National

ದಂಗೆ ನಿಯಂತ್ರಿಸಿದ್ದು ಯೋಗಿ!!

ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಗಲಾಟೆ ನಿಧಾನವಾಗಿ ಶಾಂತವಾಗುತ್ತಿದೆ. ಹಿಂದಿಯಲ್ಲಿ ಒಂದು ಮಾತಿದೆ. ಲಾತೋಂಕಿ ಭೂತ್ ಬಾತೋಂಸೇ ನಹೀ ಮಾನ್ತೇ ಅಂತ. ಅದರರ್ಥ ದೊಣ್ಣೆ ಪೆಟ್ಟಿಗೆ ನೆಟ್ಟಗಾಗಬೇಕೆಂದಿದ್ದವರು ಮಾತಿಗೆ ಬಗ್ಗುವುದಿಲ್ಲ. ವಾಸ್ತವವಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಬಂದನಂತರ ಮುಸಲ್ಮಾನರು ಅದನ್ನು ಸಮಥರ್ಿಸಿ, ಹೊರಗಿನಿಂದ ಏಟು ತಿಂದುಬಂದ ಅಲ್ಪಸಂಖ್ಯಾತರೊಂದಿಗೆ ನಾವಿದ್ದೇವೆ ಎಂದು ಹೇಳಿ, ಸಕರ್ಾರ ಎನ್ಆರ್ಸಿ ಜಾರಿಗೆ ತರುವಾಗ ವಿರೋಧಕ್ಕೆ ನಿಂತುಬಿಟ್ಟಿದ್ದರೆ ಕಥೆಯೇ ಬೇರೆಯಾಗಿಬಿಟ್ಟಿರುತ್ತಿತ್ತು. ಆಗ ಹಿಂದೂಗಳು ಮತ್ತು ಮಧ್ಯ ಗೋಡೆಯ ಮೇಲೆ ನಿಂತವರೂ ಕೂಡ ಮುಸಲ್ಮಾನರ ಬೆಂಬಲಕ್ಕೆ ಬಂದುಬಿಡುತ್ತಿದ್ದರು! ಪೌರತ್ವ ತಿದ್ದುಪಡಿ ಕಾಯ್ದೆಯ ಹೊತ್ತಿನಲ್ಲಿ ಹೊರದೇಶದಿಂದ ಬಂದ ಹಿಂದೂಗಳ ಪರವಾಗಿ ನಿಂತವರನ್ನು ನಾವೀಗ ತೊಂದರೆಗೊಳಪಡಿಸಬಾರದು ಎನ್ನುವುದು ಹಿಂದೂಗಳ ನಿಲುವಾಗಿರುತ್ತಿತ್ತು. ಆದರೆ ಈಗಿನ ಕಥೆಯೇ ಬೇರೆ. ಮುಸಲ್ಮಾನರು ಎಂದಿದ್ದರೂ ಹಿಂದೂಗಳಿಗೆ ಒಳಿತಾಗುವುದನ್ನು ಸಹಿಸಲಾರರು ಎಂಬುದನ್ನು ಅಧಿಕೃತವಾಗಿ ಒಪ್ಪಿಕೊಂಡಂತಾಯ್ತು. ಅಷ್ಟೇ ಅಲ್ಲ, ಹಿಂದೂಗಳಿಗೆ ಒಳಿತು ಮಾಡುವ ದೃಷ್ಟಿಯಿಂದ ಪಾಕಿಸ್ತಾನಕ್ಕೆ ನೋವಾಗುವುದನ್ನೂ ಸಹಿಸಲಾರರು ಎಂದಾಯ್ತು. ಒಂದೇ ಮಾತಿನಲ್ಲಿ ಹೇಳಬೇಕಾದರೆ ಹಿಂದೂಸ್ಥಾನದಲ್ಲೇ ಹಿಂದೂಗಳು ದ್ವಿತೀಯದಜರ್ೆ ನಾಗರಿಕರಂತೆ ಬದುಕಬೇಕೆಂಬುದು ಅವರಿಚ್ಛೆ! ಸಿಎಎ ಪ್ರತಿಭಟನೆಯ ವೇಳೆಗೆ ಅವರದನ್ನು ಜಗಜ್ಜಾಹೀರುಗೊಳಿಸುವಂತೆ ಹೋರಾಟ ಮಾಡಿದ್ದರಿಂದಲೇ ಮಧ್ಯದಲ್ಲಿ ನಿಂತಿದ್ದ ಜಾತ್ಯತೀತ ಭಾರತೀಯರು ಮುಸಲ್ಮಾನರ ವಿರುದ್ಧ ತಿರುಗಿ ನಿಲ್ಲುವಂತಾಯ್ತು. ಹೀಗಾಗಿ ಎನ್ಆರ್ಸಿಯನ್ನು ಕೆಲವರು ‘ನಹೀ ರಹೇಗಾ ಕಾಂಗ್ರೆಸ್’ ಎಂದು ವಿಸ್ತಾರಗೊಳಿಸುತ್ತಿದ್ದಾರೆ.


ಇಡಿಯ ಈ ಹೋರಾಟದಲ್ಲಿ ಮುಸಲ್ಮಾನರು ಮಾಡಿದ ದೊಡ್ಡ ತಪ್ಪು ಧಾವಂತಕ್ಕೆ ಬಿದ್ದು ಬೀದಿಗೆ ಬಂದಿದ್ದು. ಭಾರತೀಯ ಮುಸಲ್ಮಾನನಿಗೆ ಈ ಕಾಯ್ದೆಯಿಂದ ತೊಂದರೆಯಿಲ್ಲವೆಂದು ಗೊತ್ತಾದಾಗಲೂ ಅವರು ಪ್ರತಿಭಟನೆಗಿಳಿದಿದ್ದಲ್ಲದೇ ಆ ಪ್ರತಿಭಟನೆಯನ್ನು ಶಾಂತವಾಗಿರಿಸದೇ ಬೆಂಕಿ ಹಚ್ಚಿ ರಾಷ್ಟ್ರವನ್ನೇ ಹೆದರಿಸುವ ಹಂತಕ್ಕೊಯ್ದರಲ್ಲಾ, ಅದು ಬಲುದೊಡ್ಡ ಪ್ರಮಾದ. ‘ಇವರ ನಡುವೆ ನಮ್ಮಂತಹ ಸಭ್ಯರು ವಾಸಿಸಲೇಬಾರದು’ ಎಂದು ಬೆಂಗಳೂರಿನ ಮಿತ್ರರೊಬ್ಬರು ನನ್ನ ಬಳಿ ನೊಂದುಕೊಂಡು ಹೇಳಿದ್ದರು. ಎಂದಿಗೂ ರಾಜಕೀಯದ ಮಾತನಾಡದ ವ್ಯಕ್ತಿ ಮುಸಲ್ಮಾನರನ್ನು ನೆನಪಿಸಿಕೊಂಡು ಅಂದು ಅಸಹ್ಯಪಟ್ಟಿದ್ದು ಇಂದಿಗೂ ಕಿವಿಯಲ್ಲಿ ಗುಂಯ್ಗುಡುತ್ತಿದೆ! ಕಳೆದ ಏಳೆಂಟು ವರ್ಷಗಳಿಂದ ಮುಸಲ್ಮಾನರು ಗಳಿಸಿಕೊಂಡಿದ್ದ ಎಲ್ಲ ಪ್ರೀತಿ-ಅನುಕಂಪಗಳು ಏಳೆಂಟು ದಿನಗಳಲ್ಲಿ ಕಳೆದುಹೋಯ್ತು. ಅದು ಹಾಗೆಯೇ ಕೂಡ. ಸಿದ್ದರಾಮಯ್ಯನವರ ಅಧಿಕಾರಾವಧಿಯ ಕಾಲದಲ್ಲಿ ಅಷ್ಟೊಂದು ಹಿಂದೂ ತರುಣರ ಹತ್ಯೆಯಾಯ್ತಲ್ಲಾ, ಆಗಲೂ ಈ ಮಧ್ಯದಲ್ಲಿ ನಿಂತಿರುವ ಜಾತ್ಯತೀತವಾದಿಗಳು ಮುಸಲ್ಮಾನರ ವಿರುದ್ಧ ಮಾತನಾಡಲು ಒಪ್ಪಿಕೊಂಡಿರಲಿಲ್ಲ. ಸತ್ತವರೂ ಹಿಂದುತ್ವವಾದಿಗಳಾಗಿದ್ದುದರಿಂದ ಅವರೂ ಮುಸಲ್ಮಾನರಿಗೆ ತೊಂದರೆ ಮಾಡಿದ್ದಿರಬಹುದೆಂಬುದು ಅವರ ಚಿಂತನಾಲಹರಿಯಾಗಿತ್ತು. ಹೀಗಾಗಿಯೇ ಕರಾವಳಿಯ ಭಾಗ ಬಿಟ್ಟರೆ ಮತ್ತೆಲ್ಲಿಯೂ ಹಿಂದೂಗಳು ಏಕತ್ವಗೊಳ್ಳುವ ಪ್ರಕ್ರಿಯೆ ನಡೆದಿರಲಿಲ್ಲ. ಈ ಬಾರಿಯ ಪ್ರತಿಭಟನೆ ಹಿಂದೂಗಳಲ್ಲದೇ ಬೌದ್ಧ, ಜೈನ, ಪಾಸರ್ಿಗಳನ್ನೂ ಒಂದೆಡೆ ಸೇರಿಸಿಬಿಟ್ಟಿತು. ಪರಿಣಾಮ ಬೆಂಕಿ ಹಚ್ಚಿ ದೇಶವನ್ನೇ ಬಗ್ಗಿಸಿಬಿಡಬಹುದೆಂಬ ದುರಹಂಕಾರದಿಂದ ಮೆರೆಯುತ್ತಿದ್ದ ಮುಸಲ್ಮಾನರಲ್ಲಿನ ಮತಾಂಧರು ಸಂಪೂರ್ಣ ಸೋತುಹೋದರು. ಇದರ ಅಷ್ಟೂ ಶ್ರೇಯ ನಾಲ್ಕು ಜನರಿಗೆ. ಮೊದಲನೆಯದ್ದು ಸ್ವತಃ ಪ್ರಧಾನಮಂತ್ರಿ ಮೋದಿ. ಯಾವ ಕಾರಣಕ್ಕೂ ಜಾಗತಿಕ ರಂಗದಲ್ಲಿ ಪ್ರತಿಭಟನಾಕಾರರ ಪರ ಒಲವು ಮೂಡದಂತೆ ಅವರು ತಮ್ಮ ಪ್ರಭಾವವನ್ನು ಬಳಸಿಯೇ ಬಳಸಿದರು. ಇನ್ನು ಆತಂಕದ ಗೆರೆಗಳು ಕಂಡಾಗಲೂ ಅಮಿತ್ಶಾ ಈ ಕಾಯ್ದೆಯನ್ನು ಯಾವ ಕಾರಣಕ್ಕೂ ರದ್ದುಗೊಳಿಸಲಾಗುವುದಿಲ್ಲ ಎಂದು ಹೇಳುವ ಮೂಲಕ ಕಠೋರ ನಿಲುವನ್ನು ಪ್ರದಶರ್ಿಸಿದರಲ್ಲಾ ಅದೂ ದೊಡ್ಡಮಟ್ಟದಲ್ಲಿ ಕೆಲಸ ಮಾಡಿತು. ಎಲ್ಲಕ್ಕಿಂತ ಹೆಚ್ಚು ಪ್ರತಿಭಟನಾನಿರತರಿಗೆ ಚುರುಕು ಮುಟ್ಟಿಸುವಲ್ಲಿ ಯೋಗಿ ಆದಿತ್ಯನಾಥರ ಪಾತ್ರ ಬಲುದೊಡ್ಡದ್ದು! ಎಲ್ಲಾ ಬಗೆಯ ತಂತ್ರಜ್ಞಾನವನ್ನು ಬಳಸಿ ಪ್ರತಿಭಟನಾನಿರತರ ಚಿತ್ರಗಳನ್ನು ಸೆರೆಹಿಡಿದು ಅದನ್ನು ಬಳಸಿಕೊಂಡು ಆನಂತರ ಎಫ್ಐಆರ್ ದಾಖಲಿಸಿದ್ದಲ್ಲದೇ ದಂಗೆಯಿಂದಾದ ಒಟ್ಟೂ ಖರ್ಚನ್ನು ಇವರುಗಳಿಂದಲೇ ಭರಿಸುವ ಮಾತುಗಳನ್ನಾಡಿದರಲ್ಲಾ, ಅಲ್ಲಿಗೆ ಅನೇಕ ದಂಗೆಕೋರರ ಚಡ್ಡಿ ಹರಿಯಿತು. ಮೊದ-ಮೊದಲು ಹೀಗೆ ಮಾಡಲಾಗದು ಎಂದು ಭಾವಿಸಿದ್ದ ದಂಗೆಕೋರರಿಗೆ, ಆದಿತ್ಯನಾಥರು ಹೀಗೆ ಮಾಡುತ್ತಿರುವುದು ನಿಜವೆಂದು ಅರಿವಾದೊಡನೆ ಕೈಲಿ ಪಿಸ್ತೂಲಿನ ಬದಲು ತಿರಂಗಾ ಹಿಡಿಯಲು ಆರಂಭಿಸಿದರು. ಅಲ್ಲಾಹು ಅಕ್ಬರ್ ಎನ್ನುವ ಘೋಷಣೆ ಭಾರತ್ಮಾತಾ ಕೀ ಜೈ ಎಂದು ಬದಲಾಯ್ತು! ಕಳೆದ ಶುಕ್ರವಾರ ಮಸೀದಿಯಲ್ಲಿ ಪ್ರಾರ್ಥನೆ ಮಾಡಿ ಹೊರಬಂದ ನಂತರ ಮೌಲ್ವಿಗಳು ಸಕರ್ಾರದ ಕ್ಷಮೆ ಕೇಳಿ ಆದ ಹಾನಿಯನ್ನು ಸರಿದೂಗಿಸಲು ಐದು ಲಕ್ಷರೂಪಾಯಿಯ ಡಿಮ್ಯಾಂಡ್ ಡ್ರಾಫ್ಟನ್ನು ಸಕರ್ಾರಕ್ಕೆ ಕೊಟ್ಟರು. ಇನ್ನು ಮುಂದೆ ಹೀಗೆ ಮಾಡುವುದಿಲ್ಲವೆಂಬ ಮನವರಿಕೆ ಬೇರೆ. ಈ ಎಲ್ಲಾ ಹಂತದಲ್ಲೂ ಸಮರ್ಥವಾದ ಸಾಥು ಕೊಟ್ಟಿದ್ದು ಭಾರತದ ಪೊಲೀಸ್ಪಡೆ ಮತ್ತು ಸಿಆರ್ಪಿಎಫ್ ಜವಾನರು. ಅನೇಕ ಕಡೆಗಳಲ್ಲಿ ದಂಗೆಕೋರರ ವಿರುದ್ಧ ಲಾಠಿ ಬೀಸಿದವರು ಮುಸಲ್ಮಾನ ಅಧಿಕಾರಿಗಳೇ ಆಗಿದ್ದರು. ದೇಶವನ್ನು ಒಳಗಿನಿಂದಲೇ ನಾಶಮಾಡಲು ಪ್ರಯತ್ನಿಸುತ್ತಿರುವ ಈ ಒಂದು ವರ್ಗವನ್ನು ತದುಕಿಬಿಡಬೇಕೆಂಬ ಬಯಕೆ ಖಂಡಿತವಾಗಿಯೂ ಇತ್ತು. ಎಲ್ಲಕ್ಕಿಂತ ಹೆಚ್ಚು ಇಡಿಯ ಹೋರಾಟವನ್ನು ಹಿಂದೂ-ಮುಸಲ್ಮಾನ್ ಕಾಳಗವಾಗಿ ಪರಿವತರ್ಿಸುವ ದಂಗೆಕೋರರ ಪ್ರಯತ್ನವನ್ನು ಪೂರ್ಣಪ್ರಮಾಣದಲ್ಲಿ ತಡೆದು, ಕಂಡ-ಕಂಡಲ್ಲಿ ಬಡಿದಿದ್ದಲ್ಲದೇ ಅಗತ್ಯಬಿದ್ದಾಗ ಪುಂಡರ ಮೇಲೆ ಗುಂಡಿನ ದಾಳಿಯನ್ನೂ ಮಾಡಿದರಲ್ಲಾ, ಬಲು ವಿಶೇಷವಾಗಿತ್ತು!


ಒಟ್ಟಾರೆ ಮುಸಲ್ಮಾನರ ಹೋರಾಟ ಇಷ್ಟೇ ಎಂಬುದನ್ನು ಅವರು ಸಾಬೀತುಪಡಿಸಿಕೊಂಡುಬಿಟ್ಟರು. ಹೀಗೆ ಬೆಂಕಿ ಹಚ್ಚಿ ಕ್ರೌರ್ಯ ತೋರ್ಪಡಿಸುವ ಬದಲು ಅವರು ಆರಂಭದಿಂದಲೇ ಶಾಂತಿಯುತ ಪ್ರತಿಭಟನೆಗಿಳಿದುಬಿಟ್ಟಿದ್ದಿದ್ದರೆ ಸಕರ್ಾರಕ್ಕೆ ಕಷ್ಟವಾಗುತ್ತಿತ್ತಷ್ಟೇ ಅಲ್ಲದೇ ಮಧ್ಯದಲ್ಲಿ ನಿಂತ ಜಾತ್ಯತೀತವಾದಿಗಳು, ಮುಸಲ್ಮಾನರ ಪರವಾಗಿ ಕೇಂದ್ರಸಕರ್ಾರಕ್ಕೆ ಸಾಕಷ್ಟು ಹಾನಿಯಾಗುತ್ತಿತ್ತು. ಈಗ ತಪ್ಪನ್ನು ತಿದ್ದಿಕೊಳ್ಳಲು ಮುಸಲ್ಮಾನ ಸಮಾಜ ಹೆಣಗಾಡುತ್ತಿದ್ದರೆ, ದೇಶವನ್ನು ಅರಾಜಕತೆಯತ್ತ ತಳ್ಳಲು ಪ್ರಯತ್ನ ನಡೆಸಿದ್ದ ಕಾಂಗ್ರೆಸ್ಸು, ಆಮ್ಆದ್ಮಿ ಪಾಟರ್ಿಗಳು ಒಳಗೊಳಗೇ ಅಲುಗಾಡುತ್ತಿವೆ. ಅತ್ತ ಕೇಂದ್ರಸಕರ್ಾರಕ್ಕೆ ಹೆಚ್ಚು ಬಲ ಬಂದಂತಾಗಿದೆ. ಆಟರ್ಿಕಲ್ 370, ರಾಮಮಂದಿರ, ತ್ರಿವಳಿ ತಲಾಕ್ ಮತ್ತು ಸಿಎಎ ಇವುಗಳೆಲ್ಲದರ ಆಕ್ರೋಶ ತೀರಿಹೋಗಿರುವುದರಿಂದ ಇನ್ನು ರಾಷ್ಟ್ರೋಪಯೋಗಿಯಾಗಿರುವ ಕಠೋರ ಕಾನೂನನ್ನು ತರಲು ಅವರು ಹೇಸಲಾರರು. ಮುಂದಿನ ಹೋರಾಟಕ್ಕೆ ಹಿಂದೂಸಮಾಜವೂ ಈಗ ಸಜ್ಜಾಗಿದೆ. ಕಣ ಇನ್ನೂ ರಂಗೇರಲಿದೆ!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top