು ಶ್ರಮಿಸುತ್ತಿದ್ದಾನೆಂದರೆ ತನ್ನ ಎಲ್ಲಾ ಅಹಂಕಾರವನ್ನೂ ಬದಿಗಿಟ್ಟು ಇತರರೊಂದಿಗೆ ಸೇರಿ ಕೆಲಸ ಮಾಡುತ್ತಾನೆ. ಕೆಲಸ ಮುಗಿದ ನಂತರ ತಾನು ಎಲ್ಲರಷ್ಟೇ ಶ್ರೇಷ್ಠ ಎಂಬುದನ್ನು ಮತ್ತೆ ಜ್ಞಾಪಿಸಿಕೊಂಡು ಮರಳುತ್ತಾನೆ. 2001 ರಲ್ಲಿ ಒಸಾಮಾ ಬಿನ್ ಲಾಡೆನ್ ವಲ್ಡರ್್ ಟ್ರೇಡ್ ಸೆಂಟರ್ನ ಕಟ್ಟಡವನ್ನು ಉರುಳಿಸಿದಾಗ ಅಮೇರಿಕಾದ ರಾಜಕೀಯ ವಲಯದಲ್ಲೂ ಇದು ಸ್ಪಷ್ಟವಾಗಿ ಕಂಡುಬಂದಿತ್ತು. ಆಳುವ ಪಕ್ಷ ಮತ್ತು ಪ್ರತಿಪಕ್ಷಗಳೆರಡೂ ಹೆಗಲಿಗೆ ಹೆಗಲು ಕೊಟ್ಟು ನಿಂತು ರಾಷ್ಟ್ರಕ್ಕೋಸ್ಕರ ದುಡಿದವು. ಒಬ್ಬರನ್ನೊಬ್ಬರು ಬೈಯ್ಯುತ್ತಾ ಕೂರುವುದಕ್ಕೆ ಅದು ಸಮಯವೂ ಆಗಿರಲಿಲ್ಲ. ಮುಂಬೈ ದಾಳಿಯ ಹೊತ್ತಲ್ಲಿ ಭಾರತದಲ್ಲೂ ಹೀಗೆ ಆಗಿತ್ತು. ಆಳುವ ಸಕರ್ಾರ ಅನೇಕ ತಪ್ಪುಗಳನ್ನು ಮಾಡಿದ್ದಾಗ್ಯೂ ಅದರ ಕುರಿತಂತೆ ಚಾಕರವೆತ್ತದೇ ಒಟ್ಟಾರೆ ಕಾಯರ್ಾಚರಣೆ ಪೂರ್ಣವಾಗುವವರೆಗೂ ಪ್ರತಿಪಕ್ಷಗಳು ಶಾಂತಿಯನ್ನು ಕಾಯ್ದುಕೊಂಡಿದ್ದವು. ಆದರೆ ಇತ್ತೀಚೆಗೆ ಆ ಪರಿಯ ಸಂಯಮ ಖಂಡಿತವಾಗಿಯೂ ಕಾಣುತ್ತಿಲ್ಲ. ಪ್ರತಿಪಕ್ಷದ ನಾಯಕನೆನಿಸಿಕೊಂಡ ರಾಹುಲ್ ಜಾಗತಿಕ ಮಟ್ಟದಲ್ಲಿ ಭಾರತದ ಮಾನವನ್ನು ಹರಾಜು ಹಾಕುವಲ್ಲಿ ಬಲವಾಗಿ ನಿಂತುಬಿಟ್ಟಿದ್ದಾರೆ. ಅವರ ಪ್ರತಿಯೊಂದು ವಿದೇಶದ ಭಾಷಣಗಳೂ ಭಾರತದ ಗೌರವವನ್ನು ಕಳೆಯುವಂಥದ್ದೇ! ಇತ್ತೀಚೆಗೆ ಸಿಂಗಾಪುರದಲ್ಲಿ ಅವರು ಮಾತನಾಡುತ್ತಾ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಚಡಪಡಿಸಿದ್ದಷ್ಟೇ ಅಲ್ಲ ಆನಂತರ ಅದನ್ನು ತಿದ್ದಿ ತೀಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಮುಖಭಂಗಕ್ಕೆ ಒಳಗಾಗಿದ್ದರು. ಅದೊಮ್ಮೆ ವಿದೇಶದ ನೆಲದಲ್ಲಿ ಮಾತನಾಡುತ್ತಾ ರಾಹುಲ್ ಡೋಕ್ಲಾಂನ ವಿಚಾರದಲ್ಲಿ ಭಾರತದ ನಿರ್ಣಯ ತಪ್ಪು ಎಂದುಬಿಟ್ಟರು. ಭಾರತದ ನಿರ್ವಹಣೆಯ ರೀತಿ ಸರಿಯಿಲ್ಲವೆಂದು ಆರೋಪಿಸಿದರೂ ಕೂಡ. ತಕ್ಷಣ ಮುಂದಿದ್ದವರೊಬ್ಬರು ಮೋದಿಯ ಜಾಗದಲ್ಲಿ ನೀವೇ ಇದ್ದಿದ್ದರೆ ನೀವು ನೀಡಿರುವ ಪರಿಹಾರವೇನಾಗಿರುತ್ತಿತ್ತು ಎಂದು ಕೇಳಿದ್ದಕ್ಕೆ ಉತ್ತರವೇ ಇಲ್ಲದವರಾಗಿ ತಡಬಡಾಯಿಸಿಬಿಟ್ಟರು. ವಾಸ್ತವವಾಗಿ ಇದು ಬಲು ಸೂಕ್ಷ್ಮ ವಿಚಾರ. ಚೀನಾದೊಂದಿಗೆ ಭಾರತಕ್ಕಿರುವ ತಾಕಲಾಟಗಳನ್ನು ಗಮನಿಸಿದಾಗ ಡೋಕ್ಲಾಂನ ವಿಚಾರದಲ್ಲಿ ಭಾರತ ತೆಗೆದುಕೊಂಡ ನಿರ್ಣಯ ಸಮರ್ಥವೇ ಆಗಿತ್ತು. ಅದರಲ್ಲೂ ಭೂತಾನ್ನಂತಹ ನೆರೆ ರಾಷ್ಟ್ರವೊಂದು ನಮ್ಮ ಸಹಕಾರಕ್ಕೆ ಇಳಿದಾಗ ನಾವು ಇಲ್ಲವೆನ್ನುವುದರಲ್ಲಿ ಅರ್ಥವೇ ಇರಲಿಲ್ಲ. ಏಷ್ಯಾದಲ್ಲಿ ಚೀನಾದೆದುರಿಗೆ ಬಲವಾಗಿ ನಿಲ್ಲಬಲ್ಲ ರಾಷ್ಟ್ರವಾಗಲು ನಮಗದು ಸಮರ್ಥ ಅವಕಾಶವನ್ನು ಒದಗಿಸಿಕೊಟ್ಟಿತು. ಚೀನಾದ ಮಹತ್ವಾಕಾಂಕ್ಷೆಯ ಕುರಿತಂತೆ ಜಾಗತಿಕ ಜಾಗೃತಿ ಮೂಡಿಸಲು ಅದು ಸಹಕಾರಿಯಾಗಿತ್ತು. ಅತ್ತಲಿಂದ ಇತ್ತ ಒಂದೇ ಒಂದು ಗುಂಡು ಹಾರದಂತೆ ನೋಡಿಕೊಂಡ ಭಾರತ ಹೆಮ್ಮೆ ಪಡುವ ಸಾಧನೆಯೇ ಆಗಿತ್ತು. ಇವುಗಳ ಕುರಿತಂತೆ ಯಾವ ಜ್ಞಾನವನ್ನೂ ಹೊಂದಿರದ ರಾಹುಲ್ ಜಾಗತಿಕ ಮಟ್ಟದಲ್ಲಿ ಭಾರತವನ್ನು ಟೀಕಿಸಿ ಬಂದುಬಿಟ್ಟಿದ್ದರು!

ಕ್ಯಾಲಿಫೋನರ್ಿಯಾದಲ್ಲಿ ಮಾತನಾಡುತ್ತಾ ಸ್ವಚ್ಛ ಭಾರತ ಯೋಜನೆಯನ್ನೇ ಅವಹೇಳನ ಮಾಡುವ ಅಗತ್ಯವಿರಲಿಲ್ಲ. ಭಾರತದ ಮಾನಸಿಕತೆಯನ್ನು ಬದಲಾಯಿಸುವ ಪ್ರಯತ್ನವನ್ನು ನರೇಂದ್ರಮೋದಿ ಮಾಡುತ್ತಿದ್ದರೆ ಬೆಂಬಲಿಸುವುದು ಬೇಡ ಕೊನೆಯ ಪಕ್ಷ ವಿರೋಧವನ್ನಾದರೂ ಮಾಡಬಾರದೆಂಬ ಸಾಮಾನ್ಯ ತಿಳುವಳಿಕೆಯೂ ರಾಹುಲ್ಗಿರಲಿಲ್ಲ. ತಿಳುವಳಿಕೆಯ ಕುರಿತಂತೆ ರಾಹುಲ್ ಬಗ್ಗೆ ಮಾತನಾಡುವುದೇ ತಪ್ಪು. ನಿರುದ್ಯೋಗದ ಕಾರಣದಿಂದಾಗಿಯೇ ಜನ ಐಸಿಸ್ ಸೇರುವುದು ಎಂಬ ಹೇಳಿಕೆಯನ್ನು ಕೊಟ್ಟ ರಾಹುಲ್ ಒಟ್ಟಾರೆ ಐಸಿಸ್ನ ಕಾರ್ಯವೈಖರಿಯನ್ನು ಸಮಥರ್ಿಸಿಕೊಂಡುಬಿಟ್ಟಿದ್ದರು. ಮುಸಲ್ಮಾನರ ವೋಟು ಗಳಿಸುವುದನ್ನೇ ಉದ್ದೇಶವಾಗಿಟ್ಟುಕೊಂಡ ಆತ ಭಾರತದಂತಹ ರಾಷ್ಟ್ರಗಳ ಮೇಲೆ ಕಣ್ಣಿಟ್ಟು ಕುಳಿತಿರುವ ಐಸಿಸ್ನ ಭಯೋತ್ಪಾದಕರನ್ನೆಲ್ಲಾ ಸಮಥರ್ಿಸಿಕೊಳ್ಳುತ್ತಾರೆಂದರೆ ರಾಹುಲ್ನ ಸಾಮಥ್ರ್ಯದ ಕುರಿತಂತೆ ಯೋಚನೆ ಮಾಡಲೇಬೇಕಾಗಿದೆ.

ಇದೇ ರಾಹುಲ್ ಈಗ ಜಾಗತಿಕ ಮಟ್ಟದಲ್ಲಿ ರಫೆಲ್ನ ವಹಿವಾಟಿನ ಕುರಿತಂತೆ ಅಪಸ್ವರಗಳನ್ನೆತ್ತುತ್ತಿದ್ದಾರೆ. ರಫೆಲ್ ಒಪ್ಪಂದದಲ್ಲಿ ಯಾವ ಸಮಸ್ಯೆಯೂ ಇಲ್ಲವೆಂದು ಗೊತ್ತಿದ್ದಾಗಲೂ ಹೊಸ ಹೊಸ ಸಮಸ್ಯೆಗಳನ್ನು ಅಗೆದು ತೆಗೆಯುವ ಪ್ರಯತ್ನವನ್ನಂತೂ ಮಾಡುತ್ತಲೇ ಇದ್ದಾರೆ. ಸ್ವತಃ ಫ್ರಾನ್ಸಿನ ಅಧ್ಯಕ್ಷ ಈ ಡೀಲ್ನ ಕುರಿತಂತೆ ಮಾತನಾಡಿದಾಗಲೂ ಸುಮ್ಮನಾಗದ ರಾಹುಲ್ ಈಗ ದಸಾಲ್ಟ್ ಕಂಪೆನಿ ಆಫ್ಸೆಟ್ ಹಣಕಾಸಿನ ವಿಚಾರದ ಕುರಿತಂತೆ ಎಲ್ಲ ವಿವರಗಳನ್ನು ಬಹಿರಂಗಗೊಳಿಸಿದ ಮೇಲೂ ಕಿರಿಕಿರಿ ಮಾಡುತ್ತಲೇ ಇದ್ದಾರೆ. ಇದು ಸೈನ್ಯದ ಆತ್ಮಸ್ಥೈರ್ಯವನ್ನು ಕಸಿಯುವುದಲ್ಲದೇ ಜಾಗತಿಕ ಪರಿಪ್ರೇಕ್ಷ್ಯದಲ್ಲಿ ವೃದ್ಧಿಸುತ್ತಿರುವ ಭಾರತದ ಗೌರವವನ್ನು ಕಡಿಮೆ ಮಾಡಿ ಬಿಡುವುದಲ್ಲ ಎಂಬ ಆತಂಕವೇ ಅವರಿಗಿಲ್ಲ.


ರಾಹುಲ್ ಇಲ್ಲಿಗೇ ನಿಲ್ಲಲಿಲ್ಲ. ಹೆಚ್ಎಎಲ್ಗೆ ನೇರವಾಗಿ ಹೋಗಿ ಅಲ್ಲಿನ ಕಾಮರ್ಿಕರೊಂದಿಗೆ ಮಾತುಕತೆ ನಡೆಸುವ ಕಾರ್ಯಕ್ರಮವನ್ನೂ ಆಯೋಜಿಸಿಕೊಂಡುಬಿಟ್ಟಿದ್ದರು. ಆ ಮೂಲಕ ಭಾರತದ ಪ್ರತಿಷ್ಠಿತ ಸಂಸ್ಥೆಯಾಗಿರುವಂತಹ ಹೆಚ್ಎಎಲ್ನ ಆಂತರಿಕ ಬೇಗುದಿಯನ್ನು ಹೆಚ್ಚಿಸುವ ಪ್ರಯತ್ನ ಅದು. ಮೊದಲೇ ಆತ್ಮವಿಶ್ವಾಸದ ಕೊರತೆಯಿಂದ ಪತರಗುಟ್ಟಿರುವ ಹೆಚ್ಎಎಲ್ಗೆ ಇದು ಮಮರ್ಾಘಾತವಾಗಬಲ್ಲುದೆಂಬ ಸಾಮಾನ್ಯ ಜ್ಞಾನವೂ ರಾಹುಲ್ಗಿರಲಿಲ್ಲ. ಹಾಗೆ ನೋಡಿದರೆ ದಸಾಲ್ಟ್ ಪ್ರಕಟಿಸಿರುವ ಪಟ್ಟಿಯಲ್ಲಿ ಹೆಚ್ಎಎಲ್ಗೂ ಆಫ್ಸೆಟ್ನ ವಹಿವಾಟಿನಲ್ಲಿ ಪಾಲು ದೊರಕಿದೆ. ಅದನ್ನು ಇಲ್ಲವೆಂದು ವಾದಿಸಲು ರಾಹುಲ್ ಪಡುತ್ತಿರುವ ಪ್ರಯಾಸ ಆ ಸಂಸ್ಥೆಗಳನ್ನೇ ಶಾಶ್ವತವಾಗಿ ಮುಚ್ಚಬಲ್ಲುದು ಎಂಬ ಅರಿವೂ ಅವರಿಗಿಲ್ಲ. ಹೋಗಲಿ ರಿಲಯನ್ಸ್ನ ಕುರಿತಂತೆ ಇಷ್ಟು ಕೆಂಡ ಕಾರುತ್ತಾ ಅದರಿಂದ ಮೋದಿಯವರ ಗೌರವವನ್ನು ಹಾಳು ಮಾಡುವ ಪ್ರಯತ್ನ ಮಾಡುತ್ತಿದ್ದಾರಲ್ಲಾ, ಇದೇ ಕಾಂಗ್ರೆಸ್ ತನ್ನ ಅಧಿಕಾರಾವಧಿಯಲ್ಲಿ ಏಳೇ ವರ್ಷಗಳಲ್ಲಿ ಅನಿಲ್ ಅಂಬಾನಿಯ ಕಂಪೆನಿಗೆ ಒಂದು ಲಕ್ಷಕೋಟಿಯಷ್ಟು ಗುತ್ತಿಗೆಯನ್ನು ನೀಡಿತ್ತು ಎಂಬುದನ್ನು ಮರೆತೇ ಬಿಟ್ಟಿದ್ದಾರಾ? ಅಂಬಾನಿ ಕಾಂಗ್ರೆಸ್ಸನ್ನು ತನ್ನ ಅಂಗಡಿಯೆಂದು ಸಂಬೋಧಿಸುತ್ತಿದ್ದುದು ಇದೇ ಕಾರಣಕ್ಕಾಗಿ. ಭಾರತದ ಬಜೆಟ್ಟನ್ನು ಅಂಬಾನಿಗಳು ನಿರ್ಧರಿಸುತ್ತಾರೆ ಎಂಬ ಮಾತು ಆಗೆಲ್ಲಾ ಜೋರಾಗಿಯೇ ಪ್ರಚಲಿತದಲ್ಲಿತ್ತು.
ಜಗತ್ತೆಲ್ಲಾ ನರೇಂದ್ರಮೋದಿಯವರನ್ನು ಜಾಗತಿಕ ನಾಯಕನೆಂದು ಗುಣಗಾನ ಮಾಡುತ್ತಿರುವಾಗ ರಾಹುಲ್ಗೆ ಮಾತ್ರ ಅವರಲ್ಲಿ ಕಳ್ಳ ಕಂಡಿದ್ದು ಬಲು ವಿಚಿತ್ರ. ಅಟಲ್ಜಿಯಂತಹ ಶ್ರೇಷ್ಠ ಸಂಸದರು ಎದುರಾಳಿಯನ್ನು ತೆಗಳುವಾಗಲೂ ಸಮರ್ಥ ಭಾಷೆ ಬಳಸುತ್ತಿದ್ದರು. ರಾಹುಲ್ ಮೋದಿಯವರನ್ನು ಕಳ್ಳ ಎಂದು ಜರಿಯುತ್ತಿದ್ದಾರೆ. ಅಚ್ಚರಿಯೇನು ಗೊತ್ತೇ? ಭಾರತದ ಯಾವೊಬ್ಬ ಪ್ರಜೆಯೂ ಈ ಮಾತನ್ನು ನಂಬಲು ಸಿದ್ಧನಿಲ್ಲದಿರುವುದು. ನರೇಂದ್ರಮೋದಿಯವರು ಕಳಂಕ ರಹಿತ ಪ್ರಧಾನಿ ಎಂಬ ಅಭಿದಾನಕ್ಕೆ ಖಂಡಿತವಾಗಿಯೂ ಪಾತ್ರರಾಗಿದ್ದಾರೆ. ಅವರ ಈ ಅವಧಿಯಲ್ಲಿ ಒಂದೇ ಒಂದು ಹಗರಣ ಇದುವರೆಗೂ ದಾಖಲಾಗದಿರುವುದೇ ಅವರ ಸಾಮಥ್ರ್ಯಕ್ಕೆ ಹಿಡಿದ ಕೈಗನ್ನಡಿ. ಪ್ರತಿಪಕ್ಷವಾಗಿ ವಿರೋಧಿಸಬೇಕು ನಿಜ, ಆದರೆ ಆ ವಿರೋಧ ಜಾಗತಿಕ ಮಟ್ಟದಲ್ಲಿ ಮಾನ ಕಳೆಯುವಂತಿರಬಾರದು.

ನನಗೆ ಚೆನ್ನಾಗಿ ನೆನಪಿದೆ. ಬಖರ್ಾ ದತ್ ನವಾಜ್ ಶರೀಫರೊಂದಿಗೆ ಮಾತನಾಡುವಾಗ ಆತ ಅಂದಿನ ಭಾರತದ ಪ್ರಧಾನಿ ಮನಮೋಹನ್ ಸಿಂಗರನ್ನು ಹಳ್ಳಿ ಹೆಂಗಸಿಗೆ ಹೋಲಿಸಿ ಜರಿದಿದ್ದ. ಮಾತು ಮಾತಿಗೆ ವಿಶ್ವಸಂಸ್ಥೆಗೆ ಓಡುವ ಅವರ ಕಾರ್ಯವೈಖರಿಯ ಕುರಿತಂತೆ ಆಡಿಕೊಂಡಿದ್ದ. ಭಾರತದ ಪ್ರಜೆಯಾಗಿ ಇದಕ್ಕೆ ಪ್ರತಿಭಟಿಸದೇ ನಗುತ್ತಾ ಮರಳಿ ಬಂದ ಬಖರ್ಾ ಅದನ್ನು ಬರೆದುಕೊಂಡು ತಾನೂ ಒಂದಷ್ಟು ಆಡಿಕೊಂಡಿದ್ದಳು. ಆಗ ಭವಿಷ್ಯದ ಪ್ರಧಾನಿ ಎಂದೇ ಬಿಂಬಿಸಲ್ಪಡುತ್ತಿದ್ದ ನರೇಂದ್ರಮೋದಿ ಪಾಕಿಸ್ತಾನಕ್ಕೆ ಕರೆಕೊಟ್ಟು ದೇಶದ ಪ್ರಧಾನಿಯನ್ನು ಹೀಗೆ ಹೀಗಳೆಯುವುದಾದರೆ ಇದಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದಿದ್ದರು. ಇದು ರಾಜನೀತಿಜ್ಞನೊಬ್ಬನ ಕಾರ್ಯವೈಖರಿ. ರಾಹುಲ್ ಕಲಿಯಬೇಕಾದ್ದು ಬಹಳ ಇದೆ. ಮೊದಲಿಗೆ ರಾಷ್ಟ್ರಭಕ್ತಿ ಮತ್ತು ರಾಷ್ಟ್ರಗೌರವವನ್ನು ಉಳಿಸುವ ಕುರಿತಂತೆ ಅವರಿಗೆ ಯಾರಾದರೂ ಪಾಠ ಹೇಳಿಕೊಡಬೇಕಿದೆ. ಅವರ ಹುಡುಗಾಟದ ಪರಿಯನ್ನು ನೋಡಿದರೆ ಈಗಲೇ ಸಹಿಸಿಕೊಳ್ಳುವುದು ಕಷ್ಟ. ಇನ್ನು ಇವರನ್ನು ಪ್ರಧಾನಿಯಾಗಿ ಕಾಣಬಯಸುವವರು ಯಾವ ಬಗೆಯಲ್ಲಿ ಆಲೋಚಿಸುತ್ತಾರೋ ದೇವರೇ ಬಲ್ಲ. ನರೇಂದ್ರಮೋದಿಯವರನ್ನು ಸಂಸತ್ತಿನಲ್ಲಿ ತಬ್ಬಿಕೊಂಡು ಆಮೇಲೆ ಕಣ್ಣು ಹೊಡೆದಿದ್ದರಲ್ಲ ಅದು ನಿಜಕ್ಕೂ ಒಂದು ರಾಷ್ಟ್ರದ ಉನ್ನತ ನಾಯಕನೊಂದಿಗೆ ನಡೆಸಬಹುದಾಗಿರುವಂತಹ ಕುಚೇಷ್ಟೆ. ಅಂದೇ ಯಾರಾದರೂ ಕರೆದು ಕಿವಿಹಿಂಡಿ ಬುದ್ಧಿ ಹೇಳಿದ್ದರೆ ರಾಹುಲ್ನ ಸ್ಥಿತಿ ಇಂದು ಹೀಗಿರುತ್ತಿರಲಿಲ್ಲ. ಪರಿವಾರದ ಹೆಗ್ಗಳಿಕೆಯ ಮದದಲ್ಲಿ ಬೆಳೆದುಬಿಟ್ಟರೆ ಆಗೋದು ಹೀಗೇ. ರಾಹುಲ್ಗೆ ಒಳಿತಾಗಲಿ ಎಂದಷ್ಟೇ ಹಾರೈಸೋಣ.

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top