Politics

ತಿರುಗುಬಾಣವಾಯ್ತು ಸಿದ್ದರಾಮಯ್ಯನ ದಾಳಗಳು!

ರಾಜ್ಯದ ಜನರ ಜಾತಿಗೆ ಹೊಸದೊಂದು ಸೇರ್ಪಡೆಯಾಗಿದೆ! ಮುಗ್ಧ ಅಲ್ಪಸಂಖ್ಯಾತರದ್ದು. ಸಿದ್ದರಾಮಯ್ಯನವರು ಕರ್ನಾಟಕವನ್ನು ಹಿಂದೂ-ಮುಸ್ಲಿÃಂ ಕದನ ಭೂಮಿಯನ್ನಾಗಿಸಿ ಮುಸಲ್ಮಾನರ ವೋಟುಗಳನ್ನು ಬಾಚಿ ಅಧಿಕಾರ ಗಟ್ಟಿ ಮಾಡಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ. ಭಾಜಪಾವನ್ನು ಉಗ್ರ ಹಿಂದುತ್ವವಾದಿ ಪಕ್ಷವೆಂದು ಬಿಂಬಿಸಿ ಮುಸಲ್ಮಾನರ ಹೃದಯದೊಳಗೆ ಆತಂಕ ಜಾಗೃತಗೊಳಿಸುವ ಅವರ ಪ್ರಯತ್ನ ಎಡೆಬಿಡದೇ ನಡೆದೇ ಇದೆ. ತಾನು ಮುಸಲ್ಮಾನರ ಪರವೆಂದೂ ಭಾಜಪಾ ಬಂದರೆ ಅವರಿಗಿರುವ ಈ ಅವಕಾಶಗಳು ಕೈ ತಪ್ಪಿಹೋಗುವವೆಂದೂ ನಂಬಿಸುವ ಸುದೀರ್ಘ ಪ್ರಯತ್ನ ಅದು.
ರಾಜ್ಯದ ರಾಜಕೀಯ ಲೆಕ್ಕಾಚಾರಗಳೂ ಹಾಗೆಯೇ ಇವೆ. ಲಿಂಗಾಯತ, ಕುರುಬ, ದಲಿತ ಅಥವಾ ಗೌಡ ಇವ್ಯಾವುದಾದರೂ ಒಂದು ಸಮಾಜದೊಂದಿಗೆ ಮುಸಲ್ಮಾನರು ಪೂರ್ಣ ಪ್ರಮಾಣದಲ್ಲಿ ನಿಂತರೆಂದರೆ ಆ ಪಕ್ಷ ಅಧಿಕಾರದ ಹತ್ತಿರಕ್ಕೆ ಬರುವುದು ಖಾತ್ರಿ. ತಿಪ್ಪರಲಾಗ ಹೊಡೆದರೂ ಗೌಡ ಸಮಾಜ ಸಿದ್ದರಾಮಯ್ಯನವರನ್ನು ನಂಬಲಾರದು. ಅವರದ್ದೆÃನಿದ್ದರೂ ದೇವೇಗೌಡರಿಗೆ ಆತುಕೊಳ್ಳುವ ಸ್ವಭಾವ. ಅವರೊಂದಿಗೆ ಮುಸಲ್ಮಾನರನ್ನು ಹೋಗದಂತೆ ತಡೆದರಾಯ್ತು. ಹೀಗಾಗಿ ಕುಮಾರಸ್ವಾಮಿ ಸಿದ್ದರಾಮಯ್ಯನವರಿಗೊಂದು ಸವಾಲೇ ಅಲ್ಲ. ಅವರಿಗೆ ಪ್ರಬಲವಾದ ಪೈಪೋಟಿ ಯಡ್ಯೂರಪ್ಪನವರೇ!
ಅದಾಗಲೇ ಲಿಂಗಾಯತ ಸಮಾಜವನ್ನು ವಿಭಜಿಸಿ ಯಡ್ಯೂರಪ್ಪನವರನ್ನು ಅಧಿಕಾರದ ಕುರ್ಚಿಯಿಂದ ದೂರವಾಗಿಸುವ ಷಡ್ಯಂತ್ರದಲ್ಲಿ ಯಶಸ್ವಿಯಾಗಿದ್ದೆÃನೆಂದು ಬೀಗುತ್ತಿದ್ದ ಸಿದ್ದರಾಮಯ್ಯನವರಿಗೆ ಈಗೊಂದು ಬಲವಾದ ಆತಂಕ ಕಾಡುತ್ತಿದೆ. ತನ್ನ ದಾಳವನ್ನು ಅರಿತ ಲಿಂಗಾಯತ ಸಮಾಜ ಈಗ ತಿರುಗಿಬಿದ್ದಿದೆ; ಪ್ರತ್ಯೆÃಕ ಧರ್ಮವೂ ಇಲ್ಲ, ಲಿಂಗಾಯತ ಮುಖ್ಯಮಂತ್ರಿಯೂ ಇಲ್ಲ ಎಂಬ ದುರಂತ ನಾಟಕದ ಪಾತ್ರವಾಗಿರುವುದನ್ನು ಅರ್ಥೈಸಿಕೊಂಡಿರುವ ಈ ಸಮಾಜದ ಮುಖಂಡರು ಈಗ ಮೊದಲಿಗಿಂತ ಬಲವಾಗಿ ಯಡ್ಯೂರಪ್ಪನವರ ಸಮೀಪಕ್ಕೆ ಬರಲಾರಂಭಿಸಿದ್ದಾರೆ.
ಮುಖ್ಯಮಂತ್ರಿಗಳಿಗೀಗ ತಲೆ ಕೆಟ್ಟುಹೋಗಿದೆ. ಪ್ರಾಮಾಣೀಕತೆಯಿಲ್ಲದೇ ಚುನಾವಣೆಗೆಂದೇ ಎಸೆದ ಎಲ್ಲ ದಾಳಗಳೂ ತಮಗೇ ತಿರುಗುಬಾಣವಾಗುವ ಲಕ್ಷಣವನ್ನು ತೋರಿಸುತ್ತಿವೆ. ಅತ್ತ ಮೋದಿ ದಿನೇ ದಿನೇ ಜನ ಮಾನಸದಲ್ಲಿ ಬೇರೂರುತ್ತಿದ್ದಾರೆ; ಯಡ್ಯೂರಪ್ಪನವರನ್ನು ತಮ್ಮ ನಾಯಕರೆಂದು ಎಲ್ಲರೂ ಒಪ್ಪಿಕೊಂಡಾಗಿದೆ. ಹಾಗೆಂದೇ ಭಾಜಪಾ ಈಗ ಸಿದ್ದರಾಮಯ್ಯನವರ ಆಡಳಿತ ವೈಫಲ್ಯವನ್ನೆÃ ಮುಂದಿರಿಸಿಕೊಂಡು ನಡೆಸುತ್ತಿರುವ ಪ್ರಚಾರ ಖಂಡಿತ ರಂಗೇರಲಿದೆ.
ಈಗ, ಭಾಜಪಾ ಸಿದ್ದರಾಮಯ್ಯನವರಿಗಿಂಥ ಒಂದು ಹೆಜ್ಜೆ ಮುಂದಿದೆ ಎನಿಸುತ್ತಿದೆ.

Click to comment

Leave a Reply

Your email address will not be published. Required fields are marked *

Most Popular

To Top