National

ತೀರಿಕೊಂಡ ಹಿಂದೂವಿಗೆ ಕವಡೆ ಕಿಮ್ಮತ್ತಿಲ್ಲ!

ಸ್ವಾತಂತ್ರ್ಯ ಪಡೆಯುವ ಧಾವಂತದಲ್ಲಿ ಮಹಾತ್ಮಾಗಾಂಧೀಜಿ ಮುಸ್ಲೀಮರ ತುಷ್ಟೀಕರಣದ ನೆಪದಲ್ಲಿ ಭಾರತದ ಅಂತಃಸತ್ವವನ್ನೇ ಕೊಂದುಬಿಟ್ಟರು. ಯಾವ ವ್ಯಕ್ತಿಯಲ್ಲಾದರೂ ಸರಿಯೇ ಆತನಲ್ಲಿಲ್ಲದ ಗುಣಗಳನ್ನು ಆರೋಪಿಸಿ ಹೊಗಳುತ್ತಾ ಕುಳಿತುಬಿಟ್ಟರೆ ಆತ ಶ್ರೇಷ್ಠವೇನೂ ಆಗಿಬಿಡುವುದಿಲ್ಲ. ಬದಲಿಗೆ ಆತನಲ್ಲಿರುವ ಕೆಡಕುಗಳನ್ನು ತೋರಿಸಿಕೊಟ್ಟು ಒಳ್ಳೆಯವನಾಗಲಿಕ್ಕೆ ಮಾರ್ಗ ಹಾಕಿಕೊಟ್ಟರೆ ಆತ ಶ್ರೇಷ್ಠವ್ಯಕ್ತಿಯಾಗುವ ಹಾದಿಯಲ್ಲಿ ನಡೆದಾದರೂ ನಡೆದಾನು. ಮುಸಲ್ಮಾನರನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುವ ನೆಪದಲ್ಲಿ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರೂ ತುಷ್ಟೀಕರಣದ ಉಡುಗೊರೆ ಕೊಟ್ಟವರೇ. ಅದು ಕ್ರಿಶ್ಚಿಯನ್ನರಿರಬಹುದು ಅಥವಾ ಭಾರತದಲ್ಲಿ ಅವರನ್ನು ಮತಬ್ಯಾಂಕಾಗಿ ಉಪಯೋಗಿಸಿಕೊಳ್ಳುತ್ತಿರುವ ಕಾಂಗ್ರೆಸ್ಸೂ ಇರಬಹುದು. ಎನ್.ಎಸ್ ರಾಜಾರಾಮ್ ತಮ್ಮ ಸಂಶೋಧನಾ ಕೃತಿ ‘ಹಿಂದೂ ವ್ಯೂ ಆಫ್ ದಿ ವಲ್ಡರ್್’ನಲ್ಲಿ ಪ್ರವಾದಿ ಮೊಹಮ್ಮದರು ಹೇಗೆ ಕ್ರಿಶ್ಚಿಯನ್ ಚಿಂತನೆಗಳನ್ನು ಅರಬ್ ಸಮಾಜದಲ್ಲಿ ಹಬ್ಬಿಸಿ ಮೂಲ ಅರಬ್ ಸಂಸ್ಕೃತಿಯನ್ನೇ ನಾಶಗೈದರೆಂದು ವಿವರಿಸುತ್ತಾರೆ! ಈ ಹಂತದಲ್ಲಿಯೇ ಪ್ರವಾದಿಯವರನ್ನು ಅರಬ್ ರಾಷ್ಟ್ರೀಯವಾದಿ ಎಂದು ಜರಿದ ಲೇಖಕ ಅನ್ವರ್ಶೇಖ್ರಿಗಿಂತ ಭಿನ್ನವಾದ ಸ್ವರೂಪವನ್ನೇ ಮುಂದಿಡುತ್ತಾರೆ. ಚಚರ್ೆಯ ವಿಷಯ ಅದಲ್ಲ. ತಮ್ಮದ್ದೇ ಮುಂದುವರೆದ ಭಾಗವೆಂದು ಅರಿತಿದ್ದರಿಂದಲೇ ಮುಸಲ್ಮಾನರೊಂದಿಗೆ ಕ್ರಿಶ್ಚಿಯನ್ನರು ಭಿನ್ನವಾದ ರೀತಿಯಲ್ಲೇ ನಡೆದುಕೊಂಡರು. ಇಂದು ಶಕ್ತಿಶಾಲಿಯಾಗಿ ಕಾಣುವ ಸೌದಿಯ, ಗಲ್ಫ್ನ ರಾಷ್ಟ್ರಗಳೆಲ್ಲವೂ ಅಮೇರಿಕಾದ ಅಧೀನದಲ್ಲಿಯೇ ಇರುವಂಥವು. ಅಲ್ಲಿನ ಬಹುತೇಕ ದೊರೆಗಳು ಅಮೇರಿಕಾ ತಾಳಕ್ಕೆ ತಕ್ಕಂತೆ ಕುಣಿಯುತ್ತಾರೆ. ರಷ್ಯಾದ ವಿರುದ್ಧ ಹೋರಾಡಲು, ಇರಾಕ್ ಅನ್ನು ಮಟ್ಟಹಾಕಲು, ಇರಾನಿನ ಸದ್ದಡಗಿಸಲು ಅಮೇರಿಕಾ ಹೇಳಿದಂತೆ ನಡೆದುಕೊಳ್ಳುತ್ತಿರುವುದು ಈ ಬಲುದೊಡ್ಡ ಮುಸ್ಲೀಂ ಸಮಾಜವೇ. ಭಾರತದಲ್ಲೂ ಅಷ್ಟೇ. ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಮುಸಲ್ಮಾನರನ್ನು ಮುಖ್ಯವಾಹಿನಿಗೆ ಬರದಂತೆ ತಡೆಯುತ್ತಿರುವುದು ಸ್ವತಃ ಕಾಂಗ್ರೆಸ್ಸೇ. ಮುಸಲ್ಮಾನರಲ್ಲಿ ಮತಾಂಧತೆ ಹೆಚ್ಚುವಂತೆ ಮಾಡಿ ಹಿಂದೂಗಳ ವಿರುದ್ಧ ಅವರನ್ನು ಎತ್ತಿಕಟ್ಟಿ ಈ ಹಿಂದೂಗಳಿಂದ ರಕ್ಷಣೆ ಪಡೆಯಲು ಕಾಂಗ್ರೆಸ್ ಒಂದೇ ಮಾರ್ಗ ಎಂಬುದನ್ನು ಅವರ ಹೃದಯದಲ್ಲಿ ಬಿತ್ತಿಬಿಟ್ಟಿದೆ. ಹೀಗೆ ಮುಸಲ್ಮಾನರ ಪರವಾಗಿ ನಿಲ್ಲಲು ಅದು ಯಾವ ಹಂತಕ್ಕೆ ಬೇಕಿದ್ದರೂ ಹೋಗಬಲ್ಲದು. ಅಗತ್ಯಬಿದ್ದರೆ ಜಾಗತಿಕ ಮಟ್ಟದಲ್ಲಿ ಭಾರತವನ್ನು ದೂಷಿಸಲು ಅದು ಹಿಂಜರಿಯುವಂತೆ ಕಾಣುವುದಿಲ್ಲ! ಕಾಂಗ್ರೆಸ್ಸಿನ ಈ ಪ್ರವೃತ್ತಿಯಿಂದಲೇ ಈ ದೇಶದ ಅನೇಕ ಪಕ್ಷಗಳು ಮುಸ್ಲೀಂ ತುಷ್ಟೀಕರಣವನ್ನೇ ವೋಟು ಪಡೆಯುವ ಹಾದಿ ಎಂದು ಖಾತ್ರಿಮಾಡಿ ಕುಳಿತುಕೊಂಡುಬಿಟ್ಟಿವೆ. ಹೀಗಾಗಿಯೇ ಈ ದೇಶದಲ್ಲಿ ಸತ್ತ ಮುಸಲ್ಮಾನರಿಗಿರುವಷ್ಟು ಬೆಲೆ ತೀರಿಕೊಂಡ ಹಿಂದೂವಿಗಿಲ್ಲ.


ಹೌದು. ದನದಮಾಂಸದ ನೆಪದಲ್ಲಿ ಭಾರತದಲ್ಲಿ ಕೊಲೆಗಳಾಗುತ್ತವೆ ಎಂಬ ಸುಳ್ಳನ್ನು ವೈಭವೀಕರಿಸಿ ಜಗತ್ತಿಗೆಲ್ಲಾ ಮಾರುಕಟ್ಟೆ ಮಾಡಿದ್ದು ಇದೇ ಕಾಂಗ್ರೆಸ್ಸು ಮತ್ತು ಬುದ್ಧಿಜೀವಿಗಳ ತಂಡ. ಹೀಗೆ ಭಾರತವನ್ನು ತಪ್ಪು ದೃಷ್ಟಿಕೋನದಿಂದ ಜಗತ್ತಿಗೆ ಪರಿಚಯಿಸುವುದು ಭಾರತದ ಓಟಕ್ಕೆ ಹಿನ್ನಡೆಯಾಗಬಹುದೆಂಬ ಸಾಮಾನ್ಯಜ್ಞಾನವೂ ಅವರಿಗಿರುವುದಿಲ್ಲ. ದುರಂತವೆಂದರೆ ದನದಮಾಂಸದ ಹೆಸರಿನಲ್ಲಿ ನಡೆದ ಕೊಲೆಗಳಲ್ಲಿ ಒಂದಾದರೂ ಕೊಲೆಯನ್ನು ಅಧಿಕೃತವಾಗಿ ಸಾಬೀತುಮಾಡಲಾಗದ ದೈನೇಸಿಸ್ಥಿತಿ ಇವರದ್ದು. ಇತ್ತೀಚೆಗೆ ಖ್ಯಾತ ಪತ್ರಕತರ್ೆ ಸ್ವಾತಿ ಗೋಯಲ್ಶರ್ಮ ಈ ಸಾವುಗಳ ಕುರಿತಂತೆ ಒಂದು ಸಂಶೋಧನೆ ನಡೆಸಿ ಭಯಾನಕವಾದ ಸುದ್ದಿ ಹೊರಗೆ ಹಾಕಿದ್ದಾರೆ. ಸುಮಾರು ಮೂರು ವರ್ಷಗಳ ಹಿಂದೆ ದೆಹಲಿಯ ರೈಲಿನಲ್ಲಿ ನಡೆದ ಹತ್ಯೆಯೊಂದರ ಕುರಿತಂತೆ ಆಕೆ ಮತ್ತೆ ಕೆದಕಲಾರಂಭಿಸಿದ್ದಾರೆ. ಅಚ್ಚರಿಯೆಂದರೆ ಇಡಿಯ ಪ್ರಕರಣವನ್ನು ದನದಮಾಂಸದ ಕಾರಣಕ್ಕಾಗಿ ನಡೆದ ಕೊಲೆ ಎಂದು ವರದಿ ಮಾಡಿದ್ದು ಹಿಂದೂಸ್ತಾನ್ ಟೈಮ್ಸ್ ಮಾತ್ರ. ಹೆಸರು ಹೇಳಲು ಇಚ್ಛಿಸದ ಪೊಲೀಸರೊಬ್ಬರ ಹೇಳಿಕೆಯನ್ನಾಧರಿಸಿ ಮಾಡಿದ ಆ ವರದಿಯ ಶೀಷರ್ಿಕೆ ‘ಮಾಂಸದ ವಿಚಾರದಲ್ಲಿ ಮುಸಲ್ಮಾನರ ಕೊಲೆ’ ಎಂದಿತ್ತು. ದೈನಿಕ್ ಭಾಸ್ಕರ್ ಮತ್ತು ಪಂಜಾಬ್ ಕೇಸರಿಗಳು ರೈಲಿನ ಸೀಟಿಗಾಗಿ ನಡೆದ ಕದನ ಎಂದು ಹೇಳಿದ್ದವು. ಇಂಡಿಯಾ ಟುಡೇ ವರದಿ ಮಾಡುವಾಗ ಮಾಂಸಕ್ಕಾಗಿ ನಡೆದದ್ದು ಎಂದು ಹೇಳಿದರೂ ಪ್ರತ್ಯಕ್ಷದಶರ್ಿಗಳನ್ನು ಸಂದಶರ್ಿಸಿದಾಗ ಅವರೆಲ್ಲರೂ ಸೀಟಿಗಾಗಿಯೇ ನಡೆದದ್ದು ಎಂದು ಉಲ್ಲೇಖಿಸಿದ್ದರು! ಒಟ್ಟಾರೆ ಈ ಪ್ರಕರಣಕ್ಕೂ ದನದಮಾಂಸಕ್ಕೂ ಸಂಬಂಧವೇ ಇಲ್ಲ ಎಂದು ಗೊತ್ತಾಗುವ ವೇಳೆಗೆ ದೇಶದಾದ್ಯಂತ ಉತ್ಪಾತಗಳು ನಡೆದುಹೋಗಿದ್ದವು. ಬಿಬಿಸಿ ಕೂಡ ಇದೇ ಆಧಾರದ ಮೇಲೆ ವರದಿಯನ್ನೂ ಮಾಡಿಬಿಟ್ಟಿತ್ತು. ಮುಸಲ್ಮಾನನೊಬ್ಬನ ಸಾವೂ ಕೂಡ ಇವರಿಗೆಲ್ಲಾ ಬಳಸಿಕೊಳ್ಳುವ ವಸ್ತುಗಳಾಗಿಬಿಡುತ್ತವೆ ಎಂಬುದು ದುರಂತದ ಸಂಗತಿ!


ಇದಕ್ಕೆ ವಿರುದ್ಧವಾಗಿ ಸಾಮಾನ್ಯ ಹಿಂದೂ ಬಿಡಿ, ಸ್ವತಃ ಸಾಧುಗಳು ಕೊಲ್ಲಲ್ಪಟ್ಟಾಗಲೂ ಈ ಪತ್ರಕರ್ತರೆನಿಸಿಕೊಂಡವರು ತುಟಿ ಬಿಚ್ಚುವುದಿಲ್ಲ. ಪಾಲ್ಗರ್ನಲ್ಲಿ ಇಬ್ಬರು ಸಾಧುಗಳು ಮತ್ತು ಅವರ ಚಾಲಕನನ್ನು ಬರ್ಬರವಾಗಿ ಕೊಲ್ಲಲಾಯ್ತಲ್ಲ ಆಗ ಅದನ್ನು ಸ್ಥಳೀಯರ ಕೃತ್ಯ ಎಂದು ಬಣ್ಣಿಸಲಾಗಿತ್ತು. ಅನಂತರವೇ ಗೊತ್ತಾಗಿದ್ದು, ಅದು ಕಮ್ಯುನಿಸ್ಟ್ ನೇತೃತ್ವದಲ್ಲಿ ಕ್ರಿಶ್ಚಿಯನ್ನರು ನಡೆಸಿದ ಕೃತ್ಯ ಮತ್ತು ಈಗ ಬಂಧಿತರನ್ನು ಬಿಡಿಸಲು ಮುಂದೆ ನಿಂತಿರುವ ವ್ಯಕ್ತಿ ಚಿರಾಜ್ ಎಂಬುವವನು ಅನ್ನೋದು. ಅಲ್ಲಿಗೆ ಈ ಹಿಂದಿನಿಂದಲೂ ನಾವು ಪ್ರತಿಪಾದಿಸುತ್ತಾ ಬಂದಿರುವ ಮಾವೋವಾದಿ ನಕ್ಸಲ್, ಐಎಸ್ಐ ಜಿಹಾದಿ ಮತ್ತು ಕ್ರಿಶ್ಚಿಯನ್ ಉಗ್ರರ ಅನೈತಿಕ ಸಂಬಂಧದ ಕಾರಣ ನಡೆದಿರುವ ಕೃತ್ಯ ಇದು. ಇದಕ್ಕೆ ಕಾಂಗ್ರೆಸ್ಸಿಗರೂ ಕೂಡ ಸೇರಿರುವುದು ಹೊಸಶಕ್ತಿ ಆವಾಹನೆಯಾದಂತೆ. ಇವರೆಲ್ಲರ ಗುಂಪು ಎಷ್ಟು ವ್ಯವಸ್ಥಿತವಾಗಿ ಕೆಲಸ ಮಾಡುತ್ತದೆ ಎಂದರೆ ಹಳ್ಳಿಯೊಂದರಲ್ಲಿ ಮತಾಂತರದ ಚಟುವಟಿಕೆಯನ್ನು ಮಿಷನರಿಗಳು ಮಾಡುತ್ತಾ ಬುಡಕಟ್ಟು ಜನಾಂಗದವರಲ್ಲಿ ಹಿಂದೂವಿರೋಧಿ ಭಾವನೆಗಳನ್ನು ಬಿತ್ತುತ್ತದೆ. ಸಹಜವಾಗಿ ಹಿಂದೂವಿರೋಧಿಯಾಗುವುದೆಂದರೆ ಈ ರಾಷ್ಟ್ರವನ್ನು ದ್ವೇಷಿಸುವುದು ಎಂದರ್ಥ. ಅಂಥವರ ಕೈಗೆ ಮಾವೋವಾದಿಗಳು ಬಂದೂಕು ಕೊಡುತ್ತಾರೆ. ಅವರಿಗೆ ಬೇಕಾದ ರಕ್ಷಣೆಯನ್ನು ಕೊಡಲು ಮತ್ತು ಅಕ್ರಮ ಶಸ್ತ್ರಗಳ ಪೂರೈಕೆಗೆ ಜಿಹಾದಿಗಳು ತುದಿಗಾಲಲ್ಲಿ ನಿಂತಿರುತ್ತಾರೆ. ಇನ್ನು ಇವರಿಗೆ ಮಾಧ್ಯಮಗಳ ಮೂಲಕ ಅನುಕಂಪದ ಅಲೆ ದೊರೆಯುವಂತೆ ಬುದ್ಧಿಜೀವಿಗಳು ನೋಡಿಕೊಂಡರೆ ಸಕರ್ಾರ ಮತ್ತು ಪೊಲೀಸರಿಂದ ತೊಂದರೆ ಬರದಂತೆ ಕೆಲವು ರಾಜಕೀಯ ಪಕ್ಷಗಳು ನಿಂತುಬಿಡುತ್ತವೆ. ಹೀಗಾಗಿಯೇ ಸಾಧುಗಳ ಹತ್ಯೆಯುನ್ನು ಖ್ಯಾತ ಪತ್ರಕರ್ತ ಅರ್ನಬ್ಗೋಸ್ವಾಮಿ ಪ್ರಶ್ನಿಸಿದ್ದಕ್ಕೆ ಕಾಂಗ್ರೆಸ್ಸು ಉರಿದುಬಿದ್ದು ಪತ್ರಕರ್ತನ ಮೇಲೆ ದಾಳಿಮಾಡಿತು. ದಾಳಿ ಮಾಡಿಸಿಕೊಂಡ ಪತ್ರಕರ್ತನನ್ನೇ ಕಾಂಗ್ರೆಸ್ಸಿನ ಸಕರ್ಾರ ಹತ್ತು ಗಂಟೆಗಳ ಕಾಲ ಸುದೀರ್ಘ ವಿಚಾರಣೆ ನಡೆಸಿ ಹೊಸದೊಂದು ಇತಿಹಾಸ ಬರೆಯಿತು. ಆತ ಬಾಗುವುದಿಲ್ಲವೆಂದು ಗೊತ್ತಾದೊಡನೆ ತೆಪ್ಪಗಾಯ್ತು. ಅಧಿಕಾರದಲ್ಲಿದ್ದಷ್ಟೂ ಕಾಲ ಬೂಟುನೆಕ್ಕುವ ಪತ್ರಕರ್ತರಿಗೆ ಪದ್ಮಶ್ರೀ, ಪದ್ಮವಿಭೂಷಣಗಳನ್ನು ಕೊಟ್ಟು ಕೃತಜ್ಞತೆ ಹೇಳಿದ ಕಾಂಗ್ರೆಸ್ಸಿಗರಿಗೆ ಈಗ ಮೊದಲ ಬಾರಿಗೆ ಸಮರ್ಥ ಪ್ರತಿರೋಧ ಈ ವಲಯದಿಂದ ವ್ಯಕ್ತವಾಗುತ್ತಿದೆ. ಇದರ ಮುಂದುವರಿದ ಭಾಗವೇನೋ ಎನ್ನುವಂತೆ ಸಾಧುಗಳ ಪರವಾಗಿ ನ್ಯಾಯಾಲಯದಲ್ಲಿ ವಾದಿಸಲು ಸಿದ್ಧವಾಗಿದ್ದ ದಿಗ್ವಿಜಯ್ ತ್ರಿವೇದಿ ನ್ಯಾಯಾಲಯಕ್ಕೆ ಹೋಗುವ ದಾರಿಯಲ್ಲೇ ಅಪಘಾತಕ್ಕೆ ಒಳಗಾಗಿ ಸಿನಿಮೀಯ ರಿತಿಯಲ್ಲಿ ಸಾವನ್ನಪ್ಪಿದ್ದಾರೆ. ಜಸ್ಟಿಸ್ ಲೋಯಾ ತೀರಿಕೊಂಡಾಗ ಜಗತ್ತಿಗೆಲ್ಲಾ ಕೇಳುವಂತೆ ಕಾಂಗ್ರೆಸ್ಸು ಬೊಬ್ಬೆ ಹೊಡೆದಿತ್ತು. ಸ್ವತಃ ನ್ಯಾಯಾಲಯ ಅದು ಸಹಜಸಾವು ಎಂದರೂ ಕಾಂಗ್ರೆಸ್ಸು ಒಪ್ಪಲು ಸಿದ್ಧವಿರಲಿಲ್ಲ. ಈಗ ಸಾಧುಗಳ ಪರವಾಗಿ ನಿಂತ ವಕೀಲನೊಬ್ಬ ಅವರ ಪರವಾಗಿ ವಾದಿಸುವ ದಿನವೇ ರಸ್ತೆಯಲ್ಲಿ ಹೆಣವಾಗಿದ್ದಾನೆ. ಕಾಂಗ್ರೆಸ್ಸಿನ ಬಾಯಿಂದ ಮಾತೂ ಹೊರಡುತ್ತಿಲ್ಲ. ಆರಂಭದಲ್ಲೇ ಹೇಳಿದೆನಲ್ಲಾ ತುಷ್ಟೀಕರಣ ಯಾವ ಮಟ್ಟಕ್ಕೆ ಬೆಳದಿದೆ ಎಂದರೆ ಕಾಂಗ್ರೆಸ್ಸಿನ ದೃಷ್ಟಿಯಲ್ಲಿ ಸತ್ತ ಮುಸಲ್ಮಾನನಿಗೆ ಅಪಾರ ಬೆಲೆಯಾದರೆ ತೀರಿಕೊಂಡ ಹಿಂದೂವಿಗೆ ಕವಡೆ ಕಿಮ್ಮತ್ತಿಲ್ಲ!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top