ನಿನ್ನೆ ದೆಹಲಿಯಲ್ಲಿ ನೀತಿ ಆಯೋಗದ ನಾಲ್ಕನೇ ಸಭೆ ನಡೆಯಿತು. ಸಭೆಯಲ್ಲಿ ಹಲವು ವಿಷಯಗಳು ಚರ್ಚೆಯಾದವು. ಪ್ರಧಾನಿ ನರೇಂದ್ರಮೋದಿಯವರು ಭಾರತದ ಆರ್ಥಿಕ ಬೆಳವಣಿಗೆ ಹತ್ತು ಪ್ರತಿಶತ ವೇಗದಲ್ಲಿ ಮುನ್ನುಗ್ಗಬೇಕಿದೆ ಎಂದು ಅಭಿಪ್ರಾಯಪಟ್ಟರು. 2017-18 ರಲ್ಲಿ ಗ್ರೋಥ್ ರೇಟ್ 7.7 ಪ್ರತಿಶತವಾಗಿತ್ತು. ಭಾರತ ಸದ್ಯದಲ್ಲೇ 5000 ಅರಬ್ ಡಾಲರ್ ನ ಹೊಂದಿರುವ ದೇಶವಾಗಲಿದೆ ಎಂದು ಜಗತ್ತು ಕಾಯುತ್ತಿದೆ ಎಂಬ ಮಾತನ್ನು ಆಡಿದ್ದಾರೆ.
2022 ರ ವೇಳೆಗೆ ‘ನ್ಯೂ ಇಂಡಿಯಾ’ದ ಕನಸನ್ನು ಪೂರ್ಣಗೊಳಿಸಲು ರೈತರ ಆದಾಯವನ್ನು ದ್ವಿಗುಣಗೊಳಿಸಬೇಕು, ಹಿಂದುಳಿದ ಜಿಲ್ಲೆಗಳ ವಿಕಾಸವಾಗಬೇಕು, ಆಯುಷ್ಮಾನ್ ಭಾರತ್, ಮಿಷನ್ ಇಂದ್ರಧನುಷ್ ಯೋಜನೆಗಳು ಯಶಸ್ವಿಯಾಗಬೇಕು ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಮೋದಿಯವರು ಮಧ್ಯಪ್ರದೇಶ, ಬಿಹಾರ, ಗುಜರಾತ್, ಸಿಕ್ಕಿಂ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳದ ತಂಡಗಳನ್ನು ರಚಿಸಿ ನರೇಗಾ ಯೋಜನೆಯನ್ನು ಕೃಷಿಕರಿಗೂ ಜೋಡಿಸುವ ಕುರಿತು ಸಲಹೆಗಳನ್ನು ನೀಡಲು ಕೇಳಿದ್ದಾರೆ.
ಲೋಕಸಭೆ ಮತ್ತು ವಿಧಾನಸಭೆಯ ಚುನಾವಣೆಗಳು ಒಟ್ಟಿಗೇ ನಡೆಯಬೇಕೆಂಬ ಪ್ರಸ್ತಾಪವನ್ನೂ ನಿನ್ನೆ ಮೋದಿಯವರು ಮುಂದಿಟ್ಟರು.
![]()
Leave a Reply