National

ಥಾಯ್ ಲ್ಯಾಂಡಿನ ನ್ಯಾಯಾಲಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದೆ ಭಾರತ! ನಿಮಗಿದು ಗೊತ್ತಾ!?

ಭಾರತಕ್ಕೆ ಪಾಕಿಸ್ತಾನದ ವಿರುದ್ಧ ಕೊನೆಗೂ ಜಯ ಸಿಕ್ಕಿದೆ. ಥಾಯ್ ಲ್ಯಾಂಡಿನ ಕ್ರಿಮಿನಲ್ ನ್ಯಾಯಾಲಯ ದಾವೂದ್ ಇಬ್ರಾಹಿಂನ ಹತ್ತಿರದ ಬಂಟ  ಮುನ್ನಾ ಜಿಂಗ್ರಾ ಪಾಕಿಸ್ತಾನಿಯಲ್ಲ; ಬದಲಿಗೆ ಭಾರತೀಯ ಎಂಬ ತೀರ್ಪನ್ನು ನೀಡಿದೆ.

 

ಭಾರತದ ಪಾಲಿಗೆ ಮೋಸ್ಟ್ ವಾಂಟೆಡ್ ಡಾನ್ ಆಗಿರುವ ದಾವೂದ್ ಇಬ್ರಾಹಿಂ ಮತ್ತು ಚೋಟಾ ಶಕೀಲನ ಡಿ-ಕಂಪೆನಿಯಲ್ಲಿ ಹಿರಿಯನಾದ ಸಯ್ಯದ್ ಮುಜಕ್ಕಿರ್ ಮುದಸ್ಸರ್ ಹುಸೇನ್ ಅಲಿಯಾಸ್ ಮೊಹಮ್ಮದ್ ಸಲೀಮ್ ಅಲಿಯಾಸ್ ಮುನ್ನಾ ಜಿಂಗ್ರಾನನ್ನು ಥಾಯ್ ಲ್ಯಾಂಡ್ ವಶಕ್ಕೆ ತೆಗೆದುಕೊಂಡಿತ್ತು. ದಾವೂದ್ ಇಬ್ರಾಹಿಂ ನ ವಿರೋಧಿ ಚೋಟಾ ರಾಜನ್ ಅನ್ನು ಕೊಲ್ಲಬೇಕೆಂದು ಮುನ್ನಾ ಜಿಂಗ್ರಾ ನಕಲಿ ಪಾಕಿಸ್ತಾನಿ ಪಾಸ್ ಪೋರ್ಟ್ ನೊಂದಿಗೆ 2000 ರಲ್ಲಿ ಬ್ಯಾಂಕಾಕ್ ಅನ್ನು ಪ್ರವೇಶಿಸಿದ್ದ. ಅಲ್ಲಿನ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದರು. ಆಗಿನಿಂದಲೂ ಆತನನ್ನು ಬಂಧನದಲ್ಲಿರಸಲಾಗಿತ್ತು.

ಮುನ್ನಾ ಜಿಂಗ್ರಾನ ತಂದೆ ಮುಸ್ಸರ್ ನುಸೇನ್ 1993 ರಲ್ಲಿ ನಡೆದ ಮುಂಬೈ ಸ್ಫೋಟ ಪ್ರಕರಣದ ಆರೋಪಿಗಳೊಡನೆ ಆತ್ಮೀಯ ಸಂಬಂಧ ಹೊಂದಿರುವವನು. ಪಾಕಿಸ್ತಾನದ ಐಎಸ್ಐನ ಕೃಪಾ ಪೋಷಣೆಯೂ ಈತನಿಗಿದೆ. ಹಾಗಾಗಿ ಮಗನನ್ನು ಉಳಿಸಿಕೊಳ್ಳಲು ಶತಪ್ರಯತ್ನ ಮಾಡಿದ್ದ. ಪಾಕಿಸ್ತಾನದ ರಾಯಭಾರಿ ಕಛೇರಿಯ ಮೂಲಕ ಥಾಯ್ ಲ್ಯಾಂಡಿನ ಸರ್ಕಾರದ ಮೇಲೆ ಒತ್ತಡ ಹೇರಿಸಿ ಮುನ್ನಾ ಜಿಂಗ್ರಾನಿಗೆ ನೀಡಿದ್ದ ಶಿಕ್ಷೆಯ ಅವಧಿಯನ್ನು ಕಡಿಮೆ ಮಾಡಲು ಮುಂದಾದ. ಕೇವಲ ಪಾಕಿಸ್ತಾನದ ರಾಯಭಾರಿ ಕಛೇರಿ ಮಾತ್ರವಲ್ಲದೇ ತನಗೆ ತಿಳಿದಿದ್ದ ಎಲ್ಲ ಅಧಿಕಾರಿಗಳ, ವ್ಯಕ್ತಿಗಳ ಮೂಲಕ ಥಾಯ್ ಸರ್ಕಾರದ ಮೇಲೆ ಒತ್ತಡ ಹೇರಿದ.
ಇದರ ಪರಿಣಾಮ ಪಾಕಿಸ್ತಾನದ ರಾಯಭಾರಿಯ ಕಡೆಯಿಂದ ಎರಡು ಬಾರಿ ವಿಚಾರಣೆಗಳಲ್ಲಿ ಮುನ್ನಾ ಜಿಂಗ್ರಾನ ಶಿಕ್ಷೆಯ ಅವಧಿ ಕಡಿಮೆಯಾಯ್ತು. ಒಟ್ಟಾರೆ 34 ವರ್ಷಗಳ ಶಿಕ್ಷಾ ಅವಧಿಯನ್ನು ಕಡಿತಗೊಳಿಸಲಾಯ್ತು! ನಂತರ ಥಾಯ್ ಲ್ಯಾಂಡಿನಲ್ಲಿ ಸಕ್ರಿಯವಾಗಿರುವ ಪಾಕಿಸ್ತಾನಿ ಮಿಷನ್ ಕೂಡ ಮುನ್ನಾ ಜಿಂಗ್ರಾನ ಸಹಾಯಕ್ಕೆ ಧಾವಿಸಿತು. 2016 ರಲ್ಲಿ ಮತ್ತೊಮ್ಮೆ ಆತನ ಶಿಕ್ಷಾ ಅವಧಿಯನ್ನು 18 ವರ್ಷಗಳಷ್ಟು ಕಡಿತಗೊಳಿಸಲಾಯ್ತು.

ಇದರ ಜೊತೆ-ಜೊತೆಗೆ ಪಾಕಿಸ್ತಾನ ಮತ್ತು ಥಾಯ್ ಲ್ಯಾಂಡಿನ ನಡುವೆ ಆಗಿದ್ದ ಪ್ರಿಸನರ್ಸ್ ಎಕ್ಸ್ಚೇಂಜ್ ಟ್ರೀಟಿಯ ಅಡಿಯಲ್ಲಿ ಪಾಕಿಸ್ತಾನದ ಅಧಿಕಾರಿಗಳು ಮುನ್ನಾ ಜಿಂಗ್ರಾನನ್ನು ಪಾಕಿಸ್ತಾನಕ್ಕೆ ಕರೆತರುವ ಪ್ರಯತ್ನವನ್ನು ಮಾಡುತ್ತಲೇ ಇದ್ದರು. ಥಾಯ್ ನ ನೀತಿ-ನಿಯಮಗಳ ಪ್ರಕಾರ ಡಿಸೆಂಬರ್ 2016 ರಲ್ಲಿ ಆತನನ್ನು ಪಾಕಿಸ್ತಾನಕ್ಕೆ ಕರೆದುಕೊಂಡು ಹೋಗಬೇಕಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಭಾರತ ಇದರ ವಿರುದ್ಧ ಧ್ವನಿಯೆತ್ತಿ, ಕೇಸನ್ನು ದಾಖಲಿಸಿತು. ಈ ವಿವಾದ ಥಾಯ್ ನ್ಯಾಯಾಲಯದ ಮೆಟ್ಟಿಲೇರಿದ್ದು ಆಗಲೇ. ಆತ ಪಾಕಿಸ್ತಾನದವನಲ್ಲ; ಭಾರತದ ಪ್ರಜೆ ಮತ್ತು ಭಾರತಕ್ಕೆ ಬೇಕಾಗಿರುವ ಆರೋಪಿ ಎಂಬುದು ಭಾರತದ ವಾದವಾಗಿತ್ತು.

ಆದರೆ ಬುಧವಾರ ಥಾಯ್ ಲ್ಯಾಂಡಿನ ನ್ಯಾಯಾಲಯ ತೀರ್ಪು ನೀಡಿದೆ. ಭಾರತ ಪ್ರಸ್ತುತ ಪಡಿಸಿದ ಕೈಬೆರಳಿನ ಸಾಕ್ಷ್ಯಾಧಾರಗಳ ಪ್ರಕಾರ ಮುನ್ನಾ ಜಿಂಗ್ರಾ ಭಾರತದವನೇ ಎಂಬುದು ದೃಢವಾಗಿ ಸಾಬೀತಾಗಿದೆ. ಪಾಕಿಸ್ತಾನ ನಕಲಿ ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿ, ಪ್ರಸ್ತುತ ಪಡಿಸಿದ್ದನ್ನೂ ಸಹ ಥಾಯ್ ಲ್ಯಾಂಡಿನ ನ್ಯಾಯಾಲಯ ಅಲ್ಲಗಳೆದು, ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದೆ.

ಈ ನಡುವೆ ಥಾಯ್ ಲ್ಯಾಂಡಿನ ನ್ಯಾಯಾಲಯ ತನ್ನ ತೀರ್ಪನ್ನು ಪ್ರಕಟಿಸುತ್ತಿದ್ದಂತೆ ಮುನ್ನಾ ಜಿಂಗ್ರಾ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮೇಲೆ ಕೂಗಾಡಿ, ಅರಚಾಡಿ ಹೈಡ್ರಾಮಾ ನಡೆಸಿದ್ದಾನೆ. ಅಷ್ಟೇ ಅಲ್ಲದೇ, ಪಾಕಿಸ್ತಾನದ ರಾಯಭಾರಿ ಕಛೇರಿಯ ಅಧಿಕಾರಿಗಳೂ ತೀರ್ಪಿನ ನಂತರ ತಮ್ಮ ಕೋಪವನ್ನು ಹೊರಹಾಕಿದ್ದಾರೆ. ಭಾರತ ಅಂತರರಾಷ್ಟ್ರೀಯ ಮಟ್ಟದ ವಿವಾದವೊಂದರಲ್ಲಿ ಅತ್ಯದ್ಭುತ ಜಯ ಸಾಧಿಸಿದೆ!

ಆತನನ್ನು ಭಾರತಕ್ಕೆ ಕರೆತರಲು 90 ದಿನಗಳ ಅವಕಾಶವನ್ನು ನೀಡಲಾಗಿದೆ. ಪಾಕಿಸ್ತಾನಕ್ಕೆ 30 ದಿನಗಳೊಳಗೆ ಇದರ ವಿರುದ್ಧ ನ್ಯಾಯಾಲಯಕ್ಕೆ ಹೋಗುವ ಅವಕಾಶವನ್ನೂ ಸಹ ಒದಗಿಸಲಾಗಿದೆ. ಅದಾಗಲೇ ಒಮ್ಮೆ ಸೋತು ಪಾಕಿಸ್ತಾನದ ಬಣ್ಣ ಬಯಲಾಗಿದೆ. ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ

Click to comment

Leave a Reply

Your email address will not be published. Required fields are marked *

Most Popular

To Top